ಪಾಟ್ನಾ: ಸದ್ಯ ಕ್ರಿಕೆಟ್ ಪ್ರಿಯರ ಬಾಯಲ್ಲೀಗ 14ರ ಬಾಲಕ ವೈಭವ್ ಸೂರ್ಯವಂಶಿಯದ್ದೇ (Vaibhav Suryavanshi) ಮಾತು. ವೈಭವ್ ಬ್ಯಾಟ್‌ನಿಂದ ಹೊಮ್ಮಿದ ಸಿಡಿಲಬ್ಬರದ ಶತಕ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿತು. ಇದರೊಂದಿಗೆ ಸತತ 5 ಸೋಲುಗಳ ನಂತರ ಗೆಲುವಿನ ಹಾದಿಗೆ ಮರಳಿದ ರಾಯಲ್ಸ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.
A moment he will never forget! 🩷
Vaibhav Suryavanshi earns applause from all corners after his historic knock 🫡👏
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ವೂಭವ್ ಐಪಿಎಲ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆದ್ರೆ ನಿನ್ನೆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಗುಜರಾತ್ ಬೌಲರ್‌ಗಳನ್ನು ದಂಡಿಸಿದ ರೀತಿ ಕಂಡು ಇಡೀ ಕ್ರಿಕೆಟ್ (Cricket) ಜಗತ್ತು ನಿಬ್ಬೆರಗಾಗಿದೆ. ಹೀಗಾಗಿ ಕ್ರಿಕೆಟ್ ತಾರೆಯನ್ನ ಯುವ ಆಟಗಾರರನ್ನು ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಒಂದು ವಿಷಯವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಅದ್ಭುತ ಶತಕದ ಮೂಲಕ ವಿಶ್ವವಿಖ್ಯಾತಿ ಪಡೆದ ವೈಭವ್ ಡಯಟ್ ಚಾರ್ಟ್ ಹೇಗಿದೆ ಅನ್ನೋದನ್ನ ಅವರ ಕೋಚ್ ಮನೋಜ್ ಓಜಾ (Manoj Ojha) ತಿಳಿಸಿದ್ದಾರೆ.
ಚಿಕನ್, ಮಟನ್ ಪ್ರಿಯ ವೈಭವ್
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕೋಚ್ ಮನೋಜ್ ಓಜಾ, ವೈಭವ್ ಚಿಕ್ಕವನಾದ್ದರಿಂದ ಚಿಕನ್, ಮಟನ್ (Mutton), ಪಿಜ್ಜಾ ಅಂದ್ರೆ ಹೆಚ್ಚು ಪ್ರೀತಿ. ಎಷ್ಟು ಕೊಟ್ಟರೂ ಮುಗಿಸಿಬಿಡುತ್ತಿದ್ದಮ, ಅದಕ್ಕಾಗಿ ಸ್ವಲ್ಪ ದಪ್ಪಗೆ ಕಾಣುತ್ತಾನೆ. ಆದ್ರೆ ಐಪಿಎಲ್ ಹತ್ತಿರ ಬರುತ್ತಿದ್ದಂತೆ ಮಟನ್, ಪಿಜ್ಜಾ (Pizza) ತಿನ್ನೋದನ್ನ ತ್ಯಜಿಸಿದ್ದ. ಅವನಿಗಾಗಿ ಡಯಟ್ ಚಾರ್ಚ್ ಕೂಡ ಮಾಡಲಾಗಿತ್ತು ಎಂದು ಓಜಾ ಹೇಳಿದ್ದಾರೆ.
ಹೀಗೆ ಹೊಡೀತಾನೆ ಅಂತ ಗೊತ್ತಿರಲಿಲ್ಲ
ಇನ್ನೂ ಮನೋಜ್ ಓಜಾ ತಮ್ಮ ಶಿಷ್ಯನ ಆಟ ಕಂಡು ಚಕಿತಗೊಂಡಿದ್ದಾರೆ. ಅವನು ಹೊಡೆಯುತ್ತಾನೆ ಅಂದುಕೊಂಡಿದ್ದೆ, ಆದ್ರೆ ಹೀಗೆ ಹೊಡೆಯುತ್ತಾನೆ ಎಂದು ನನಗೆ ಗೊತ್ತಿರಲಿಲ್ಲ. ಒಟ್ನಲ್ಲಿ ಏನೋ ದೊಡ್ಡದು ನಡೆಯುತ್ತದೆ ಅಂತ ಮಾತ್ರ ಗೊತ್ತಿತ್ತು. ಅವನಿನ್ನೂ 14 ವರ್ಷದ ಹುಡುಗ, ದೇವರು ಅವನಿಗೆ ಅಪಾರ ಪ್ರತಿಭೆ ನೀಡಿದ್ದಾನೆ. ಅವನ ವೃತ್ತಿಜೀವನದಲ್ಲಿ ನಾನೂ ಭಾಗಿಯಾಗಲು ಸಾಧ್ಯವಾಗಿರುವುದಕ್ಕೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
– ಕುರಿ, ಮೇಕೆಗೆ ಭಾರೀ ಡಿಮ್ಯಾಂಡ್ – ಹೊರ ಜಿಲ್ಲೆಗಳಿಂದ ಸಿಲಿಕಾನ್ ಸಿಟಿಗೆ ಮಟನ್
ಬೆಂಗಳೂರು: ಹಿಂದೂಗಳ ಹೊಸ ವರ್ಷ ಮೊನ್ನೆಯಿಂದ ಆರಂಭವಾಗಿದೆ. ಯುಗದ ಆದಿ ಶುರುವಾಗೋ ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು. ಅದರೆ, ನಿನ್ನೆ ಸೋಮವಾರವಾಗಿದ್ದರಿಂದ ಹಿಂದೂಗಳು ಇಂದು ಹೊಸತೊಡಕು ಮಾಡ್ತಿದ್ದಾರೆ. ನಿನ್ನೆ ರಂಜನ್ ಇಂದು ಹೊಸತೊಡಕು ಒಟ್ಟಿಗೆ ಇರುವುದರಿಂದ ಮಟನ್‌ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ.
ಇವತ್ತು ಹೊಸತೊಡಕಿನ ದಿನ. ಮೊನ್ನೆ ಯುಗಾದಿ ಹಬ್ಬ ಮಾಡಿ, ದೇವರಿಗೆ ದೀಪ ಹಚ್ಚಿ ಬೇವು-ಬೆಲ್ಲಾ ತಿಂದು, ಹೋಳಿಗೆಯ ರುಚಿ ನೋಡಿದ್ದವರು ಇಂದು ಬಗೆ ಬಗೆಯ ಮಾಂಸಾಹಾರವನ್ನ ಮಾಡಿ ಮನೆಮಂದಿಯೆಲ್ಲರು ಸೇರಿ ಹಬ್ಬ ಮಾಡ್ತಾರೆ. ಮಾಂಸಾಹಾರ ಅಂದ್ಮೇಲೆ ಅಲ್ಲಿ ಕುರಿ, ಮೇಕೆ ಮಾಂಸ ಇಲ್ಲ ಎನ್ನುವಂತಿಲ್ಲ.
