Tag: ಮಟನ್

  • ಶ್ರಾವಣ ಮಾಸ ಅಂತ್ಯ- ಮಾಂಸ ಖರೀದಿಗೆ ಮುಗಿಬಿದ್ದ ಜನ

    ಶ್ರಾವಣ ಮಾಸ ಅಂತ್ಯ- ಮಾಂಸ ಖರೀದಿಗೆ ಮುಗಿಬಿದ್ದ ಜನ

    – ಸಾಲುಗಟ್ಟಿ ನಿಂತು ಮಾಂಸ ಖರೀದಿ

    ಬೆಂಗಳೂರು: ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಜನ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಮಾಂಸ ಖರೀದಿಸುತ್ತಿದ್ದು, ಒಂದು ತಿಂಗಳಿಂದ ಬಿಕೋ ಎನ್ನುತ್ತಿದ್ದ ಮಟನ್ ಅಂಗಡಿಗಳು ಇಂದು ಫುಲ್ ಆಗಿವೆ.

    ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಲೇ ಸಾಲುಗಟ್ಟಿ ನಿಂತು ಗ್ರಾಹಕರು ಮಾಂಸ ಖರೀದಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸೈನಿಟಸರ್ ಬಳಸುತ್ತಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಪಾಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶ್ರಾವಣ ಮಾಸ ಹಿನ್ನೆಲೆ ಕಳೆದ ನಾಲ್ಕು ವಾರದಿಂದ ಮಟನ್ ಶಾಪ್ ಗಳು ಖಾಲಿ ಖಾಲಿಯಾಗಿದ್ದವು. ಶ್ರಾವಣ ಮಾಸ ಅಂತ್ಯ ಹಿನ್ನೆಲೆ ಜನ ಸಾಲುಗಟ್ಟಿ ನಿಂತು ಮಟನ್ ಖರೀದಿ ಮಾಡುತ್ತಿದ್ದಾರೆ.

    ಬೆಂಗಳೂರಿನ ಮೈಸೂರು ರಸ್ತೆಯ ಹಲವು ಮಟನ್ ಶಾಪ್‍ಗಳು ಜನಜಂಗುಳಿಯಿಂದ ಕೂಡಿದ್ದು, ಪಾಪಣ್ಣ ಮಟನ್ ಶಾಫ್ ಗೆ ಜನರ ದಂಡು ಹರಿದು ಬರುತ್ತಿದೆ. ಮಾಂಸ ಮಾರಾಟದ ಭರಾಟೆ ಜೋರಾಗಿದೆ. ಇತ್ತ ಸದಾಶಿವನಗರದಲ್ಲಿ ಸಹ ಮಾಂಸ ಖರೀದಿ ಜೋರಾಗಿದೆ.

  • ಭಾನುವಾರದ ಬಾಡೂಟಕ್ಕೆ ಮುಗಿಬಿದ್ದ ಜನ – ಮಟನ್, ಚಿಕನ್ ಅಂಗಡಿಗಳಲ್ಲಿ ಜನವೋ ಜನ

    ಭಾನುವಾರದ ಬಾಡೂಟಕ್ಕೆ ಮುಗಿಬಿದ್ದ ಜನ – ಮಟನ್, ಚಿಕನ್ ಅಂಗಡಿಗಳಲ್ಲಿ ಜನವೋ ಜನ

    ಬೆಂಗಳೂರು: ಒಂದು ಕಡೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಲಾಕ್‍ಡೌನ್ ನಿಯಮ ಇನ್ನಷ್ಟು ಕಠಿಣವಾಗುತ್ತಿದೆ. ಆದರೆ ಇಂದು ಭಾನುವಾರವಾದ ಕಾರಣ ಬಾಡೂಟ ಮಾಡಲು ಜನರು ಮಟನ್, ಚಿಕನ್ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

    ಲಾಕ್‍ಡೌನ್ ನಡುವೆಯು ನಾನ್ ವೆಜ್‍ಗೆ ಬೇಡಿಕೆ ಹೆಚ್ಚಾಗಿದ್ದು, ಈ ಮೂಲಕ ಭಾನುವಾರದ ಮಟನ್, ಚಿಕನ್ ಮಾರಾಟ ಜೋರಾಗಿದೆ. ಲಾಕ್‍ಡೌನ್ ಇದ್ದರೂ ನಾನ್‍ವೆಜ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಟನ್ ಖರೀದಿಗೆ ಮಟನ್ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.

