Tag: ಮಂದೀಪ್ ಸಿಂಗ್

  • 8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

    ಬೆಂಗಳೂರು: ತನ್ನ ವೇಗವನ್ನು ಮೀರಿಸುವಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ತಂಡದ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ಸದಾ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದ ಆಟಗಾರರಿಗೂ ಇದೇ ರೀತಿ ತಮ್ಮ ಈ ಆಕ್ರಮಣಕಾರಿ ಪ್ರವೃತ್ತಿಯನ್ನು ಹುರಿದುಂಬಿಸುತ್ತಾರೆ. ಸದ್ಯ ಕೊಹ್ಲಿ ತಮ್ಮ ತಂಡದ ಯುವ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೊಹ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೇವಲ 8.90 ಸೆಕೆಂಡ್ ನಲ್ಲಿ 3 ರನ್ ಓಡಿದ್ದಾರೆ. ಮೊದಲ ರನ್ 3.9 ಸೆಕೆಂಡ್, 2ನೇ ರನ್ 2.39 ಸೆಕೆಂಡ್ ಹಾಗೂ ಮೂರನೇ ರನ್ 2.61 ಸೆಕೆಂಡ್ ನಲ್ಲಿ ಓಡಿ ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಮೂಲಕ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿರುವ ಕೊಹ್ಲಿ, ನೀವು ನನಗಿಂತಲೂ ವೇಗವಾಗಿ ಓಡುತ್ತಿರಾ? ಇಲ್ಲಿ ನನ್ನ ವೇಗದ 3 ರನ್ ಗಳ ವಿಡಿಯೋ ನೀಡಿದ್ದೇನೆ. ಪ್ಯಾಡ್ ಧರಿಸಿ ನಿಮ್ಮ ವೇಗದ 3 ರನ್ ವಿಡಿಯೋ ಕಳುಹಿಸಿ. ನೀವು ನನ್ನ 8.90 ಸೆಕೆಂಡ್ ವೇಗವನ್ನು ಮೀರಿಸುತ್ತೀರಾ ನೋಡೋಣ ಎಂದು ಬರೆದುಕೊಂಡಿದ್ದಾರೆ.

    ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಬ್ಯಾಟ್ಸ್ ಮನ್‍ಗಳಾದ ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ರಂತಹ ಆಟಗಾರರನ್ನು ಆರ್‌ಸಿಬಿ ಹೊಂದಿದ್ದರೂ ಈ ಬಾರಿಯ ಐಪಿಎಲ್ ನಲ್ಲಿ ತಂಡ ಕೇವಲ 2 ಗೆಲುವುಗಳನ್ನು ಮಾತ್ರ ಪಡೆದುಕೊಂಡಿದೆ. ಆದ್ರೆ, ವಯಕ್ತಿಕವಾಗಿ ಆರ್‌ಸಿಬಿ  ನಾಯಕ ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂಬುವುದು ಅವರು ಮಾಡಿರುವ ಟ್ವೀಟ್ ನಿಂದ ಬಹಿರಂಗಗೊಂಡಿದೆ.  ಇದನ್ನು ಓದಿ: ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

  • ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

    ಲಗಾನ್ ಫಿಲ್ಮ್ ಆಟಗಾರನಾದ ಮಂದೀಪ್: ಒಂದು ಫೋಟೋಗೆ ಸಿಕ್ತು ಭರ್ಜರಿ ಲೈಕ್ಸ್

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮಂದೀಪ್ ಸಿಂಗ್ ತಮ್ಮದೇ ಬ್ಯಾಟಿಂಗ್ ಸ್ಟೈಲ್‍ನನ್ನು ತಮಾಷೆಯನ್ನಾಗಿ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಮಂದೀಪ್ 17 ಎಸೆತಗಳಲ್ಲಿ 32 ರನ್‍ಗಳು ಗಳಿಸಿದ್ದರು. ಈ ಪಂದ್ಯದಲ್ಲಿ ಮಂದೀಪ್ ಬೇರೆ ಬೇರೆ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರು ಮಂದೀಪ್ ರಿವರ್ಸ್ ಸ್ವೀಪ್‍ನಲ್ಲಿ ಆಟವಾಡುತ್ತಿದ್ದಾಗ ಅವರ ಫೋಟೋವನ್ನು ತೆಗೆದಿದ್ದಾರೆ.

    ಬಾಲಿವುಡ್‍ನಲ್ಲಿ ಬಿಡುಗಡೆಯಾಗಿದ್ದ, ಲಗಾನ್ ಚಿತ್ರದಲ್ಲಿ ನಟ ರಾಜೇಶ್ ವಿವೇಕ್ ಆಟವಾಡಿದ ಶೈಲಿಯಲ್ಲಿ ಮಂದೀಪ್ ಬ್ಯಾಟಿಂಗ್ ಶೈಲಿ ಹೋಲುತ್ತಿತ್ತು. ಮಂದೀಪ್ ತಮ್ಮ ಫೋಟೋ ಹಾಗೂ ಲಗಾನ್ ಚಿತ್ರದ ರಾಜೇಶ್ ವಿವೇಕ್ ಅವರ ಫೋಟೋವನ್ನು ಒಂದೇ ಫೋಟೋವನ್ನಾಗಿ ಮಾಡಿ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ಮಂದೀಪ್ ಟ್ವಿಟ್ಟರಿನಲ್ಲಿ ಹಾಕಿದ ಫೋಟೋಗೆ ಸಾಕಷ್ಟು ಜನ ಕಮೆಂಟ್ಸ್ ಮಾಡಿದ್ದಾರೆ. ಈ ಫೋಟೋಗೆ 2500ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 113 ಮಂದಿ ರೀ-ಟ್ವೀಟ್ ಮಾಡಿದ್ದಾರೆ. ಇನ್ನೂ ಮಂದೀಪ್ ಇಂದು ಕೆಕೆಆರ್ ವಿರುದ್ಧ ನಡೆಯುವ ಪಂದ್ಯದಲ್ಲಿ ಇದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಸದ್ಯ ಬೆಂಗಳೂರು ತಂಡ ಇವರೆಗೂ 6 ಪಂದ್ಯವನ್ನಾಡಿ 2 ಪಂದ್ಯದಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ.