Tag: ಮಂಜುನಾಥ ಹಿರೇಮಠ

  • ಕೊರೊನಾ ಜಾಗೃತಿ ಮೂಡಿಸಲು ಪೇಂಟಿಂಗ್ ಮಾಡಿದ ಡಿಸಿಪಿ

    ಕೊರೊನಾ ಜಾಗೃತಿ ಮೂಡಿಸಲು ಪೇಂಟಿಂಗ್ ಮಾಡಿದ ಡಿಸಿಪಿ

    ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಲಾವಿದ ಮಂಜುನಾಥ ಹಿರೇಮಠ ನಗರದ ಗೋಡೆಗಳ ಮೇಲೆ ಬರಹಗಳನ್ನು ಬರೆದು ಜಾಗೃತಿ ಮೂಡಿಸುತ್ತಿರುವುದಕ್ಕಿ ಡಿಸಿಪಿ ಕೈ ಜೋಡಿಸಿದ್ದಾರೆ.

    ಮಂಜುನಾಥ ಅವರ ಕಲಾಕೃತಿ ನೋಡಿದ ಡಿಸಿಪಿ ರಾಮರಾಜನ್ ಅವರು, ತಾವೂ ಕೂಡಾ ಕೈಯಲ್ಲಿ ಬ್ರಷ್ ಹಿಡಿದು ಪೇಂಟಿಂಗ್ ಮಾಡಿದರು. ನಗರದ ಜುಬ್ಲಿ ವೃತ್ತದಲ್ಲಿ ಮಾಸ್ಕ್ ಧರಿಸಿ ಕೊರೊನಾ ಓಡಿಸಿ ಎಂದು ಗೋಡೆ ಬರಹ ಬರೆದು ಜಾಗೃತಿ ಮೂಡಿಸುತ್ತಿರುವ ಮಂಜುನಾಥ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಜನರು ಸರಿಯಾಗಿ ಕೈ ತೊಳೆಯಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಇಲ್ಲದೇ ಹೊರಗೆ ಬರಬಾರದು ಎಂದು ಡಿಸಿಪಿ ರಾಮರಾಜನ್ ಕರೆ ನೀಡಿದರು.

    ದೇಶಾದ್ಯಂತ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದೆ, ಕಳೆದ 24 ಗಂಟೆಗಳ ಅವಧಿಯಲ್ಲಿ 2.57 ಲಕ್ಷಕ್ಕೂ ಅಧಿಕ ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 4,194 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.