Tag: ಮಟ್ಕಾ ದಂಧೆ

  • Ballari | ಮಟ್ಕಾ ದಂಧೆ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಟ್ರಾಸಿಟಿ ಕೇಸ್

    Ballari | ಮಟ್ಕಾ ದಂಧೆ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಟ್ರಾಸಿಟಿ ಕೇಸ್

    ಬಳ್ಳಾರಿ: ಅಕ್ರಮ ಜೂಜಾಟ (Gambling) ಬಯಲು ಮಾಡಿದ ವ್ಯಕ್ತಿ ಮೇಲೆಯೇ ಪೊಲೀಸರು ಅಟ್ರಾಸಿಟಿ ಕೇಸ್ (Atrocity Case) ದಾಖಲಿಸಿರುವ ಘಟನೆ ಬಳ್ಳಾರಿಯ (Ballari) ಕಂಪ್ಲಿಯಲ್ಲಿ (Kampli) ಬೆಳಕಿಗೆ ಬಂದಿದೆ. ಕಂಪ್ಲಿ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

    ಕಳೆದ ವಾರ ಕಂಪ್ಲಿಯಲ್ಲಿ ಮಟ್ಕಾ ನಡೆಯುವ ಐದು ಸ್ಥಳಗಳಿಗೆ ಹೋಗಿ ನಾರಾಯಣಸ್ವಾಮಿ ಎಂಬವರು ವೀಡಿಯೋ ಮಾಡಿ, ಧಂದೆಯ ಕರಾಳ ಮುಖ ಬಯಲು ಮಾಡಿದ್ದರು. ಆದರೆ ಮಟ್ಕಾ ದಂಧೆ ಬಯಲಿಗೆಳೆದ ನಾರಾಯಣಸ್ವಾಮಿ ಮೇಲೆಯೇ ಮಟ್ಕಾ ಬರೆಸುತ್ತಿದ್ದ ಆರೋಪಿ ಜಂಬಣ್ಣ ಎನ್ನುವಾತ ಅಟ್ರಾಸಿಟಿ ಕೇಸ್ ಹಾಕಿದ್ದಾನೆ. ಮಟ್ಕಾ ದಂಧೆಕೋರ ಜಂಬಣ್ಣನಿಂದಲೇ ನಾರಾಯಣಸ್ವಾಮಿ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಕುರ್ಚಿಯಲ್ಲಿ ಕುಳಿತು ನ್ಯಾಯ ಕೊಡುವುದು ಮುಖ್ಯ: ಬಿ.ವೈ.ವಿಜಯೇಂದ್ರ ಅಭಿಪ್ರಾಯ

    ಇದೇ ಮಟ್ಕಾ ದಂಧೆಕೋರ ಜಂಬಣ್ಣನ ವಿರುದ್ಧ ಮಟ್ಕಾ ಬರೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ನಿರಂತರವಾಗಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದ ಕಾರಣಕ್ಕೆ ನಾರಾಯಣಸ್ವಾಮಿ ರಹಸ್ಯವಾಗಿ ವೀಡಿಯೋ ಮಾಡಿಕೊಂಡು ಬಂದಿದ್ದ. ಇದನ್ನೇ ನೆಪವಾಗಿ ಇಟ್ಟುಕೊಂಡ ಮಟ್ಕಾ ಬುಕ್ಕಿ ಜಂಬಣ್ಣ ನಾರಾಯಣಸ್ವಾಮಿ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾನೆ. ಹೀಗಾಗಿ ಜೀವ ಭಯದಲ್ಲಿ ಸಾಮಾಜಿಕ ಹೋರಾಟಗಾರ ನಾರಾಯಣ ಸ್ವಾಮಿ ಓಡಾಡುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!