    ಅಂಗಡಿ ಮಾಲೀಕರು ಕೂಡ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂರಾರು ಸಂಖ್ಯೆಯಲ್ಲಿ ಕ್ಯೂ ನಿಂತಿದ್ದಾರೆ. ಅಷ್ಟೇ ಅಲ್ಲದೇ ಮಾಸ್ಕ್ ಇಲ್ಲದೆ ಬಂದರೆ ಅವರಿಗೆ ಮಟನ್ ಕೊಡಲ್ಲ ಎಂದು ಮಾಲೀಕ ತಿಳಿಸಿದ್ದಾರೆ. ಮೈಸೂರು ರೋಡ್‍ನಲ್ಲಿರೋ ಮಟನ್ ಅಂಗಡಿ ಮುಂದೆ ಜನಸಾಗರವೇ ಸೇರಿದೆ.

    ಜನರು ಶಿಸ್ತುಬದ್ಧವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಸಿ ಮಟನ್ ಖರೀದಿ ಮಾಡುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಚಿಕನ್ ಕೆಜಿಗೆ 160 ಆಗಿದೆ. ಇನ್ನೂ ಮಟನ್ ಕೆಜಿಗೆ 750 ರೂಪಾಯಿ ಆಗಿದೆ. ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಜನರು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮನೆಯಿಂದ ಹೊರಬಂದು ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ.

     

  • ಜನರಿಗೆ ಅಸಡ್ಡೆ, ಅಧಿಕಾರಿಗಳಿಗೆ ಕಾಟಾಚಾರ- ಎರಡೇ ದಿನಕ್ಕೆ ಕೆಮಿಕಲ್ ಟನಲ್ ನಿರುಪಯುಕ್ತ

    ಜನರಿಗೆ ಅಸಡ್ಡೆ, ಅಧಿಕಾರಿಗಳಿಗೆ ಕಾಟಾಚಾರ- ಎರಡೇ ದಿನಕ್ಕೆ ಕೆಮಿಕಲ್ ಟನಲ್ ನಿರುಪಯುಕ್ತ

    ಮೈಸೂರು: ಎರಡು ದಿನಗಳ ಹಿಂದಷ್ಟೇ ನಿರ್ಮಾಣ ಮಾಡಲಾಗಿದ್ದ ಕೆಮಿಕಲ್ ಟನಲ್ ಪ್ರಯೋಜನಕ್ಕೆ ಬಾರದಂತಾಗಿದೆ.

    ನಗರದ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆಯ ಪ್ರವೇಶ ದ್ವಾರದಲ್ಲಿ ಈ ಟನಲ್ ನಿರ್ಮಾಣ ಮಾಡಲಾಗಿತ್ತು. ಜನರಿಗೆ ಈ ಟನಲ್ ಬಳಸಲು ಅಸಡ್ಡೆಯಾದರೆ, ಪಾಲಿಕೆ ಅಧಿಕಾರಿಗಳಿಗೂ ಈ ಬಗ್ಗೆ ಅಸಡ್ಡೆ. ಹೀಗಾಗಿ ಜನರು ಟನಲ್ ಒಳಗೆ ಹೋಗದೆ ಎಂದಿನಂತೆ ನೇರವಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಜನರು ಟನಲ್ ಒಳಗೆ ಹೋದರೆ ಅವರ ಮೈ ಮೇಲೆ ಸ್ಯಾನಿಟೈಸರ್ ಮಾದರಿಯ ನೀರು ಸಿಂಪಡಣೆ ಆಗುತ್ತೆ. ಆಗ ಸಾಮೂಹಿಕವಾಗಿ ಜನರ ಮೇಲಿನ ವೈರಾಣು ನಾಶಕ್ಕೆ ಅನುಕೂಲವಾಗುತ್ತದೆ. ಈ ಉದ್ದೇಶದಿಂದ ಟನಲ್ ಮಾಡಲಾಗಿತ್ತು. ಆದರೆ ಜನರ ಅಸಡ್ಡೆಯಿಂದ, ಅಧಿಕಾರಿಗಳ ಕಾಟಾಚಾರದ ಮನಃಸ್ಥಿತಿಯಿಂದ ಟನಲ್ ಪ್ರಯೋಗ ಎರಡೇ ದಿನಕ್ಕೆ ನಿರುಪಯುಕ್ತವಾಗಿದೆ.

    ವೈದ್ಯರಿಗಾಗಿ ವಿಶೇಷ ರಕ್ಷಾ ಕವಚ
    ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿ ಆತಂಕದಲ್ಲಿದೆ. ಜ್ವರ, ಕೆಮ್ಮು, ನೆಗಡಿಗೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕ ದೂರು ಮಾಡಲು ಮೈಸೂರಿನ ಅನಘ ಆಸ್ಪತ್ರೆ ವಿಶೇಷ ರಕ್ಷಾ ಕವಚಗಳನ್ನು ರೂಪಿಸಿದೆ. ವೈದ್ಯರು, ನರ್ಸ್, ಸಿಬ್ಬಂದಿ ಮಾಸ್ಕ್ ಮೇಲೆ ರಕ್ಷಾ ಕವಚಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಂತೆ ಎಚ್ಚರವಹಿಸಲಾಗುತ್ತಿದೆ. ಈ ರಕ್ಷಾ ಕವಚಗಳನ್ನು ಆಸ್ಪತ್ರೆಯಲ್ಲೇ ತಯಾರಿಸಲಾಗುತ್ತಿದೆ.

