ಇತ್ತೀಚೆಗೆ ಎಸಿಬಿ ಡಿಸಿ ಕಚೇರಿ ಮೇಲೆ ದಾಳಿ ನಡೆಸಿತ್ತು. ಗುರುವಾರವೂ ಸಹ ಮಂಜುನಾಥ್‍ರನ್ನ 10 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಎಲ್ಲ ವಿವಾದಗಳ ಮಧ್ಯೆ ಡಿಸಿಯನ್ನ ಎತ್ತಂಗಡಿ ಮಾಡಿ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ವರ್ಗಾವಣೆ ಮಾಡಿದೆ. ನೂತನ ಡಿಸಿಯಾಗಿ ಸಂಗಪ್ಪ ನೇಮಕಗೊಂಡಿದ್ದಾರೆ.
ಬೆಂಗಳೂರು: ನಡು ರಸ್ತೆಯಲ್ಲೇ ರೌಡಿಶೀಟರ್ ಭೀಕರವಾಗಿ ಕೊಲೆಯಾಗಿ ಹೋಗಿರುವ ಘಟನೆ ಜಂಬೂ ಸವಾರಿ ದಿಣ್ಣೆ ಬಳಿ ನಡೆದಿದೆ.
ಮಂಜ ಅಲಿಯಾಸ್ ಮಂಜುನಾಥ್ ಕೊಲೆಯಾದ ರೌಡಿಶೀಟರ್. ಶರತ್ ಕುಮಾರ್ ಕೊಲೆ ಮಾಡಿದ ಆರೋಪಿ. ಮಂಜುನಾಥ್ ಹುಳಿಮಾವು ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಕೋಣಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿ:7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ
ನಿನ್ನೆ ರಾತ್ರಿ ಕೆಲಸ ಮುಗಿದ ಬಳಿಕ ಕಂಟಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಕೊರ್ಂಡು ಬರುತ್ತಿರುವಾಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಶರತ್ ಕುಮಾರ್ ಮೊಬೈಲ್ ಕೇಳಿದ್ದಾನೆ. ಶರತ್ ಕುಮಾರ್ ಮೊಬೈಲ್ ಕೊಡಲು ನಿರಾಕರಿಸಿದಾಗ ಮಂಜ ಆರೋಪಿ ಶರತ್ ಜೊತೆ ಕಿರಿಕ್ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಮಂಜ ಸಿಮೆಂಟ್ ಇಟ್ಟಿಗೆಯಿಂದ ಆರೋಪಿ ಶರತ್‍ಗೆ ಹೊಡೆಯಲು ಹೋಗಿದ್ದಾನೆ.
ಆರೋಪಿ ಶರತ್ ಅದೇ ಸಿಮೆಂಟ್ ಇಟ್ಟಿಗೆ ಕಸಿದುಕೊಂಡು ಮಂಜನ ತಲೆಗೆ ಹೊಡೆದ್ದಿದ್ದಾನೆ. ಕಂಟಪೂರ್ತಿ ಕುಡಿದಿದ್ದ ಮಂಜ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿ ಶರತ್ ಕುಮಾರ್ ಘಟನೆ ಬಳಿಕ ನೇರವಾಗಿ ಕೋಣನಕುಂಟೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಶರತ್ ಮೂಲತಃ ಮಂಡ್ಯದವನಾಗಿದ್ದು ಮರ್ನಾಲ್ಕು ದಿನಗಳ ಹಿಂದಷ್ಟೆ ಬೆಂಗಳೂರಿಗೆ ಬಂದು ಕೆಲಸ ನೋಡಿಕೊಂಡು ದುಡಿಮೆ ಕೆಲಸ ಮಾಡುತ್ತಿದ್ದ. ಸದ್ಯ ಘಟನೆ ಸಂಬಂದ ಆರೋಪಿ ಶರತ್ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳಿಸಿಕೊಟ್ಟಿದ್ದಾರೆ. ಇದನ್ನೂ ಓದಿ:ಕೆಂಪುಕೋಟೆ ಮೇಲೆ ಸಿಖ್ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಧಿಸಿದಂತೆ ಸಂತ್ರಸ್ತ ಯುವತಿ ಪರ ವಕೀಲರ ಆಪ್ತ ಲಾಯರ್ ನನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.
ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಆಪ್ತ ಮಂಜುನಾಥ್ ಅವರೇ ಅಮಾನತಾದ ವಕೀಲ. ಬಾರ್ ಕೌನ್ಸಿಲ್ ವಿರುದ್ಧ ಮಂಜುನಾಥ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಅವರನ್ನು ವಜಾ ಮಾಡಲಾಗಿದೆ.
ಬಾರ್ ಕೌನ್ಸಿಲ್ ಫೆಲ್‍ಫೇರ್ ಸ್ಟ್ಯಾಂಪ್ ಬಗ್ಗೆ ಮಂಜುನಾಥ್ ಆರೋಪ ಮಾಡಿದ್ದರು. ಹೀಗಾಗಿ ಮಂಜುನಾಥ್ ವಿರುದ್ಧ ವಿಚಾರಣೆಗೆ ತೀರ್ಮಾನ ಮಾಡಲಾಗಿದ್ದು, ವಿಚಾರಣೆ ಮುಗಿಯುವವರೆಗೆ ವಕಾಲತ್ತು ವಹಿಸುವಂತಿಲ್ಲ. ಹೀಗಂತ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‍ನಿಂದ ಮಂಜುನಾಥ್ ಅವರಿಗೆ ನೋಟಿಸ್ ನೀಡಿದೆ.
ಸಿಡಿ ಯುವತಿ ಪರ ವಕೀಲ ಜಗದೀಶ್ ಹಾಗೂ ಮಂಜುನಾಥ್ ಬಾರ್ ಕೌನ್ಸಿಲ್‍ಗೆ ಸವಾಲೆಸೆದಿದ್ದರು. ತಾಕತ್ತಿದ್ದರೆ ಕ್ರಮಕೈಗೊಳ್ಳಿ ಎಂದು ಚಾಲೆಂಜ್ ಹಾಕಿದ್ದರು. ಜಗದೀಶ್ ದೆಹಲಿ ಬಾರ್ ಕೌನ್ಸಿಲ್‍ನಲ್ಲಿ ನೋಂದಣಿ ಹಿನ್ನೆಲೆಯಲ್ಲಿ ಜಗದೀಶ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.
ಬೆಂಗಳೂರು: ನಗರ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿರುವ ಜೆ.ಮಂಜುನಾಥ್ ಇಂದು ಅಧಿಕಾರ ಸ್ವೀಕರಿಸಿದರು
ನಿಕಟಪೂರ್ವ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಮಂಜುನಾಥ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕಳೆದ 8 ತಿಂಗಳುಗಳಿಂದ ಬಿಬಿಎಂಪಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ಹಿಸುತ್ತಿದ್ದ ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ಶನಿವಾರ ಬೆಂಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಿತ್ತು.
ಕೋಲಾರ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳನ್ನು ಮಂಜುನಾಥ್ ನಿರ್ವಹಿಸಿದ್ದಾರೆ.
ಮೈಸೂರು: ಸುತ್ತೂರು ಮಠಕ್ಕೆ ಹುಣಸೂರು ನೂತನ ಕಾಂಗ್ರೆಸ್ ಶಾಸಕ ಹೆಚ್ ಪಿ ಮಂಜುನಾಥ್ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು. ನಂತರ ಸುತ್ತೂರು ಶ್ರೀಗಳು ಶಾಸಕ ಮಂಜುನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿದರು. ಶ್ರೀಗಳ ಜೊತೆ ಶಾಸಕ ಎಚ್ ಪಿ ಮಂಜುನಾಥ್ ಕೆಲ ಕಾಲ ಚರ್ಚೆ ನಡೆಸಿದರು.
ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಅವರನ್ನು ಹೆಚ್ ಪಿ ಮಂಜುನಾಥ್ ಸೋಲಿಸಿದ್ದರು. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದರು. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದರು.
ಬೆಂಗಳೂರು: ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾದ ಹೊಸಕೋಟೆಯಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದೇ ರಕ್ತ ಚಿಮ್ಮಿದೆ.
ಹೌದು. ಎಂಟಿಬಿ ಮೇಲಿನ ಅಭಿಮಾನದಿಂದ ಮಂಜುನಾಥ್ ತನ್ನ ಎದೆಯ ಬಲಭಾಗಕ್ಕೆ ತಾನೇ ಚಾಕುವಿನಿಂದ ಚುಚ್ಚಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಮಂಜುನಾಥ್, ನಾನು ಎಂಟಿಬಿ ಅಭಿಮಾನಿ. ಅವರನ್ನು ನಂಬಿದರೆ ಪ್ರಾಣ ಹೋದರೂ ನಾವು ಚಿಂತೆ ಮಾಡಲ್ಲ. ಆ ಮಟ್ಟಕ್ಕೆ ಎಂಟಿಬಿ ಅವರು ಅಭಿಮಾನವನ್ನು ಹೊಸಕೋಟೆ ತಾಲೂಕಿನಲ್ಲಿ ಗಳಿಸಿಕೊಂಡಿದ್ದಾರೆ ಅನ್ನೋದಕ್ಕೆ ನಾನೇ ಸಾಕ್ಷಿ. ಹೊಸಕೋಟೆ ತಾಲೂಕಿನ ಜನರಲ್ಲಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಂಬಿಯವರು ಹೊಸಕೋಟೆಯನ್ನು ಅಭಿವೃದ್ಧಿ ಪಡಿಸಬೇಕು ಅನ್ನೋದಕ್ಕೋಸ್ಕರ ರಾಜೀನಾಮೆ ಕೊಟ್ಟಿದ್ದಾರೆಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ. ಅವರು ಯಾವ ಪಕ್ಷದವರಿಂದಲೂ ಹಣ ಪಡೆದುಕೊಂಡಿಲ್ಲ. ಅಭಿವೃದ್ಧಿ ವಿಚಾರ ಬಂದರೆ ಎಂಟಿಬಿ ನಾಗರಾಜಣ್ಣ ಅವರಿಗೆ ಯಾರೂ ಸರಿಸಮಾನರಲ್ಲ ಎಂದು ಹೇಳಿದ್ದಾರೆ.
ಇಂದು ಎಂಟಿಬಿ ರೋಡ್ ಶೋ ಹಿನ್ನೆಲೆಯಲ್ಲಿ ಹೊಸಕೋಟೆಯ ಎಂಟಿಬಿ ಕಚೇರಿಯಲ್ಲಿ ಕಾರ್ಯಕರ್ತರ ದಂಡೇ ನೆರೆದಿತ್ತು. ಹೊಸಕೋಟೆಯ ಮುಗಬಾಳ ಕಡೆಯಿಂದ ಬೈಕ್ ಗಳ ಮೂಲಕ ಆಗಮಿಸಿದ ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಿದರು. ಹೊಸಕೋಟೆ ಐಬಿ ಸಮೀಪದಿಂದ ನಾಮಪತ್ರ ಸಲ್ಲಿಸುವ ತಾಲೂಕು ಕಚೇರಿವರೆಗೆ ರ್ಯಾಲಿ ನಡೆಯಿತು. ತೆರೆದ ವಾಹನದಲ್ಲಿ ಎಂಟಿಬಿಗೆ ಸಚಿವ ಆರ್.ಅಶೋಕ್, ಮಾಜಿ ಸಚಿವ ಕಟ್ಟ ಸುಬ್ರಮಣ್ಯ ನಾಯ್ಡು, ಕೋಲಾರ ಸಂಸದ ಮುನಿಸ್ವಾಮಿ ಮತ್ತಿತರರು ಸಾಥ್ ನಿಡಿದರು.