    ಇನ್ನೂ ವೀಡಿಯೋ ಮಾಡುವ ವೇಳೆ ನಾರಾಯಣಸ್ವಾಮಿ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದರು. ಅಷ್ಟೆಲ್ಲಾ ಆದಮೇಲೂ ಪೊಲೀಸರು ರಕ್ಷಣೆ ನೀಡಿಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಕಂಪ್ಲಿ ಪೊಲೀಸರೇ ಮಟ್ಕಾ ಬುಕ್ಕಿಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ಮುಂದೆ ನಾರಾಯಣಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಕಂಪ್ಲಿ ಸಿಪಿಐ ಮಟ್ಕಾಗೆ ಸಾಥ್ ಕೊಟ್ಟಿದ್ದಾರೆ. ಅದಕ್ಕೆ ನನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗಿದೆ. ಮಟ್ಕಾ ಬುಕ್ಕಿಗಳಿಂದ ನನಗೆ ಜೀವಭಯ ಇದೆ ಎಂದು ನಾರಾಯಣಸ್ವಾಮಿ ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗದಗ | ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶನ – ಅಪ್ರಾಪ್ತನ ವಿರುದ್ಧ ಕೇಸ್

  • ಡಿಜಿಟಿಲ್ ಪೇಮೆಂಟ್ ಮೂಲಕ ಮಟ್ಕಾ ದಂಧೆ – ಇಬ್ಬರು ಮಹಿಳೆಯರ ಬಂಧನ

    ಡಿಜಿಟಿಲ್ ಪೇಮೆಂಟ್ ಮೂಲಕ ಮಟ್ಕಾ ದಂಧೆ – ಇಬ್ಬರು ಮಹಿಳೆಯರ ಬಂಧನ

    ಚಿಕ್ಕಬಳ್ಳಾಪುರ: ಕಲಿಯುಗ ಡಿಜಿಟಿಲ್ ಯುಗವಾಗಬೇಕು, ಎಲ್ಲ ವ್ಯವಹಾರಗಳು ಅನ್‍ಲೈನ್ ಮುಖಾಂತರವೇ ನಡೆದು ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲವೂ ಅನ್‍ಲೈನ್ ಮೂಲಕವೇ ವ್ಯವಹಾರ ವಹಿವಾಟು ನಡೆಯಲಿ ಅಂತ ಪ್ರಧಾನಿ ಮೋದಿ ಆಶಯಕ್ಕೆ ತಕ್ಕಂತೆ ಇತ್ತೀಚೆಗೆ ಅನ್‍ಲೈನ್ ಮೂಲಕ ಡಿಜಿಟಲ್ ಪೇಮೆಂಟ್‍ಗೆ ಪ್ರೋತ್ಸಾಹ ನೀಡಿದರು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಕಿಲಾಡಿ ಮಹಿಳೆಯರು ಅನ್‍ಲೈನ್ ಮೂಲಕವೇ ಮಟ್ಕಾ ದಂಧೆ ನಡೆಸುವ ಮೂಲಕ ಲಕ್ಷ ಲಕ್ಷ ವ್ಯವಹಾರ ನಡೆಸುತ್ತಿದ್ದರು.

    ಇಂತಹ ಕಿಲಾಡಿ ಮಹಿಳೆಯರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ದಿನಸಿ ಅಂಗಡಿ ಮತ್ತು ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಿ ಹಾಗೂ ಅಂಜಿನಮ್ಮ ಇಬ್ಬರು ದಿನಸಿ ಅಂಗಡಿ ಜೊತೆ ಹೋಟೆಲ್ ಇಟ್ಟುಕೊಂಡಿದ್ದು, ಮಟ್ಕಾ ದಂಧೆ ನಡೆಸುತ್ತಿದ್ದರು.

