Tag: ಮಠ

  • ಖಾವಿ ತೊಟ್ಟು ಮಹಿಳೆಯರ ಜೊತೆ ಸರಸ – ಐವರ ಜೊತೆ ಮಠದಲ್ಲೇ ಪಲ್ಲಂಗದಾಟ!

    ಖಾವಿ ತೊಟ್ಟು ಮಹಿಳೆಯರ ಜೊತೆ ಸರಸ – ಐವರ ಜೊತೆ ಮಠದಲ್ಲೇ ಪಲ್ಲಂಗದಾಟ!

    – ಮಹದೇವಿ ಸ್ವಾಮಿಯ ಕಾಮ ಪುರಾಣ

    ಚಾಮರಾಜನಗರ: ಸುಳ್ವಾಡಿ ಮಾರಮ್ಮನ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲೂರು ಮಠದ ಇಮ್ಮಡಿ ಮಹದೇವ ಶ್ರೀಗಳ ಲೀಲೆ ಬಗೆದಷ್ಟು ಬಯಲಾಗುತ್ತಿದೆ.

    ಖಾವಿ ತೊಟ್ಟು ಸ್ವಾಮೀಜಿ ಮಹಿಳೆಯರ ಜೊತೆ ಪಲ್ಲಂಗ ಹಂಚಿಕೊಂಡಿದ್ದಾರೆ. ಇಮ್ಮಡಿ ಮಹದೇವಸ್ವಾಮಿಗೆ 5 ಜನ ಮಹಿಳೆಯರ ಜೊತೆ ಸಂಪರ್ಕವಿದ್ದು, ಮಠದ ಆವರಣದಲ್ಲಿ ಸರಸ ಸಲ್ಲಾಪ ಮಾಡುತ್ತಿದ್ದರು ಎನ್ನುವ ಮಾತು ಈಗ ಕೇಳಿ ಬಂದಿದೆ.

    ಮಹದೇವ ಸ್ವಾಮೀಜಿ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತೋಟದ ಮನೆಯೊಂದರಲ್ಲಿ ಮಹಿಳೆಯರ ಜೊತೆ ಸರಸವಾಡುತ್ತಿದ್ದನು. ಮಹಿಳೆಯರ ಸಹವಾಸದಿಂದ ಈ ಇಮ್ಮಡಿ ಸ್ವಾಮೀಜಿ ಮಠಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಇಮ್ಮಡಿ ಮಹದೇವಸ್ವಾಮಿ ಓರ್ವ ಶಿಕ್ಷಕಿ ಸೇರಿದಂತೆ ಐದು ಮಂದಿ ಜೊತೆ ಹಾಸಿಗೆ ಹಂಚಿಕೊಂಡಿದ್ದಾರೆ. ಸುಂದರ ಮಹಿಳೆಯರು ಹಾಗೂ ಮಹಿಳಾ ಭಕ್ತರನ್ನು ಹಾಸಿಗೆಗೆ ಕರೆಯುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀಗಳ ಡಿಸ್ಚಾರ್ಜ್ – ಮಠ ತಲುಪಿದ ಸ್ವಾಮೀಜಿ

    ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀಗಳ ಡಿಸ್ಚಾರ್ಜ್ – ಮಠ ತಲುಪಿದ ಸ್ವಾಮೀಜಿ

    ಬೆಂಗಳೂರು: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಕಳೆದ 13 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಗುಣಮುಖರಾಗಿ ಇಂದು ಶ್ರೀಮಠಕ್ಕೆ ವಾಪಸ್ಸಾಗಿದ್ದಾರೆ.

    ಆಸ್ಪತ್ರೆಯಲ್ಲಿಯೇ ಶ್ರೀಗಳಿಗೆ ಇನ್ನೂ ಕೆಲದಿನಗಳ ವಿಶ್ರಾಂತಿ ಅವಶ್ಯಕತೆ ಇದ್ದರೂ ಶ್ರಿಗಳು ಮಠ ಹಾಗೂ ವಿದ್ಯಾರ್ಥಿಗಳನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ತುರ್ತಾಗಿ ಶ್ರೀಮಠಕ್ಕೆ ಕರೆದುಕೊಂಡು ಬರಲಾಗಿದೆ. ಈ ಹಿನ್ನೆಲೆ ಶ್ರೀಮಠದಲ್ಲಿ ಭಕ್ತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಠದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಎಸ್‍ಪಿ ದಿವ್ಯಾ ಗೋಪಿನಾಥ್ ಮಠಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

    ಸಿದ್ದಗಂಗಾ ಶ್ರೀ ಸ್ವಾಮೀಜಿ ಕರೆದುಕೊಂಡು ಬರಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಸ್ವಾಮೀಜಿಯನ್ನು ಕರೆದುಕೊಂಡು ಬರಲು ಎರಡು ಅಂಬುಲೆನ್ಸ್ ಗಳನ್ನು ಸಿದ್ಧತೆ ಮಾಡಲಾಗಿತ್ತು. ಚೆನ್ನೈನ ರೇಲಾ ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀಗಳು ಸುಮಾರು 12 ಗಂಟೆಗೆ ಹೊರಟು ಪೊಲೀಸರ ಬಿಗಿ ಭದ್ರತೆಯೊಂದಿಗೆ ಹಾಗೂ ಜೀರೋ ಟ್ರಾಫಿಕ್ ಮುಖಾಂತರ ವಿಮಾನ ನಿಲ್ದಾಣ ತಲುಪಿದ್ದರು.

