Tag: ಮಂಟಪ

  • ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

    ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

    ಲಕ್ನೋ: ಇತ್ತೀಚಿನ ಮದುವೆಗಳು ಮಂಟಪಕ್ಕೆ ಬಂದು ಮುರಿದು ಬೀಳುವುದು ಹೆಚ್ಚಾಗಿದೆ. ಸಿನಿಮಾ ಸ್ಟೈಲ್‍ನಲ್ಲಿ ಮದುವೆ ನಡೆದ ಉದಾಹರಣೆಗಳಿವೆ. ಆದರೆ ಇಲ್ಲೊಂದು ಜೋಡಿ ಕುತ್ತಿಗೆಗೆ ಹಾರ ಹಾಕುವ ಬದಲಾಗಿ, ಎಸೆದಿದ್ದಾನೆ ಎಂದು ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

    ಸಂಪ್ರದಾಯದಂತೆ ವರನು, ವಧು ಕುತ್ತಿಗೆಗೆ ಹಾರವನ್ನು ಹಾಕುವ ಬದಲು ಎಸೆದಿದ್ದಾನೆ. ವರನ ವರ್ತನೆಯಿಂದ ಅಸಮಾಧಾನಗೊಂಡ ವಧು, ಅವನನ್ನು ಮದುವೆಯಾಗಲು ನಿರಾಕರಿಸಿದಳು.  ಈ ಘಟನೆ ಬಿದುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

     

    ವಧು ಆತನೊಂದಿಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಮದುವೆ ಮುಂದುವರಿಸಲು ವಧುವಿನ ಮನವೊಲಿಸಲು ಕುಟುಂಬದವರು ಪ್ರಯತ್ನಿಸಿದರು. ಆದರೆ ವಧು ಈ ವಿಚಾರವಾಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಈ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 2 ಕುಟುಂಬಗಳ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದೇ ಇದ್ದಾಗ ಎರಡು ಕುಟುಂಬಗಳು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ಮುರಿದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಮದುವೆ ಮಂಟಪದವರೆಗೆ ಬಂದು ಮುರಿದುಕೊಂಡು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ತಮಿಳುನಾಡಿನ ಕಡಲೂರಿನಲ್ಲಿ, ಸೋದರ ಸಂಬಂಧಿಯೊಂದಿಗೆ ವಧು ನೃತ್ಯ ಮಾಡಿದ್ದಕ್ಕಾಗಿ ವರನು ಆಕೆಯ ಕೆನ್ನೆಗೆ ಹೊಡೆದಿದ್ದನು, ನಂತರ ಈ ವಿಚಾರವಾಗಿ ಕೋಪಗೊಂಡ ವಧು ಅದೇ ಮುಹೂರ್ತದಲ್ಲಿ ಇನ್ನೊಬ್ಬನನ್ನು ಮದುವೆಯಾಗಿದ್ದಳು.

  • ಬಿಡಿಸಿ ಸೀಟ್ ಗೆದ್ದು, ಸರ್ಟಿಫಿಕೇಟ್ ಸ್ವೀಕರಿಸಿಲು ಮಂಟಪ ಬಿಟ್ಟು ಹೋದ ವಧು

    ಬಿಡಿಸಿ ಸೀಟ್ ಗೆದ್ದು, ಸರ್ಟಿಫಿಕೇಟ್ ಸ್ವೀಕರಿಸಿಲು ಮಂಟಪ ಬಿಟ್ಟು ಹೋದ ವಧು

    ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಬ್ಲಾಕ್ ಡೆವಲಪ್‍ಮೆಂಟ್ ಕೌನ್ಸಿಲ್ ಸ್ಥಾನವನ್ನು ಗೆದ್ದಿರುವ ವಿಚಾರ ತಿಳಿದ ವಧು, ಮದುವೆ ಸಮಾರಂಭವನ್ನು ಅರ್ಧದಲ್ಲಿಯೇ ಬಿಟ್ಟು, ಮತ ಎಣಿಕೆ ಕೇಂದ್ರಕ್ಕೆ ಧಾವಿಸಿ ತನ್ನ ವಿಜೇತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