    1 ರೂಪಾಯಿಗೆ 70 ರೂಪಾಯಿ ಕೊಡುವ ಈ ಮಟ್ಕಾ ಜೂಜಾಟದ ವ್ಯವಹಾರವನ್ನು ಮೊಬೈಲ್ ಫೋನ್ ಕಾಲ್ ಮೂಲಕ ನಂಬರ್ ತಿಳಿಸುವುದು ಹಾಗೂ ಹಣವನ್ನು ಗೂಗಲ್ ಪೇ ಮತ್ತು ಫೋನ್ ಪೇ ಮುಖಾಂತರ ರವಾನೆ ಮಾಡುವ ಮೂಲಕ ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ದಿನಸಿ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಸಹ ಇಟ್ಟುಕೊಂಡಿದ್ದು, ಅದರ ಮೂಲಕ ಜೂಜಾಟದ ಹಣ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

    ಸದ್ಯ ಲಕ್ಷ್ಮಿ ಹಾಗೂ ಅಂಜಿನಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಜಿನಮ್ಮ ಹಾಗೂ ಲಕ್ಷ್ಮಿ ಬಳಿ 21 ಸಾವಿರದ ಸ್ಮಾರ್ಟ್ ಫೋನ್ ಹಾಗೂ 2 ಬಾಲ್ ಪಾಯಿಂಟ್ ಪೆನ್ ಸೇರಿದಂತೆ ಬಿಮ್ ಯುಪಿಐನ ಬಾರ್ ಕೋಡ್ ಸ್ಕ್ಯಾನರ್ ಅನ್ನು ವಶಕ್ಕೆ ಪಡೆದಿದ್ದಾರೆ.

    ಮೂವರು ಪೊಲೀಸರ ಅಮಾನತು
    ಮಿಟ್ಟೇಮರಿ ಗ್ರಾಮದ ಹೊರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಮಟ್ಕಾ ದಂಧೆಯನ್ನ ಮಹಿಳೆಯರು ನಡೆಸುತ್ತಿದ್ದರೂ, ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದ ಕಾರಣ ಹೊರ ಠಾಣೆ ಪೊಲೀಸ್ ಪೇದೆಗಳಾದ ಶ್ರೀನಿವಾಸ್, ಶಶಿಕುಮಾರ್ ಹಾಗೂ ದೇವರಾಜ್ ನನ್ನ ಅಮಾನತು ಮಾಡಿ ಚಿಕ್ಕಬಳ್ಳಾಪುರ ಎಸ್‍ಪಿ ಅಭಿನವ್ ಆದೇಶಿಸಿದ್ದಾರೆ.

  • ಗಾಂಜಾ, ಮಟ್ಕಾ ದಂಧೆ ನಿಲ್ಲಿಸಿ – ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಗರಂ

    ಗಾಂಜಾ, ಮಟ್ಕಾ ದಂಧೆ ನಿಲ್ಲಿಸಿ – ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಗರಂ

    ಉಡುಪಿ: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಗಾಂಜಾ ಬೆಳೆ, ಮಟ್ಕಾ ದಂಧೆ ಜಾಸ್ತಿಯಾಗುತ್ತಿದೆ ಎಂದು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.

    ಕುಂದಾಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿರುವ ಶಾಸಕರು, ಎರಡು ಅಕ್ರಮ ನಿಲ್ಲಿಸಬೇಕು ಎಂದು ಅಸಹಾಯಕತೆ ತೋಡಿಕೊಂಡು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

    ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಟ್ಕಾ ದಂಧೆ ಸಂಪೂರ್ಣವಾಗಿ ನಿಲ್ಲಿಸಬೇಕು. ಈ ವಿಚಾರವಾಗಿ ಡಿವೈಎಸ್‍ಪಿ ಮತ್ತು ಜಿಲ್ಲಾ ಎಸ್‍ಪಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ ಪಶ್ಚಿಮ ಘಟ್ಟ ಭಾಗದ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ. ಕೂಡಲೇ ಅದನ್ನು ಪತ್ತೆ ಹಚ್ಚಿ ನಾಶ ಮಾಡುವ ಕೆಲಸ ಮಾಡಿ ಎಂದು ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

