Tag: ಮಜಾ ಟಾಕೀಸ್

  • ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

    ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

    ಕಿರುತೆರೆಯ ಅತೀ ದೊಡ್ಡ ಶೋ ‘ಬಿಗ್ ಬಾಸ್ ಕನ್ನಡ 11’ (Bigg Boss Kannada 11) ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ‘ಮಜಾ ಟಾಕೀಸ್’ ಶೋ ಮತ್ತೆ ಶುರುವಾಗುತ್ತಿದೆ ಎಂದು ಸ್ವತಃ ಸೃಜನ್ ಲೋಕೇಶ್ (Srujan Lokesh) ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

    ಟೆನ್ಷನ್ ಬಿಟ್ಟಾಕಿ ನಗೋಕೆ ರೆಡಿಯಾಗಿ ಎಂದು ಮೆಸೇಜ್ ಹೇಳುತ್ತಾ ‘ಮಜಾ ಟಾಕೀಸ್’ (Maja Talkies) ಬರುವ ಬಗ್ಗೆ ಸೃಜನ್ ಅಧಿಕೃತವಾಗಿ ತಿಳಿಸಿದ್ದಾರೆ. 2015ರಲ್ಲಿ ಆರಂಭವಾದ ಈ ಶೋ ಇನ್ನೂ ಕೆಲವೇ ದಿನಗಳಲ್ಲಿ 10 ವರ್ಷಗಳು ಪೂರೈಸಲಿದೆ. ಸೃಜನ್ ನಿರೂಪಣೆಯಲ್ಲಿ ಅಪರ್ಣಾ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ರೆಮೋ, ಇಂದ್ರಜಿತ್ ಲಂಕೇಶ್ ಸೇರಿದಂತೆ ಅನೇಕರು ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈ ಬಾರಿ ಅಪರ್ಣಾ ಅಗಲಿಕೆ ಎಲ್ಲರನ್ನೂ ಕಾಡಲಿದೆ. ಅವರು ವರಲಕ್ಷ್ಮಿ ಪಾತ್ರದ ಮೂಲಕ ಎಲ್ಲರ ಮನ ಗೆದ್ದಿದ್ದರು.

    ಇನ್ನೂ ‘ಮಜಾ ಟಾಕೀಸ್’ನಿಂದ ಸೃಜನ್ ಬ್ರೇಕ್ ಪಡೆಯುವ ನಿರ್ಧಾರ ಮಾಡಿದರು. ಈಗ ಮತ್ತೆ ಬರುವ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಆದರೆ ಯಾವಾಗ ಎಂಬುದು ರಿವೀಲ್ ಆಗಿಲ್ಲ. ಈ ಕುರಿತು ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ನ್ನಡದ ನಿರೂಪಕಿ ಅಪರ್ಣಾ (Aparna) ನಿಧನದ ಬಗ್ಗೆ ನಟ ಸೃಜನ್ ಲೋಕೇಶ್ ಸಂತಾಪ ಸೂಚಿಸಿದ್ದಾರೆ. ನಟಿಯ ಅಂತಿಮ ದರ್ಶನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತಲೇ ಇರುತ್ತದೆ ಎಂದು ಸೃಜನ್ (Srujan Lokesh) ಮಾತನಾಡಿದ್ದಾರೆ.

    ಅಪರ್ಣಾ ನಿಧನ ನಿಜಕ್ಕೂ ಬೇಸರ ಆಗಿದೆ. ಪುಟ್ಟಣ್ಣ ಕಣಗಲ್ ನಿರ್ದೇಶನದಲ್ಲಿ ಅಪರ್ಣಾ ನಟಿಸಿದ್ದಾರೆ. ನಾವು ಯಾವಾಗಲೂ ಅವರಿಗೆ ರೇಗಿಸುತ್ತಿದ್ವಿ. ಊರು ಹುಟ್ಟೋಕ್ಕೂ ಮುಂಚೆ ಹುಟ್ಟಿದವರು ನೀವು ಅಂತ. ಅಂದಿನ ಕಾಲದಿಂದಲೂ ಆ್ಯಕ್ಟಿಂಗ್ ಮಾಡ್ತಿದ್ದಾರೆ. ಎಷ್ಟೊಂದು ವರ್ಷಗಳ ಸಾಧನೆ ಅವರದ್ದು. ನಮ್ಮ ಚಿತ್ರರಂಗದಲ್ಲಿ ಲೆಜೆಂಡರಿ ಕಲಾವಿದೆ ಅಪರ್ಣಾ ಎಂದು ಸೃಜನ್ ಲೋಕೇಶ್ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹೂವು, ಹಾರ ತರದಂತೆ ಮನವಿ ಮಾಡಿದ ಅಪರ್ಣಾ ಪತಿ ನಾಗರಾಜ್ ವಸ್ತಾರೆ