    ಮಾಂಸದೂಟ ಮಾಡಬೇಕಷ್ಟೆ
    ಭಾನುವಾರ ನಾವು ಮಾಂಸದೂಟ ಮಾಡಬೇಕು ಅಷ್ಟೆ, ನಮಗೆ ಸಾಮಾಜಿಕ ಅಂತರ, ಕೊರೊನಾ ವೈರಸ್ ವಿರುದ್ಧ ಹೋರಾಟ, ಆರೋಗ್ಯ, ಸಮಾಜದ ಆರೋಗ್ಯ ಯಾವುದು ಮುಖ್ಯ ಅಲ್ಲ ಎನ್ನುವಂತೆ ಜನ ವರ್ತಿಸುತ್ತಿದ್ದಾರೆ. ಈ ಮೂಲಕ ಮಾಂಸದೂಟ ಮಾತ್ರ ಮುಖ್ಯ ಎಂಬ ಮನಃಸ್ಥಿತಿಗೆ ಮೈಸೂರಿನ ಜನ ತಲುಪಿದದ್ದು, ಮಾಂಸದ ಮಾರುಕಟ್ಟೆಯಲ್ಲಿ ಸಾಲುಗಟ್ಟಿ ಖರೀದಿ ಮಾಡಿದ್ದಾರೆ. ಕೊರೊನಾ ಪಾಸಿಟಿವ್ ಸಂಖ್ಯೆ ಮೈಸೂರಲ್ಲಿ ದಿನ ದಿನಕ್ಕೂ ಏರುತ್ತಿದೆ. ಜನ ಮಾತ್ರ ಇದನ್ನು ಲೆಕ್ಕಿಸುತ್ತಿಲ್ಲ.

  • ದೇಶಕ್ಕೆ ಕೊರೊನಾ ಟೆನ್ಶನ್, ಇವ್ರಿಗೆ ಮಟನ್ ಟೆನ್ಶನ್!

    ದೇಶಕ್ಕೆ ಕೊರೊನಾ ಟೆನ್ಶನ್, ಇವ್ರಿಗೆ ಮಟನ್ ಟೆನ್ಶನ್!

    – 1 ಕೆಜಿ ಮಟನ್‍ಗೆ 800 ರೂ. ಇದ್ರೂ ಜನರ ಸಾಲೋಸಾಲು

    ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವರಂತೂ ಸಾಮಾಜಿಕ ಅಂತರವಿಲ್ಲದೆ ಮಟನ್ ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

    ನಗರದ ನಂದಿನಿ ಲೇಔಟ್‍ನಲ್ಲಿ ತರಕಾರಿ ಅಷ್ಟೇ ಅಲ್ಲದೆ ನಾನ್ ವೆಜ್‍ಗೂ ದೊಡ್ಡ ಸರದಿಯೇ ನಿಂತಿದೆ. ಕೊರೊನಾ ವೈರೆಸ್ ಭೀಕರತೆಯಿಂದ ತಪ್ಪಿಸಿಕೊಳ್ಳುವುದಕ್ಕಿಂತ ಮಟನ್ ಮುಖ್ಯ ಎಂಬಂತೆ ಜನರು ವರ್ತಿಸುತ್ತಿದ್ದಾರೆ.

    ಸಾಮಾಜಿಕ ಅಂತರದ ಮಾತಿರಲಿ ಕ್ಯೂನಲ್ಲಿ ನಿಂತಿದ್ದ ಹಲವರು ಮಾಸ್ಕ್ ಹಾಕಿರಲಿಲ್ಲ. ಮಟನ್ ಖರೀದಿಗೆ ಗ್ರಾಹಕರು ಕಿ.ಮೀ ಗಟ್ಟಲೆ ಕ್ಯೂ ನಿಂತಿದ್ದರು. ಭಾರತ ಲಾಕ್‍ಡೌನ್ ಅಂದ್ರೆ ಇದೇನಾ? ಸಂಡೆ ಒಂದು ದಿನ ಮಟನ್ ತಿನ್ನದೆ ಇದ್ದರೆ ಇವರು ಸತ್ತೇ ಹೋಗ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

    ಚಿಕನ್ ಬೆಲೆ ಕೆಜಿಗೆ 100 ರೂ. ಹಾಗೂ ಮಟನ್ ಬೆಲೆ ಕೆಜಿಗೆ 800 ರೂ. ಆಗಿದೆ. ಮಟನ್ ಬೆಲೆ ದುಬಾರಿಯಾದ್ರೂ ತಿನ್ನುವರರ ಸಂಖ್ಯೆ ಮಾತ್ರ ಇಳಿಕೆಯಾಗಿಲ್ಲ. ಸಂಡೇ ಸ್ಪೆಷಲ್ ಎಂಬ ಕಾರಣಕ್ಕೆ ಜನರು ಮಾಂಸ ಖರೀದಿಗೆ ಮುಗಿಬಿದ್ದಾರೆ.

