Tag: ಮಂತ್ರಿಮಾಲ್

  • ಪಠಾಣ್ ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಹಲ್ಲೆ- ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ

    ಪಠಾಣ್ ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಹಲ್ಲೆ- ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ

    ಬೆಂಗಳೂರು: ಪಠಾಣ್ (Pathaan) ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಜೋಡಿಯೊಂದು ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಘಟನೆ ಮಲ್ಲೇಶ್ವರಂ (Malleshwaram) ಮಂತ್ರಿಮಾಲ್‍ನ (Mantri Square Mall) ಐನಾಕ್ಸ್ (Inox) ಚಿತ್ರಮಂದಿರದಲ್ಲಿ ನಡೆದಿದೆ.

    ನಾಗರಾಜ್ ಹಾಗೂ ಅವರ ಪತ್ನಿ ಪ್ರೇಮ, ಮಗಳು, ಅಳಿಯನ ಜೊತೆ ಪಠಾಣ್ ಚಿತ್ರ ನೋಡಲು ತೆರಳಿದ್ದರು. ಚಿತ್ರ ನೋಡುವಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ ಪದೇ ಪದೇ ಕಿರುಚಾಡುತ್ತಿದ್ದರು. ಎದುರು ಸೀಟಿನಲ್ಲಿದ್ದ ಕುಟುಂಬ ಕಿರುಚಾಡದಂತೆ ಮನವಿ ಮಾಡಿದೆ. ಈ ವೇಳೆ ನಾಗರಾಜ್ ಕುಟುಂಬ ಹಾಗೂ ಜೋಡಿಯ ನಡುವೆ ಕಿರಿಕ್ ನಡೆದು ನಂತರ ಸುಮ್ಮನಾಗಿದ್ದರು. ಇದನ್ನೂ ಓದಿ: ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    POLICE JEEP

    ಸಿನಿಮಾ ಮುಗಿಸಿ ಹೊರಗೆ ಬರುತ್ತಿದ್ದಂತೆ ಜೋಡಿ, ಕುಟುಂಬದೊಂದಿಗೆ ಗಲಾಟೆ ಶುರು ಮಾಡಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ ಸಹ ತನ್ನ ಹೈ ಹೀಲ್ಡ್ ಚಪ್ಪಲಿಯಿಂದ ಪ್ರೇಮ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.

    ಮಗಳು ಅಳಿಯನ ಮೇಲೆ ಸಹ ಜೋಡಿ ಹಲ್ಲೆ ನಡೆಸಿದೆ. ನಾಗರಾಜ್ ಅವರ ಮಗಳ ಖಾಸಗಿ ಅಂಗ ಮುಟ್ಟಿ ಯುವಕ ಅಸಭ್ಯವಾಗಿ ವರ್ತಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಕುಟುಂಬ ದೂರು ದಾಖಲಿಸಿದೆ. 506, 504, 354 ಸೆಕ್ಷನ್‍ನಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚೀನಾದ ಟಿಕ್‌ಟಾಕ್ ಅನ್ನು 30 ದಿನದೊಳಗೆ ಡಿವೈಸ್‌ಗಳಿಂದ ಡಿಲೀಟ್ ಮಾಡಿ – ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ

  • 42.63 ಕೋಟಿ ಆಸ್ತಿ ತೆರಿಗೆ ಬಾಕಿ – ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ತಂಡ ದಾಳಿ

    42.63 ಕೋಟಿ ಆಸ್ತಿ ತೆರಿಗೆ ಬಾಕಿ – ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ತಂಡ ದಾಳಿ

    ಬೆಂಗಳೂರು: 42.63 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ (Mantri Square Mall) ಮೇಲೆ ಬಿಬಿಎಂಪಿ (BBMP) ಅಧಿಕಾರಿಗಳ ತಂಡ ದಾಳಿ ನಡೆಸಿದೆ.

