Tag: ಮಂಜುನಾಥ್

  • 2 ದಿನದಲ್ಲಿ ರಾಜಕೀಯಕ್ಕೆ ಸೇರ್ಪಡೆ: ಮೋದಿಯನ್ನು ಹಾಡಿ ಹೊಗಳಿದ ಡಾ.ಮಂಜುನಾಥ್‌

    2 ದಿನದಲ್ಲಿ ರಾಜಕೀಯಕ್ಕೆ ಸೇರ್ಪಡೆ: ಮೋದಿಯನ್ನು ಹಾಡಿ ಹೊಗಳಿದ ಡಾ.ಮಂಜುನಾಥ್‌

    ಬೆಂಗಳೂರು: ಅಧಿಕೃತವಾಗಿ 2-3 ದಿನಗಳಲ್ಲಿ ನಾನು ರಾಜಕೀಯಕ್ಕೆ ಸೇರ್ಪಡೆ ಆಗುತ್ತೇನೆ ಎಂದು ಡಾ.ಮಂಜುನಾಥ್‌ (Dr. Manjunath) ಹೇಳಿದ್ದಾರೆ.

    ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪನವರನ್ನು (BS Yediyurappa) ಭೇಟಿ ಮಾಡಿದ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಸರ್ಕಾರ (PM Narendra Modi Government) ಸಾಧಕರಿಗೆ, ಪರಿಣಿತರಿಗೆ ಪ್ರೊತ್ಸಾಹ ಕೊಡುತ್ತಿದ್ದಾರೆ. ಹೀಗಾಗಿ ನಾನು ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇನೆ ಎಂದು ತಿಳಿಸಿದರು.

    ಹೃದ್ರೋಗ ಕ್ಷೇತ್ರದಲ್ಲಿ ಕಾಂತ್ರಿಕಾರಕ ಕೆಲಸ ಮಾಡಿದ್ದೇವೆ. ಮೋದಿ ಅವರಿಗೆ ಹ್ರಾಟ್ರಿಕ್ ಎಲೆಕ್ಷನ್ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯಡಿಯೂರಪ್ಪ ಅವರ ಜೊತೆ ಮಾತಾಡಿದ್ದೇನೆ. ರಾಜಕೀಯದಲ್ಲೂ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಯಡಿಯೂರಪ್ಪ ಮಾತನಾಡಿ, ಇಡೀ ನಾಡಿಗೆ ಗೊತ್ತಿರುವಂತೆ ಡಾ ಮಂಜುನಾಥ್ ಲಕ್ಷಾಂತರ ಜನರ ಪ್ರಾಣ ಉಳಿಸಿದ್ಧಾರೆ. ಅವರು ಬಿಜೆಪಿ ಸೇರ್ಪಡೆ ಆಗಲಿದ್ದು, ಇಂತಹವರನ್ನ ಅವಿರೋಧವಾಗಿ ಗೆಲ್ಲಿಸಿಕೊಡಬೇಕಿತ್ತು. ಆದರೆ ಚುನಾವಣಾ ರಾಜಕೀಯ ಅನಿವಾರ್ಯ. ಅವರ ಪಕ್ಷ ಸೇರ್ಪಡೆ ಬಗ್ಗೆ ಮೋದಿ ಅವರಿಗೂ ಮಾಹಿತಿ ನೀಡಿದ್ದೆವು. ಅವರು ಕೂಡ ಬಹಳ ಸಂತೋಷಪಟ್ಟರು ಎಂದು ತಿಳಿಸಿದರು.

  • ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ

    ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ಈ ಬಾರಿ ಡಾ. ಮಂಜುನಾಥ್‌ (Dr Manjunath) ಕಣಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ರಾಜಕೀಯ ಪ್ರವೇಶಕ್ಕೆ ಡಾ. ಮಂಜುನಾಥ್‌ ಸಮ್ಮತಿ ಸೂಚಿಸುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Devegowda) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಜೆಡಿಎಸ್‌ ಕಚೇರಿಯಲ್ಲಿ ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ.ಮಂಜುನಾಥ್‌ ಅವರ ರಾಜಕೀಯ ಪ್ರವೇಶದ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಮಂಜುನಾಥ್‌ ಇಡೀ ದೇಶಾದ್ಯಂತ ತಮ್ಮದೇ ಆದ ಹೆಸರು ಮಾಡಿದ್ದಾರೆ. ಮುಗಿಲೆತ್ತರಕ್ಕೆ ಹೆಸರು ಮಾಡಿರುವ ಅವರು ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಬರುವುದು ಸರಿಯಲ್ಲ. ಅವರಿಗೆ ಈಗ ಒಂದು ಒಳ್ಳೆ ಸ್ಥಾನವಿದೆ ಎಂದು ಉತ್ತರಿಸಿದರು.

