Tag: ಮಗ್ಗಿ

  • ಎರಡರ ಮಗ್ಗಿ ಹೇಳದ್ದಕ್ಕೆ ವಿದ್ಯಾರ್ಥಿ ಕೈಗೆ ಡ್ರಿಲ್ ಮಷಿನ್ ಇಟ್ಟ ಶಿಕ್ಷಕ

    ಎರಡರ ಮಗ್ಗಿ ಹೇಳದ್ದಕ್ಕೆ ವಿದ್ಯಾರ್ಥಿ ಕೈಗೆ ಡ್ರಿಲ್ ಮಷಿನ್ ಇಟ್ಟ ಶಿಕ್ಷಕ

    ಲಕ್ನೋ: ಎರಡರ ಮಗ್ಗಿಯನ್ನು ತಪ್ಪಾಗಿ ಹೇಳಿದ ವಿದ್ಯಾರ್ಥಿ ಕೈಯನ್ನು ಡ್ರಿಲ್ ಮಷಿನ್ (Drill Machine) ಮೂಲಕ ಶಿಕ್ಷಕ ಗಾಯಗೊಳಿಸಿರುವ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ.

    ಈ ಘಟನೆ ಕಾನ್ಪುರದ ಮಾಡೆಲ್ ಪ್ರೇಮ್ ನಗರದ (Model Prem Nagar) ಅಪ್ಪರ್ ಪ್ರೈಮರಿ ಸ್ಕೂಲ್(Upper Primary School)ನಲ್ಲಿ ನಡೆದಿದೆ. ಕೌಶಲ್ಯ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಶಾಲೆಗಳಲ್ಲಿ ತರಬೇತಿ ಪಾಠಗಳನ್ನು ನೀಡುವ ಐಬಿಟಿ ಸಂಸ್ಥೆಗೆ ಸಂಯೋಜಿತವಾಗಿರುವ ಶಿಕ್ಷಕರೊಬ್ಬರು 5ನೇ ತರಗತಿಯ ವಿದ್ಯಾರ್ಥಿ ಎರಡರ ಮಗ್ಗಿಯನ್ನು ಹೇಳಲಿಲ್ಲ ಎಂಬ ಕಾರಣಕ್ಕೆ ಡ್ರಿಲ್ ಮಷಿನ್ ಮೂಲಕ ಆತನ ಕೈಯನ್ನು ಗಾಯಗೊಳಿಸಿದ್ದಾರೆ.

    5 ನೇ ತರಗತಿಯ ವಿದ್ಯಾರ್ಥಿ ವಿವಾನ್ ಗಾಯಗೊಂಡ ವಿದ್ಯಾರ್ಥಿಯಾಗಿದ್ದು, ನಡೆದ ಘಟನೆಯನ್ನು ತನ್ನ ಪೋಷಕರ ಬಳಿ ತಿಳಿಸಿದಾಗ, ಶಾಲೆಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿ ಶಿಕ್ಷಕನನ್ನು ಅನುಜ್ ಎಂದು ಗುರುತಿಸಲಾಗಿದ್ದು, ತರಗತಿಗೆ ಡ್ರಿಲ್ ಮಷಿನ್ ತೆಗೆದುಕೊಂಡು ಬಂದಿದ್ದನು. ನಂತರ ಎರಡರ ಮಗ್ಗಿಯನ್ನು ಹೇಳಲಿಲ್ಲ ಎಂದು ಡ್ರಿಲ್ ಮಷಿನ್ ಆನ್ ಮಾಡಿ ವಿದ್ಯಾರ್ಥಿಯ ಕೈಗೆ ಸ್ಪರ್ಶಿಸಿದ್ದಾನೆ. ಇದೇ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಕೃಷ್ಣ ಎಂಬ ವಿದ್ಯಾರ್ಥಿ ಡ್ರಿಲ್ ಮಷಿನ್‍ನ ಪ್ಲಗ್ ತೆಗೆದಿದ್ದಾನೆ. ಆದರೂ ವಿವಾನ್ ಎಡಗೈಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ.