    ಈ ಹಿಂದೆಯೇ ಮಂತ್ರಿ ಮಾಲ್ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರೂ ತೇರಿಗೆ ಕಟ್ಟದ ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆಸ್ತಿ ತೆರಿಗೆ (Property Tax) ಕಟ್ಟದ ಹಿನ್ನೆಲೆಯಲ್ಲಿ ಮಾಲ್‌ನಲ್ಲಿರುವ ಕಚೇರಿ ವಸ್ತುಗಳನ್ನ ವಶಪಡಿಸಿಕೊಳ್ಳೋದಕ್ಕೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್

    ಪೊಲೀಸ್ ಮತ್ತು ಮಾರ್ಷಲ್ ನೇತೃತ್ವದಲ್ಲಿ ದಿಢೀರ್ ದಾಳಿ ಮಾಡಿರುವ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಕಚೇರಿಯ ಲ್ಯಾಪ್‌ಟಾಪ್, ಕಂಪ್ಯೂಟರ್, ಚೇರ್, ಟೇಬಲ್, ಮ್ಯೂಯೆಬಲ್ ಸೇರಿದಂತೆ ಎಲ್ಲಾ ಯಂತ್ರೋಪಕರಣ ವಸ್ತುಗಳನ್ನ ವಶಕ್ಕೆ ಪಡೆದುಕೊಳ್ಳುತ್ತಿದೆ. ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಅಕ್ರಮ ವಶದಲ್ಲಿರುವ ತೀರ್ಥಹಳ್ಳಿಯ ಸಾಫ್ಟ್‌ವೇರ್‌ ಇಂಜಿನಿಯರ್; ಬಿಡುಗಡೆಗೆ ಗೃಹ ಸಚಿವ ಶತಪ್ರಯತ್ನ

    ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಯುಕ್ತ ಯೋಗೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಆಸ್ತಿ ತೆರಿಗೆ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಮಂತ್ರಿ ಮಾಲ್ 42. 63 ಕೋಟಿ ರೂ. ಬಾಕಿ ಉಳಿಸಿಕೊಂಡಿಸಿದೆ. ನೋಟಿಸ್ ಕೊಟ್ಟರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ದರಿಂದ ವಸ್ತುಗಳನ್ನ ವಶಪಡಿಸಿಕೊಳ್ಳೋದಕ್ಕೆ ಮುಂದಾಗಿದ್ದೇವೆ. ಚರಾಸ್ತಿಗಳ ಮೊತ್ತ ಎಷ್ಟಿದೆ ಎಂದು ಪರಿಶೋಧನೆ ಮಾಡುತ್ತಿದ್ದೇವೆ. ಮಾರ್ಗಸೂಚಿ ಪ್ರಕಾರವೇ ದಾಳಿ ಮಾಡಿದ್ದು, ಇನ್ನಷ್ಟು ವಸ್ತುಗಳನ್ನ ವಶಪಡಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

    ಮಂತ್ರಿ ಮಾಲ್ ಮುಖ್ಯ ವ್ಯವಸ್ಥಾಪಕ ಶಬೀರ್ ಮಾತನಾಡಿ, ಆಸ್ತಿ ಉಳಿಸಿಕೊಂಡಿರೋದು ಅಭಿಷೇಕ್ ಡೆವಲಪರ್ಸ್. ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿಲ್ಲ. ಬಿಬಿಎಂಪಿ ದಾಳಿ ಮಾಡ್ತಿರೋದು ಕಾನೂನು ಬಾಹಿರ. ನಾವು ಕೋರ್ಟ್ನಿಂದ ತಡೆಯಾಜ್ಞೆ ಕೂಡಾ ತಂದಿದ್ದೇವೆ. ಏಕಾಏಕಿ ಈ ರೀತಿ ಮಾಡಿರೋದು ಸರಿಯಲ್ಲ. ನಾವು ಕೋರ್ಟಿಗೆ ಹೋಗ್ತೇವೆ ಎಂದಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದಿನಿಂದ ಮಂತ್ರಿಮಾಲ್ ಓಪನ್

    ಇಂದಿನಿಂದ ಮಂತ್ರಿಮಾಲ್ ಓಪನ್

    ಬೆಂಗಳೂರು: ಮಂತ್ರಿಮಾಲ್ ಕಾರ್ಯಾರಂಭಕ್ಕೆ ಬಿಬಿಎಂಪಿ 12 ಷರತ್ತುಗಳನ್ನ ವಿಧಿಸಿ ಅನುಮತಿ ನೀಡಿದ್ದು, 40 ದಿನಗಳಿಂದ ಸ್ಥಗಿತಗೊಂಡಿದ್ದ ಮಂತ್ರಿಮಾಲ್ ಇಂದಿನಿಂದ ಓಪನ್ ಆಗಿದೆ.

    ಬಿದ್ದಿರುವ ಗೋಡೆಯನ್ನ ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕು. ಗೋಡೆ ಕುಸಿತವಾಗಿರುವ ಕಡೆ ಇರುವ ಡೋರ್‍ಗಳನ್ನ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಷರತ್ತು ವಿಧಿಸಿದೆ. ಬಿಬಿಎಂಪಿಯ ಸೂಚನೆ ಮೇರೆಗೆ ಮಂತ್ರಿಮಾಲ್ ಶೇ. 80ರಷ್ಟು ಬದಲಾವಣೆ ಮಾಡಿಕೊಂಡಿದ್ದು, ಏನೇ ಆದ್ರೂ ನಾವೇ ಜವಬ್ದಾರಿ ಎಂದು ಬರೆದುಕೊಟ್ಟಿದೆ.

    ಮಂತ್ರಿಮಾಲ್‍ನಲ್ಲಿ ಕೊಳಚೆ ನೀರು ಹರಿದು ಗೋಡೆ ಕುಸಿದಿತ್ತು, ಈಗ ಪೈಪು ಬದಲಿಸಲಾಗಿದೆ. ಮುಂದೆ ಪೈಪು ತುಕ್ಕು ಹಿಡಿಯದಂತೆ `ಆ್ಯಂಟಿ ಕೊರೊಸೀವ್’ ಬಣ್ಣ ಹಚ್ಚಲಾಗಿದೆ. ಬೇರೆ ಕಡೆ ಸ್ಲಾಬ್, ಸಿಮೆಂಟ್, ಕಬ್ಬಿಣ, ಕಟ್ಟಡ ಸಲಕರಣೆ ಗುಣಮಟ್ಟ ಚೆನ್ನಾಗಿವೆ. ಮಂತ್ರಿಮಾಲ್ ಕಟ್ಟಡದ ಎಲ್ಲಾ ಭಾಗವೂ ವಾಣಿಜ್ಯ ಚಟುವಟಿಕೆಗೆ ಸಮರ್ಥವಾಗಿದೆ. 60 ಕಡೆ ಸ್ಯಾಂಪಲ್ ಪರೀಕ್ಷೆ ಮಾಡಿದ್ದು ಕಟ್ಟಡ ಸಂಪೂರ್ಣ ಗಟ್ಟಿಮುಟ್ಟಾಗಿದೆ ಎಂದು ಮಾಲ್ ವರದಿ ತಯಾರಿಸಿದೆ. ವರದಿ ಬಳಿಕ ಹಲವು ಷರತ್ತುಗಳನ್ನ ವಿಧಿಸಿ ಬಿಬಿಎಂಪಿ ಅನುಮತಿ ನೀಡಿದೆ.

