Tag: ಮಂಜುಮ್ಮೆಲ್ ಬಾಯ್ಸ್

  • ದುಬಾರಿ ದಂಡ ತೆತ್ತ ಚಿತ್ರತಂಡ- ಇಳಯರಾಜಗೆ 60 ಲಕ್ಷ ನೀಡಿದ ‘ಮಂಜುಮ್ಮೆಲ್ ಬಾಯ್ಸ್’

    ದುಬಾರಿ ದಂಡ ತೆತ್ತ ಚಿತ್ರತಂಡ- ಇಳಯರಾಜಗೆ 60 ಲಕ್ಷ ನೀಡಿದ ‘ಮಂಜುಮ್ಮೆಲ್ ಬಾಯ್ಸ್’

    ನಧಿಕೃತವಾಗಿ ಹಾಡು ಬಳಸಿದಕ್ಕೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡ ಇದೀಗ ಇಳಯರಾಜಗೆ 60 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಳಯರಾಜ (Ilaiyaraaja) ಸಂಗೀತ ಸಂಯೋಜನೆಯ ‘ಕಣ್ಮಣಿ’ ಹಾಡನ್ನು ಬಳಸಿದಕ್ಕೆ ಇದೀಗ ದುಬಾರಿ ಹಣವನ್ನು ದಂಡ ತೆತ್ತಿದ್ದಾರೆ. ಇದನ್ನೂ ಓದಿ:ಸತತ ಸಿನಿಮಾಗಳ ಸೋಲಿನ ಬೆನ್ನಲ್ಲೇ ಬಿಗ್ ಚಾನ್ಸ್ ಬಾಚಿಕೊಂಡ ಕೃತಿ ಶೆಟ್ಟಿ

    ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಸಿನಿಮಾದಲ್ಲಿ ಅನಧಿಕೃತವಾಗಿ ಹಾಡು ಬಳಸಿದ ಹಿನ್ನೆಲೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಇಳಯರಾಜ ಕೇಳಿದ್ದರು. ಬಳಿಕ ಅವರನ್ನು ಚಿತ್ರದ ನಿರ್ಮಾಪಕರು ವೈಯಕ್ತಿಕವಾಗಿ ಭೇಟಿಯಾಗಿ ಮಾತಕತೆಯ ಬಳಿಕ ಒಪ್ಪಂದದಂತೆ 60 ಲಕ್ಷ ರೂ. ಇಳಯರಾಜಗೆ ಪಾವತಿಸಿದ್ದಾರೆ.

    ಅಂದಹಾಗೆ, ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ತಂಡ ಅನುಮತಿ ಇಲ್ಲದೇ ಚಿತ್ರದಲ್ಲಿ ಬಳಸಿದ್ದರು. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಇಳಯರಾಜ ನೋಟಿಸ್ ನೀಡಿದ್ದರು.

  • ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ

    ‘ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ

    ಲಯಾಳಂನಲ್ಲಿ ಇತ್ತೀಚೆಗೆ ತೆರೆಕಂಡ ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಇದೀಗ ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ತಾವು ಸಂಗೀತ ಸಂಯೋಜನೆ ಮಾಡಿದ್ದ ‘ಕಣ್ಮಣಿ’ ಹಾಡನ್ನು ಬಳಸಲಾಗಿದೆ ಎಂದು ಸಂಗೀತ ಮಾಂತ್ರಿಕ ಇಳಯರಾಜ (Ilaiyaraja) ಕಾನೂನು ಸಮರ ಸಾರಿದ್ದಾರೆ. ತಮ್ಮ ಹಾಡು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಬಳಕೆ ಆಗಿದೆ ಎಂದು ಚಿತ್ರದ ನಿರ್ಮಾಪಕರಿಗೆ ನೋಟಿಸ್ ನೀಡಿದ್ದಾರೆ.

    ಕಮಲ್‌ ಹಾಸನ್‌ ನಟನೆಯ ‘ಗುಣ’ (Guna) ಸಿನಿಮಾ ರಿಲೀಸ್ ಆಗಿದ್ದು 1991ರಲ್ಲಿ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ‘ಕಣ್ಮಣಿ ಅನ್ಬೊದು’ ಹಾಡು ಗಮನ ಸೆಳೆದಿತ್ತು. ಈ ಹಾಡು ‘ಮಂಜುಮ್ಮೇಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ. ಆದರೆ, ಇದನ್ನು ಅಕ್ರಮವಾಗಿ ಬಳಕೆ ಮಾಡಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ಇದನ್ನೂ ಓದಿ:ಮತ್ತೆ ಡೈರೆಕ್ಟರ್‌ ಶಶಾಂಕ್‌ ಜೊತೆ ಕೈಜೋಡಿಸಿದ ಡಾರ್ಲಿಂಗ್ ಕೃಷ್ಣ

    ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ಇಳಯರಾಜ ಕಡೆಯಿಂದ ನೋಟಿಸ್ ಹೋಗಿದೆ. ‘ಕಣ್ಮಣಿ ಅನ್ಬೋದು ಕಾದಲನ್’ ಹಾಡಿನ ಹಕ್ಕು ನಮ್ಮದು ಎಂದು ಅವರು ಹೇಳಿದ್ದಾರೆ. ಕಣ್ಮಣಿ ಹಾಡನ್ನು ಅಕ್ರಮವಾಗಿ ಬಳಕೆ ಮಾಡಲಾಗಿದ್ದು, ಇಳಯರಾಜ ಅವರು ಈ ಹಾಡಿನ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

    ಈ ಎಲ್ಲಾ ಸಂಗೀತ ಕೃತಿಗಳ ಮೇಲೆ ನೈತಿಕ ಹಕ್ಕುಗಳನ್ನು ಒಳಗೊಂಡಂತೆ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾರೆ. ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಸಂಗೀತ ಸಂಯೋಜಕರ ಅನುಮತಿ ಪಡೆಯಿರಿ ಅಥವಾ 15 ದಿನಗಳಲ್ಲಿ ಪರಿಹಾರವನ್ನು ಪಾವತಿಸುವಂತೆ ಜೊತೆಗೆ ಚಿತ್ರದಿಂದ ಹಾಡನ್ನು ತೆಗೆದು ಹಾಕುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಿದ್ದಾರೆ ಇಳಯರಾಜ ಪರ ವಕೀಲರು. ಎರಡು ಆಯ್ಕೆಯಲ್ಲಿ ಒಂದನ್ನು ಪಾಲಿಸದಿದ್ದರೆ ಅವರ ವಿರುದ್ಧ ನೋಟಿಸ್ ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ.

  • ಕನ್ನಡದಲ್ಲೂ ನೋಡಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ

    ಕನ್ನಡದಲ್ಲೂ ನೋಡಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ

    ಬಾಕ್ಸ್ ಆಫೀಸ್ ನಲ್ಲಿ ಇನ್ನೂರು ಕೋಟಿಗೂ ಅಧಿಕ ಹಣವನ್ನು ಬಾಚಿರುವ ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಓಟಿಟಿಗೆ ಬರುವ ಸಜ್ಜಾಗಿದೆ. ಸಿನಿಮಾ ಬಿಡುಗಡೆಯಾದಾಗ ಮಲಯಾಳಂ ಮತ್ತು ತೆಲುಗಿನಲ್ಲಿ ನೋಡಿದ ಪ್ರೇಕ್ಷಕರು ಓಟಿಟಿಯಲ್ಲಿ (OTT) ಕನ್ನಡವೂ (Kannada) ಸೇರಿದಂತೆ ಇತರ ಭಾಷೆಗಳಲ್ಲೂ ನೋಡಬಹುದಾಗಿದೆ.

    ಮೇ 2 ರಂದು ಹಾಟ್ ಸ್ಟರ್ ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ಚಿತ್ರವು ಮೊನ್ನೆಯಷ್ಟೇ ತೆಲುಗಿಗೂ ಡಬ್ ಆಗಿದೆ.

    ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದಷ್ಟೇ ಅಲ್ಲ, ಈ ಸಿನಿಮಾ ನೋಡಿ, ಚಿತ್ರತಂಡವನ್ನು ಮನೆಗೆ ಕರೆಸಿ ರಜನಿಕಾಂತ್ (Rajanikanth) ಮೊನ್ನೆಯಷ್ಟೇ ಸತ್ಕರಿಸಿದ್ದಾರೆ. ತಂಡದ ಶ್ರಮಕ್ಕೆ ತಲೈವಾ ಭೇಷ್ ಎಂದಿದ್ದಾರೆ.

     

    ‘ಮಂಜುಮ್ಮೆಲ್ ಬಾಯ್ಸ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಕಮಲ್ ಹಾಸನ್ ನಂತರ ರಜನಿಕಾಂತ್ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಚಿತ್ರತಂಡವನ್ನು ರಜನಿಕಾಂತ್ ಸತ್ಕರಿಸಿದ್ದಾರೆ. ನಟರಾದ ಗಣಪತಿ, ಚಂದು ಸಲೀಂಕುಮಾರ್, ದೀಪಕ್ ಪರಂಬೋಲ್, ನಟ ಅರುಣ್ ಜೊತೆ ಡೈರೆಕ್ಟರ್ ಚಿದಂಬರಂ ಅವರು ರಜನಿಕಾಂತ್‌ರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ.