Tag: ಮಂಡಿ

  • ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಶಿಮ್ಲಾ:  ಹಿಮಾಚಲ ಪ್ರದೇಶದಲ್ಲಿ (Himachal Pradesh) ಮೇಘಸ್ಫೋಟ ಸಂಭವಿಸಿ ಸುಮಾರು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದುರಂತದ ನಡುವೆ ಮಂಡಿ (Mandi) ಜಿಲ್ಲೆಯ ಹಳ್ಳಿಯೊಂದರಲ್ಲಿ ಶ್ವಾನವೊಂದು (Dog) ಬೊಗಳಿದ್ದರಿಂದ 20 ಕುಟುಂಬಗಳ 67 ಜನರು ಕೊನೆ ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

    ಜೂನ್ 30 ರಂದು ಮಧ್ಯರಾತ್ರಿ ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ಗ್ರಾಮದ ನರೇಂದ್ರ ಅವರ ನಿವಾಸದ ಎರಡನೇ ಮಹಡಿಯಲ್ಲಿ ಮಲಗಿದ್ದ ಸಾಕು ನಾಯಿ ಇದ್ದಕ್ಕಿದ್ದಂತೆ ಬೊಗಳಲು ಆರಂಭಿಸಿದೆ.

    ರಾತ್ರಿ ಇಷ್ಟೊಂದು ಬೊಗಳದ ನಾಯಿ ಯಾಕೆ ಈ ಪರಿ ಬೊಗಳುವುದನ್ನು ನೋಡಿ ಅಚ್ಚರಿಗೊಂಡು ನರೇಂದ್ರ ಎಚ್ಚರಗೊಂಡಿದ್ದಾರೆ. ನಂತರ ನಾಯಿ ಬೊಗಳಿದ ಜಾಗದ ಬಳಿ ಹೋದಾಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿದ್ದನ್ನು ನೋಡಿದ್ದಾರೆ. ನೋಡುತ್ತಿರುವಾಗಲೇ ಆ ಬಿರುಕಿನ ಮೂಲಕ ನೀರು ಮನೆ ಒಳಗಡೆ ಹರಿಯಲು ಆರಂಭಿಸಿತ್ತು.  ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ನೀರು ಮನೆಗೆ ನುಗ್ಗಿದೆ ಎಂಬದು ಖಾತ್ರಿ ಆಗುತ್ತಿದ್ದಂತೆ  ನಾಯಿಯ ಜೊತೆ ಕೆಳಗಡೆ ಮಲಗಿದ್ದ ಕುಟುಂಬದ ಸದಸ್ಯರನ್ನು ಎಬ್ಬಿಸಿ ಕೂಡಲೇ ಹೊರ ಬರುವಂತೆ ಹೇಳಿದ್ದಾರೆ.  ಇದನ್ನೂ ಓದಿ: ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ 82 ಸಾವು, ಬದರೀನಾಥ ಮಾರ್ಗ ಬಂದ್

    ನರೇಂದ್ರ ಅವರು ನಂತರ ಸಮೀಪದಲ್ಲಿ ಇದ್ದ ನೆರೆ ಹೊರೆಯ ನಿವಾಸಿಗಳನ್ನು ಎಬ್ಬಿಸಿ  ಮನೆಯಿಂದ ಹೊರ ಬಂದು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ.

    ಈ ಸಂದರ್ಭದಲ್ಲಿ ಜೋರು ಮಳೆ (Rain) ಸುರಿಯುತ್ತಲೇ ಇತ್ತು. ಕೂಡಲೇ ಗ್ರಾಮಸ್ಥರು ಮನೆಯನ್ನು ತೊರೆದು ಓಡಿದ್ದಾರೆ. ಮನೆ ತೊರೆದ ಕೆಲ ಸಮಯದಲ್ಲಿ ಈ ನಿವಾಸಿಗಳು ಮಲಗಿದ್ದ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

    ಗ್ರಾಮವು ಭೂಕುಸಿತಕ್ಕೆ ಒಳಗಿದ್ದು ಸುಮಾರು ಒಂದು ಡಜನ್‌ ಮನೆಗಳು ನೆಲಸಮವಾಗಿದೆ. ಗ್ರಾಮದಲ್ಲಿ ಈಗ ಕೇವಲ ನಾಲ್ಕೈದು ಮನೆಗಳು ಮಾತ್ರ ಗೋಚರಿಸುತ್ತಿವೆ. ಉಳಿದವು ಭೂಕುಸಿತದ ಅವಶೇಷಗಳ ಅಡಿಯಲ್ಲಿವೆ.