ಹೊಸತೊಡಕಿಗಾಗಿ ರಾಜ್ಯದಿಂದ ಮಾತ್ರವಲ್ಲ ಹೊರ ರಾಜ್ಯದಿಂದಲೂ ಕುರಿ ಮೇಕೆಗಳು ಬಂದಿದ್ದು, ಕೆಜಿ ಮಟನ್ ಮಾಂಸಕ್ಕೆ 800 ಇದ್ದದ್ದು, 900 ರವರಗೆ ಆಗಿದೆ.
ಚಿಕನ್, ಮಟನ್ ಖರೀದಿಗೆ ಬೆಳಗ್ಗೆಯೇ ಮಾಂಸದಂಗಡಿಯಲ್ಲಿ ಜನರ ದಂಡು ಇತ್ತು. ಜನರು ಮುಗಿಬಿದ್ದು ಮಾಂಸ ಖರೀದಿಸಿದರು. ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಗುಡ್ಡೆ ಮಾಂಸ ಮಾರಾಟ ಮಾಡಲಾಯಿತು.
ನಿನ್ನೆ ರಂಜನ್ ಹಬ್ಬ ಬೇರೆ. ಹಾಗಾಗಿ ಮಟನ್‌ಗೆ ಭಾರೀ ಬೇಡಿಕೆ ಬಂದಿದ್ದು, ಕುರಿ-ಮೇಕೆಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ನಾಟಿ ಮರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಂದು ಮತ್ತು ನಾಳೆ ಎರಡು ದಿನ ಹೆಚ್ಚಿನ ವ್ಯಾಪಾರ ಕೂಡ ಆಗುವ ನೀರಿಕ್ಷೆ ಇದ್ದು, ಈಗಾಗಲೇ ಮಾಂಸ ವ್ಯಾಪಾರಿಗಳು ಹಬ್ಬಕ್ಕಾಗಿ ಕುರಿ-ಮೇಕೆಗಳನ್ನ ರೈತರಿಂದ ಖರೀದಿಸಿದ್ದಾರೆ. ರೈತರು ಸಹ ಎರಡು ಹಬ್ಬ ಒಟ್ಟಿಗೆ ಬಂದಿರುವುದರಿಂದ ಹೆಚ್ಚಿನ ಲಾಭಕ್ಕೆ ಮರಿಗಳನ್ನ ಮಾರಾಟ ಮಾಡ್ತಿದ್ದಾರೆ.
ಹೊಸತೊಡಕಿಗಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರ, ಮಾಗಡಿ, ರಾಮನಗರ, ಗೌರಿಬಿದನೂರು ಸೇರಿದಂತೆ ಇತರೆ ಭಾಗದಿಂದ ಕುರಿ ಮೇಕೆಗಳು ಬೆಂಗಳೂರಿನ ಮಾಂಸದಂಗಡಿಗೆ ಬಂದಿದೆ.
ಬೆಂಗಳೂರು: ಡಿಸೇಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ (Mutton) 100 ರೂ. ಇದ್ದದ್ದು 500 ರೂ. ಆದ್ರೆ ತಗೋತೀರ… ಒಂದು ಸರ್ಕಾರದ ತೀರ್ಮಾನಕ್ಕೆ ಈ ರೀತಿ ಮಾತಾಡೋದು ಸರಿನಾ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy,) ಪ್ರಶ್ನಿಸಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ಕುರಿತು ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಗೂ ಟಿಕೆಟ್ ದರ ಏರಿಕೆಗೂ ಸಂಬಂಧ ಇಲ್ಲ. ದರ ಪರಿಷ್ಕರಣೆ ಆಗಿ 10 ರಿಂದ 15 ವರ್ಷ ಆಗಿದೆ. ನೀವು ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದ್ರೆ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ – ಆರೋಪಿ ಬಂಧನ
ಆಂಧ್ರ, ಕೇರಳ, ತೆಲಂಗಾಣದಲ್ಲಿ ನಮಗಿಂತಲೂ ಹೆಚ್ಚಾಗಿ ಏರಿಕೆ ಮಾಡಿ ಮಾಡಿದ್ದಾರೆ. ಆದ್ರೆ ನಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಅಲ್ಲದೇ 7ನೇ ವೇತನ ಆಯೋಗದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಹೀಗೆ ಮಾಡಿದಾಗ, ಸಂಸ್ಥೆ ಚೆನ್ನಾಗಿ ನಡೆಯಬೇಕು ಅಂದ್ರೆ, ಗ್ರಾಮೀಣ ಪ್ರದೇಶಕ್ಕೆ ಸೇವೆ ಒದಗಿಸಬೇಕು, ಸಂಸ್ಥೆಗೆ ಮೂಲ ಸೌಕರ್ಯ ಕೊಡಬೇಕು ಅಂದ್ರೆ ದರ ಏರಿಕೆ ಅನಿವಾರ್ಯ. 2-3 ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು
ಇನ್ನೂ ಸಂಕ್ರಾಂತಿಗೆ ಸರ್ಕಾರ ಇರಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಬಾರಿ ದೇವೇಗೌಡರು ಈ ಸರ್ಕಾರ ಇರಲ್ಲ ಅಂತಿದ್ದರು. ಅಪ್ಪನ ಚಾಳಿ ಮಗನಿಗೆ ಬಂದಿದೆ. ಸರ್ಕಾರವನ್ನು ಕುಮಾರಸ್ವಾಮಿ ನಿರ್ಧಾರ ಮಾಡ್ತಾರಾ..? ಜನರು ತೀರ್ಮಾನ ಮಾಡೋದು. ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ನಮಗೆ ಜನರ ಸರ್ಟಿಫಿಕೇಟ್ ಅಷ್ಟೇ ಬೇಕು. ಮೂರು ಚುನಾವಣೆಗಳಲ್ಲಿ ಜನ ಏನು ತೀರ್ಪು ಕೊಟ್ರು? ನೀವೇ ಇದರ ಬಗ್ಗೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ – ಪ್ರಯಾಣಿಕರಿಗೆ ಗುಲಾಬಿ ಕೊಟ್ಟು ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಲುಲ್ಲಕ ವಿಚಾರಕ್ಕಾಗಿ ಮದುವೆಗಳು (Marriage Cancel) ರದ್ದಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅಂಥದ್ದೇ ಘಟನೆಯೊಂದು ನಡೆದು ಹೋಗಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಹೌದು. ವಧುವಿನ ಕಡೆಯವರು ಊಟದ ಮೆನುವಿನಲ್ಲಿ ಮಟನ್ ಬೋನ್ ಮ್ಯಾರೋ (Mutton Bone Marrow) ಸೇರಿಸಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ನಿಜಾಮಾಬಾದ್‍ನ ವಧು ಹಾಗೂ ಜಗ್ತಿಯಾಳ್ ಮೂಲದ ವರನಿಗೂ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಕಳೆದ ನವೆಂಬರ್ ತಿಂಗಳಲ್ಲಿ ವಧುವಿನ ಮನೆಯಲ್ಲಿ ನೆರವೇರಿತ್ತು. ಆದರೆ ಇದೀಗ ಸಣ್ಣ ವಿಚಾರವೊಂದಕ್ಕೆ ಮದುವೆಯೇ ರದ್ದಾಗಿದೆ.