ರ‍್ಯಾಲಿಗೂ ಮುನ್ನ ಎಂಟಿಬಿ ತಮ್ಮ ಇಷ್ಟದೇವತೆ ಆಧಿಶಕ್ತಿ ಪಟಾಲಮ್ಮನಿಗೆ ಪೂಜೆ ಸಲ್ಲಿಸಿ ನಂತರ ತೆರಳಿದರು. ಪುತ್ರ ಹಾಗೂ ಸ್ಥಳಿಯ ನಾಯಕರ ಜೊತೆ ನಾಮಪತ್ರ ಸಲ್ಲಿಕೆಗೆ ತಾಲೂಕು ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಗೇಟ್ ಬಳಿ ನೂಕು ನುಗ್ಗಲು ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಹೊರಗಡೆ ಮಂಜುನಾಥ್ ತನ್ನ ಎದೆಗೆ ಚಾಕು ಇರಿದುಕೊಂಡು ಆತಂಕ ಸೃಷ್ಟಿಸಿದ್ದಾನೆ.
ಎಂಟಿಬಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಯಾವುದೇ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.
ಬಾಲ್ಯ ವಿವಾಹ ದುಷ್ಪರಿಣಾಮ ಕುರಿತಾದ ಕಾದಂಬರಿ ಆಧಾರಿತ ‘ಭಾಗ್ಯಶ್ರೀ’ ಸಿನಿಮಾ ಈ ವಾರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ.
ಬಾಗಲಕೋಟೆ ಜಿಲ್ಲೆಯವರಾದ ಆಶಾ ಶಾಹಿರ ಬೀಳಗಿ ಹಾಗೂ ಶಾಹಿರ ಬೀಳಗಿ ಬನಶಂಕರಿ ಆಟ್ರ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ತಯಾರಿಸಿದ್ದಾರೆ. ಎಸ್ ಮಲ್ಲೇಶ್ ಅವರ ಕಾದಂಬರಿ ‘ಭಾಗ್ಯಶ್ರೀ’ ಅದೇ ಹೆಸರಿನಲ್ಲಿ ಅವರು ನಿರ್ದೇಶನ ಸಹ ಮಾಡಿದ್ದಾರೆ. ಪ್ರಾರ್ಥನ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಕುಮಾರಿ ಹೀರಾ ಈ ಚಿತ್ರದಲ್ಲಿ ‘ಭಾಗ್ಯಶ್ರೀ’ ಪಾತ್ರವನ್ನು ಮಾಡಿದ್ದಾರೆ.
ಈ ಚಿತ್ರಕ್ಕೆ ಪದ್ಮಶ್ರೀ ದೊಡ್ಡರಂಗೇ ಗೌಡ ಅವರು ಎರಡು ಹಾಡುಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ ಒಂದು ವಿಶೇಷವಾದ ಹಾಡು ನಾಲ್ಕೂವರೆ ನಿಮಿಷಗಳ ಕಾಲ ಮೂಡಿಬಂದಿದೆ. ಕಾರ್ತಿಕ್ ವೆಂಕಟೇಶ್ ರಾಗ ಸಂಯೋಜನೆಯಲ್ಲಿ ಮೂರು ಹಾಡುಗಳು ಮೂಡಿಬಂದಿದೆ. ನಿರ್ದೇಶಕ ಮಲ್ಲೇಶ್ ಸಹ ಒಂದು ಗೀತೆಯನ್ನು ರಚಿಸಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಹೇಮಂತ್ ಕುಮಾರ್ ಛಾಯಾಗ್ರಹಣ ಇರುವ ಈ ಭಾಗ್ಯಶ್ರೀ ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ, ಕೆ ಜಿ ಎಫ್ ಕೃಷ್ಣೋಜಿ ರಾವ್, ಏಕನಾಥ್, ನಾಗರಾಜ್ ಹಾಗೂ ಇತರರು ತಾರಾಗಣದಲಿದ್ದಾರೆ.
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪತನಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಹೆಚ್.ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ. ಇತ್ತ ದಿಢೀರ್ ಎಂದು ವಿಧಾನಸೌಧಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಆಗಮಿಸಿದ್ದು, ತೀವ್ರ ಕುತೂಹಲವನ್ನು ಹುಟ್ಟುಹಾಕಿತು.
