Tag: ಮಗ್ ಕೇಕ್

  • ಓವನ್ ಬೇಡ – ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿ ಚಾಕ್ಲೇಟ್ ಮಗ್ ಕೇಕ್

    ಓವನ್ ಬೇಡ – ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿ ಚಾಕ್ಲೇಟ್ ಮಗ್ ಕೇಕ್

    ವನ್ ಇಲ್ಲದೇ ಕೇಕ್ (Cake Without Oven) ಮಾಡೋದು ಕಷ್ಟ. ಆದರೂ ಅಡುಗೆ ಪ್ರಿಯರು ಓವನ್ ಇಲ್ಲದೇ ಕೇಕ್ ಮಾಡುವ ಇತರ ಸುಲಭ ವಿಧಾನಗಳನ್ನು ಹುಡುಕಿದ್ದಾರೆ. ಇಂದು ನಾವು ಪ್ರೆಶರ್ ಕುಕ್ಕರ್‌ನಲ್ಲಿ (Pressure Cooker) ಮಗ್ ಕೇಕ್ (Mug Cake) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ತುಂಬಾ ರುಚಿಯಾದ ಎಗ್‌ಲೆಸ್ ಚಾಕ್ಲೇಟ್ ಮಗ್ ಕೇಕ್ (Eggless Chocolate Mug Cake) ಅನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮೈದಾ – 6 ಟೀಸ್ಪೂನ್
    ಕೋಕೋ ಪುಡಿ – 3 ಟೀಸ್ಪೂನ್
    ಸಕ್ಕರೆ – 3 ಟೀಸ್ಪೂನ್
    ಅಡುಗೆ ಸೋಡಾ – ಕಾಲು ಟೀಸ್ಪೂನ್
    ಉಪ್ಪು – ಚಿಟಿಕೆ
    ಹಾಲು – 6 ಟೀಸ್ಪೂನ್
    ಎಣ್ಣೆ – 3 ಟೀಸ್ಪೂನ್
    ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
    ಚಾಕ್ಲೇಟ್ ಚಿಪ್ 2 ಟೀಸ್ಪೂನ್
    ಕುಕ್ಕರ್‌ನಲ್ಲಿ ಬೇಯಿಸಲು:
    ಉಪ್ಪು – ಒಂದೂವರೆ ಕಪ್ ಇದನ್ನೂ ಓದಿ: ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ಒಂದೂವರೆ ಕಪ್ ಉಪ್ಪು ಹಾಕಿ ವಿಸಿಲ್ ಇಡದೇ ಕುಕ್ಕರ್ ಮುಚ್ಚಳವನ್ನು ಮುಚ್ಚಿ, 5-10 ನಿಮಿಷ ಬಿಸಿ ಮಾಡಿ.
    * ಈ ನಡುವೆ ಓವನ್ ಸೇಫ್ ಮಗ್ ತೆಗೆದುಕೊಂಡು, ಅದರಲ್ಲಿ ಮೈದಾ, ಕೋಕೋ ಪೌಡರ್, ಸಕ್ಕರೆ, ಅಡುಗೆ ಸೋಡಾ, ಹಾಗೂ ಚಿಟಿಕೆ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಮಿಶ್ರಣಕ್ಕೆ ಹಾಲು, ಎಣ್ಣೆ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ, ಗಂಟಿಲ್ಲದಂತೆ ಮಿಕ್ಸ್ ಮಾಡಿ ಬ್ಯಾಟರ್ ತಯಾರಿಸಿ.
    * ಈಗ ಕೇಕ್ ಬ್ಯಾಟರ್ ಮೇಲೆ ಚಾಕ್ಲೇಟ್ ಚಿಪ್ ಹಾಕಿ 20 ನಿಮಿಷ ಬೇಯಿಸಿ.
    * ಈದೀಗ ಎಗ್‌ಲೆಸ್ ಚಾಕ್ಲೆಟ್ ಮಗ್ ಕೇಕ್ ತಯಾರಾಗಿದ್ದು, ಬೇಕೆಂದರೆ ಮೇಲ್ಗಡೆ ಚಾಕ್ಲೇಟ್ ಸಾಸ್ ಹಾಕಿ, ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ಸ್ಟೆಪ್‍ಗಳಲ್ಲಿ ಮಾಡಿ ಹೊಸ ವರ್ಷಕ್ಕೆ ಮಗ್ ಕೇಕ್

