Tag: ಮಣಿರತ್ನಂ

  • ಟ್ರಂಡಿಂಗ್ ನಲ್ಲಿ ಐಶ್ವರ್ಯ ರೈ ನಟನೆಯ ತಮಿಳು ಚಿತ್ರದ ಟೀಸರ್

    ಟ್ರಂಡಿಂಗ್ ನಲ್ಲಿ ಐಶ್ವರ್ಯ ರೈ ನಟನೆಯ ತಮಿಳು ಚಿತ್ರದ ಟೀಸರ್

    ಮಿಳಿನ ಖ್ಯಾತ ಹಿರಿಯ ನಿರ್ದೇಶಕ ಮಣಿರತ್ನಂ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಮತ್ತೆ ಅವರು ಹಳೆಯ ದಿನಗಳಿಗೆ ಮರಳಿದ್ದಾರೆ. ಒಂದು ಕಾಲದಲ್ಲಿ ಮಣಿರತ್ನಂ ಸಿನಿಮಾಗಳು ಅಂದರೆ, ಅದೊಂದು ರೀತಿಯಲ್ಲಿ ಮಾದರಿ ಆಗಿರುತ್ತಿದ್ದವು. ಅದರದ್ದೇ ಆದ ಟ್ರೆಂಡ್ ಸೆಟ್ ಮಾಡುತ್ತಿದ್ದವು. ಇದೀಗ ಮತ್ತೆ ಅಂಥದ್ದೊಂದು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ ಮಣಿರತ್ನಂ. ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ದೃಶ್ಯ ವೈಭವ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ನಿನ್ನೆಯಷ್ಟೇ ಕನ್ನಡದಲ್ಲೂ ಈ ಟೀಸರ್ ಅನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದು, ಕನ್ನಡದಲ್ಲೂ ಮೊದಲ ಭಾಗದ ಟೀಸರ್ ಟ್ರೆಂಡಿಂಗ್ ನಲ್ಲಿದೆ. ಅದರಲ್ಲೂ ಕರ್ನಾಟಕ ಮೂಲದ ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಮೂಲ ತಮಿಳಿನಲ್ಲಿ ಈ ಸಿನಿಮಾ ಮೂಡಿ ಬಂದಿದ್ದರೂ, ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆಯಂತೆ. ಇದನ್ನೂ ಓದಿ :  ಪುಷ್ಪಾ 2 : ವಿಜಯ್ ಸೇತುಪತಿ ಎಂಟ್ರಿಗೆ ಫಹಾದ್ ಫಾಸಿಲ್ ಮುನಿಸು?

    ಪೊನ್ನಿಯನ್ ಸೆಲ್ವನ್ ದೊಡ್ಡ ತಾರಾ ಬಳಗವನ್ನೇ ಹೊಂದಿರುವ ಸಿನಿಮಾ. ಐಶ್ವರ್ಯ ರೈ, ವಿಕ್ರಮ್, ಕಾರ್ತಿ ಸೇರಿದಂತೆ ಹೆಸರಾಂತ ಕಲಾವಿದರೇ ನಟಿಸಿದ್ದಾರೆ. 1955ರಲ್ಲಿ ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು. ಇದು ಚೋಳ ಸಾಮ್ರಾಜ್ಯದ ಬಗೆಗಿನ ಸಿನಿಮಾವಾಗಿದ್ದು, ಆ ಕಾಲವನ್ನು ಮಣಿರತ್ನಂ ಅವರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳುತ್ತಿದೆ ರಿಲಿಸ್ ಆಗಿರುವ ಟೀಸರ್.

    Live Tv
    [brid partner=56869869 player=32851 video=960834 autoplay=true]