    ಈ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಎಂದು ನಾನು ಒತ್ತಾಯಿಸುತ್ತಿಲ್ಲ. ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನವನ್ನು ನಾವು ಮಾಡುವುದಿಲ್ಲ. ರಾಜಕೀಯಕ್ಕೆ ಬರುವುದಕ್ಕೆ ಅವರು ಸಮ್ಮತಿ ಸೂಚಸುವುದಿಲ್ಲ ಅಂತ ಅಂದುಕೊಂಡಿದ್ದೇನೆ ಎಂದರು.  ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ – ಕೊನೆಯ 10 ನಿಮಿಷದ ಕಂಪ್ಲೀಟ್‌ ವರದಿ ಓದಿ

    ಮೈತ್ರಿ ಸೀಟು ಹಂಚಿಕೆ, ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಕೇಳಿದ್ದಕ್ಕೆ, ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗಗಲಿದೆ. ಅಮಿತ್ ಶಾ ಮತ್ತು ನಡ್ಡಾ ಯಾವ್ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಸ್ಪರ್ಧೆ ವಿಚಾರವನ್ನ ಮೋದಿ, ಅಮಿತ್ ಶಾ ಕುಳಿತು ಚರ್ಚೆ ಮಾಡುತ್ತಾರೆ ಎಂದು ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಇಲ್ಲಿಯವರೆಗೂ ಅಧಿಕೃತವಾಗಿ ಮಂಜುನಾಥ್‌ ಎಲ್ಲಿಯೂ ತಮ್ಮ ನಿರ್ಧಾರವನ್ನು ತಿಳಿಸಿಲ್ಲ.  ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಮೈಸೂರಿನ (Mysuru) ನಾಗರಿಕರ ಪರವಾಗಿ ಫೆ.26 ರಂದು ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದ ಮಂಜುನಾಥ್‌ ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದರು.

  • ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್‌ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್‌ ರಂಗನಾಥ್‌

    ಮೈಸೂರು: ಪ್ರಜಾಪ್ರಭುತ್ವ (Democracy) ಒಳ್ಳೆಯವರನ್ನು ಬಯಸುತ್ತದೆ. ಮಂಜುನಾಥ್‌ (Dr. C.N. Manjunath) ಅವರಂತಹವರು ರಾಜಕಾರಣಕ್ಕೆ ಬರಬೇಕು ಎಂದು ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ (HR Ranganath) ಹೇಳಿದರು.

    ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್‌ ಮಂಜುನಾಥ್‌ ಅವರಿಗಾಗಿ ಮೈಸೂರಿನ ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದರು.

     

    ಜನರ ಬಯಕೆ ಪ್ರಕಾರ ಒಂದು ಸವಾಲು ಸ್ವೀಕರಿಸಿ. 35 ವರ್ಷ ಸರ್ಕಾರಿ ಸೇವೆ ಮುಗಿಸಿದ ಮೇಲೆ ಈ ರೀತಿಯ ಜನಾಭಿಪ್ರಾಯ ಮೂಡುವುದು ಕಷ್ಟ. ಆದರೆ ಡಾ. ಮಂಜುನಾಥ್ ಅವರಿಗೆ ಅದು ಸಿಕ್ಕಿದೆ. ಆಗ ಪ್ರಜಾಪ್ರಭುತ್ವಕ್ಕೆ ಒಬ್ಬ ಒಳ್ಳೆಯವರು ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ: ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ

    ಸರ್ಕಾರಿ ಸಂಸ್ಥೆಯನ್ನು ಮುನ್ನಡೆಸುವುದು ಇಂದು ಬಹಳ ಕಷ್ಟ. ಹಾಗಿರುವಾಗ ಜಯದೇವ ಆಸ್ಪತ್ರೆಯನ್ನು ಜನ ಮೆಚ್ಚುವಂತೆ ಮುನ್ನಡೆಸಿದ್ದಾರೆ. ಡಾ. ಮಂಜುನಾಥ್ ಅವರ ಈ ಸಾಧನೆ ಪಿಹೆಚ್‌ಡಿಗೆ ಯೋಗ್ಯವಾದ ಒಂದು ವಿಷಯ ಎಂದು ತಿಳಿಸಿದರು.

     

    ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ರಾಜಕಾರಣ ಕೆಟ್ಟದಲ್ಲ. ಎಸ್.ಎಂ. ಕೃಷ್ಣ ಅವರು ನಾನು ಪ್ರೀತಿಸುವ ರಾಜಕಾರಣಿ. ಅದೇ ರೀತಿಯ ವ್ಯಕ್ತಿತ್ವ ಮಂಜುನಾಥ್ ಅವರದ್ದು. ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್

  • ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ

    ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ: ಮಂಜುನಾಥ್ ಆಕ್ರೋಶ

    ಬೆಂಗಳೂರು: ಕಾಂಗ್ರೆಸ್‍ನವರು (Congress) ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ವಾರ್ ಶುರು ಮಾಡಿದ್ದಾರೆ. ಸುಮ್ಮನಿರೋಕೆ ನಾವು ಬಳೆ ತೊಟ್ಟಿಲ್ಲ ನಮ್ಮ ಬಳಿಯು ಕಾರ್ಯಕರ್ತರಿದ್ದಾರೆ, ಹುಡುಗರಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಮಂಜುನಾಥ್ (Ex MLA Manjunath) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಪೋಸ್ಟರ್ ಮೂಲಕ ಅಪಪ್ರಚಾರ ನಡೆಯುತ್ತಿದೆ. ಈ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಈ ಹಿಂದೆ ಪೇ ಸಿಎಂ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡಿದ್ರು. ಈ ಪೋಸ್ಟರ್ ಅಪಪ್ರಚಾರದ ಬಗ್ಗೆ ನಾವೆಲ್ಲಾ ಸಭೆ ನಡೆಸಿದ್ದೇವೆ. ನಾವು ಈ ರೀತಿಯ  ಪೋಸ್ಟರ್ ಮಾಡಿ ಅಂಟಿಸುವುದು ದೊಡ್ಡ ಕೆಲಸ ಅಲ್ಲ. ನಮ್ಮ ಬಳಿಯೂ ಕಾರ್ಯಕರ್ತರ ಪಡೆ ಇದೆ ಎಂದರು.

    ಪೋಸ್ಟರ್ ಎಲ್ಲಿ ಪ್ರಿಂಟ್ ಮಾಡಿಸಬೇಕು?. ಹೇಗೆ ಮಾಡಿಸಬೇಕು ಅನ್ನೋದು ನಮಗೆ ಗೊತ್ತಿದೆ. ನಾವು ಸರ್ಕಾರಕ್ಕೆ, ಗೃಹ ಇಲಾಖೆಗೆ ಎಚ್ಚರಿಕೆ ಕೊಡ್ತಾ ಇದ್ದೀವಿ. ಇದು ಇಲ್ಲಿಗೆ ಮುಗಿಯಬೇಕು. ನಾವು ಮೈ ಕೊಡವಿ ನಿಂತರೆ ಮುಂದೆ ಏನಾಗುತ್ತೆ. ಮುಂದೆ ಯಾವ ಯಾವ ರೀತಿಯ ವೆರೈಟಿ ಪೋಸ್ಟರ್ ಡಿಸೈನ್ ಮಾಡಿಸಿ ಅಂಟಿಸಬೇಕು ನಮಗೆ ಗೊತ್ತಿದೆ. ಇದರ ಹಿಂದೆ ಡಿಸಿಎಂ ಡಿಕೆ. ಶಿವಕುಮಾರ್  (DK Shivakumar) ಮತ್ತು ಅವರ ಬೆಂಬಲಿಗರು ಇದ್ದಾರೆ ಎಂದು ಹೇಳಿದರು.

    ಪೋಸ್ಟರ್ ಗಳ ಬಗ್ಗೆ ನಮ್ಮ ನಾಯಕರು ಮಾತನಾಡಬೇಡಿ ಅಂದಿದ್ರು. ಅದಕ್ಕೆ ನಾವು ಸುಮ್ಮನಿದ್ದೇವೆ. ಈ ಪೋಸ್ಟರ್ ಗಳು (Poster) ಇಲ್ಲಿಗೆ ನಿಲ್ಲಲಿಲ್ಲ ಅಂದ್ರೆ ಮುಂದೆ ಮಾರಾಮಾರಿ ನಡೆಯಬಹುದು. ಅದಕ್ಕೆ ಸರ್ಕಾರವೇ ಹೊಣೆ ಆಗುತ್ತೆ. ನಾವು ಬಳೆತೊಟ್ಟುಕೊಂಡು ಬಂದಿಲ್ಲಾ ನಾವು ರಾಜಕೀಯ ಮಾಡೋದಕ್ಕೆ ಬಂದಿದ್ದೇವೆ. ಬೆಂಗಳೂರಲ್ಲಿ ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಜನರಿಗೆ ತಿಳಿಸ್ತಿದ್ದಾರೆ. ಇವರು ಮಾಡಿದೆಲ್ಲಾ ಸರಿ ಅಂದಿದ್ರೆ ಇದ್ಯಾವುದು ಮಾಡ್ತಿರಲಿಲ್ಲ ಎಂದು ತಿಳಿಸಿದರು.