    ಬದುಕುಳಿದವರು ಕಳೆದ 7 ದಿನಗಳಿಂದ ತ್ರಿಯಂಬಲ ಗ್ರಾಮದಲ್ಲಿರುವ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ನಾಯಿ ಸರಿಯಾದ ಸಮಯದಲ್ಲಿ ಬೊಗಳಿದ್ದರಿಂದ ಸುಮಾರು 67 ಮಂದಿ ಪಾರಾಗಿದ್ದಾರೆ.

  • ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ 25 ವರ್ಷಗಳ ಬಳಿಕ ಪತ್ತೆ – ತಾಯಿ ಮುಖ ಕಂಡು ಮಕ್ಕಳು ಭಾವುಕ

    ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ 25 ವರ್ಷಗಳ ಬಳಿಕ ಪತ್ತೆ – ತಾಯಿ ಮುಖ ಕಂಡು ಮಕ್ಕಳು ಭಾವುಕ

    – ಸತ್ತಿದ್ದಾಳೆ ಎಂದು ತಿಥಿ ಕಾರ್ಯವನ್ನೂ ಮಾಡಿದ್ದ ಕುಟುಂಬಸ್ಥರು

    ಬಳ್ಳಾರಿ: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ 25 ವರ್ಷಗಳ ಬಳಿಕ ಪತ್ತೆಯಾಗಿದ್ದು, ವಿಡಿಯೋ ಕಾಲ್ ಮೂಲಕ ತಾಯಿ ಮುಖ ಕಂಡು ಮಕ್ಕಳು ಬಿಕ್ಕಿ ಬಿಕ್ಕಿ ಅತ್ತ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ.

    ಬಳ್ಳಾರಿ ಮೂಲದ ಸಾಕಮ್ಮಾ 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ. ಈಕೆ ಮನೆಯಿಂದ ದೂರವಾಗಿ 25 ವರ್ಷಗಳು ಕಳೆದಿತ್ತು. ಆ ಮಹಿಳೆಯ ಸುಳಿವೇ ಸಿಗದ ಕಾರಣ ಕುಟುಂಬಸ್ಥರು ಮೃತಪಟ್ಟಿದ್ದಾಳೆ ಎಂದು ಅಂದಾಜಿಸಿ, ಆಕೆಯ ತಿಥಿ ಕಾರ್ಯವನ್ನೂ ಮಾಡಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಇಚ್ಚಾಶಕ್ತಿಯಿಂದ, ಕುಟುಂಬಸ್ಥರು ಮೃತಪಟ್ಟಿದ್ದಾಳೆ ಅಂದುಕೊಂಡಿದ್ದ ಮಹಿಳೆ ದೂರದ ಹಿಮಾಚಲ ಪ್ರದೇಶದ (Himachal Pradesh) ಮಂಡಿಯಲ್ಲಿ (Mandi) ಪತ್ತೆಯಾಗಿದ್ದಾರೆ. ಇದನ್ನೂ ಓದಿ: Mandya | ತೋಟದ ಮನೆಯಲ್ಲಿ ಹತ್ಯೆಗೂ ಮುನ್ನ ಹಲವು ಗ್ರಾಮಗಳಲ್ಲಿ ಹೊಂಚು ಹಾಕಿದ್ದ ಪಾತಕಿ!

