Tag: ಮಂಜು ಪಾವಗಡ

  • ಅದ್ಧೂರಿಯಾಗಿ ಮದುವೆಯಾದ ‘ಬಿಗ್‌ ಬಾಸ್‌ ಕನ್ನಡ 8’ರ ವಿನ್ನರ್‌ ಮಂಜು ಪಾವಗಡ

    ಅದ್ಧೂರಿಯಾಗಿ ಮದುವೆಯಾದ ‘ಬಿಗ್‌ ಬಾಸ್‌ ಕನ್ನಡ 8’ರ ವಿನ್ನರ್‌ ಮಂಜು ಪಾವಗಡ

    ‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ ಮಂಜು ಪಾವಗಡ (Manju Pavagada) ಅವರು ಹುಟ್ಟುರಾದ ಪಾವಗಡದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ದಾಂಪತ್ಯ  (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಾವಗಡದಲ್ಲಿ ನ.13ರಂದು ನಂದಿನಿ- ಮಂಜು ಅವರ ಆರತಕ್ಷತೆ ಕಾರ್ಯಕ್ರಮ ಜರುಗಿತು. ಇಂದು (ನ.14) ಅದ್ಧೂರಿಯಾಗಿ ನಟ ಮದುವೆಯಾಗಿದ್ದಾರೆ. ಈ ಸಂಭ್ರಮದಲ್ಲಿ ಶುಭ ಪೂಂಜಾ, ಮಾನಸಾ, ರಾಘವೇಂದ್ರ, ಜಗ್ಗಪ್ಪ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಭಾಗಿಯಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.

  • ನಿಶ್ಚಿತಾರ್ಥ ಮಾಡಿಕೊಂಡ ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ- ಮದುವೆ ಡೇಟ್‌ ಫಿಕ್ಸ್

    ನಿಶ್ಚಿತಾರ್ಥ ಮಾಡಿಕೊಂಡ ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ- ಮದುವೆ ಡೇಟ್‌ ಫಿಕ್ಸ್

    ‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ (Bigg Boss Kannada 8) ಮಂಜು ಪಾವಗಡ (Manju Pavagada) ಅವರು ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.‌ ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು

    ನಟ ಮಂಜು ಪಾವಗಡ ಅವರು ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ನಂದಿನಿ ಜೊತೆ ಸದ್ದಿಲ್ಲದೇ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ನವೆಂಬರ್ 13 ಮತ್ತು 14ರಂದು ಪಾವಗಡದಲ್ಲಿ ಮದುವೆ ನಡೆಯಲಿದೆ.

    ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.

  • ‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ಬಿಗ್ ಬಾಸ್ ಸೀಸನ್ 8ರ (Bigg Boss Kannada) ವಿನ್ನರ್ ಆಗಿರುವ ಮಂಜು ಪಾವಗಡ (Manju Pavagada) ಅಂತರಪಟ ಸೀರಿಯಲ್‌ನಲ್ಲಿ ತಂದೆಯಾಗಿ ಕಾಣಿಸಿಕೊಳ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ನಕಲಿ ಅಪ್ಪನಾಗಿ ಮಂಜು ಪಾವಗಡ ಎಂಟ್ರಿ ಕೊಡ್ತಿದ್ದಾರೆ.

    ಬಿಗ್ ಬಾಸ್ (Bigg Boss) ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಮಂಜು ಪಾವಗಡ ಈಗ ಮತ್ತೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸುಷ್ಮಾ ರಾವ್- ಸುದರ್ಶನ್ ರಂಗಪ್ರಸಾದ್ ನಟನೆಯ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ನಕಲಿ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಪ್ರೋಮೋ ವಾಹಿನಿಯ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ್ದು, ಪ್ರೋಮೋ ಸಖತ್‌ ಸದ್ದು ಮಾಡುತ್ತಿದೆ.