    ಅಧಿಕಾರ ಇದೆ ಅಂತ ಮಾಡಬೇಡಿ. ರಾಜಕಾರಣದಲ್ಲಿ ಎಲ್ಲರು ಸಾಚಾಗಳಲ್ಲ. ವೈಯಕ್ತಿಕ ಜೀವನವೇ ಬೇರೆನಿಮ್ಮದು ವೈಯಕ್ತಿಕ ಬದುಕಿದೆ ಮುಜುಗರಕ್ಕೀಡಾಗ್ತಿರಾ ಎಂದು ಎಚ್ಚರಿಸಿದ್ದಾರೆ. ಪೇ ಸಿಎಂ ಇರುವ ಕ್ಯೂ ಆರ್ ಇರುವ ಪೋಸ್ಟರ್ ಅಂಟಿಸಿದ್ರು. ಎಲೆಕ್ಷನ್ ನಲ್ಲಿ ಸ್ಮಾರ್ಟ್ ಕಾರ್ಡ್‍ಗಳನ್ನ ನೀಡಿದ್ದ ಏಜೆನ್ಸಿಯೇ ಇವತ್ತು ಕೆಲಸ ಮಾಡುತ್ತಿದೆ. ಆ ತರ ಏಜೆನ್ಸಿಗಳನ್ನ ಇಟ್ಟುಕೊಂಡು ಕೆಟ್ಟಕೆಲಸ ಮಾಡೋದು ಸರಿಯಲ್ಲ ಎಂದು ಹರಿಹಾಯ್ದಿದ್ದಾರೆ.

  • ನೇರವಾಗಿ ಒಟಿಟಿಯಲ್ಲಿ ರಿಲೀಸ್ ಪಾವನಾ ನಟನೆಯ ‘ರುದ್ರಿ’ ಸಿನಿಮಾ

    ನೇರವಾಗಿ ಒಟಿಟಿಯಲ್ಲಿ ರಿಲೀಸ್ ಪಾವನಾ ನಟನೆಯ ‘ರುದ್ರಿ’ ಸಿನಿಮಾ

    ಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ‘ರುದ್ರಿ’ (Rudri) ಸಿನಿಮಾ ನೇರವಾಗಿ ಇಂದು ಬಿಡುಗಡೆ ಆಗಿದೆ. ನೇರವಾಗಿ ‘ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿ ಆಪ್’ (NAMMAFLIX) ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಿಂದ ನಿರ್ಮಾಪಕರು ಒಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ.

    ಗೊಂಬೆಗಳ ಲವ್ ಖ್ಯಾತಿಯ ಪಾವನಾ (Pavana) ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದು, ಬಡಿಗೇರ ರಾಘವೇಂದ್ರ (Badigera Raghavendra) ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಠಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ರುದ್ರಿ ಭಾಗಿಯಾಗಿದೆ. ಅಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

    ರುದ್ರಿ ಸಿನಿಮಾ 90ರ ದಶಕದ ಕಥೆ. ಆ ಕಾಲದಲ್ಲಿ ಇನ್ನೂ ಮಹಿಳೆಯರಿಗೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳುವಂತಹ ಧೈರ್ಯವಿರಲಿಲ್ಲ. ಅಂತಹ ಮಹಿಳೆಯೊಬ್ಬರ ಶೋಷಣೆಯ ಕಥೆಯನ್ನು ರುದ್ರಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು.

    ಸಿ.ಆರ್. ಮಂಜುನಾಥ್ (Manjunath) ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಧೂ ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ.  ಸುಧಾ ಪ್ರಸನ್ನ ಸೇರಿದಂತೆ ಹಲವು ನುರಿತ ಕಲಾವಿದರ ತಂಡವೇ ತಾರಾಗಣದಲ್ಲಿದೆ.

  • ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

    ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್‌ ಮಂಜುನಾಥ್‌ಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

    ನೆಲಮಂಗಲ: ಗಣರಾಜ್ಯೋತ್ಸವ (Republic Day) ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ (Nelamangala) ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಸುಪರ್ ಸಿಂಗಂ ಎಂದೇ ಜನರಿಂದ ಪ್ರಶಂಸೆ ಪಡೆದಿರುವ ಇನ್ಸ್‌ಪೆಕ್ಟರ್‌ ಮಂಜುನಾಥ್ (CPI Manjunath) ಆಯ್ಕೆಯಾಗಿದ್ದಾರೆ.