    ನಾಪತ್ತೆಯಾಗಿದ್ದ ಸಾಕಮ್ಮಾ ಇದೀಗ ಹಿಮಾಚಲ ಪ್ರದೇಶದ ನಿರಾಶ್ರಿತರ ಶಿಬಿರದಲ್ಲಿ ಇರೋದು ಬೆಳಕಿಗೆ ಬಂದಿದೆ. ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗುವಿನ ತಾಯಿಯಾಗಿದ್ದ ಸಾಕಮ್ಮಾ, ಮಾನಸಿಕ ಸಮಸ್ಯೆ ಹೊಂದಿದ್ದರು. ಮಕ್ಕಳಾದ ವಿಕ್ರಮ್, ಬೋಧರಾಜ್, ಲಕ್ಷ್ಮೀ ಚಿಕ್ಕವರಿರುವಾಗಲೇ ಹೊಸಪೇಟೆಯಿಂದ ಆಕಸ್ಮಿಕವಾಗಿ ರೈಲು ಹತ್ತಿದ್ದ ಸಾಕಮ್ಮ, ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಅನಾಥವಾಗಿದ್ದ ಸಾಕಮ್ಮಾ ಹಿಮಾಚಲ ಪ್ರದೇಶದ ಮಂಡಿಯ ನಿರಾಶ್ರಿತ ಶಿಬಿರದಲ್ಲೇ ಆಶ್ರಯ ಪಡೆದಿದ್ದರು. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮಂಡ್ಯ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಅವರು ಸಾಕಮ್ಮಾಳ ಬಗ್ಗೆ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಐಪಿಎಸ್ ಅಧಿಕಾರಿಯ ಸ್ನೇಹಿತ ಸಾಕಮ್ಮ ಅವರ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: 71,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

    ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಗಮನಿಸಿದ್ದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್, ಆ ಬಳಿಕ ಐಪಿಎಸ್ ಅಧಿಕಾರಿ ರವಿನಂದನ್ ಜೊತೆ ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದರು. ಬಳ್ಳಾರಿ ಮೂಲದ ಅಜ್ಜಿ ಬಗ್ಗೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಣಿವಣ್ಣನ್ ನಿರ್ದೇಶನದ ಮೇರೆಗೆ ಮೂವರು ಸಿಬ್ಬಂದಿಗಳ ತಂಡ ಹಿಮಾಚಲ ಪ್ರದೇಶದ ಮಂಡಿಗೆ ಹೋಗಿತ್ತು. ಅಲ್ಲಿಗೆ ಹೋದಾಗ ಅಜ್ಜಿಗೆ ಮಕ್ಕಳು, ಕುಟುಂಬ ಇದೆ ಎಂಬ ಮಾಹಿತಿ ತಿಳಿದಿದೆ. ಮಾಹಿತಿ ತಿಳಿಯುತ್ತಲೇ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಮಂಡಿಯಿಂದಲೇ ವೀಡಿಯೋ ಕಾಲ್ ಮೂಲಕ ಮಕ್ಕಳ ಜೊತೆ ತಾಯಿ ಸಾಕಮ್ಮಾಳನ್ನು ಮಾತನಾಡಿಸಿದರು. ತಾಯಿ ಜೊತೆ ಮಾತನಾಡುವಾಗ, ತಾಯಿ ಕಂಡು ಸಾಕಮ್ಮಾ ಅವರ ಮಕ್ಕಳು ಭಾವುಕರಾಗಿ ಕಣ್ಣೀರು ಹಾಕಿದರು. ತಾಯಿ ಸತ್ತಿದ್ದಾಳೆ ಎಂದು ಈಗಾಗಲೇ ಎಲ್ಲಾ ಕಾರ್ಯ ಮುಗಿಸಿದ್ದ ಮಕ್ಕಳಿಗೆ ಅಧಿಕಾರಿಗಳ ಪ್ರಯತ್ನದಿಂದ ಹೆತ್ತಮ್ಮ ಮತ್ತೆ ಮನೆ ಸೇರುವಂತಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಸರಣಿ ಅಪಘಾತ – KSRTC ಬಸ್‌, ಆಟೋ ಸಂಪೂರ್ಣ ಜಖಂ!

