Tag: ಮಣಿಪುರ ಸರ್ಕಾರ

  • Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್‌ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ

    Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್‌ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ

    ಇಂಫಾಲ್‌: ಮಣಿಪುರದ (Manipur0 ಗ್ರಾಹಕ ವ್ಯವಹಾರಗಳ ಸಚಿವ ಎಲ್. ಸುಸಿಂದ್ರೋ ಅವರ ಆಪ್ತ ಸಹಾಯಕರನ್ನು ಇಂಫಾಲ್ ಪೂರ್ವ ಜಿಲ್ಲೆಯ ಅವರ ನಿವಾಸದ ಬಳಿಯೇ ದುಷ್ಕರ್ಮಿಗಳ ಗುಂಪೊಂದು ಅಪಹರಿಸಿದೆ ಎಂದು ಪೊಲೀಸರು (Manipur Police) ತಿಳಿಸಿದ್ದಾರೆ.

    ಎಸ್. ಸೊಮೊರೆಂಡ್ರೊ (43) ಅಪಹರಣವಾಗಿರುವ ವ್ಯಕ್ತಿ, ಘಟನೆ ಹಿಂದಿನ ಉದ್ದೇಶವು ಅಸ್ಪಷ್ಟವಾಗಿದೆ. ಘಟನೆಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ದುಷ್ಕರ್ಮಿಗಳ ಗುಂಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಇದಕ್ಕೂ ಮುನ್ನ ಗುರುವಾರ ರಾತ್ರಿ ಬಿಷ್ಣುಪುರ ಜಿಲ್ಲೆಯ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ನಿವಾಸದ ಮೇಲೂ ಶಸ್ತ್ರಸಜ್ಜಿತ ದಾಳಿಕೋರರು ಕನಿಷ್ಠ 5 ಸುತ್ತು ಗುಂಡು ಹಾರಿಸಿದ್ದ ಘಟನೆ ನಡೆದಿತ್ತು. ಅದೃಷ್ಟವಶಾತ್‌ ಯಾರಿಗೂ ಪ್ತಾಣಾಪಾಯ ಸಂಭವಿಸಿರಲಿಲ್ಲ. ಇದಾದ ಮರುದಿನವೇ ಸಚಿವರ ಆಪ್ತರನ್ನು ಕಿಡ್ನ್ಯಾಪ್‌ ಮಾಡಿರುವ ಘಟನೆ ನಡೆದಿದೆ.

    ಘಟನಾ ಸ್ಥಳದಿಂದ ಖಾಲಿ ಕಾಟ್ರಿಡ್ಜ್‌ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಬಿಷ್ಣುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Mysuru | ದಸರಾ ಆನೆಗಳ ನಡುವೆ ಗುದ್ದಾಟ – ದಿಕ್ಕಾಪಾಲಾಗಿ ಓಡಿದ ಜನ

    ಎನ್‌ಐಎ ಹೆಗಲಿಗೆ ಕೇಸ್‌:
    ಇನ್ನೂ ಇಲ್ಲಿನ ಥಾಡೌ ಬುಡಕಟ್ಟು ಜನಾಂಗದ ಪ್ರಮುಖ ನಾಯಕ ಹಾಗೂ ಬಿಜೆಪಿ ವಕ್ತಾರನ ಪೂರ್ವಿಕರ ಮನೆ ಮೇಲಿನ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸುವಂತೆ ಮಣಿಪುರ ಸರ್ಕಾರ ಪೊಲೀಸರಿಗೆ ಸೂಚಿಸಿದೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಚುರಾಚಂದ್‌ಪುರ ಜಿಲ್ಲೆಯ ಟಿ ಮೈಕೆಲ್‌ ಲಮ್‌ಜತಾಂಗ್‌ ಹಾಕಿಪ್‌ ಅವರ ಪೋಷಕರು ಹಾಗೂ ಇತರರು ವಾಸಿಸುವ ಅವರ ಮನೆಯ ಮೇಲೆ ನಡೆದ ದಾಳಿಯ ಕುರಿತು ದಾಖಲಿಸಲಾದ ಪ್ರಕರಣವನ್ನು ಆದಷ್ಟು ಬೇಗ ಎನ್‌ಐಎಗೆ ರವಾನಿಸಬೇಕು ಎಂದು ರಾಜ್ಯ ಸರ್ಕಾರ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ವಿಷಯದ ಗಂಭೀರ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ಎನ್‌ಐಎ ಹೆಗಲಿಗೆ ವಹಿಸುವಂತೆ ಪತ್ರದಲ್ಲಿ ತಿಳಿಸಿದೆ.