  • ಚಾಮರಾಜನಗರ ಕುಕ್ಕುಟೊದ್ಯಮದ ಉತ್ಪನ್ನ ಮಾರಾಟ, ಸಾಗಾಣಿಕೆ ನಿಷೇಧ ತೆರವು

    ಚಾಮರಾಜನಗರ ಕುಕ್ಕುಟೊದ್ಯಮದ ಉತ್ಪನ್ನ ಮಾರಾಟ, ಸಾಗಾಣಿಕೆ ನಿಷೇಧ ತೆರವು

    ಚಾಮರಾಜನಗರ: ಜಿಲ್ಲೆಯಾದ್ಯಂತ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆಯನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ತೆರವುಗೊಳಿಸಲಾಗಿದ್ದು, ಕೆಲ ಷರತ್ತಿಗೆ ಒಳಪಟ್ಟು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

    ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈ ವರೆಗೆ ಅಸ್ವಾಭಾವಿಕವಾಗಿ ಅಥವಾ ಕೋಳಿ ಶೀತ ಜ್ವರದಿಂದ ಪಕ್ಷಿಗಳಾಗಲಿ, ಕೋಳಿಗಳಾಗಲಿ ಮರಣ ಹೊಂದಿರುವುದು ಕಂಡುಬಂದಿಲ್ಲ ಹಾಗೂ ಮೈಸೂರು ನಗರವು ಚಾಮರಾಜನಗರದಿಂದ 70 ಕಿ.ಮೀ ದೂರದಲ್ಲಿದ್ದು, ಹಕ್ಕಿಜ್ವರ ಬಾರದಂತೆ ಕ್ರಮ ವಹಿಸಲಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲಾದ್ಯಂತ ಹೊರಡಿಸಿರುವ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಮಾರಾಟ ಮತ್ತು ಸಾಗಾಣಿಕೆ ನಿಷೇಧದ ಆದೇಶವನ್ನು ಹಲವು ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಕೋಳಿ ಮಾಂಸ ಮಾರಾಟ ಮಾಡುವ ಕೆಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗಾಜಿನ ಪೆಟ್ಟಿಗೆಯನ್ನು ಅಳವಡಿಸಿಕೊಂಡು ಕೋಳಿಮಾಂಸ ಮಾರಾಟ ಮಾಡಬೇಕು. ರೋಗ ತಗುಲಿದ ಕೋಳಿ, ಇತರೆ ಪಕ್ಷಿಗಳ ಮಾಂಸವನ್ನು ಮಾರಾಟ ಮಾಡಬಾರದು. ಕೋಳಿ ತ್ಯಾಜ್ಯವನ್ನು ಆಯಾ ದಿನವೇ ವಿಲೇವಾರಿ ಮಾಡಬೇಕು ಎಂದು ಡಿಸಿ ಷರತ್ತು ವಿಧಿಸಿದ್ದಾರೆ.

  • ವರ್ಷ ತೊಡಕಿಗೆ ಬಿಬಿಎಂಪಿಯಿಂದ ರೂಲ್ಸ್- ಎಲ್ಲೆಂದರಲ್ಲಿ ಮಾಂಸ ಮಾರಂಗಿಲ್ಲ

    ವರ್ಷ ತೊಡಕಿಗೆ ಬಿಬಿಎಂಪಿಯಿಂದ ರೂಲ್ಸ್- ಎಲ್ಲೆಂದರಲ್ಲಿ ಮಾಂಸ ಮಾರಂಗಿಲ್ಲ

    – ಗುಡ್ಡೆ ಮಾಂಸ ಮಾರಾಟ ನಿಷೇಧ

    ಬೆಂಗಳೂರು: ಒಂದೆಡೆ ಕೊರೊನಾ ವೈರಸ್‍ನಿಂದ ಜನ ಕಂಗಾಲಾಗಿದ್ದು, ಇನ್ನೊಂದೆಡೆ ಹಕ್ಕಿ ಜ್ವರ ಸಹ ದೃಢಪಟ್ಟಿದೆ. ಹೀಗಾಗಿ ಭಯದ ವಾತಾವರಣದಲ್ಲೇ ಜನ ಬದುಕುತ್ತಿದ್ದು, ಚಿಕನ್, ಮಟನ್ ತಿನ್ನಲು ಮೀನಾಮೇಷ ಎಣಿಸುತ್ತಿದ್ದಾರೆ. ಇದರ ಮಧ್ಯೆ ಯುಗಾದಿ ಹಬ್ಬದ ಹೊಸತೊಡಕಿಗೆ ಬಿಬಿಎಂಪಿ ಹೊಸ ನಿಯಮ ತರಲು ಚಿಂತಿಸಿದ್ದು, ಈ ಮೂಲಕ ನಾನ್ ವೆಜ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಲು ಮುಂದಾಗಿದೆ.