  • ಮದುವೆಗೆ ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿ ಮದುವೆ

    ಮದುವೆಗೆ ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿ ಮದುವೆ

    ಶಿಮ್ಲಾ: ಮದುವೆಗೆ ಬಾಸ್ ರಜೆ ಕೊಡದ ಕಾರಣ ವರ ಹಾಗೂ ವಧು ವಿಡಿಯೋ ಕಾಲ್‌ನಲ್ಲಿ ವಿವಾಹವಾಗಿರುವ ಸಂಗತಿಯೊಂದು ನಡೆದಿದೆ.

    ಭಾರತೀಯ ಮೂಲದ ವ್ಯಕ್ತಿ ಟರ್ಕಿಯಲ್ಲಿದ್ದರು (Turkey). ಆತನ ಮದುವೆಗಾಗಿ ಬಾಸ್ ರಜೆ ಕೊಡದ ಕಾರಣ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ (Mandi) ವಧುವಿನೊಂದಿಗೆ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.

    ವಧುವಿನ ಅಜ್ಜನಿಗೆ ಅನಾರೋಗ್ಯದ ಹಿನ್ನೆಲೆ ವರನನ್ನು ಬೇಗ ಮದುವೆಯಾಗು ಎಂದು ವಧುವಿನ ಕುಟುಂಬಸ್ಥರು ಒತ್ತಾಯಿಸಿದ್ದರು. ಈ ಕಾರಣದಿಂದ ವರ ಮದುವೆಗಾಗಿ ಬಾಸ್ ಬಳಿ ರಜೆ ಕೋರಿದ್ದರು. ಆದರೆ ಬಾಸ್ ರಜೆಯನ್ನು ನಿರಾಕರಿಸಿದ್ದರು. ಇದರಿಂದ ಈ ವಿಷಯವನ್ನು ತಿಳಿದ ಕುಟುಂಬಸ್ಥರು ವರ್ಚುವಲ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.ಇದನ್ನೂ ಓದಿ: ಸಲ್ಮಾನ್‌ ಖಾನ್‌ಗೆ ಮತ್ತೆ ಜೀವ ಬೆದರಿಕೆ – ಬಿಷ್ಣೋಯ್‌ ಗ್ಯಾಂಗ್‌ನಿಂದ 5 ಕೋಟಿಗೆ ಬೇಡಿಕೆ

    ಬಿಲಾಸ್‌ಪುರದ ನಿವಾಸಿಯಾಗಿರುವ ವರ ಅದ್ನಾನ್ ಮುಹಮ್ಮದ್ ಅವರ ಕುಟುಂಬವು ಭಾನುವಾರ ಮಂಡಿಗೆ ತಲುಪಿದರು. ಬಳಿಕ ಸೋಮವಾರ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದು, ಖಾಜಿಯೊಬ್ಬರು ಕುಬೂಲ್ ಹೈ ಎಂದಾಗ ಮೂರು ಬಾರಿ ಹೇಳುವ ಮೂಲಕ ಧಾರ್ಮಿಕ ಕ್ರಿಯೆಗಳು ನೆರವೇರಿದವು.

    ಈ ಕುರಿತು ಮಾತನಾಡಿದ ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್, ಅತ್ಯಾಧುನಿಕ ತಂತ್ರಜ್ಞಾನದಿAದ ಮದುವೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ವರ್ಷ ಜುಲೈನಲ್ಲಿ, ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಭೂಕುಸಿತ ಮತ್ತು ಪ್ರವಾಹದಿಂದಾಗಿ ವರನ ಮನೆಯವರು ವಧುವಿನ ಮನೆಗೆ ತಲುಪದ ಕಾರಣ ಶಿಮ್ಲಾದ ಕೋಟ್‌ಗಢ್‌ನ ಆಶಿಶ್ ಸಿಂಘಾ ಹಾಗೂ ಕುಲುವಿನ ಭುಂತರ್‌ನಲ್ಲಿದ್ದ ಶಿವಾನಿ ಠಾಕೂರ್ ಅವರನ್ನು ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದರು.ಇದನ್ನೂ ಓದಿ: ಕೊತ್ವಾಲ್‌ ಬಳಿ 100 ರೂ.ಗೆ ಕೆಲಸ ಮಾಡ್ತಿದ್ದ ಡಿಕೆ ಕಣ್ಣೀರು ಹಾಕಿರೋದು ನೋಡಿದ್ದೀರಾ? – ಹೆಚ್‌ಡಿಡಿ

