Tag: ಮಂಡ್ಯ ಆಸ್ಪತ್ರೆ

  • ಮಂಡ್ಯದ ಮಿಮ್ಸ್‌ನಲ್ಲಿ ಹೃದ್ರೋಗಿಗಳ ವಿಭಾಗವೇ ಇಲ್ಲ

    ಮಂಡ್ಯದ ಮಿಮ್ಸ್‌ನಲ್ಲಿ ಹೃದ್ರೋಗಿಗಳ ವಿಭಾಗವೇ ಇಲ್ಲ

    ಮಂಡ್ಯ: ರಾಜ್ಯದಲ್ಲಿ ಹೃದಯಾಘಾತ (Heart Attack) ಸುದ್ದಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇತ್ತ ಹೃದಯ ಸಂಬಂಧಿ ರೋಗಗಳಿಗೆ (Heart Disease) ಚಿಕಿತ್ಸೆ ನೀಡಬೇಡಬೇಕಾದ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯ ವಿಭಾಗವೇ ಇಲ್ಲ. ಇಲ್ಲಿಗೆ ಬರುವ ಹೃದಯ ಸಂಬಂಧಿ ರೋಗಿಗಳು ಬೇರೆ ಜಿಲ್ಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಸದ್ಯ ರಾಜ್ಯದಲ್ಲಿ ಹಾಸನ (Hassan) ಜಿಲ್ಲೆಯಲ್ಲಿ ಹೃದಯಾಘಾತದಿಂದ (Heart Attack) ಸರಣಿಯಾಗಿ ಸಾವನ್ನಪ್ಪುತ್ತಿದ್ದಾರೆ. ಹಾಸನ ಮಾತ್ರವಲ್ಲ ರಾಜ್ಯದ ಹಲವೆಡೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ವಿಚಾರದಲ್ಲಿ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಏನು ಹೊರತಾಗಿಲ್ಲ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆ (MIMS Hospital) ಒಂದರಲ್ಲಿಯೇ ಕಳೆದ 3 ತಿಂಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹೃದಯಾಘಾತದಿಂದ ಮನೆಯಲ್ಲಿ ಹಾಗೂ ಬೇರೆ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇದನ್ನೂ ಓದಿ: ಬೆಂಗಳೂರು ಸ್ಫೋಟದ ಸೂತ್ರಧಾರಿ ಅರೆಸ್ಟ್‌ – ಶಂಕಿತರ ಮನೆಯಲ್ಲಿ ಭಾರೀ ಪ್ರಮಾಣದ ದೇಶ ವಿನಾಶಕಾರಿ ವಸ್ತುಗಳು ಪತ್ತೆ

    ಸಾಂದರ್ಭಿಕ ಚಿತ್ರ

    ಮೊದಲೆಲ್ಲಾ ಮಿಮ್ಸ್ ಆಸ್ಪತ್ರೆಗೆ ಎದೆ ನೋವು ಎಂದು ಕಡಿಮೆ ಸಂಖ್ಯೆಯಲ್ಲಿ ಬರ್ತಾ ಇದ್ದರು. ಆದರೆ ಇದೀಗ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ, ಆದರೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹೃದಯದ ವಿಭಾಗವೇ ಇಲ್ಲ, ಹೀಗಾಗಿ ಹೃದಯ ಸಂಭವಿಸಿದ ವೈದ್ಯರು ಕೂಡ ಇಲ್ಲ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಸಾರಥ್ಯ?

    ಎದೆ ನೋವು ಎಂದು ಮಿಮ್ಸ್ ಆಸ್ಪತ್ರೆಗೆ ಹೋದರೆ ಕೇವಲ ಇಸಿಜಿ, ಎಕೋ, ಸಿಪಿಕೆಎಂಬಿ ಪರೀಕ್ಷೆಯಷ್ಟೇ ಮಾಡ್ತಾರೆ. ಹೆಚ್ಚಿನ ಚಿಕಿತ್ಸೆ ಬೇಕು ಅಂದ್ರೆ ಮೈಸೂರು ಅಥವಾ ಬೆಂಗಳೂರು ಆಸ್ಪತ್ರೆಗೆ ಇಲ್ಲಿನ ವೈದ್ಯರು ಚಿಕಿತ್ಸೆಗೆ ರೆಫರ್ ಮಾಡುತ್ತಾರೆ. ಇದನ್ನೂ ಓದಿ:  ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ

    ಹೃದಯಾಘಾತವಾದ ವ್ಯಕ್ತಿಗೆ ಒಂದೂವರೆ ಗಂಟೆಯ ಅವಧಿಯ ಒಳಗೆ ಚಿಕಿತ್ಸೆ ನೀಡಿದರೆ ಆ ವ್ಯಕ್ತಿಯನ್ನು ಬದುಕಿಸುವ ಅವಕಾಶ ಇರುತ್ತೆ.‌ ಆದ್ರೆ ಮಂಡ್ಯದ ಮಿಮ್ಸ್‌ನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ವೈದ್ಯರೇ ಇಲ್ಲ ಎಂದರೆ ದುರದೃಷ್ಟಕರ ಸಂಗತಿ. ಈಗಲಾದರು ಮಂಡ್ಯ ಮಿಮ್ಸ್‌ನಲ್ಲಿ ಹೃದಯದ ವಿಭಾಗ ಓಪನ್ ಆಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

  • ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

    ಮಂಡ್ಯ ಮಿಮ್ಸ್‌ನಲ್ಲಿ ಅವ್ಯವಸ್ಥೆಯ ಆಗರ – ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ

    ಮಂಡ್ಯ: ಬಡವರಿಗೆ ಕಡಿಮೆ ದುಡ್ಡಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವುದು ಸರ್ಕಾರಿ ಆಸ್ಪತ್ರೆಗಳ (Government Hospitals) ಕರ್ತವ್ಯ. ಆದ್ರೆ ಸರ್ಕಾರಿ ಆಸ್ಪತ್ರೆಗಳು ತನ್ನ ಜವಾಬ್ದಾರಿ ಮರೆತು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿವೆ. ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆ ಕೂಡ ಅವ್ಯವಸ್ಥೆ ಆಗರವಾಗಿದ್ದು, ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಅಲ್ಲಿನ ಬೇಜವಾಬ್ದಾರಿ ನಿರ್ವಹಣೆ ಕಂಡು ಶಾಕ್ ಆಗಿದ್ದಾರೆ.

    ಗಬ್ಬು ನಾರುತ್ತಿರುವ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಬಾತ್‌ರೂಂ ಇಲ್ಲದ ಡೋರ್‌ಗಳು ಇಂತಹ ಅವ್ಯವಸ್ಥೆ ಕಂಡುಬಂದಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ. ಸದಾ ವಿವಾದಗಳಿಂದಲೇ ಸುದ್ದಿಗೆ ಬರುವ ಮಂಡ್ಯ ಮಿಮ್ಸ್‌ಗೆ ನಿನ್ನೆ ಜಿಲ್ಲಾಧಿಕಾರಿ ಡಾ.ಕುಮಾರ್‌ ದಿಢೀರ್ ಭೇಟಿ ಕೊಟ್ಟಿದ್ರು. ಆಸ್ಪತ್ರೆಯ ಅಶುಚಿತ್ವ, ಅಸಮರ್ಪಕ ನಿರ್ವಹಣೆಯನ್ನ ಕಣ್ಣಾರೆ ಕಂಡ ಡಿಸಿಗೆ ಒಂದು ಕ್ಷಣ ದಂಗುಬಡಿದಂತಾಯಿತು. ಇದನ್ನೂ ಓದಿ: ಲಾರಿ-ಟ್ಯಾಂಕರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಓರ್ವ ಸಾವು

    ಮಂಡ್ಯ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಡಾ. ಕುಮಾರ ಹೊರರೋಗಿಗಳ ವಿಭಾಗ, ಸರ್ಜರಿ ಹಾಗೂ ಪುರುಷರು, ಮಹಿಳೆಯರ ವಾರ್ಡ್ ಪರಿಶೀಲಿಸಿದರು. ಗಬ್ಬು ನಾರುತ್ತಿದ್ದ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದಿದ್ದ ಹಾಸಿಗೆ, ಬೆಡ್‌ಶೀಟ್‌ಗಳು ಜಿಲ್ಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಶೌಚಾಲಯದಲ್ಲಿ ನೀರು ಬಂದ್ ಆಗಿತ್ತು. ಮಹಿಳೆಯರ ಬಾತ್‌ರೂಂ‌ಗೆ ಬಾಗಿಲನ್ನು ಹಾಕಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಈ ವೇಳೆ ಕಂಡುಬಂದಿತು.

    ಹೀಗೆ ಆಸ್ಪತ್ರೆಯ ಹತ್ತು ಹಲವು ಸಮಸ್ಯೆಗಳನ್ನು ಕಣ್ಣಾರೆ ಕಂಡ ಡಿಸಿ ಕುಮಾರ ಅಕ್ಷರಶಃ ಸುಸ್ತಾಗಿ ಹೋದ್ರು. ಅಲ್ಲೇ ಇದ್ದ ಮಿಮ್ಸ್ ನಿರ್ದೇಶಕ ಡಾ. ನರಸಿಂಹಮೂರ್ತಿ, ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್‌ ಅವರನ್ನ ತರಾಟೆಗೆ ತೆಗೆದುಕೊಂಡರು. ನೀವೆಲ್ಲಾ ಮನುಷ್ಯರ ಮೃಗಗಳಾ? ನಿಮ್ಮ ಮನೆಯನ್ನ ಹೀಗೆ ಇಟ್ಕೋತೀರಾ ಎಂದು ಅಧಿಕಾರಿಗಳ ಬೆವರಿಳಿಸಿದ್ರು.

    ಪರಿಶೀಲನೆ ಬಳಿಕ ಸಭೆ ನಡೆಸಿದ ಡಿಸಿ, ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಸೂಚಿಸಿದ್ರು. ಜಿಲ್ಲಾಧಿಕಾರಿಗಳ ಮುಂದೆ ತಲೆಯಾಡಿಸಿದ ಅಧಿಕಾರಿಗಳು ಇನ್ಮುಂದಾದರೂ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಕೆಲಸ ಮಾಡ್ತಾರಾ ಅನ್ನೋದೆ ಸದ್ಯದ ಪ್ರಶ್ನೆ. ಇದನ್ನೂ ಓದಿ: MUDA Scam | ಕೊನೇ ಹಂತದಲ್ಲಿದೆ ಸಿಎಂ ವಿರುದ್ಧದ ತನಿಖೆ