    ಈ ಘಟನೆ ಭಾನುವಾರ ನಡೆದಿದ್ದು, ಪೂನಂ ಶರ್ಮಾ(28) ಎಂಬವರು ಹೂವಿನ ಹಾರವನ್ನು ವರನೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದ ವೇಳೆ ಈ ಸಿಹಿ ಸುದ್ದಿ ತಿಳಿದುಬಂದಿದೆ. ವಿಶೇಷವೆಂದರೆ ಪೂನಂ ಅವರ ವಿವಾಹವನ್ನು ಮೇ 2ರಂದು ನಿಗದಿ ಪಡಿಸಲಾಗಿತ್ತು ಮತ್ತು ಪಂಚಾಯತ್ ಚುನಾಣೆಯ ಎಣಿಕೆಯನ್ನೂ ಕೂಡ ಮೇ 2 ರಂದೇ ನಿಗದಿ ಪಡಿಸಲಾಗಿತ್ತು.

    ಪೂನಂ ಶರ್ಮಾ ಮದುವೆ ಮಂಟಪದಿಂದ 20 ಕಿ.ಮೀ ದೂರದಲ್ಲಿರುವ ಎಣಿಕೆ ಕೇಂದ್ರಕ್ಕೆ ಭಾನುವಾರ ರಾತ್ರಿ 9.30ಕ್ಕೆ ತಲುಪಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ವೇಳೆ ಅವರು ವಧುವಿನ ಉಡುಪು ಗುಲಾಬಿ ಬಣ್ಣದ ಮಾಸ್ಕ್ ಧರಿಸಿರುವುದನ್ನು ಕಂಡು ಅಲ್ಲಿದ್ದವರು ಕಂಡು ಬೆರಗಾದರು. ಅಲ್ಲದೆ ಪ್ರಮಾಣ ಪತ್ರವನ್ನು ಅಧಿಕಾರಿಗಳಿಂದ ಸ್ವೀಕರಿಸುತ್ತಿರುವ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಾನು ಈಗ ಬಿಡಿಸಿ ಸದಸ್ಯೆಯಾಗಿರುವುದು ನನ್ನ ಮದುವೆಗೆ ಸಿಕ್ಕ ಅತ್ಯುತ್ತಮ ಉಡುಗೊರೆಯಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ಮಾಲಾ ಮೊದಲು ನಾನು 31 ಮತಗಳಿಂದ ಚುನಾವಣೆಯಲ್ಲಿ ಗೆದ್ದಿದ್ದೇನೆ. ನನ್ನ ಸೋದರ ಅಳಿಯಂದಿರು ನನಗೆ ಪ್ರಮಾಣಪತ್ರವನ್ನು ಸ್ವೀಕರಿಸಲು ಮದುವೆ ಮಂಟಪದಿಂದ ಹೊರಗಡೆ ಹೋಗಲು ಅವಕಾಶ ಮಾಡಿಕೊಟ್ಟರು. ನನ್ನ ಗೆಲುವಿನಿಂದ ಹಳ್ಳಿಯವರೆಲ್ಲ ಸಂತಸದಿಂದ ಇದ್ದಾರೆ ಎಂದು ಹೇಳಿದರು.

    ನಂತರ ಗೆದ್ದ ಬ್ಯಾಡ್ಜ್‌ನೊಂದಿಗೆ ಎಣಿಕೆ ಕೇಂದ್ರದಿಂದ ಪೂನಂ ಶರ್ಮಾ ಮಂಟಪಕ್ಕೆ ಹಿಂದಿರುಗಿದರು. ನಂತರ ಉಳಿದ ಮದುವೆಯ ಶಾಸ್ತ್ರಗಳನ್ನು ಮುಂದುವರೆಸಲಾಯಿತು.