    ಇಷ್ಟವಿಲ್ಲದೇ ತಾಯಿಯ ಹಠಕ್ಕೆ ಮಣಿದು ತಾಂಡವ್ ಅಲಿಯಾಸ್ ಸುದರ್ಶನ್ ಭಾಗ್ಯಳನ್ನು ಮದುವೆಯಾಗುತ್ತಾನೆ. ಈ ಕಡೆ ತನ್ನ ಆಫೀಸಿನಲ್ಲಿ ಕೆಲಸ ಮಾಡುವ ಶ್ರೇಷ್ಠಾ ಜೊತೆ ತಾಂಡವ್ ಅಫೇರ್ ಇಟ್ಟುಕೊಂಡಿರುತ್ತಾನೆ. ಈಗ ಶ್ರೇಷ್ಠಾ ಮನೆಯವರು ಮದುವೆಯಾಗುವ ಒತ್ತಡವನ್ನ ತಾಂಡವ್ ಮುಂದಿಟ್ಟಿದ್ದಾರೆ. ಅಮ್ಮನ ಮಾತಿಗೆ ಭಯಪಡುವ ತಾಂಡವ್‌ಗೆ ಸಾಥ್ ನೀಡಲು ಶ್ರೇಷ್ಠಾ ನಕಲಿ ತಂದೆಯಾಗಿ ಮಂಜು ಪಾವಗಡ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಎಜುಕೇಷನ್ ಇಲ್ಲಾ ಅಂತಾ ಹಂಗಿಸೋ ತಾಂಡವ್ ಮುಂದೆ ಗೆಲ್ಲಲು ಭಾಗ್ಯ ಈಗ ಸ್ಕೂಲಿಗೆ ಹೋಗುತ್ತಿದ್ದಾಳೆ. ಸೊಸೆಯನ್ನು ಓದಿಸಲೇಬೇಕು ಅಂತಾ ಅತ್ತೆ ಪಣ ತೊಟ್ಟಿದ್ದಾಳೆ. ಇದೆಲ್ಲದರ ನಡುವೆ ಭಾಗ್ಯಳ ಸಂಸಾರದ ಬಂಡಿಗೆ ಬ್ರೇಕ್ ಹಾಕಲು ಕೆಡಿ ಶ್ರೇಷ್ಠಾ ಜೊತೆ ಮಂಜು ಪಾವಗಡ ಜೊತೆಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾ.12ರಿಂದ ಕಿರುತೆರೆ ತಾರೆಯರ ಕ್ರಿಕೆಟ್: ಯಾರ ತಂಡದಲ್ಲಿ ಯಾರಿದ್ದಾರೆ?

    ಮಾ.12ರಿಂದ ಕಿರುತೆರೆ ತಾರೆಯರ ಕ್ರಿಕೆಟ್: ಯಾರ ತಂಡದಲ್ಲಿ ಯಾರಿದ್ದಾರೆ?

    ಎನ್ 1 ಕ್ರಿಕೆಟ್ (Cricket) ಅಕಾಡೆಮಿ ಆಯೋಜಿಸುವ ಕಿರುತೆರೆ ತಾರೆಯರ ಟೆಲಿವಿಷನ್ (Television) ಪ್ರೀಮಿಯರ್ ಲೀಗ್ (Leagu) ಸೀಸನ್ -2 ಇದೇ ತಿಂಗಳು ನಡೆಯುತ್ತಿದೆ. ಈಗಾಗಲೇ ತಂಡದ ನಾಯಕರು, ಆಟಗಾರರ ಪಟ್ಟಿ ಬಿಡುಗಡೆ ಮಾಡಿರುವ ಆಯೋಜಕರು ಇದೀಗ ಸೀಸನ್ -2 ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಿದ್ದಾರೆ.

    ಟಿಪಿಎಲ್ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ನಟ ವಿನೋದ್ ಪ್ರಭಾಕರ್, ರಣಜಿ ಆಟಗಾರರಾದ ಶರತ್ ಶ್ರೀನಿವಾಸ್, ಅರ್ಜುನ್ ಹೊಯ್ಸಳ, ದೇಗ ನಿಶ್ಚಲ್, ಬಿ.ಯು.ಶಿವಕುಮಾರ್, ಅನಿರುದ್ಧ್ ಜೋಶಿ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿರುವ ಮತ್ತು ರಣಜಿ ಆಟಗಾರ ಅಭಿಮನ್ಯು ಮಿಥುನ್ ಭಾಗಿಯಾಗಿ ಟಿಪಿಎಲ್ ಸೀಸನ್-2ಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಖುಷಿ ದಾಂಪತ್ಯದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್

    ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಟಿಪಿಎಲ್ ಸೀಸನ್ -2 ನಡೆಯುತ್ತಿದೆ. ಮೊದಲ ಸೀಸನ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದರಿಂದ ಸೀಸನ್ -2 ನಡೆಸಲು ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕ ಸುನೀಲ್ ಕುಮಾರ್.ಬಿ.ಆರ್ ನಿರ್ಧರಿಸಿದ್ದು, ಈ ಬಾರಿಯೂ ಅದ್ದೂರಿಯಾಗಿ, ಕಲರ್ ಫುಲ್ ಆಗಿ ಟಿಪಿಎಲ್ ಸೀಸನ್ -2 ನಡೆಯಲಿದೆ.

    ಟಿಪಿಎಲ್ ಸೀಸನ್ -2 ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ  ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

    ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಇರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಎನಿಎಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್  ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.

  • TPL-2: ಮಾರ್ಚ್ 12 ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

    TPL-2: ಮಾರ್ಚ್ 12 ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ -2

    ನ್ 1 ಕ್ರಿಕೆಟ್ (Cricket) ಅಕಾಡೆಮಿ ವತಿಯಿಂದ ಕಳೆದ ಬಾರಿ ಅದ್ದೂರಿಯಾಗಿ ಆರಂಭಗೊಂಡಿದ್ದ ಟಿಪಿಎಲ್ (TPL) ಇದೀಗ ಸೀಸನ್ -2 ಕ್ಕೆ ರೆಡಿಯಾಗಿದೆ. ಮಾರ್ಚ್ ನಲ್ಲಿ ಟೆಲಿವಿಷನ್ (Television) ಪ್ರೀಮಿಯರ್ ಲೀಗ್ ಸೀಸನ್-2 ಆರಂಭವಾಗುತ್ತಿದೆ. ಸೀಸನ್ 2ಕ್ಕೆ ವೇದಿಕೆ ಸಜ್ಜಾಗುತ್ತಿದ್ದು ಮಾರ್ಚ್ 12,13,14,15ರಂದು ಒಟ್ಟು ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

    ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕರಾದ ಬಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಕಳೆದ ವರ್ಷದಿಂದ ಟಿಪಿಎಲ್ ಆರಂಭಿಸಿದ್ದೇವೆ. ಮೊದಲ ಸೀಸನ್ ಯಶಸ್ವಿಯಾಗಿತ್ತು. ಇದೀಗ ಎರಡನೇ ಸೀಸನ್ ನಡೆಸಲು ಎಲ್ಲಾ ತಯಾರಿ ನಡೆಯುತ್ತಿದೆ. ಮಾರ್ಚ್ ಎರಡನೇ ವಾರ ಟಿಪಿಎಲ್ ಸೀಸನ್ 2 ನಡೆಯಲಿದೆ. ಈ ಬಾರಿ ಡೇ ಅಂಡ್ ನೈಟ್ ಪಂದ್ಯಾವಳಿ ನಡೆಯಲಿದೆ. ತಂಡ, ನಾಯಕರ ಆಯ್ಕೆ ಎಲ್ಲವೂ ನಡೆದಿದೆ. ಮಾರ್ಚ್ 7ರಂದು ಜೆರ್ಸಿ ಲಾಂಚ್ ಮಾಡಲಿದ್ದೇವೆ. ಟಿಪಿಎಲ್ ಟ್ರೋಫಿ ಗೆದ್ದ ತಂಡದ ಸದಸ್ಯರಿಗೆ ಪರ್ಪಲ್ ರಾಕ್ ಎಂಟರ್ಟೈನರ್ಸ್ ದ್ವಿಚಕ್ರ ವಾಹನವನ್ನು ನೀಡುತ್ತಿದೆ. ಕಳೆದ ಬಾರಿ ಟೂರ್ನಮೆಂಟ್ ಮುಗಿದ ಮೇಲೆ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಅವರಿಗೆ ಧನ ಸಹಾಯ ಮಾಡಿದ್ದೇವು. ಈ ಬಾರಿಯೂ ಕೂಡ ಹಿರಿಯ ಕಲಾವಿದರಿಗೆ ಸಹಾಯ ಧನ ನೀಡಲು ಚಿಂತನೆ ಮಾಡಿದ್ದೇವೆ ಎಂದು ಬಿ. ಆರ್. ಸುನೀಲ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್ ನಲ್ಲಿ ಟಿಪಿಎಲ್ ಸೀಸನ್ -2 ನಡೆಯಲಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಆ್ಯನಿಲೀಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿದ್ದು, ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ಒಂದೊಂದು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

    ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಆನಿಹೆಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್  ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.

  • ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್

    ಶುಭಾ ಪೂಂಜಾ ಫ್ಯಾಮಿಲಿ ಜೊತೆ ಮಂಜು ಪಾವಗಡ ಟೆಂಪಲ್ ರನ್

    `ಮೊಗ್ಗಿನ ಮನಸ್ಸು’ (Moggina Manassu) ಚಿತ್ರದ ನಟಿ ಶುಭಾ ಪೂಂಜಾ (Shubha Poonja) ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದರು. ಈಗ ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ (Manju Pavagada) ಕೂಡ ಸಾಥ್ ನೀಡಿದ್ದಾರೆ.

    ಚಂಡ, ಮೊಗ್ಗಿನ ಮನಸ್ಸು ಸೇರಿದಂತೆ ಹಲವು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಶುಭಾ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಮಹಾಬಲ ಜೊತೆ ಹಸೆಮಣೆ ಏರಿದ್ದರು. ಈಗ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ ನಟ ನಾನಿಗೆ ಮೃಣಾಲ್ ಠಾಕೂರ್ ನಾಯಕಿ

     

    View this post on Instagram

     

    A post shared by shubha Poonja . (@shubhapoonja)

    ಮಾರಿಕಾಂಬಾ ದೇವಸ್ಥಾನ ಶಿರಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ನಟಿ ಶುಭಾ ಕುಟುಂಬದ ಜೊತೆ ಮಂಜು ಪಾವಗಡ ಕೂಡ ಜೊತೆಯಾಗಿದ್ದಾರೆ. ಬಳಿಕ `ಮಜಾಭಾರತ’ ಖ್ಯಾತಿಯ ರಾಘವೇಂದ್ರ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಇನ್ನೂ ಶುಭಾ ಪೂಂಜಾ ಪೋಸ್ಟ್ ಇದೀಗ ಸಖತ್ ಸದ್ದು ಮಾಡ್ತಿದ್ದು, ನಟಿಯ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ : ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದು ದೂರ ಉಳಿದ ರಾಕೇಶ್ ಅಡಿಗ

    ಬಿಗ್ ಬಾಸ್ : ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದು ದೂರ ಉಳಿದ ರಾಕೇಶ್ ಅಡಿಗ

    ಬಿಗ್ ಬಾಸ್  (Big Boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಅಮೂಲ್ಯ (Amulya) ಗೌಡ ಜೋಡಿಯೇ ವಿಚಿತ್ರ. ಇವರು ಯಾವಾಗ ಹೇಗೆ ಇರುತ್ತಾರೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಒಂದು ಹೊತ್ತಲ್ಲಿ ಅಪ್ಪಟ ಪ್ರೇಮಿಗಳಂತೆ ಕಾಣಿಸಿಕೊಂಡರೆ ಮತ್ತೊಂದು ಹೊತ್ತಲ್ಲಿ ಜನ್ಮಜನ್ಮಾಂತರದ ವೈರಿಗಳು ಎನ್ನುವಂತೆ ಮುನಿಸಿಕೊಳ್ಳುತ್ತಾರೆ. ನಿನ್ನೆಯೂ ಹಾಗೆಯೇ ಆಯಿತು. ಮಂಜು ಪಾವಗಡ ಮನೆಗೆ ಎಂಟ್ರಿ ಕೊಟ್ಟ ನಂತರ ಅಮೂಲ್ಯ ಬದಲಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅಮೂಲ್ಯಗೆ ಅಹಂಕಾರ ಜಾಸ್ತಿ ಎಂದಿದ್ದಾರೆ ರಾಕೇಶ್. ಹಾಗಾಗಿ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

    ಬಿಗ್ ಬಾಸ್ ಮನೆಗೆ ಹಾಸ್ಯ ಕಲಾವಿದ ಮಂಜು ಪಾವಗಡ (Manju Pavagada) ಪ್ರವೇಶ ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ಟೈಟಲ್ ಗೆದ್ದಿರುವ ಮಂಜು ಆಗಮನ ಮನೆಯಲ್ಲಿ ನವ ಉಲ್ಲಾಸ ತಂದಿದೆ. ಈ ಉಲ್ಲಾಸವನ್ನು ತಡೆಯುವುದಕ್ಕೆ ಆಗದೇ ಮಂಜು ಪಾವಗಡ ಮುಂದೆ ಕೂತು ಅಮೂಲ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ‘ಐ ಲವ್ ಯೂ’ ಎಂದು ಹೇಳುವ ಮೂಲಕ ರಾಕೇಶ್ ಅಡಿಗನಿಗೆ (Rakesh Adiga) ಕಕ್ಕಾಬಿಕ್ಕಿ ಆಗುವಂತೆ ಮಾಡಿದ್ದರು. ಇದನ್ನೂ ಓದಿ : ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

