Tag: ಮಂತ್ರಾಲಯ ಶ್ರೀಗಳು

  • ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು: ಮಂತ್ರಾಲಯ ಶ್ರೀಗಳು

    ರಾಜಕೀಯಕ್ಕೆ ಯಾರು ಬೇಕಾದರೂ ಬರಬಹುದು: ಮಂತ್ರಾಲಯ ಶ್ರೀಗಳು

    ರಾಯಚೂರು: ರಾಜಕೀಯಕ್ಕೆ ಇಂಥವರೆ ಬರಬೇಕು, ಬರಬಾರದರು ಅಂತೇನಿಲ್ಲ, ರಾಜಕೀಯಕ್ಕೆ ಬಂದಂತಹ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

    ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಬಿಜೆಪಿಯಿಂದ (BJP) ಸಂತರಿಗೆ ಸಿಎಂ ಸ್ಥಾನಮಾನದ ಆಲೋಚನೆ ವಿಚಾರಕ್ಕೆ ಮಂತ್ರಾಲಯದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಂತ್ರಾಲಯ (Mantralayam) ಶ್ರೀಗಳು ಮುಖ್ಯವಾಗಿ ನಾನು ಮೊದಲಿನಿಂದಲೂ ಹೇಳೋದು, ಇಂಥ ವ್ಯಕ್ತಿ ಬರಬೇಕು, ಇಂಥವರೇ ಬರಬಾರದು ಎನ್ನುವುದಿಲ್ಲ. ರಾಜಕೀಯಕ್ಕೆ ಬಂದಂತ ವ್ಯಕ್ತಿಗಳು ರಾಜ್ಯದ ಜನತೆ ಬಗ್ಗೆ ಕಾಳಜಿ ಉಳ್ಳವರಾಗಿರಬೇಕು. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವಂತ ವ್ಯಕ್ತಿ ಆಗಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ, ಅವರಿಗೆ ಕಿವಿ ಕೇಳಿಸಲ್ಲ, ಕಣ್ಣು‌ ಕಾಣಲ್ಲ : ಪ್ರಭು ಚವ್ಹಾಣ್ ಟಾಂಗ್

    ಧರ್ಮದಲ್ಲಿ ರಾಜಕೀಯ ಬರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮವಿದ್ದರೆ ಅದು ಉತ್ತಮವಾದ ಗುಣಮಟ್ಟದ ಆಡಳಿತ, ವ್ಯವಸ್ಥೆಯಾಗಿ ಕಾಣುತ್ತದೆ ಅಂತ ಭಾವಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸ್ಕೂಟರ್‌ಗೆ ಡಿಕ್ಕಿ ಹೊಡೆದು 6ರ ಬಾಲಕನನ್ನು 2 ಕಿ.ಮೀ ಎಳೆದೊಯ್ದ ಟ್ರಕ್

  • ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ರಾಯಚೂರು: ಸರ್ಕಾರಿ ನಿಯಂತ್ರಣದಿಂದ ಹಿಂದೂ ಧಾರ್ಮಿಕ ದೇವಾಲಯಗಳಿಗೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿಲುವನ್ನು ರಾಯಚೂರಿನಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸ್ವಾಗತಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಸರ್ಕಾರದ ಅಧೀನದಲ್ಲಿನ ದೇವಸ್ಥಾನ ಬೇರ್ಪಡಿಸುವ ವಿಚಾರ ಸೂಕ್ತ ನಿರ್ಧಾರವಾಗಿದೆ. ಆಸಕ್ತಿ ಇರುವವರು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ದೇವಾಲಯಗಳ ನಿರ್ವಹಣೆ ಮಾಡುವುದು ಒಳ್ಳೆಯದು. ಅಲ್ಲದೇ ದೇಗುಲಗಳ ಅಭಿವೃದ್ಧಿ, ಉತ್ಸವ ಉಸ್ತುವಾರಿ ನೀಡುವುದು ಸೂಕ್ತ. ಸಿಎಂ ಅವರ ಈ ನಿರ್ಧಾರ ಕೂಡಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸಿದರು. ಇದನ್ನೂ ಓದಿ: ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ

    ಹಿಂದೂ ದೇವಸ್ಥಾನಗಳಿಗೆ ವಿಶೇಷ ಕಾನೂನು ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಅಧಿವೇಶನದಲ್ಲಿ, ಹಿಂದೂ ದೇವಸ್ಥಾನಗಳಿಗೆ ಒಂದು ಕಾನೂನು ತರುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆ ಸುಬುಧೇಂದ್ರ ತೀರ್ಥರು ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಬೇರೆ ಸಮುದಾಯಗಳ ಪ್ರಾರ್ಥನಾ ಸ್ಥಳಗಳು ಸ್ವಾತಂತ್ರ್ಯವಾಗಿವೆ. ಹಿಂದೂಗಳ ದೇವಾಲಯಗಳು ಹಲವು ನಿಯಮಗಳ ನಿಯಂತ್ರಣದಲ್ಲಿ ಇವೆ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಗೆ ಒಳಪಡಿಸಲಾಗಿದ್ದು, ಬಜೆಟ್ ಅಧಿವೇಶನದಲ್ಲಿ ಹಿಂದೂ ದೇವಸ್ಥಾನಗಳಿಗೆ ಒಂದು ಕಾನೂನು ತರುತ್ತೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