    ಮೆಟ್ರೋದಲ್ಲೂ, ಫೋನ್‌ನಲ್ಲೂ ಎಲ್ಲಾ ಕಡೆ ಅಪರ್ಣಾದೇ ವಾಯ್ಸ್ ಕೇಳಿಸುತ್ತೆ. ಅವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ. ಅವರು ಎಂದಿಗೂ ಲೆಜೆಂಡಿರಿ ಅಭಿನೇತ್ರಿ, ನಿರೂಪಕಿ ಎಂದಿದ್ದಾರೆ. ನಮಗೆಲ್ಲಾ ಮಾರ್ಗದರ್ಶನ ಕೊಟ್ಟವರು. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಸೃಜನ್‌ ಭಾವುಕರಾಗಿದ್ದಾರೆ.

    ಕಳೆದ ವಾರ ಅಷ್ಟೇ ಅವರ ಜೊತೆ ಮಾತನಾಡಿದ್ದೇ. ನಾನು ಮಜಾ ಟಾಕೀಸ್ ನೋಡಿದಾಗಲೆಲ್ಲಾ ನಾನು ಖುಷಿಯಾಗಿ ಇರುತ್ತೇನೆ ಎಂದು ಅಪರ್ಣಾ ನನ್ನ ಬಳಿ ಹೇಳಿಕೊಂಡಿದ್ದರು. ಅವರು ಇನ್ನಿಲ್ಲ ಅನ್ನೋ ನೋವು ಯಾವಾಗಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ.

    ಅಂದಹಾಗೆ, ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಜು.11ರಂದು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.

  • ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಕಿಶೋರ್ ಗೆ ಮಹತ್ವದ ಪಾತ್ರ

    ಶಿವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ಕಿಶೋರ್ ಗೆ ಮಹತ್ವದ ಪಾತ್ರ

    ತಿಂಗಳಲ್ಲಿ ಕೇವಲ ವಿವಾದದ ಮೂಲಕವೇ ಸದ್ದು ಮಾಡುತ್ತಿರುವ ನಟ ಕಿಶೋರ್ (Kishor), ಇದೀಗ ಅಭಿಮಾನಿಗಳಿಗೆ ಕೂಲ್ ಆಗಿರುವಂತಹ ಸುದ್ದಿಯನ್ನು ನೀಡಿದ್ದಾರೆ. ಶಿವರಾಜ್ ಕುಮಾರ್ (Shivraj Kumar) ನಟನೆಯ ಹೊಸ ಸಿನಿಮಾಗೆ ಅವರು ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದು, ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಮಂಜುಳಾ ಶಿವಾರ್ಜುನ್ (Manjula Shivarjun) ನಿರ್ಮಾಣ ಮಾಡುತ್ತಿರುವ ನೂತನ ಚಿತ್ರ ಇದಾಗಿದೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು. ಈ ಸಂಸ್ಥೆಯಿಂದ ಹಿಂದೆ ‘ಶಿವಾರ್ಜುನ’ ಚಿತ್ರ ನಿರ್ಮಾಣವಾಗಿತ್ತು.

    ಕನ್ನಡ ಕಿರುತೆರೆ ಲೋಕದ ಯಶಸ್ವಿ ಟಾಕ್ ಶೋ ‘ಮಜಾಟಾಕೀಸ್’ (Maja Talkies) ಹಾಗೂ ಸೃಜನ್ ಲೋಕೇಶ್ ಅಭಿನಯದ ‘ಎಲ್ಲಿದೆ ಇಲ್ಲಿತನಕ’ ಚಿತ್ರದ ನಿರ್ದೇಶಕ ತೇಜಸ್ವಿ ಕೆ ನಾಗ್ (Tejasw) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರ ಎರಡನೇ ಸಿನಿಮಾ ಇದಾಗಿದ್ದು, ಕಿರುತೆರೆ ಲೋಕದಲ್ಲಿ ತೇಜಸ್ವಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಇವರು ಭರವಸೆಯನ್ನೂ ಮೂಡಿಸಿದ್ದರು.‌

    ಸಿನಿಮಾ ಕುರಿತು ಮಾತನಾಡಿರುವ ತೇಜಸ್ವಿ ‘ಶಿವಣ್ಣ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜಕುಮಾರ್ ಅವರು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟವಾಗುವಂತೆ ಕಥೆ ಬರೆದುಕೊಳ್ಳಲಾಗಿದೆ’ ಎಂದಿದ್ದಾರೆ.

    ಶಿವರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದು ನಿರ್ದೇಶಕ ತೇಜಸ್ವಿ ಶುಭ ಹಾರೈಸಿ ಸೂಚನೆ ನೀಡಿದ್ದರು. ವೇದ ಬಿಡುಗಡೆ ವೇಳೆಯಲ್ಲಿ ಆ ಚಿತ್ರಕ್ಕೂ ಶುಭ ಕೋರಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಸಿನಿಮಾ ಮಾಡುವ ಕುರಿತು ಮಾತನಾಡಿದ್ದಾರೆ. ಚಿತ್ರೋದ್ಯಮದಲ್ಲಿ ಇದೊಂದು ಹೊಸ ಬಗೆಯ ಸಿನಿಮಾವಾಗಲಿದೆ ಎಂದು ಅವರು ಭರವಸೆಯನ್ನೂ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಅನೌನ್ಸ್

    ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಅನೌನ್ಸ್

    ಸ್ಯಾಂಡಲ್ ವುಡ್ ಹೆಸರಾಂತ ನಟ ಶಿವರಾಜ್ ಕುಮಾರ್ (Shivraj Kumar) ಅಭಿನಯದ ‘ವೇದ’ ಚಿತ್ರ ಬಹುತೇಕ ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ಹೊಸಚಿತ್ರದ ಬಗ್ಗೆ ಮಾಹಿತಿ ಬಂದಿದೆ. ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಮಂಜುಳಾ ಶಿವಾರ್ಜುನ್ (Manjula Shivarjun) ನಿರ್ಮಾಣ ಮಾಡುತ್ತಿರುವ ಈ ನೂತನ ಚಿತ್ರದ ನಾಯಕರಾಗಿ  ಶಿವಣ್ಣ ಅಭಿನಯಿಸಲಿದ್ದಾರೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು. ಈ ಸಂಸ್ಥೆಯಿಂದ ಹಿಂದೆ ‘ಶಿವಾರ್ಜುನ’ ಚಿತ್ರ ನಿರ್ಮಾಣವಾಗಿತ್ತು.

    ಕನ್ನಡ ಕಿರುತೆರೆ ಲೋಕದ ಯಶಸ್ವಿ ಟಾಕ್ ಶೋ ಮಜಾಟಾಕೀಸ್ (Maja Talkies) ಹಾಗೂ ಸೃಜನ್ ಲೋಕೇಶ್ (Srujan Lokesh) ಅಭಿನಯದ ‘ಎಲ್ಲಿದೆ ಇಲ್ಲಿತನಕ’ ಚಿತ್ರದ ನಿರ್ದೇಶಕ ತೇಜಸ್ವಿ (Tejaswi) ಕೆ ನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರ ಎರಡನೇ ಸಿನಿಮಾ ಇದಾಗಿದ್ದು, ಕಿರುತೆರೆ ಲೋಕದಲ್ಲಿ ತೇಜಸ್ವಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಮೂಲಕ ಇವರು ಭರವಸೆಯನ್ನೂ ಮೂಡಿಸಿದ್ದರು.‌

