Tag: ಮಣಿಕಂಠ ರಾಥೋಡ್‌

  • ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ – ಅಣ್ಣಾಮಲೈ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ – ಅಣ್ಣಾಮಲೈ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ: ಅವನು ಯಾರೋ ಕೆಲಸಕ್ಕೆ ಬಾರದೇ ಇರೋ ಐಪಿಎಸ್ (IPS) ಆಫೀಸರ್ ಅಣ್ಣಾಮಲೈ, ರಾಜಕೀಯ ಒತ್ತಡದಿಂದ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ ಎಂದು ಹೇಳುತ್ತಾರೆ. ಅವರಿಗೆ ಬುದ್ದಿ ಇದೆಯಾ ಅಥವಾ ಇಲ್ವಾ ಎಂಬುದು ಗೊತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಅಣ್ಣಾಮಲೈ (Annamalai) ವಿರುದ್ಧ ಕಿಡಿ ಕಾರಿದ್ದಾರೆ.

    ಖರ್ಗೆ ಹತ್ಯೆ ಕುರಿತು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanta Rathod) ಬೆದರಿಕೆ ಆಡಿಯೋ ಬಗ್ಗೆ ಅಣ್ಣಾಮಲೈ ಹೇಳಿಕೆ ಕುರಿತು ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಪಿಎಸ್ ಓದಿದವರು ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಲಿ. ಅಣ್ಣಾಮಲೈ ಡಿಸಿಪಿ ಆಗಿದ್ದಾಗ ರಾಜಕೀಯ ಒತ್ತಡದಿಂದಲೇ ಎಲ್ಲಾ ಕೇಸ್ ಮಾಡಿದ್ದಾರೆ. ಬಿಜೆಪಿಯವರು (BJP) ಖರ್ಗೆ ಕುಟುಂಬದ ಬಗ್ಗೆ ತಮ್ಮ ಮನದಾಳದ ಮಾತು ಏನು ಎಂದು ಹೇಳಲಿ. ಆ ಆಡಿಯೋವನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತಾರೆ. ಈಗ ಸರ್ಕಾರ ಅವರದ್ದೇ ಇದೆಯಲ್ವಾ? ತನಿಖೆ ಮಾಡಿಸಲಿ ಎಂದು ಹರಿಹಾಯ್ದರು. ಇದನ್ನೂ ಓದಿ: ವರುಣಾ, ಚಾಮರಾಜನಗರದಲ್ಲಿ ಸ್ಪರ್ಧೆ ವಿಧಿ ನಿಯಮ : ಸೋಮಣ್ಣ

    ಚಿತ್ತಾಪುರ ಅಭ್ಯರ್ಥಿ ಬಹಳ ಬುದ್ದಿವಂತ ಅಲ್ಲ. ಅವನು ಏನಿದ್ದರೂ ಅಕ್ಕಿಪಕ್ಕಿ ಲೆವೆಲ್ ಅಲ್ಲಿಯೇ ಇರುತ್ತಾನೆ. ಅದಕ್ಕೆ ಚಿತ್ತಾಪುರ ಉಸ್ತುವಾರಿಯ ಸುಪಾರಿಯನ್ನು ರವಿ ಕುಮಾರ್ ಅವರಿಗೆ ಕೊಟ್ಟಿರುವುದು. ಬಿಜೆಪಿಯವರು ಹತಾಶರಾಗಿದ್ದಾರೆ. ರವಿ ಕುಮಾರ್ ಅವರಿಗೆ ಈ ಹಿಂದೆಯೇ ಜೇವರ್ಗಿ ಮತ್ತು ಅಫಜಲಪುರದ ಟಿಕೆಟ್ ಮಾರಾಟ ಆಗಿದ್ಯಾ ಎಂದು ಕೇಳಿದ್ದೆ. ಮೋದಿಯವರು ಫೈಟರ್ ರವಿಗೆ ನಮಸ್ಕಾರ ಹಾಕಿದಾಗಲೇ ಗೊತ್ತಾಯಿತು. ಮಣಿಕಂಠನಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಬಿಡುತ್ತಾರೆ ಎಂದು ಕಾಣಿಸುತ್ತದೆ. ಮೋದಿ ಚಿತ್ತಾಪುರಕ್ಕೆ ಬರದೇ ಇರುವುದಕ್ಕೆ ನನಗೆ ಬಹಳ ನಿರಾಸೆಯಾಗಿದೆ ಎಂದರು. ಇದನ್ನೂ ಓದಿ: 2 ದಿನವೂ ಕಮಾಲ್ – ಕರ್ನಾಟಕದಲ್ಲಿ ದಾಖಲೆ ಬರೆದ ಮೋದಿ ರೋಡ್ ಶೋ