ನಿಶ್ಚಿತಾರ್ಥದ (Engagement) ಬಳಿಕ ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ಆದರೆ ಈ ಮೆನುವಿನಲ್ಲಿ ಮಟನ್ ಐಟಮ್ ಇರಲಿಲ್ಲ. ಇದನ್ನು ಗಮನಿಸಿದ ವರನ ಕಡೆಯವರು ಮಟನ್ ಬೇಕು ಎಂದು ಹಠಕ್ಕೆ ಬಿದ್ದರು. ಈ ಸಂಬಂಧ ಎರಡೂ ಮನೆಯವರಿಗೂ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ವರನ ಕುಟುಂಬದವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ವಧುವಿನ ಕಡೆಯವರು ನಮಗೆ ಅವಮಾನ ಮಾಡಿದರೆಂದು ಹೇಳಿ ವರನ ಕಡೆಯವರು ಆಕ್ರೋಶಗೊಂಡರು.
ವಧುವಿನ ಕಡೆಯವರು ಉದ್ದೇಶಪೂರ್ವಕವಾಗಿಯೇ ಮಟನ್ ಕರ್ರಿ ಮಾಡಿಲ್ಲ ಎಂದು ವರನ ಕಡೆಯವರು ಆರೋಪಿಸಿದರು. ಈ ಜಗಳ ತಾರಕಕ್ಕೇರಿ ಕೊನೆಗೆ ಮದುವೆಯನ್ನೇ ರದ್ದು ಮಾಡುವುದಾಗಿ ನಿರ್ಧಾರ ಮಾಡಲಾಯಿತು.
– ಕೋಳಿ, ಕುರಿ, ಮೇಕೆ ಸಾಕಬೇಕಿಲ್ಲ; ಮಾಂಸ ಮಾರೋಕೆ ಕೊಯ್ಯುವ ಹಾಗೂ ಇಲ್ಲ – ಏನಿದು ವಿಜ್ಞಾನದ ಚಮತ್ಕಾರ?
ನೀವು ಅಂಗಡಿಯಲ್ಲಿ ಕಟ್ ಮಾಡಿದ ಚಿಕನ್ (Chicken), ಮಟನ್ (Mutton), ಫೋರ್ಕ್ (Pork), ಬೀಫ್ (Beef), ಸೀಫುಡ್ (Seafood) ಮಾಂಸವನ್ನು ಖರೀದಿಸಿ ತಂದು ಅಡುಗೆ ಮಾಡಿ ಸವಿದಿದ್ದೀರಿ. ಎಂದಾದರೂ ಪ್ರಯೋಗಾಲಯದಲ್ಲಿ ಉತ್ಪಾದಿಸುವ ಮಾಂಸವನ್ನು ತಿಂದಿದ್ದೀರಾ? ಪ್ರಯೋಗಾಲಯದಲ್ಲಿ ಮಾಂಸವೇ? ಇದು ಕೇಳುವುದಕ್ಕೇ ವಿಚಿತ್ರ ಅನಿಸುತ್ತೆ ಅಲ್ವಾ!? ಹೌದು.. ಕೇಳೋಕೆ ವಿಚಿತ್ರ ಎನಿಸಿದರೂ, ಈ ಬಗ್ಗೆ ಚರ್ಚೆಯೊಂದು ಶುರುವಾಗಿದೆ.
ಈ ಜಗತ್ತಿನಲ್ಲಿ ಮಾಂಸಾಹಾರಿಗಳ ಸಂಖ್ಯೆ ಜಾಸ್ತಿಯೇ ಇದೆ. ಕೋಳಿ, ಕುರಿ, ಮೇಕೆ, ಮೀನು, ಹಸು ಸಾಕುವುದು ಮತ್ತು ಅವುಗಳನ್ನು ಕೊಂದು ತಿನ್ನುವುದು ಸಾಮಾನ್ಯ. ಈಗಿನ ಕಾಲದಲ್ಲಿ ಇವೆಲ್ಲವನ್ನೂ ಸಾಕಿ ಬೆಳೆಸೋದು ತುಂಬಾ ಕಷ್ಟ. ಹೀಗಾಗಿಯೇ ಹೈನುಗಾರಿಕೆ ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಏನೇ ಆಗಲಿ.. ಇದಕ್ಕೆ ಅಪಾರ ಬಂಡವಾಳ ಬೇಕು. ಬಂಡವಾಳ ಹೂಡಿ ಪ್ರಾಣಿಗಳನ್ನು ಸಾಕುತ್ತೇನೆಂದರೆ ಶುಚಿತ್ವ ಹಾಗೂ ಜಾಗತಿಕ ತಾಪಮಾನ ಸಂಕಷ್ಟವನ್ನೂ ಎದುರಿಸಬೇಕಾಗುತ್ತೆ. ಈ ಎಲ್ಲಾ ತಾಪತ್ರಯಗಳೇ ಬೇಡ. ಲ್ಯಾಬ್‌ನಲ್ಲೇ ಮಾಂಸ ಉತ್ಪಾದಿಸಿದ್ರೆ ಹೇಗೆ? ತಂತ್ರಜ್ಞಾನ ಮೂಲಕ ಹೀಗೆ ಮಾಡಿದ್ರೆ ಹೈನುಗಾರಿಕೆಯಿಂದ ಹಿಡಿದು ಮಾಂಸ ಉತ್ಪಾದನೆವರೆಗಿನ ಪ್ರಕ್ರಿಯೆಗೆ ಇತಿಶ್ರಿ ಹಾಡಬಹುದಲ್ಲವೇ? ಈ ದೃಷ್ಟಿಕೋನದಲ್ಲಿ ಚರ್ಚೆ ಶುರುವಾಗಿದ್ದು, ಅಳಿದು ಹೋಗಿರುವ ಉಣ್ಣೆಯ ಬೃಹತ್‌ಗಾತ್ರದ ಆನೆಗಳಿಂದ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ
ಅರೆ! ಈ ಆನೆಗೂ ಮನುಷ್ಯರು ಸೇವಿಸುವ ಮಾಂಸಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟಬಹುದು. ಖಂಡಿತ ಸಂಬಂಧ ಇದೆ. ಅಂಗಡಿಗಳಲ್ಲಿ ಮಾಂಸ ಖರೀದಿಸಿ ತಂದು ಮನೆಯಲ್ಲಿ ಅಡುಗೆ ಮಾಡಿ ತಿನ್ನುತ್ತಿದ್ದವರಿಗೆ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಪ್ರಯೋಗಾಲಯದಲ್ಲೇ ಮಾಂಸವನ್ನು ಉತ್ಪಾದಿಸಿ ಕೊಡಬಹುದೇ ಎಂಬ ಬಗ್ಗೆ ಚರ್ಚೆಯೊಂದು ಶುರುವಾಗಿದೆ. ಆಸ್ಟ್ರೇಲಿಯಾದ ಸ್ಟಾರ್ಟ್‌ಅಪ್ ವೋವ್ (Australian Startup Vow) ಕಂಪನಿಯ ಹೊಸ ಅನ್ವೇಷಣೆಯೇ ಈ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಏನದು ಅನ್ವೇಷಣೆ? ಪ್ರಯೋಗಾಲಯದಲ್ಲಿ ಮಾಂಸ ಉತ್ಪಾದನೆ ಹೇಗೆ? ಬನ್ನಿ ತಿಳಿಯೋಣ.