    ಸಿನಿಮಾ ಕುರಿತು ಮಾತನಾಡಿರುವ ತೇಜಸ್ವಿ ‘ಶಿವಣ್ಣ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ.  ಶಿವರಾಜ್ ಕುಮಾರ್  ಅವರು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟವಾಗುವಂತೆ ಕಥೆ ಬರೆದುಕೊಳ್ಳಲಾಗಿದೆ’ ಎಂದಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಶಿವರಾಜ್ ಕುಮಾರ್ ಹುಟ್ಟು ಹಬ್ಬದ ದಿನದಂದು ನಿರ್ದೇಶಕ ತೇಜಸ್ವಿ ಶುಭ ಹಾರೈಸಿ ಸೂಚನೆ ನೀಡಿದ್ದರು. ವೇದ ಬಿಡುಗಡೆ ವೇಳೆಯಲ್ಲಿ ಆ ಚಿತ್ರಕ್ಕೂ ಶುಭ ಕೋರಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಇದೀಗ ಸಿನಿಮಾ ಮಾಡುವ ಕುರಿತು ಮಾತನಾಡಿದ್ದಾರೆ. ಚಿತ್ರೋದ್ಯಮದಲ್ಲಿ ಇದೊಂದು ಹೊಸ ಬಗೆಯ ಸಿನಿಮಾವಾಗಲಿದೆ ಎಂದು ಅವರು ಭರವಸೆಯನ್ನೂ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಸ್ಕ್ ಧರಿಸೋದು ಹೇಗೆ- ಕ್ಯೂಟ್ ಆಗಿ ತೋರಿಸಿದ ಶ್ವೇತಾ ಚಂಗಪ್ಪ ಮುದ್ದು ಮಗ

    ಮಾಸ್ಕ್ ಧರಿಸೋದು ಹೇಗೆ- ಕ್ಯೂಟ್ ಆಗಿ ತೋರಿಸಿದ ಶ್ವೇತಾ ಚಂಗಪ್ಪ ಮುದ್ದು ಮಗ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿರುವುದು ತಿಳಿದೇ ಇದೆ. ಅವರ ಮುದ್ದು ಮಗನ ತುಂಟಾಟದ ವೀಡಿಯೋಗಳನ್ನು ಸಹ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಒಂದೊಳ್ಳೆ ವೀಡಿಯೋ ಹಂಚಿಕೊಳ್ಳುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

     

    View this post on Instagram

     

    A post shared by Swetha Changappa (@swethachangappa)

    ಶ್ವೇತಾ ಚಂಗಪ್ಪ ತಮ್ಮ ಮುದ್ದು ಮಗ ಜಿಯಾನ್ ಅಯ್ಯಪ್ಪ ಮಾಸ್ಕ್ ಧರಿಸುವ ವೀಡಿಯೋವನ್ನು ಹಂಚಿಕೊಂಡಿದ್ದು, ಈ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಜಿಯಾನ್ ಮಾಸ್ಕ್ ಹಾಕುವ ಬಗೆಯನ್ನು ಸಖತ್ ಕ್ಯೂಟ್ ಆಗಿ ತೋರಿಸಿದ್ದು, ಅವರ ಅಭಿಮಾನಿಗಳ ಗಮನ ಸೆಳೆದಿದೆ.

     

    View this post on Instagram

     

    A post shared by Swetha Changappa (@swethachangappa)

    ಮಾಸ್ಕ್ ಹೇಗೆ ಹಾಕ್ಕೋಬೇಕು ಜಿಯಾನ್ ಎಂದು ಶ್ವೇತಾ ಕೇಳುತ್ತಾರೆ, ಆಗ ಮೂಗು ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ತೋರಿಸಿದ್ದಾನೆ. ಆಗ ಶ್ವೇತ ವೇರಿ ಗುಡ್ ಜಿಯಾನ್ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಜಿಯಾನ್ ಕೆಕೆ ಹಾಕಲು ಶುರು ಮಾಡುತ್ತಾನೆ.

     

    View this post on Instagram

     

    A post shared by Swetha Changappa (@swethachangappa)

    ಈ ಪೋಸ್ಟ್ ಗೆ ಕನ್ನಡದಲ್ಲೇ ಸಾಲುಗಳನ್ನು ಬರೆದಿರುವ ಶ್ವೇತಾ ಚಂಗಪ್ಪ, ಮಕ್ಕಳು ನಾವು ಏನು ಹೇಳಿ ಕೊಡ್ತೀವಿ ಅದನ್ನು ಕಲಿಯೋದಿಲ್ಲ, ನಾವು ಏನು ಮಾಡ್ತೀವಿ ಅದನ್ನು ನೋಡಿ ಕಲಿಯುತ್ತಾರೆ, ಎಷ್ಟು ನಿಜ ಅಲ್ವಾ ಈ ಮಾತು ಎಂದು ಪ್ರಶ್ನಿಸಿದ್ದಾರೆ. ಶ್ವೇತಾ ಅವರ ಇನ್‍ಸ್ಟಾಗ್ರಾಂನಲ್ಲಿ ಬಹುತೇಕ ಜಿಯಾನ್ ವೀಡಿಯೋಗಳೇ ತುಂಬಿದ್ದು, ತುಂಟಾಟವಾಡುತ್ತಿರುವ ಕ್ಷಣಗಳನ್ನು ಪೋಸ್ಟ್ ಮಾಡಲಾಗಿದೆ.