    ಶ್ರೀಗಳ ಜೊತೆಗೆ ಇಬ್ಬರು ವೈದ್ಯರು ಹಾಗೂ ಶ್ರೀಗಳ ಆಪ್ತರೊಬ್ಬರು ಏರ್ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದರು. 52 ನಿಮಿಷಕ್ಕೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಏರ್ ಅಂಬುಲೆನ್ಸ್ ತಲುಪಿ, ಅಲ್ಲಿಂದ ರಸ್ತೆ ಮೂಲಕ ತುಮಕೂರಿಗೆ ಶ್ರೀಗಳನ್ನು ಕರೆ ತರಲಾಯಿತು.

    ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಮೊದಲಿನ ತರ ಊಟ, ಪೂಜೆ ಮಾಡುತ್ತಾರೆ. ಆದ್ದರಿಂದ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದೇವೆ. ಅವರು ರಿಕವರಿ ಆಗಿರುವುದು ಪವಾಡ. ಇದು ಯಾವುದೇ ರೆಕಾರ್ಡ್ ಅಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ. ಅವರಿಗೆ ಚಿಕಿತ್ಸೆ ನೀಡಿರುವುದು ಖುಷಿ ಇದೆ. ಸದ್ಯಕ್ಕೆ ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಡಾ. ಮೊಹಮ್ಮದ್ ರೇಲಾ ಅವರು ತಿಳಿಸಿದ್ದಾರೆ.

  • ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು..!

    ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು..!

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗತ್ತು ಮಾರಮ್ಮ ವಿಷ ಪ್ರಸಾದ ದುರಂತಕ್ಕೆ ಹೊಸ ತಿರುವು ಸಿಕ್ಕಿದೆ.

    ದೇವಸ್ಥಾನಕ್ಕೆ ವರ್ಷಕ್ಕೆ ಬರೋಬ್ಬರೀ 80 ಲಕ್ಷ ರೂಪಾಯಿ ಆದಾಯ ಇತ್ತು. 1.5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದಲ್ಲಿ ಗೋಪುರ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವಿಚಾರದಲ್ಲಿ ಸ್ವಾಮೀಜಿ ಮತ್ತು ದೇವಸ್ಥಾನದ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ಇತ್ತು. ದುರಂತದ ದಿನ ನಡೆದಿದ್ದ ಗುದ್ದಲಿ ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದರು ಎಂದು ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

    ಗೋಪುರ ಗುದ್ದಲಿ ಪೂಜೆಗೆ ಕಿರಿಯ ಸ್ವಾಮೀಜಿ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಬಂದಿರಲಿಲ್ಲ. ಸಾಲೂರು ಮಠದ ಕಿರಿಯ ಸ್ವಾಮೀಜಿ ಚಿನ್ನಪ್ಪಿ ದೇವಸ್ಥಾನದ ಪ್ರತಿಯೊಂದು ಕಾರ್ಯಕ್ರಮಕ್ಕೂ ಬರುತ್ತಿದ್ದರು. ಆದ್ರೆ ಅಂದು ಅವರು ಬಂದಿರಲಿಲ್ಲ. ಹೀಗಾಗಿ ಹಿರಿಯ ಸ್ವಾಮೀಜಿ ಗುರುಸ್ವಾಮಿ ನೇತೃತ್ವದಲ್ಲಿ ಪೂಜೆ ನಡೆದಿತ್ತು. ಆದರೆ ಪೂಜೆ ನಡೆದ ಬಳಿಕ ಹಿರಿಯ ಸ್ವಾಮೀಜಿಯೂ ಪ್ರಸಾದ ಸ್ವೀಕರಿಸಿದೆ ಹೋಗಿದ್ದರು ಎಂದು ತಿಳಿದುಬಂದಿದೆ.

    ಇಮ್ಮಡಿ ಮಹಾದೇವಸ್ವಾಮಿ ಮತ್ತು ಸಾಲೂರು ಮಠದ ಕಿರಿಯ ಸ್ವಾಮೀಜಿ ಬೇರೆ ಬೇರೆಯಾಗಿದ್ದು, ಆದರೆ ಸಾಲೂರು ಮಠಕ್ಕೂ ಈ ದೇವಾಲಕ್ಕೂ ಯಾವುದೇ ಸಂಬಂಧ ಇಲ್ಲ. ಇಮ್ಮಡಿ ಮಹಾದೇವಸ್ವಾಮಿ ದೋಣಿಕೆರೆ ಮಠದವರಾಗಿದ್ದಾರೆ. ಈ ದೋಣಿಕೆರೆ ಮಠಕ್ಕೂ ಮಾರಮ್ಮ ದೇವಾಲಯಕ್ಕೂ ಸಂಬಂಧ ಇದೆ. ಈ ಹಿಂದೆ ದೋಣಿಕೆರೆ ಮಠದ ಅರ್ಚಕರು ಮಾರಮ್ಮನ ಪೂಜೆ ಮಾಡುತ್ತಿದ್ದರು. ಆದರೆ 50 ವರ್ಷಗಳ ಹಿಂದೆ ನಾವು ಪೂಜೆ ಮಾಡಲ್ಲ ಎಂದು ಹೊರಟು ಹೋಗಿರುತ್ತಾರೆ. ಬಳಿಕ ಸ್ಥಳೀಯರು, ಚಿನ್ನಪ್ಪಿ ಹಾಗೂ ಇತರರು ಸೇರಿ ಒಂದು ಟ್ರಸ್ಟ್ ಮಾಡಿ ಅವರೇ ಪೂಜೆ ಮಾಡಿಕೊಂಡು ಬರುತ್ತಿದ್ದರು.

