Tag: ಮಟನ್ ಕೈಮಾ ಸಾರು

  • ನೀವು ಮಾಡಿ ಮಟನ್ ಕೈಮಾ ಸಾರು

    ನೀವು ಮಾಡಿ ಮಟನ್ ಕೈಮಾ ಸಾರು

    ಇಂದು ನೀವೂ ಮಟನ್ ತಂದು ಮನೆಯಲ್ಲಿಯೇ ಹೋಟೆಲ್‍ಗಳಲ್ಲಿ ಮಾಡುವ ಸ್ಟೈಲ್‍ನಲ್ಲಿ ಮಟನ್ ಕೈಮಾ ಸಾರು ಮಾಡಿ. ಬಿಸಿ ಬಿಸಿಯಾದ ಅನ್ನದ ಜೊತೆಗೆ ಸವಿಯಲು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಮಟನ್ ಕೈಮಾ- 1 ಕೆಜಿ
    * ಮಟನ್ ಮೂಳೆ- 4 ಪೀಸ್
    * ಕೊಬ್ಬರಿ – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಕಾಳು ಮೆಣಸು- 2 ಟೀ ಸ್ಪೂನ್
    * ದನಿಯಾಪುಡಿ- 1 1ಈ ಸ್ಪೂನ್
    * ಅಚ್ಚ ಖಾರದ ಪುಡಿ- 2 ಟೀ ಸ್ಪೂನ್
    * ಬೆಳ್ಳುಳ್ಳು
    * ಚಕ್ಕೆ, ಲವಂಗ- ಸ್ವಲ್ಪ
    * ಗಸಗಸೆ ಅರ್ಧ ಟೀ ಸ್ಪೂನ್
    * ಮೊಟ್ಟೆ- 1
    * ಹುರಿಗಡಲೆ-ಸ್ವಲ್ಪ
    * ಅರಿಶಿಣ – ಅರ್ಧ ಟೀ ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಮೊಟ್ಟೆ ಹಾಗೂ ಹುರಿಗಡಲೆ ಬಿಟ್ಟು ಮೇಲೆ ತಿಳಿಸಿದ ಉಂಡೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ನೀರು ಹಾಕದೆ ಮಿಕ್ಸಿ ಜಾರ್ ನಲ್ಲಿ ಪುಡಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹುರಿಗಡಲೆಯನ್ನು ಪುಡಿ ಮಾಡಿಟ್ಟುಕೊಳ್ಳಬೇಕು.

    * ನಂತರ ಒಂದು ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು, ಹುರಿಗಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು.

    * ನಂತರ ಕುಕ್ಕರ್’ನ್ನು ಒಲೆಯ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಮೂಳೆಗಳನ್ನು ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

    * ಬಳಿಕ ಮಿಕ್ಸಿ ಜಾರ್‍ಗೆ ಈ ಮೇಲೆ ಹೇಳಿದ ಸಾರಿನ ಮಸಾಲೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

    * ಈ ರುಬ್ಬಿಕೊಂಡ ಮಸಾಲೆಯನ್ನು ಬೆಂದ ಮೂಳೆಗಳಿಗೆ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 10-10-15 ಕುದಿಯಲು ಬಿಡಬೇಕು. ಕುಡಿಯುತ್ತಿರುವ ಈ ಮಸಾಲೆಗೆ ಈಗಾಗಲೇ ಮಾಡಿಟ್ಟುಕೊಂಡ ಕೈಮಾ ಉಂಡೆಗಳನ್ನು ಹಾಕಿ 10-20 ನಿಮಿಷ ಬೇಯಿಸಿದರೆ ರುಚಿಕರವಾದ ಕೈಮಾ ಉಂಡೆ ಸಾರು ಸವಿಯಲು ಸಿದ್ಧವಾಗುತ್ತದೆ. ಈಗ ಅನ್ನದ ಜೊತೆಗೆ ಸವಿಯಬಹುದು.