    ನಮಗೆ ಆ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂಬ ಅಭಯಾರಣ್ಯ ಅಧಿಕಾರಿಗಳ ಮಾತಿಗೆ ಕೆರಳಿದ ಶಾಸಕರು, ನಿಮ್ಮ ವನಪಾಲಕರು, ವಾಚರ್‍ಗಳು ಏನು ಮಾಡುತ್ತಿದ್ದಾರೆ? ಅವರಿಂದ ತಿಳಿದುಕೊಳ್ಳಿ. ನಮಗೆ ಮಾಹಿತಿ ಇದೆ ನಿಮಗೆ ಅಕ್ರಮ ಗೊತ್ತಾಗಲ್ವಾ ಎಂದು ಪ್ರಶ್ನಿಸಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಮಟ್ಕಾ ದಂಧೆ ನಡೆಸೋದು ಕಂಡು ಬಂದ್ರೆ, ರೌಡಿಶೀಟರ್ ತೆರೆಯಬೇಕಾಗುತ್ತೆ: ಉಡುಪಿ ಎಸ್ಪಿ ಎಚ್ಚರಿಕೆ

    ಮಟ್ಕಾ ದಂಧೆ ನಡೆಸೋದು ಕಂಡು ಬಂದ್ರೆ, ರೌಡಿಶೀಟರ್ ತೆರೆಯಬೇಕಾಗುತ್ತೆ: ಉಡುಪಿ ಎಸ್ಪಿ ಎಚ್ಚರಿಕೆ

    ಉಡುಪಿ: ಇನ್ನು ಮುಂದೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸೋದು ಕಂಡುಬಂದರೆ, ಅಂತವರ ವಿರುದ್ಧ ರೌಡಿ ಶೀಟರ್ ತೆರೆಯಬೇಕಾಗುತ್ತದೆ ಎಂದು ಜಿಲ್ಲಾ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯಾದ್ಯಂತ ಮಟ್ಕಾ ದಂಧೆ ಹೆಚ್ಚುತ್ತಿದ್ದು, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾನುವಾರವೂ ಸಹ 20 ಮಂದಿ ಮಟ್ಕಾ ದಂಧೆಯ ಆರೋಪಿಗಳನ್ನು ಬಂಧಿಸಿದ್ದಾರೆ. ಮಟ್ಕಾ ದಂಧೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸೋಮವಾರ ಜಿಲ್ಲಾ ಪೊಲೀಸ್ ಕಚೇರಿಯ ಮುಂಭಾಗದಲ್ಲಿ ಮಟ್ಕಾ ಆರೋಪಿಗಳ ಪರೇಡ್ ನಡೆಸಲಾಯಿತು.

    ಜಿಲ್ಲಾವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿಯವರು, ಮಟ್ಕಾ ದಂಧೆಯಲ್ಲಿ ತೊಡಗಿರುವ ಹಳೇ ಆರೋಪಿಗಳನ್ನು ಕರೆಸಿ, ಇನ್ನುಮುಂದೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸೋದು ಕಂಡುಬಂದರೆ, ಅಂತವರ ವಿರುದ್ಧ ರೌಡಿ ಶೀಟರ್ ತೆರೆಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮಟ್ಕಾ ದಂಧೆಯ ಕಿಂಗ್‍ಪಿನ್‍ಗಳನ್ನು ಆದಷ್ಟು ಬೇಗ ಮಟ್ಟಹಾಕುವುದಾಗಿ ಈ ವೇಳೆ ತಿಳಿಸಿದರು.

    ಪ್ರತೀ ವಾರ ವರಿಷ್ಠಾಧಿಕಾರಿಗಳು ನಡೆಸುವ ಫೋನ್ ಇನ್ ಕಾರ್ಯಕ್ರಮದಲ್ಲಿ ಮಟ್ಕಾ ದಂಧೆಯ ಬಗ್ಗೆ ನಾಗರೀಕರಿಂದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ- ಯುವಪಡೆಯಿಂದ ಅಭಿಯಾನ