    ತಕ್ಷಣವೇ ಬಾಲಕನಿಗೆ ಸಣ್ಣಪುಟ್ಟ ಚಿಕಿತ್ಸೆ ನೀಡಿ ಶಾಲೆಯಿಂದ ಕಳುಹಿಸಲಾಗಿದೆ. ಅಲ್ಲದೇ ಶಿಕ್ಷಕಿ ಅಲ್ಕಾ ತ್ರಿಪಾಠಿ ಈ ವಿಚಾರವನ್ನು ಯಾವುದೇ ಉನ್ನತ ಅಧಿಕಾರಿಗಳಿಗೆ ತಿಳಿಸಿರಲಿಲ್ಲ. ಆದರೆ ಶುಕ್ರವಾರ ಈ ಘಟನೆ ಬಗ್ಗೆ ಪೋಷಕರು ಗಲಾಟೆ ಮಾಡಿದ ಬಳಿಕ ಮೇಲಾಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ

    ವಿಷಯ ತಿಳಿಯುತ್ತಿದ್ದಂತೆಯೇ ಬಿಎಸ್‍ಎ ಸುರ್ಜಿತ್ ಕುಮಾರ್ ಸಿಂಗ್ ಸ್ಥಳಕ್ಕೆ ಆಗಮಿಸಿ, ವಿಚಾರಣೆ ನಡೆಸಿ ಶಿಕ್ಷಕನನ್ನು ಶಾಲೆಯಿಂದ ತೆಗೆದುಹಾಕಲಾಗುತ್ತಿದೆ. ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ ಕರ್ನಾಟಕದ ಬಸ್‍ಗೆ ಕಲ್ಲು ತೂರಾಟ – ಮಿರಜ್ ಮಾರ್ಗವಾಗಿ ಸಂಚರಿಸುವ ಬಸ್‍ಗಳ ಸಂಚಾರ ಸ್ಥಗಿತ

    Live Tv
    [brid partner=56869869 player=32851 video=960834 autoplay=true]

  • ಗಣಿತವನ್ನು ಸುಲಲಿತವಾಗಿ ಅರೆದು ಕುಡಿದ ಯುವಕ- 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ

    ಗಣಿತವನ್ನು ಸುಲಲಿತವಾಗಿ ಅರೆದು ಕುಡಿದ ಯುವಕ- 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ

    ಚಿತ್ರದುರ್ಗ: ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಗಣಿತ ಕಬ್ಬಿಣದ ಕಡಲೆಯೇ ಆಗಿರುತ್ತದೆ. ಅದರಲ್ಲೂ ಮಗ್ಗಿಯಂತೂ ಕಷ್ಟದಾಯಕವಾಗಿರುತ್ತದೆ. ಆದರೆ ಕೋಟೆನಾಡಿನಲ್ಲಿ ವಿದ್ಯಾರ್ಥಿ ಮಾತ್ರ 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ ವಿಧಾನವನ್ನು ಕಂಡುಕೊಂಡಿದ್ದಾರೆ.

    ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯಲ್ಲಿನ ಹ್ಯಾಪಿ ಹೋಮ್ ಸ್ಕೂಲ್ ಮುಖ್ಯಸ್ಥರು ಹಾಗೂ ಶಿಕ್ಷಕಿಯಾಗಿರೋ ಮಾಲಾ ಅವರ ಪುತ್ರ ಸಿದ್ಧಾರ್ಥರಿಗೆ ಚಿಕ್ಕವಯಸ್ಸಿನಿಂದಲೂ ಗಣಿತದ ಬಗ್ಗೆ ಬಾರಿ ಆಸಕ್ತಿ. 6 ವರ್ಷದವನಿದ್ದಾಗಲೇ ಅಬ್ಯಾಕಸ್ ನಲ್ಲಿ ತುಂಬಾ ಫಾಸ್ಟ್ ಆಗಿದ್ದನು. ಆಗ ಓರ್ವ ವಿದ್ಯಾರ್ಥಿ 100ರ ಮಗ್ಗಿ ಹೇಳುವುದು ನೋಡಿ ಆಕರ್ಷಿತನಾಗಿದ್ದ ಈ ಯುವಕ ಕೇವಲ 1 ವಾರದ ನಂತರ 500 ವರೆಗೆ ಮಗ್ಗಿ ಹೇಳಲು ಶುರು ಮಾಡಿದ್ದಾರಂತೆ.

