Tag: ಮಕ್ಕಳ ಅಶ್ಲೀಲ ಚಿತ್ರ

  • ಮಕ್ಕಳ ಅಶ್ಲೀಲ ಚಿತ್ರ ಸರ್ಚಿಂಗ್‌ – ಕೇರಳದ 455 ಕಡೆ ದಾಳಿ, 6 ಬಂಧನ

    ಮಕ್ಕಳ ಅಶ್ಲೀಲ ಚಿತ್ರ ಸರ್ಚಿಂಗ್‌ – ಕೇರಳದ 455 ಕಡೆ ದಾಳಿ, 6 ಬಂಧನ

    ತಿರುವನಂತಪುರಂ: ಇಂಟರ್‌ನೆಟ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ (Child Pornography) ಹುಡುಕಾಟ, ಸಂಗ್ರಹ ಮತ್ತು ಹಂಚಿಕೊಳ್ಳುವವರ ವಿರುದ್ಧ ರಾಜ್ಯಾದ್ಯಂತ ಬೃಹತ್ ದಾಳಿ ಆರಂಭಿಸಿದ ಕೇರಳ ಪೊಲೀಸರು (Kerala Police) 37 ಪ್ರಕರಣಗಳನ್ನು ದಾಖಲಿಸಿ ವಿವಿಧ ಜಿಲ್ಲೆಗಳಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ.

    ಪಿ-ಹಂಟ್ ಎಂಬ ಕಾರ್ಯಾಚರಣೆಯ ಭಾಗವಾಗಿ ಕಳೆದ ಕೆಲವು ದಿನಗಳಿಂದ 455 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

    ತಿರುವನಂತಪುರಂ ಗ್ರಾಮಾಂತರ, ಕೊಲ್ಲಂ ನಗರ, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್ ಗ್ರಾಮಾಂತರ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ತೋಳಗಳ ಹತ್ಯೆಗೆ ಕಂಡಲ್ಲಿ ಗುಂಡು – ಯೋಗಿ ಸರ್ಕಾರ ಆದೇಶ

    ಅತಿ ಹೆಚ್ಚು ದಾಳಿ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿ 60 ಸ್ಥಳಗಳನ್ನು ಶೋಧಿಸಿ 23 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿರುವನಂತಪುರಂ ಗ್ರಾಮಾಂತರ ಪೊಲೀಸ್ ಜಿಲ್ಲೆಯಲ್ಲಿ ಒಟ್ಟು 39 ಸ್ಥಳಗಳ ಮೇಲೆ ದಾಳಿ ನಡೆಸಿ 29 ಸಾಧನ ವಶಕ್ಕೆ ಪಡೆಯಲಾಗಿದೆ.

    ತಿರುವನಂತಪುರಂ ನಗರದಲ್ಲಿ ಪೊಲೀಸರು 22 ಕಡೆ ತಪಾಸಣೆ ನಡೆಸಿ ಐದು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

    ಪತ್ತನಂತಿಟ್ಟ 8, ಆಲಪ್ಪುಳ 8, ಕೊಲ್ಲಂ 7, ಕಾಸರಗೋಡು 5, ಪಾಲಕ್ಕಾಡ್ 4, ಮತ್ತು ತ್ರಿಶೂರ್ ಗ್ರಾಮಾಂತರ, ತ್ರಿಶೂರ್ ನಗರ, ವಯನಾಡ್‌ನಲ್ಲಿ ತಲಾ 3 ಪ್ರಕರಣ ದಾಖಲಾಗಿದೆ.

    ತಿರುವನಂತಪುರಂ ಗ್ರಾಮಾಂತರ, ಪತ್ತನಂತಿಟ್ಟ, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಲಯಾಳ ಚಿತ್ರರಂಗದಲ್ಲಿನ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತ ನ್ಯಾ. ಹೇಮಾ ವರದಿಯ ಜೊತೆ ಈಗ ಮಕ್ಕಳ ಅಶ್ಲೀಲ ಚಿತ್ರಗಳ ಹಂಚಿಕೊಳ್ಳುವ ಬೃಹತ್ ಜಾಲ ಪತ್ತೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

     

  • ಮಕ್ಕಳ ಅಶ್ಲೀಲ ಚಿತ್ರದ ವಿರುದ್ಧ ಕರ್ನಾಟಕ ಸೇರಿದಂತೆ ದೇಶಾದ್ಯಂತ 56 ಸ್ಥಳಗಳಲ್ಲಿ ಸಿಬಿಐ ದಾಳಿ

    ಮಕ್ಕಳ ಅಶ್ಲೀಲ ಚಿತ್ರದ ವಿರುದ್ಧ ಕರ್ನಾಟಕ ಸೇರಿದಂತೆ ದೇಶಾದ್ಯಂತ 56 ಸ್ಥಳಗಳಲ್ಲಿ ಸಿಬಿಐ ದಾಳಿ

    ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ಚಿತ್ರಗಳ (Child pornography) ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ (CBI) ‘ಮೇಘ ಚಕ್ರ’ (Megha Chakra) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಶನಿವಾರ ಸಿಬಿಐ ದೇಶಾದ್ಯಂತ ಕರ್ನಾಟಕ ಸೇರಿದಂತೆ 19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 56 ಸ್ಥಳಗಳಲ್ಲಿ ಶೋಧ ನಡೆಸಿದೆ.

    ಕರ್ನಾಟಕದ ರಾಮನಗರ, ಕೋಲಾರದಲ್ಲಿ ಈ ದಾಳಿ ನಡೆದಿದೆ. ಇಂಟರ್‌ಪೋಲ್ ಸಿಂಗಾಪುರ ಮತ್ತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ. ಕಳೆದ ವರ್ಷ ‘ಆಪರೇಷನ್ ಕಾರ್ಬನ್’ ಹೆಸರಿನಲ್ಲಿ ವಿಶ್ವಾದ್ಯಂತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆ ವೇಳೆ ಹಲವು ಮಾಹಿತಿಗಳ ಸಿಕ್ಕಿದ ಆಧಾರದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಪಿಎಫ್‌ಐ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ – ಪ್ರಕರಣ ದಾಖಲು

    ಅಪ್ರಾಪ್ತರ ಲೈಂಗಿಕ ಚಟುವಟಿಕೆಗಳ ಆಡಿಯೋ ಹಾಗೂ ವೀಡಿಯೋಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಕ್ಲೌಡ್ ಸ್ಟೋರೇಜ್ ಅನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಇದರ ವಿರುದ್ಧದ ಕಾರ್ಯಾಚರಣೆಗೆ ‘ಮೇಘ ಚಕ್ರ’ ಎಂದು ಹೆಸರಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

    ಫಸ್ಟ್ ಏಜೆನ್ಸಿ ಎಂಬ ಸಂಸ್ಥೆ ದೇಶಾದ್ಯಂತ ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುವ ಪೆಡ್ಲರ್‌ಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]