Tag: ಮಜಿಲಿ

  • ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ಚಿತ್ರರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಬೆಸ್ಟ್ ಜೋಡಿಯಾಗಿ ಗಮನ ಸೆಳೆದಿರುವ ನಾಗಚೈತನ್ಯ ಮತ್ತು ಸಮಂತಾ ವೈಯಕ್ತಿಕ ಜೀವನದಲ್ಲಿ ಬೇರೆಯಾಗುವ ಮೂಲಕ ಫ್ಯಾನ್ಸ್‌ಗೆ ಶಾಕ್ ನೀಡಿದ್ದರು. ಇದೀಗ ನಾಗಚೈತನ್ಯ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಜತೆ ಮತ್ತೆ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟ ನೀಡಿರುವ ಉತ್ತರ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

    ಸಿನಿಮಾದಲ್ಲಿ ಮತ್ತು ನಿಜಜೀವನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಬೆಸ್ಟ್ ಜೋಡಿ ಎಂದೇ ಹೆಸರುವಾಸಿಯಾಗಿದ್ದರು. ಆದರೆ ಈ ಜೋಡಿಯ ಡಿವೋರ್ಸ್ ವಿಚಾರ ಇದುವರೆಗೂ ಅಭಿಮಾನಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೆ ನೀವು ಒಂದಾಗಿ ಅಂತಾ ಫ್ಯಾನ್ಸ್ ಈ ಜೋಡಿಯನ್ನ ಕೇಳಿಕೊಳ್ತಿದ್ದಾರೆ. ಆದರೆ ಈಗ ಸಂದರ್ಶನವೊಂದರಲ್ಲಿ ನಾಗಚೈತನ್ಯ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

    ಸಮಂತಾ ಜೊತೆ ನೀವು ಮತ್ತೆ ಸಿನಿಮಾ ಮಾಡುತ್ತೀರಾ ಅಂತಾ ನಿರೂಪಕಿ ಕೇಳಿದ್ದಾರೆ. ಈ ಪರಿಸ್ಥಿತಿ ಒದಗಿ ಬಂದಿದರೆ ಅದು ಹುಚ್ಚುತನವಾಗುತ್ತದೆ. ಅದು ನನಗೆ ಗೊತ್ತಿಲ್ಲ. ಇದಕ್ಕೆ ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಆನ್‌ಸ್ಕ್ರೀನ್‌ನಲ್ಲಿ ಅತ್ಯುತ್ತಮ ಕೆಮಿಸ್ಟ್ರಿ ಯಾರ ಜೊತೆ ಎಂದು ಕೇಳಿದಾಗ, ಸಮಂತಾ ಜತೆ ಎಂದು ನಾಗಚೈತನ್ಯ ಉತ್ತರಿಸಿದ್ದರು. ಇದೀಗ ಸಿನಿಮಾ ಕುರಿತಾಗಿ ನಟ ಉತ್ತರಿಸಿರುವ ವಿಚಾರ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸಮಂತಾ ಚೈತನ್ಯ ಒಟ್ಟಿಗೆ ನಟಿಸುತ್ತಾರಾ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಪತಿ ಜೊತೆ ನಟಿಸಿದ `ಮಜಿಲಿ’ ಚಿತ್ರದ ನೆನೆಪಿನಲ್ಲಿ ಸಮಂತಾ!

    ಮಾಜಿ ಪತಿ ಜೊತೆ ನಟಿಸಿದ `ಮಜಿಲಿ’ ಚಿತ್ರದ ನೆನೆಪಿನಲ್ಲಿ ಸಮಂತಾ!

    ಕ್ಷಿಣ ಭಾರತದ ಮುದ್ದಾದ ಜೋಡಿ ಅಂತಲೇ ಹೈಲೆಟ್ ಆಗಿದ್ದ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನವಾಗಿ ಕೆಲವೇ ತಿಂಗಳುಗಳೇ ಕಳೆದಿದೆ. ಖಾಸಗಿ ಜೀವನ ಪಕ್ಕಕ್ಕಿಟ್ಟು ಸಿನಿಮಾಗಳಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಪತಿಯ ಸಹವಾಸವೇ ಬೇಡ ಅಂತಾ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಜಿ ಪತಿಯ ಮೂರು ವರ್ಷಗಳ ಹಳೆಯ ನೆನಪನ್ನು ಪೋಸ್ಟ್ ಮಾಡುವ ಮೂಲಕ ಸಮಂತಾ ಸದ್ದು ಮಾಡ್ತಿದ್ದಾರೆ.

    ವಿಚ್ಛೇದನವಾಗ್ತಿದ್ದಂತೆ ಸಮಂತಾ, ಮಾಜಿ ಪತಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಆದರೆ ಈಗ ಮತ್ತೆ ಮಾಜಿ ಪತಿ ನಾಗಚೈತನ್ಯಗೆ ಸಂಬಂಧಿಸಿದ ಸ್ಟೋರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಂತ ಸ್ಯಾಮ್ ತಮ್ಮ ಖಾಸಗಿ ಜೀವನದ ಕುರಿತು ಪೋಸ್ಟ್ ಮಾಡಿಲ್ಲ. ಬದಲಾಗಿ ಮೂರು ವರ್ಷಗಳ ಹಿಂದಿನ ಸಮಂತಾ, ನಾಗಚೈತನ್ಯ ನಟಿಸಿದ್ದ `ಮಜಿಲಿ’ ಚಿತ್ರದ ಪೋಸ್ಟರ್‌ನ್ನ ಶೇರ್ ಮಾಡಿದ್ದಾರೆ.

    ನಟಿ ಸಮಂತಾ ಮೂರು ವರ್ಷಗಳ ಹಿಂದಿನ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಮಜಿಲಿ ಚಿತ್ರಕ್ಕೆ ಮೂರು ವರ್ಷಗಳು ಪೂರೈಸಿರುವ ಖುಷಿಯಲ್ಲಿ ಆ ಸಿನಿಮಾದ ಪೋಸ್ಟರ್‌ನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆ ಪೋಸ್ಟರ್‌ನಲ್ಲಿ ನಾಗಚೈತನ್ಯ ಪೋಸ್ಟರ್ ಹೈಲೆಟ್ ಆಗಿದೆ. ಇದನ್ನು ಓದಿ:ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    `ಯೇ ಮಯಾ ಚೇಸಾವೆ’, `ಮನಂ’, `ಮಜಿಲಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿರೋ ಈ ಜೋಡಿಯ ಮತ್ತೊಂದು ಹೊಸ ಚಿತ್ರ ಬರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗಿರುವಂತೆ ಸ್ಯಾಮ್ ಶೇರ್ ಮಾಡಿರೋ ಪೋಸ್ಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ನೆಚ್ಚಿನ ಜೋಡಿ ತೆರೆಯ ಮೇಲೆ ಆದರೂ ಒಂದಾಗಲಿ ಅಂತಾ ಕಾಯ್ತಿದ್ದಾರೆ.