ನಾನು ಪಕ್ಷ ತೊರೆಯಲ್ಲ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲ್ಲ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕ್ಷೇತ್ರದ ಜನತೆ ಜೆಡಿಎಸ್, ಸಿಎಂ ಮತ್ತು ದೇವೇಗೌಡರನ್ನು ನೋಡಿ ಮತ ಹಾಕಿ ಗೆಲ್ಲಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನನಗೆ ತಲೆಕೆಟ್ಟಿಲ್ಲ. ರಾಜೀನಾಮೆ ನೀಡಿದ್ದು ಅವರ ವೈಯಕ್ತಿಕ ವಿಚಾರ ಎಂದು ತಿಳಿಸಿದರು.
ಈಗಾಗಲೇ ಜೆಡಿಎಸ್ ಶಾಸಕರಾದ ಹೆಚ್.ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡ ಶನಿವಾರ ರಾಜೀನಾಮೆ ನೀಡಿ ಮುಂಬೈ ಸೊಫಿಟೆಲ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಭಾನುವಾರ ಸಂಜೆ ವೇಳೆ ಅತೃಪ್ತ ಶಾಸಕರು ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಮುಂಬೈ ಸೊಫಿಟೆಲ್ ಹೋಟೆಲ್ ಮುಂಭಾಗದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅತೃಪ್ತ ಶಾಸಕರ ಪರವಾಗಿ ಮಾತನಾಡಿದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ನಮ್ಮ ನಿರ್ಧಾರ ದೃಢವಾಗಿದ್ದು ಯಾವ 13 ಶಾಸಕರೂ ತಮ್ಮ ರಾಜೀನಾಮೆಯನ್ನು ಹಿಂಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದರು.
ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಹಫ್ತಾ. ಪ್ರಕಾಶ್ ಹೆಬ್ಬಾಳ ನಿರ್ದೇಶನದ ಈ ಚಿತ್ರ ವಿಶೇಷವಾದೊಂದು ಕಥೆಯನ್ನು ಹೊಂದಿದೆಯೆಂಬ ಅಂದಾಜು ಈಗಾಗಲೇ ಪ್ರೇಕ್ಷಕರಿಗೆಲ್ಲ ಸಿಕ್ಕಿ ಬಿಟ್ಟಿದೆ. ಯಾವುದೇ ಯಶಸ್ವಿ ಚಿತ್ರ ಬಿಡುಗಡೆಗೂ ಮುಂಚೆಯೇ ಸಕಾರಾತ್ಮಕವಾದ ಟಾಕ್ ಕ್ರಿಯೇಟ್ ಮಾಡುತ್ತವಲ್ಲ? ಆ ರೀತಿಯ ಲಕ್ಷಣಗಳಿಗೆಲ್ಲ ಹಫ್ತಾ ಚಿತ್ರ ರೂವಾರಿಯಾಗಿದೆ. ಇದು ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲಿಯೇ ಮೈತ್ರಿ ಮಂಜುನಾಥ್ ಅವರಿಗೆ ತುಂಬು ಭರವಸೆಯನ್ನೂ ಹುಟ್ಟಿಸಿದೆ.