    ಮಟ್ಕಾ ನಿಲ್ಲಿಸಿ ಪಾವಗಡ ಉಳಿಸಿ- ಯುವಪಡೆಯಿಂದ ಅಭಿಯಾನ

    ತುಮಕೂರು: ಪಾವಗಡದಲ್ಲಿ ಮಟ್ಕಾ ದಂಧೆ ಮೀತಿ ಮೀರಿ ಹೋಗಿದ್ದು, ಪೊಲೀಸ್ ಇಲಾಖೆ ಈ ದಂಧೆ ನಿಯಂತ್ರಿಸುವಲ್ಲಿ ವಿಫಲವಾಗಿತ್ತು. ಇದರಿಂದ ಬೇಸತ್ತ ಯುವ ಪಡೆ ‘ಮಟ್ಕಾ ನಿಲಿಸಿ ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದಲ್ಲಿ ಶುರು ಮಾಡಿದ್ದಾರೆ.

    ಈ ಅಭಿಯಾನದಿಂದ ಮುಜುಗರಕ್ಕೊಳಗಾದ ಪಾವಗಡದ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು, ಮಟ್ಕಾ ದಂಧೆ ನಿಯಂತ್ರಣಕ್ಕೆ ಸಜ್ಜಾಗಿದೆ. ಪಾವಗಡ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಮಟ್ಕಾ ದಂಧೆ ನಡೆಸುವ ಬುಕ್ಕಿಗಳನ್ನು ಪ್ರತಿದಿನ ತನ್ನ ವಶಕ್ಕೆ ಪಡೆದುಕೊಂಡು ವಾಪಸ್ ಬಿಡುಗಡೆ ಮಾಡುತ್ತಿದೆ. ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 20 ಕ್ಕೂ ಹೆಚ್ಚು ಮಟ್ಕಾ ದಂಧೆ ನಡೆಸುವವರನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ದಿಗ್ಬಂಧನ ಹಾಕಲಾಗುತ್ತಿದೆ.

    ಠಾಣೆ ಎದುರು ಎಲ್ಲರನ್ನು ಕೂರಿಸಲಾಗಿದ್ದು, ದಂಧೆಕೋರರು ಎಲ್ಲೂ ಹೋಗದೇ ಪೊಲೀಸ್ ಕಾವಲು ಹಾಕಲಾಗಿದೆ. ಕಳೆದ ಒಂದು ವಾರದಿಂದ ಪಾವಗಡ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಈ ನಡುವೆ ಮಟ್ಕಾ ದಂಧೆಯಲ್ಲಿ ಶಾಮಿಲಾಗಿದ್ದರು ಎಂಬ ಆರೋಪದ ಮೇಲೆ ಸಿಪಿಐ ಮಹೇಶ್‍ನನ್ನು ಅಮಾನತುಗೊಳಿಸಲಾಗಿದೆ. ಇದರ ಪರಿಣಾಮ ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆ ನಿಯಂತ್ರಣವಾಗಿದೆ.

    ಆದರೂ ಮಟ್ಕಾ ದಂಧೆಯ ಪ್ರಮುಖ ರೂವಾರಿಗಳಾದ ಅಶ್ವಥ್, ರಾಮಾಂಜಿ, ನೂರಿ ತಲೆ ಮರೆಸಿಕೊಂಡಿದ್ದು, ಅವರನ್ನೂ ಬಂಧಿಸಬೇಕು ಎಂದು ಪೊಲೀಸರ ಮೇಲೆ ಸಾರ್ವಜನಿಕರ ಒತ್ತಡವನ್ನು ಹೇರಿದ್ದಾರೆ.

  • ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು

    ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಅಭಿಯಾನ ಆರಂಭಿಸಿದ ಸ್ಥಳೀಯ ಯುವಕರು

    ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಮಿತಿಮೀರಿದ ನಡೆಯುತ್ತಿರುವ ಮಟ್ಕಾ ದಂಧೆಯನ್ನು ತಡೆಗಟ್ಟಲು ಯುವಕರು ‘ಮಟ್ಕಾ ನಿಲ್ಲಿಸಿ, ಪಾವಗಡ ಉಳಿಸಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.