ಲ್ಯಾಬ್‌ನಲ್ಲಿ ಮಾಂಸದ ಚೆಂಡು!
ಆಸ್ಟ್ರೇಲಿಯನ್ ಸ್ಟಾರ್ಟ್‌ಅಪ್ ವೊವ್, ಅಳಿವಿನಂಚಿನ ಉಣ್ಣೆಯ ಬೃಹದ್ಗಜದಿಂದ (ವೂಲಿ ಮ್ಯಾಮತ್ – ಒಂದು ಜಾತಿಯ ಆನೆ) ಆನುವಂಶಿಕ ಅನುಕ್ರಮವನ್ನು ಬಳಸಿಕೊಂಡು ಮಾಂಸದ ಉಂಡೆಯನ್ನು (Meatball) ಮಾಡಿದೆ. ಇದು ವಾಲಿಬಾಲ್‌ಗಿಂತ ಸ್ವಲ್ಪ ಚಿಕ್ಕ ಗಾತ್ರದಲ್ಲಿದೆ. ವೂಲಿ ಮ್ಯಾಮತ್ (woolly mammoth) ಮಾಂಸದ ಚೆಂಡನ್ನು ಗಾಜಿನ ಬಾಕ್ಸ್‌ನಲ್ಲಿ ಸಂಗ್ರಹಿಸಿಡಲಾಗಿದ್ದು, ಆಮ್‌ಸ್ಟರ್‌ಡ್ಯಾಮ್‌ನ ವಸ್ತುಸಂಗ್ರಹಾಲಯದಲ್ಲಿ ಅನಾವರಣಗೊಳಿಸಲಾಗಿದೆ. ಇದನ್ನೂ ಓದಿ: PublicTV Explainer: ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ – ಯಾಕೆ ಗೊತ್ತಾ?
ಇದು ಒಂದು-ಆಫ್ ಸೃಷ್ಟಿಯಾಗಿದ್ದರೂ, ಬಹುಶಃ ಫುಡ್-ಟೆಕ್ ಕಂಪನಿಗೆ ಪ್ರಚಾರವನ್ನು ಗಳಿಸಬಹುದು, ಸಂಸ್ಥಾಪಕ ಟಿಮ್ ನೊಕೆಸ್ಮಿತ್ ಎಪಿಗೆ ಮಾಮತ್ ಮೀಟ್‌ಬಾಲ್ ಮೂಲಕ, ಕಂಪನಿಯು ಜಾಗತಿಕ ಮಾಂಸ ಸೇವನೆಯ ಬಗ್ಗೆ ಸಂಭಾಷಣೆಯನ್ನು ಪ್ರಾರಂಭಿಸಲು ಆಶಿಸಿದೆ ಎಂದು ಹೇಳಿದರು.
ಉಣ್ಣೆಯ ಆನೆ ಮಾಂಸ ಲ್ಯಾಬ್‌ನಲ್ಲಿ ತಯಾರಾಗಿದ್ದು ಹೇಗೆ?
ಪ್ರಾಣಿಗಳ ಜೀವಕೋಶಗಳಿಂದ ಇದನ್ನು ತಯಾರಿಸಲಾಗುತ್ತದೆ. ಅದನ್ನು ಉತ್ಪಾದಿಸಲು ಪ್ರಾಣಿಗಳನ್ನು ಕೊಲ್ಲುವ ಅಗತ್ಯವಿರಲ್ಲ. ಪ್ರಾಣಿಗಳ DNA ಯನ್ನು ಬಳಸಿ ಪ್ರಯೋಗಾಲಯದಲ್ಲಿ ಮಾಂಸದ ರುಚಿ ಮತ್ತು ವಿನ್ಯಾಸದಲ್ಲೇ ಮರುಸೃಷ್ಟಿಸಲಾಗುತ್ತೆ. ಹೀಗೆ ಬೆಳೆಸಿದ ಮಾಂಸವನ್ನು ಕಲ್ಚರ್ಡ್ ಅಥವಾ ಸೆಲ್-ಆಧಾರಿತ ಮಾಂಸ ಎಂದೂ ಕರೆಯುತ್ತಾರೆ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?