  • `ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

    `ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

    ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ನಾಲ್ಕು ವರ್ಷಗಳ ನಂತರ ಮತ್ತೆ ನಟನೆಗೆ ಮರಳಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಕರಾವಳಿ ಬೆಡಗಿ ಐಶ್ವರ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ವಿಶ್ವ ಸುಂದರಿ ಐಶ್ವರ್ಯ ಬಾಲಿವುಡ್ ಮತ್ತು ತೆಲುಗು ಮತ್ತು ತಮಿಳು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಇದೀಗ `ಮಣಿರತ್ನಂ’ ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಕರಾವಳಿ ನಟಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದ ಲುಕ್ ಕೂಡ ಚಿತ್ರತಂಡ ರಿವೀಲ್ ಮಾಡಿದ್ದು, ಮಹಾರಾಣಿಯಂತೆ ಐಶ್ವರ್ಯ ರೈ ಕಂಗೊಳಿಸುತ್ತಿದ್ದಾರೆ. ಈ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.ಇದನ್ನೂ ಓದಿ: ಕಾಫಿ ವಿತ್ ಕರಣ್ ಶೋದಲ್ಲಿ ಕಾಣಿಸಿಕೊಳ್ಳಲು ಕೋಟಿ ರೂ ಕೇಳಿದ್ರಾ ರಣಬೀರ್ ಕಪೂರ್

    ಎಂದೂ ಮಾಡಿರದ ಭಿನ್ನ ಪಾತ್ರದಲ್ಲಿ ಐಶ್ವರ್ಯ ರೈ ಕಾಣಿಸಿಕೊಳ್ತಿದ್ದಾರೆ. ನಂದಿನಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ಮಹಾರಾಣಿಯಂತೆ ಕಂಗೊಳಿಸುತ್ತಿರುವ ನಟಿಯ ಪೋಸ್ಟರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಇನ್ನು ಜನಪ್ರಿಯ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿ ಆಧರಿಸಿ `ಪೊನ್ನಿಯನ್ ಸೆಲ್ವನ್’ ಚಿತ್ರ ಮಾಡಲಾಗಿದೆ. ಇನ್ನೂ ಐಶ್ವರ್ಯ ರೈ ಜತೆ ಕಾರ್ತಿ, ತ್ರಿಷಾ, ವಿಕ್ರಮ್‌,ಪ್ರಕಾಶ್‌ ರಾಜ್‌, ಜಯರಾಮ್‌, ಜಯಂ ರವಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ಹಿಂದಿ,ತಮಿಳು, ತೆಲುಗು ಮತ್ತು ಹಿಂದಿ ವರ್ಷನ್‌ನಲ್ಲಿ ಈ ವರ್ಷ ಸೆಪ್ಟೆಂಬರ್ 30ಕ್ಕೆ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಣಿರತ್ನಂ ಸಿನಿಮಾದಲ್ಲಿ ನಾಯಕಿ ಆಗಲು ನಾನು ಚಿತ್ರರಂಗಕ್ಕೆ ಬಂದಿದ್ದೆ : ಅದಿತಿ ರಾವ್

    ಮಣಿರತ್ನಂ ಸಿನಿಮಾದಲ್ಲಿ ನಾಯಕಿ ಆಗಲು ನಾನು ಚಿತ್ರರಂಗಕ್ಕೆ ಬಂದಿದ್ದೆ : ಅದಿತಿ ರಾವ್

    ಮುಂಬೈ: ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು ಎಂದು ಪ್ಯಾನ್ ಇಂಡಿಯಾ ನಟಿ ಅದಿತಿ ರಾವ್ ಹೈದರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಅದಿತಿ ತಮ್ಮ ಸಿನಿ ಜರ್ನಿ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಹಲವು ಭಾಷೆಗಳಲ್ಲಿ ನಟಿಸುವುದರಿಂದ ನನಗೆ ಕೆಲವೊಮ್ಮೆ ಗೊಂದಲವಾಗುತ್ತೆ. ನಾನು ಯಾವ ಭಾಷೆಯ ಸಿನಿಮಾ ಮಾಡಲು ಸೆಟ್ ಗೆ ಹೋಗುತ್ತೇನೂ ಆ ಭಾಷೆ ನಡುವೆ ನಾನು ಬೆರೆಯುತ್ತೇನೆ. ನಾನು ತೆಲುಗು ಮಾತನಾಡಬೇಕು ಎಂದುಕೊಂಡಾಗ, ನಾನು ತಮಿಳು ಮಾತನಾಡಲು ಪ್ರಾರಂಭಿಸುತ್ತೇನೆ. ಶೂಟಿಂಗ್ ಸೆಟ್ ಗೆ ಹೋದಾಗ ನಾನು ಆ ಭಾಷೆಯಲ್ಲಿ ಮಾತನಾಡುತ್ತೇನೆ. ನಾನು ಇದನ್ನು ನಿಜವಾಗಿಯೂ ಆನಂದಿಸುತ್ತೇನೆ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ತಂದೆಯ `ಧಡ್ಕನ್’ ಸಿನಿಮಾ ರಿಮೇಕ್‍ನಲ್ಲಿ ನಟಿಸಲು ಬಯಸುತ್ತೇನೆ: ಅಹಾನ್ ಶೆಟ್ಟಿ

