Tag: ಮಟನ್ ಶಾಪ್

  • ಸಸ್ಯಹಾರಿ ಸೋನು ಸೂದ್ ಹೆಸರಲ್ಲಿ ಮಟನ್ ಶಾಪ್ – ನಟ ಹೇಳಿದ್ದು ಹೀಗೆ

    ಸಸ್ಯಹಾರಿ ಸೋನು ಸೂದ್ ಹೆಸರಲ್ಲಿ ಮಟನ್ ಶಾಪ್ – ನಟ ಹೇಳಿದ್ದು ಹೀಗೆ

    ಮುಂಬೈ: ತಮ್ಮ ಹೆಸರಿನಲ್ಲಿ ಆರಂಭವಾಗಿರುವ ಮಟನ್ ಶಾಪ್ ನೋಡಿ ಸಸ್ಯಹಾರಿ ನಟ ಸೋನು ಸೂದ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸೋನು ಸೂದ್ ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮಟನ್ ಅಂಗಡಿಗೆ ಸೋನು ಸೂದ್ ಎಂದು ಹೆಸರಿಡಲಾಗಿದೆ. ಅಂಗಡಿ ಮುಂದೆ ಸೋನು ಸೂದ್ ಫೋಟೋ ಹಾಕಿ ದೊಡ್ಡ ಬ್ಯಾನರ್ ಸಹ ಹಾಕಲಾಗಿದೆ. ಈ ಅಂಗಡಿ ವೀಡಿಯೋ ಕಳೆದೊಂದು ವಾರದಿಂದ ವೈರಲ್ ಆಗಿತ್ತು. ಈ ವೀಡಿಯೋ ನೋಡುತ್ತಿದ್ದಂತೆ ಸೋನು ಸೂದ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಲಾಫಿಂಗ್ ಎಮೋಜಿ ಮೂಲಕ ಪ್ರತಿಕ್ರಿಯಿಸಿರುವ ಸೋನು ಸೂದ್, ನಾನೊಬ್ಬ ಸಸ್ಯಹಾರಿ. ಅರೇ ಇದೇನು ನೋಡುತ್ತಿದ್ದೇನೆ? ನನ್ನ ಹೆಸರಿನಲ್ಲಿ ಮಟನ್ ಶಾಪ್. ಇಲ್ಲಿ ಸಸ್ಯಹಾರಿ ವಸ್ತುಗಳನ್ನ ಮಾರಲು ನಾನು ಸಹಾಯ ಮಾಡಬಲ್ಲೆ ಎಂದು ಬರೆದು ವೀಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸೋನು ಸೂದ್ ಫನ್ನಿ ಸಾಲುಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಆಹಾರ ವಿತರಿಸುತ್ತಿರುವ ಸೋನು ಸೂದ್

    ಆಂಧ್ರಪ್ರದೇಶದಲ್ಲಿ ಎರಡು ಆಕ್ಸಿಜನ್ ಪ್ಲಾಂಟ್ ಸ್ಥಾಪಿಸೋದಾಗಿ ಸೋನು ಸೂದ್ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಚೀನಾ ಮತ್ತು ಫ್ರಾನ್ಸ್ ನಿಂದ ಆಮ್ಲಜನಕ ಸಾಂದ್ರಕ ತರುತ್ತೇನೆ ಎಂದು ಹೇಳಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಕಳೆದ ವರ್ಷದಂತೆ ಈ ಬಾರಿಯೂ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರ ಪಾಲಿಗೆ ದೇವತಾ ಮನುಷ್ಯನಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್

    2020ರಲ್ಲಿ ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಪ್ರವಾಸಿ ಕಾರ್ಮಿಕರನ್ನು ಅವರ ಗೂಡು ಸೇರಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈಗ ಎಷ್ಟೋ ಜನ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಸೋನು ಅವರ ನಿಸ್ವಾರ್ಥ ಸೇವೆಗೆ ಅಭಿಮಾನಿಗಳು ಅವರ ಹೆಸರಿನಲ್ಲಿ ಅಂಗಡಿ, ವಿಶೇಷ ಅಭಿಯಾನ, ದೇವಸ್ಥಾನ ಸಹ ನಿರ್ಮಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ವಿಮಾನದ ಮೇಲೆ ಸೋನು ಸೂದ್ ಚಿತ್ರವನ್ನ ಚಿತ್ರಿಸಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿಶೇಷವಾಗಿ ಗೌರವ ಸಲ್ಲಿಸಿತ್ತು.

  • ಶ್ರಾವಣ ಮಾಸ ಅಂತ್ಯ- ಮಾಂಸ ಖರೀದಿಗೆ ಮುಗಿಬಿದ್ದ ಜನ

    ಶ್ರಾವಣ ಮಾಸ ಅಂತ್ಯ- ಮಾಂಸ ಖರೀದಿಗೆ ಮುಗಿಬಿದ್ದ ಜನ

    – ಸಾಲುಗಟ್ಟಿ ನಿಂತು ಮಾಂಸ ಖರೀದಿ

    ಬೆಂಗಳೂರು: ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಜನ ಮಾಂಸದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಮಾಂಸ ಖರೀದಿಸುತ್ತಿದ್ದು, ಒಂದು ತಿಂಗಳಿಂದ ಬಿಕೋ ಎನ್ನುತ್ತಿದ್ದ ಮಟನ್ ಅಂಗಡಿಗಳು ಇಂದು ಫುಲ್ ಆಗಿವೆ.

    ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಲೇ ಸಾಲುಗಟ್ಟಿ ನಿಂತು ಗ್ರಾಹಕರು ಮಾಂಸ ಖರೀದಿಸುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸೈನಿಟಸರ್ ಬಳಸುತ್ತಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಪಾಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶ್ರಾವಣ ಮಾಸ ಹಿನ್ನೆಲೆ ಕಳೆದ ನಾಲ್ಕು ವಾರದಿಂದ ಮಟನ್ ಶಾಪ್ ಗಳು ಖಾಲಿ ಖಾಲಿಯಾಗಿದ್ದವು. ಶ್ರಾವಣ ಮಾಸ ಅಂತ್ಯ ಹಿನ್ನೆಲೆ ಜನ ಸಾಲುಗಟ್ಟಿ ನಿಂತು ಮಟನ್ ಖರೀದಿ ಮಾಡುತ್ತಿದ್ದಾರೆ.

    ಬೆಂಗಳೂರಿನ ಮೈಸೂರು ರಸ್ತೆಯ ಹಲವು ಮಟನ್ ಶಾಪ್‍ಗಳು ಜನಜಂಗುಳಿಯಿಂದ ಕೂಡಿದ್ದು, ಪಾಪಣ್ಣ ಮಟನ್ ಶಾಫ್ ಗೆ ಜನರ ದಂಡು ಹರಿದು ಬರುತ್ತಿದೆ. ಮಾಂಸ ಮಾರಾಟದ ಭರಾಟೆ ಜೋರಾಗಿದೆ. ಇತ್ತ ಸದಾಶಿವನಗರದಲ್ಲಿ ಸಹ ಮಾಂಸ ಖರೀದಿ ಜೋರಾಗಿದೆ.