    ಹೀಗೆ ಪೂಜೆ ಮಾಡಲು ಶುರು ಮಾಡಿದಾಗ ದೇವಾಲಯಕ್ಕೆ ಆದಾಯ ಹೆಚ್ಚಾಗಿತ್ತು. ನಂತರ ಮತ್ತೆ ದೋಣಿಕೆರೆ ಅರ್ಚಕರು ಬಂದು ನಾವೇ ಪೂಜೆ ಮಾಡುತ್ತೇವೆ ಬಿಟ್ಟುಕೊಡಿ ಎಂದು ಕೇಳಿದ್ದರು. ಆಗ ಸ್ಥಳೀಯರು ಇಲ್ಲ ನಾವೇ ಪೂಜೆ ಮಾಡುತ್ತಿದ್ದೇವೆ. ನೀವು ಒಂದು ವಾರಕ್ಕೆ ಬಂದು ಪೂಜೆ ಮಾಡಿ ಅಂತ ಹೇಳಿದ್ದರು. ಈ ವಿಚಾರಕ್ಕೆ ಆಗಾಗ ಮಾತುಕತೆ ನಡೆಯುತ್ತಿತ್ತು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

    ಗುರುಸ್ವಾಮಿ ಸ್ಪಷ್ಟನೆ:
    ದೇವಾಲಯದಲ್ಲಿ ಕಟ್ಟಡ ಕಟ್ಟುತ್ತಿದ್ದೇವೆ ನೀವು ಬನ್ನಿ ಎಂದು ಕರೆದಿದ್ದರು. ಅಂದು ಶುಕ್ರವಾರ ಆಗಿದ್ದರಿಂದ ನಮ್ಮ ಮಠದಲ್ಲೂ ಭಕ್ತರು ಹೆಚ್ಚಾಗಿದ್ದರು. ಕೊನೆಗೆ ಪೂಜೆ ಮುಗಿಸಿ ಮಾರಮ್ಮನ ದೇವಾಲಯಕ್ಕೆ ಹೋಗಿದ್ದೆ. ಆದರೆ ನಾನು ಹೋಗುವಷ್ಟರಲ್ಲಿ ಪೂಜೆ ಮುಗಿದಿತ್ತು. ಮತ್ತೆ ನಾನು ಕೂಡ ಪೂಜೆ ಮಾಡಿಸಿದೆ. ಬಳಿಕ ದೇವಾಲಯ ಕಂಟ್ರಾಕ್ಟರ್ ಸದಸ್ಯರ ಬಳಿ ಹೋಗಿ, ನೀವೇ ದೇವಸ್ಥಾನವನ್ನು ನಿರ್ಮಿಸಿ ಬೇರೆ ಯಾರಿಗೂ ವಹಿಸಬೇಡಿ ಎಂದು ಹೇಳಿ ನಾನು ಮಠಕ್ಕೆ ಬಂದೆ ಎಂದು ಹೇಳಿದ್ದಾರೆ.

    ನಾನು ಯಾವ ದೇವಾಸ್ಥಾನಕ್ಕೂ ಹೋದರು ಪ್ರಸಾದ ಸ್ವೀಕರಿಸುವುದಿಲ್ಲ. ನಾವೇ ಬೇರೆ ಮಾಡಿಕೊಳ್ಳುತ್ತೇವೆ. ಇಲ್ಲ ನಮಗೆ ಅಂತ ಬೇರೆ ಮನೆಯಲ್ಲಿ ಪ್ರಸಾದ ಮಾಡಿಸಿದ್ದರೆ ಅಲ್ಲಿ ಹೋಗಿ ತಿನ್ನುತ್ತೇವೆ. ಆದ್ದರಿಂದ ಅಂದಿನ ದಿನ ಕೂಡ ನಾನು ದೇವಾಲಯದಲ್ಲಿ ಪ್ರಸಾದ ತಿಂದಿಲ್ಲ. ದೇವಸ್ಥಾನಕ್ಕೆ ನಮಗೂ ಗುರು-ಶಿಷ್ಯರ ಸಂಬಂಧ ಇದ್ದಂತೆ. ನಾನು ಪೂಜೆಗೆ ಹೋಗಿ ವಾಪಸ್ ಮಠಕ್ಕೆ ಬಂದೆ ಎಂದು ಗುರುಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಕ್ಕೆ ದೇವಸ್ಥಾನ ಮಂಡಳಿ ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮೀಜಿಗಳ ಮನವೊಲಿಸಲಿ: ಪೇಜಾವರ ಶ್ರೀ

    ಕುಕ್ಕೆ ದೇವಸ್ಥಾನ ಮಂಡಳಿ ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮೀಜಿಗಳ ಮನವೊಲಿಸಲಿ: ಪೇಜಾವರ ಶ್ರೀ

    ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಠಕ್ಕೂ ದೇವಾಲಯಕ್ಕೂ ನಡುವೆ ಕಾಣಿಸಿಕೊಂಡಿರುವ ಭಿನ್ನಮತ ತಾರಕ್ಕೇರಿದ್ದು, ಈ ವಿವಾದವನ್ನು ಬಗೆಹರಿಸಲು ಜಿಲ್ಲೆಯ ಅಷ್ಟಮಠ ಮಧ್ಯಪ್ರವೇಶ ಮಾಡಿದೆ.