    ಇದೀಗ 6000 ರವರೆಗೆ ಏನೇ ಕೇಳಿದರೂ ಕ್ಷಣಾರ್ಧದಲ್ಲಿ ಫಟಾಫಟ್ ಅಂತ ಮಗ್ಗಿ ಹೇಳುತ್ತಾರೆ. ತಾನೇ ಖುದ್ದಾಗಿ 2ರಿಂದ 6,000ದವರೆಗೆ ಮಗ್ಗಿಯನ್ನು ಸುಲಭವಾಗಿ ಬರೆಯಬಲ್ಲ ವಿಧಾನವನ್ನು ಸಹ ಕಂಡು ಹಿಡಿದಿದ್ದಾರೆ. ಅದಕ್ಕೆ ಟಿಕ್ ಟ್ಯಾಕ್ ಟೂ ಅಂತ ಹೆಸರಿಟ್ಟಿದ್ದಾರೆ. ಎರಡು ಟೇಬಲ್ ಹಾಕಿ ಮಗ್ಗಿಯನ್ನು ವಿಸುವಲೇಸೇಷನ್ ನಲ್ಲಿ ಸುಲಭವಾಗಿ ಕಲಿಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಯಾವುದೇ ಮಗ್ಗಿ ಕೇಳಿದರೂ ಕ್ಷಣಾರ್ಧದಲ್ಲಿ ಹೇಳುವಂತ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಅಂತೆಯೇ ಅದೇ ವಿಧಾನವನ್ನು ಅಮ್ಮ ಕಟ್ಟಿದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಾರೆ.

    ಇದೀಗ ಬಿಬಿಎಂ ಓದುತ್ತಿರುವ ಈ ವಿದ್ಯಾರ್ಥಿಯ ಪ್ರತಿಭೆ ಕಂಡು ಖುದ್ದು ಶಿಕ್ಷಕಿ ಆಗಿರುವ ತಾಯಿಯೇ ಬೆರಗಾಗಿದ್ದಾರೆ. ಅಲ್ಲದೆ ಮಗನ ಸೂತ್ರವನ್ನೇ ಅನುಸರಿಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಆ ಮೂಲಕ ಕಬ್ಬಿಣದ ಕಡಲೆ ಆಗಿದ್ದ ಮಗ್ಗಿಯನ್ನು ಸರಳಸೂತ್ರದಲ್ಲಿ ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಇತರೆ ಶಿಕ್ಷಕರು ಸಹ ವಿದ್ಯಾರ್ಥಿಯ ಪ್ರತಿಭೆಗೆ ಶಹಬ್ಬಾಶ್ ಗಿರಿ ನೀಡಿದ್ದು, ಈ ಕ್ಷೇತ್ರದಲ್ಲಿ ಅಗಾಧವಾಗಿ ಸಾಧಿಸಿ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸಿದೆ ಎಂದು ಸಿದ್ಧಾರ್ಥ್ ತಾಯಿ ಹೇಳಿದ್ದಾರೆ.

    ಒಟ್ಟಾರೆಯಾಗಿ ಕೋಟೆನಾಡಿನ ಈ ವಿದ್ಯಾರ್ಥಿಯ ಸರಳಸೂತ್ರ ಈಗ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಅಪರೂಪದ ಪ್ರತಿಭೆಗೆ ವಿವಿಧ ಮಠ ಮಾನ್ಯಗಳು ಗೌರವಿಸಿ ಅಭಿನಂದಿಸುವ ಮೂಲಕ ಬೆನ್ನು ತಟ್ಟಿವೆ. ಪ್ರತಿಭಾವಂತ ಯುವಕನ ಕನಸು ಕೂಡ ನನಸಾಗಲಿ ಎಂಬುದು ದುರ್ಗದ ಜನರ ಆಶಯ.