     

    View this post on Instagram

     

    A post shared by Swetha Changappa (@swethachangappa)

    ಮಗು ಜನಸಿದ ಬಳಿಕ ಶ್ವೇತಾ ಚಂಗಪ್ಪ ಇತ್ತೀಚೆಗೆ ಮಜಾ ಟಾಕೀಸ್‍ಗೆ ಮರಳಿದ್ದು, ಸೆಟ್‍ಗೆ ರಾಣಿ ಎಂಟ್ರಿಯಿಂದಾಗಿ ಸಖತ್ ಕಳೆ ಬಂದಿದೆ. ಈ ಬಗ್ಗೆ ಮಾತನಾಡಿರುವ ಶ್ವೇತಾ ಚಂಗಪ್ಪ, ಮಜಾ ಟಾಕೀಸ್‍ನ ಇತ್ತೀಚಿನ ಎಪಿಸೋಡ್ ನೋಡುತ್ತಿದ್ದಾಗ ನನ್ನ ಮಗ ಟಿವಿಯಲ್ಲಿ ಗುರುತಿಸಿ ಚೆಪ್ಪಾಳೆ ತಟ್ಟಿದ. ಇದು ನನಗೆ ತುಂಬಾ ವಿಶೇಷ, ಸಂತೋಷದ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ತೆರೆಯ ಮೇಲಿನ ಪಾತ್ರವನ್ನು ನನ್ನ ಮಗ ಗುರುತಿಸಬಲ್ಲ, ಅದ್ಭುತವೆನಿಸಿ, ತುಂಬಾ ಮೆಚ್ಚುಗೆಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಅಮ್ಮ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

    ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಶೋದಿಂದ ಬ್ರೇಕ್ ಪಡೆದಿರುವ ಶ್ವೇತಾ ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇಂದು ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿಯೂ ಲಭಿಸಿದೆ.

     

    View this post on Instagram

     

    Hi my dear friends ❣️I’m very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade????. U guys have LIKED ME, LOVED ME,n BLESSED ME for the kind of roles I have been doing in the television & cinemas???????? on this SPECIAL DAY being my HUSBAND’S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A “MOTHER”???? With the BLESSINGS of GOD, Me and My Hubby are gonna welcome our BUNDLE OF JOY very soon???? Need all your BEST WISHES and BLESSINGS to us and our family???? like u guys have always shown????????. LOVE YOU All????????. Photography-@aashish__photography ography. thank u soo much aashish for the beautiful pics.im happy that my first ever maternity shoot is done by u???? Makeup and hair- @karishmauthappa_makeup p. Karishma u rock girl…. amazing job. Love u???? Outfit- @paramparika_vastra . U guys are too good. And made my outfit look really cute and beautiful on pics ???? Tiyara- @sscreations719 ons719 thank u guys for the lovely tiyara which is adding it’s magic for these pics????. Love u all guys????. #happy #goodnews @bangalore_times #maternity #journey #godsgift #blessed????. #lovemylife #loveuzindagi,????

    A post shared by Swetha Changappa (@swethachangappa) on

  • ಮಜಾ ಟಾಕೀಸ್ ಮುಗೀತು, ಸೃಜನ್ ಮುಂದಿದೆ ಇನ್ನೊಂದು ಡ್ರೀಮ್

    ಮಜಾ ಟಾಕೀಸ್ ಮುಗೀತು, ಸೃಜನ್ ಮುಂದಿದೆ ಇನ್ನೊಂದು ಡ್ರೀಮ್

    ಬೆಂಗಳೂರು: ಚಂದನವನದ ಮಾತಿನಮಲ್ಲ ಸೃಜನ್ ನಿರೂಪಣೆಯ ಮಜಾಟಾಕೀಸ್ ಗ್ರಾಂಡ್ ಫಿನಾಲೆ ಶೋ ಪ್ರಸಾರಗೊಳ್ಳಲು ರೆಡಿಯಾಗಿದೆ. ಮಜಾಟಾಕೀಸ್ ನಿಂದ ಬ್ರೇಕ್ ತೆಗೆದುಕೊಂಡ ಸೃಜನ್ ಲೋಕೇಶ್ ಮುಂದೆ ಏನು ಮಾಡುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