     

    View this post on Instagram

     

    A post shared by Aditi Rao Hydari (@aditiraohydari)

    ಅದಿತಿ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ ಮತ್ತು ಸುಧೀರ್ ಮಿಶ್ರಾ ಅವರಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು. ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸಗಿತ್ತು. ಮುಂದೊಂದು ದಿನ ಅವನೊಂದಿಗೆ ಕೆಲಸ ಮಾಡುವ ಆಸೆಯಿಂದ ಸಿನಿಮಾ ಪ್ರವೇಶಿಸಿದ್ದೆ ಎಂದು ಬಹಿರಂಗಪಡಿಸಿದರು.

    ನಾನು ಮಣಿರತ್ನಂ ಸಿನಿಮಾದಲ್ಲಿ ನಾಯಕಿಯಾಗಬೇಕೆಂದು ಬಯಸಿದ್ದೆ ಮತ್ತು ಅದೇ ನನ್ನನ್ನು ಚಲನಚಿತ್ರಗಳಿಗೆ ಸೇರುವಂತೆ ಮಾಡಿತು. ಆದರೆ ಇದು ಕೇವಲ ಕನಸು. ಆದರೂ ನಾನು ಇದನ್ನು ಮಾಡಲು ಬಯಸಿದೆ. ನಾನು ಮೊದಲು ಮಣಿ ಸರ್ ಅವರ ಮೊದಲ ಭಾಷೆ ಕಲಿತೆ. ನನ್ನ ಶ್ರಮಕ್ಕೆ ತಕ್ಕಂತೆ ನಾನು ಅವರ ಜೊತೆ ಕೆಲಸ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.

    ನಾನು 2010-11 ರ ಸುಮಾರಿಗೆ ಮುಂಬೈಗೆ ಹೋಗಿ ಹಿಂದಿ ಸಿನಿಮಾ ಮಾಡಲು ಪ್ರಾರಂಭಿಸಿದೆ. ನಾನು ಸಹ ತುಂಬಾ ಎಡವುತ್ತಿದ್ದೆ. ಆದರೆ ಎಲ್ಲದಕ್ಕಿಂತ ನನ್ನ ಕನಸು ನನಗೆ ತುಂಬಾ ಮುಖ್ಯವಾಗಿತ್ತು. ಅಂತಿಮವಾಗಿ ನಾನು 2016 ರಲ್ಲಿ ಮಣಿ ಸರ್ ಅವರೊಂದಿಗೆ ಕೆಲಸ ಮಾಡಿದೆ ಎಂದು ನಗುತ್ತಾ ಹೇಳಿದರು.

    ನಾನು ಮೊದಲ ದಿನ ಚಿತ್ರದ ಸೆಟ್‍ಗೆ ಕಾಲಿಟ್ಟಾಗ, ನನಗೆ ಏನೂ ತಿಳಿದಿರಲಿಲ್ಲ. ನಾನು ನಟನೆಯನ್ನು ಆನಂದಿಸುತ್ತಿದ್ದೆ. ಏಕೆಂದರೆ ನಾವು ಸೆಟ್‍ನಲ್ಲಿ ಇದ್ದಾಗ ನಮಗೆ ಪ್ರತಿಯೊಂದು ಅಂಶವು ಹೊಸದನ್ನು ಕಲಿಸುತ್ತಿರುತ್ತೆ. ನಾವು ಎಲ್ಲವನ್ನು ಸರಿಯಾಗಿ ನೋಡಿ ಕಲಿಯಬೇಕು ಎಂದು ವಿವರಿಸಿದರು. ಇದನ್ನೂ ಓದಿ: ‘ನಾವು ಬಿಗ್‍ಬಿ ಅಭಿಮಾನಿಗಳು’ ಎಂದ ಸುಜೋಯ್ ಘೋಷ್ – ಕುರ್ತಾ ಬಗ್ಗೆ ಪ್ರಶ್ನಿಸಿದ ಅಭಿಷೇಕ್ ಬಚ್ಚನ್

