Tag: ಮಂತ್ರಿ ಮಾಲ್

  • 2 ಕೋಟಿ ಸಾಲ – ಮಂತ್ರಿ ಮಾಲ್‌ ಒಳಗೆ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    2 ಕೋಟಿ ಸಾಲ – ಮಂತ್ರಿ ಮಾಲ್‌ ಒಳಗೆ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

    – ಈ ಜನ್ಮದಲ್ಲಿ ಸಾಲ ತೀರಿಸಲು ಆಗಲ್ಲ ಅಂತ ಡೆತ್‌ನೋಟ್‌ನಲ್ಲಿ ಉಲ್ಲೇಖ

    ಬೆಂಗಳೂರು: 2 ಕೋಟಿ ಸಾಲ ತೀರಿಸಲಾಗದೇ ವ್ಯಕ್ತಿಯೊಬ್ಬ ನಗರದ ಮಂತ್ರಿ ಮಾಲ್‌ ಒಳಗೆ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಉಲ್ಲಾಳ ಉಪನಗರದ ನಿವಾಸಿ ಮಂಜುನಾಥ್ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಲ್ಲೇಶ್ವರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿ 2 ಕೋಟಿ ಸಾಲ ಮಾಡಿಕೊಂಡಿದ್ದರು. ಇಂದು ರಾತ್ರಿ 9 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಂಜುನಾಥ್‌ ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡಿದ್ದರು. ಸಾಲ ತೀರಿಸಲಾಗದೆ ಡೆತ್‌ನೋಟ್ ಬರೆದಿತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ‘2 ಕೋಟಿ ಸಾಲ‌ ಮಾಡಿಕೊಂಡಿದ್ದೇನೆ. ಅದನ್ನ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಜೀವನದಲ್ಲಿ ನೊಂದಿದ್ದೀನಿ. ಸಾಲ ತೀರಿಸಲು ತುಂಬಾ ಪ್ರಯತ್ನ ಮಾಡಿದೆ. ಸದ್ಯದ ಪರಿಸ್ಥಿಯಲ್ಲಿ ಸಾಲ ತೀರಿಸುವುದಕ್ಕೆ ಆಗ್ತಾ ಇಲ್ಲ. ಸಾಲ ಕೊಟ್ಟವರು ಎಲ್ಲ ಕ್ಷಮಿಸಿ ಎಂದು ಬರೆದಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಮನೆಯವರ ನಂಬರ್‌ಗಳನ್ನೆಲ್ಲ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಬೆಂಗಳೂರಿನ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ

    ಬೆಂಗಳೂರಿನ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ

    ಬೆಂಗಳೂರು: ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ (BBMP) ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ.

    ಬಿಗಿ ಪೊಲೀಸ್ ಭದ್ರತೆಯೊಂದಿಗೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳ ತಂಡ ಮಂತ್ರಿ ಮಾಲ್‌ಗೆ (Mantri Mall) ಬೀಗ ಹಾಕಿದೆ. ಇವತ್ತಿನಿಂದ ಸಾಲು ಸಾಲು ರಜೆ ಇರುವುದರಿಂದ ವೀಕೆಂಡ್‌ನಲ್ಲಿ ಮಾಲ್‌ಗೆ ಹೆಚ್ಚಿನ ಜನ ಬರುತ್ತಿದ್ದರು.‌ ಇದನ್ನೂ ಓದಿ: ಹೆಸರಾಂತ ನಿರ್ದೇಶಕಿ ರೂಪಾ ಅಯ್ಯರ್ ಗೆ ದೋಖಾ: ಡಿಜಿಟಲ್ ಅರೆಸ್ಟ್

    ಈ ಹಿಂದೆಯೂ 8 ಬಾರಿ ಮಾಲ್‌ಗೆ ಬಿಬಿಎಂಪಿ ಬೀಗ ಹಾಕಿತ್ತು. ಮಾಲ್‌ನವರು ಕೋರ್ಟ್ ಮೂಲಕ ಬೀಗ ಓಪನ್ ಮಾಡಿಸಿಕೊಂಡು ವ್ಯವಹಾರ ಮಾಡುತ್ತಿದ್ದರು. ‌ಇಂದಿನಿಂದ ಭಾನುವಾರದ ವರೆಗೆ ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು. ಮಾಲ್ ಇವತ್ತು ಓಪನ್ ಆಗಬೇಕಾದರೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟಲೇಬೇಕಾದ ಪರಿಸ್ಥಿತಿ ಇದೆ.

    ಮಾಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಂದು ಕಾಯ್ತಿದ್ದಾರೆ. ಬೀಗ ಹಾಕಿರುವುದನ್ನು ನೋಡಿ ಹೊರಗಡೆಯೇ ನಿಂತಿದ್ದಾರೆ. ಇದನ್ನೂ ಓದಿ: ಜಿಂದಾಲ್ ಕಾರ್ಖಾನೆಯಲ್ಲಿ ಅವಘಡ – ನೀರಿನ ಹೊಂಡದಲ್ಲಿ ಬಿದ್ದು ಮೂವರ ದುರ್ಮರಣ!

  • 39 ಕೋಟಿ ತೆರಿಗೆ ಬಾಕಿ- ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ

    39 ಕೋಟಿ ತೆರಿಗೆ ಬಾಕಿ- ಬಿಬಿಎಂಪಿಯಿಂದ ಮಂತ್ರಿ ಮಾಲ್‍ಗೆ ಬೀಗ

    ಬೆಂಗಳೂರು: ಬರೋಬ್ಬರಿ 39 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‍ಗೆ ಬೀಗ ಹಾಕಿದೆ. ತೆರಿಗೆ ಕಟ್ಟುವವರೆಗೆ ಮಾಲ್ ಓಪನ್ ಮಾಡಲು ಬಿಡುವುದಿಲ್ಲ ಎಂದು ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.

    ಕಳೆದ ಮೂರು ವರ್ಷಗಳಿಂದ ಮಂತ್ರಿ ಮಾಲ್ ತೆರಿಗೆ ಕಟ್ಟಿಲ್ಲ, ಬಡ್ಡಿ ಸೇರಿ ಒಟ್ಟು 39 ಕೋಟಿ ರೂ. ತೆರಿಗೆ ಬಾಕಿ ಉಳಿದಿದೆ. ಇಂದು ಪಾಲಿಕೆ ಅಧಿಕಾರಿಗಳು ವಸೂಲಿಗೆ ತೆರಳಿದ್ದರು. ಈ ವೇಳೆ ಸಹ ತೆರಿಗೆ ಕಟ್ಟಿಲ್ಲ. ಹೀಗಾಗಿ ಬೀಗ ಜಡಿಯಲಾಗಿದೆ ಎಂದು ಮಲ್ಲೇಶ್ವರ ಪಶ್ವಿಮ ಡಿಸಿ ಪ್ರಸನ್ನ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಎಷ್ಟೇ ನೋಟಿಸ್ ನೀಡಿದರೂ ಮಂತ್ರಿ ಮಾಲ್ ಮಾತ್ರ ಬುದ್ಧಿ ಕಲಿತಿಲ್ಲ. ಪ್ರತಿಷ್ಟಿತ ಮಂತ್ರಿ ಮಾಲ್ 39 ಕೋಟಿ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಬಾಕಿ ಪಾವತಿಸುವಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದರು. 2017ರಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಬಾಕಿ ಹಿನ್ನೆಲೆ ಮಂತ್ರಿ ಮಾಲ್ ಗೆ ಬೀಗ ಹಾಕಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿತ್ತು. ಬಳಿಕ 5 ಕೋಟಿ ರೂ. ಪಾವತಿ, ಉಳಿದ ಹಣವನ್ನು ಅಕ್ಟೋಬರ್ ಅಂತ್ಯದ ವೇಳೆ ಕಟ್ಟುವುದಾಗಿ ಭರವಸೆ ನೀಡಿದ್ದರಿಂದ ಬೀಗ ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ

    ಆಸ್ತಿ ತೆರಿಗೆ ಕಟ್ಟಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೂ ಮಂತ್ರಿ ಮಾಲ್ ನಿರ್ಲಕ್ಷ್ಯ ವಹಿಸಿದೆ. ಆಸ್ತಿ ತೆರಿಗೆ ಕಟ್ಟುವಲ್ಲಿ ಮಂತ್ರಿ ಮಾಲ್ ಹಿಂದೇಟು ಹಾಕುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ಸಂಖ್ಯೆ ಹೆಚ್ಚಾಗಿದ್ದು, ಬಿಬಿಎಂಪಿಗೆ ಮಂತ್ರಿ ಮಾಲ್ ದೊಡ್ಡ ತಲೆನೋವಾಗಿದೆ. ಇದನ್ನೂ ಓದಿ:ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್

    ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಮಂತ್ರಿ ಮಾಲ್ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿದೆ. 2017ರಿಂದ ಇದೂವರೆಗೂ ಆಸ್ತಿ ತೆರಿಗೆ ಕಟ್ಟಿಲ್ಲ. ಮಂತ್ರಿ ಮಾಲ್ ಗೆ ನೋಟಿಸ್ ಕೊಟ್ಟು ಬಿಬಿಎಂಪಿ ಸುಸ್ತಾಗಿದೆ. ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಎಷ್ಟೇ ಹೇಳಿದರೂ ಮಂತ್ರಿ ಮಾಲ್ ನ ಆಡಳಿತಾಧಿಕಾರಿ ಮಾತ್ರ ಕೇಳುತ್ತಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.

    ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ಕಳೆದ 3 ವರ್ಷದಿಂದ ಬಡ್ಡಿ ಸೇರಿ ಒಟ್ಟು 39 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದರು. ಈ ಪೈಕಿ ಡಿಡಿ ಮೂಲಕ ಇಂದು 5 ಕೋಟಿ ರೂ.ಗಳಷ್ಟು ಪಾವತಿ ಮಾಡಿದ್ದಾರೆ. ಇನ್ನೂ 34 ಕೋಟಿ ರೂ.ಗಳನ್ನು ಅಕ್ಟೋಬರ್ ಕೊನೆಯಲ್ಲಿ ನೀಡುವುದಾಗಿ ಹೇಳಿದ್ದಾರೆ. ಕೊರೊನಾ ನೆಪ ಹೇಳಿದ್ದರು. ಆದರೆ ಸೆಪ್ಟೆಂಬರ್ ಒಳಗಡೆ ಪೂರ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆ ತೆರಿಗೆ ಪಾವತಿಸಲು ಆಗುತ್ತಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

  • 32 ಕೋಟಿ ರೂಪಾಯಿ ತೆರಿಗೆ ಪಾವತಿಸದ ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ

    32 ಕೋಟಿ ರೂಪಾಯಿ ತೆರಿಗೆ ಪಾವತಿಸದ ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ

    ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 32 ಕೋಟಿ ರೂಪಾಯಿ ತೆರಿಗೆ ಪಾವತಿದೇ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್‍ಗೆ ಬಿಬಿಎಂಪಿ ಬೀಗ ಜಡಿದಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಕಂದಾಯಾಧಿಕಾರಿ ಪ್ರಸನ್ನ ಕುಮಾರ್, ಕಳೆದ ಮೂರು ವರ್ಷಗಳಿಂದ ತೆರಿಗೆ ಕಟ್ಟದೆ 32 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಈ ಹಿಂದೆ ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿತ್ತು. ಆದರೂ ಎಚ್ಚೆತ್ತುಕೊಳ್ಳದ ಮಾಲ್ ಮಾಲೀಕರ ವಿರುದ್ಧ ಕಾನೂನು ಕ್ರಮವಾಗಿ ನಿನ್ನೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್‍ಗೆ ಬೀಗ ಹಾಕಿದ್ದೇವೆ ಎಂದರು.

    ಈ ಹಿಂದೆ ಮಾಲ್ ಮಾಲೀಕರು 10 ಕೋಟಿ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿರುವುದರಿಂದಾಗಿ ಪಾಲಿಕೆ ಕಾನೂನು ಕೋಶದ ಶಿಫಾರಸ್ಸಿನ ಮೇರೆಗೆ ಬೀಗ ಹಾಕಿ ಮಾ. 1ವರೆಗೆ ತೆರಿಗೆ ಪಾವತಿ ಮಾಡಲು ಕಾಲವಕಾಶ ನೀಡಿದೆ.

    ಮಂತ್ರಿ ಮಾಲ್ ಮಾಲೀಕರು ಆಸ್ತಿ ತೆರಿಗೆ ಪಾವತಿಗಾಗಿ 15 ದಿನ ಕಾಲವಕಾಶ ಕೇಳಿದ್ದರು. ಅದರಂತೆ ನೋಟಿಸ್ ನೀಡಿ 15 ದಿನಗಳು ಕಳೆದ ಕಾರಣ ಪಶ್ಚಿಮ ವಿಭಾಗದ ತೆರಿಗೆ ಅಧಿಕಾರಿಗಳು ಮಾಲ್ ಸಿಬ್ಬಂದಿಯನ್ನ ಹೊರಗೆ ಕರೆದು ಬೀಗ ಹಾಕಿದ್ದು, ಮಾರ್ಚ್ 1 ವರೆಗೆ ಅವಕಾಶವಿದ್ದು ಕಟ್ಟದೇ ಹೋದರೆ ಬಿಬಿಎಂಪಿ ಮಾಲ್‍ನ್ನು ವಶಪಡಿಸಿಕೊಳ್ಳುವುದಾಗಿ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

  • ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

    ಬೆಂಗಳೂರು: ಮಂತ್ರಿಮಾಲ್‍ನಲ್ಲಿ ಮತ್ತೆ ಎಡವಟ್ಟಾಗಿದೆ. ಶಾಪಿಂಗ್‍ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.

