Tag: ಮಣಿಪಾಲ

  • ಉಡುಪಿಯಲ್ಲಿ ಭಾರೀ ಮಳೆ – ಅಂಗಡಿಗಳಿಗೆ ನುಗ್ಗಿತು ಕೆಸರು ನೀರು

    ಉಡುಪಿಯಲ್ಲಿ ಭಾರೀ ಮಳೆ – ಅಂಗಡಿಗಳಿಗೆ ನುಗ್ಗಿತು ಕೆಸರು ನೀರು

    – ಹೆದ್ದಾರಿಗೆ ಹರಿದ ಭಾರೀ ಪ್ರಮಾಣದ ಕೆಸರು ನೀರು, ವಾಹನ ಸವಾರರ ಪರದಾಟ
    – 14 ಫೀಟ್ ಇದ್ದ ಚರಂಡಿ ಈಗ ನಾಲ್ಕು ಫೀಟ್

    ಉಡುಪಿ: ಉಡುಪಿಯಲ್ಲಿ(Udupi) ಭಾರೀ ಮಳೆಯಾಗುತ್ತಿದ್ದು, ಅಂಗಡಿಗಳಿಗೆ ಕೆಸರು ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಡಿ ಮಳೆಗೆ ಜಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.

    ನಗರ ಅಪ್ಸರಾ ಐಸ್‌ಕ್ರೀಮ್ ಮಳಿಗೆಗೆ ಭಾರೀ ಮಳೆ ನೀರು ಮತ್ತು ಕೆಸರು ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲಕ್ಷಾಂತರ ರೂ. ಫ್ರಿಡ್ಜ್, ಕೂಲರ್‌ಗಳಿಗೆ ಹಾನಿಯಾಗಿದೆ. ರಸ್ತೆ ಒತ್ತುವರಿ ಹಾಗೂ ಬಿಲ್ಡಿಂಗ್ ಪಾರ್ಕಿಂಗ್ ಒತ್ತುವರಿಯಿಂದ 14 ಫೀಟ್ ಇದ್ದ ಚರಂಡಿ ಈಗ ನಾಲ್ಕು ಅಡಿಗೆ ಇಳಿದಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಏಕಾಏಕಿ ಗಾಳಿ ಮಳೆ ಜೊತೆ ಕೆಸರು ಮಿಶ್ರಿತ ನೀರು ಬಂದ ಕಾರಣ ತಗ್ಗು ಪ್ರದೇಶದ ಅಂಗಡಿಗಳು ಮನೆಗಳು ಜಲಾಮಯವಾಗಿದೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ಗೆ ಮತ್ತೆ ಶಾಕ್‌ ಕೊಟ್ಟ ಕಾಮಾಕ್ಷಿಪಾಳ್ಯ ಪೊಲೀಸರು

    ಇನ್ನು ಎಡೆಬಿಡದೇ ಸುರಿಯುತ್ತಿರುವ ಮಳೆ ಮಣಿಪಾಲ(Manipal) ಭಾಗದಲ್ಲಿ ಅವಾಂತರ ಸೃಷ್ಟಿ ಮಾಡಿದೆ. ಮಣಿಪಾಲ, ಪರ್ಕಳ ಭಾಗದಲ್ಲಿ ವಿಪರೀತ ಮಳೆಯಾದ ಕಾರಣ ಬೆಟ್ಟದ ಮೇಲಿಂದ ಹರಿದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಮಣಿಪಾಲ- ಲಕ್ಷ್ಮೀಂದ್ರ ನಗರ ಇಳಿಜಾರು ಪ್ರದೇಶವು ಕೆಸರು ನೀರಿನಿಂದ ಜಲಾವೃತವಾಗಿದೆ. ಉಡುಪಿ ಮಣಿಪಾಲ ರಸ್ತೆಯಲ್ಲಿ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಇದನ್ನೂ ಓದಿ: ಹೊಸೂರು ರಸ್ತೆಯಲ್ಲಿ ‘ಸ್ವಿಮ್ಮಿಂಗ್ ಪೂಲ್’ – ವಾಹನ ಸಂಚಾರ ಬಂದ್

    ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಮುತ್ತಲ ಬಹು ಮಹಡಿ ಕಟ್ಟಡಗಳು ನೀರು ಹರಿಯುವ ಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್(Yashpal) ಸುವರ್ಣ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾದ ಎಲ್ಲಾ ಕಟ್ಟಡದ ಪಾರ್ಕಿಂಗ್ ಪ್ರದೇಶಗಳನ್ನು ತೆರವು ಮಾಡಬೇಕು ಎಂದು ಆದೇಶ ನೀಡಿದರು. ಇದನ್ನೂ ಓದಿ: ಮುಂದಿನ 3 ಗಂಟೆಯಲ್ಲಿ ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಭಾರೀ ಮಳೆ

    ಜಿಲ್ಲೆಯ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ದಿನಪೂರ್ತಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಉಡುಪಿಯಲ್ಲಿ ದುಬೈ ಕಾರುಗಳ ಕರ್ಕಶ ಶಬ್ದ – ಮಣಿಪಾಲ ಪೊಲೀಸರಿಂದ ದಂಡ

    ಉಡುಪಿಯಲ್ಲಿ ದುಬೈ ಕಾರುಗಳ ಕರ್ಕಶ ಶಬ್ದ – ಮಣಿಪಾಲ ಪೊಲೀಸರಿಂದ ದಂಡ

    ಉಡುಪಿ: ನಿಯಮ ಮೀರಿ ಕರ್ಕಶ ಸದ್ದು ಮಾಡಿದ ದುಬೈ ನೋಂದಣಿಯ ಕಾರುಗಳನ್ನು ವಶಕ್ಕೆ ಪಡೆದ ಮಣಿಪಾಲ (Manipal) ಪೊಲೀಸರು, 1,500 ರೂ. ದಂಡ ವಿಧಿಸಿದ್ದಾರೆ.