    ಸೇವಾ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಬೆನ್ನತ್ತಿ ಸಮಾಜ ಘಾತುಕರಿಗೆ ಬಿಸಿ ಮುಟ್ಟಿಸಿ ಜನಸಾಮಾನ್ಯರ ಅಚ್ಚುಮೆಚ್ಚಿನ ಪೊಲೀಸ್‌ ಅಧಿಕಾರಿಯಾಗಿ ಮಂಜುನಾಥ್ ಗುರುತಿಸಿಕೊಂಡಿದ್ದಾರೆ. ನೆಲಮಂಗಲ ಹಾಗೂ ಮಾದನಾಯಕನಹಳ್ಳಿ ಭಾಗದ ಜನರು ಇವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ

    ಜನರ ನಾಡಿ ಮಿಡಿತ, ಕುಂದುಕೊರತೆಗಳು, ಜನಸಾಮಾನ್ಯರ ಪ್ರೀತಿ ವಿಶ್ವಾಸ, ಸ್ನೇಹ ಜೀವಿಯಂತೆ ಕೆಲಸ ಮಾಡಿ  ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ನೀಡಿ ಪುರಸ್ಕರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ

    ಆರೋಗ್ಯ ಇಲಾಖೆಯ ಟೆಂಡರ್ ಕೊಡಿಸದ್ದಕ್ಕೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ: ಶಾಸಕ ತಿಪ್ಪಾರೆಡ್ಡಿ

    ಚಿತ್ರದುರ್ಗ: ಆರೋಗ್ಯ ಇಲಾಖೆಯಲ್ಲಿ ಕೆ.ಹೆಚ್.ಎಸ್‌ಡಿಪಿ ಯೋಜನೆಯ ಟೆಂಡರ್ ಮಂಜುನಾಥ್‌ಗೆ ಕೊಡಿಸದ ಹಿನ್ನಲೆಯಲ್ಲಿ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆಂದು ಚಿತ್ರದುರ್ಗ ಕ್ಷೇತ್ರದ ಬಿಜೆಪಿ‌ (BJP) ಶಾಸಕ‌ ತಿಪ್ಪಾರೆಡ್ಡಿ (Thippa Reddy) ‌ಹೇಳಿದರು.

    ಸೋಮವಾರ ಬೆಂಗಳೂರಿನಲ್ಲಿ‌ (Bengaluru) ಗುತ್ತಿಗೆದಾರರ (Contractor) ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಂಜುನಾಥ್ ಬಿಡುಗಡೆ ಮಾಡಿರುವ ತಿಪ್ಪಾರೆಡ್ಡಿಯವರ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು, ಮಂಜುನಾಥ್ ಯಾವುದೇ ಕಾಮಗಾರಿ ಮಾಡಿದರೂ, ಆತ ಹೇಳಿದ್ದೇ ಫೈನಲ್ ಆಗಬೇಕಿತ್ತು. ಆತ ಅಧಿಕಾರಿಗಳಿಗೆ ನಾನು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂದು ಬೆದರಿಸುತ್ತಾ ಕಾಮಗಾರಿ ಮಾಡುತ್ತಿದ್ದಾನೆ. ಅಲ್ಲದೇ ಸಣ್ಣಪುಟ್ಟ ಕಂಟ್ರಾಕ್ಟರ್‌ಗಳು ಕೆಲಸ‌ ಕೇಳಿದಾಗ ತಾರತಮ್ಯ ಮಾಡುತ್ತಿದ್ದನು. ಮೊದಲಿನಿಂದಲೂ ಆತ ಹಾಗೂ ನನ್ನ ಮಧ್ಯೆ ದ್ವೇಷವಿದೆ ಎಂದರು.

    ಈ ಹಿಂದೆ ಆತ ಮಾಡಿರುವ ಉಚ್ಚಂಗಿ ಯಲ್ಲಮ್ಮ ದೇಗುಲದ ಕಾಮಗಾರಿ ಕೂಡ ಕಳಪೆಯಾಗಿದೆ. ಆದರೆ ಅದನ್ನು ಈಗ ಆರೋಪಿಸುವುದು ಸರಿಯಲ್ಲ. ಯಾವುದೇ ಕಾಮಗಾರಿ ಮಾಡುವಾಲೂ ಆತನೇ ಸುಪ್ರಿಂ ಆಗಿದ್ದೂ, ನಾನು ಅಧ್ಯಕ್ಷ ಅಂತ ಎಲ್ಲರ ಮೇಲೆ ದೌರ್ಜನ್ಯ ಮಾಡುತ್ತಾನೆಂದು ಕಿಡಿಕಾರಿದರು.