    ಯಲಹಂಕದ ಗುಣಶೀಲ ಎಂಬವರು ಮಾಲ್‍ಗೆ ಹೋಗಿದ್ದಾಗ ಬಟ್ಟೆಗಳ ಆಫರ್ ಪ್ರದರ್ಶನದ ಬೃಹತ್ ಬೋರ್ಡ್ ಅವರ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಗುಣಶೀಲ ಅವರ ತಲೆಗೆ ಗಾಯವಾಗಿದ್ದು, ಏಳು ಸ್ಟಿಚ್ ಹಾಕಲಾಗಿದೆ.

     

    ಘಟನೆ ನಡೆದು ರಕ್ತ ಸೋರುತ್ತಿದ್ದರೂ ಮಂತ್ರಿ ಮಾಲ್‍ನವರು ಪ್ರಥಮ ಚಿಕಿತ್ಸೆ ಮಾಡಿ ಬಿಟ್ಟಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಅಮಾನವೀಯತೆ ಮೆರೆದಿದ್ದಾರೆ. ತಮ್ಮ ಕಡೆಯಿಂದ ತಪ್ಪಾಗಿದ್ರೂ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ.

     

    ನಂತರ ಗುಣಶೀಲ ಅವರ ಪತಿ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗುಣಶೀಲ ಅವರ ತಲೆಯ ಮುಂಭಾಗಕ್ಕೆ ಏಟು ಬಿದ್ದಿದ್ದು ಎರಡು ದಿನ ಬಿಟ್ಟು ಎಂಆರ್‍ಐ ಮಾಡಿಸೋದಕ್ಕೆ ವೈದ್ಯರು ಸೂಚಿಸಿದ್ದಾರೆ ಅಂತ ತಿಳಿದುಬಂದಿದೆ.

  • ಯಶೋಧೆಯ ಬದುಕು ಕಸಿದುಕೊಂಡ `ಮಂತ್ರಿ ಮಾಲ್’

    ಯಶೋಧೆಯ ಬದುಕು ಕಸಿದುಕೊಂಡ `ಮಂತ್ರಿ ಮಾಲ್’

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಮಂತ್ರಿಮಾಲ್ ಗೋಡೆ ಕುಸಿದು ಕೆಲ ಸಮಯ ಬಾಗಿಲು ಮುಚ್ಚಿದ್ದು ನಿಮ್ಗೆಲ್ಲ ಗೊತ್ತೇ ಇದೆ. ಬಿಬಿಎಂಪಿಯಿಂದ ಕೆಲವೇ ದಿನಗಳಲ್ಲಿ ಕ್ಲೀನ್ ಚಿಟ್ ಪಡೆದ ಮಂತ್ರಿ ಮಾಲ್ ರೀ ಓಪನ್ ಆಯ್ತು. ಆದರೆ ಗೋಡೆ ಕುಸಿದ ಪರಿಣಾಮ ತನ್ನ ಕಾಲು ಕಳೆದುಕೊಂಡ ಆ ಬಡಪಾಯಿ ಮಾತ್ರ ಮಕ್ಕಳ ಸಮೇತ ಬೀದಿಗೆ ಬಿದ್ದಿದ್ದಾರೆ.

    ಯಶೋಧ ಇಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಯಶೋಧ ಅವರ ಇವತ್ತಿನ ಸ್ಥಿತಿಗೆ ಕಾರಣ ಪ್ರತಿಷ್ಠಿತ ಮಂತ್ರಿ ಮಾಲ್. ಮಂತ್ರಿ ಮಾಲ್‍ನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜನವರಿ 15ರಂದು ಗೋಡೆ ಕುಸಿದು ಕಾಲು ಕಳೆದುಕೊಂಡಿದ್ದರು. ಈ ಬಗ್ಗೆ ದೂರು ಕೊಡಬೇಡಿ. ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ನೋಡಿಕೊಳ್ತೀವಿ ಅಂದಿದ್ದ ಮಂತ್ರಿ ಮಾಲ್‍ನ ದುಡ್ಡಿರೋ ದೊಡ್ಡ ಜನ ಇವತ್ತು ಯಶೋಧರ ಕೈ ಬಿಟ್ಟಿದ್ದಾರೆ.