    ಜನವರಿ 16 ರಂದು ಮಂತ್ರಿಮಾಲ್ ಹಿಂಬದಿ ಗೋಡೆ ಕುಸಿದಿತ್ತು. ಬಳಿಕ ತಜ್ಞರ ತಂಡ ರಚನೆ ಮಾಡಿದ್ದ ಬಿಬಿಎಂಪಿ, ವರದಿ ಬಳಿಕ ಕೆಲ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿತ್ತು. ಇದೀಗ ಬಿಬಿಎಂಪಿ ಸೂಚನೆ ಮೇರೆಗೆ ಬದಲಾವಣೆ ಮಾಡಿಕೊಂಡಿರುವ ಮಂತ್ರಿಮಾಲ್ ಮತ್ತೆ ಕಾರ್ಯರಂಭ ಮಾಡುತ್ತಿದೆ.

    ಮಂತ್ರಿ ಮಾಲ್‍ಗೆ 12 ಷರತ್ತುಗಳು:

    1. ತಜ್ಞರ ಸಮಿತಿ ವರದಿ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದು.
    2. ಗೋಡೆ ಕುಸಿದಿರುವ ಭಾಗವನ್ನ ತಜ್ಞರ ಸೂಚನೆ ಪ್ರಕಾರ ಪುನರ್ ನಿರ್ಮಾಣ ಮಾಡಬೇಕು.
    3. ಪ್ರತಿ ವರ್ಷ ನಿರ್ವಹಣಾ ಮಾಹಿತಿಯನ್ನ ಬಿಬಿಎಂಪಿಗೆ ನೀಡಬೇಕು.
    4. ತುರ್ತು ಸೇವೆಗೆ ತೆರೆದುಕೊಳ್ಳುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ಅಗ್ನಿ ಸುರಕ್ಷತೆ ಬಗ್ಗೆ ಪ್ರಮಾಣೀಕರಿಸಬೇಕು.
    5. ಕಟ್ಟಡದ ಸುಭದ್ರತೆ ಬಗ್ಗೆ ತಜ್ಞರ ಸಮಿತಿಯಿಂದ ಪರಿಶೀಲಿಸಿ ಬಿಬಿಎಂಪಿಗೆ ವರದಿ ನೀಡಬೇಕು.
    6. ವಾಟರ್ ಸಪ್ಲೈ, ಒಳ ಚರಂಡಿ, ಎಸಿ ಉಪಕರಣಗಳು ಸೇರಿದಂತೆ ಇತರೆ ಸರ್ವಿಸ್‍ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು.
    7. ಪಾರ್ಕಿಗ್ ಜಾಗವನ್ನು ಪಾರ್ಕಿಂಗ್ ಜಾಗಕ್ಕೆ ಮಾತ್ರ ಉಪಯೋಗಿಸಬೇಕು.
    8. ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಅನುಮತಿ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು.
    9. ಕಟ್ಟಡದ ಟೆರೆಸ್ ಭಾಗದಲ್ಲಿ ಲೀಕ್ ಪ್ರೂಫ್ ಟೆಕ್ನಾಲಜಿ ಬಳಸಬೇಕು.
    10. ಕಟ್ಟಡದ 3ನೇ ಅಂತಸ್ತಿನ ಎಲ್ಲಾ ಹೊರ ದ್ವಾರಗಳನ್ನು ಗೋಡೆ ನಿರ್ಮಾಣ ಸಂಪೂರ್ಣವಾಗುವವರೆಗೂ ಮುಚ್ಚಬೇಕು.
    11. ಮಾಲ್‍ಗೆ ಬರುವ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದ ಮಂತ್ರಿಮಾಲ್ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಅಷ್ಟೇ ಅಲ್ಲದೆ ಮುಂದೆ ಏನಾದ್ರು ಅನಾಹುತ ಆದ್ರೆ ಅವರೇ ಜವಾಬ್ದಾರರಾಗಬೇಕು.
    12. 3ನೇ ಅಂತಸ್ತಿನಲ್ಲಿರೋ ಸ್ಕೇರಿ ಹೌಸನ್ನು ಗೋಡೆ ನಿರ್ಮಾಣವಾಗುವವರೆಗೂ ಮುಚ್ಚಬೇಕು.