    ನಾಲ್ಕು ಸ್ಟೆಪ್‍ಗಳಲ್ಲಿ ಮಾಡಿ ಹೊಸ ವರ್ಷಕ್ಕೆ ಮಗ್ ಕೇಕ್

    ಬಾರಿ ಹೊಸ ವರ್ಷಾಚರಣೆಗೆ ಕೊರೊನಾ ಅಡ್ಡಗಾಲು ಹಾಕಿದೆ. ಕೊರೊನಾ ಜೊತೆ ಹೊಸ ತಳಿಯ ಆತಂಕ ಸಹ ಹೆಚ್ಚಾಗಿದೆ. ಮನೆಯಲ್ಲಿಯೇ ಇದ್ದು ಕುಟುಂಬಸ್ಥರ ಜೊತೆ ನೀವೇ ಕೇಕ್ ತಯಾರಿಸಿ 2021ನ್ನು ಸ್ವಾಗತಿಸಿಕೊಳ್ಳಿ. ಬೇಕರಿಯಿಂದ ಬಣ್ಣ ಬಣ್ಣದ ಕೆಮಿಕಲ್, ಕ್ರೀಮ್ ಲೇಪಿತ ಕೇಕ್ ತರುವ ಬದಲು ಆರೋಗ್ಯಕರವಾಗಿ ಹೊಸ ವರ್ಷ ಬರಮಾಡಿಕೊಳ್ಳಿ. ನಿಮಗಾಗಿ ಸರಳವಾಗಿ ಮಗ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಮೈದಾ – 1/2 ಕಪ್
    * ಮೊಟ್ಟೆ -1
    * ಸಕ್ಕರೆ – 3-4 ಸ್ಪೂನ್
    * ಹಾಲು – ಸ್ವಲ್ಪ
    * ವೆನಿಲಾ ಎಸೆನ್ಸ್- ಸ್ವಲ್ಪ
    * ಬೇಕಿಂಗ್ ಪೌಡರ್ – ಚಿಟಿಕೆ
    * ಸ್ಪ್ರಿಂಕಲ್ಸ್ – ಸ್ವಲ್ಪ
    * ಬೆಣ್ಣೆ – 2 ಸ್ಪೂನ್

    ಮಾಡುವ ವಿಧಾನ
    * 2 ಕಾಫಿ ಮಗ್‍ಗೆ ಮೊದಲು ಬೆಣ್ಣೆ ಹಚ್ಚಿ.
    * ಬಳಿಕ ಅದಕ್ಕೆ ಸ್ಪ್ರಿಂಕಲ್ಸ್ ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿ.
    * ಈಗ ಮೈಕ್ರೋವೇವ್‍ನಲ್ಲಿಟ್ಟು 1 ನಿಮಿಷಗಳ ಕಾಲ ಬೇಯಿಸಿ.
    * ಕೇಕ್ ಆದ್ಮೇಲೆ ಓವನ್‍ನಿಂದ ತೆಗೆದು ಕೇಕ್ ಮೇಲೆ ಫ್ರೆಶ್ ಕ್ರಿಮ್, ಸ್ಪ್ರಿಂಕಲ್ಸ್ ಹಾಕಿ ಸರ್ವ್ ಮಾಡಿ.

  • ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

    ಐದೇ ನಿಮಿಷದಲ್ಲಿ ಚಾಕಲೇಟ್ ಮಗ್ ಕೇಕ್ ಮಾಡೋ ವಿಧಾನ

    ಕೇಕ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಚಾಕಲೇಟ್ ಫ್ಲೇವರ್ ಅಂದ್ರೆ ಅಚ್ಚುಮೆಚ್ಚು. ಕೇಕ್ ಗಳನ್ನು ಅಂಗಡಿಯಿಂದ ತಂದು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಹೇಗೆ? ಅದರಲ್ಲೂ ಕೇವಲ 5 ನಿಮಿಷದಲ್ಲೇ ಕೇಕ್ ರೆಡಿ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಮೈದಾ ಹಿಟ್ಟು – 2 ಚಮಚ
    * ಸಕ್ಕರೆ – 4 ಚಮಚ
    * ಕೋಕೋ ಪೌಡರ್ – 2 ಚಮಚ
    * ಮೊಟ್ಟೆ – 1
    * ಹಾಲು ಅಥವಾ ಮಜ್ಜಿಗೆ – ಸ್ವಲ್ಪ
    * ವೆನಿಲ್ಲಾ ಎಸೆನ್ಸ್- 1/4 ಚಮಚ

    ಮಾಡೋ ವಿಧಾನ:

    * ಒಂದು ಬೌಲ್ ತೆಗೆದುಕೊಂಡು ಅದಕ್ಕೆ 4 ಚಮಚದಷ್ಟು ಮೈದಾ ಹಿಟ್ಟು, 4 ಚಮಚ ಸಕ್ಕರೆ, ಹಾಗೆಯೇ 2 ಚಮಚದಷ್ಟು ಕೋಕೋ ಪೌಡರ್ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತ್ರ ಈ ಹಿಟ್ಟಿಗೆ ಒಂದು ಮೊಟ್ಟೆ ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.
    * ಬಳಿಕ ಅದಕ್ಕೆ 3 ಚಮಚ ಹಾಲು ಅಥವಾ ಮಜ್ಜಿಗೆ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಂಡು ಅದರ ಮೇಲೆ 3 ಚಮಚ ವೆಜಿಟೇಬಲ್ ಆಯಿಲ್ ಬೆರೆಸಿ ಮತ್ತೆ ಮಿಕ್ಸ್ ಮಾಡಿ.
    * ಅದಾದ ಬಳಿಕ 1/4 ಚಮಚದಷ್ಟು ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ನಂತ್ರ 2-3 ಸಣ್ಣ ಸಣ್ಣ ಮಗ್ ಗಳಲ್ಲಿ ಇದನ್ನ ಹಾಕಿ ಓವೆನ್ ನಲ್ಲಿಡಿ. 2 ನಿಮಿಷದ ಬಳಿಕ ಓವೆನ್ ನಿಂದ ಹೊರತೆಗೆಯಿರಿ. ಈಗ ಚಾಕಲೇಟ್ ಮಗ್ ಕೇಕ್ ತಿನ್ನಲು ರೆಡಿ.