     

    View this post on Instagram

     

    A post shared by Aditi Rao Hydari (@aditiraohydari)

    ಅದಿತಿ ಇಲ್ಲಿಯವರೆಗೆ ಮಣಿರತ್ನಂ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವು ‘ಕಾಟ್ರು ವೆಲಿಯಿದೈ'(2017) ಮತ್ತು ‘ಚೆಕ್ಕ ಚಿವಂತ ವಾನಂ'(2018). 2021 ರಲ್ಲಿ ದಿ ಗರ್ಲ್ ಆನ್ ದಿ ಟ್ರೈನ್, ಸರ್ದಾರ್ ಕಾ ಗ್ರ್ಯಾಂಡ್‍ಸನ್, ಮಹಾ ಸಮುದ್ರಂ(ತೆಲುಗು) ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಪ್ಯಾನ್-ಇಂಡಿಯಾ ನಟಿ ಅದಿತಿ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಇತರ ಭಾಷೆಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆಕೆಯ ಜನಪ್ರಿಯ ಹಿಂದಿ ಸಿನಿಮಾ ‘ಯೇ ಸಾಲಿ ಜಿಂದಗಿ’, ‘ವಜೀರ್’, ದಕ್ಷಿಣ ಭಾರತದಲ್ಲಿ ‘ಸಮ್ಮೋಹನಂ’, ‘ವಿ’ ಮತ್ತು ‘ಸೈಕೋ’ಗಳನ್ನು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‍ಐಆರ್

    ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‍ಐಆರ್

    ಚೆನ್ನೈ: ತಮಿಳಿನ ಖ್ಯಾತ ಹಿರಿಯ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಣಿರತ್ನಂ ನಿರ್ದೇಶನದ ಐತಿಹಾಸಿಕ ಕಥೆಯನ್ನು ಆಧರಿಸಿದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಶೂಟಿಂಗ್ ಸಮಯದಲ್ಲಿ ಅವಘಡ ನಡೆದಿದೆ. ಈ ಸಿನಿಮಾದ ಶೂಟಿಂಗ್ ಮಾಡುತ್ತಿರಬೇಕಾದರೆ ಕುದುರೆ ಸಾವನ್ನಪ್ಪಿದೆ. ಈ ಹಿನ್ನೆಲೆಯಲ್ಲಿ ಕುದುರೆಯ ಮಾಲೀಕರು ಮಣಿರತ್ನಂ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ಕುದುರೆಯೂ ಆಗಸ್ಟ್ 11ರಂದು ಸಾವನ್ನಪ್ಪಿದ್ದು, ಇವರ ವಿರುದ್ಧ ಎಫ್‍ಐಆರ್ ಅನ್ನು ಆಗಸ್ಟ್ 18 ರಂದು ದಾಖಲಿಸಲಾಗಿದ್ದು, ಆದರೆ ಪ್ರಕರಣ ತಡವಾಗಿ ಎಲ್ಲರಿಗೂ ತಿಳಿದಿದೆ. ಅನಿಮಲ್ ವೆಲ್‍ಫೇರ್ ಬೋರ್ಡ್ ಆಫ್ ಇಂಡಿಯಾ ಕುದುರೆ ಸಾವಿನ ಕುರಿತು ತನಿಖೆ ನಡೆಸಿದ್ದು, ಈ ಕುರಿತು ಹೈದರಾಬಾದ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಏನಿದು ಘಟನೆ?
    ‘ಪೊನ್ನಿಯಿನ್ ಸೆಲ್ವನ್’ ಶೂಟಿಂಗ್ ಸೆಟ್‍ನಲ್ಲಿ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಕುದುರೆಯು ನೆಲಕ್ಕೆ ಬಿದ್ದು ಪೆಟ್ಟಾಗಿ ಸಾವನ್ನಪ್ಪಿದೆ. ಆದರೆ ಈ ಕುರಿತು ತನಿಖೆ ನಡೆಯುತ್ತಿದ್ದು, ಶೂಟಿಂಗ್ ಬಿಸಿಲಿನಲ್ಲಿ ನಡೆಯುತ್ತಿದ್ದ ಪರಿಣಾಮ ಕುದುರೆಗೆ ಡಿಹೈಡ್ರೇಷನ್ ಆಗಿ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತಾಲಿಬಾನ್ ಸರ್ಕಾರ ರಚನೆಗೆ ಸಂತೋಷ ವ್ಯಕ್ತಪಡಿಸೋದು ಅನಾಗರೀಕತೆ: ನಾಸಿರುದ್ದೀನ್ ಶಾ