    ದುಬೈನಲ್ಲಿ (Dubai) ವಾಸವಿರುವ ಕೇರಳ ಮೂಲದ ಸುಲೈಮನ್ ಮೊಹಮ್ಮದ್ (29), ಮೊಹಮ್ಮದ್ ಶರೀಫ್ (27) ಮತ್ತು ಅಬ್ದುಲ್ ನಜೀರ್ (25) ಎಂಬ ಯುವಕರು ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್ ಕಾರಿನಲ್ಲಿ ಬಂದಿದ್ದರು. ಈ ವೇಳೆ ಜಿಲ್ಲಾಧಿಕಾರಿ ರಸ್ತೆಯಲ್ಲಿ ನಿಯಮ ಮೀರಿ ಓಡಾಟ ನಡೆಸಿದ್ದ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ ಶಾಸಕರು ಸಂಪರ್ಕದಲ್ಲಿದ್ದರೆ ಕರ್ಕೊಂಡು ಹೋಗಲಿ ನೋಡೋಣ – ಜಮೀರ್‌ಗೆ ಅಶ್ವಥ್‌ ನಾರಾಯಣ್ ಸವಾಲು

    ಆರು ತಿಂಗಳು ಭಾರತದಲ್ಲಿ ತಿರುಗಾಡಲು ಕಾರುಗಳನ್ನು, ಸಮುದ್ರದ ಮುಖಾಂತರ ಹಡಗಿನಲ್ಲಿ ಆಮದು ಮಾಡಿಕೊಂಡಿದ್ದರು. ದುಬೈ ದೇಶಕ್ಕೆ 30 ಲಕ್ಷ ರೂ. ಹಾಗೂ ಭಾರತಕ್ಕೆ 1 ಕೋಟಿ ರೂ. ಹಣ ಕಟ್ಟಿರುವುದಾಗಿ ಪೊಲೀಸರ ಬಳಿ ಯುವಕರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೇಯಾ ಘೋಷಾಲ್ ಎಕ್ಸ್‌ ಅಕೌಂಟ್ ಹ್ಯಾಕ್: ಲಿಂಕ್‌ ಕ್ಲಿಕ್‌ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ

    ಕಾರುಗಳ ದಾಖಲೆಗಳನ್ನ ಆರ್‌ಟಿಓಗೆ ಕಳುಹಿಸಿದ ಪೊಲೀಸರು, ದುಬೈ ನೋಂದಣಿ ಕಾರು ಓಡಾಟಕ್ಕೆ ಅನುಮತಿ ಇದೆಯೇ ಎಂದು ಪರಿಶೀಲನೆ ನಡೆಸಿದರು. ಕಾರು ಚಲಾಯಿಸುವ ಅನುಮತಿ ಇರುವ ಹಿನ್ನೆಲೆ ಆರ್‌ಟಿಓ ಅನುಮತಿ ಮೇರೆಗೆ ಕರ್ಕಶ ಶಬ್ದ ಮಾಡಿದ 3 ಕಾರುಗಳ ಮೇಲೆ 1,500 ರೂ. ಫೈನ್ ಹಾಕಿ ಕಳುಹಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಹಿಮಕುಸಿತ – ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಸಾವು

  • ಮಣಿಪಾಲ ಬಾಣಸಿಗನ ಸಾವಿಗೆ ಬಿಗ್ ಟ್ವಿಸ್ಟ್ – ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ?

    ಮಣಿಪಾಲ ಬಾಣಸಿಗನ ಸಾವಿಗೆ ಬಿಗ್ ಟ್ವಿಸ್ಟ್ – ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ?

    ಉಡುಪಿ: ಮಣಿಪಾಲದಲ್ಲಿ (Manipal) ಬಾಣಸಿಗ (Chef) ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಿಯರ್ ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ  ಮಣಿಪಾಲ ಪೊಲೀಸರು (Manipal Police) ಶಂಕೆ ವ್ಯಕ್ತಪಡಿಸಿದ್ದಾರೆ.