ವೊವ್ ಕಂಪನಿಯವರು ಕ್ವೀನ್‌ಲ್ಯಾಂಡ್ ವಿಶ್ವವಿದ್ಯಾಲಯದ ಆಸ್ಟ್ರೇಲಿಯನ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಇಂಜಿಯರಿಂಗ್‌ನ ಪ್ರಾಧ್ಯಾಪಕ ಅರ್ನ್ಸ್ ವೊಲ್ವೆಟಾಂಗ್ ಅವರೊಂದಿಗೆ ಈ ಹೊಸ ಅನ್ವೇಷಣೆ ಮಾಡಿದ್ದಾರೆ. ತಯಾರಾದ DNA ಅನುಕ್ರಮವನ್ನು ನಂತರ ಮಯೋಬ್ಲಾಸ್ಟ್ (ಸ್ನಾಯು ಕೋಶಗಳಿಗೆ ಭ್ರೂಣದ ಪೂರ್ವಗಾಮಿ) ಸ್ಟೆಮ್ ಸೆಲ್‌ಗಳಲ್ಲಿ ಇರಿಸಲಾಯಿತು. ಇದು ಪ್ರಯೋಗಾಲಯದ ಪರಿಸ್ಥಿತಿಗಳಲ್ಲಿ ಪುನರಾವರ್ತನೆಗೊಂಡು ಸುಮಾರು 20 ಶತಕೋಟಿ ಜೀವಕೋಶಗಳಿಗೆ ಬೆಳೆಯುತ್ತೆ. ನಂತರ ಅದನ್ನು ಕಂಪನಿಯು ಮ್ಯಾಮತ್ ಮಾಂಸದ ಚೆಂಡು ರಚಿಸಲು ಬಳಸಿತು. ‘ಈ ಪ್ರಕ್ರಿಯೆ ಸುಲಭವೂ, ವೇಗವೂ ಆಗಿತ್ತು. ನಾವು ಈ ಪ್ರಕ್ರಿಯೆಯನ್ನು ಒಂದೆರಡು ವಾರಗಳಲ್ಲಿ ಮಾಡಿದ್ದೇವೆ. ಮ್ಯಾಮತ್‌ಗೆ ಬದಲಾಗಿ ಡೋಡೋ ಹಕ್ಕಿಯ ಮಾಂಸವನ್ನು ಉತ್ಪಾದಿಸುವ ಆಲೋಚನೆ ನಮಗಿತ್ತು. ಆದರೆ ಅದಕ್ಕೆ ಬೇಕಾದ ಡಿಎನ್‌ಎ ಅನುಕ್ರಮಗಳು ಅಸ್ತಿತ್ವದಲ್ಲಿಲ್ಲ’ ಎಂದು ಪ್ರೊಫೆಸರ್ ವೊಲ್ವೆಟಾಂಗ್ ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯಲ್ಲಿ ಮಾಂಸ ಉದ್ಯಮದ ಪಾತ್ರವೇನು?
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಜಾಗತಿಕವಾಗಿ ಮಾಂಸ ಸೇವಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. 1960 ರ ದಶಕದ ಆರಂಭದಿಂದಲೂ ಮಾಂಸಾಹಾರಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಹೀಗಾಗಿ ಜಾಗತಿಕ ಮಾಂಸ ಉದ್ಯಮವು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ.
ಹಸುಗಳು ತಿನ್ನುವ ಹುಲ್ಲು, ಹಿಂಡಿ ಮತ್ತಿತರ ಆಹಾರ ಪದಾರ್ಥಗಳು ಜೀರ್ಣವಾದ ಬಳಿಕ ಅದರಿಂದ ಮಿಥೇನ್ ಅನಿಲ ಉತ್ಪತ್ತಿಯಾಗುತ್ತದೆ. ಹಸುಗಳ ಉಸಿರು ಮತ್ತು ತೇಗಿನ ಮೂಲಕ ಅವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಕಾರ್ಬನ್ ಡಯಾಕ್ಸೈಡ್‌ನಿಂದ ಉಂಟಾಗುವ ತಾಪಮಾನಕ್ಕಿಂತ ಹೆಚ್ಚು ಅಂದರೆ, 28 ಪ್ರತಿಶತದಷ್ಟು ತಾಪಮಾನ ಹಸುಗಳು ಹೊರಸೂಸುವಿಕೆ ಮಿಥೇನ್ ಉಂಟಾಗುತ್ತಿದೆ.
ಲ್ಯಾಬ್ ಉತ್ಪಾದಿತ ಮಾಂಸದಿಂದ ಸಿಗುತ್ತಾ ಪರಿಹಾರ?
ಲ್ಯಾಬ್ ಉತ್ಪಾದಿತ/ಸಂಸ್ಕರಿಸಿದ ಮಾಂಸವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಜಾಗತಿಕ ಮಾಂಸ ಉತ್ಪಾದನೆಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೀಫ್ (ಗೋಮಾಂಸ), ಫೋರ್ಕ್ (ಹಂದಿಮಾಂಸ), ಚಿಕನ್, ಸೀಫುಡ್‌ನ್ನು ಲ್ಯಾಂಬ್‌ನಿಂದ ಉತ್ಪಾದಿಸಿದರೆ ತಾಪಮಾನ ಏರಿಕೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಇದು ಸಾಂಪ್ರದಾಯಿಕ ಪ್ರಾಣಿ ಕೃಷಿಯಿಂದ (ಹೈನುಗಾರಿಕೆ) ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಮ್ಮ ಹವಾಮಾನ ಬದಲಾವಣೆಯ ಗುರಿಯನ್ನು ಸಾಧಿಸಬಹುದು. ಜೊತೆಗೆ ಮಾಂಸಕ್ಕಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪೂರೈಸಬಹುದು ಎಂದು ಗುಡ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥಾಪಕ ಸೆರೆನ್ ಕೆಲ್ ತಿಳಿಸಿದ್ದಾರೆ.
ಭೂಮಿ, ನೀರು ಬೇಕಿಲ್ಲ
ಲ್ಯಾಬ್‌ನಿಂದ ಮಾಂಸ ಉತ್ಪಾದಿಸುವುದಾದರೆ, ಹೈನುಗಾರಿಕೆಗೆ ಬೇಕಾಗುವ ಭೂಮಿ, ನೀರು ಬಳಕೆಯ ಅಗತ್ಯವಿರುವುದಿಲ್ಲ. ಜಾನುವಾರ ಸಾಕಾಣಿಕೆಗೆ ಸೂಕ್ತ ಭೂಮಿ ಮತ್ತು ನೀರು ಬೇಕಾಗುತ್ತದೆ. ಜೊತೆಗೆ ನಿರ್ವಹಣೆಯೂ ಕಷ್ಟಕರವಾಗಿರುತ್ತದೆ. ಕಾಲಕಾಲಕ್ಕೆ ಜಾನುವಾರುಗಳಿಗೆ ನೀರು, ಸೊಪ್ಪು, ಹುಲ್ಲು ನೀಡಬೇಕು. ಆದರೆ ಲ್ಯಾಬ್ ಉತ್ಪಾದಿತ ಮಾಂಸ ಯೋಜನೆಗೆ ಇದ್ಯಾವುದರ ಅಗತ್ಯ ಬರಲ್ಲ. ಮಿಥೇನ್ ಹೊರಸೂಸುವಿಕೆಯೂ ಇರುವುದಿಲ್ಲ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್‌ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?
