Tag: ಮಕ್ಕಳ ಕಲ್ಯಾಣ ಸಮಿತಿ

  • 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ – ಕರಾಳ ಅನುಭವ ಬಿಚ್ಚಿಟ್ಟ ದಲಿತ ಬಾಲಕಿ

    ತಿರುವನಂತಪುರಂ: ಕಳೆದ 5 ವರ್ಷಗಳಲ್ಲಿ 64 ಜನರಿಂದ ತಾನು ಲೈಂಗಿಕ ಶೋಷಣೆಕ್ಕೆ ಒಳಗಾಗಿರುವುದಾಗಿ ದಲಿತ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ (Child Welfare Committee) ತಿಳಿಸಿದ್ದಾಳೆ.

    ಬಾಲಕಿ ಮೂಲತಃ ಕೇರಳದವಳಾಗಿದ್ದು (Kerala), ಮಹಿಳಾ ಸಮಕ್ಯ ಎಂಬ ಎನ್‌ಜಿಒ ಸದಸ್ಯರು ತಮ್ಮ ನಿತ್ಯದ ಕ್ಷೇತ್ರ ಭೇಟಿಯ ಭಾಗವಾಗಿ ಬಾಲಕಿಯ ಮನೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಬಳಿಕ ಅವರು ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಿದ್ದಾರೆ. ಸಮಿತಿ ನಡೆಸಿದ ಕೌನ್ಸೆಲಿಂಗ್ ವೇಳೆಯಲ್ಲಿ ತನ್ನ 5 ವರ್ಷಗಳ ಕಾಲ ಅನುಭವಿಸಿದ ಕಷ್ಟವನ್ನು ಬಹಿರಂಗಪಡಿಸಿದ್ದಾಳೆ.ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಮೇಲೆ ಫೈರಿಂಗ್‌!

    ಬಾಲಕಿಯೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಕೌನ್ಸೆಲಿಂಗ್ ಅವಧಿಯಲ್ಲಿ, ಆಕೆ 13 ವರ್ಷದವಳಿದ್ದಾಗ ಮೊದಲ ಬಾರಿ ನೆರೆಹೊರೆಯವರು ಆಕೆಯ ಮೇಲೆ ಲೈಂಗಿಕ ಶೋಷಣೆ ಎಸಗಿದರು. ಜೊತೆಗೆ ಆ ವ್ಯಕ್ತಿ ಆಕೆಯೊಂದಿಗೆ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡಿದ್ದ. ಅಲ್ಲಿಂದ ಪ್ರಾರಂಭವಾಗಿ ಕಳೆದ 5 ವರ್ಷಗಳಿಂದ ತನ್ನ ಮೇಲೆ 64 ಜನರು ಲೈಂಗಿಕ ಶೋಷಣೆ ಎಸಗಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ ಎಂದು ತಿಳಿಸಿದ್ದಾಳೆ.

    ಶಾಲಾ ಸಮಯದಲ್ಲಿ ಕ್ರೀಡೆಯಲ್ಲಿ ಸಕ್ರಿಯವಾದ್ದೆ. ಆಗ ಕ್ರೀಡಾ ತರಬೇತಿ ಅವಧಿಯಲ್ಲಿ ಲೈಂಗಿಕ ಶೋಷಣೆಕ್ಕೆ ಒಳಗಾಗಿದ್ದೇನೆ. ಜೊತೆಗೆ ಆ ಸಮಯದಲ್ಲಿ ತನ್ನದೇ ಆದ ಕೆಲವು ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಇದೆಲ್ಲವು ಆಕೆಯಲ್ಲಿ ಭಯವನ್ನು ಹೆಚ್ಚಿಸಿದ್ದವು ಎಂದು ಬಹಿರಂಗಪಡಿಸಿದ್ದಾಳೆ.