    ಕೇರಳದ (Kerala) ಕಾಸರಗೋಡು ಮೂಲದ ಬಾಣಸಿಗ ಶ್ರೀಧರ್ ಮೃತದೇಹ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ಕುತ್ತಿಗೆಗೆ ಬಾಟಲಿಯಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು. ಇದೀಗ ಸಿಸಿ ಕ್ಯಾಮೆರಾ ಪರಿಶೀಲನೆಯ ಬಳಿಕ ಪೊಲೀಸರ ಅಭಿಪ್ರಾಯ ಬದಲಾಗಿದೆ. ಮೃತ ವ್ಯಕ್ತಿಯ ಸಂಪೂರ್ಣ ಚಲನವಲನ ಗಮನಿಸಿದ ಪೊಲೀಸರು ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

    ಮೃತ ವ್ಯಕ್ತಿಯ ಬಳಿ ಯಾರು ಹಾದು ಹೋಗಿಲ್ಲ, ಹಲ್ಲೆ ಕೂಡ ಮಾಡಿಲ್ಲ. ಈ ಹಿನ್ನೆಲೆ ತಾನೇ ಬಿಯರ್ ಬಾಟಲಿಯಿಂದ ಇರಿದುಕೊಂಡು ಸತ್ತಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕ ಘಟನೆಯ ಬಗ್ಗೆ ಸ್ಪಷ್ಟತೆ ದೊರಕಲಿದೆ. ಮಣಿಪಾಲದ ಅನಂತ ಕಲ್ಯಾಣ ನಗರದಲ್ಲಿ ಘಟನೆ ನಡೆದಿತ್ತು. ಮೃತ ಶ್ರೀಧರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ ಕೇಸ್ ರೀ ಓಪನ್‌ಗೆ ಉಪಸಮಿತಿ ನಿರ್ಧಾರ

    ಶ್ರೀಧರ್ ವಿಪರೀತ ಮದ್ಯವ್ಯಸನಿಯಾಗಿದ್ದ. ಈತ ಮಣಿಪಾಲದ ಹೋಟೆಲ್‌ವೊಂದರಲ್ಲಿ ಬಾಣಸಿಗನಾಗಿದ್ದ. ಈತನ ಆತ್ಮಹತ್ಯೆಗೆ ನಿಖರ ಕಾರಣವೂ ತಿಳಿದುಬಂದಿಲ್ಲ. ಸದ್ಯ ಶ್ರೀಧರ್ ಕುಟುಂಬಸ್ಥರು ಕೇರಳದಿಂದ ಮಣಿಪಾಲಕ್ಕೆ ಆಗಮಿಸಿದ್ದು, ಕುಟುಂಬಸ್ಥರ ಬಳಿ ಮಣಿಪಾಲ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಉಡುಪಿ| ಹೋಟೆಲ್ ಬಾಣಸಿಗ ಭೀಕರ ಹತ್ಯೆ – ಬಿಯರ್ ಬಾಟಲಿ ಗಾಜಿನಿಂದ ಕತ್ತು ಸೀಳಿ ಕೊಲೆ

  • ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿ 11 ಮಂದಿ ವಿರುದ್ಧ FIR ದಾಖಲು

    ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿ 11 ಮಂದಿ ವಿರುದ್ಧ FIR ದಾಖಲು

    ಉಡುಪಿ: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿಗೆ ಚಪ್ಪಲಿ ಏಟು ಹಾಗೂ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಸೇರಿ 11 ಮಂದಿ ಬಿಜೆಪಿ (BJP) ಮುಖಂಡರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

    ಪ್ರಾಂಶುಪಾಲರಿಗೆ ಪ್ರಶಸ್ತಿ ವಾಪಸ್ ಪಡೆದ ವಿಚಾರವಾಗಿ ಮಣಿಪಾಲದ (Manipal) ಸಿಂಡಿಕೇಟ್ ಸರ್ಕಲ್‌ನಲ್ಲಿ ಸೆ.6ರಂದು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಹೆದ್ದಾರಿ ತಡೆದು ಬಿಜೆಪಿ ಮುಖಂಡರು ಸಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಹಿಂದೂ ವಿರೋಧಿ ಸಿದ್ದರಾಮಯ್ಯ ತೊಲಗಿಸಿ ಎಂದು ಘೋಷಣೆ ಕೂಡ ಕೂಗಿದ್ದರು. ಈ ಸಂದರ್ಭ ನಗರಸಭಾ ಸದಸ್ಯ ಗಿರೀಶ್ ಅಂಚನ್, ಯುವ ಮೋರ್ಚಾ ಮುಖಂಡ ಪೃಥ್ವಿರಾಜ್ ಶೆಟ್ಟಿ ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದರು. ಇದನ್ನೂ ಓದಿ: ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ನಿಧನ

    ಈ ಕುರಿತು ಎನ್‌ಎಸ್‌ಯುಐ ಮುಖಂಡ ಸೌರಭ್ ಬಲ್ಲಾಳ್ ಶಾಂತಿಭಂಗ ತರುವ ಉದ್ದೇಶದಿಂದ ಕೃತ್ಯ ಎಸೆಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಯಶ್‌ಪಾಲ್ ಸುವರ್ಣ ಎ5 ಆರೋಪಿಯಾಗಿದ್ದಾರೆ. ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಗಿರೀಶ್ ಅಂಚನ್, ವಿಜಯ ಕೊಡವೂರು, ಬಾಲಕೃಷ್ಣ ಶೆಟ್ಟಿ ವಿರುದ್ಧವೂ ದೂರು ನೀಡಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಳಿ ಮೇಲಿದ್ದ ಸಿಲಿಂಡರ್‌ಗೆ ಗುದ್ದಿದ ರೈಲು – ಕಾನ್ಪುರದಲ್ಲಿ ರೈಲು ದುರಂತಕ್ಕೆ ಸಂಚು!

  • ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಭಾರೀ ಮಳೆಗೆ ಉಡುಪಿ ತತ್ತರ – ಉಕ್ಕಿ ಹರಿದ ಇಂದ್ರಾಣಿ ತೀರ್ಥ, 150ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    ಉಡುಪಿ: ಮುಂಗಾರು ಮಳೆ (Monsoon Rain) ಉಡುಪಿ ನಗರದ ಹಲವೆಡೆ ನೆರೆ ಸೃಷ್ಟಿಸಿದೆ. ಇಂದ್ರಾಣಿ ತೀರ್ಥ ಉಕ್ಕಿ ಹರಿದ ಪರಿಣಾಮ ನದಿ ಪಾತ್ರದ ಸ್ಥಳಗಳೆಲ್ಲ ಜಲಾವೃತಗೊಂಡಿದೆ.

    ಸುಮಾರು ಮೂರು ಗಂಟೆ ಸುರಿದ ರಣ ಮಳೆಗೆ ಉಡುಪಿ ನಗರ (Udupi CIty) ತತ್ತರವಾಗಿದೆ. ಮಣಿಪಾಲ ಪರ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಭಾರೀ ಪ್ರಮಾಣದಲ್ಲಿ ಉಡುಪಿಯತ್ತ ನೀರು ಹರಿದು ಬಂದಿದೆ. ಗದ್ದೆ, ನಗರ ಪ್ರದೇಶ, ಲೇಔಟ್‌ ಒಳಗಡೆ  ಕೆಸರು ನೀರು ನುಗ್ಗಿದೆ.

    ಗುಂಡಿಬೈಲು, ಪಾಡಿಗಾರು, ಮಠದಬೆಟ್ಟು, ಕರಂಬಳ್ಳಿ, ಕಲ್ಸಂಕ ಬೈಲಕೆರೆ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಮೂಡನಿಡಂಬೂರು, ನಿಟ್ಟೂರು, ಮಲ್ಪೆ, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 150ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿವೆ. ಕೆಲ ಕಡೆ ಅಂಗಡಿಗಳ ಒಳಗಡೆ ನೀರು ನುಗ್ಗಿದೆ.

    ಇಂದ್ರಾಣಿ ತೀರ್ಥ (Indrani Theertha) ಹರಿಯುವಲ್ಲೆಲ್ಲಾ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆ (Heavy Rain) ಬಿದ್ದಾಗ ಎಲ್ಲಾ ಕಾಲುವೆಗಳು ತುಂಬಿಕೊಂಡಿರುವುದೇ ಈ ಸಮಸ್ಯೆಗೆ ಕಾರಣ. ಒಳಚರಂಡಿ ಅವ್ಯವಸ್ಥೆಯ ಬಗ್ಗೆ ನೆರೆಪೀಡಿತ ಪ್ರದೇಶದ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಚಕ್ರ ತೀರ್ಥ ಸಗ್ರಿ ವ್ಯಾಪ್ತಿಯಿಂದ ಎಂಟು ಜನರ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆ ಮುಂದುವರೆದಿದೆ. ಜಲಾವೃತವಾದ ಮನೆಗಳಿಂದ ಮಹಿಳೆಯರು ಮಕ್ಕಳು ವೃದ್ಧರನ್ನ ಕರೆತರಲಾಯಿತು.

     

    ಅಗ್ನಿಶಾಮಕ ದಳದ ಬೋಟ್ ನಲ್ಲಿ ಜನರನ್ನು ರಕ್ಷಣೆ ಮಾಡಲಾಗಿದೆ. ಮಹಿಳೆಯರು ಮಕ್ಕಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ನಗರಸಭೆ, ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ಬೆಳಗ್ಗೆ ಸುರಿದ ಮಳೆಗೆ ಕರಾವಳಿ ಅಂಡರ್ ಪಾಸ್ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭಾರೀ ಪ್ರಮಾಣದ ಮಳೆ ನೀರು ತುಂಬಿಕೊಂಡು ವಾಹನ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನ ಕಾರು ಬಸ್ಸುಗಳು ಕೃತಕ ನೆರೆ ನೀರಿನಲ್ಲಿ ಓಡಾಟ ಮಾಡುತ್ತಿದೆ.

     

  • ನಕಲಿ ಮತದಾನ ನಡೆದಿಲ್ಲ: ಉಡುಪಿ ಡಿ.ಸಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ

    ನಕಲಿ ಮತದಾನ ನಡೆದಿಲ್ಲ: ಉಡುಪಿ ಡಿ.ಸಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ

    ಉಡುಪಿ: ಇಲ್ಲಿನ ರಾಜೀವ ನಗರದಲ್ಲಿ (Rajeev Nagar) ನಕಲಿ ಮತದಾನ (Fake Vote) ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ (Udupi)  ಡಿ.ಸಿ. ಡಾ.ವಿದ್ಯಾಕುಮಾರಿ (Dr Vidyakumari) ಸ್ಪಷ್ಟನೆ ನೀಡಿದ್ದು, ನಕಲಿ ಮತದಾನ ನಡೆದಿಲ್ಲ ಎಂದು ತಿಳಿಸಿದ್ದಾರೆ.