ಒಟ್ಟಾರೆ ಹೇಳುವುದಾದರೆ, ವೋವ್ಸ್ ಕಂಪನಿಯ ವೂಲಿ ಮ್ಯಾಮತ್ ಮಾಂಸದ ಚೆಂಡುಗಳಂತಹ ಯೋಜನೆಗಳು ಗಮನ ಸೆಳೆದಿದ್ದು, ಲ್ಯಾಬ್‌ನಲ್ಲಿ ಮಾಂಸ ಉತ್ಪಾದಿಸುವ ಸಾಧ್ಯತೆಗಳ ಕುರಿತು ಹೆಚ್ಚು ಚರ್ಚೆಯಾಗಲು ಕಾರಣವಾಗಿದೆ.
ಒಂದೇ ಶೈಲಿಯ ನಾನ್‍ವೆಜ್ ಮಸಾಲೆ ತಿದ್ದು ಬೋರ್ ಆಗಿದ್ರೆ, ಇಂದು ನಾವು ಹೇಳಿಕೊಡುವ ರೆಸಿಪಿ ಟ್ರೈ ಮಾಡಿ. ಏಕೆಂದರೆ ಈ ರೆಸಿಪಿ ಸಿಂಪಲ್ ಆಗಿದ್ದು, ಮಿಲ್ಟ್ರಿ ಹೋಟೆಲ್ ಶೈಲಿಯಲ್ಲಿಯೇ ನ್ಯಾಚುರಲ್ ಆಗಿ ಇರುತ್ತೆ.
ಮಾಡುವ ವಿಧಾನ:
* ಮೇಕೆ ಮಾಂಸದ ತಲೆಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.
* ಸಣ್ಣ ಬಟ್ಟಲಿನಲ್ಲಿ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಮೇಕೆ ಮಾಂಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ 30 ನಿಮಿಷಗಳ ಕಾಲ ಬಿಡಿ.
* ನಂತರ ಇಂದು ಬಾಣಲೆಗೆ ತುಪ್ಪವನ್ನು ಹಾಕಿ ಅದು ಕರಗಿದ ನಂತರ, ಈರುಳ್ಳಿ ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿ.
* ಅದಕ್ಕೆ ಮಸಾಲೆಯುಕ್ತ ಮೇಕೆ ಮಾಂಸದ ತಲೆಯನ್ನು ಸೇರಿಸಿ ನೀರು ಹಾಕಿ. 35 ನಿಮಿಷಗಳ ಕಾಲ ಕುಕ್ ಮಾಡಿ.
* ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚೆನ್ನಾಗಿ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
– ನಿಮ್ಮ ನೆಚ್ಚಿನ ‘ತಲೆ ಮಾಂಸದ ಸಾರು’ ಬಡಿಸಲು ಸಿದ್ಧವಾಗಿದ್ದು, ಮುದ್ದೆ, ಅನ್ನ, ರೊಟ್ಟಿ ಜೊತೆ ಬಡಿಸಿ.
Live Tv
[brid partner=56869869 player=32851 video=960834 autoplay=true]
ಇಂದು ನಾನ್‍ವೆಜ್ ಪ್ರಿಯರಿಗೆ ಊಟದ ಜೊತೆಗೆ ಏನಾದರೂ ಗರಿಗರಿಯಾಗಿ ಕುರುಕುಲು ತಿಂಡಿ ತಿನ್ನಬೇಕು ಎಂದು ಆಸೆ ಆಗುತ್ತಿರುತ್ತೆ. ಅದಕ್ಕೆ ನಾವು ಸಿಂಪಲ್ ಮತ್ತು ಗರಿಗರಿಯಾಗಿ ಹೇಗೆ ‘ಮಟನ್ ಕೀಮಾ ವಡಾ’ ಮಾಡುವುದು ಎಂದು ಹೇಳಿಕೊಡುತ್ತೇವೆ.
ಬೇಕಾಗಿರುವ ಪದಾರ್ಥಗಳು:
* ಕಟ್ ಮಾಡಿದ ಮಟನ್ – 500 ಗ್ರಾಂ
* ಸಣ್ಣದಾಗಿ ಕಟ್ ಮಾಡಿದ ಈರುಳ್ಳಿ – 1 ಕಪ್
* ಬೆಳ್ಳುಳ್ಳಿ – 10 ರಿಂದ 12
* ಶುಂಠಿ – 1/2 ಇಂಚು
* ಲವಂಗ – 4
* ದಾಲ್ಚಿನ್ನಿ – 2
* ಕಾಳುಮೆಣಸು – 1/2 ಟೀಸ್ಪೂನ್
* ಹಸಿರು ಮೆಣಸಿನಕಾಯಿಗಳು – 3-4
* ಉಪ್ಪು – 1 ಟೀಸ್ಪೂನ್
* ಕಡ್ಕೆ ಹಿಟ್ಟು – 1/4 ಕಪ್
* ಬೇಯಿಸಿದ ಮೊಟ್ಟೆ – 1
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ಪುದೀನಾ – 10 ರಿಂದ 15 ಎಲೆ
* ಸಬ್ಬಸಿಗೆ ಸೊಪ್ಪು – 1 ಕಪ್
* ಅಡುಗೆ ಸೋಡಾ – 1 ಪಿಂಚ್
* ಡೀಪ್ ಫ್ರೈ ಮಾಡಲು ಎಣ್ಣೆ – 2 ಕಪ್
ಮಾಡುವ ವಿಧಾನಗಳು:
* ಮಿಕ್ಸರ್ ಜಾರ್ ತೆಗೆದುಕೊಂಡು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಲವಂಗ, ದಾಲ್ಚಿನ್ನಿ, ಕಾಳುಮೆಣಸು, ಹಸಿರು ಮೆಣಸಿನಕಾಯಿಗಳು, ಉಪ್ಪು ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
* ಈ ಪೇಸ್ಟ್‍ಗೆ ಕಟ್ ಮಾಡಿದ ಮಟನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಹದವಾದ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ, ಮೊಟ್ಟೆಯನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಕಟ್ ಮಾಡಿದ ಕೊತ್ತಂಬರಿ ಸೊಪ್ಪು, ಪುದೀನಾ, ಸಬ್ಬಸಿಗೆ ಸೊಪ್ಪು ಮತ್ತು ಈರುಳ್ಳಿ ಸೇರಿಸಿ, ಅಗತ್ಯವಿದ್ದರೆ ಸ್ವಲ್ಪ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ ಮತ್ತೆ ಸರಿಯಾಗಿ ಮಿಶ್ರಣ ಮಾಡಿ.