    ಉಡುಪಿ ಕೃಷ್ಣಮಠಕ್ಕೆ ಸಂಬಂಧಿಸಿದಂತೆ ಅಷ್ಟಮಠಾಧೀಶರು ಈ ವಿಚಾರದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿಗಳ ಬೆಂಬಲಕ್ಕೆ ನಿಂತಿದ್ದಾರೆ. ಸುಬ್ರಹ್ಮಣ್ಯ ಮಠವು ಮಧ್ವ ಮತಕ್ಕೆ ಸಂಬಂಧಪಟ್ಟ ಧಾರ್ಮಿಕ ಕೇಂದ್ರವಾದ ಕಾರಣ ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರಿಗೆ ಅನಗತ್ಯ ಹಿಂಸೆ ನೀಡಬಾರದು ಎಂದು ಅಷ್ಟಮಠಾಧೀಶರು ಒತ್ತಾಯ ಮಾಡಿದ್ದಾರೆ.

    ಮಠ ಹಾಗೂ ದೇವಾಲಯ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಬ್ರಹ್ಮಣ್ಯ ಮಠಕ್ಕೆ ಅನೇಕ ಸಮಸ್ಯೆಯಾಗಿದೆ. ಸುಬ್ರಹ್ಮಣ್ಯ ಮಠಾಧೀಶರಿಗೆ ದೇವಸ್ಥಾನದ ಆಡಳಿತ ಮಂಡಳಿ ನಿರಂತರ ಕಿರುಕುಳ ನೀಡುತ್ತಿದೆ. ಉಡುಪಿಯ ಅಷ್ಟಮಠಾಧೀಶರಿಗೆ ಈ ಬಗ್ಗೆ ಅತೀವ ಕಳವಳವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮಠ ಜನರಿಗೆ ಹಾನಿಕಾರಕವಾಗಿ ವರ್ತಿಸುತ್ತಿಲ್ಲ. ಕುಕ್ಕೆ ದೇವಸ್ಥಾನ ಹಾಗೂ ಮಠದ ಸಂಘರ್ಷ ಸರಿಯಲ್ಲ. ಈ ವಿಚಾರದಲ್ಲಿ ದೇವಸ್ಥಾನಕ್ಕೆ ಭಿನ್ನಾಭಿಪ್ರಾಯ ಇದ್ದರೆ ಮಾತುಕತೆ ಮಾಡೋಣ. ಸುಬ್ರಹ್ಮಣ್ಯ ಮಠದಿಂದ ತೊಂದರೆಯಾದರೆ ಸರಿಪಡಿಸೋಣ. ಸುಬ್ರಹ್ಮಣ್ಯ ಶ್ರೀಗಳ ಜೊತೆ ಮಾತಮಾಡುತ್ತೇನೆ ನಾನೇ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಹೇಳಿದರು.

    ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಠಕ್ಕೆ ಗೌರವ ಸಿಗುತ್ತಿಲ್ಲ. ವಿದ್ಯಾಭೂಷಣ ಶ್ರೀ ಇದ್ದಾಗ ಇದ್ದ ಗೌರವವಾದ್ರೂ ಸಿಗಬೇಕು. ದೇವಸ್ಥಾನ, ಮಠ ಸ್ವತಂತ್ರವಾಗಿ ನಡೆಯಬೇಕು. ಎಲ್ಲಾ ಪಕ್ಷಗಳು, ಎಲ್ಲಾ ಜನರ ಸಹಕಾರ ಬೇಕು. ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈ ಬಿಡುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಬೇಕು. ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮಿಗಳ ಮನ ಒಲಿಸಬೇಕು ಎಂದು ತಿಳಿಸಿದರು.

    ಪರ್ಯಾಯ ಪಲಿಮಾರು ಸ್ವಾಮೀಜಿ, ಕಾಣಿಯೂರು ಮಠಾಧೀಶರ ಹಾಗೂ ಸೋದೆ ಮಠಾಧೀಶರು ಜೊತೆಯಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ದೇವಸ್ಥಾನದವರು ಮಠಕ್ಕೆ ಅನಾವಶ್ಯಕ ತೊಂದರೆ ಕೊಟ್ಟರೆ ನಾವು ಸಹಿಸಲ್ಲ. ಮಠದ ಗೋಶಾಲೆಗೆ ಬರುವ ನೀರನ್ನು ದೇವಸ್ಥಾನ ಸ್ಥಗಿತಗೊಳಿಸಿದೆ. ಧ್ವನಿವರ್ಧಕವನ್ನು ಮಠದ ಕಡೆಗೆ ಮುಖ ಮಾಡಿ ಇಟ್ಟು ಪೂಜೆಗೆ ಅಡ್ಡಿ ಪಡಿಸಲಾಗುತ್ತಿದೆ. ಸರ್ಪ ಸಂಸ್ಕಾರಕ್ಕೆ ಮಠದಲ್ಲಿ ಮಾಡಲು ಯಾವುದೇ ನಿರ್ಬಂಧ ಇಲ್ಲ. ಮಠದ ವಿರೋಧಿ ವರ್ಗದ ಈ ನಿಲುವು ಸರಿಯಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ವಿಡಿಯೋ: ಗಲಾಟೆ ಮಾಡಬಾರದು? ಅಂದಿದ್ದು ಯಾರಿಗೆ ಚಾಲೆಂಜಿಂಗ್ ಸ್ಟಾರ್?