    ಬಿಬಿಎಂಪಿಯ ಈ ನಿಯಮಗಳ ಪ್ರಕಾರ ಎಲ್ಲಂದರಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಇದರಿಂದಾಗಿ ಗುಡ್ಡೆ ಮಾಂಸಕ್ಕೆ ಕತ್ತರಿ ಬೀಳಲಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ ಎಲ್ಲ ಮಾಂಸದಂಗಡಿಗಳಲ್ಲಿ ಚಿಕನ್ ಸಿಗುವುದಿಲ್ಲ. ಕೇವಲ ನಿಗದಿತ ಮಾಂಸದ ಅಂಗಡಿಗಳಲ್ಲಿ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಯುತ್ತಿದೆ. ಸಾರ್ವಜನಿಕವಾಗಿ ಎಲ್ಲೆಂದರಲ್ಲಿ, ರಸ್ತೆ ಬದಿಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಮಾಂಸ ಮಾರಾಟದ ವೇಳೆ ಸ್ವಚ್ಚತೆ ಕಾಪಾಡಬೇಕು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಈ ಬೆಳವಣಿಗೆ ನಾನ್ ವೆಜ್ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ. ನಾನ್ ವೆಜ್ ವಿಚಾರವಾಗಿಯೂ ಬಿಬಿಎಂಪಿ ಹೀಗೇ ಮಾಡಿ, ಹೀಗೆ ಮಾಡಬೇಡಿ ಎಂದು ಸೂಚಿಸುವುದು ಸರಿಯಲ್ಲ. ಗುಡ್ಡೆ ಮಾಂಸ ಮಾರಾಟ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಹೆಚ್ಚಾಯ್ತು ಮೀನು, ಕುರಿ ಮಾಂಸಕ್ಕೆ ಡಿಮ್ಯಾಂಡ್ – ಭಾರೀ ಏರಿತು ಮಟನ್ ಬೆಲೆ

    ಹೆಚ್ಚಾಯ್ತು ಮೀನು, ಕುರಿ ಮಾಂಸಕ್ಕೆ ಡಿಮ್ಯಾಂಡ್ – ಭಾರೀ ಏರಿತು ಮಟನ್ ಬೆಲೆ

    ಮೈಸೂರು: ಹಕ್ಕಿ ಜ್ವರದ ಎಫೆಕ್ಟ್ ನಿಂದ ಮೈಸೂರು ನಗರದಾದ್ಯಂತ ಕೋಳಿಗಳ ಮಾರಾಟ ಬಂದ್ ಆಗಿದೆ. ಹೀಗಾಗಿ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.

    ಹಕ್ಕಿ ಜ್ವರದ ಹಿನ್ನೆಲೆ ಚಿಕನ್ ಮಾರಾಟ ಸ್ಥಗಿತಗೊಂಡಿರು ಪರಿಣಾಮ ಮೀನು, ಕುರಿ, ಮೇಕೆ ಮಾಂಸದ ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಅತ್ತ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇತ್ತ ಕುರಿ, ಮೇಕೆ ಮಾಂಸದ ಬೆಲೆಯಲ್ಲಿ ಏರಿಕೆಯಾಗಿದ್ದು, ಮಂಗಳವಾರ ಒಂದು ಕೆ.ಜಿಗೆ 550 ರೂಪಾಯಿ ಇದ್ದ ದರ ಇಂದು 600 ರೂಪಾಯಿಗೆ ಏರಿಕೆಯಾಗಿದೆ. ಮೀನಿನ ದರ ಮಾತ್ರ ಯಥಾಸ್ಥಿತಿಯಲ್ಲಿ ಇದೆ. ಕೋಳಿ ಮಾರಾಟ ನಿಷೇಧ ಹೀಗೆ ಮುಂದುವರಿದರೆ ಮಟನ್ ಬೆಲೆ ಕೆಜಿಗೆ 800 ರೂಪಾಯಿ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

    ಮೈಸೂರಿನ ಕುಂಬಾರಕೊಪ್ಪಲು ಮನೆಯೊಂದರಲ್ಲಿ ಇತ್ತೀಚೆಗೆ ಸತ್ತಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್‍ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಹೈಸೆಕ್ಯೂರಿಟಿ ಅನಿಮಲ್ ಡೀಸಿಸ್‍ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.

    ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಸಾಕು ಪಕ್ಷಿಗಳ ಸರ್ವೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ 6,436 ಪಕ್ಷಿಗಳನ್ನು ಕೊಲ್ಲಲು ರ್ನಿಧರಿಸಿದೆ. ಜೊತೆಗೆ ಹಕ್ಕಿಜ್ವರ ಪತ್ತೆಯಾದ ಮೈಸೂರಿನ ಕುಂಬಾರಕೊಪ್ಪಲಿನ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಈವರೆಗೆ ಒಟ್ಟು 6,436 ಪಕ್ಷಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೀಗಾಗಿ ಕುಂಬಾರಕೊಪ್ಪಲಿನ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.

    ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಟ್ಟು 17,820 ಮನೆಗಳಿವೆ. ಅದರಲ್ಲಿ 144 ಮನೆಗಳಲ್ಲಿ ಪಕ್ಷಿಗಳಿವೆ. ಈ ಪೈಕಿ ನೈಸರ್ಗಿಕ ಪಕ್ಷಿಗಳು 1,252, ಔದ್ಯಮಿಕ ಪಕ್ಷಿಗಳು 5,100 ಹಾಗೂ ಸಾಕು ಪಕ್ಷಿಗಳು 254 ಎಂದು ಗುರುತಿಸಲಾಗಿದೆ. ಇದರಲ್ಲಿ ಕ್ವೈಲ್ಸ್ 12 ಹಾಗೂ ಟರ್ಕಿ 18 ಸೇರಿ ಒಟ್ಟು 6,436 ಪಕ್ಷಿಗಳಿದ್ದು, ಎಲ್ಲವನ್ನೂ ನಾಶಪಡಿಸಲು ನಿರ್ಧರಿಸಲಾಗಿದೆ.

  • ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ನಾನ್ ವೆಜ್ ಪ್ರಿಯರಿಗೆ ಕೊರೊನಾ ಶಾಕ್- ಚಿಕನ್ ರೇಟ್ ಡೌನ್, ಮಟನ್, ಫಿಶ್ ರೇಟ್ ಹೈಕ್?

    ಬೆಂಗಳೂರು: ಕೊರೊನಾ ವೈರಸ್‍ಗೆ ಈಗಾಗಲೇ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ. ಜೊತೆಗೆ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಎಫೆಕ್ಟ್‌ಗಳನ್ನು ಕಾಣುತ್ತಿದ್ದೇವೆ. ಆದರೆ ಈಗ ಈ ಕೊರೊನಾ ನಾನ್ ವೆಜ್ ಪ್ರಿಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಮಟನ್ ಮತ್ತು ಫಿಶ್ ಕೊಳ್ಳಂಗಿಲ್ಲ, ತಿನ್ನಂಗಿಲ್ಲವೆನ್ನುವಂತಾಗಿದೆ.

    ಯಾವುದೇ ಫುಡ್ ಸ್ಟ್ರೀಟ್‍ಗೆ, ನಾನ್ ವೆಜ್ ಹೊಟೇಲ್‍ಗೆ ಹೋದರೆ ಮೊದಲು ಬಹುತೇಕರು ಮಟನ್, ಫಿಶ್ ರೆಸಿಪಿಗಳನ್ನು ಆರ್ಡರ್ ಮಾಡುತ್ತಿದ್ದರು. ಅದರಲ್ಲೂ ಡಯಟ್ ಮಾಡೋರಿಗೆ, ಜಿಮ್‍ನಲ್ಲಿ ವರ್ಕೌಟ್ ಮಾಡೋರಿಗೆ ಮತ್ತು ಕೂಲ್ ಫುಡ್ ಇಷ್ಟ ಪಡುವವರಿಗೆ ಮಟನ್ ಅಚ್ಚುಮೆಚ್ಚು. ಇನ್ಮುಂದೆ ಫಿಶ್, ಮಟನ್ ತಿನ್ನೋ ಮುನ್ನ ಯೋಚಿಸಬೇಕಾಗಿದೆ.

    ಹೌದು..ಚಿಕನ್, ಕೋಳಿ ತಿಂದರೆ ಕೊರೊನಾ ವೈರಸ್ ಬರುತ್ತೆ ಅಂತ ಇತ್ತೀಚೆಗೆ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಈ ಫೇಕ್ ಸುದ್ದಿಗೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ. ಹೀಗಾಗಿ ಜನರು ಕೋಳಿ ಮಾಂಸ ತಿನ್ನುವುದನ್ನೇ ಬಿಡುತ್ತಿದ್ದಾರೆ. ಇದರಿಂದ ಚಿಕನ್ ಬೇಡಿಕೆ ಕಡಿಮೆಯಾಗಿದೆ. 130, 140 ಇದ್ದ ಚಿಕನ್ ರೇಟ್ 80, 90ಕ್ಕೆ ಇಳಿದಿದೆ. ಇದರಿಂದ ಮಟನ್ ಹಾಗೂ ಫಿಶ್ ರೇಟ್ ಹೆಚ್ಚಾಗಿದೆ.