* ಡೀಪ್ ಫ್ರೈ ಮಾಡಲು ಎಣ್ಣೆಯನ್ನು ಬಿಸಿ ಮಾಡಿ. ಅದು ಬಿಸಿಯಾದ ನಂತರ ಮಟನ್ ಮಿಶ್ರಣವನ್ನು ವಡಾ ಆಕಾರಕ್ಕೆ ಚಪ್ಪಟೆ ಮಾಡಿ.
* ಎಣ್ಣೆ ಬಿಸಿಯಾದ ನಂತರ ಮಧ್ಯಮ ಉರಿಯಲ್ಲಿ ಒಮ್ಮೆಗೆ 4 ರಿಂದ 5 ವಡಾ ಹಾಕಿ ಡೀಪ್ ಫ್ರೈ ಮಾಡಿ.
* ಈ ಮಿಶ್ರಣವು ಗೋಲ್ಡನ್ ಬ್ರಾನ್ ಬರುವವರೆಗೂ ಎರಡೂ ಬದಿಗಳಿಗೆ ಗರಿಗರಿಯಾಗುವವರೆಗೆ ಫ್ರೈ ಮಾಡಿ.
* ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳಲು ಟೀಶ್ಯೂ ಮೇಲೆ ವಡಾಗಳನ್ನು ಹಾಕಿ.
– ನಿಮ್ಮ ಮುಂದೆ ರುಚಿಕರವಾದ ಬಿಸಿ ಬಿಸಿ ‘ಮಟನ್ ಕೀಮಾ ವಡಾ’ ಸಿದ್ಧವಾಗಿದೆ. ಇದನ್ನು ಚಟ್ನಿಯೊಂದಿಗೆ ಸವಿಯಿರಿ.
ಮಾಂಸಾಹಾರಿ ಪ್ರಿಯರಿಗೆ ಚಿಕನ್ ಎಷ್ಟು ಇಷ್ಟವೂ ಹಾಗೇ ಮಟನ್ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲಿಯೂ ಬೋನ್ ಲೆಸ್ ಮಟನ್ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೇ ವಿತ್ ಬೋನ್‌ಗಿಂತ ಬೋನ್ ಲೆಸ್ ಮಟನ್‍ಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲಿಯೂ ಇಂದು ನಾವು ಹೇಳಿಕೊಡುತ್ತಿರುವ ‘ಬೋನ್ ಲೆಸ್ ಮಟನ್ ಫ್ರೈ’ ಮಾಡಿದರೆ ಮನೆಯವರೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಅನುಮಾನವಿಲ್ಲ.
ಬೇಕಾಗುವ ಪದಾರ್ಥಗಳು:
* ಬೋನ್ ಲೆಸ್ ಮಟನ್ – 1/2 ಕೆಜಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
* ಅರಿಶಿನ ಪುಡಿ – 1 ಪಿಂಚ್
* ನೀರು – 2 ಕಪ್
* ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
* ಧನಿಯಾ ಪುಡಿ – 1/2 ಟೀಸ್ಪೂನ್
* ಕಪ್ಪು ಮೆಣಸು ಪುಡಿ – 1/2 ಟೀಸ್ಪೂನ್
* ಗರಂ ಮಸಾಲಾ ಪುಡಿ – 1/4 ಟೀಸ್ಪೂನ್
* ಕರಿಬೇವು – 10 ಎಲೆಗಳು
* ತುಪ್ಪ – 1 ಟೀಸ್ಪೂನ್
* ಎಣ್ಣೆ – 2 ಟೀಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
* ಪ್ರೆಶರ್ ಕುಕ್ಕರ್‌ಗೆ ಮಟನ್ ಸಣ್ಣ ತುಂಡುಗಳಾಗಿ ಕಟ್ ಮಾಡಿ ಅರಿಶಿನ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ನೀರು ಹಾಕಿ ಬೇಯಿಸಿ.
* ಬೇಯಿಸಿದ ಮಟನ್ ಕಡಾಯಿಯಲ್ಲಿ ಬಿಸಿ ಮಾಡಿ. ಅದಕ್ಕೆ ಅರಿಶಿನ ಪುಡಿ ಮತ್ತು 1/4 ಟೀಚಮಚ ಉಪ್ಪನ್ನು ಸೇರಿಸಿ ಬಿಸಿ ಮಾಡಿ.
* ನಂತರ ಕೆಂಪು ಮೆಣಸಿನ ಪುಡಿ, ಧನ್ಯ ಪುಡಿ, ಕರಿಮೆಣಸಿನ ಪುಡಿ ಮತ್ತು ಗರಂ ಮಸಾಲಾ ಪುಡಿ ಸೇರಿಸಿ.
* ಮಟನ್ ಮಸಾಲ ಜೊತೆಗೆ ಸರಿಯಾಗಿ ಬೇರೆಯುವವರೆಗೂ ಹುರಿಯಿರಿ. ಈ ಹಂತದಲ್ಲಿ ತುಪ್ಪವನ್ನು ಸೇರಿಸಿ ಮತ್ತು ನಿಧಾನವಾಗಿ ರೋಸ್ಟ್ ಮಾಡಿ 10 ನಿಮಿಷಗಳ ಕಾಲ ಫ್ರೈ ಮಾಡಿ.
* ಕಡಿಮೆ ಉರಿಯಲ್ಲಿ ಬೇಯಿಸುವಾಗ ಸ್ವಲ್ಪ ಎಣ್ಣೆಯನ್ನು ಸೇರಿಸಿ ಹುರಿಯಿರಿ. ಈ ಹಂತದಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ.