    ರಾಜೀವ ನಗರದಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ. ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಹೆಸರಲ್ಲಿ ಮತದಾನ ನಡೆದಿದ್ದು, ಒಂದೇ ಹೆಸರಿನ ಇಬ್ಬರು ಇರೋದರಿಂದ ಗೊಂದಲ ಉಂಟಾಗಿದೆ. ಒಂದೇ ಮತಗಟ್ಟೆಯಲ್ಲಿ ಕೃಷ್ಣ ನಾಯ್ಕ ಹೆಸರಿನ ಇಬ್ಬರು ಮತದಾರರು ಇದ್ದ ಕಾರಣ ವೋಟರ್ ಸ್ಲಿಪ್ ಅದಲು ಬದಲಾಗಿ ಗೊಂದಲ ಉಂಟಾಗಿದೆ ಎಂದರು. ಇದನ್ನೂ ಓದಿ:

    ನಡೆದಿದ್ದು ಏನು?
    ಮತ ಚಲಾಯಿಸಲೆಂದು ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಮತಗಟ್ಟೆಗೆ ಆಗಮಿಸಿದ ವೇಳೆ ತನ್ನ ಹೆಸರಲ್ಲಿ ಬೇರೊಬ್ಬರು ಮತ ಚಲಾಯಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಎರಡೂ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳಿಂದ ವಿರೋಧ ವ್ಯಕ್ತವಾಗಿದ್ದು, ಮತಗಟ್ಟೆ ಅಧಿಕಾರಿಗಳನ್ನು ಬೂತ್ ಏಜೆಂಟ್‌ಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಮಣಿಪಾಲದ ರಾಜೀವ ನಗರ ಮತಗಟ್ಟೆಯಲ್ಲಿ ಘಟನೆ ನಡೆದಿದ್ದು, ನಕಲಿ ಮತದಾನ ಮಾಡಿದವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಲಾಗಿತ್ತು. ಇದನ್ನೂ ಓದಿ:

  • ಬೆಂಗಳೂರಿನ ಮಣಿಪಾಲ್ ಶಿಕ್ಷಣ ಸಂಸ್ಥೆಯಲ್ಲಿ ಏ.6ಕ್ಕೆ ಓಪನ್ ಹೌಸ್ ಕಾರ್ಯಕ್ರಮ – ಈಗಲೇ ಹೆಸರನ್ನು ನೋಂದಾಯಿಸಿ

    ಬೆಂಗಳೂರಿನ ಮಣಿಪಾಲ್ ಶಿಕ್ಷಣ ಸಂಸ್ಥೆಯಲ್ಲಿ ಏ.6ಕ್ಕೆ ಓಪನ್ ಹೌಸ್ ಕಾರ್ಯಕ್ರಮ – ಈಗಲೇ ಹೆಸರನ್ನು ನೋಂದಾಯಿಸಿ

    ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಸಂಸ್ಥೆಯ ಓಪನ್ ಹೌಸ್ (Open House) ಕಾರ್ಯಕ್ರಮ ಏ.6 ರಂದು ನಡೆಯಲಿದೆ.

    ಈ ಕಾರ್ಯಕ್ರಮ ತುಂಬ ವಿಶಿಷ್ಟವಾಗಿದ್ದು, ಕ್ರಿಯಾತ್ಮಕತೆಗೆ ಪ್ರಾಶಸ್ತ್ಯ ಇರುತ್ತದೆ. ಈ ಸಂಸ್ಥೆಯಲ್ಲಿ ಇರುವಂಥ ವ್ಯಾಪಕವಾದ ಶೈಕ್ಷಣಿಕ ಕೋರ್ಸ್ ಬಗೆಗಿನ ವಿವರಗಳು, ಇಲ್ಲಿನ ಅತ್ಯಾಧುನಿಕವಾದ ಮೂಲಸೌಕರ್ಯ ಹಾಗೂ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯ, ಸವಲತ್ತು ಹಾಗೂ ಸಂಸ್ಥೆಯಲ್ಲಿ ವಿದ್ಯಾರ್ಥಿ ಜೀವನ ಹೇಗಿರುತ್ತದೆ ಎಂಬುದನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊಹ್ಲಿ ಅಭಿಮಾನಿಗೆ ಥಳಿತ – ಮಾನವ ಹಕ್ಕುಗಳ ಆಯೋಗಕ್ಕೆ ದೂರು

    ಬೌದ್ಧಿಕ ಸ್ಪರ್ಧೆಯ ಮೂಲಕ ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸುವ ಉದ್ದೇಶ ಸಹ ಇದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸಬೇಕು ಎಂಬ ಉದ್ದೇಶ ಇದ್ದಲ್ಲಿ ತಾವೇ ಖುದ್ದಾಗಿ ಇಲ್ಲಿನ ಸಮಗ್ರ ಕಲಿಕಾ ವಾತಾವರಣದ ಬಗ್ಗೆ ತಿಳಿಯುವುದಕ್ಕೆ ಈ ಕಾರ್ಯಕ್ರಮದ ಅತ್ಯುತ್ತಮ ಅವಕಾಶ ಒದಗಿಸುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ: ಸಿದ್ದರಾಮಯ್ಯ

    ಬೆಂಗಳೂರಿನ ಕ್ಯಾಂಪಸ್‌ನಲ್ಲಿ (Bengaluru Campus) ಏ.6 ರ ಬೆಳಗ್ಗೆ 9:30ಕ್ಕೆ ಓಪನ್‌ ಹೌಸ್‌ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಾಗಾರಗಳು, ರಸಪ್ರಶ್ನೆ ಮತ್ತು ವೃತ್ತಿ ಬದುಕಿನ ಮೇಲೆ ಕೇಂದ್ರೀಕರಿಸಿದಂತೆ ಕೆರಿಯರ್ ಮೌಲ್ಯಮಾಪನ ಪರೀಕ್ಷೆ ಇನ್ನೂ ಹಲವು ಉಪಯುಕ್ತ ಚಟುವಟಿಕೆಗಳು ನಡೆಯಲಿದೆ.