    ಈ ವಿರುದ್ಧ ಅನಿಮಲ್ ವೆಲ್‍ಫೇರ್ ಅವರು ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸುವುದನ್ನು ತಡೆಯಬೇಕು. ನಿಜವಾದ ಪ್ರಾಣಿಗಳ ಬದಲಾಗಿದೆ ಸಿಜಿಐ ಅಥವಾ ಇತರೆ ತಂತ್ರಜ್ಞಾನಗಳನ್ನು ಬಳಸಬೇಕು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಚಿತ್ರತಂಡ, ಇದು ಐತಿಹಾಸಿಕ ಕಥೆಯಾಗಿರುವುದರಿಂದ ಈ ಸಿನಿಮಾದಲ್ಲಿ ಹೆಚ್ಚು ಯುದ್ಧದ ಸನ್ನಿವೇಶಗಳು ಬರುತ್ತೆ. ಅದಕ್ಕೆ ಕುದುರೆಯನ್ನು ಬಳಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ:ಹಾಲಿವುಡ್ ಸಿನ್ಮಾದಲ್ಲಿ ನಟಿಸುವ ಜೊತೆಗೆ ನಿರ್ಮಾಣಕ್ಕೆ ಮುಂದಾದ ಪದ್ಮಾವತಿ

    ದ್ವಿಪಾತ್ರದಲ್ಲಿ ಅಭಿಮಾನಿಗಳನ್ನು ರಂಜಿಸಲಿರುವ ರೈ!
    ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್ ಕಟ್ ಹೇಳುತ್ತಿರುವ ಪೆÇನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ 47 ವರ್ಷದ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಭರ್ಜರಿಯಾಗಿ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. ಐಶ್ವರ್ಯ 4 ವರ್ಷಗಳ ನಂತರ ಮತ್ತೆ ಬಿಗ್ ಸ್ಕ್ರೀನ್‍ಗೆ ಮರಳಲು ರೆಡಿಯಾಗಿದ್ದು, ಸುಮಾರು 12 ವರ್ಷಗಳ ಬಳಿಕ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

  • ಪ್ರಧಾನಿಗೆ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದೇಶದ್ರೋಹ ಕೇಸ್ ದಾಖಲು

    ಪ್ರಧಾನಿಗೆ ಪತ್ರ ಬರೆದಿದ್ದ 49 ಗಣ್ಯರ ವಿರುದ್ಧ ದೇಶದ್ರೋಹ ಕೇಸ್ ದಾಖಲು

    – ಜುಲೈ ತಿಂಗಳಿನಲ್ಲಿ ಪತ್ರ ಬರೆದಿದ್ದ ಗಣ್ಯರು
    – ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಸ್ ದಾಖಲು
    – ದೇಶಕ್ಕೆ ಕೆಟ್ಟ ಹೆಸರು ತರಲು ಉದ್ದೇಶಪೂರ್ವಕವಾಗಿ ಪತ್ರ ಆರೋಪ

