Tag: ಮಂಜು ವಾರಿಯರ್

  • ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ‌’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್

    ಜನಿಕಾಂತ್ (Rajanikanth) ನಟನೆಯ ‘ವೆಟ್ಟೈಯಾನ್’ (Vettaiyan) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಟಿ ಮಂಜು ವಾರಿಯರ್ ಜೊತೆ ಸಖತ್ ಆಗಿ ತಲೈವಾ ಹೆಜ್ಜೆ ಹಾಕಿದ್ದಾರೆ. ‘ಜೈಲರ್’ ಸಿನಿಮಾದ ಬಳಿಕ ಮತ್ತೊಂದು ಡ್ಯಾನ್ಸ್ ನಂಬರ್ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

    ‘ವೆಟ್ಟೈಯಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆ ಕಲರ್‌ಫುಲ್ ಹಾಡಿನಲ್ಲಿ ತಲೈವಾ ಮಿಂಚಿದ್ದಾರೆ. 73ನೇ ವಯಸ್ಸಿನಲ್ಲೂ ಡ್ಯಾನ್ಸ್‌ನಲ್ಲಿ ಹಿಂದೆ ಬೀಳದೇ ರಜನಿಕಾಂತ್ ಅವರು ಮಂಜು ವಾರಿಯರ್ ಜೊತೆ ಸಖತ್‌ ಆಗಿಯೇ ಹೆಜ್ಜೆ ಹಾಕಿದ್ದಾರೆ. ‘ಮನಸಿಲಾಯೋ’ ಎಂಬ ಹಾಡಿನಲ್ಲಿ ತಮಿಳು ಮತ್ತು ಮಲಯಾಳಂ ಸಾಹಿತ್ಯ ಒಳಗೊಂಡಿದೆ. ಈ ಸಾಂಗ್‌ ಫ್ಯಾನ್ಸ್‌ಗೆ ಇಷ್ಟವಾಗಿದೆ.

     

    View this post on Instagram

     

    A post shared by Anirudh (@anirudhofficial)

    ತಲೈವಾ ಮತ್ತು ಮಂಜು ವಾರಿಯರ್ ಜೊತೆ ಗೆಸ್ಟ್ ಆಗಿ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಕೂಡ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಅವರು ಚಿತ್ರಕ್ಕೆ ಕಂಪೋಸ್‌ ಮಾಡಿದ ಹಾಡುಗೆಳೆಲ್ಲಾ ಹಿಟ್‌ ಆಗಿದೆ. ಈ ಹಾಡಿಗೂ ಕೂಡ ಈಗ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದನ್ನೂ ಓದಿ:ಒಂದು ಅವಕಾಶ ಕಳೆದು ಹೋದರೆ, ನೂರಾರು ಅವಕಾಶಗಳು ಬರುತ್ತವೆ: ಕಾಸ್ಟಿಂಗ್‌ ಕೌಚ್ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ

    ಇನ್ನೂ ‘ವೆಟ್ಟೈಯಾನ್’ ಚಿತ್ರ ಅಕ್ಟೋಬರ್ 10ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಟಿ.ಜೆ ಜ್ಞಾನ್‌ವೇಲ್ ನಿರ್ದೇಶನ ಮಾಡಿದ್ದಾರೆ. ‘ಜೈಲರ್’ ಸಿನಿಮಾದಂತೆ ‘ವೆಟ್ಟೈಯಾನ್’ ಕೂಡ ಸಕ್ಸಸ್ ಲಿಸ್ಟ್‌ಗೆ ಸೇರುತ್ತಾ? ಕಾದುನೋಡಬೇಕಿದೆ. ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ರಜನಿ 170ನೇ ಸಿನಿಮಾಗೆ ಇಬ್ಬರು ನಾಯಕಿಯರು

    ರಜನಿ 170ನೇ ಸಿನಿಮಾಗೆ ಇಬ್ಬರು ನಾಯಕಿಯರು

    ನಿನ್ನೆಯಿಂದ ರಜನಿ ನಟನೆಯ 170ನೇ ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆಯು ಒಂದೊಂದು ಮಾಹಿತಿಯನ್ನು ಹೊರ ಹಾಕುತ್ತಿದೆ. ಜೊತೆಗೆ ನಿನ್ನೆಯಷ್ಟೇ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಇದೀಗ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎನ್ನುವ ವಿಷಯವನ್ನು ಸಂಸ್ಥೆ ಹೇಳಿಕೊಂಡಿದೆ.

    ಹೌದು, ರಜನಿಕಾಂತ್ ಮತ್ತು ಅಮಿತಾಭ್ ಕಾಂಬಿನೇಷನ್ ನ ಈ ಚಿತ್ರದಲ್ಲಿ  ದುಶಾರ ವಿಜಯನ್ (Dushara Vijayan) ಮತ್ತು ಮಂಜು ವಾರಿಯರ್ (Manju Warrier) ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ದುಶಾರ ಈಗಾಗಲೇ ಬೋಧೈ ಯೇರಿ ಬುಧಿ ಮಾರಿ, ಅನೀತಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಂಜು ವಾರಿಯರ್ ಲೂಸಿಫರ್, ಅಸುರನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

    ನಿನ್ನೆ ಬೆಳಗ್ಗೆಯಷ್ಟೇ ರಜನಿಕಾಂತ್ ನಟನೆಯ 170ನೇ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಟಿಸಲಿದ್ದಾರೆ ಎನ್ನುವ ಸುದ್ದಿಯನ್ನು ಹೊರಹಾಕಿತ್ತು ಲೈಕಾ ಸಂಸ್ಥೆ. ನಂತರ ರಜನಿಕಾಂತ್ ಅವರ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿತ್ತು. ತಲೈವಾ ಫಸ್ಟ್ ಲುಕ್ (First Look) ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ಬರೋಬ್ಬರಿ 32 ವರ್ಷಗಳ ಬಳಿಕ ಭಾರತೀಯ ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಇದು ನಿಜನಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಕೊನೆಗೂ ಅದು ನಿಜವಾಗಿದೆ ಮೂರು ದಶಕದ ಬಳಿಕ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಒಟ್ಟಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

    ಚಿತ್ರರಂಗದ ದಂತಕಥೆ ಎಂದರೆ ಒಬ್ಬರು ರಜನಿಕಾಂತ್(Rajanikanth), ಮತ್ತೊಬ್ಬರು ಅಮಿತಾಭ್ ಬಚ್ಚನ್. ಈ ಜೋಡಿ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.ಬಳಿಕ ತಲೈವಾ- ಬಿಗ್ ಬಿ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲೇಯಿಲ್ಲ. ಈ ಸ್ಟಾರ್ ಕಿಲಾಡಿ ಜೋಡಿ, ಇದೀಗ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ-ಬಿಗ್ ಬಿ (Bigg B) ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ.

     

    ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ(Lyca Productions) ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಸುರಿಯುತ್ತಿದೆ. ವಿಶೇಷ ಅಂದರೆ ರಜನಿ ಜೊತೆ ಬಾಲಿವುಡ್ ದಂತಕಥೆ ಅಮಿತಾಭ್ ಬಚ್ಚನ್ (Amitabh Bacchan) ಕೂಡ ನಟಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಜನಿಗೆ ನಾಯಕಿಯಾಗಲಿದ್ದಾರೆ ಮಂಜು ವಾರಿಯರ್

    ರಜನಿಗೆ ನಾಯಕಿಯಾಗಲಿದ್ದಾರೆ ಮಂಜು ವಾರಿಯರ್

    ಲಯಾಳಂ ಸಿನಿಮಾ ರಂಗದ ಖ್ಯಾತ ನಟಿ ಮಂಜು ವಾರಿಯರ್ (Manju Warrier) ಬಗ್ಗೆ ಬ್ರೇಕಿಂಗ್ ಸುದ್ದಿಯೊಂದು ಬಂದಿದೆ. ರಜನಿಕಾಂತ್ ನಟನೆಯ 170ನೇ ಸಿನಿಮಾಗೆ ಮಂಜು ವಾರಿಯರ್ ನಾಯಕಿ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಮಂಜು ವಾರಿಯರ್ ಹೆಸರು ಮಾತ್ರ ಗಟ್ಟಿಯಾಗಿ ಕೇಳಿ ಬರುತ್ತಿದೆ. ಅವರೊಂದಿಗೆ ಚಿತ್ರತಂಡ ಮಾತನಾಡಿದೆ ಎನ್ನುವ ಮಾಹಿತಿಯೂ ಇದೆ.

    ರಜನಿಕಾಂತ್ (Rajinikanth) ನಟನೆಯ ಜೈಲರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡುತ್ತಿದ್ದಂತೆಯೇ ಅವರ ಮುಂದಿನ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅದರಲ್ಲೂ ಅವರ 170ನೇ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿ.ಎಸ್. ಜ್ಞಾನವೇಲ್ (TS Gnanavel) ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ಅಂದುಕೊಂಡಂತೆ ಆಗಿದ್ದರೆ ರಜನಿಕಾಂತ್ ಅವರ 170ನೇ ಸಿನಿಮಾವನ್ನು ಲೋಕೇಶ್ ಕನಗರಾಜು (Lokesh Kanagaraju) ನಿರ್ದೇಶನ ಮಾಡಬೇಕಿತ್ತು. ಆದರೆ, ಅವರು ದಳಪತಿ ವಿಜಯ್ ಅವರ ಲಿಯೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದಾಗಿಯೇ ಜ್ಞಾನವೇಲ್‍ ಗೆ ಈ ಅದೃಷ್ಟ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಘೋಸ್ಟ್ ಸಿನಿಮಾ ರಿಲೀಸ್ ಡೇಟ್ ಘೋಷಣೆ: ದಸರಾಗೆ ತೆರೆಯ ಮೇಲೆ ಶಿವಣ್ಣ

