Tag: ಮಗು ಕೊಲೆ

  • ಮೊಬೈಲ್ ಚಾರ್ಜರ್ ವೈರ್‌ನಿಂದ ಮಗುವಿನ ಕತ್ತು ಹಿಸುಕಿ ಹತ್ಯೆಗೈದ ಮಲತಾಯಿ!

    ಮೊಬೈಲ್ ಚಾರ್ಜರ್ ವೈರ್‌ನಿಂದ ಮಗುವಿನ ಕತ್ತು ಹಿಸುಕಿ ಹತ್ಯೆಗೈದ ಮಲತಾಯಿ!

    ವಿಜಯಪುರ: ಮೊಬೈಲ್ ಚಾರ್ಜರ್ ವೈರ್‌ನಿಂದ ಮಗುವಿನ ಕತ್ತು ಹಿಸುಕಿ ಮಲತಾಯಿಯೇ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮೊಬೈಲ್ ಚಾರ್ಜರ್‌ನಿಂದ ಕತ್ತು ಹಿಸುಕಿ ಹತ್ಯೆಗೈಯಲು ಮಲತಾಯಿ ಪ್ರಯತ್ನಿಸಿದ್ದಾಳೆ. ಘಟನೆಯಲ್ಲಿ ಇಬ್ಬರು ಮಕ್ಕಳಲ್ಲಿ ಸುಮಿತ್ ವಿನೋದ ಚವ್ಹಾಣ್ (5) ಅಸುನೀಗಿದ್ದಾನೆ. ಸಂಪತ್ ವಿನೋದ್ ಚವ್ಹಾಣ್ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

    ಮಲತಾಯಿ ಸವಿತಾ ಹತ್ಯೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿನೋದ್ ಮೊದಲನೆ ಹೆಂಡತಿ ಶಾರುಬಾಯಿ ಕಳೆದ ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದಳು. ನಂತರ ವಿನೋದ್, ಸವಿತಾಳನ್ನು ಎರಡನೇ ಮದುವೆಯಾಗಿದ್ದರು. ಇದನ್ನೂ ಓದಿ:  ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಡಾನ್ಸ್- ವೀಡಿಯೋ ವೈರಲ್

    ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಇಲಿ ವಿಷ ಹಾಕಿದ ಚಿಪ್ಸ್ ಕೊಟ್ಟು 4 ವರ್ಷದ ಮಗು ಸಾಯಿಸಿದ್ಳು ಆಶಾ ಕಾರ್ಯಕರ್ತೆ!

    ಇಲಿ ವಿಷ ಹಾಕಿದ ಚಿಪ್ಸ್ ಕೊಟ್ಟು 4 ವರ್ಷದ ಮಗು ಸಾಯಿಸಿದ್ಳು ಆಶಾ ಕಾರ್ಯಕರ್ತೆ!

    ಓಂಗೋಲ್: ಆಶಾ ಕಾರ್ಯಕರ್ತೆಯೊಬ್ಬಳು ವಿಷಪೂರಿತ ಚಿಪ್ಸ್ ನೀಡಿ 4 ವರ್ಷದ ಬಾಲಕನ್ನು ಸಾಯಿಸಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಚೀಮಕುರ್ತಿಯಲ್ಲಿ ನಡೆದಿದೆ.

    4 ವರ್ಷದ ಧನಂಜಯ್ ಮೃತಪಟ್ಟ ಮಗು. ಪೋಷಕರು ಕೆಲಸಕ್ಕೆ ಹೋಗಿದ್ದಾಗ ಆಟವಾಡಲೆಂದು ಧನಂಜಯ್ ಆಶಾ ಕೇಂದ್ರಕ್ಕೆ ಹೋಗಿದ್ದ. ಆದರೆ ಅಲ್ಲಿದ್ದ ಆಶಾ ಕಾರ್ಯಕರ್ತೆ ಜ್ಯೋತಿ ಇಲಿಗಳನ್ನು ಸಾಯಿಸಲೆಂದು ತಂದಿದ್ದ ಇಲಿವಿಷ ಸೇರಿಸಿ ಚಿಪ್ಸ್ ನೀಡಿದ್ದಾಳೆ. ಧನಂಜಯ್ ವಿಷದ ವಾಸನೆ ಬರುತ್ತಿದೆ ಎಂದು ಹೇಳಿದರೂ ಜ್ಯೋತಿ ಒತ್ತಾಯಪೂರ್ವಕವಾಗಿ ಚಿಪ್ಸ್ ತಿನ್ನಿಸಿದ್ದಾಳೆ ಎಂದು ಕೇಂದ್ರದಲ್ಲಿದ್ದ ಮಕ್ಕಳು ಹೇಳಿದ್ದಾರೆ.

     

    ನಾವು ಕೂಡಾ ಚಿಪ್ಸ್ ಬೇಕು ಎಂದು ಕೇಳಿದ್ದೆವು. ಆದರೆ ಜ್ಯೋತಿ ಮ್ಯಾಡಂ ನಮಗೆ ಚಿಪ್ಸ್ ನೀಡಲು ನಿರಾಕರಿಸಿದರು. ಇದನ್ನು ನೀವು ತಿನ್ನುವಂತಿಲ್ಲ ಎಂದು ಹೇಳಿದ್ದರು ಎಂದು ಮಕ್ಕಳು ಹೇಳಿದ್ದಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.

    ಧನಂಜಯ್ ಸೋದರ ತರುಣ್ ಕೂಡಾ ಕಳೆದ ವರ್ಷ ಇದೇ ರೀತಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ತರುಣ್ ಸಾವಿನಲ್ಲಿ ಜ್ಯೋತಿ ಕೈವಾಡವಿತ್ತಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.