    ಪಾಟ್ನಾ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮಾಬ್ ಲಿಂಚಿಂಗ್(ಗುಂಪು ಹತ್ಯೆ) ನಿಲ್ಲಬೇಕು ಎಂದು ಆಗ್ರಹಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದ ದೇಶದ ನಾನಾ ಕ್ಷೇತ್ರಗಳ 49 ಜನಪ್ರಿಯ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಜಿಲ್ಲಾ ಕೋರ್ಟ್ ನ್ಯಾ. ಸೂರ್ಯಕಾಂತ್ ತ್ರಿಪಾಠಿ ಎಫ್‍ಐಆರ್ ದಾಖಲಿಸಲು ಅನುಮತಿ ನೀಡಿದ ಎರಡು ತಿಂಗಳ ಬಳಿಕ ಬಿಹಾರದ ಮುಜಾಫರಾಬಾದ್ ನಲ್ಲಿ ರಾಮಚಂದ್ರ ಗುಹಾ, ಮಣಿರತ್ನಂ, ಅಪರ್ಣ ಸೇನ್ ಸೇರಿದಂತೆ 49 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಕೀಲ ಸುಧೀರ್ ಕುಮಾರ್ ಓಜಾ, ಜಿಲ್ಲೆಯ ಮುಖ್ಯ ನ್ಯಾಯಾಧೀಶರು ಆಗಸ್ಟ್ 20 ರಂದು ನನ್ನ ಅರ್ಜಿಯನ್ನು ಪರಿಗಣಿಸಿ ಎಫ್‍ಐಆರ್ ದಾಖಲು ಮಾಡಲು ಅನುಮತಿ ನೀಡಿದರು. ಹೀಗಾಗಿ ಸದರ್ ಪೊಲೀಸ್ ಠಾಣೆಯಲ್ಲಿ ನಾನು ದೂರು ನೀಡಿದ್ದೇನೆ. ಪ್ರಧಾನಿ ಮೋದಿ ಉತ್ತಮ ಕಾರ್ಯ ಮಾಡುತ್ತಿದ್ದರೂ ಉದ್ದೇಶ ಪೂರ್ವಕವಾಗಿ ದೇಶದ ಏಕತೆ ಮತ್ತು ಸಮಗ್ರತೆ ಧಕ್ಕೆ ತರಲು ಈ ಪತ್ರವನ್ನು ಬರೆದಿದ್ದಾರೆ. ಪ್ರತ್ಯೇಕವಾದಿ ಮನಸ್ಥಿತಿಯನ್ನು ಬೆಂಬಲಿಸಲೆಂದೇ ಈ ಪತ್ರವನ್ನು ಬರೆಯಲಾದ ಹಿನ್ನೆಲೆಯಲ್ಲಿ ನಾನು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ದೂರಿನ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಐಪಿಸಿಯ ದೇಶದ್ರೋಹ, ಧಾರ್ಮಿಕ ಭಾವನೆಗೆ ಧಕ್ಕೆ, ಉದ್ದೇಶ ಪೂರ್ವಕವಾಗಿ ಪ್ರಚೋದಿಸಿ ಶಾಂತಿ ಕದಡುವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಪತ್ರದಲ್ಲಿ ಏನಿತ್ತು?
    ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಹೆಚ್ಚುತ್ತಿರುವ ಕೋಮು ದ್ವೇಷದ ಅಪರಾಧಗಳು ಹಾಗೂ ಗುಂಪು ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ 49 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು.

    ಜು. 23ರಂದು ಕಳುಹಿಸಲಾದ ಈ ಪತ್ರಕ್ಕೆ ಇತಿಹಾಸಕಾರ ರಾಮಚಂದ್ರ ಗುಹಾ, ಸಮಾಜಶಾಸ್ತ್ರ ತಜ್ಞ ಆಶಿಸ್ ನಂದಿ, ಚಿತ್ರ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್, ಅಪರ್ಣ ಸೇನ್, ಶಾಸ್ತ್ರೀಯ ಸಂಗೀತ ಗಾಯಕಿ ಶುಭಾ ಮುದ್ಗಲ್, ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ಅನುಪಮ್ ರಾಯ್, ಕೊಂಕಣ್ ಸೇನ್ ಶರ್ಮಾ ಅವರಂತಹ ಚಿತ್ರರಂಗದ ಪ್ರಮುಖರು ಸೇರಿದಂತೆ ಒಟ್ಟು 49 ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದರು.

    ‘ಜೈ ಶ್ರೀರಾಮ್’ ನಾಮಘೋಷವು ಇಂದು ಹಿಂಸಾಚಾರ, ಶೋಕದ ಮೂಲಮಂತ್ರವೆನಿಸಿದೆ. ಶಾಂತಿಪ್ರಿಯರೂ, ಹೆಮ್ಮೆಯ ಭಾರತೀಯರೂ ಆಗಿರುವ ನಮ್ಮಲ್ಲಿ, ನಮ್ಮ ಪ್ರೀತಿಯ ಭಾರತದಲ್ಲಿ ಧರ್ಮಾಧಾರಿತ ಹಿಂಸಾಚಾರಗಳು ಆತಂಕ ಸೃಷ್ಟಿಸಿವೆ. ಮುಸ್ಲಿಮರು, ದಲಿತರು, ಇತರೆ ಅಲ್ಪಸಂಖ್ಯಾತರ ಮೇಲಿನ ಥಳಿತ ಹತ್ಯೆಗಳು ಹೆಚ್ಚಾಗುತ್ತಿದ್ದು ಇವುಗಳು ನಿಲ್ಲಲೇಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದರು.