    ರಾಕೇಶ್ ಅಡಿಗ ಮತ್ತು ಅಮೂಲ್ಯ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿರುವ ಜೋಡಿ. ಪ್ರೇಮಿಗಳ ರೀತಿಯಲ್ಲೇ ಅವರು ಯಾವಾಗಲೂ ವರ್ತಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ರಾಕೇಶ್ ಅಡಿಗನ ಜೊತೆಯೇ ಅಮೂಲ್ಯ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅಮೂಲ್ಯ ಆಡಿದ ಮಾತುಗಳು ರಾಕೇಶ್ ಅಚ್ಚರಿ ಮೂಡಿಸಿದ್ದವು. ಮಂಜು ಪಾವಗಡ ಮನೆಗೆ ಬಂದ ಕೆಲವೇ ಗಂಟೆಗಳಲ್ಲೇ ಅಮೂಲ್ಯಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನೂ ಮೂಡಿಸಿವೆ.

    ಮಂಜು ಪಾವಗಡ ಮುಂದೆ ಮಂಡೆಯೂರಿ ಕುಳಿತು ‘ಐ ಲವ್ ಯೂ’ ಎಂದು ಅಮೂಲ್ಯ ಹೇಳಿದಾಗ, ಅಲ್ಲಿಯೇ ನಿಂತಿದ್ದ ರಾಕೇಶ್ ಅಡಿಗೆ ಅಚ್ಚರಿಯಿಂದಲೇ ಆ ದೃಶ್ಯವನ್ನು ನೋಡುತ್ತಾ, ‘ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ. ರಾಕಿ ಮಾತಿಗೆ ಅಮೂಲ್ಯ ಸ್ಮೈಲ್ ನೀಡುತ್ತಾರೆ. ಅದು ಹಾವು ಏಣಿಯ ಆಟವಾಗಿದ್ದರಿಂದ, ಆ ಆಟವನ್ನು ಬಳಸಿಕೊಂಡೇ ಈ ಮೂವರು ಮಾತನಾಡುತ್ತಾರೆ. ಆನಂತರ ಅಮೂಲ್ಯ ಮತ್ತು ರಾಕೇಶ್ ನಡುವೆ ಅಂತರದ ಗೇಮ್ ಅಂತೂ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೀಪಿಕಾ ದಾಸ್ ಗೆ ‘ಐ ಲವ್ ಯೂ’ ಹೇಳಿ ಪ್ರಪೋಸ್ ಮಾಡಿದ ಮಂಜು ಪಾವಗಡ

    ದೀಪಿಕಾ ದಾಸ್ ಗೆ ‘ಐ ಲವ್ ಯೂ’ ಹೇಳಿ ಪ್ರಪೋಸ್ ಮಾಡಿದ ಮಂಜು ಪಾವಗಡ

    ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರು, ಯಾರಿಗೆ ಐ ಲವ್ ಯೂ ಅಂತ ಪ್ರಪೋಸ್ ಮಾಡುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮನೆಯೊಳಗೆ ಸರ್ ಪ್ರೈಸ್ ಎನ್ನುವಂತೆ ಕಾಲಿಟ್ಟಿದ್ದ ಮಂಜು ಪಾವಗಡಗೆ (Manju Pavagada) ನಟಿ ಅಮೂಲ್ಯಗೌಡ ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡಿದ್ದರು. ಈ ನಡೆಗೆ ರಾಕೇಶ್ ಅಡಿಗ ತುಂಬಾ ನೊಂದುಕೊಂಡಿದ್ದರು. ಆ ದೃಶ್ಯವನ್ನು ಕಂಡು ನನ್ನ ನಾಗರಹಾವು ಕಡಿದಷ್ಟು ನೋವು ಆಗುತ್ತಿದೆ ಎಂದು ಕಾಮೆಂಟ್ ಕೂಡ ಮಾಡಿದ್ದರು.

    ಈ ಮಧ್ಯೆ ಅಮೂಲ್ಯ ಗೌಡ (Amulya) ಅವರ ಪ್ರಪೋಸ್ ಅನ್ನು ಸ್ವೀಕರಿಸದೇ, ತಿರಸ್ಕರಿಸದೇ ತಟಸ್ಥವಾಗಿದ್ದ ಮಂಜು ಪಾವಗಡ ಅವರು ದೀಪಿಕಾ ದಾಸ್ ಅವರಿಗೆ ‘ಐ ಲವ್ ಯೂ’ ಹೇಳಿದ್ದಾರೆ. ಹಾವು ಏಣಿ ಆಟವಾಡಲೆಂದೇ ಬಂದಿದ್ದ ಮಂಜು, ಈ ರೀತಿಯಾಗಿ ಪ್ರಪೋಸ್ ಮಾಡಿದಾಗ ಅದಕ್ಕೆ ಅಷ್ಟೇ ಕೂಲಾಗಿಯೇ ದೀಪಿಕಾ (Deepika Das) ಉತ್ತರಿಸಿದ್ದಾರೆ. ‘ಐ ಲವ್ ಯೂ ಟೂ’ ಎಂದು ಹೇಳುವ ಮೂಲಕ ಪ್ರೀತಿಯನ್ನು ಸ್ವೀಕರಿಸಿದ್ದಾರೆ.

    ಕಳೆದ ಸೀಸನ್ ನಲ್ಲಿ ಮನೆ ಮಾತಾಗಿದ್ದ ಸ್ಪರ್ಧಿ ಮಂಜು ಪಾವಗಡ. ನಗಿಸುತ್ತಲೇ, ಕಾಲೆಳೆಯುತ್ತದೇ ಸಖತ್ ಮನರಂಜನೆ ನೀಡಿದ್ದ ಸ್ಪರ್ಧಿ. ಇದೀಗ ಅವರು ದೊಡ್ಮನೆಗೆ ಲಗ್ಗೆ ಇಟ್ಟಿದ್ದು, ಸ್ವತಃ ಮನೆ ಒಳಗೆ ಇರುವವರಿಗೆ ಅಚ್ಚರಿ ಮೂಡಿಸಿದೆ. ಮಂಜು ಪ್ರವೇಶ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅನುಪಮಾ ಎಲಿಮಿನೇಷನ್ ನಂತರ 8 ಜನ ಸ್ಪರ್ಧಿಗಳಿರುವ‌ ಮನೆಯಲ್ಲಿ, ಕೇವಲ  ಜಟಾಪಟಿ ಮಾತ್ರ ಕಾಣಿಸುತ್ತಿತ್ತು. ಅದನ್ನು ಶಮನ ಮಾಡಲು ಮಂಜು ಬಂದಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್

    ಹಾವು – ಏಣಿ  ಟಾಸ್ಕ್ ವೇಳೆ ಮಂಜು ಪಾವಗಡ ಕೂಡ ಸ್ಪರ್ಧಿಗಳ ಜೊತೆಗೆ ಆಟವಾಡಿದ್ದಾರೆ. ಸ್ಪರ್ಧಿಗಳು ಹೇಳುವ ಸಂಖ್ಯೆಗೆ ದಾಳ ಕೂಡ ಹಾಕಿದ್ದಾರೆ. ಈ ವೇಳೆ, ಮಂಜುಗೆ ಅಮೂಲ್ಯ ಪ್ರಪೋಸ್ ಮಾಡಿದ್ದು, ಇದನ್ನ ನೋಡಿರೋ ರಾಕಿ, ಅಯ್ಯೋ ನನಗೆ ಹಾವು ಕಚ್ಚಿದ ಹಾಗೇ ಆಗುತ್ತಿದೆ ಎಂದಿದ್ದಾರೆ. ರಾಕಿ ಮಾತಿಗೆ ಮನೆಮಂದಿ ನಕ್ಕಿದ್ದಾರೆ.

    ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಪ್ರವೇಶ ಬಯಸಿದ್ದ ಮಂಜು ಪಾವಗಡ ಈ ಬಾರಿ ಮನೆಗೆ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟು ಸಮಯ ಅವರು ಮನೆಯಲ್ಲಿ ಇರುತ್ತಾರೋ, ಅಷ್ಟು ಹೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗುವುದು ಖಚಿತ.

    Live Tv
    [brid partner=56869869 player=32851 video=960834 autoplay=true]