    ಶಾಸಕರಿಗೆ 90 ಲಕ್ಷ‌ ರೂ. ಲಂಚ‌ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಆತ ಅಷ್ಟು ಕೊಟ್ಟಿದೀನಿ, ಇಷ್ಟು ಕೊಟ್ಟಿದಾನೆ ಎಂದು ಹೇಳಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ? ಆತ ಕಾಮಗಾರಿ ಮಾಡುವ ವೇಳೆ ಯುಜಿಡಿ ಕಾಮಗಾರಿ ವೇಳೆ ಪೈಪ್‌ಲೈನ್ ಹೊಡೆದಾಗ ಕೇಳಿದ್ದೇ ತಪ್ಪಾ? ಎಂದು ಅಸಹಾಯಕತೆ ಹೊರಹಾಕಿದರು. ಇದನ್ನೂ ಓದಿ: Nepal Plane Crash – ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಪತ್ತೆ

    ಮಂಜುನಾಥ್‌ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಮ್ ‌ಜೊತೆಗೆ ಮಾಡುವುದಾಗಿ ಕೇಳಿದ್ದನು. ಆಗ ಅದನ್ನು ನಾ ವಿರೋಧಿಸಿದ್ದಕ್ಕೆ ಇದೆಲ್ಲ ಶುರುವಾಗಿದೆ. ಆತನ ಗುಣವೇ ಹೆದರಿಸಿ ಕೆಲಸ‌ ಮಾಡುವುದಾಗಿದೆ. ಆತ ಒಮ್ಮೆ ಪಿಡಬ್ಲುಡಿ ಸಚಿವರ ಎದುರಲ್ಲೇ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದನು. ಆಗ ಸಚಿವರು ಅವನ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆತ ಇದನ್ನೆಲ್ಲ ವೈಯಕ್ತಿಕ ದ್ವೇಷದಿಂದ ಮಾಡಿದ್ದಾನೆ. ಯಾವ್ದೊ ಟೆಂಡರ್ ಕೊಡಿಸದ ಹಿನ್ನೆಲೆಯಲ್ಲಿ ಈ ಆರೋಪ ಮಾಡಲಾಗಿದೆ ಎಂದು ಆಡಿಯೋ ಆರೋಪವನ್ನು ತಳ್ಳಿಹಾಕಿದರು.

    ಇದೇ ವೇಳೆ ಈ ಆರೋಪದ‌ ಬಗ್ಗೆ ಏನನ್ನು ಹೇಳಲಾರೆ‌. ಯಾವುದೇ ಹೋರಾಟವನ್ನು ಮಾಡಲಾರೆ. ಆತ‌ ಏನು ಅಂತ ಎಲ್ಲರಿಗೂ ಗೊತ್ತಿದೆ. ಅಂತವರ ವಿರುದ್ಧ ಏನೆಂದು ಹೋರಾಡಲಿ ಎಂದು ಹುಸಿ ನಕ್ಕರು. ಇದನ್ನೂ ಓದಿ: ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

    ಕೆಂಪೇಗೌಡ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು: ಮಂಜುನಾಥ್

    ಮಂಡ್ಯ: ಕೆಂಪೇಗೌಡ ಅವರ ಪ್ರತಿಮೆಯನ್ನು ನೋಡಿ ತನ್ವಿರ್ ಸೇಠ್‍ಗೆ (Tanveer Sait) ಹೊಟ್ಟೆ ಕಿಚ್ಚು ಬಂದಿದೆ, ಅದಕ್ಕಾಗಿಯೇ ಟಿಪ್ಪು ಪ್ರತಿಮೆ ಮಾಡುತ್ತೆವೆ ಎಂದು ಹೇಳಿದ್ದಾರೆ, ಅವರು ಒಕ್ಕಲಿಗ ವಿರೋಧಿ ಎಂದು ತನ್ವೀರ್ ಸೇಠ್ ವಿರುದ್ಧ ಭಜರಂಗಸೇನೆಯ (Bajrang Sena) ರಾಜ್ಯಾಧ್ಯಕ್ಷ ಮಂಜುನಾಥ್ (Manjunath) ಕಿಡಿಕಾರಿದರು.