    ಬಾಲಕಿ ನೀಡಿದ ಹೇಳಿಕೆ ಆಧಾರದ ಮೇಲೆ ಮಕ್ಕಳ ಕಲ್ಯಾಣ ಸಮಿತಿಯವರು ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈವರೆಗೂ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯ ವಿವರವಾದ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪತ್ತನಂತಿಟ್ಟ ಜಿಲ್ಲಾಧ್ಯಕ್ಷ ಎನ್.ರಾಜೀವ್ ಮಾತನಾಡಿ, ಬಾಲಕಿ 8ನೇ ತರಗತಿಯಲ್ಲಿದ್ದಾಗಿನಿಂದ ಸುಮಾರು ಐದು ವರ್ಷಗಳ ಕಾಲ ಶೋಷಣೆಕ್ಕೊಳಗಾಗಿದ್ದಳು. ಅವಳು ಕ್ರೀಡೆಯಲ್ಲಿ ಸಕ್ರಿಯಳಾಗಿದ್ದಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ಆಕೆ ಲೈಂಗಿಕ ಶೋಷಣೆಕ್ಕೆ ಒಳಗಾಗಿದ್ದಳು. ಪ್ರಕರಣ ಗಂಭೀರವಾಗಿದ್ದು, ಸಮಿತಿಯು ಬಾಲಕಿಗೆ ಅಗತ್ಯ ಆರೈಕೆ ಮತ್ತು ರಕ್ಷಣೆ ನೀಡಲಿದೆ ಎಂದು ತಿಳಿಸಿದರು.ಇದನ್ನೂ ಓದಿ: MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

  • ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

    ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

    ಭೋಪಾಲ್: ಅತ್ಯಾಚಾರಕ್ಕೊಳಗಾಗಿದ್ದ 13 ವರ್ಷದ ದಲಿತ ಬಾಲಕಿಯನ್ನು (Dalit Girl) ರಾತ್ರಿ ಇಡೀ ಠಾಣೆಯಲ್ಲಿ ಇರಿಸಿಕೊಂಡು ಥಳಿಸಿದ ಘಟನೆ ಮಧ್ಯ ಪ್ರದೇಶದ (Madhya Pradesh) ಛತ್ತರ್‌ಪುರ ನಗರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ (Police) ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    ಅತ್ಯಾಚಾರ ಸಂತ್ರಸ್ತೆಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಿದ್ದಕ್ಕಾಗಿ ನಗರ ಕೋತ್ವಾಲಿ ಠಾಣೆಯ ಎಚ್‌ಎಸ್‌ಒ ಅನೂಪ್ ಯಾದವ್, ಸಬ್ ಇನ್‌ಸ್ಪೆಕ್ಟರ್ ಮೋಹಿನಿ ಶರ್ಮಾ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ (PSI) ಗುರುದತ್ ಶೇಷಾ ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಾಬು ಖಾನ್ ನನ್ನು ಸೆಪ್ಟೆಂಬರ್ 1ರಂದು ಐಪಿಸಿ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ (SC-ST Act) ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೋ  (POCSO) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಛತ್ತರ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿತ – ಮೂವರ ದುರ್ಮರಣ

    STOP RAPE

    ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಈ ಸಂಬಂಧ ದೂರು ನೀಡಿದ ನಂತರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದ್ದಾರೆ.

    ದೂರಿನಲ್ಲಿ ಏನಿದೆ?: ಕಳೆದ ಆಗಸ್ಟ್ 27ರಂದು ಮಗಳು ಆಟವಾಡಲು ಮನೆಯಿಂದ ಹೊರಟಿದ್ದಳು ಮತ್ತೆ ಹಿಂದಿರುಗಿರಲಿಲ್ಲ. ಮರುದಿನ ಪತಿಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಬಳಿಕ ಆಗಸ್ಟ್ 30 ರಂದು ಮಗಳು ತನ್ನ ಮನೆಗೆ ವಾಪಸ್ಸಾದಳು. ಅದೇ ದಿನ ಬಾಬು ಖಾನ್ ಬಲವಂತವಾಗಿ ತನ್ನ ಮಗಳನ್ನ ಕರೆದೊಯ್ದು ಮೂರು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ ಬಾಂಗ್ಲಾ ಪ್ರಧಾನಿ – ವೀಡಿಯೋ ವೈರಲ್

    ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಇಬ್ಬರು ಪೊಲೀಸರು ನನ್ನ ಮಗಳಿಗೆ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಿದರು. ಅಲ್ಲದೇ ನನ್ನ ಮಗಳನ್ನು ಹಿಡಿದು ಥಳಿಸಿದರು. ಅಲ್ಲೇ ಇದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ನನ್ನನ್ನು ಹೊರಗೆ ದಬ್ಬಿದರು. ಇಡೀ ರಾತ್ರಿ ನನ್ನ ಮಗಳನ್ನು ಠಾಣೆಯಲ್ಲೇ ಇರಿಸಿಕೊಂಡು ಥಳಿಸಿದರು. ಆಗಸ್ಟ್ 31 ರಂದು ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಯಾದವ್ ಅವರನ್ನು ಕೇಸ್ ದಾಖಲಿಸುವಂತೆ ಕೇಳಿದಾಗ ನಮ್ಮನ್ನು ಹೆದರಿಸಿ ಓಡಿಸಿದರು. ಅಂತಿಮವಾಗಿ ಸೆಪ್ಟೆಂಬರ್ 1 ರ ಸಂಜೆ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಅಪಹರಣದ ಆರೋಪವನ್ನು ಎಫ್‌ಐಆರ್‌ನಲ್ಲಿ ಸೇರಿಸಿರಲಿಲ್ಲ. ಜೊತೆಗೆ ಬಾಲಕಿಯ ವಯಸ್ಸನ್ನು 13ರ ಬದಲಿಗೆ 17 ವರ್ಷ ಎಂದು ತೋರಿಸಲಾಗಿತ್ತು ಎಂದೂ ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • 3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್