  • ಮಂಡಿಯಲ್ಲಿ ‘ಕ್ವೀನ್’ ಕಂಗನಾ

    ಮಂಡಿಯಲ್ಲಿ ‘ಕ್ವೀನ್’ ಕಂಗನಾ

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ (Loksabha Election 2024) ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಂಗನಾ ರಣಾವತ್ (Kangana Ranaut) ಮೊದಲ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 70000 ಮತಗಳಿಂದ ನಟಿ ಗೆದ್ದಿದ್ದಾರೆ. ಈ ಮೂಲಕ ನಟಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಟಫ್ ಫೈಟ್ ಕೊಟ್ಟು ನಟಿ ಗೆದ್ದಿರೋದಕ್ಕೆ ನಟಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.‌ ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಪ್ರಭಾಸ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್

    ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ, ಇದೀಗ ಬಿಜೆಪಿ ಪಕ್ಷದಿಂದ ಕಣಕ್ಕೆ ನಿಂತು ಗೆದ್ದಿದ್ದಾರೆ.

    ಅಂದಹಾಗೆ, ಲೋಕಸಭಾ ಚುನಾವಣೆ ಗೆದ್ದರೆ ಬಾಲಿವುಡ್‌ಗೆ ವಿದಾಯ ಹೇಳುತ್ತೇನೆ ಎಂದು ನಟಿ ಹೇಳಿದ್ದರು. ಹಾಗಾದ್ರೆ ನಟಿ ಬಾಲಿವುಡ್‌ಗೆ ಗುಡ್ ಬೈ ಹೇಳ್ತಾರಾ ಎಂದು ನೆಟ್ಟಿಗರಲ್ಲಿ ಇದೀಗ ಚರ್ಚೆ ಶುರುವಾಗಿದೆ.

  • ಸದ್ಯಕ್ಕಿಲ್ಲ ಎಮರ್ಜೆನ್ಸಿ: ನಟಿ ಕಂಗನಾ ರಣಾವತ್

    ಸದ್ಯಕ್ಕಿಲ್ಲ ಎಮರ್ಜೆನ್ಸಿ: ನಟಿ ಕಂಗನಾ ರಣಾವತ್

    ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)  ನಟನೆಯ ‘ಎಮರ್ಜೆನ್ಸಿ’ (Emergency) ಸಿನಿಮಾ ನವೆಂಬರ್ 24ರಂದು ರಿಲೀಸ್ (Release) ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಕಂಗನಾ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆಯೇ ಬರೆದುಕೊಂಡಿದ್ದರು. ‘ನಾವು ಘೋಷಿಸಿದ ತಿಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ ಎಂದು ಬರೆದುಕೊಂಡಿದ್ದರು. ಈಗ ಜೂನ್ ನಲ್ಲಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಪ್ ಡೇಟ್ ನೀಡಿದ್ದರು. ಈಗ ಜೂನ್‍ನಲ್ಲೂ ಸಿನಿಮಾ ಆಗುತ್ತಿಲ್ಲ.

    ಹೌದು, ಈಗಾಗಲೇ ಅವರು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಮಂಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಚುನಾವಣೆ ಪ್ರಚಾರದಲ್ಲೇ ಅವರು ಬ್ಯುಸಿಯಾಗಿರುವುದರಿಂದ ಜೂನ್‍್ ನಲ್ಲಿ ಎಮರ್ಜೆನ್ಸಿ ಸಿನಿಮಾ ಬರಲ್ಲ. ಬದಲಿ ದಿನಾಂಕವನ್ನು ಅವರು ನಂತರ ತಿಳಿಸಬಹುದು.