    ದೇವನಹಳ್ಳಿಯಲ್ಲಿ ಲೋಕಾರ್ಪಣೆಗೊಂಡ ಕೆಂಪೇಗೌಡ ಅವರ 108 ಅಡಿಯ ಪ್ರತಿಮೆ ನೋಡಿ ತನ್ವೀರ್ ಸೇಠ್‍ಗೆ ಹೊಟ್ಟೆ ಕಿಚ್ಚು ಬಂದಿದೆ. ಹೊಟ್ಟೆ ಕಿಚ್ಚಿಗಾಗಿ 100 ಅಡಿ ಟಿಪ್ಪು ಸುಲ್ತಾನ್ ಪ್ರತಿಮೆ ಮಾಡ್ತೀವಿ ಎಂದಿದ್ದಾರೆ. ತನ್ವೀರ್ ಸೇಠ್ ಮುಸಲ್ಮಾನರಾ ಎನ್ನುವುದೇ ಅನುಮಾನವಾಗಿದೆ. ಇಸ್ಲಾಂನ್ನು ತನ್ವೀರ್ ಸೇಠ್ ಸರಿಯಾಗಿ ಅಧ್ಯಯನ ಮಾಡಿಲ್ಲ. ಇಸ್ಲಾಂನಲ್ಲಿ ಮೂರ್ತಿ ಪೂಜಾ ಮಾಡುವುದಕ್ಕೆ ಅವಕಾಶವಿಲ್ಲ. ಇವರು ಟಿಪ್ಪು ಜಯಂತಿ ಮಾಡುವುದೇ ತಪ್ಪು ಎಂದರು.

    ಟಿಪ್ಪು ಸುಲ್ತಾನ್ (Tipu Sultan) ಮತಾಂಧ. ಹಿಂದೂ ವಿರೋಧಿ ಹಾಗೂ ಕನ್ನಡ ವಿರೋಧಿ. ದಕ್ಷಿಣ ಕರ್ನಾಟಕದ ಈಗಿನ ಮುಸ್ಲಿಮರು ಹಿಂದೆ ಹಿಂದೂಗಳು ಆಗಿದ್ದರು. ಟಿಪ್ಪು ಸುಲ್ತಾನ್‍ನ ಕ್ರೌರ್ಯಕ್ಕೆ ಸಿಲುಕಿ ಈಗಿನ ಮುಸ್ಲಿಮರ ಪೂರ್ವಜರು ಮತಾಂತರವಾಗಿದ್ದರು. ಶ್ರೀರಂಗಪಟ್ಟಣದಲ್ಲಿ ಅಲ್ಲ ಕರ್ನಾಟಕದಲ್ಲಿ ಟಿಪ್ಪು ಪ್ರತಿಮೆ ಮಾಡಲು ಒಂದು ಇಂಚು ಜಾಗ ಕೊಡಲ್ಲ. ಅಂತಹ ಪ್ರಯತ್ನಕ್ಕೆ ಮುಂದಾದರೆ ಹಿಂದೂ ಕಾರ್ಯಕರ್ತರು ಸುಮ್ಮನೆ ಇರಲ್ಲ. ಟಿಪ್ಪು ಪ್ರತಿಮೆ ನಿರ್ಮಾಣ ಆದ್ರೆ ನಾವೇ ಒಡೆದು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರೇಮ ವಿವಾಹವಾಗಿದ್ದಕ್ಕೆ ದಲಿತರಿಂದಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ!

    ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಪ್ರತಿಮೆ ವಿಚಾರ ಎತ್ತಿರುವುದು ಚುನಾವಣೆಯ ಗಿಮಿಕ್‍ಗಾಗಿ. ನರಸಿಂಹರಾಜ ಕ್ಷೇತ್ರದಲ್ಲಿ ಎಸ್‍ಟಿಪಿಐ ಜೊತೆ ಮುಸ್ಲಿಮರು ಹೋಗ್ತಾ ಇದ್ದಾರೆ. ಅವರನ್ನು ಓಲೈಸಿಕೊಳ್ಳಲು ಈ ರೀತಿ ತನ್ವೀರ್ ಸೇಠ್ ಮಾಡುತ್ತಿದ್ದಾರೆ. ತನ್ವೀರ್ ಸೇಠ್ ಮುಸ್ಲಿಂ ಸಮುದಾಯದಲ್ಲಿ ಹಲವು ಮಹನೀಯರು ಇದ್ದಾರೆ. ಅಂತಹ ಮಹನೀಯರ ಪ್ರತಿಮೆಯನ್ನು ಮಾಡಿ. ಅದಕ್ಕಾಗಿ ನಾವು ಕೈಜೋಡಿಸುತ್ತೇವೆ. ಟಿಪ್ಪು ಪ್ರತಿಮೆ ಮಾಡಲು ನಾವು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಮಗನ ಅನಾರೋಗ್ಯ ನಿವಾರಿಸಿದ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೆಲು ಸೇವೆ

    Live Tv
    [brid partner=56869869 player=32851 video=960834 autoplay=true]

  • ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ಧಾರವಾಡ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ನಡೆದು ಇಂದಿಗೆ ನಾಲ್ಕು ದಿನ ಕಳೆದಿವೆ. ಈಗಾಗಲೇ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಇಷ್ಟರಲ್ಲೇ ಕೊಲೆಗಾರ ಮಂಜುನಾಥ್ ಮರೇವಾಡ ಬಗ್ಗೆ ಇನ್ನು ಹಲವು ಅಂಶ ಬೆಳಕಿಗೆ ಬಂದಿದ್ದು, ಆತ ವಿದ್ಯಾಕಾಶಿ ಧಾರವಾಡದಲ್ಲಿ ಬಿಲ್ಡಿಂಗ್ ಕಟ್ಟುವ ಗುತ್ತಿಗೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.