    ವಿಡಿಯೋ: ಗಲಾಟೆ ಮಾಡಬಾರದು? ಅಂದಿದ್ದು ಯಾರಿಗೆ ಚಾಲೆಂಜಿಂಗ್ ಸ್ಟಾರ್?

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಡೆದ ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ರಾಕ್‍ಲೈನ್ ವೆಂಕಟೇಶ್ ಹಾಗೂ ದರ್ಶನ್ ಚಾಲನೆ ನೀಡಿದ್ದಾರೆ. ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೌಹಾರ್ದ ನಡಿಗೆ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದ್ದಾರೆ.

    ಮುರುಘಾಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದರು. ದರ್ಶನ್ ಮಠಕ್ಕೆ ಬರುತ್ತಿದ್ದಂತೆ ಮಠದ ಆನೆ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ಆನೆಯ ಆರೋಗ್ಯದ ಬಗ್ಗೆಯೂ ವಿಚಾರಿಸಿ ತಿಂಡಿ ಏನು ಕೊಟ್ಟಿದ್ದೀರಿ ಎಂದು ಮಾವುತರಿಗೆ ಕೇಳಿದ್ದಾರೆ. ಅಷ್ಟೇ ಅಲ್ಲದೇ ಆನೆಯ ದಂತವನ್ನು ಕೈಯಿಂದ ಮುಟ್ಟಿ ನೋಡಿ ಚೆನ್ನಾಗಿದೆ ಹೇಳಿದರು. ಈ ವೇಳೆ ದರ್ಶನ್ ಅಭಿಮಾನಿಯೊಬ್ಬರ ಮೇಲೆ ಗರಂ ಆದರು. ಗಲಾಟೆ ಮಾಡಬಾರದು ಆವಾಗಿನಿಂದ ನಿನ್ನದೇ ಗಲಾಟೆ ಎಂದು ಹೇಳಿ ಖಡಕ್ ವಾರ್ನಿಂಗ್ ಕೊಟ್ಟರು.

    ನಗರದ ಗಾಂಧಿ ವೃತ್ತದಿಂದ ಮುರುಘಾ ಮಠದವರೆಗೆ ಜಾಥಾ ಆರಂಭವಾಗಿದ್ದು, ದರ್ಶನ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿದರು. ಸದ್ಯ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರಿಂದ ಹರಸಾಹಸಪಟ್ಟರು. ದರ್ಶನ್ ಹಾಗೂ ರಾಕ್‍ಲೈನ್ ವೆಂಕಟೇಶ್ ಅವರಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಸಾಥ್ ನೀಡಿದ್ದಾರೆ.

    ಶರಣ ಸಂಸ್ಕೃತಿ ಉತ್ಸವದ ಜಾಗೃತಿ ನಡಿಗೆಗೆ ಚಾಲನೆ ನೀಡುವ ಮುನ್ನ ಮಾತನಾಡಿದ ರಾಕ್‍ಲೈನ್ ವೆಂಕಟೇಶ್ ಅವರು, ದಸರಾ ಆಚರಣೆ ಮಾಡಲು ಬಂದಿದ್ದೇವೆ, ದಸರಾ ಹಬ್ಬ ಮಾಡೋಣ. ಹಬ್ಬ ಆಚರಿಸಲು ನಮ್ಮನ್ನು ಮುರುಘಾ ಶರಣರು ಕರೆಸಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಮಾತನಾಡುವುದು ಬೇಡ ವೀರ ಮದಕರಿ ಚಿತ್ರದ ಬಗ್ಗೆ ಮಾತನಾಡಲು ಪ್ರತ್ಯೇಕ ವೇದಿಕೆ ಸೃಷ್ಟಿಸುತ್ತೇವೆ. ಈಗ ಚಿತ್ರದುರ್ಗ ಹಾಗು ಚಿತ್ರದ ಬಗ್ಗೆ ಮಾತನಾಡುವುದು ಸರಿಯಲ್ಲ ಅಂತಾ ತಿಳಿಸಿದ್ರು.

    ಇದೇ ವೇಳೆ ರಾಕ್‍ಲೈನ್ ವೆಂಕಟೇಶ್ ಅವರು ಮಾಧ್ಯಮಗಳ ಮುಂದೆ ಮಾತನಾಡದೇ ದರ್ಶನ್ ಅವರು ಕೂಡ ದಸರಾ ಹಬ್ಬದ ಶುಭಾಶಯ ತಿಳಿಸಿ ಅಲ್ಲಿಂದ ಹೊರಟು ಹೋದರು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟರಾದ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ- ಮಠದತ್ತ ಭಕ್ತರ ದಂಡು

    ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ- ಮಠದತ್ತ ಭಕ್ತರ ದಂಡು

    ಉಡುಪಿ: ನಾಡಿನಾದ್ಯಂತ ಕೃಷ್ಣ ಭಕ್ತರು ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ ಇಂದು ಕೃಷ್ಣ ಜನ್ಮಾಷ್ಟಮಿ. ಎಲ್ಲೆಡೆ ಕೃಷ್ಣ ನಾಮ ಜಪ ನಡೆಯುತ್ತಿದೆ. ಕಡೆಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಮುರಾರಿಯ ಆರಾಧನೆ ಶುರುವಾಗಿದೆ.

