Tag: ಮಂಪರು ಪರೀಕ್ಷೆ

  • ಶ್ರದ್ಧಾ ಬಿಟ್ಟು ಹೋಗುವ ಆತಂಕದಲ್ಲಿ ಹತ್ಯೆ ಮಾಡಿದೆ – ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಮತ್ತೊಮ್ಮೆ ತಪ್ಪೊಪ್ಪಿಗೆ

    ಶ್ರದ್ಧಾ ಬಿಟ್ಟು ಹೋಗುವ ಆತಂಕದಲ್ಲಿ ಹತ್ಯೆ ಮಾಡಿದೆ – ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಮತ್ತೊಮ್ಮೆ ತಪ್ಪೊಪ್ಪಿಗೆ

    ನವದೆಹಲಿ: ಶ್ರದ್ದಾ ವಾಕರ್ (Shraddha Walkar) ಹತ್ಯೆಯನ್ನು ನಾನೇ ಮಾಡಿದ್ದು, ಅವಳು ನನ್ನ ಬಿಟ್ಟು ಹೋಗುವ ಭೀತಿಯಲ್ಲಿ ಈ ಹತ್ಯೆ ನಡೆದುಹೋಗಿದೆ ಎಂದು ಅಫ್ತಾಬ್ ಅಮೀನ್ ಪೂನವಾಲಾ (Aftab) ತಪ್ಪೊಪ್ಪಿಕೊಂಡಿದ್ದಾನೆ. ಫಾಲಿಗ್ರಾಫ್ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಬಳಿಕ ಈಗ ಮಂಪರು ಪರೀಕ್ಷೆಯಲ್ಲೂ (Narco Test) ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ.

    ಮುಂಬೈ ಮೂಲದ ಯುವತಿ ಶ್ರದ್ದಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು. ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆವರೆಗೂ ನಡೆದ ಪರೀಕ್ಷೆಯಲ್ಲಿ ಹತ್ಯೆಯ ಬಗೆಗಿನ ಹಲವು ಪ್ರಶ್ನೆಗಳಿಗೆ ಅಫ್ತಾಬ್ ಉತ್ತರಿಸಿದ್ದಾನೆ. ಇದನ್ನೂ ಓದಿ: ಲೂಧಿಯಾನ ಕೋರ್ಟ್ ಸ್ಫೋಟದ ಆರೋಪಿ, ಭಯೋತ್ಪಾದಕ ಹರ್‌ಪ್ರೀತ್ ಸಿಂಗ್ ಬಂಧನ

    ಹಣಕಾಸಿನ ವಿಚಾರಗಳಿಗೆ ನನ್ನ ಮತ್ತು ಶ್ರದ್ಧಾ ನಡುವೆ ಜಗಳಗಳಿತ್ತು. ದೆಹಲಿಗೆ ಬಂದ ಬಳಿಕ ಅವಳು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗುವುದಾಗಿ ಹೇಳಿದಳು. ಡ್ರಗ್ಸ್ ಸೇವಿಸಿದ್ದ ನಾನು ನಶೆಯಲ್ಲಿ ಅವಳನ್ನು ಹತ್ಯೆ ಮಾಡಿದ್ದೇನೆ ಎಂದು ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾ‌ನೆ. ಶ್ರದ್ಧಾ ಹತ್ಯೆಯ ಬಳಿಕ ಅವಳ ಫೋನ್, ಬಟ್ಟೆ ಹಾಗೂ ದೇಹವನ್ನು ತುಂಡರಿಸಿದ ಗರಗಸವನ್ನು ಎಸೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ.

    ಆದರೆ ಶ್ರದ್ದಾ ತಲೆಯನ್ನು ಎಲ್ಲಿ ಎಸೆಯಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅಫ್ತಾಬ್ ನಿಖರವಾಗಿ ಸ್ಥಳ ಪತ್ತೆ ಹಚ್ಚುವಲ್ಲಿ ವಿಫಲವಾದ ಎಂದು ಮೂಲಗಳು ಹೇಳಿವೆ. ಮಂಪರು ಪರೀಕ್ಷೆ ವೇಳೆ ನೀಡಿದ ಬಹುತೇಕ ಮಾಹಿತಿ ಭೌತಿಕ ಸಾಕ್ಷ್ಯಗಳೊಂದಿಗೆ ಸಾಮ್ಯತೆ ಹೊಂದುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಪರಿಶೀಲಿಸಬೇಕಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ

    ಫಾಲಿಗ್ರಾಫ್ ಮತ್ತು ಮಂಪರು ಪರೀಕ್ಷೆಯಲ್ಲಿ ನೀಡುವ ಹೇಳಿಕೆಗಳಿಗೆ ಕಾನೂನಿನ ಮಾನ್ಯತೆ ಇಲ್ಲದಿದ್ದರೂ ಸತ್ಯವನ್ನು ಅರಿಯುವ ದೃಷ್ಟಿಯಿಂದ ಈ ಪರೀಕ್ಷೆಗಳನ್ನು ಪೊಲೀಸರು ನಡೆಸಿದ್ದಾರೆ. ಅಫ್ತಾಬ್ ಎರಡು ಪರೀಕ್ಷೆಯಲ್ಲೂ ತಪ್ಪೊಪ್ಪಿಕೊಂಡಿದ್ದು, ಹತ್ಯೆಯ ಬಳಿಕ ನಡೆದ ಹಲವು ಘಟನೆಗಳನ್ನು ವಿವರಿಸಿದ್ದಾನೆ. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಪರು ಪರೀಕ್ಷೆ ಬೇಡವೆಂದು ಜೈಲಿನಿಂದಲೇ ನ್ಯಾಯಾಧೀಶರಿಗೆ ಪತ್ರ ಬರೆದ ಗೌರಿ ಹತ್ಯೆಯ ಶಂಕಿತ ಆರೋಪಿ

    ಮಂಪರು ಪರೀಕ್ಷೆ ಬೇಡವೆಂದು ಜೈಲಿನಿಂದಲೇ ನ್ಯಾಯಾಧೀಶರಿಗೆ ಪತ್ರ ಬರೆದ ಗೌರಿ ಹತ್ಯೆಯ ಶಂಕಿತ ಆರೋಪಿ

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿ ನವೀನ್ ಕುಮಾರ್‍ನನ್ನು ಎಸ್ ಐಟಿ ತಂಡ ಬಂಧಿಸಿ ಜೈಲಿನಲ್ಲಿ ಇರಿಸಿದ್ದಾರೆ. ಇದೀಗ ನವೀನ್ ಜೈಲಿನಿಂದಲೇ ನ್ಯಾಯಾಧೀಶರಿಗೆ ಮಂಪರು ಪರೀಕ್ಷೆ ಬೇಡವೆಂದು ಪತ್ರ ಬರೆದಿದ್ದಾನೆ.

    ಈ ಹಿಂದೆ ಆರೋಪಿಯನ್ನು ಮಂಪರು ಪರಿಕ್ಷೆ ಮಾಡಲು ನ್ಯಾಯಾಲಯ ಹೇಳಿದಾಗ ಅದಕ್ಕೆ ಆರೋಪಿಯೂ ಒಪ್ಪಿಕೊಂಡಿದ್ದ. ಆದರೆ ಈಗ ಮಂಪರು ಪರೀಕ್ಷೆ ಬೇಡವೆಂದು ಜೈಲು ಅಧೀಕ್ಷಕರಿಗೆ ಕೂಡ ಪತ್ರ ಬರೆದಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

    ನನಗೆ ಇಷ್ಟ ಇಲ್ಲದಿದ್ದರೂ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಸ್‍ಐಟಿ ಅಧಿಕಾರಿಗಳ ಬೆದರಿಕೆ ಹಿನ್ನೆಲೆ ಮಂಪರು ಪರೀಕ್ಷೆ ನಡೆಸಲು ಒಪ್ಪಿಕೊಂಡಿದ್ದೇನೆ. ನೀನು ಮಂಪರು ಪರೀಕ್ಷೆಗೆ ಒಪ್ಪದಿದ್ರೇ ಬೇಲ್ ಸಿಗದಂತೆ ಮಾಡ್ತೀವಿ ಅಂತ ಎಸ್ ಐಟಿ ಅಧಿಕಾರಿಗಳು ಬೆದರಿಸಿದ್ದಾರೆ. ಹೀಗಾಗಿ ನಾನು ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದೆ ಅಂತಾ ನವೀನ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಶಂಕಿತ ಆರೋಪಿಯ ಮಂಪರು ಪರೀಕ್ಷೆಗೆ ಭಾಷೆಯ ತೊಡಕು

    ಈಗ ನಾನು ತುಂಬಾ ಯೋಚಿಸಿದ್ದು, ಮಂಪರು ಪರೀಕ್ಷೆ ಇಷ್ಟ ಇಲ್ಲ. ಕೂಡಲೇ ಈ ಪತ್ರವನ್ನು 3 ನೇ ಎಸಿಎಂಎಂ ನ್ಯಾಯಾಧೀಶರಿಗೆ ತಲುಪಿಸಿ, ಇದಕ್ಕೆ ನ್ಯಾಯಾಧೀಶರು ಕೂಡಲೇ ಹಿಂದೆ ನೀಡಿದ್ದ ಆದೇಶವನ್ನು ತಡೆ ಹಿಡಿಯಬೇಕು ಅಂತ ಆರೋಪಿ ಮನವಿ ಮಾಡಿದ್ದಾನೆ.

  • ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

    ಗೌರಿ ಕೇಸ್ – ಶಂಕಿತ ಆರೋಪಿ ಹೊಟ್ಟೆ ಮಂಜನಿಗೆ ಮಂಪರು ಪರೀಕ್ಷೆ- ಏನಿದು ಪರೀಕ್ಷೆ? ಹೇಗೆ ಮಾಡುತ್ತಾರೆ? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಂಬಂಧ ಬಂಧನಕ್ಕೆ ಒಳಗಾಗಿರುವ ಶಂಕಿತ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಅನುಮತಿ ನೀಡಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಶೇಷ ತನಿಖಾ ತಂಡ ಮನವಿ ಮಾಡಿತ್ತು. ಮನವಿಯನ್ನು ಪುರಸ್ಕರಿಸಿದ ಮೂರನೇ ಎಸಿಎಂಎಂ ಕೋರ್ಟ್ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

    ವಿಚಾರಣೆ ವೇಳೆ ನ್ಯಾಯಾಧೀಶರು, ನಿನ್ನ ಮಂಪರು ಪರೀಕ್ಷೆಗೆ ಒಪ್ಪಿಗೆ ಇದ್ಯಾ ಎಂದು ನವೀನ್‍ಗೆ ಕೇಳಿದರು. ಇದಕ್ಕೆ ಒಪ್ಪಿಗೆ ಇದೆ ಆರೋಗ್ಯಕ್ಕೆ ಏನಾದ್ರೂ ಪರಿಣಾಮ ಬೀರುತ್ತಾ ಎಂದು ಪ್ರಶ್ನೆ ಮಾಡಿದ್ದಾನೆ. ಕೂಡಲೇ ಜಡ್ಜ್ ಅಂತಹ ಪರಿಸ್ಥಿತಿ ಬರುವುದಿಲ್ಲ ಎಂದು ಹೇಳಿದರು. ಕೂಡಲೇ ನವೀನ್, ಆರೋಗ್ಯದಲ್ಲಿ ತೊಂದರೆ ಆಗುವುದಿಲ್ಲ ಎಂದರೆ ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡುತ್ತೇನೆ ಎಂದು ಹೇಳಿದ.

    ನವೀನ್ ಪರ ವಕೀಲರ ಸಮಕ್ಷಮದಲ್ಲಿ ಅಹಮದಾಬಾದ್ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಂಪರು ಪರೀಕ್ಷೆ ನಡೆಯಲಿದೆ.

    ಮಂಪರು ಪರೀಕ್ಷೆ ಹೇಗೆ ನಡೆಯುತ್ತೆ?
    ಯಾವುದೇ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಅನುಮತಿ ದೊರೆತ ಬಳಿಕ ಆರೋಪಿಗೆ ಕೇಳ ಬೇಕಾದ ಪ್ರಶ್ನೆಗಳ ಕುರಿತು ಪಟ್ಟಿ ಮಾಡಿಕೊಳ್ಳಲಾಗುತ್ತದೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಎರಡು ವಿಧಗಳಿದ್ದು ಮೊದಲಿಗೆ ಆತನ ಹೆಸರು, ಊರು ಎಂಬ ಸಾಮಾನ್ಯ ಮಾಹಿತಿ ಪಡೆಯಲಾಗುತ್ತದೆ. ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕುರಿತು ಪ್ರಶ್ನೆಗಳನ್ನು ಸಿದ್ಧಪಡಿಸಲಾಗುತ್ತದೆ.