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಬರೆದುಕೊಂಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ಕಂಗನಾ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಈ ಸಿನಿಮಾದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ.

     

    ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಜವಾಬ್ದಾರಿ ಜಾಸ್ತಿ ಮಾಡಿಕೊಂಡಿದ್ದಾರೆ. ಮೂರು ಜವಾಬ್ದಾರಿ ಹೊತ್ತುಕೊಂಡಿರುವ ಕಾರಣಕ್ಕಾಗಿ ಅವರು ತಮ್ಮ ಆಸ್ತಿಯನ್ನು ಅಡವಿಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರವನ್ನು ನಿರ್ವಹಿಸಿದ್ದು, ಕೆಲ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ಚಂಬಾ ಗಡ್ಡಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮತಯಾಚಿಸಿದ ಕಂಗನಾ

    ಚಂಬಾ ಗಡ್ಡಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮತಯಾಚಿಸಿದ ಕಂಗನಾ

    ಲೋಕಸಭಾ ಅಖಾಡದಲ್ಲಿರುವ ಕಂಗನಾ ರಣಾವತ್, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮತದಾರರನ್ನು ಸೆಳೆಯಲು, ಅವರದ್ದೇ ಆದ ರೀತಿಯಲ್ಲಿ ತಂತ್ರಗಳನ್ನು ರೂಪಿಸಿದ್ದಾರೆ. ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿರುವ ಕಂಗನಾ, ಅಲ್ಲಿನ ಪುರಾತನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಚಂಬಾ ಗಡ್ಡಿ (Chamba Gaddi) ಸಮುದಾಯದ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಮತಯಾಚನೆ ಮಾಡಿದ್ದಾರೆ.

    ಸದಾ ವಿವಾದಕ್ಕೆ ಸಿಲುಕಿಕೊಳ್ಳುವ ಕಂಗನಾ, ರಾಜಕೀಯ ಕ್ಷೇತ್ರದಲ್ಲೂ ಅದನ್ನು ಮುಂದುವರೆಸಿಸಿದ್ದಾರೆ. ಅವರ ಆಹಾರದ ವಿಚಾರ ಈ ರಾಜಕೀಯ ವಲಯದಲ್ಲಿ ಭಾರೀ ಸುದ್ದಿಯಾಗಿದೆ.  ಕಂಗನಾ ರಣಾವತ್ (Kangana Ranaut) ಅವರಿಗೆ ಗೋಮಾಂಸ (Beef) ಅಂದರೆ ಇಷ್ಟ. ಅವರೇ ಅದನ್ನು ಹೇಳಿಕೊಂಡಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ (Vijay Vadettiwar). ಈ ಮಾತು ಪರ ವಿರೋಧಕ್ಕೆ ಕಾರಣವಾಗಿತ್ತು. ಕಂಗನಾ ಮೇಲೆಯೂ ಹಲವರು ಮುಗಿಬಿದ್ದಿದ್ದರು.

    ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಂಗನಾ ಆ ಮಾತಿಗೆ ತಿರುಗೇಟು ನೀಡಿದ್ದಾರೆ. ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಮಾಂಸವನ್ನು ಸೇವಿಸುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಯೋಗ ಮತ್ತು ಆಯುರ್ವೇದವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ ಎಂದಿದ್ದಾರೆ.

     

    ವಿರೋಧಿಗಳ ಬಗ್ಗೆಯೂ ಕಟುವಾಗಿಯೇ ಮಾತನಾಡಿರುವ ಕಂಗನಾ, ಇಂತಹ ತಂತ್ರಗಳು ನನ್ನ ಇಮೇಜ್ ಹಾಳುಮಾಡಲು ಕೆಲಸ ಮಾಡುವುದಿಲ್ಲ. ನನ್ನ ಜನರು ನನ್ನ ಬಗ್ಗೆ ತಿಳಿದಿದ್ದಾರೆ ಮತ್ತು ನಾನು ಹೆಮ್ಮೆಯ ಹಿಂದೂ ಎಂದು ಅವರಿಗೆ ತಿಳಿದಿದೆ. ಯಾವುದೇ ಪ್ರಯತ್ನ ಅವರನ್ನು ದಾರಿ ತಪ್ಪಿಸುವುದಿಲ್ಲ ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ ನಟಿ, ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ.

  • ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ‘ಮಂಡಿ’ ಅಖಾಡದಲ್ಲಿ ಕಂಗನಾ

    ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ‘ಮಂಡಿ’ ಅಖಾಡದಲ್ಲಿ ಕಂಗನಾ

    ನಿನ್ನೆಯಷ್ಟೇ ಬಿಜೆಪಿ ತನ್ನ ಲೋಕಸಭಾ (Lok Sabha) ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹಲವು ತಿಂಗಳುಗಳಿಂದ ಕಂಗನಾ ರಣಾವತ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇತ್ತು. ಅವರು ಕೂಡ ಕೃಷ್ಣ ಕಣ್ಬಿಟ್ಟರೆ ರಾಜಕೀಯಕ್ಕೆ ಬರೋದು ದೊಡ್ಡ ವಿಷಯವೇ ಅಲ್ಲ ಎಂದೂ ಹೇಳಿದ್ದರು. ಜೊತೆಗೆ ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ಟಿಕೆಟ್ ಬೇಡಿಕೆಯನ್ನೂ ಇಟ್ಟಿದ್ದರು.

     

    ಇದೀಗ ಕೊನೆಗೂ ಕಂಗನಾಗೆ ಟಿಕೆಟ್ ಘೋಷಣೆ ಆಗಿದೆ. ಇಂದಿನಿಂದ ಮಂಡಿ ಕ್ಷೇತ್ರದಾದ್ಯಂತ ನಟಿ ಪ್ರವಾಸ ಮಾಡಲಿದ್ದಾರೆ. ಇಂದು ಮಂಡಿ ಕ್ಷೇತ್ರದ ಮುಖಂಡರ ಜೊತೆ ಭೇಟಿಗಳು ನಿಗದಿ ಆಗಿವೆ. ಅಧಿಕೃತವಾಗಿ ಇಂದಿನಿಂದ ಸಕ್ರೀಯ ರಾಜಕಾರಣದಲ್ಲಿ ಕಂಗನಾ ಇರಲಿದ್ದಾರೆ.

  • ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದವ ಅರೆಸ್ಟ್!

    ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದವ ಅರೆಸ್ಟ್!

    ಚಿಕ್ಕಬಳ್ಳಾಪುರ: ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಕಾಲಿನ ಮಂಡಿಯಲ್ಲಿ ಸರಿ ಸುಮಾರು ಒಂದೂವರೆ ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದನು. ಅದನ್ನು ತಿಳಿದ ಸಿಬ್ಬಂದಿ ಪ್ರಯಾಣಿಕನನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ: ಗೋವಿಂದ ಕಾರಜೋಳ

    ದುಬೈನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕ 75,54,530 ರೂಪಾಯಿ ಮೌಲ್ಯದ 1 ಕೆಜಿ 485 ಗ್ರಾಂ ಚಿನ್ನವನ್ನ ವಶಪಡಿಸಿಕೊಳ್ಳಾಗಿದೆ. ಮೊಣಕಾಲಿಗೆ ನೀ ಕ್ಯಾಪ್ ಹಾಕ್ಕೊಂಡು ಅದರಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಬಂದಿದ್ದಾನೆ. ಅದನ್ನು ಕಂಡು ಏರ್ಪೋಟ್ ನಲ್ಲಿ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಅದಕ್ಕೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ನೀ ಕ್ಯಾಪ್ ನಲ್ಲಿ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮೊಣಕಾಲಿಗೆ ನೀ ಕ್ಯಾಪ್ ಹಾಕಿಕೊಂಡಿದ್ದು, ಸ್ಮಗ್ಲಿಂಗ್ ಮಾಡ್ತಿರುವುದು ತಿಳಿದುಬಂದಿದೆ. ಆರೋಪಿಯನ್ನ ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.