    ಜಿಲ್ಲೆಯ ಪಾವಗಡ ತಾಲೂಕು ಪ್ರೇಕ್ಷಣಿಯ ಸ್ಥಳವಾಗಿದ್ದು, ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಪಾವಗಡದಲ್ಲಿ ಸ್ಥಳೀಯರು ಮತ್ತು ಇತರೆ ಪ್ರದೇಶದಿಂದ ಬಂದ ಜನರು ಮಟ್ಕಾ ದಂದೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಟ್ಕಾ ದಂಧೆ ಹೆಚ್ಚಾಗಿದ್ದರಿಂದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

    ಒಂದು ವಾರದಿಂದಲೇ ಈ ಅಭಿಯಾನವನ್ನು ಸ್ಥಳೀಯ ಯುವಕರು ಶುರು ಮಾಡಿದ್ದು, ಈಗಾಗಲೇ ಅಭಿಯಾನದ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಯುವಕರು ಮಟ್ಕಾ ದಂಧೆಯನ್ನು ನಿಲ್ಲಿಸಬೇಕು. ಪಾವಗಡ ಪಟ್ಟಣದ ವೈ.ಎನ್ ಹೊಸಕೋಟೆ, ನಿಡುಗಲ್, ನಾಗಲಮಡಿಕೆ ಸೇರಿದ್ದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಮಿತಿಮೀರಿ ಮಟ್ಕಾ ದಂಧೆ ನಡೆಯುತ್ತಿದೆ. ಈ ಮಟ್ಕಾ ದಂಧೆಯಿಂದ ಸ್ಥಳೀಯ ಯುವ ಜನರು ಹಾಳಾಗುತ್ತಿದ್ದಾರೆ ಎಂದು ಪೋಸ್ಟ್ ಗಳಲ್ಲಿ ಬಿತ್ತರಿಸಲಾಗುತ್ತಿದೆ.

  • ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ತುಮಕೂರು: ಲಂಚ ನೀಡಲಿಲ್ಲವೆಂದು ಮಟ್ಕಾ ದಂಧೆ ಆರೋಪಿಗೆ ಮೇಲೆ ಆಂಧ್ರ ಪ್ರದೇಶದ ಕಂಬದೂರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

    ಪಾವಗಡ ತಾಲೂಕಿನ ಡೊಡ್ಡಹಳ್ಳಿ ಗ್ರಾಮದ ನಿವಾಸಿ ವೀರೇಶ್ ಹಲ್ಲೆಗೆ ಒಳಗಾದ ಆರೋಪಿ. ಮಟ್ಕಾ ಆರೋಪದ ಮೇಲೆ ವೀರೇಶನನ್ನು ಆತನ ಮನೆಯಲ್ಲಿ ಮೇ 29 (ಮಂಗಳವಾರ) ಮಧ್ಯರಾತ್ರಿ ಆಂಧ್ರ ಪ್ರದೇಶದ ಕಂಬದೂರು ಪೆÇಲೀಸರು ಬಂದಿಸಿದ್ದರು. ಕೇಸ್ ವಾಪಾಸ್ ಪಡೆಯುತ್ತೇವೆ 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರಂತೆ. ಇದಕ್ಕೆ ವೀರೇಶ್ ಒಪ್ಪದಿದ್ದಾಗ ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ, ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ ಎಂದು ವೀರೇಶ್ ಹೇಳ್ತಾರೆ.

    ಗುರುವಾರ ಆಂಧ್ರ ಪ್ರದೇಶ ಪೊಲೀಸರಿಗೆ 2.5 ಲಕ್ಷ ರೂ. ನೀಡಿದ್ದರಿಂದ ಅಂದು ರಾತ್ರಿ ವೀರೇಶನನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವೀರೇಶನ ಸೊಂಟ, ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವೀರೇಶನ ಸಂಬಂಧಿಕರು ಆಂಧ್ರಪ್ರದೇಶ ಪೊಲೀಸರ ವರ್ತನೆ ಕಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕೊಡಲು ಮುಂದಾಗಿದ್ದಾರೆ.