    ಮಂಪರು ಪರೀಕ್ಷೆಯನ್ನು ವೈದ್ಯರು, ಮನಶಾಸ್ತ್ರಜ್ಞರು ಸಮ್ಮುಖದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ. ಇದಕ್ಕೂ ಮುನ್ನ ಆರೋಪಿಯ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ನಂತರ ಆತನ ದೇಹದ ಆರೋಗ್ಯದ ಸಾಮರ್ಥ್ಯದ ಮೇಲೆ ವೈದ್ಯರು ಸೋಡಿಯಂ ಪೆಂಟೋಥಲ್ ಇಂಜೆಕ್ಷನ್ ಮೂಲಕ ನೀಡುತ್ತಾರೆ. ಆರೋಪಿಯ ಲಿಂಗ, ವಯಸ್ಸು, ದೇಹ ಸಾಮರ್ಥ್ಯ, ಆರೋಗ್ಯ ಇವುಗಳನ್ನು ನೋಡಿಕೊಂಡು ನಿಗಧಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಸರಿಯಾಗಿ ಪರೀಕ್ಷೆ ನಡೆಸದೇ ಜಾಸ್ತಿ ಪ್ರಮಾಣದಲ್ಲಿ ಸೋಡಿಯಂ ಪೆಂಟೋಥಲ್ ನೀಡಿದರೆ ರೋಗಿ ಕೋಮಾಕ್ಕೆ ಜಾರುವ ಸಾಧ್ಯತೆ ಇರುತ್ತದೆ.

    ಈ ಡೋಸ್ ನೀಡಿದ ಬಳಿಕ ಆರೋಪಿ ನಿದ್ರಾವಸ್ಥೆಗೆ ಜಾರುವ ಹಂತದ ಮೊದಲಿನ ಹಂತಕ್ಕೆ ಬಂದಾಗ ನಿಧಾನವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಾಧಾರಣವಾಗಿ ನಿದ್ದೆಯ ಮಂಪರಿನಲ್ಲಿದ್ದ ವ್ಯಕ್ತಿಗೆ ಏನು ಕೇಳಿದರೂ ಆತ ಸತ್ಯ ಹೇಳುತ್ತಾನೆ. ಹೀಗಾಗಿ ಈ ಹಂತದಲ್ಲಿದ್ದ ಆರೋಪಿ ನಿದ್ದೆಗೆ ಜಾರದಂತೆ ಮೊದಲೇ ನಿಗದಿ ಪಡಿಸಿದ ಪ್ರಮಾಣದಲ್ಲಿ ಸೋಡಿಯಂ ಪೆಂಟೋಥಲ್ ಡೋಸ್ ಅನ್ನು ನಿಮಿಷ, ನಿಮಿಷ ಗಳ ಅಂತರದಲ್ಲಿ ಸ್ವಲ್ಪ ಸ್ವಲ್ಪ ನೀಡಲಾಗುತ್ತದೆ.

    ಯಾರಿಗೆ ಮಾಡಬಹುದು?
    ಯಾವುದೇ ವ್ಯಕ್ತಿಗೆ ಮಂಪರು ಪರೀಕ್ಷೆ ನಡೆಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ಬಿಪಿ ಇರುವಂತಹ ವ್ಯಕ್ತಿಗಳಿಗೂ ಪರೀಕ್ಷೆ ನಡೆಸಬಹುದು. ಈ ವೇಳೆ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಪೂರ್ಣ ಮಾಹಿತಿಯನ್ನು ತಿಳಿಸುತ್ತಾನೆ. ಯಾವುದೇ ಮಾಹಿತಿಯನ್ನು ಹೇಳದಿರಲು ಈ ಸ್ಥಿತಿಯಲ್ಲಿ ಆತನಿಗೆ ಸಾಧ್ಯವಿರುವುದಿಲ್ಲ. ಆತನಿಂದ ಮಾಹಿತಿ ಪಡೆಯುವ ಪ್ರತಿಯೊಂದು ಅಂಶವನ್ನು ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುತ್ತದೆ.

    ಅಹಮದಬಾದ್ ನಲ್ಲಿ ಏಕೆ?
    ಈ ಹಿಂದೆ ಛಾಪಾ ಕಾಗದ ಹಗರಣದಲ್ಲಿ ಸಿಕ್ಕಿಬಿದ್ದ ಕರೀಂ ಲಾಲ್ ತೆಲಗಿ ಸೇರಿದಂತೆ 350 ಕ್ಕೂ ಹೆಚ್ಚು ಆರೋಪಿಗಳನ್ನು ಬೆಂಗಳೂರಿನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಗುಜರಾತ್ ವಿಧಿವಿಜ್ಞಾನ ವಿಶ್ವವಿದ್ಯಾಲಯ 2008ರಲ್ಲಿ ಆರಂಭಗೊಂಡಿದೆ. ವಿಧಿವಿಜ್ಞಾನ ಕ್ಷೇತ್ರದ ಅಧ್ಯಯನಕ್ಕೆ ಸಂಬಂಧಿಸಿದಂತೆ ಆರಂಭಗೊಂಡ ವಿಶ್ವದ ಮೊದಲ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

    https://www.youtube.com/watch?v=yGCm67SXFx8