    2023ರ ಮೇ ತಿಂಗಳಲ್ಲಿ ಮೈತೆ-ಕುಕಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ಅವರ ಮನೆ ಮೇಲೆ ನಡೆದಿರುವ 3ನೇ ದಾಳಿ ಇದಾಗಿದೆ. ಕಳೆದ ಆಗಸ್ಟ್‌ 31ರಂದು ಕುಕಿ ಸಮುದಾಯದ ಪ್ರಾಬಲ್ಯವಿರುವ ಚುರಾಚಂದ್‌ಪುರದಲ್ಲಿರುವ ಹಾಕಿಪ್ ಅವರ ಮನೆಯನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಲಾಗಿತ್ತು. ಇದಕ್ಕೂ ಮುನ್ನ ಆಗಸ್ಟ್‌ 25ರಂದು ಸಹ ಶಸ್ತ್ರ ಸಜ್ಜಿತ ಗುಂಪೊಂದು ಹಾಕಿಪ್‌ ಅವರ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿತ್ತು.

  • ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹ

    ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹ

    ಹುಬ್ಬಳ್ಳಿ: ಕೇಂದ್ರ ಸರ್ಕಾರ (Union Government) ಮಣಿಪುರದ ಗಲಭೆಗೆ ಆರಂಭದಲ್ಲೇ ಮೂಲ ಕಾರಣಗಳನ್ನ ಹುಡುಕಬೇಕಿತ್ತು. ಅಲ್ಲಿನ ರಾಜ್ಯ ಸರ್ಕಾರವೂ ಆರಂಭದಲ್ಲೇ ಗಲಭೆ ತಡೆಯುವಲ್ಲಿ ವಿಫಲವಾಗಿದ್ದು, ಸಿಎಂ ವೈಫಲ್ಯಗಳು ಎದ್ದು ಕಾಣುತ್ತಿವೆ. ಆದ್ದರಿಂದ ಮಣಿಪುರದಲ್ಲಿ ರಾಷ್ಟ್ರಪತಿ (President) ಆಡಳಿತ ಜಾರಿಗೆ ತರಬೇಕು ಎಂದು ವಿಧಾನಪರಿಷತ್‌ ಸದಸ್ಯರು ಆಗಿರುವ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shettar) ಆಗ್ರಹಿಸಿದ್ದಾರೆ.

    ಮಣಿಪುರದ ಗಲಭೆ (Manipur Violence) ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕಿತ್ತು. ಆದರೀಗ ಗಲಭೆ ವಿಕೋಪಕ್ಕೆ ತಿರುಗಿದೆ. ಮಣಿಪುರದ ಜನತೆ ಅಲ್ಲಿನ ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಸಿಎಂ ಬಿರೇನ್‌ ಸಿಂಗ್‌ (Biren Singh) ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

    ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿರುವುದು ಪೈಶಾಚಿಕ ಕೃತ್ಯ ನಾನು ಇದನ್ನ ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರ ಬರಿ ಬಾಯಿ ಮಾತಿಗೆ ಕಠಿಣ ಕ್ರಮ ಅನ್ನದೇ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು. ಇದನ್ನೂ ಓದಿ: 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ- ಜಾಮೀನು ನೀಡಿದ್ದಕ್ಕೆ ಹೈಕೋರ್ಟ್ ಕಿಡಿ

    ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ ಕಾನೂನು ವಿಚಾರವಾಗಿ ಮಾತನಾಡಿ, ಇದೊಂದು ಚುನಾವಣೆಯ ಗಿಮಿಕ್‌. ಮೋದಿ ಸರ್ಕಾರ ತನ್ನ ಮೊದಲ ಪ್ರಣಾಳಿಕೆಯಲ್ಲಿಯೇ ಏಕರೂಪ ನಾಗರಿಕ ಕಾನೂನು ಘೋಷಣೆ ಮಾಡಿತ್ತು. ಆದ್ರೆ 9 ವರ್ಷಗಳಿಂದ ಜಾರಿ ಮಾಡದೇ ಈಗ ಚುನಾವಣೆಯ ಸಮಯದಲ್ಲಿ ಜಾರಿ ಮಾಡುತ್ತಾರೆ ಅಂದ್ರೆ ಏನರ್ಥ. ಯಾವುದೇ ಚರ್ಚೆ ಆಗದೇ ತರಾತುರಿಯಲ್ಲಿ ಕಾನೂನು ಜಾರಿ ಮಾಡುತ್ತಿರುವುದು ಚುನಾವಣೆ ಉದ್ದೇಶದಿಂದಲೇ ಹೊರತು ಬೇರೇನೂ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ತಲೆ ಕತ್ತರಿಸಿ ಬಿದಿರಿನ ಬೇಲಿಗೆ ನೇತುಹಾಕಿದ್ದ ದುಷ್ಕರ್ಮಿಗಳು – ಮಣಿಪುರದ ಮತ್ತೊಂದು ವೀಡಿಯೋ ವೈರಲ್‌

    ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡಿದ ಶೆಟ್ಟರ್‌, ಹಾಲಿನ ದರ ಏರಿಕೆ ಬಹಳಷ್ಟು ದಿನಗಳಿಂದ ಇತ್ತು. ಈ ಬಗ್ಗೆ ರೈತ ಮತ್ತು ಸರಬರಾಜು ಮಾಡುವವರ ಜೊತೆಗೆ ಚರ್ಚೆ ನಡೆಯುತ್ತಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಏನಾದರೂ ಯೋಜನೆ ಜಾರಿ ಮಾಡಬೇಕಾದ್ರೆ ದರ ಏರಿಕೆ ಅನಿವಾರ್ಯವಾಗುತ್ತದೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಧಗಧಗ – ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ

    ಮಣಿಪುರ ಧಗಧಗ – ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸಿ: ಸರ್ಕಾರ ಆದೇಶ

    ಇಂಫಾಲ್: ಎಲ್ಲಾ ರೀತಿಯ ಎಚ್ಚರಿಕೆ, ಸಮಂಜಸವಾದ ಬಲ ಪ್ರಯೋಗಕ್ಕೂ ಜಗ್ಗದೇ ಹೋದರೆ ಶೂಟೌಟ್‌ ಮಾಡಿ ಎಂದು ಅಧಿಕಾರಿಗಳಿಗೆ ಮಣಿಪುರ (Manipur violence) ಸರ್ಕಾರ ಆದೇಶ ಹೊರಡಿಸಿದೆ.

    ಪ್ರತಿಭಟನಾಕಾರರನ್ನು ಎಲ್ಲಾ ರೀತಿಯಲ್ಲೂ ಮನವೊಲಿಸಿ, ಎಚ್ಚರಿಕೆ ನೀಡಿ, ಸಮಂಜಸವಾದ ಬಲ ಪ್ರಯೋಗ ಮಾಡಿ. ಇದ್ಯಾವುದಕ್ಕೂ ಬಗ್ಗದೇ ಹೋದರೆ, ವಿಪರೀತ ಪರಿಸ್ಥಿತಿ ಪ್ರಕರಣಗಳಲ್ಲಿ ಗುಂಡು ಹಾರಿಸಿ ಎಂದು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಮತ್ತು ಎಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳಿಗೆ ಆದೇಶಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ಇಂಟರ್‌ನೆಟ್ ಸ್ಥಗಿತ, ಸ್ಥಳದಲ್ಲಿ ಸೇನೆ

    ರಾಜ್ಯದಲ್ಲಿ ಕ್ಷಣಕ್ಷಣವೂ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ಲದೇ ರಾಜಧಾನಿ ಇಂಫಾಲ್‌ಗೂ ಹರಡುತ್ತಿದೆ. ಇದರಿಂದ ಎಚ್ಚೆತ್ತ ಸರ್ಕಾರ, ಭದ್ರತೆಯನ್ನು ಬಲಪಡಿಸಲು ಸೂಚನೆ ನೀಡಿದೆ. 55 ಸೇನಾ ಕಾಲಂಗಳನ್ನು ನಿಯೋಜಿಸಲಾಗಿದೆ.

    ಮಣಿಪುರದಲ್ಲಿ ಎಸ್‌ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದಿದೆ. ಮೇಟಿ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಬೇಕು ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 8 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೇ ಇಂಟರ್‌ನೆಟ್‌ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

  • ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ರೈಲ್ವೆ ಉದ್ಯೋಗ ತೊರೆದು ಪೊಲೀಸ್‌ ಇಲಾಖೆ ಸೇರಿದ ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ

    ಇಂಪಾಲ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಮೀರಾಬಾಯಿ ಚಾನು ಅವರು ಈಗ ಮಣಿಪುರ ಪೊಲೀಸ್‌ ಇಲಾಖೆಯಲ್ಲಿ ಅಡಿಷನಲ್‌ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಎಸ್‌ಪಿ) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಪದಕ ಜಯಿಸಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಅವರದ್ದೇ ಮೊದಲ ಪದಕವಾಗಿತ್ತು. ಇದನ್ನೂ ಓದಿ: ಟೀಂ ಇಂಡಿಯಾದ ಟೆಸ್ಟ್ ನಾಯಕತ್ವ ತೊರೆದ ವಿರಾಟ್ ಕೊಹ್ಲಿ

    ಮೀರಾ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆಗಾಗಿ ಅವರಿಗೆ ಎಎಸ್‌ಪಿ ಹುದ್ದೆ ನೀಡುವುದಾಗಿ ಮಣಿಪುರ ಸರ್ಕಾರ ಘೋಷಿಸಿತ್ತು. ಆಗಾಗಲೇ ಮೀರಾಬಾಯಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ವೃತ್ತಿಯನ್ನು ತೊರೆದು ಪೊಲೀಸ್‌ ಇಲಾಖೆಗೆ ಸೇರುವಂತೆ ಸಿಎಂ ಬಿರೇನ್‌ ಸಿಂಗ್‌ ಸಲಹೆ ನೀಡಿದ್ದರು.

    ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 21 ವರ್ಷಗಳ ಬಳಿಕ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟು ಮೀರಾಬಾಯಿ ಸಾಧನೆ ಮಾಡಿದರು. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