Tag: ಮಂಡ್ಯ. ಮಿಮ್ಸ್ ಆಸ್ಪತ್ರೆ

  • ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

    ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

    ಮಂಡ್ಯ: ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪತಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಸಂಧ್ಯಾ(23) ಗಂಡನಿಂದಲೇ ಕೊಲೆಯಾಗಿರುವ ಮಹಿಳೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂದೂರು ಬಳಿ ಈ ಘಟನೆ ನಡೆದಿದ್ದು, ವಾರದ ಬಳಿಕ ಪೊಲೀಸರ ವಿಚಾರಣೆಯ ಬಳಿಕ ಪತ್ನಿಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ.

    ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ನಿವಾಸಿ ಷಡಕ್ಷರಿಯನ್ನು ಒಂದೂವರೆ ವರ್ಷದ ಹಿಂದಷ್ಟೇ ಸಂಧ್ಯಾ ಮದುವೆಯಾಗಿದ್ದರು. ಆದರೆ ಇವರ ಸಂಸಾರದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ, ಹೆಂಡತಿ ದೂರವಾಗಿದ್ರು. ತಂದೆ ಮನೆಯಲ್ಲಿದ್ದುಕೊಂಡು ಸಂಧ್ಯಾ ಕಂಪ್ಯೂಟರ್ ತರಬೇತಿಗೆ ಪಡೆಯುತ್ತಿದ್ದರು. ಆದರೆ ನ.16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ

    ಈ ಹಿನ್ನೆಲೆ ಸಂಧ್ಯಾ ಪೋಷಕರು ಮನೆಗೆ ಮಗಳು ಬಾರದಿದ್ದಕ್ಕೆ ಬೆಳಕವಾಡಿ ಪೊಲೀಸ್ ಗೆ ನಾಪತ್ತೆ ದೂರು ನೀಡಿದ್ದರು. ಮತ್ತೊಂದೆಡೆ ಅಳಿಯ ಷಡಕ್ಷರಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿದ್ದ. ಪರಿಣಾಮ ಪೊಲೀಸರು ಆತ ಆಸ್ಪತ್ರೆಯಿಂದ ಬಿಡುಗಡೆಯಾಗುವರೆಗೂ ಕಾದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಆರಂಭದಲ್ಲಿ ತನಗೇನು ಗೊತ್ತಿಲ್ಲ ಎನ್ನುತ್ತಿದ್ದ ಷಡಕ್ಷರಿ ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಷಡಕ್ಷರಿ ಕಂಪ್ಯೂಟರ್ ಕ್ಲಾಸ್ ನಿಂದ ಸಂಧ್ಯಾನನ್ನು ಕರೆದುಕೊಂಡು ಬಂದು ಕುಂದೂರು ಬಳಿಯ ನಾಲೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ಲಾನ್ ಮಾಡಿ ಕೊನೆಗೂ ಸಿಕ್ಕಿ ಹಾಕಿಕೊಂಡಿದ್ದಾನೆ. ಪೊಲೀಸರು ಪ್ರಸ್ತುತ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ಮಂಡ್ಯದ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳಲ್ಲಿ ಬೆಚ್ಚಗೆ ಮಲಗುತ್ತಿವೆ ನಾಯಿಗಳು!

    ಮಂಡ್ಯದ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳಲ್ಲಿ ಬೆಚ್ಚಗೆ ಮಲಗುತ್ತಿವೆ ನಾಯಿಗಳು!

    – ಆಸ್ಪತ್ರೆಯ ಬೇಜವಾಬ್ದಾರಿಗೆ ಸಾರ್ವಜನಿಕರು ಕಿಡಿ

    ಮಂಡ್ಯ: ಕೊರೊನಾ ಅಟ್ಟಹಾಸದಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅನ್ನೋ ಸಂಖ್ಯೆಯೇ ಹೆಚ್ಚು. ಆದರೆ ಇಲ್ಲೊಂದು ಆಸ್ಪತ್ರೆ ರೋಗಿಗಳಿಗೆ ಯಾಕೆ ನಾವು ಶ್ವಾನಗಳಿಗೂ ಬೆಡ್ ಕೊಡುತ್ತೀವಿ ಬನ್ನಿ ಅನ್ನುತ್ತಿದೆ.

    ಹೌದು. ಡಾಕ್ಟರೇ ನಾವು ಬೆಡ್ ಮೇಲೆ ಮಲಗಿದ್ದೇವೆ, ನೀವು ಎಲ್ಲಿ ಹೋಗಿದ್ದೀರಾ ಬಂದು ಟ್ರೀಟ್‍ಮೆಂಟ್ ಕೊಡಿ ಅನ್ನೋ ದೃಶ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

    ಮಂಡ್ಯ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳ ಮೇಲೆ ಸಾಲು ಸಾಲಾಗಿ ನಾಯಿಗಳು ಬೆಚ್ಚಗೆ ಮಲಗಿವೆ. ಈ ಬೀದಿ ನಾಯಿಗಳನ್ನು ಓಡಿಸೋಕೂ ಮಿಮ್ಸ್‍ನಲ್ಲಿ ಸಿಬ್ಬಂದಿ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಮಿಮ್ಸ್ ಆಸ್ಪತ್ರೆಯ ವಾರ್ಡಿನಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನಾಯಿಗಳು ತಮ್ಮ ವಾಸವನ್ನು ಆಸ್ಪತ್ರೆಯಲ್ಲಿ ಮಾಡ್ತಾ ಇವೆ ಎಂಬ ಆರೋಪ ಕೇಳಿ ಬಂದಿದೆ.

    ಕೋವಿಡ್ ಬಂದಾಗಿನಿಂದ ಆಸ್ಪತ್ರೆಗಳಲ್ಲಿ ಬೆಡ್‍ಗಳೇ ಇಲ್ಲ ಅಂತ ಮಿಮ್ಸ್ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಇಲ್ಲಿ ನೋಡಿದರೆ ಬೆಡ್‍ಗಳು ಖಾಲಿ ಬಿದ್ದಿವೆ. ಖಾಲಿ ಇರೋ ಈ ಬೆಡ್‍ಗಳ ಮೇಲೆ ನಾಯಿಗಳು ಮಲಗಿಕೊಂಡಿವೆ. ಮಂಡ್ಯ ಮಿಮ್ಸ್ ಆಸ್ಪತ್ರೆಯ ಸಿಬ್ಬಂದಿಯ ಈ ನಿರ್ಲಕ್ಷ್ಯತನಕ್ಕೆ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

    ಒಟ್ಟಾರೆ ಕೊರೊನಾ ಅಟ್ಟಹಾಸದಿಂದ ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ರೋಗಿಗಳು ಪರದಾಡುತ್ತಿದ್ರೆ, ಇತ್ತ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಆಸ್ಪತ್ರೆ ವಾರ್ಡ್ ನಾಯಿಗಳ ಮನೆಯಾಗಿದೆ. ಈಗಲಾದರು ಅಧಿಕಾರಿಗಳಿ ಎಚ್ಚೇತ್ತುಕೊಂಡು ಸೂಕ್ತ ನಿರ್ವಹಣೆ ಮಾಡಬೇಕಿದೆ.