  • ಅಣ್ಣನ ಪುಣ್ಯಭೂಮಿಗೆ ಬಿಸಿಲು ತಾಗಬಾರದೆಂದು ಮಂಟಪ ಕಟ್ಟಿಸಿದ ಧ್ರುವ

    ಅಣ್ಣನ ಪುಣ್ಯಭೂಮಿಗೆ ಬಿಸಿಲು ತಾಗಬಾರದೆಂದು ಮಂಟಪ ಕಟ್ಟಿಸಿದ ಧ್ರುವ

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಬಹಳ ಆತ್ಮೀಯವಾಗಿದ್ದರು. ಆದರೆ ಅಣ್ಣನ ಹಠಾತ್ ಸಾವಿನಿಂದ ನೊಂದಿರುವ ಧ್ರುವ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದರು. ಇದೀಗ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ.

    ಚಿರಂಜೀವಿ ಸರ್ಜಾ ಅವರನ್ನು ರಾಮನಗರ ಬಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರಿಗೆ ಸೇರಿದ್ದು, ಆದರೆ ಫಾರ್ಮ್ ಹೌಸ್ ಚಿರುಗೆ ತುಂಬಾ ಇಷ್ಟವಾಗಿತ್ತಂತೆ. ‘ಅಣ್ಣ ಸದಾ ನನ್ನ ಜೊತೆಗಿರಬೇಕು, ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ’ ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಫಾರ್ಮ್ ಹೌಸ್‍ನಲ್ಲಿ ಚಿರು ಅಂತ್ಯಕ್ರಿಯೆ ಮಾಡಲಾಗಿದೆ.

    ಇದೀಗ ಧ್ರುವ ಸರ್ಜಾ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ತಾಗಬಾರದೆಂದು ಮಂಟಪ ಕಟ್ಟಿಸಿದ್ದಾರೆ. ಚಿರು ಕುಟುಂಬದ ಸಂಬಂಧಿಕರಾದ ಮಂಜು ಈ ಮಂಟಪ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಚಿರು ಸರ್ಜಾ ಸಮಾಧಿ ಸ್ಥಳದಲ್ಲಿ ದೊಡ್ಡದಾದ ಮಂಟಪವನ್ನು ಧ್ರುವ ಕಟ್ಟಿಸಲಿದ್ದಾರಂತೆ. ಮಂಟಪದ ಕಾರ್ಯ ಕೂಡ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎನ್ನಲಾಗಿದೆ.

    ಬಿಸಿಲು ಬಂದರೆ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ತಾಗಬಾರದೆಂದು ಧ್ರುವ ಅವರು ಮುಂದೆ ನಿಂತು ಈ ಮಂಟಪ ಕಟ್ಟಿಸಿದ್ದಾರೆ ಎಂದು ಮಂಜು ನೋವಿನಿಂದ ಹೇಳಿದ್ದಾರೆ.

     

    ಅಣ್ಣನನ್ನು ಕಳೆದುಕೊಂಡು ಐದು ದಿನಗಳ ಬಳಿಕ ಧ್ರುವ ಸರ್ಜಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು. ಚಿರಂಜೀವಿ ಸರ್ಜಾ ಸಾವಿಗೂ ಒಂದು ದಿನ ಮುನ್ನ ಶೇರ್ ಮಾಡಿಕೊಂಡಿದ್ದ ಫೋಟೋ ನೋಡಿ ನೋವನ್ನು ತೋಡಿಕೊಂಡಿದ್ದಾರೆ. “ನೀನು ನನಗೆ ವಾಪಸ್ ಬೇಕು. ನೀ ಇರದೆ ನನಗೆ ಇರಲು ಸಾಧ್ಯವಾಗುತ್ತಿಲ್ಲ” ಎಂದು ಧ್ರುವ ಸರ್ಜಾ ನೋವಿನ ನುಡಿಗಳನ್ನು ಸ್ಟೇಟಸ್‍ನಲ್ಲಿ ಬರೆದುಕೊಂಡಿದ್ದರು.