ಮೈತ್ರಿ ಮಂಜುನಾಥ್ ಅವರು ಹಫ್ತಾ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿ ಗುರುತಿಸಿಕೊಂಡಿರೋ ಮಂಜುನಾಥ್ ಮೈತ್ರಿ ಗ್ರೂಪ್ಸ್ ಮಾಲೀಕರು. ಇದರಡಿಯಲ್ಲಿ ಹಲವಾರು ಉದ್ಯಮಗಳ ಒಡೆಯರಾಗಿರುವ ಅವರ ಪಾಲಿಗೆ ಸಿನಿಮಾ ಮಾಡಬೇಕೆಂಬುದು ಹಳೆಯ ಕನಸು. ಹಾಗಂತ ಅದಕ್ಕೇನೂ ರೂಪುರೇಷೆ ಇಲ್ಲದಿರಲಿಲ್ಲ. ಒಟ್ಟಾರೆ ಒಂದು ಸಿನಿಮಾ ಮಾಡಿ ನಿರ್ಮಾಪಕ ಅನ್ನಿಸಿಕೊಳ್ಳುವ ಯಾವ ಅವಸರವೂ ಅವರಿಗಿರಲಿಲ್ಲ. ಎಲ್ಲ ರೀತಿಯಿಂದಲೂ ತಮಗೆ ಒಪ್ಪಿಗೆಯಾಗುವ, ಕೇಳಿದಾಕ್ಷಣವೇ ಗೆಲುವಿನ ಸೂಚನೆ ಸಿಗುವಂಥಾ ಕಥೆ ಸಿಕ್ಕಿದಾಗಲಷ್ಟೇ ನಿರ್ಮಾಪಕರಾಗಿ ಹೊಸ ಯಾನ ಆರಂಭಿಸಬೇಕೆಂಬ ನಿರ್ಧಾರ ಅವರದ್ದಾಗಿತ್ತು.
ಇಂಥಾದ್ದೊಂದು ಅಚಲ ನಿರ್ಧಾರಕ್ಕೆ ಹೊಸಾ ಆವೇಗ ಸಿಕ್ಕಿದ್ದು ಎರಡು ವರ್ಷಗಳ ಹಿಂದೆ. ಈ ಸಿನೆಮಾದ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಮಂಜುನಾಥ್ ಅವರಿಗೆ ಬಹು ಕಾಲದ ಗೆಳೆಯ. ಅದೊಂದು ದಿನ ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಪ್ರಕಾಶ್ ಹಫ್ತಾ ಚಿತ್ರದ ಕಥೆಯನ್ನು ಮಂಜುನಾಥ್ ಅವರಿಗೆ ಒಪ್ಪಿಸಿದ್ದರಂತೆ. ಪೂರ್ತಿ ಕಥೆ ಕೇಳಿದವರಿಗೆ ತಾನು ನಿರ್ಮಾಪಕನಾಗಿ ಪಾದಾರ್ಪಣೆ ಮಾಡಲು ಇದೇ ಸರಿಯಾದ ಕಥೆ ಅಂತ ಆ ಕ್ಷಣವೇ ಅನ್ನಿಸಿತ್ತಂತೆ. ಈ ಕಾರಣದಿಂದಲೇ ಮೈತ್ರಿ ಪ್ರೊಡಕ್ಷನ್ಸ್ ಅಸ್ತಿತ್ವಕ್ಕೆ ಬಂದು ಹಫ್ತಾ ಚಿತ್ರಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತ್ತು.
ಬೆಂಗಳೂರಿನವರೇ ಆದ ಮಂಜುನಾಥ್ ಪಾಲಿಗೆ ಸಿನಿಮಾ ಆಕರ್ಷಣೆ ಇಂದು ನಿನ್ನೆಯದ್ದಲ್ಲ. ಈ ಬಗ್ಗೆ ಅಪಾರ ಕ್ರೇಜ್ ಹೊಂದಿದ್ದ ಅವರು ಕೆಲ ಕಿರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದನ್ನು ಸಿನಿಮಾ ಮಾಡುವ ತಯಾರಿಯೆಂದೇ ಪರಿಗಣಿಸಿದ್ದರು. ತಾವೊಂದು ಸಿನಿಮಾ ನಿರ್ಮಾಣ ಮಾಡಿದರೆ ಅದು ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರಬೇಕೆಂದು ಆಶಿಸಿದ್ದ ಮಂಜುನಾಥ್ ಹಫ್ತಾ ಚಿತ್ರವನ್ನೂ ಕೂಡಾ ಅದರಂತೆಯೇ ರೂಪಿಸಿದ ಖುಷಿ ಹೊಂದಿದ್ದಾರೆ.
