Tag: ಮಕ್ಕಳ ಕಲ್ಯಾಣ ಇಲಾಖೆ

  • 15 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ – ಶಿಕ್ಷಕ ಅರೆಸ್ಟ್

    15 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ – ಶಿಕ್ಷಕ ಅರೆಸ್ಟ್

    ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರಿಬ್ಬರು 15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

    9 ಹಾಗೂ 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಮಕ್ಕಳ ರಕ್ಷಣೆ ಕುರಿತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಇಬ್ಬರು ಶಿಕ್ಷಕರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪತಿಯನ್ನು ಬಚಾವ್ ಮಾಡಲು ಪೊಲೀಸರಿಗೆ ಖಾರದ ಪುಡಿ ಎರಚಿದ್ಲು

    ಗಣಿತ ಮತ್ತು ಸಮಾಜ ವಿಜ್ಞಾನ ಬೋಧಿಸುವ ಇಬ್ಬರೂ ಶಿಕ್ಷಕರು ಪ್ರತಿ ದಿನ ತರಗತಿಯಲ್ಲಿ ಡಬಲ್ ಮೀನಿಂಗ್‍ನಲ್ಲಿ ಮಾತನಾಡುತ್ತಿರುತ್ತಾರೆ ಹಾಗೂ ನಮ್ಮನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು. ಶಾಲಾ ಸಮಯದ ನಂತರ ಫೋನ್ ಕರೆ ಮಾಡಿ ಅಶ್ಲೀಲತೆಯ ವಿಚಾರವನ್ನು ಮಾತನಾಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ವಿದ್ಯಾರ್ಥಿಗಳಿಂದ ದೂರು ಸ್ವೀಕರಿಸಿದ ಪೊಲೀಸರು ಸಮಾಜ ವಿಜ್ಞಾನ ಶಿಕ್ಷಕನನ್ನು ಬಂಧಿಸಿದ್ದು, ಎರಡನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಪ್ಪ ಹಣ ಕೊಡದಿದ್ದಕ್ಕೆ, ಚಾಕುನಿಂದ ಕೈ, ಕತ್ತು ಕೊಯ್ದುಕೊಂಡ

  • ಯುವಕನ ಆರತಕ್ಷತೆ ತಡೆದ ಅಧಿಕಾರಿಗಳು- ವರನ ತಂಗಿಗೂ ವಧುವಿನ ಅಣ್ಣನಿಗೂ ಮದ್ವೆ ಮಾಡಿಸಿದ್ರು!

    ಯುವಕನ ಆರತಕ್ಷತೆ ತಡೆದ ಅಧಿಕಾರಿಗಳು- ವರನ ತಂಗಿಗೂ ವಧುವಿನ ಅಣ್ಣನಿಗೂ ಮದ್ವೆ ಮಾಡಿಸಿದ್ರು!

    ಕೋಲಾರ: ಯುವಕನ ಆರತಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಜಿಲ್ಲೆಯ ಬಂಗಾರಪೇಟೆಯ ಬಾಲಮುರುಗನ್ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ನಡೆಯುತ್ತಿತ್ತು. ಆದ್ರೆ ಕೋಲಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ರಾಜೇಶ್ ಹಾಗೂ ಬಂಗಾರಪೇಟೆ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರತಕ್ಷತೆ ತಡೆದಿದ್ದಾರೆ.

    ಬಂಗಾರಪೇಟೆಯ ವರ ಅಜಯ್ ಕುಮಾರ್ ಮತ್ತು ವಧು ವೇದವತಿಗೆ ಆರತಕ್ಷತೆ ನಿಶ್ಚಯವಾಗಿತ್ತು. ಆದರೆ ವರ ಅಜಯ್ ಕುಮಾರ್ ಗೆ 21 ವರ್ಷ ತುಂಬದ ಹಿನ್ನೆಲೆಯಲ್ಲಿ ಆರತಕ್ಷತೆಯನ್ನು ತಡೆಯಲಾಗಿದೆ. ಆದ್ರೆ ಹಿರಿಯರು ಮದುವೆ ನಿಲ್ಲಿಸಬಾರದು ಎಂದು ಯೋಚಿಸಿದ್ದು, ಒಪ್ಪಂದದ ಮೇರೆಗೆ ಅಲ್ಲಿಯೇ ಇದ್ದಂತಹ ವೇದವತಿ ಅಣ್ಣ ವೇಣು ಹಾಗೂ ವರ ಅಜಯ್ ಕುಮಾರ್ ತಂಗಿ ಅಶ್ವಿನಿಗೆ ಆರತಕ್ಷತೆಯನ್ನು ನಡೆಸಲಾಗಿದೆ. ಇಂದು ಈ ಜೋಡಿಯ ಮದುವೆ ನಡೆದಿದೆ.

    ವರ ಅಜಯ್ ಕುಮಾರ್ ಗೆ ಮದುವೆ ವಯಸ್ಸು ತುಂಬುವವರೆಗೆ ಮದುವೆ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡು ಅಧಿಕಾರಿಗಳು ಪ್ರಕರಣವನ್ನು ಸುಖಾಂತ್ಯ ಮಾಡಿದ್ದಾರೆ.