    ಕೃಷ್ಣನ ನಾಡು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಶುರುವಾಗಿದೆ. ಮುಂಜಾನೆಯಿಂದಲೇ ಕೃಷ್ಣಮಠಕ್ಕೆ ಭಕ್ತರು ಭೇಟಿಕೊಟ್ಟು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ. ಕೃಷ್ಣಮಠವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ಜಪ ತಪ, ಭಜನೆ ನಡೆಯುತ್ತಿದೆ. ಇಂದು ದಿನಪೂರ್ತಿ ಉಪವಾಸವಿರುವ ಕೃಷ್ಣಭಕ್ತರು, ರಾತ್ರಿ 11.45 ಕ್ಕೆ ಕೃಷ್ಣನಿಗೆ ಅಘ್ರ್ಯ ಸಲ್ಲಿಕೆ ಮಾಡುತ್ತಾರೆ. ಈ ಮೂಲಕ ಶ್ರೀಕೃಷ್ಣನ ಜನ್ಮವಾಗುತ್ತದೆ.

    ನಾಳೆ ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆಯಿಂದಲೇ ಅನ್ನದಾಸೋಹ ನಡೆಯುತ್ತದೆ. ಮಠಕ್ಕೆ ಬರುವ ಭಕ್ತರಿಗೆ ವಿತರಿಸಲು ಎರಡು ಲಕ್ಷ ಲಡ್ಡು, 1 ಲಕ್ಷ ಚಕ್ಕುಲಿ ಪಾಕಶಾಲೆಯಲ್ಲಿ ಸಿದ್ಧಗೊಂಡಿದೆ. ಉಡುಪಿಯ ಸುತ್ತಮುತ್ತಲ ಶಾಲೆಗಳಿಗೆ ವಿತರಿಸಲು ಪ್ರಸಾದ ರೆಡಿಯಾಗಿದೆ.

    ಕೃಷ್ಣಭಕ್ತ ರಜನಿಕಾಂತ್ ತಂತ್ರಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇಂದು ಕೃಷ್ಣನ ದರ್ಶನ ಮಾಡುವುದು ಪುಣ್ಯದ ಕೆಲಸ. ಅಷ್ಟಮಿಯ ದಿನ ತಪ್ಪದೆ ಎಲ್ಲಿದ್ದರು ಉಡುಪಿ ಮಠಕ್ಕೆ ಬಂದು ದೇವರ ದರ್ಶನದ ಮಾಡುತ್ತೇನೆ. ಈ ಬಾರಿ ಸರಳವಾಗಿ ಹಬ್ಬ ಆಚರಿಸಲು ಸ್ವಾಮೀಜಿ ಕರೆ ನೀಡಿದ್ದಾರೆ. ಇದೊಂದು ಉತ್ತಮ ನಡೆ ಎಂದು ಶ್ಲಾಘಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುರ್ದೀಘ 3 ಗಂಟೆಗಳ ಕಾಲ ವಿನಯ್ ಗುರೂಜಿ ಜೊತೆ ಬಿಎಸ್‍ವೈ ಮಾತುಕತೆ

    ಸುರ್ದೀಘ 3 ಗಂಟೆಗಳ ಕಾಲ ವಿನಯ್ ಗುರೂಜಿ ಜೊತೆ ಬಿಎಸ್‍ವೈ ಮಾತುಕತೆ

    ಚಿಕ್ಕಮಗಳೂರು: ನಡೆದಾಡುವ ದೈವ ಎಂದೇ ಖ್ಯಾತಿಯಾಗಿರುವ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣ ಪೀಠಿಕೇಶ್ವರಿ ಮಠದ ಅವಧೂತ ವಿನಯ್ ಗುರೂಜಿಯವರನ್ನ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಇಂದು ಬೆಳಗ್ಗೆ ಸುಮಾರು 10.30ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೈಂದೂರು ಶಾಸಕ ಪ್ರಭಾಕರ್ ಶೆಟ್ಟಿ ಜೊತೆ ಯಡಿಯೂರಪ್ಪ ಆಗಮಿಸಿದ್ದಾರೆ. ಬಳಿಕ ಮಠದ ಒಳಗೆ ಹೋಗಿ ಸುಮಾರು 12.30ರ ತನಕ ಮೂರು ಗಂಟೆಗಳ ಕಾಲ ಮೂವರು ಸುರ್ದೀಘವಾಗಿ ಮಾತುಕತೆಯನ್ನು ನಡೆಸಿದ್ದಾರೆ. ನಂತರ ಅವರ ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆ. ಆದರೆ ಯಾವುದರ ಬಗ್ಗೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

    ವಿನಯ್ ಗುರೂಜಿ ನಡೆದಾಡುವ ದೈವ ಎಂದೇ ಖ್ಯಾತಿಯಾಗಿದ್ದು, ಇತ್ತೀಚೆಗೆ ರಾಜಕಾರಣಿಗಳ ಭೇಟಿಯಿಂದ ಗುರೂಜಿ ಸಾಕಷ್ಟು ಸುದ್ದಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರೂಜಿಯ ಪಾದಪೂಜೆ ನಡೆಸಿದ್ದರು. ಅಷ್ಟೇ ಅಲ್ಲದೇ ಸ್ಪೀಕರ್ ರಮೇಶ್ ಕುಮಾರ್ ಗುರೂಜಿಗೆ ಆರತಿ ಬೆಳಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂದಿರ, ಆಶ್ರಮ, ಮಠಗಳ ಲೆಕ್ಕಾಚಾರದಲ್ಲಿ ಬಿಜೆಪಿ- 29 ಲಕ್ಷ ಕಾರ್ಯಕರ್ತರ ಟೀಂ ರೆಡಿ