    ಶಾಂತಿಪ್ರಿಯರಾದ ಮತ್ತು ಹೆಮ್ಮೆ ಪಡುವಂತಹ ಭಾರತೀಯರಾದ ನಾವು ಇತ್ತೀಚೆಗೆ ನಮ್ಮ ನಲ್ಮೆಯ ದೇಶದಲ್ಲಿ ಹೆಚ್ಚಿರುವ ಕರಾಳ ಘಟನೆಗಳಿಂದ ತೀವ್ರ ಕಳವಳಗೊಂಡಿದ್ದೇವೆ. ಕಳೆದ 9 ವರ್ಷಗಳಿಂದ ದಲಿತರ ವಿರುದ್ಧ ದೌರ್ಜನ್ಯ, ಕೋಮು ಗಲಭೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಈ ಪೈಕಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಎಂಬ ವಿಷಯ ತಿಳಿದು ಆಘಾತವಾಗಿದೆ. ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳ ಕುರಿತು ಸಂಸತ್ತಿನಲ್ಲಿ ನೀವು ಖಂಡನೆ ವ್ಯಕ್ತಪಡಿಸಿದ್ದೀರಿ. ಆದರೆ, ಇದು ಸಾಲುವುದಿಲ್ಲ. ಇಂತಹ ಕೃತ್ಯ ಎಸಗಿದವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಪತ್ರದಲ್ಲಿ ಮೋದಿ ಅವರನ್ನು ಪ್ರಶ್ನಿಸಲಾಗಿತ್ತು.

  • ಖಾತ್ಯ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

    ಖಾತ್ಯ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

    ಮುಂಬೈ: ಭಾರತೀಯ ಸಿನಿಮಾರಂಗದಲ್ಲಿ ಹೆಸರುವಾಸಿಯಾದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಮಣಿರತ್ನಂ(63) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗಲೇ ಮಣಿರತ್ನಂ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮುಂಬೈನಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

    ನಿರ್ದೇಶಕ ಮಣಿರತ್ನಂ ಅವರ ಅನಾರೋಗ್ಯ ಕುರಿತಾಗಿ ಸಾಮಾಜಿಕ ಜಾಲತಾಣಗಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಮಣಿರತ್ನಂ ಅವರಿಗೆ ಈ ಹಿಂದೆಯೇ ಅಂದರೆ 2004 ರಲ್ಲಿ ‘ಯುವ’ ಸಿನಿಮಾ ಶೂಟಿಂಗ್ ನಲ್ಲಿದ್ದ ಸಂದರ್ಭದಲ್ಲಿ ಸೆಟ್‍ನಲ್ಲಿಯೇ ಹೃದಯಾಘಾತವಾಗಿತ್ತು. ಇದೇ ಕಾರಣದಿಂದ 2015 ರಲ್ಲಿ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

    ಮಣಿರತ್ನಂ ಅವರು ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪ್ರಸ್ತುತ ‘ಪೊನ್ನಿಯನ್ ಸೆಲ್ವನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ‘ಅಮರಾರ್ ಕಲ್ಕಿ’ ಕಾದಂಬರಿಯನ್ನು ಆಧಾರಿತ ಚಿತ್ರವಾಗಿದೆ.

    https://twitter.com/LokeshJey/status/1140297666800152576

    ಈ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳಾದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಅಮಿತಾಭ್ ಬಚ್ಚನ್, ಅಮಲಾ ಪೌಲ್, ಜಯರಾಮ್ ರವಿ, ಕಾರ್ತಿ ಮತ್ತು ಅನುಷ್ಕಾ ಶೆಟ್ಟಿ ಮುಂತಾದ ನಾಯಕರು ಅಭಿನಯಿಸುತ್ತಿದ್ದಾರೆ.