    ಇದೇ ಮಣಿಕಂಠ ಈ ಹಿಂದೆ ನವೆಂಬರ್‌ನಲ್ಲಿ ನನಗೆ ಶೂಟ್ ಮಾಡುತ್ತೇನೆ ಎಂದು ಕ್ಯಾಮೆರಾ ಮುಂದೆ ಹೇಳಿದ್ದ. ಬಿಜೆಪಿಯವರು ಮಾತನಾಡಿದರೆ ರಾಮರಾಜ್ಯ ಕಟ್ಟುತ್ತೇವೆ ಎಂದು ಹೇಳುತ್ತಾರೆ. ರಾಮರಾಜ್ಯವನ್ನು ರೌಡಿಗಳ ಜೊತೆ ಕಟ್ಟುತ್ತೀರಾ ಹೇಗೆ? ಬಿಜೆಪಿಯವರು ಎಂತಹವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂಬುದನ್ನು ಯೋಚನೆ ಮಾಡಲಿ. ರವಿ ಕುಮಾರ್‌ಗೆ ವಿಶ್ವನಾಥ್ ಪಾಟೀಲ್ ಅವರ ಕಾಲು ಧೂಳಿನಷ್ಟೂ ಅನುಭವ ಇಲ್ಲ. ವಿಶ್ವನಾಥ್ ಪಾಟೀಲ್ ಅವರನ್ನು ಖರೀದಿ ಮಾಡುತ್ತೇವೆ ಎಂದು ಚಿತ್ತಾಪುರದಲ್ಲಿ ಬಂದು ಹೇಳಲಿ. ವಿಶ್ವನಾಥ್ ಪಾಟೀಲ್ ಅವರು ಖರೀದಿ ಆಗುತ್ತಾರೆ ಎಂದು ತಿಳಿದುಕೊಂಡರೆ ಅವರಷ್ಟು ಮೂರ್ಖರು ಯಾರೂ ಇಲ್ಲ. ರವಿಕುಮಾರ್ ಗ್ರಾಮ ಪಂಚಾಯತ್ ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮನೆ ಮೇಲೆ ಐಟಿ ದಾಳಿ

    ಬಿಜೆಪಿಯವರು ಇಡೀ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ ತಂದು ವೈಯಕ್ತಿಕವಾಗಿ ಜಗಳ ತಂದಿಡಲು ಮುಂದಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕ ಕೈತಪ್ಪಿದರೆ ಮುಜುಗರ ಆಗುತ್ತದೆ ಎಂದು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ಶನಿವಾರ ಐಟಿ ಅಸ್ತ್ರವನ್ನು ಬಳಸಿಕೊಂಡಿದ್ದಾರೆ. ಕಾಂಗ್ರೆಸ್ (Congress) ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ವಾಹೆದ್ ಅಲಿ, ಮೊಹ್ಮದ್ ಜಹಾಗೀರ್‌ದಾರ್, ಅರವಿಂದ್ ಚೌಹಾಣ್ ಮನೆ, ಹೋಟೆಲ್ ಹಾಗೂ ಸ್ಟೋನ್ ಕ್ರಷರ್ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಅರವಿಂದ್ ಅವರ ಮನೆಯಲ್ಲಿ ಅವರ ತಾಯಿ ಒಬ್ಬರೇ ಇದ್ದಾಗ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಅಭ್ಯರ್ಥಿಗೆ ಚುನಾವಣಾ ಅಧಿಕಾರಿಗಳಿಂದ ಶಾಕ್ – ಕೆಎಂ ಉದಯ್ ಬೆಂಬಲಿಗರ ಮನೆಯಲ್ಲಿ 2 ಕೋಟಿ ಹಣ ಪತ್ತೆ

    ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯ ಪಾಲಿಗೆ ಕಳ್ಳರು ಸುಳ್ಳರಾಗಿದ್ದವರು ಬಿಜೆಪಿಗೆ ಸೇರಿದ ಮೇಲೆ ದೇಶಪ್ರೇಮಿಗಳು ಹಾಗೂ ರಾಷ್ಟ್ರಭಕ್ತರಾಗಿದ್ದಾರೆ. ಅರವಿಂದ್ ಚೌಹಾಣ್ ಬಿಜೆಪಿಯಿಂದ ಬಂದು ಎರಡು ವಾರ ಆಯಿತು. ಎರಡೇ ವಾರದಲ್ಲಿ ಅವರು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರಾ? ಅವರು ಎರಡೇ ವಾರದಲ್ಲಿ ಕೆಟ್ಟವರಾಗಿ ಬಿಟ್ಟರಾ ಹೇಗೆ? ಸದ್ಯ ಕಾಂಗ್ರೆಸ್‌ನಲ್ಲಿ ಅವರು ಸಕ್ರಿಯವಾಗಿರುವುದಕ್ಕೆ ಐಟಿ ರೇಡ್ ಮೂಲಕ ತೊಂದರೆ ಕೊಡುವ ಸಂದೇಶ ಸಾರಿದ್ದಾರೆ. ಇದರಿಂದ ನಾವು ಯಾರೂ ಹೆದರುವುದಿಲ್ಲ ಎಂದು ಹೆಳಿದರು. ಇದನ್ನೂ ಓದಿ: ಅಜ್ಜಿ ಗೆದ್ದಿದ್ದ ತೆಲಂಗಾಣದ ಮೇದಕ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧೆ?

    ನೀವು ಪ್ರಾಮಾಣಿಕರಾಗಿದ್ದರೆ ಕೆಕೆಆರ್‌ಡಿಬಿ ಅಕ್ರಮ ಆಗಿರುವುದರ ಬಗ್ಗೆ ಸಿಎಜಿ ವರದಿ ಕೊಟ್ಟಿದೆ. ಅಕ್ರಮವಾಗಿರುವ ಬಗ್ಗೆ ವರದಿ ಕೊಟ್ಟರೂ ಅವರ ಮನೆ ಮೇಲೆ ಯಾಕೆ ದಾಳಿ ನಡೆಸಿಲ್ಲ? ಚಿಂಚೊಳಿಯ ಒಂದೇ ರೋಡ್ ಐವತ್ತು ಬಾರಿ ಟೆಂಡರ್ ಆಗಿದೆ. ಅವರ ಮನೆ ಮೇಲೆ ಯಾಕೆ ದಾಳಿ ಮಾಡಿಲ್ಲ? ಡಿಸಿಸಿ ಬ್ಯಾಂಕ್‌ನಲ್ಲಿ ರೈತರು ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು. ಅದು ಸರ್ಕಾರಕ್ಕೆ ಕೇಳಿಸಿಲ್ವಾ? ಜನ ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ರೋಶ ಹೊರಹಾಕಿದರೆ ದಾಳಿ ಮಾತ್ರ ಕಾಂಗ್ರೆಸ್ ಅವರ ಮೇಲೆ ಆಗುತ್ತದೆ. ಬಿಜೆಪಿಯವರು ಸೋಲಿನ ಹತಾಶೆಯಿಂದ ಅವರ ನಾಯಕರಾದ ಮೋದಿ ಮತ್ತು ಅಮಿತ್ ಶಾ ಕಾಲಿಗೆ ಬಿದ್ದು ಹೇಗಾದರು ಮಾಡಿ ಗೆಲ್ಲಿಸಿ ಎಂದು ಕೇಳಿದ್ದಾರೆ. ಹಾಗಾಗಿ ಅವರು ಕೇಂದ್ರದ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಈ ಬಾರಿ ಕಲಬುರಗಿಯಲ್ಲಿ ನಮ್ಮ ಕಾಂಗ್ರೆಸ್ ಬಾವುಟ ಹಾರಿಸೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್‌ ಶೋ – ಬಿಜೆಪಿ ಲೆಕ್ಕಾಚಾರ ಏನು?

  • ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ

    ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.

    ಖರ್ಗೆ ಕುಟುಂಬವನ್ನ ಸಾಫ್ (ಕೊಲೆ) ಮಾಡ್ತೇನೆ ಎಂಬ ಬಿಜೆಪಿ ಅಭ್ಯರ್ಥಿ (BJP Candidate) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಖರ್ಗೆ ಸಾಹೇಬರು ಏನ್ ತಪ್ಪು ಮಾಡಿದ್ದಾರಮ್ಮ ಸತ್ತುಹೊಡಿಯೋಕೆ. ನಾನೇನು ತಪ್ಪು ಮಾಡಿದ್ದೀನಾ ಅಥವಾ ನಮ್ಮ ಮಕ್ಕಳು ತಪ್ಪು ಮಾಡಿದ್ದಾರಾ..?, 50 ವರ್ಷ ರಾಜಕೀಯ ಜೀವನದಲ್ಲಿ ಜನರ ಒಳಿತಿಗೆ ದುಡಿದಿದ್ದಾರೆ. ಖರ್ಗೆ ಸಾಹೇಬ್ರು ಜನರ ಒಳಿತಿಗೆ ರಾಜಕೀಯದಲ್ಲಿ ದುಡಿದಿದ್ದಾರೆ. ಆದ್ರೆ ಖರ್ಗೆ ಫ್ಯಾಮಿಲಿ ಸಾಫ್ ಮಾಡ್ತೇನೆ ಅಂತ ಹೇಳ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಏನಿದು ಪ್ರಕರಣ..?: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanth Rathod) ಮತ್ತು ಬಿಜೆಪಿ ಕಾರ್ಯಕರ್ತ ರವಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋವನ್ನು ಸುರ್ಜೇವಾಲಾ (Randeep Surjewala) ಬಿಡುಗಡೆ ಮಾಡಿದ್ದಾರೆ.

    ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದರು.  ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯವರು ಖರ್ಗೆ ಹತ್ಯೆಗೆ ಉತ್ತೇಜನ ನೀಡುತ್ತಿದ್ದಾರೆ. ಒಬ್ಬ ದಲಿತ ವ್ಯಕ್ತಿ ಈ ಮಟ್ಟಕ್ಕೆ ಬೆಳೆದಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಆಡಿಯೋ ಬಗ್ಗೆ ಪ್ರಧಾನಿ ಮೋದಿ ಆಗಲಿ, ಸಿಎಂ ಬೊಮ್ಮಾಯಿ ಚುನಾವಣಾ ಆಯೋಗವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

     

  • ಖರ್ಗೆ ಹತ್ಯೆಗೆ ಸಂಚು ಆಡಿಯೋ ಬಾಂಬ್‌ – ಸಿಎಂ ಬೊಮ್ಮಾಯಿ ಹೇಳಿದ್ದೇನು?

    ಖರ್ಗೆ ಹತ್ಯೆಗೆ ಸಂಚು ಆಡಿಯೋ ಬಾಂಬ್‌ – ಸಿಎಂ ಬೊಮ್ಮಾಯಿ ಹೇಳಿದ್ದೇನು?

    ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಕುಟುಂಬಸ್ಥರ ಹತ್ಯೆಗೆ ಬಿಜೆಪಿ ಅಭ್ಯರ್ಥಿ ಸಂಚು ರೂಪಿಸಿದ್ದಾರೆ ಎನ್ನಲಾದ ಆಡಿಯೋ ಬಾಂಬ್‌ ಸಿಡಿಸಿದ್ದು, ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಡಿಯೋ ತಿರುಚಲಾಗಿದೆಯೇ ಏನು ಎಂಬುದನ್ನ ನೋಡಬೇಕು. ಆಡಿಯೋ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೆವೆ, ನಂತರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಏನಿದು ಆಡಿಯೋ ಬಾಂಬ್‌ ಕೇಸ್‌?
    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಬಿಜೆಪಿ ಅಭ್ಯರ್ಥಿ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್‌ ಆಡಿಯೋ ಬಾಂಬ್‌ ಸಿಡಿಸಿದೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanth Rathod) ಮತ್ತು ಬಿಜೆಪಿ ಕಾರ್ಯಕರ್ತ ರವಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋವನ್ನು ಸುರ್ಜೇವಾಲಾ (Randeep Surjewala) ಬಿಡುಗಡೆ ಮಾಡಿದ್ದಾರೆ. ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

    ಇದೇ ವೇಳೆ ಬಿ.ಎಲ್ ಸಂತೋಷ್ ಲಿಂಗಾಯತ ಸಮುದಾಯಗಳ ಮತಗಳು ಬೇಡ ಎಂದು ಹೇಳುತ್ತಿರುವ ಸುದ್ದಿ ಫೇಕ್. ಈಗಾಗಲೇ ಈ ಬಗ್ಗೆ ದೂರು ದಾಖಲಿಸಲಾಗಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಗೆದ್ದರೆ ತಾಲಿಬಾನ್‌ಗಳಿಗೆ ಬಿರಿಯಾನಿ ಕೊಟ್ಟು ಸಾಕುತ್ತಾರೆ: ಸಿ.ಟಿ.ರವಿ ವಾಗ್ದಾಳಿ

    ಶಿವರಾಜ್ ಕುಮಾರ್ ಮೇಲೆ ಬಿಜೆಪಿ ಟ್ರೋಲ್ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾವ ನಟರು ಯಾವ ಪಕ್ಷ ಪರವಾಗಿ ಬೇಕಾದರೂ ಪ್ರಚಾರ ಮಾಡಬಹುದು. ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಪ್ರಚಾರದ ಬಗ್ಗೆ ನನಗೇನು ಅಭ್ಯಂತರವಿಲ್ಲ ಎಂದು ಹೇಳಿದರು.

  • ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

    ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

    ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹತ್ಯೆಗೆ ಬಿಜೆಪಿ (BJP) ಅಭ್ಯರ್ಥಿ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್‌ ಆಡಿಯೋ ಬಾಂಬ್‌ ಸಿಡಿಸಿಸಿದೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanth Rathod) ಮತ್ತು ಬಿಜೆಪಿ ಕಾರ್ಯಕರ್ತ ರವಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋವನ್ನು ಸುರ್ಜೇವಾಲಾ (Randeep Surjewala) ಬಿಡುಗಡೆ ಮಾಡಿದ್ದಾರೆ.

    ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದರು.  ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

    ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯವರು ಖರ್ಗೆ ಹತ್ಯೆಗೆ ಉತ್ತೇಜನ ನೀಡುತ್ತಿದ್ದಾರೆ. ಒಬ್ಬ ದಲಿತ ವ್ಯಕ್ತಿ ಈ ಮಟ್ಟಕ್ಕೆ ಬೆಳೆದಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಆಡಿಯೋ ಬಗ್ಗೆ ಪ್ರಧಾನಿ ಮೋದಿ ಆಗಲಿ, ಸಿಎಂ ಬೊಮ್ಮಾಯಿ ಚುನಾವಣಾ ಆಯೋಗವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

     

    ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರಕ್ಕೆ ದುಃಸ್ವಪ್ನದಂತೆ ಕಾಡುತ್ತಿದ್ದರೆ ಕರ್ನಾಟಕದಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಎಡೆಬಿಡದೆ ಕಾಡಿದ್ದಾರೆ. ಹಲವು ಹಗರಣಗಳನ್ನು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಇಡೀ ಖರ್ಗೆ ಕುಟುಂಬವನ್ನು ಮುಗಿಸುವ ಸಂಚೇ ಎಂದು ಬಿಜೆಪಿಯನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.