    ಕಳೆದ ವಾರದ ಬೆಲೆ ಇವತ್ತಿನ ಬೆಲೆ ನೋಡೋದಾದ್ರೆ:
    ಕಳೆದ ವಾರ ಕೆ.ಜಿ ಮಟನ್‍ಗೆ 550 ರೂ ಇತ್ತು. ಆದರೆ ಇಂದು 700 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಕಳೆದ ವಾರ ಕೆ.ಜಿಗೆ 120ರೂ. ಇದ್ದ ಫಿಶ್ ಇಂದು 200 ರೂಪಾಯಿಗೆ ಜಿಗಿದಿದೆ.

    ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ಹಾಗೂ ಫಿಶ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800 ರೂ.ಗಳಿಗೆ ಏರಿಕೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಇದು ನಾನ್‍ವೆಜ್ ಪ್ರಿಯರಿಗೆ ಬೇಸರವನ್ನುಂಟು ಮಾಡಿದೆ ಎಂದು ನಾನ್ ವೆಜ್ ಪ್ರಿಯ ಮಹಮದ್ ಇದ್ರೀಸ್ ಚೌದ್ರೀ ಹೇಳಿದ್ದಾರೆ.

  • ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

    ನಾನ್‍ವೆಜ್ ಪ್ರಿಯರಿಗೆ ಶಾಕ್ – 700ರ ಗಡಿದಾಟಿದ ಮಟನ್ ರೇಟ್

    ಬೆಂಗಳೂರು: ನಾನ್‍ವೆಜ್ ಖಾದ್ಯಪ್ರಿಯರಿಗೆ ಶಾಕ್, ಇನ್ಮುಂದೆ ಮಟನ್ ಐಟಮ್ಸ್ ತಿನ್ನೋ ಮುನ್ನ ಜೇಬು ಗಟ್ಟಿಯಿದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಯಾಕೆಂದರೆ ಮಟನ್ ರೇಟ್ ಏರಿಕೆಯಾಗಿದೆ.

    ಹೌದು.ಕಳೆದ ವಾರ ಕೆಜಿ ಮಟನ್‍ಗೆ 550 ರೂ. ಇತ್ತು. ಆದರೀಗ ಕೆಜಿ ಮಟನ್‍ಗೆ 700 ರೂಪಾಯಿಯಾಗಿದೆ. ಕಳೆದ ಬಾರಿ ಉಂಟಾದ ಪ್ರವಾಹದಿಂದ ಕುರಿಗಳು ಸತ್ತಿವೆ. ಜೊತೆಗೆ ಚಳಿಗಾಲದಲ್ಲಿ ಕುರಿಗಳು ಚಳಿ ತಡೆಯಲಾರದೇ ಸಾಯುತ್ತಿವೆ. ಅಲ್ಲದೇ ಕುರಿಗಳ ಸಾಕಾಣಿಕೆ ಕುಗ್ಗಿದೆ. ಈ ಎಲ್ಲಾ ಕಾರಣದಿಂದ ಮಟನ್ ಬೆಲೆ ಹೆಚ್ಚಳವಾಗಿದೆ.

    ಇತ್ತೀಚಿಗೆ ದಿನಗಳಲ್ಲಿ ಮೊದಲಿನ ಹಾಗೆ ಸಾಕಷ್ಟು ಪ್ರಮಾಣದಲ್ಲಿ ಕುರಿ ಸಾಕಾಣಿಕೆಯಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಅಂದರೆ ಕುರಿ ಸಾಕಾಣಿಕೆದಾರರಿಗೆ ಕುರಿ, ಮೇಕೆಗಳನ್ನ ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ. ಮೊದಲಿನ ಹಾಗೆ ರೈತರೂ ಕೂಡ ಭೂಮಿಯಲ್ಲಿ ಕುರಿಗಳನ್ನ ಬಿಡುತ್ತಿಲ್ಲ. ಹೀಗಾಗಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಟನ್ ರೇಟ್ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಮಾರುಕಟ್ಟೆಗೆ ಇತ್ತೀಚಿನ ದಿನಗಳಲ್ಲಿ ಬೌಯ್ಲರ್ ಕೋಳಿ ಲಗ್ಗೆ ಇಟ್ಟಿದ್ದು, ಇದರಿಂದಾಗಿಯೂ ಮಟನ್ ರೇಟ್ ಏರಿಕೆಗೆ ಕಾರಣವಾಗಿದೆ ಎಂದು ಮಟನ್ ವ್ಯಾಪಾರಸ್ಥರು ನಿಸಾರ್ ಅಹಮದ್ ತಿಳಿಸಿದ್ದಾರೆ.