    ಮಂದಿರ, ಆಶ್ರಮ, ಮಠಗಳ ಲೆಕ್ಕಾಚಾರದಲ್ಲಿ ಬಿಜೆಪಿ- 29 ಲಕ್ಷ ಕಾರ್ಯಕರ್ತರ ಟೀಂ ರೆಡಿ

    ನವದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿದ್ದು, ಗೆಲುವು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ರಾಜಕೀಯ ತಂತ್ರಗಳನ್ನು ರೂಪಿಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಸಹ ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಬಿಜೆಪಿ ದೇಶದಲ್ಲಿಯ ಮಂದಿರ, ಮಠ, ಆಶ್ರಮಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಬಿಜೆಪಿ ಕಚೇರಿಯಲ್ಲಿ ಸಭೆಗಳು ನಡೆಯುತ್ತಿವೆ. ಹಿಂದೂ ವೋಟ್ ಗಳನ್ನು ಕೇಂದ್ರೀಕರಿಸಿರುವ ಬಿಜೆಪಿ ಚುನಾವಣೆ ಸಮಯದಲ್ಲಿ ಮತಗಳ ವಿಭಜನೆಗೊಳ್ಳದಂತೆ ಎಚ್ಚರಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಕಚೇರಿಯಲ್ಲಿ ಇದೇ ತಿಂಗಳು ಸಭೆ ನಡೆಯಲಿವೆ ಎನ್ನಲಾಗುತ್ತಿದೆ. ಸಭೆಗೂ ಮುನ್ನ ಬಿಜೆಪಿ ನಾಯಕರು ತಮ್ಮ ರಾಜ್ಯದಲ್ಲಿ ಬರುವ ಪ್ರಸಿದ್ಧ ಮಠ, ದೇವಾಲಯ, ಆಶ್ರಮ ಸೇರಿದಂತೆ ಇತರೆ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

    ರಣತಂತ್ರವೇನು?:
    ಎಲ್ಲ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳು ದೊರೆತ ಮೇಲೆ ಸ್ಥಳಕ್ಕನುಗುಣವಾಗಿ ವಿಭಾಗಿಸುವುದು. ಬೂತ್ ಗಳಿಗೆ ಅನುಗುಣವಾಗಿ ಧಾರ್ಮಿಕ ಕೇಂದ್ರಗಳ ವಿಂಗಡನೆ ಬಳಿಕ ಅಲ್ಲಿಯ ಅರ್ಚಕ ಅಥವಾ ಪ್ರಧಾನ ವ್ಯವಸ್ಥಾಪಕ ಅಥವಾ ಆಡಳಿತ ಮಂಡಳಿ ಮುಖಂಡರ ಫೋನ್ ನಂಬರ್ ಕಲೆ ಹಾಕುವುದು. ಎಲ್ಲ ಧಾರ್ಮಿಕ ಕೇಂದ್ರಗಳ ಪ್ರಮುಖರ ಫೋನ್ ನಂಬರ್ ಸಂಗ್ರಹಿಸಿದ ಬಳಿಕ ಎಲ್ಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಬಿಜೆಪಿ ಈಗಾಗಲೇ 29 ಲಕ್ಷ ಕಾರ್ಯಕರ್ತರನ್ನ ನೇಮಿಸಿದೆ. ಈ ಎಲ್ಲ ಕಾರ್ಯಕರ್ತರು ತಮ್ಮ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಕೇಂದ್ರಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೇ ಆಗಸ್ಟ್ 16ರಿಂದ 25ರವರೆಗೆ ಹಂತ ಹಂತವಾಗಿ ಎಲ್ಲ ಕಾರ್ಯಕರ್ತರೊಂದಿಗೆ ಬಿಜೆಪಿ ಹಿರಿಯ ನಾಯಕರು ಬೈಟಕ್ (ಸಭೆ) ನಡೆಸಲಿದ್ದಾರೆ ಎಂದು ಹೇಳಲಾಗಿದೆ.

    ಈ ಬೈಟಕ್ ನಲ್ಲಿ ಎಲ್ಲ ಕಾರ್ಯಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಎಲ್ಲ ಕಾರ್ಯಕರ್ತರನ್ನು ಬೂತ್ ಮಟ್ಟ, ತಾಲೂಕು, ಜಿಲ್ಲಾವಾರು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡನೆಯಾದ ತಂಡಗಳಿಗೆ ಪಕ್ಷವೇ ವಿವಿಧ ಕೋಡ್‍ಗಳನ್ನು ನೀಡಲಿದೆ. ಕೋಡ್ ಗಳಿಗೆ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.

  • ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭ!

    ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭ!

    ಉಡುಪಿ: ಜಿಲ್ಲೆಯ ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭವಾಗಿದೆ. ಶಿರೂರು ಲಕ್ಷ್ಮೀವರ ತೀರ್ಥಶೀಗಳು ವೃಂದಾವನಸ್ಥರಾದ ಹಿನ್ನೆಲೆಯಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳನ್ನು ನಿಲ್ಲಿಸಲಾಗಿತ್ತು.