ಹಫ್ತಾ ಚಿತ್ರ ಶುರುವಾದ ಮೊದಲ ದಿನವೇ ನೂರಾರು ಮಂದಿಗೆ ಕೆಲಸ ಕೊಟ್ಟ ತೃಪ್ತ ಭಾವವನ್ನೂ ತುಂಬಿಕೊಂಡಿದ್ದ ಮೈತ್ರಿ ಮಂಜುನಾಥ್ ಪಾಲಿಗೆ ಆರಂಭದಿಂದ ಇಲ್ಲಿಯವರೆಗೂ ಒಳ್ಳೆಯ ಅನುಭವಗಳೇ ಕೈ ಹಿಡಿದಿವೆ. ಆರಂಭದಲ್ಲಿ ಪ್ರಕಾಶ್ ಕಥೆ ಹೇಳುವಾಗ ಇದ್ದ ಫೀಲ್‍ಗೆ ಅನುಗುಣವಾಗಿಯೇ ಚಿತ್ರ ಮೂಡಿ ಬಂದಿರೋದರಿಂದ ಅವರಲ್ಲಿ ಗೆಲ್ಲುವ ಭರವಸೆ ಹೆಚ್ಚಾಗಿದೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆಯನ್ನು ವಿಭಿನ್ನವಾಗಿಯೇ ತೆರೆ ಮೇಲೆ ತಂದಿರೋದರ ಬಗ್ಗೆ ಖುಷಿ, ಮತ್ತದು ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ಮಂಜುನಾಥ್ ಅವರದ್ದು.
ಇದು ಮೈತ್ರಿ ಮಂಜುನಾಥ್ ನಿರ್ಮಾಣದ ಮೊದಲ ಚಿತ್ರ. ಇದರ ಬಗ್ಗೆ ಈಗ ಅಷ್ಟ ದಿಕ್ಕುಗಳಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಈ ಮೂಲಕವೇ ಪುಷ್ಕಳವಾದ ಗೆಲುವು ದಕ್ಕುತ್ತದೆ ಎಂಬ ಭರವಸೆಯೂ ಗಟ್ಟಿಯಾಗುತ್ತಿದೆ. ಇದುವೇ ಮಂಜುನಾಥ್ ಅವರಲ್ಲಿ ನಿರ್ಮಾಪಕರಾಗಿ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹುಟ್ಟಿಸಿದೆ. ಈಗಾಗಲೇ ಅವರು ಎರಡನೇ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಇದು ಹಫ್ತಾ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್‍ನ ಪರಿಣಾಮ!
ಬೆಂಗಳೂರು: ಮಂಜುನಾಥ್ ನಿರ್ಮಾಣದ ಕದ್ದುಮುಚ್ಚಿ ಚಿತ್ರ ತೆರೆ ಕಂಡಿದೆ. ಹಂಸಲೇಖಾ ಅವರ ಸಂಗೀತದಲ್ಲಿ ಮೂಡಿ ಬಂದಿರೋ ಹಾಡುಗಳೂ ಸೇರಿದಂತೆ ನಾನಾ ಥರದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಈ ಸಿನಿಮಾ ಯುವ ತಲ್ಲಣಗಳ ಕಥೆಯ ಸುಳಿವನ್ನು ಬಿಟ್ಟುಕೊಟ್ಟಿತ್ತು. ಇದೀಗ ಕದ್ದುಮುಚ್ಚಿ ಒಳಗಿರೋ ಸಿಹಿಯಾದ ಹೂರಣ ಅನಾವರಣಗೊಂಡಿದೆ.
ಒಂದು ಮಾಮೂಲಿ ಜಾಡಿನ ಕಥೆಯನ್ನೂ ಕೂಡಾ ವಿಶಿಷ್ಟವಾದ ಆಲೋಚನೆ ಮತ್ತು ಭಿನ್ನವಾದ ನಿರೂಪಣಾ ಶೈಲಿ ಹೊಸದಾಗಿಸಿ ಬಿಡುತ್ತದೆ. ಅದೇ ರೀತಿ ಪ್ರೀತಿ, ಪ್ರೇಮ ಮತ್ತು ಬದುಕಿನ ಕಥೆ ಹೊಂದಿರೋ ಈ ಚಿತ್ರವೂ ಕೂಡಾ ರೂಪುಗೊಂಡಿದೆ. ಇಡೀ ಸಿನಿಮಾ ಎಲ್ಲರಿಗೂ ಆಪ್ತವಾಗೋದೇ ಈ ಕಾರಣದಿಂದ.