    ಮಜಾ ಟಾಕೀಸ್ ಈ ಹೆಸರು ಕೇಳುತ್ತಿದ್ದರೆ ಹಲವರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಕಾಮಿಡಿ ಕಚಗುಳಿಯ ಮೂಲಕ ಎಲ್ಲರ ಮನೆ-ಮನ ತಲುಪಿರೋ ಮಜಾಟಾಕೀಸ್ ಗೆ ಸ್ಯಾಂಡಲ್‍ವುಡ್‍ನ ಹಲವು ಸೂಪರ್ ಸ್ಟಾರ್‍ಗಳು ಕೂಡ ಫಿದಾ ಆಗಿದ್ದರು.

    ಮುಂದಿನ ಪ್ಲ್ಯಾನ್: ಫೈನಲ್ ಎಪಿಸೋಡ್ ಕಂಪ್ಲೀಟ್ ಮಾಡಿರೋ ಸೃಜನ್ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ರಿಲ್ಯಾಕ್ಸ್ ಬಳಿಕ ಬೆಳ್ಳಿತೆರೆಗೆ ಹೀರೋ ಕಮ್ ಪ್ರೊಡ್ಯೂಸರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸೃಜನ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳಿಗೆ ಬಂಡವಾಳ ಹಾಕಲಿದ್ದಾರೆ. ಸಿನಿಮಾಗಳಿಗೆ ಹೆಚ್ಚು ಮಹತ್ವ ಕೊಡಲಿದ್ದು, ನಟನೇ ಜೊತೆ ನಿರ್ಮಾಣ ಕೂಡ ಮಾಡಲಿದ್ದಾರೆ.

    280 ಎಪಿಸೋಡ್ ಕಂಪ್ಲೀಟ್ ಮಾಡಿರೋ ಮಜಾಟಾಕೀಸ್ ಈಗ ಗ್ರಾಂಡ್ ಫಿನಾಲೆ ಹಂತವನ್ನು ತಲುಪಿದೆ. ಈ ವಾರ ಮಜಾಟಾಕೀಸ್‍ನ ಫೈನಲ್ ಎಪಿಸೋಡ್ ಪ್ರಸಾರವಾಗಲಿದ್ದು ಇದಾದ ಬಳಿಕ ಯಶಸ್ವಿ ಕಾರ್ಯಕ್ರಮಕ್ಕೆ ಒಂದು ಬ್ರೇಕ್ ಸಿಗಲಿದೆ.

    ಜಡ್ಜ್ ಆಗ್ತಾರ ಸೃಜನ್: ಕಾರ್ಯಕ್ರಮದ ನಿರೂಪಕರಾಗಿ ಕಮಾಲ್ ಮಾಡಿರುವ ಸೃಜನ್ ಈಗ ಜಡ್ಜ್ ಆಗಿ ಪ್ರಮೋಷನ್ ಸಿಗಲಿದೆ. ಹೊಸ ಹಾಸ್ಯ ಕಾರ್ಯಕ್ರಮ `ಕಾಮಿಡಿ ಟಾಕೀಸ್’ನಲ್ಲಿ ತೀರ್ಪುಗಾರನಾಗಿ ಕೆಲಸ ಮಾಡಲಿದ್ದಾರೆ. ಈ ಕಾಮಿಡಿ ಟಾಕೀಸ್ ಕಾರ್ಯಕ್ರಮವನ್ನು ಕಿರುತೆರೆ ನಟ ವಿಜಯ್ ಸೂರ್ಯ ನಿರೂಪಣೆ ಮಾಡಲಿದ್ದಾರೆ. ಗುಳಿಕೆನ್ನೆ ಚೆಲುವೆ ರಚಿತಾ ಕೂಡ ಸೃಜನ್‍ಗೆ ಸಾಥ್ ಕೊಡಲಿದ್ದಾರೆ ಎಂದು ಕೇಳಿಬರುತ್ತಿದೆ. ಇದರ ಜೊತೆ `ಸದಾ ನಿಮ್ಮೊಂದಿಗೆ’ ಅನ್ನೊ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.