    3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್

    ಚೆನ್ನೈ: 10 ತಿಂಗಳ ಮಗುವನ್ನು ಆಂಧ್ರಪ್ರದೇಶದ ದಂಪತಿಗೆ 3 ಲಕ್ಷ ರೂ. ಗೆ ಮಾರಾಟ ಮಾಡಿರುವ ಪ್ರಕರಣ ಸಂಬಂಧ ತಾಯಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

    ಕನ್ನಗಿ ನಗರದ ವಿಜಯಲಕ್ಷ್ಮಿ (30) ಮತ್ತು ಆಕೆಯ ಪತಿ ಚಿಂದೂರೈ (35) ಬಡತನದ ಕಾರಣದಿಂದ ತಮ್ಮ ಹತ್ತು ತಿಂಗಳ ಹಸುಳೆ ಮುತ್ತುರಾಜ್ ನನ್ನು ಮಾರಾಟ ಮಾಡಿದ್ದಾರೆ. ದಂಪತಿ ತಮ್ಮ ಮಗುವನ್ನು ಮಹಿಳಾ ಬ್ರೋಕರ್ ಒಬ್ಬರ ಮೂಲಕ ಆಂಧ್ರ ಪ್ರದೇಶದ ದಂಪತಿಗೆ 85,000 ರೂ. ಗೆ ನೀಡಲು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ

    ನಂತರ ದಂಪತಿ ಬ್ರೋಕರ್‌ಗೆ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ ಮೊದಲಿಗೆ ಬ್ರೋಕರ್, ದಂಪತಿಯ ಬೇಡಿಕೆಗೆ ಒಪ್ಪಿರಲಿಲ್ಲ. ನಂತರ ಅವಳು ಅವರ ಬೇಡಿಕೆಗೆ ಒಪ್ಪಿಕೊಂಡಿದ್ದು, ರೆಡ್ ಹಿಲ್ಸ್‌ನ ನವನೀತಮ್ ಮತ್ತು ಪಾಂಡುರಂಗನ್ ಎಂಬ ದಂಪತಿಗೆ 3 ಲಕ್ಷ ರೂ. ಗೆ ಮಗುವನ್ನು ಮಾರಾಟ ಮಾಡಿದ್ದಾಳೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ

    ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಲಲಿತಾ ಅವರಿಗೆ ಶಿಶು ಮಾರಾಟದ ಬಗ್ಗೆ ತಿಳಿದಿದ್ದು, ಲಲಿತಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮದ್ವೆಯಾದ 3 ಗಂಟೆಗೆ ನವ ದಂಪತಿ ವಶ

    ಮದ್ವೆಯಾದ 3 ಗಂಟೆಗೆ ನವ ದಂಪತಿ ವಶ

    ಚಿಕ್ಕಬಳ್ಳಾಪುರ: ಬಾಲ್ಯ ವಿವಾಹವಾದ ಹಿನ್ನೆಲೆಯಲ್ಲಿ ಮದುವೆಯಾದ ಮೂರೇ ಗಂಟೆಗೆ ನೂತನ ದಂಪತಿಯನ್ನು ಚಿಕ್ಕಬಳ್ಳಾಪುರ ಬಾಲ್ಯವಿವಾಹ ತಡೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಕಲ್ಯಾಣ ಮಂಪಟದಲ್ಲಿ ಇಂದು ಮುಂಜಾನೆ ಬಾಲ್ಯ ವಿವಾಹ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ವರ ಹಾಗೂ ಚಿಂತಾಮಣಿ ಮೂಲದ ವಧುವಿನೊಂದಿಗೆ ವಿವಾಹ ನಡೆದಿದೆ. 16 ವರ್ಷದ ಬಾಲಕಿಗೆ 28 ವರ್ಷದ ಯುವಕನ ಜೊತೆ ಮದುವೆ ಮಾಡಲಾಗಿದೆ.