    ಹಿರಿಯಡ್ಕ ಸಮೀಪದ ಮೂಲ ಮಠದಲ್ಲಿ ಇಂದಿನಿಂದ ದೈನಂದಿನ ಪೂಜೆ ಆರಂಭವಾಗಿದೆ. ಮುಖ್ಯ ಪ್ರಾಣ ಮತ್ತು ಮೂಲ ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗಿದೆ. ಸ್ಚಾಮೀಜಿ ಇದ್ದಾಗ ಪ್ರತಿದಿನ 4 ಸೇರು ಅಕ್ಕಿಯ ನೈವೇದ್ಯ ದೇವರಿಗೆ ಅರ್ಪಣೆಯಾಗುತ್ತಿತ್ತು. ಮೂರು ಹೊತ್ತು ಪೂಜೆ ನಡೆಯುತ್ತಿತ್ತು.

    ಸ್ವಾಮೀಜಿಯ ಸಾವಿನ ನಂತರ ಕಳೆದ 7 ದಿನಗಳ ಕಾಲ ಕೇವಲ ಆರತಿಯನ್ನು ಎತ್ತಿ ದೇವರಿಗೆ ಪೂಜೆ ಆಗುತ್ತಿತ್ತು. ದೇವರಿಗೆ ನೈವೇದ್ಯ ಸಹಿತ ಎಲ್ಲಾ ಪೂಜೆಗಳು ಇಂದಿನಿಂದ ಶುರುವಾಗಿದೆ. ಆದರೆ ಶಿರೂರು ಮೂಲ ಮಠದ ಅರ್ಚಕರು, ಮಠದ ಸಿಬ್ಬಂದಿಗಳಿಗೆ ಮಾತ್ರ ಮಠದೊಳಗೆ ಪ್ರವೇಶ ನೀಡಲಾಗಿದೆ.

    ಮೂಲ ಮಠದ ಸುತ್ತಲೂ ಪೊಲೀಸ್ ಭದ್ರತೆಯಿದೆ. ಉಡುಪಿಯಲ್ಲಿರುವ ಶಿರೂರು ಮಠದಲ್ಲೂ ನೈವೇದ್ಯ ಸಹಿತ ಪೂಜೆ ಇಂದಿನಿಂದ ಶುರುವಾಗಿದೆ.

  • ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್

    ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್

    ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಕೇವಿಯಟ್ ಅನೂರ್ಜಿತವಾಗಿದೆ. ಈ ಮೂಲಕ ಏಳು ಮಠದ ಯತಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ.

    ಉಡುಪಿ ಕೃಷ್ಣಮಠದ ಗರ್ಭಗುಡಿಯಲ್ಲಿರುವ ಪಟ್ಟದ ದೇವರನ್ನು ವಾಪಾಸ್ ಕೊಡಿಸಬೇಕು, ನನ್ನ ವಾದವನ್ನೂ ಕೋರ್ಟ್ ಆಲಿಸಬೇಕು ಅಂತ ಸಲ್ಲಿಸಿದ್ದ ಕೇವಿಯಟ್ ಅರ್ಜಿ ಬಿದ್ದು ಹೋಗಿದೆ. ಜುಲೈ 4 ರಂದು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಕೆಯಾಗಿತ್ತು. ಜುಲೈ 19 ರಂದು ಸ್ವಾಮೀಜಿ ನಿಧನ ಹಿನ್ನೆಲೆಯಲ್ಲಿ ಕೇವಿಯಟ್ ಅನೂರ್ಜಿತವಾಗಿದೆ.

    ಕೇವಿಯಟ್‍ಗೆ 90 ದಿನಗಳ ಕಾಲಾವಕಾಶ ಇರುತ್ತದೆ. ಕೇವಿಯಟ್ ಸಲ್ಲಿಸಿದವರು ಮರಣ ಹೊಂದಿದರೆ ಅದು ಅನೂರ್ಜಿತವಾಗುತ್ತದೆ ಎಂಬುದು ಕಾನೂನು. ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯ ಮಾಡುವಂತಿಲ್ಲ. ಉಳಿದ ಏಳು ಮಠಾಧೀಶರು ಕೋರ್ಟ್ ಮೆಟ್ಟಿಲೇರಿದರೆ ಆ ಸಂದರ್ಭ ನನ್ನ ವಾದವನ್ನೂ ಕೇಳಬೇಕು ಎಂದು ನಮೂದಿಸಲಾಗಿತ್ತು.

    ಪಟ್ಟದ ದೇವರನ್ನು ವಾಪಾಸ್ ಕೊಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಶಿರೂರು ಸ್ವಾಮೀಜಿ ಹೇಳಿದ್ದರು. ಇತರೆ ಆರು ಮಠಾಧೀಶರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿರೂರು ಶ್ರೀ ಸಜ್ಜಾಗಿದ್ದರು. ಆದರೆ ಕಳೆದ ಗುರುವಾರ ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸದ್ಯ ಪಟ್ಟದ ದೇವರ ವಿಗ್ರಹ ಈಗ ಕೃಷ್ಣಮಠದಲ್ಲಿದ್ದು, ಪರ್ಯಾಯ ಸ್ವಾಮೀಜಿ ದಿನಂಪ್ರತಿ ಪೂಜೆ ಮಾಡುತ್ತಿದ್ದಾರೆ.