Tag: ಮಣಿಕಂಠ

  • ಕಲಬುರಗಿಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್

    ಕಲಬುರಗಿಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್

    ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಯನ್ನ ಶೂಟ್ ಮಾಡುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ಮಣಿಕಂಠ ರಾಠೋಡ್ ಹೇಳಿಕೆ ಹಿನ್ನಲೆಯಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ಮಣಿಕಂಠ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಭಾನುವಾರ ಮಧ್ಯರಾತ್ರಿ ಹೈದರಾಬಾದ್‌ (Hyderabad) ನಲ್ಲಿ ಪೊಲೀಸರು ಬಂಧಿಸಿ ಕಲಬುರಗಿಗೆ ಕರೆ ತಂದಿದ್ದಾರೆ.

    ಇತ್ತ ಮಣಿಕಂಠ ಬಂಧನಕ್ಕಾಗಿ ಕಾಂಗ್ರೆಸ್ (Congress) ಕೂಡ ಆಗ್ರಹಿಸಿತ್ತು. ಕಲಬುರಗಿ ಎಸ್ ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಇಂದು ಕಲಬುರಗಿಗೆ ಆಗಮಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡೋದಾಗಿ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಶಿವಮೊಗ್ಗದಲ್ಲಿ 2 ಕೋಮಿನ ಮಧ್ಯೆ ಗಲಾಟೆ – ಓರ್ವನಿಗೆ ಚಾಕು ಇರಿತ, ಮೂವರಿಗೆ ಗಾಯ

    ಮಣಿಕಂಠ ಹೇಳಿದ್ದೇನು..? : ಕಲಬುರಗಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ನಾವು ಮತ್ತು ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಬಿಜೆಪಿ ಲೀಡರ್‍ಗಳು ತಿರುಗಾಡಲು ಬಿಡುವುದಿಲ್ಲ ಎಂಬ ಪ್ರಿಯಾಂಕ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದರು. ಭಾರತ ದೇಶ ಉಳಿಸಲು ಮಿಲಿಟರಿ ಸೈನಿಕರು ಗಡಿಗಳಲ್ಲಿ ಹೇಗೆ ನಿಂತಿದ್ದಾರೋ ಅದೇ ರೀತಿ ನಾವು ಸಹ ಸಮಾಜ ಮತ್ತು ಬಡವರ ಸಲುವಾಗಿ ಮಿಲಿಟಿರಿಯಂತೆಯೇ ನಿಂತಿದ್ದೇವೆ.

    ನಿಮಗೆ ಎಕೆ-47 ನಿಂದ ಶೂಟ್ ಮಾಡುವುದು ಇದೆಯಾ? ಅಥವಾ ತೋಪ್‍ನಿಂದ ಶೂಟ್ ಮಾಡೋದಿದೆಯಾ? ನೀವು ಶೂಟ್ ಮಾಡಿ ನಾವು ಸಾಯೋಕು ರೆಡಿ ಇದ್ದೀವಿ. ನಾವೂ ನಿಮಗೆ ಶೂಟ್ ಮಾಡೋಕೂ ರೆಡಿ ಇದ್ದೀವಿ ಎಂದಿದ್ದರು. ಮಣಿಕಂಠ ಅವರ ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಕಾವಾಡಿಗ ಕಲೀಲ್‍ನನ್ನು ಅಟ್ಟಾಡಿಸಿದ ಸಾಕಾನೆ ಮಣಿಕಂಠ

    ಕಾವಾಡಿಗ ಕಲೀಲ್‍ನನ್ನು ಅಟ್ಟಾಡಿಸಿದ ಸಾಕಾನೆ ಮಣಿಕಂಠ

    ಶಿವಮೊಗ್ಗ: ಸಾಕಾನೆ ಮಣಿಕಂಠ (Elephant) ಬಿಡಾರದಿಂದ ಕಾಡಿಗೆ ತೆರಳುವ ವೇಳೆ ಕಾವಾಡಿಗನನ್ನು (Kavadiga) ಅಟ್ಟಾಡಿಸಿದ ಘಟನೆ ಶಿವಮೊಗ್ಗದ (Shivamogga) ಸಕ್ರೆಬೈಲಿನ (Sakrebailu) ಆನೆ ಬಿಡಾರದಲ್ಲಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಣಿಕಂಠ ಆನೆ ಬಿಡಾರದಿಂದ ರಾಷ್ಟ್ರೀಯ ಹೆದ್ದಾರಿ ದಾಟಿ ಜಂಗಲ್ ರೆಸಾರ್ಟ್ ಮೂಲಕ ಕಾಡಿಗೆ ತೆರಳಬೇಕಿತ್ತು. ಈ ಸಂದರ್ಭದಲ್ಲಿ ಕಾವಾಡಿಗನನ್ನು ಕಂಡು ಇದ್ದಕ್ಕಿದ್ದಂತೆ ಕೋಪಗೊಂಡಿದೆ. ಮಣಿಕಂಠನ ಮೇಲೆ ಮಾವುತ ಇಮ್ರಾನ್ ಕುಳಿತಿದ್ದರು. ಕಾವಾಡಿಗ ಕಲೀಲ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿದ್ದರು. ರೆಸಾರ್ಟ್ ಗೇಟ್ ಬಳಿ ಕಲೀಲ್ ಬರುತ್ತಿದ್ದಂತೆ ಆತನ ಮೇಲೆ ಮಣಿಕಂಠ ದಾಳಿಗೆ ಮುಂದಾಗಿದ್ದಾನೆ. ಆನೆಯ ಮುನಿಸಿನ ಬಗ್ಗೆ ತಿಳಿದ ಕಲೀಲ್ ಬೈಕ್ ಬಿಟ್ಟು ಅಲ್ಲಿಂದಲೇ ಓಡಿ ಹೋಗಿ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಮಣಿಕಂಠ ಆನೆಯು ಕಲೀಲ್ ಅವರನ್ನು ಓಡಿಸಿಕೊಂಡು ಮತ್ತೆ ಬಿಡಾರದೊಳಗೆ ಓಡಿದೆ. ನಂತರ ಬಿಡಾರದಲ್ಲಿ ಅರಿವಳಿಕೆ ಮದ್ದು ನೀಡಲಾಯಿತು. ಆ ಬಳಿಕ ಇತರೆ ಆನೆಗಳ ಸಹಾಯದಿಂದ ಮಣಿಕಂಠನನ್ನು ನಿಯಂತ್ರಣಕ್ಕೆ ತಂದು ಕಟ್ಟಿ ಹಾಕಲಾಗಿದೆ. ಮಣಿಕಂಠ ಕಾವಡಿಗನ ಮೇಲೆ ದಾಳಿಗೆ ಮುಂದಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತೀಚೆಗೆ, ಮಣಿಕಂಠ ತನ್ನ ಮಾವುತ ಹಾಗೂ ಕಾವಡಿಗರ ಮೇಲೆ ಇತರೆ ಆನೆಗಳ ಮೇಲೆ ಕೊಪಗೊಳ್ಳುತ್ತಿದೆ. ಈ ಹಿಂದೆ ಬಿಡಾರದ ತುಂಗಾ ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿ ನಡೆಸಲು ಸಹ ಮುಂದಾಗಿತ್ತು. ಇದನ್ನೂ ಓದಿ: 21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ- ಕೊನೆಗೂ ಗಡ್ಡ ತೆಗೆಸಿಕೊಂಡ ವ್ಯಕ್ತಿ

    Live Tv
    [brid partner=56869869 player=32851 video=960834 autoplay=true]