    ಮಟನ್ ಖಾದ್ಯಗಳನ್ನ ತುಂಬಾ ಇಷ್ಟಪಡುವರಿಗೆ ಇದು ಕೊಂಚ ಬೇಸರ ಮೂಡಿಸಿದೆ. ಹೀಗಾಗಿ ಮಟನ್ ರೇಟ್ ಖಾದ್ಯ ಪ್ರಿಯರ ಬಾಯಿ ಸುಡುತ್ತಿದ್ದು, ಇದು ಹೀಗೆ ಮುಂದುವರಿದರೆ ಮುಂದಿನ ಯುಗಾದಿ ವೇಳೆಗೆ ಮಟನ್ ರೇಟ್ 800-1000 ರೂಪಾಯಿಗಳಿಗೆ ಏರಿಕೆಯಾದರೆ ಅಚ್ಚರಿ ಪಡಬೇಕಿಲ್ಲ ಎಂದು ಮಟನ್ ಪ್ರಿಯ ಮಹಮದ್ ಇದ್ರೀಸ್ ಹೇಳಿದ್ದಾರೆ.

    ಒಂದು ಕಡೆ ಗ್ಯಾಸ್ ರೇಟ್, ತರಕಾರಿ ರೇಟ್, ಈರುಳ್ಳಿ ರೇಟ್ ಜಾಸ್ತಿಯಾಗುತ್ತಿದೆ. ಮತ್ತೊಂದು ಕಡೆ ಮಟನ್ ದರ ಕೂಡ ಏರಿಕೆಯಾಗಿರುವುದು ಮಟನ್ ರೇಟ್ ಪ್ರಿಯರಿಗೆ ಬೇಸರ ಮೂಡಿಸಿದೆ.

  • ಮಟನ್ ಕಡಿಮೆ ಬಡಿಸಿದಳೆಂದು ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

    ಮಟನ್ ಕಡಿಮೆ ಬಡಿಸಿದಳೆಂದು ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿ

    ಮುಂಬೈ: ಊಟದ ವೇಳೆ ಮಟನ್ ಕಡಿಮೆ ನೀಡಿದಳೆಂದು ಪತ್ನಿಗೆ ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

    ಮುಂಬೈನ ಜೂಯಿ ಕಾಮೋಥೆಯಲ್ಲಿ ಘಟನೆ ನಡೆದಿದ್ದು, ತೀವ್ರ ಸುಟ್ಟಗಾಯಗಳಾಗಿದ್ದರಿಂದ 37 ವರ್ಷದ ಮಹಿಳೆ ಮುಂಬೈನ ಸಿಯೋನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಆರೋಪಿಯನ್ನು 38 ವರ್ಷದ ಮಾರುತಿ ಸರೋಡ್ ಎಂದು ಗುರುತಿಸಲಾಗಿದೆ. ದಿನಗೂಲಿ ಕಾರ್ಮಿಕನಾಗಿದ್ದಾನೆ.

    ಊಟಕ್ಕೆ ಮಟನ್‍ನ್ನು ಕಡಿಮೆ ನೀಡಿದಳು ಎಂದು ಕೋಪಗೊಂಡ ಪತಿ ತನ್ನ ಪತ್ನಿ ಪಲ್ಲವಿ ಸರೋಡ್‍ಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ದಂಪತಿಗೆ ನಾಲ್ವರು ಅಪ್ರಾಪ್ತ ಮಕ್ಕಳಿದ್ದಾರೆ ಎಂದು ವರದಿಯಾಗಿದೆ.

    ಕುಡಿದು ಬಂದಿದ್ದ ಮಾರುತಿ ರಾತ್ರಿ ಊಟ ಮಾಡುತ್ತಿದ್ದಾಗ ಪತ್ನಿ ಮಟನ್ ಕಡಿಮೆ ನೀಡಿದ್ದಾಳೆ ಎಂದು ಕೋಪಗೊಂಡಿದ್ದಾನೆ. ನಂತರ ಅವಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳೀಯರು ಮಹಿಳೆಯನ್ನು ನೆರುಲ್ ನಲ್ಲಿರುವ ಡಿ.ವೈ.ಪಾಟೀಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಿರಿಯ ಬಾಳಾಸಾಹೇಬ್ ತುಪೆ ಅವರು ಮಾಹಿತಿ ನೀಡಿದ್ದಾರೆ.

    ಮಹಿಳೆಯ ಸ್ಥಿತಿ ಗಂಭೀರವಾಗಿದ್ದರಿಂದ ಸಿಯೋನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ತೀವ್ರ ಸುಟ್ಟು ಗಾಯಗಳಾಗಿದ್ದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ. ಮಹಿಳೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಕೋಪಗೊಂಡ ಪತಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿಸಿದ್ದಾಳೆ.