    ಯಶೋಧ ಅವರ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಬಲಗಾಲಿನ ಮಂಡಿ ಚಿಪ್ಪಿಗೆ ಸರ್ಜರಿ ಮಾಡಿಸೋಕೂ ದುಡ್ಡಿಲ್ಲದೇ ಪರದಾಡುತ್ತಿದ್ದಾರೆ. ಮೂರು ತಿಂಗಳಿಂದ ಸಂಬಳ ಇಲ್ಲದೇ ತುತ್ತು ಅನ್ನಕ್ಕೂ ಪರದಾಡೋ ಪರಿಸ್ಥಿತಿ ಯಶೋಧರ ಮನೆಯಲ್ಲಿದೆ. ಜೀವನಕ್ಕೆ ಆಸರೆಯಾಗಿದ್ದ ಟೈಲರಿಂಗ್ ಸಹ ಮಾಡಲಾಗದ ಪರಿಸ್ಥಿತಿಯಲ್ಲಿ ಇಡೀ ಕುಂಟುಂಬ ಕಣ್ಣೀರಿಡುತ್ತಿದೆ.

    https://www.youtube.com/watch?v=szVZzTuwMbU

    https://www.youtube.com/watch?v=Oue_rKdpkDU

    https://www.youtube.com/watch?v=Gv40HgSywO0

     

  • ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು

    ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು

    ಬೆಂಗಳೂರು: ಒಂದು ವಾರದ ಹಿಂದೆಯಷ್ಟೇ ಮತ್ತೆ ಆರಂಭಗೊಂಡಿದ್ದ ನಗರದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು ಮೂಡಿದೆ.

    ಮಂತ್ರಿಮಾಲ್ ಎರಡನೇ ಮಹಡಿಯ ಛಾವಣಿಯಲ್ಲಿ ಬಿರುಕು ಮೂಡಿದ್ದು, ಈ ಬಿರುಕಿನಲ್ಲಿ ನೀರು ಸೋರಿಕೆಯಾಗುತ್ತಿದೆ. ನಿನ್ನೆ ಸುರಿದ ಮಳೆಗೆ ಮಂತ್ರಿಮಾಲ್ ಛಾವಣಿಯಿಂದ ನೀರು ಸೋರಿಕೆಯಾಗಿದೆ.  ಎಸಿ ಪೈಪ್ ಮೂಲಕ ನೀರು ಬರುತ್ತಿರುವ ಗುಮಾನಿ ಇದ್ದು ಮತ್ತೆ ಮಂತ್ರಿಮಾಲ್ ನಲ್ಲಿ ಅಭದ್ರತೆ ಕಾಡಿದೆ.

    ಜನವರಿ 16ರಂದು ಮಂತ್ರಿ ಸ್ಕ್ವೇರ್ ಹಿಂಭಾಗದ ಗೋಡೆ (ಪ್ಯಾರಾಪೆಟ್ ವಾಲ್) ಕುಸಿದು ಬಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದರು. ಈ ಪ್ರಕರಣದ ಬಳಿಕ ಮಂತ್ರಿ ಸ್ಕ್ವೇರ್ ವಾಸಯೋಗ್ಯ ಪ್ರಮಾಣಪತ್ರವನ್ನು ಬಿಬಿಎಂಪಿ ಕೂಡಲೇ ವಾಪಸ್ ಪಡೆದಿತ್ತು. ಕಟ್ಟಡದ ಸುರಕ್ಷತೆ ಪರಿಶೀಲನೆಗಾಗಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರ ನೇತೃತ್ವದಲ್ಲಿ ಆರು ಜನ ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಮೇಯರ್ ಜಿ.ಪದ್ಮಾವತಿ ಅವರಿಗೆ ಸಲ್ಲಿಸಿದ ವರದಿ ಆಧಾರದಲ್ಲಿ 12 ಷರತ್ತುಗಳನ್ನು ವಿಧಿಸಿ ಫೆ.26 ರಿಂದ ಮಂತ್ರಿ ಮಾಲ್ ಪುನಾರಂಭಕ್ಕೆ ಬಿಬಿಎಂಪಿ ಅನುಮತಿ ನೀಡಿತ್ತು.