    ಜೈ ಭೀಮ್ ಸಿನಿಮಾದ ಮೂಲಕ ಭಾರೀ ಸಂಚಲನವನ್ನು ಉಂಟು ಮಾಡಿದವರು ಜ್ಞಾನವೇಲ್. ನೂರಾರು ಕೋಟಿ ರೂಪಾಯಿಯನ್ನು ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಬಾಚಿತು. ಒಂದೊಳ್ಳೆ ಸಿನಿಮಾ ಎನ್ನುವ ಹೆಸರನ್ನೂ ಮಾಡಿತು. ಜಾಗತಿಕ ಮಟ್ಟದಲ್ಲಿ ಈ ಚಿತ್ರಕ್ಕೆ ವಿಶೇಷ ಮನ್ನಣೆ ಕೂಡ ಸಿಕ್ಕಿದೆ. ಹೀಗಾಗಿ ರಜನಿ ಸಿನಿಮಾ ಕೂಡ ಹೊಸ ರೀತಿಯಲ್ಲೇ ಇರಲಿದೆ ಎಂದು ಹೇಳಲಾಗುತ್ತದೆ.

     

    ಜೈಲರ್ ಸಿನಿಮಾ ನಂತರ ರಜನಿ ಅಧ್ಯಾತ್ಮವನ್ನು ಅರಸಿಕೊಂಡು ಹೋಗಿದ್ದರು. ಮೊನ್ನೆಯಷ್ಟೇ ಮತ್ತೆ ರಜನಿ ವಾಪಸ್ಸು ಚೆನ್ನೈಗೆ ವಾಪಸ್ಸಾಗಿದ್ದಾರೆ. ಇನ್ನೂ ಕೆಲವು ದಿನಗಳ ಬಳಿಕ ಹೊಸ ಸಿನಿಮಾದ ಕೆಲಸದಲ್ಲಿ ಅವರು ನಿರತರಾಗುತ್ತಾರೆ ಎನ್ನುವುದು ಸದ್ಯಕ್ಕಿರುವ ವರ್ತಮಾನ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬಾರಿ BMW ಬೈಕ್ ಖರೀದಿಸಿ ವಿಶೇಷ ಮನವಿ ಮಾಡಿದ ನಟಿ ಮಂಜು ವಾರಿಯರ್

    ದುಬಾರಿ BMW ಬೈಕ್ ಖರೀದಿಸಿ ವಿಶೇಷ ಮನವಿ ಮಾಡಿದ ನಟಿ ಮಂಜು ವಾರಿಯರ್

    ಜಿತ್ ಕುಮಾರ್ (Ajith Kumar) ಅವರಿಗೆ ಬೈಕ್ ರೈಡಿಂಗ್ ಎಂದರೆ ತುಂಬಾ ಇಷ್ಟ. ಆಗಾಗ ಬೇಕ್ ರೈಡಿಂಗ್‌ಗೆ ಹೋಗುತ್ತಲೇ ಇರುತ್ತಾರೆ. ಪೈಲೆಟ್ ಲೈಸೆನ್ಸ್ ಹೊಂದಿರುವ ಏಕೈಕ ಹೀರೋ ಎಂಬ ಖ್ಯಾತಿಗೂ ಹೆಸರಾಗಿದ್ದಾರೆ. ಇದೀಗ ಅಜಿತ್ ಹಾದಿಯಲ್ಲಿ ನಟಿ ಮಂಜು ವಾರಿಯರ್ ಹೆಜ್ಜೆ ಇಟ್ಟಿದ್ದಾರೆ. ಮಂಜು ವಾರಿಯರ್ (Actress Manju Warrier) ಬೈಕ್‌ಯೊಂದನ್ನ ಖರೀದಿ ಮಾಡಿದ್ದಾರೆ.