    ಬೆಂಗಳೂರಿನ ಮಣಿಪಾಲ್ ಅಕಾಡೆಮಿಯಲ್ಲಿ (Bengaluru Manipal Academy) ಪ್ರವೇಶಾತಿ ವಿಭಾಗದ ಉಪನಿರ್ದೇಶಕರಾದ ಗೌರವ ಯಾದವ್ ಅವರಿಂದ ಮಧ್ಯಾಹ್ನ 1:30ಕ್ಕೆ ಸ್ವಾಗತ ಪ್ರಸ್ತುತಿ ಮತ್ತು ಪ್ರಶ್ನೋತ್ತರ ಅವಧಿ ನಡೆಯಲಿದೆ. ಆ ನಂತರ ಸಂಸ್ಥೆಯ ಪ್ರೊ. ಚಾನ್ಸಲರ್ ಆಗಿರುವ ಪ್ರೊ ಮಧು ವೀರರಾಘವನ್ ಅವರಿಂದ ಮಾತುಕತೆ ನಡೆಯಲಿದೆ. ದಿನದ ಕೊನೆಗೆ ಸ್ಟ್ಯಾಂಡ್ ಅಪ್ ಕಮೆಡಿಯನ್ ಕೆನ್ನಿ ಸೆಬಾಸ್ಟಿಯನ್ ಅವರ ಕಾರ್ಯಕ್ರಮ ಇರಲಿದೆ. ಇದನ್ನೂ ಓದಿ: ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್‌ಡಿಕೆ ತೆಗೆದುಕೊಂಡಿದ್ದು ಯಾಕೆ?

    ಓಪನ್ ಹೌಸ್ ಕಾರ್ಯಕ್ರಮದ ಬಗ್ಗೆ ಮಧು ವೀರರಾಘವನ್ ಅವರು ಮಾತನಾಡಿ, “ವಿದ್ಯಾರ್ಥಿಗಳು, ಪೋಷಕರು ಹಾಗೂ ಉತ್ಸಾಹಿಗಳನ್ನು ಮಣಿಪಾಲ್ ಸಂಸ್ಥೆಯ ಈ ಓಪನ್ ಹೌಸ್ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕೆ ರೋಮಾಂಚಿತರಾಗಿದ್ದೇವೆ. ಮಹತ್ವಾಕಾಂಕ್ಷೆ ಇರುವಂಥವರಿಗೆ ಇದು ಅಮೋಘವಾದ ಕಾರ್ಯಕ್ರಮವಾಗಿದೆ. ಇದರಲ್ಲಿ ನಮ್ಮ ಸಂಸ್ಥೆಯ ವಿಶ್ವದರ್ಜೆ ಸೌಲಭ್ಯಗಳು, ನವೀನ ಪ್ರೋಗ್ರಾಮ್‌ಗಳು ಮತ್ತು ಇಲ್ಲಿನ ಅತ್ಯುತ್ತುಮ ಕ್ಯಾಂಪಸ್ ಸಂಸ್ಕೃತಿ ಬಗ್ಗೆ ತಿಳಿಯುವುದಕ್ಕೆ ಒಳ್ಳೆ ಅವಕಾಶವಿದೆ. ಕಲಿಕೆ, ಅನ್ವೇಷಣೆ ಹಾಗೂ ಕೊನೆಯೇ ಇಲ್ಲದಂಥ ಸಾಧ್ಯತೆಗಳ ಪಯಣಕ್ಕೆ ನಮ್ಮ ಬಾಗಿಲುಗಳನ್ನು ತೆರೆಯುತ್ತಿದ್ದೇವೆ. ಬನ್ನಿ ನಮ್ಮೊಂದಿಗೆ ಸೇರಿ,” ಎಂದು ಅವರು ಕರೆ ನೀಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗಲು ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿ. ನೋಂದಣಿಯ ಲಿಂಕ್ ಇಲ್ಲಿದೆ: www.apply.manipal.edu/lp/maheblr/open-house.html

     

  • ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಪ್ರವಾಸ

    ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಪ್ರವಾಸ

    ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಇಂದು (ಮಂಗಳವಾರ) ಉಡುಪಿ (Udupi) ಪ್ರವಾಸ ಕೈಗೊಂಡಿದ್ದು, ಇವರ ಈ ಪ್ರವಾಸ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಸಿದ್ದರಾಮಯ್ಯ ಅವರು ಪ್ರಗತಿ ಪರಿಶೀಲನಾ ಸಭೆಗೆ (Progress Review Meeting) ಉಡುಪಿಗೆ ಆಗಮಿಸುತ್ತಿದ್ದು, ಉಡುಪಿಯ ಮಣಿಪಾಲದಲ್ಲಿರುವ (Manipal) ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಕೆಡಿಪಿ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಭಾಗಿಯಾಗಲಿದ್ದಾರೆ. ಸದ್ಯ ರಾಜ್ಯದಲ್ಲಿ ಚರ್ಚೆಯಲ್ಲಿರುವ ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಸಭೆಯಲ್ಲಿ ಉಡುಪಿಯ ಐದು ಬಿಜೆಪಿ (BJP) ಶಾಸಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ತರಕಾರಿ ಬೆಲೆಯೂ ತುಟ್ಟಿ – ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಯಾವ ತರಕಾರಿಗೆ ಎಷ್ಟು ದರ?