    ಈ ಬಗ್ಗೆ ಮಾಹಿತಿ ಪಡೆದ ಬಾಲ್ಯವಿವಾಹ ತಡೆ ಅಧಿಕಾರಿಗಳು ಕಲ್ಯಾಣ ಮಂಪಟಕ್ಕೆ ಹೋಗಿ ವಧು ವರ ಸೇರಿದಂತೆ ಅವರ ಪಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಮಕ್ಕಳ ಕಲ್ಯಾಣ ಸಮಿತಿ ಅವರ ಮುಂದೆ ಹಾಜರು ಪಡಿಸಿದ್ದು, ವಿಚಾರಣೆ ಮಾಡಿದ್ದಾರೆ.

    ಸದ್ಯಕ್ಕೆ ಬಾಲಕಿಯ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಂಡಿದ್ದು, ಈ ಬಗ್ಗೆ ವರ ಮತ್ತು ಬಾಲಕಿಯ ಪೋಷಕರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರ ದಾಖಲಿಸಲು ಮುಂದಾಗಿದ್ದಾರೆ.

  • ದಶಕಗಳ ನಂತ್ರ ಸಿನಿಮಾ ರೀತಿಯಲ್ಲಿ ಒಂದಾದ ಹಾಸನದ ಅಣ್ಣ-ತಂಗಿ

    ದಶಕಗಳ ನಂತ್ರ ಸಿನಿಮಾ ರೀತಿಯಲ್ಲಿ ಒಂದಾದ ಹಾಸನದ ಅಣ್ಣ-ತಂಗಿ

    ಹಾಸನ: ಸಿನಿಮಾ ಕಥೆಯನ್ನೇ ನಾಚಿಸುವಂತೆ ಅಣ್ಣ-ತಂಗಿಯರಿಬ್ಬರು ದಶಕಗಳ ನಂತರ ಮತ್ತೆ ಒಂದಾದ ಅಪರೂಪದ ಘಟನೆ ಹಾಸನದಲ್ಲಿ ನಡೆದಿದೆ.

    ಅಣ್ಣ ಮಂಜುನಾಥ್, ತಂಗಿ ಭಾಗ್ಯ. ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು, ಸಂಬಂಧಿಕರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ ಬೀದಿ ಪಾಲಾಗಿದ್ದ ಅಣ್ಣ ತಂಗಿ ಇದೀಗ ಮತ್ತೆ ಒಂದಾಗಿದ್ದಾರೆ. ಇವರಿಬ್ಬರು ಒಬ್ಬರೊಬ್ಬರನ್ನ ನೋಡಿ ತುಂಬಾ ವರ್ಷಗಳಾಗಿದ್ದು, ತಮ್ಮನ್ನು ತಾವೂ ನೋಡಿ ನಂಬಲಾಗದ ರೀತಿಯಲ್ಲಿ ಒಂದಾಗಿದ್ದಾರೆ. ಈ ಜನ್ಮದಲ್ಲಿ ಮತ್ತೆ ಒಂದಾಗುತ್ತೀವಿ ಎಂಬ ಪರಿಕಲ್ಪನೆ ಇಲ್ಲದಿದ್ದರೂ ಈ ಸಹೋದರ-ಸಹೋದರಿ ಮತ್ತೆ ಒಂದಾಗಿದ್ದು ನಿಜಕ್ಕೂ ಪಾವಡವೇ ಆಗಿದೆ.

    ನಡೆದಿದ್ದೇನು?
    ಮಂಜುನಾಥ್ ಮತ್ತು ಭಾಗ್ಯ ಚಿಕ್ಕವರಿದ್ದಾಗ ನೋಡಿಕೊಳ್ಳಲು ಕಷ್ಟವಾಗುತ್ತೆ ಎಂದು ಇಬ್ಬರು ಮಕ್ಕಳನ್ನು ಅವರ ಚಿಕ್ಕಮ್ಮ ಹೊಳೆನರಸೀಪುರ ತಾಲೂಕಿನ ಮಳಲಿ ಗ್ರಾಮದ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದರು. ಬಳಿಕ ಇಬ್ಬರು ದೇವಸ್ಥಾನದಲ್ಲಿ ಪ್ರಸಾದವನ್ನ ತಿಂದು ಎರಡು ದಿನ ದೂಡಿದ ಇವರಿಗೆ ಮೂರನೇ ದಿನ ಪ್ರಸಾದವೇ ಸಿಗಲಿಲ್ಲ. ಆಗ ಈ ಮಕ್ಕಳ ದಯನೀಯ ಸ್ಥಿತಿಯನ್ನ ನೋಡಿದ ಗ್ರಾಮದ ಶಿಕ್ಷಕ ಗೌಡೇಗೌಡ ಇವರಿಗೆ ಆಶ್ರಯ ನೀಡಿದ್ದರು. ಆಗ ಇಬ್ಬರು ಮಕ್ಕಳು ಇರುವುದನ್ನು ನೋಡಿದ ಗ್ರಾಮದ ಮಹಿಳೆಯೊಬ್ಬರು ತಾನು ಬಾಲಕಿಯೊಬ್ಬಳನ್ನ ಸಾಕುವುದಾಗಿ ಕರೆದುಕೊಂಡು ಹೋಗಿದ್ದಾರೆ.