ನಾನ್ವೆಜ್ ಪ್ರಿಯರಿಗೆ ಚಿಕನ್ ತಿನಿಸುಗಳಿಗಿಂತಲೂ ಮಟನ್ ನಿಂದ ಸಿದ್ಧವಾಗುವ ಖಾದ್ಯಗಳೇ ಹೆಚ್ಚು ಪ್ರಿಯವಾಗುತ್ತದೆ. ಕೆಲವರು ತುಪ್ಪದ ಮೂಳೆಗೆ ಮಾರುಹೋಗುತ್ತಾರೆ, ಇನ್ನೂ ಕೆಲವರಿಗೆ ತಲೆ ಮಾಂಸ ಇಷ್ಟವಾಗುತ್ತದೆ. ಆದರೆ ಬ್ಲಡ್ ಫ್ರೈ ಅತ್ಯಂತ ವಿಶೇಷ. ಸಾಮಾನ್ಯವಾಗಿ ಇದನ್ನು ಲಾಕಿ ಫ್ರೈ ಎಂದೂ ಕರೆಯುತ್ತಾರೆ. ಪ್ರತಿಷ್ಟಿತ ಹೋಟೆಲ್‌ಗಳಲ್ಲೂ ಬೇಡಿಕೆಯಿರುವ ಮಟನ್ ಬ್ಲಡ್‌ಫ್ರೈ ಅನ್ನು ಈಗ ಮನೆಯಲ್ಲೇ ಮಾಡಿ ಸವಿಯಬಹುದಾದ ಸರಕ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
* ಮಟನ್ ರಕ್ತ – 700 ಗ್ರಾಂ
* ಎಳ್ಳಿನ ಎಣ್ಣೆ – 2 ಟೀಸ್ಪೂನ್
* ಕರಿಬೇವಿನ ಎಲೆಗಳು – 1 ಚಿಗುರು
* ಕಟ್ ಮಾಡಿದ ಸಾಂಬಾರ್ ಈರುಳ್ಳಿ – 1 ಕಪ್
* ಹಸಿರು ಮೆಣಸಿನಕಾಯಿ – 4
* ಪುಡಿಮಾಡಿದ ಜೀರಿಗೆ – 2 ಟೀಸ್ಪೂನ್
* ಪುದೀನ ಎಲೆಗಳು – 10
* ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ತುರಿದ ತೆಂಗಿನಕಾಯಿ – 1/3 ಕಪ್
ಮಾಡುವ ವಿಧಾನ:
* ಮಟನ್ ರಕ್ತವನ್ನು ತೆಗೆದುಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿ.
* ರಕ್ತವನ್ನು ಪಕ್ಕಕ್ಕೆ ಇಟ್ಟು. ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿನಕಾಯಿ, ಪುದೀನಾ ಎಲೆಗಳನ್ನು ರೆಡಿಯಾಗಿ ಇಟ್ಟುಕೊಳ್ಳಿ.
* ಬಾಣಲೆಗೆ 2 ಚಮಚ ಎಣ್ಣೆಯನ್ನು ಹಾಕಿ. ಅದು ಬಿಸಿಯಾದ ನಂತರ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ.
* ನಂತರ ಈ ಮಿಶ್ರಣಕ್ಕೆ ಮಟನ್ ರಕ್ತವನ್ನು ಸೇರಿಸಿ ಬೇಯಲು ಬಿಡಿ. ಅಡುಗೆ ಮಾಡಲು ಪ್ರಾರಂಭಿಸಿದ ನಂತರ, ಕೆಂಪು ಬಣ್ಣದಿಂದ ಗಾಢ ಬೂದು ಬಣ್ಣಕ್ಕೆ ಬದಲಾಗುತ್ತದೆ.
* ಬೇಯಿಸಿದ ರಕ್ತದಿಂದ ಎಲ್ಲ ನೀರು ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿ. ಇದು ಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈಗ, ಪುಡಿಮಾಡಿದ ಜೀರಿಗೆ ಸೇರಿಸಿ.
* ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇತ್ತೀಚಿಗೆ ನಾನ್ವೆಜ್ ಆಹಾರ ಪ್ರಿಯರು ದಿನಕ್ಕೊಂದು ಬಗೆಯ ಖಾದ್ಯಗಳನ್ನು ಹುಡುಕುವುದು ಸಹಜ. ಕೆಲವರಂತೂ ನೆಚ್ಚಿನ ಖಾದ್ಯಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ಅರಸಿ ಹೋಗುತ್ತಾರೆ. ವಾರಾಂತ್ಯ ಬಂತೆಂದರೆ ಸಾಕು ವಿಭಿನ್ನ ಖಾದ್ಯಗಳನ್ನೂ ಸಿದ್ಧಪಡಿಸಿ ಗ್ರಾಹಕರನ್ನು ಸೆಳೆಯಲು ಹೋಟೆಲ್ ಮಂದಿ ಕಾಯುತ್ತಿರುತ್ತಾರೆ. ಇದರಲ್ಲಿ ಮಟನ್ ಬ್ರೈನ್ ಫ್ರೈ (ಮೆದುಳು ಫ್ರೈ)ಸಹ ಒಂದು. ಆದರೀಗ ನೀವು ಯಾವುದೇ ಹೋಟೆಲ್‍ಗಳಿಗೆ ಅಲೆದಾಡಬೇಕಿಲ್ಲ. 15 ರಿಂದ 20 ನಿಮಿಷ ಸಮಯವಿದ್ದರೆ ಸಾಕು ಮನೆಯಲ್ಲೇ ಬ್ರೈನ್ ಫ್ರೈ ಮಾಡಿ ಸವಿಯಬಹುದು. ಅದರ ಚುಕುಟು ಮಾಹಿತಿ ಇಲ್ಲಿದೆ.
ಬೇಕಾಗಿರುವ ಪದಾರ್ಥಗಳು:
* ಮಟನ್ ಬ್ರೈನ್ – 1
* ಕಟ್ ಮಾಡಿದ ಈರುಳ್ಳಿ – 1 ಕಪ್
* ಹಸಿರು ಮೆಣಸಿನಕಾಯಿ – 1
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1/2 ಟೀಸ್ಪೂನ್
* ಕರಿಬೇವಿನ ಎಲೆಗಳು – ಅರ್ಧ ಕಪ್
* ಜೀರಿಗೆ – 1/4 ಟೀಸ್ಪೂನ್
* ಲವಂಗ – 3
* ಏಲಕ್ಕಿ – 1
ಮಾಡುವ ವಿಧಾನ:
* ಮೊದಲು ಚೆನ್ನಾಗಿ ಮೆದುಳನ್ನು ತೊಳೆಯಿರಿ. ನಂತರ ಬೇರೆ ಪಾತ್ರೆಯಲ್ಲಿ ನೀರು, ಸ್ವಲ್ಪ ಉಪ್ಪು ಮತ್ತು ಮೆದುಳು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ಪಕ್ಕದಲ್ಲಿ ಇಡಿ.
* ಬೇರೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆ, ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಮತ್ತು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ.
* ಅದಕ್ಕೆ ಅರಿಶಿನ, ಉಪ್ಪು, ಮೆಣಸು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಮೆದುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಮಸಾಲಾದಲ್ಲಿ ಮೆದುಳನ್ನು ಸೇರಿಸಿ. ನಂತರ ಮಸಾಲೆ ಜೊತೆ ಮೆದುಳಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಮಿಕ್ಸ್ ಮಾಡಿ.
* ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಲು ಬಿಡಿ.