    ಕಾಲಿವುಡ್ (Kollywood) ಸ್ಟಾರ್ ಅಜಿತ್ ಕುಮಾರ್ ಆಗಾಗ ರೋಡ್ ಟ್ರಿಪ್ ಮಾಡುತ್ತಲೇ ಇರುತ್ತಾರೆ. ಇನ್ನೂ ಇವರ ಗುಂಪಿನಲ್ಲಿ ಮಂಜು ವಾರಿಯರ್ ಕೂಡ ಹೈಲೈಟ್ ಆಗಿದ್ದಾರೆ. `ತುನಿವು’ ಸಿನಿಮಾ ಗೆದ್ದ ಖುಷಿಯಲ್ಲಿ BMW ಜಿಎಸ್ 1250 ಬೈಕ್ ಖರೀದಿ ಮಾಡಿದ್ದಾರೆ. ಭಾರತದಲ್ಲಿ ಈ ಬೈಕ್‌ಗೆ 25 ಲಕ್ಷ ರೂಪಾಯಿ ಇದೆ. ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ `ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

     

    View this post on Instagram

     

    A post shared by Manju Warrier (@manju.warrier)

    ಬೈಕ್ ಖರೀದಿ ಮಾಡಿದ ವಿಡಿಯೋನ ಪೋಸ್ಟ್ ಮಾಡಿರುವ ನಟಿ ಅವರು ವಿಶೇಷ ಸಾಲುಗಳನ್ನು ಬರೆದುಕೊಂಡಿದ್ದಾರೆ. ಒಳ್ಳೆಯ ರೈಡರ್ ಆಗೋಕೆ ಇನ್ನೂ ಸಾಕಷ್ಟು ಸಮಯ ಬೇಕಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿದರೆ ದಯವಿಟ್ಟು ಸಹಿಸಿಕೊಳ್ಳಿ. ನನ್ನಂತೆ ಅನೇಕರಿಗೆ ಸ್ಫೂರ್ತಿಯಾದ ಅಜಿತ್ ಕುಮಾರ್ ಅವರಿಗೆ ಧನ್ಯವಾದ ಎಂದು ನಟಿ ಮಂಜು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Manju Warrier (@manju.warrier)

    ಅಜಿತ್ ಕುಮಾರ್ ಮತ್ತು ಮಂಜು ವಾರಿಯರ್ ನಟನೆಯ `ತುನಿವು’ ಸಿನಿಮಾ ಫೆ.11ರಂದು ತೆರೆ ಕಂಡಿತ್ತು. ಸಿನಿಮಾಗೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿತ್ತು. `ತುನಿವು’ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಕಮಾಲ್ ಮಾಡುವಲ್ಲಿ ಗೆದ್ದಿದೆ. ಕೋಟಿ ಕೋಟಿ ಕಮಾಯಿ ಮಾಡಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

    ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

    ಲಯಾಳಂನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸನಲ್ ಕುಮಾರ್ ಶಶಿಧರನ್ ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್ ಕುರಿತಾಗಿ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು ಎನ್ನುವ ಕಾರಣಕ್ಕಾಗಿ ಪೊಲೀಸ್ ರು ಸನಲ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ. ತಮ್ಮನ್ನು ಪೊಲೀಸ್ ರು ವಶಕ್ಕೆ ಪಡೆಯುತ್ತಿರುವ ದೃಶ್ಯವನ್ನು ಸನಲ್ ಕುಮಾರ್ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಮಂಜು ವಾರಿಯರ್ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಶದಲ್ಲಿದ್ದಾರೆ. ಅವರು ಜೀವನ ಅಪಾಯದಲ್ಲಿದೆ. ಅವರಿಂದಾಗಿ ಕೆಲವರಿಗೆ ತೊಂದರೆ ಕೂಡ ಆಗಲಿದೆ ಎಂದು ನಿರ್ದೇಶಕ ಸನಲ್, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದನ್ನು ಮಂಜು ವಾರಿಯರ್ ಗಂಭೀರವಾಗಿ ತಗೆದುಕೊಂಡು ದೂರು ನೀಡಿದ್ದರು. ತಮಗೆ ಆ ನಿರ್ದೇಶಕರಿಂದ ಬ್ಲ್ಯಾಕ್ ಮೇಲ್ ಆಗುತ್ತಿದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾನಹಾನಿ ಆಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಮಂಜು ವಾರಿಯರ್ ಮೇಲೆ ಆರೋಪ ಮಾಡಿದ್ದ ನಿರ್ದೇಶಕ ಸನಲ್, ತಿರುವನಂತಪುಂನಲ್ಲಿದ್ದರು. ಅಲ್ಲಿಂದಲೇ ಪೊಲೀಸ್ ರು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಂಜು ವಾರಿಯರ್ ಮತ್ತು ಸನಲ್ ಈ ಹಿಂದೆ ಕಯಟ್ಟಮ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಇಬ್ಬರ ಮಧ್ಯ ಮನಸ್ತಾಪ ಬಂದಿದೆ ಎನ್ನಲಾಗುತ್ತಿದೆ. ಅಲ್ಲಿಂದ ಮಂಜು ಅವರ ಬಗ್ಗೆ ಸನಲ್ ಆಗಾಗ್ಗೆ ಆರೋಪ ಮಾಡುತ್ತಾ ಬಂದಿದ್ದರು ಎಂದು ಹೇಳಲಾಗುತ್ತಿದೆ.