    ಪ್ರಗತಿ ಪರಿಶಿಲನಾ ಸಭೆಯಲ್ಲಿ ವಿಡಿಯೋ ಪ್ರಕರಣದ ಕುರಿತು ಚರ್ಚೆಯಾಗುವ ಸಾಧ್ಯತೆಗಳಿದ್ದು, ಉಡುಪಿಯಲ್ಲಿ ಮುಂಗಾರು ಮಳೆ ಅಬ್ಬರ ಹಾನಿ ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಅಲ್ಲದೇ ಉಡುಪಿ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಗಳಿವೆ. ಇದನ್ನೂ ಓದಿ: ಇಂದಿನಿಂದ ಎಕ್ಸ್‌ಪ್ರೆಸ್‌ ವೇನಲ್ಲಿ ಬೈಕ್, ಆಟೋ ಸಂಚಾರಕ್ಕೆ ನಿರ್ಬಂಧ – ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11:30ಕ್ಕೆ ಕಾಪು (Kapu) ತಾಲೂಕಿನ ಪಡುಬಿದ್ರೆ ಬೀಚ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಇರಿಸಲಾಗಿದೆ. ಇದನ್ನೂ ಓದಿ: Commercial LPG Cylinder Price: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ನಿಮಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಹಾಳಾಗಿ ಹೋಗಿ – ಈಶ್ವರಪ್ಪ

    ಸಿದ್ದರಾಮಯ್ಯ ನಿಮಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಹಾಳಾಗಿ ಹೋಗಿ – ಈಶ್ವರಪ್ಪ

    ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಒಳ್ಳೆಯದಾಗಲಿ, ರಾಜಕೀಯವಾಗಿ ಸಿದ್ದರಾಮಯ್ಯ ಹಾಳಾಗಿ ಹೋಗಲಿ ಎಂದು ಬಿಜೆಪಿ (BJP) ನಾಯಕ ಈಶ್ವರಪ್ಪ (K.S.Eshwarappa) ದೇವರಲ್ಲಿ ಬೇಡಿಕೊಂಡಿದ್ದಾರೆ.

    ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ (Vijaya Sankalpa Yatra) ಉಡುಪಿಗೆ ಬಂದಿದ್ದು ಕಾರ್ಕಳ ಮತ್ತು ಉಡುಪಿ (Udupi) ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಲಿ ಮತ್ತು ಸಭೆಗಳನ್ನು ನಡೆಸಿದೆ. ಈ ಸಂಬಂಧ ಮಣಿಪಾಲದಲ್ಲಿ (Manipal) ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಕೃಷ್ಣ ಮಠಕ್ಕೆ (Krishna Math) ಬಾರದಿರುವ ಬಗ್ಗೆ ಗಮನ ಸೆಳೆದರು. ಇದನ್ನೂ ಓದಿ: ಸಿ.ಟಿ ರವಿಗೆ 20 ವರ್ಷ ಸಾಕಾಗಿಲ್ವಾ, ಏನು ಮಾಡಿದ್ದಾರೆ?- ಮತದಾರರಿಂದ ಕ್ಲಾಸ್ 

    ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಿದ್ದರಾಮಯ್ಯನವರು ಬಹಳ ಸಲ ಉಡುಪಿಗೆ ಬಂದರು. ಆದರೆ ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ. ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೂ ವಿಶೇಷವಾದ ಸಂಬಂಧವಿದೆ. ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ನೀಡಲಿಲ್ಲ? ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಬರಲಿಲ್ಲ. ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರಿ. ಇನ್ನಾದರೂ ಕೃಷ್ಣಮಠಕ್ಕೆ ಬನ್ನಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಹಾರೈಸಿದರು. ಇದನ್ನೂ ಓದಿ: ಬಿಜೆಪಿ ವಕ್ರದೃಷ್ಟಿ – ಮೋದಿ ರೋಡ್‌ಶೋಗೆ ಕುಮಾರಸ್ವಾಮಿ ಒಕ್ಕಲಿಗ ಕಾರ್ಡ್ ಪ್ಲೇ

    ಸಿದ್ದರಾಮಯ್ಯನವರ ಮೇಲೆ ಪ್ರೀತಿಯಿಂದ, ಅವರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ (Politics) ಉದ್ದೇಶದಿಂದ ಈ ರೀತಿ ಹೇಳಲಿಲ್ಲ. ಪ್ರೀತಿ ಇಲ್ಲದೇ ಇದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ. ದೇಶದ್ರೋಹ ಹಾಗೂ ಧರ್ಮ ದ್ರೋಹಿಗಳನ್ನು ದ್ವೇಷಿಸಬೇಕು. ಸಿದ್ದರಾಮಯ್ಯನವರು ಎಲ್ಲಾ ಕಡೆ ದೇವಸ್ಥಾನಕ್ಕೆ ಹೋಗುತ್ತಾರೆ ಆದರೆ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದರು. ಇದನ್ನೂ ಓದಿ: ಮಂಡ್ಯ ಜನರ ಎದುರು ಮತ್ತೆ ಸಿಎಂ ಆಗುವ ಮಹಾದಾಸೆ ವ್ಯಕ್ತಪಡಿಸಿದ ಡಿಕೆಶಿ 