    ಮಹಿಳೆ ಕರೆದುಕೊಂಡು ಹೋದ ಕೆಲವೇ ದಿನಗಳಲ್ಲಿ ಆ ಬಾಲಕಿಯನ್ನು ಸಕಲೇಶಪುರದ ಕಾಫಿ ತೋಟದ ಮಾಲೀಕನಿಗೆ ಮಾರಾಟ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಬಾಲಕಿ ಕಾಣೆಯಾಗಿದ್ದಾಳೆ ಎಂದು ನಾಟಕ ಆಡಿದ್ದಳು. ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕ ಹುಡುಗಿ ಭಾಗ್ಯ ಅಲ್ಲಿ ಕಿರುಕುಳ ಹೆಚ್ಚಾದಾಗ ಇತ್ತೀಚಿಗೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು. ಕೊನೆಗೆ ಮಕ್ಕಳ ರಕ್ಷಣಾ ಸಮಿತಿಯವರು ಭಾಗ್ಯಳಿಗೆ ಆಶ್ರಯ ನೀಡಿ ವಿಚಾರಿಸಿದಾಗ ತನ್ನ ಬಾಲ್ಯದ ಘಟನೆಯನ್ನ ಎಳೆ ಎಳೆಯಾಗಿ ಹೇಳಿದ್ದಳು.

    ಭಾಗ್ಯ ಹೇಳಿದ ಮಾಹಿತಿ ಆಧರಿಸಿ ಮಕ್ಕಳ ರಕ್ಷಣ ಸಮಿತಿಗೆ ಹುಡುಕಾಟ ಆರಂಭಿಸಿತ್ತು. ಕೊನೆಗೂ ಭಾಗ್ಯಳ ಅಣ್ಣ ಮಂಜುನಾಥನಿಗೆ ಆಶ್ರಯ ನೀಡಿದ ಮನೆ ಸಿಕ್ಕಿದ್ದು, ಅಣ್ಣನ ಬಳಿಗೆ ಭಾಗ್ಯಳನ್ನು ಕರೆದುಕೊಂಡು ಹೋಗಿದ್ದಾರೆ. ಮಂಜುನಾಥನನ್ನ ಮನೆ ಮಗನಿಗಿಂತಲೂ ಒಂದು ಪಟ್ಟು ಹೆಚ್ಚು ಪ್ರೀತಿ ತೋರಿಸಿ ಸಲಹುತ್ತಿದ್ದ ಶಿಕ್ಷಕ ಗೌಡೇಗೌಡರು ಆರು ತಿಂಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಅವರ ಮಗ ಪೂರ್ಣಚಂದ್ರ ತೇಜಸ್ವಿ, ಮಂಜುನಾಥನನ್ನ ಹೊಣೆ ಹೊತ್ತು ತಮ್ಮನಿಗಿಂತ ಹೆಚ್ಚಿನ ಪ್ರೀತಿ ತೋರಿಸಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡಿಸುತ್ತಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿಯ ಪ್ರಯತ್ನದಿಂದಾಗಿ ಮಂಗಳವಾರ ಅಣ್ಣ ತಂಗಿ ದಶಕದ ನಂತರ ಒಂದಾಗಿ ಖುಷಿಪಟ್ಟಿದ್ದಾರೆ. ತಂಗಿಯನ್ನ ಬಿಟ್ಟು ಇರಲಾರೆ ಅಂತಾ ಅಣ್ಣ ಮಂಜುನಾಥ್ ಹಠ ಹಿಡಿದಿದ್ದಾನೆ. ತಂಗಿಯೂ ಅಣ್ಣನ ಪ್ರೀತಿ ನನಗೆ ಬೇಕು ಎಂದು ಆಸೆ ಪಟ್ಟಿದ್ದಾಳೆ. ಮುಂದೇನು ಅನ್ನೋ ತೀರ್ಮಾನವನ್ನ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ತೆಗೆದುಕೊಳ್ಳಬೇಕಾಗಿದೆ.