ನಾಯಕ ಅಗರ್ಭ ಶ್ರೀಮಂತಿಕೆಯ ಹಿನ್ನೆಲೆ ಹೊಂದಿರುವಾತ. ಆದರೆ ಸಹಜವಾದ ಪ್ರೀತಿ ಸಿಕ್ಕದೆ ಎಲ್ಲವೂ ಢಾಂಬಿಕ ಎಂಬ ಭಾವನೆ ರೂಢಿಸಿಕೊಳ್ಳೋ ಆತ ದಿಕ್ಕುದೆಸೆ ಇಲ್ಲದಂತೆ ಹೊರಟು ಬಿಡುತ್ತಾನೆ. ಆದರೆ ಬದುಕಿನ ವೈಚಿತ್ರ್ಯಗಳೇ ನಾಯಕನಿಗೆ ಅಪ್ಪಟ ಮಲೆನಾಡು ಸೀಮೆಯ ದಿಕ್ಕು ತೋರುತ್ತದೆ. ಪ್ರೀತಿಯ ತತ್ವಾರದಿಂದ ಬೆಂಗಾಡಿನಂತಾಗಿದ್ದ ಆತನ ಮುಂದೆ ಮಲೆನಾಡ ಚೆಲುವೆಯೊಬ್ಬಳ ಆಗಮನವಾಗುತ್ತದೆ. ಯಥಾ ಪ್ರಕಾರ ಸುತ್ತಾಟ, ರೊಮ್ಯಾನ್ಸುಗಳ ನಡುವೆ ಇನ್ನೇನು ಗಟ್ಟಿ ಮೇಳದತ್ತ ಈ ಜೋಡಿ ಹೊರಟಿದೆ ಅಂದುಕೊಳ್ಳುವ ಹೊತ್ತಿಗೆಲ್ಲ ಭಯಾನಕ ಟ್ವಿಸ್ಟು ಎದುರಾಗುತ್ತೆ.
ಅದರ ಫಲವಾಗಿ ತಾನು ಅಪಾರವಾಗಿ ಪ್ರೀತಿಸಿದ ಹುಡುಗಿಯ ಮದುವೆಗೇ ತಾನೇ ಓಡಾಡೋ ದುಃಸ್ಥಿತಿ ನಾಯಕನಿಗೆ ಬಂದೊದಗುತ್ತೆ. ಹಾಗಾದರೆ ಈ ಪ್ರೀತಿಯಲ್ಲಿ ಬಿರುಕು ಮೂಡಲು ಕಾರಣವೇನು, ಈ ಜೋಡಿ ಮತ್ತೆ ಒಂದಾಗುತ್ತಾ ಅನ್ನೋದನ್ನ ಚಿತ್ರ ಮಂದಿರಗಳಲ್ಲಿಯೇ ನೋಡಿದರೆ ಚೆನ್ನ. ಹಾಗಂತ ಇಷ್ಟಕ್ಕೆ ಮಾತ್ರವೇ ಸಿನಿಮಾ ಸೀಮಿತವಾಗಿಲ್ಲ. ಅದರ ಹರವು ವಿಸ್ತಾರವಾಗಿದೆ. ಹಿರಿ, ಮರಿ ಕಲಾವಿದರೊಂದಿಗೆ ಇಡೀ ಚಿತ್ರವನ್ನ ಮಜವಾಗಿಯೇ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಹಂಸಲೇಖ ಅವರ ಮಾಂತ್ರಿಕ ಸಂಗೀತದ ಶಕ್ತಿಯೊಂದಿಗೆ ಕೆಲ ಕೊರತೆಗಳ ನಡುವೆಯೂ ಕದ್ದುಮುಚ್ಚಿ ಚಿತ್ರ ಇಷ್ಟವಾಗುವಂತಿದೆ.