    ಸಿದ್ದರಾಮಯ್ಯನವರು ಮಠಗಳಿಗೆ ಹಣವನ್ನು ಕೊಡುತ್ತಾರೆ, ಮುಖ್ಯಮಂತ್ರಿ ಆಗಿದ್ದಾಗ ನನಗೂ ಹಣ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ದೇವಸ್ಥಾನ ಹಾಗೂ ಮಠಗಳಿಗೂ ಸಿದ್ದರಾಮಯ್ಯ ಕೊಡುಗೆಗಳನ್ನು ಕೊಟ್ಟಿದ್ದರು. ನಾನು ಮಂತ್ರಿಯಾಗಿದ್ದಾಗ ಅವರ ಬೇಡಿಕೆಗಳಿಗೂ ಸ್ಪಂದಿಸಿದ್ದೇನೆ. ನಮ್ಮಿಬ್ಬರ ನಡುವೆ ಸ್ನೇಹವಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ. ಪಕ್ಷದ ವಿಚಾರ ಬಂದಾಗ, ಮೋದಿಯನ್ನು (Narendra Modi) ಟೀಕೆ ಮಾಡಿದಾಗ ನಾನು ಯಾವ ಭಾಷೆ ಬಳಸಿದ್ದೇನೆ ಎಂದು ನಿಮಗೆ ಗೊತ್ತು. ಮೋದಿಯನ್ನು ನರಹಂತಕ ಎಂದು ಕರೆದರೆ ಸುಮ್ಮನೆ ಬಿಡುತ್ತೇವಾ ಎಂದು ಹಾರೈಕೆಯ ಜೊತೆ ಸಿದ್ದರಾಮಯ್ಯನವರ ಕಿವಿ ಹಿಂಡಿದರು. ಇದನ್ನೂ ಓದಿ: ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್- ಹಾಡಿಹೊಗಳಿದ ಬಿ.ಎಲ್ ಸಂತೋಷ್

  • ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    ಉಡುಪಿ: ವಿದ್ಯಾರ್ಥಿಗಳಲ್ಲಿ (Students) ಜ್ಞಾನದ ಜೊತೆ ಬುದ್ಧಿವಂತಿಕೆಯೂ ಅಗತ್ಯ. ರಾಮನಿಗಿಂತ (Rama) ರಾವಣ (Ravana) ಜ್ಞಾನಿಯಾಗಿದ್ದ. ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ. ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮಣಿಪಾಲ (Manipal) ವಿವಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.

    ನೀವು ಜ್ಞಾನವಂತರಾದರೆ ಸಾಲದು. ನಿಮ್ಮಲ್ಲಿ ಸಂಸ್ಕೃತಿ ಜೊತೆ ಬುದ್ಧಿವಂತಿಕೆ ಇರಬೇಕು ಎಂದು ರಾಜಕೀಯ ಜೀವನ ಆರಂಭಕ್ಕೂ ಮೊದಲು ಉತ್ತರಪ್ರದೇಶದಲ್ಲಿ ಉಪನ್ಯಾಸಕ ವೃತ್ತಿ ಮಾಡಿದ್ದ ರಾಜನಾಥ್ ಸಿಂಗ್ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಇದನ್ನೂ ಓದಿ: ಆ ಕಾಲ ಹೋಯ್ತು.. ಭಾರತದ ತಂಟೆಗೆ ಬಂದ್ರೆ ಮುಖಮೂತಿ ನೋಡಲ್ಲ – ರಾಜನಾಥ್ ಸಿಂಗ್ ಎಚ್ಚರಿಕೆ

    ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಹಲವಾರು ವರ್ಷಗಳಿಂದ ಸಾಧನೆ ಮಾಡಿಕೊಂಡು ಬಂದಿದೆ. ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹೆಚ್ಚುಗಾರಿಕೆ ಎಂದು ಟೀಕಿಸುತ್ತಾರೆ. ಇತಿಹಾಸವನ್ನು ತಿಳಿದುಕೊಳ್ಳದ ವ್ಯಕ್ತಿಗಳು ಇಂತಹ ಟೀಕೆಗಳನ್ನು ಮಾಡುತ್ತಾರೆ. ಭಾರತೀಯರು ಕೊಟ್ಟ ಶೂನ್ಯ ಇರದ ಗಣಿತವನ್ನು ಊಹಿಸಲು ಸಾಧ್ಯವಿಲ್ಲ. ಪೈಥಾಗೊರಸ್‌ನ ಪ್ರಮೇಯವನ್ನು ಬೋಧಾಯನ ಋಷಿ 300 ವರ್ಷಗಳ ಹಿಂದೆಯೇ ಹೇಳಿದ್ದರು. ಭಾರತದ ಆರ್ಥಿಕ ಸದೃಢತೆ ಗುಣಮಟ್ಟದ ಮಾನವ ಸಂಪನ್ಮೂಲಗಳಲ್ಲಿ ಇದೆ ಎಂದರು. ಇದನ್ನೂ ಓದಿ: ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ

    Live Tv
    [brid partner=56869869 player=32851 video=960834 autoplay=true]