    ನಗರದ ಸಿದ್ಧಾರೂಢ ಕಾಲೋನಿಯಲ್ಲಿ ಒಡೆಯರ್ ಹಾಗೂ ಹಂಚನಾಳ ಮನೆಗಳನ್ನ ಕಟ್ಟುವ ಗುತ್ತಿಗೆ ಪಡೆದಿದ್ದ ಕೊಲೆಗಾರ ಮಂಜುನಾಥ್ ಮರೇವಾಡ, ಹಂಚಿನಾಳ ಅವರಿಂದ 13 ಲಕ್ಷ ಹಣ ಪಡೆದಿದ್ದಾನೆ. ಆದರೆ ಅವರ ಮನೆಯ 6 ಲಕ್ಷ ರೂ.ಗಷ್ಟೇ ಕೆಲಸ ಮಾಡಿದ್ದಾನೆ. ಅಲ್ಲದೇ ಒಡೆಯರ್ ಎನ್ನುವವರ ಮನೆಯ ಕೆಲಸ ಕೂಡಾ ಅರ್ಧಕ್ಕೆ ನಿಂತಿದೆ. ಇದೇ ಕಾಲೋನಿಯಲ್ಲಿ ಹಲವು ಬಿಲ್ಡಿಂಗ್ ಕೆಲಸ ಮಾಡಿದ್ದಕ್ಕೆ, ಇವನಿಗೆ ಕಾಲೋನಿಯಲ್ಲಿ ಸಿದ್ಧಾರೂಢರ ದೇವಸ್ಥಾನ ಕಟ್ಟುವ ಗುತ್ತಿಗೆ ಕೂಡಾ ನೀಡಲಾಗಿದೆ. ಇದನ್ನೂ ಓದಿ:  ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೋಫೆಸರ್ ಕ್ಷಮೆಯಾಚನೆ 

    ಕಳೆದ ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ದೇವಸ್ಥಾನ ಕಟ್ಟಿಸಿ ಕೊಡಬೇಕು ಎಂದು ಗಡುವನ್ನು ನೀಡಿ 50 ಸಾವಿರ ಮುಂಗಡ ಹಣ ಕೂಡಾ ಕೊಡಲಾಗಿದೆ. ಆದರೆ ಈತ ಗುರೂಜಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಈ ಹಣ ಕೊಟ್ಟವರಿಗೆ ದೊಡ್ಡ ಸಂಕಷ್ಟ ಬಂದು ಒದಗಿದೆ. ಅಲ್ಲದೇ ಕೆಲ ಕಾರ್ಮಿಕರ ಸಂಬಳ ಕೂಡಾ ಈತ ನೀಡಬೇಕಾಗಿದ್ದು, ಅದೂ ಕೂಡಾ ಮಂಜುನಾಥ್ ಉಳಿಸಿಕೊಂಡಿದ್ದಾನೆ.

    ಮಂಜುನಾಥ್ ಮರೇವಾಡ ಜೈಲು ಸೇರಿದ ಮೇಲೆ ಯಾವಾಗ ಅವನು ಅಲ್ಲಿಂದ ಬಿಡುಗಡೆಯಾಗಿ ಬಂದು ನಮ್ಮ ಕೆಲಸ ಮುಗಿಸಿಕೊಡಬೇಕು, ಯಾವಾಗ ನಾವು ಆ ಮನೆಯಲ್ಲಿ ಇರಬೇಕು ಎಂದು ಮನೆ ಗುತ್ತಿಗೆ ಕೊಟ್ಟ ಮಾಲೀಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ದೇವಸ್ಥಾನದ ಕೆಲಸ ಕೂಡಾ ಇದೇ ರೀತಿಯಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

    5 ಲಕ್ಷ ರೂ. ಲಂಚ ಪಡೆದ ಪ್ರಕರಣ- ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಇದೀಗ ಅರೆಸ್ಟ್ ಆಗಿದ್ದಾರೆ. ಜಮೀನು ವ್ಯಾಜ್ಯ ಇತ್ಯರ್ಥಪಡಿಸಲು 5 ಲಕ್ಷ ಪಡೆದ ಪ್ರಕರಣದಲ್ಲಿ ಸದ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಎಂಡಿ ಆಗಿರುವ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.

    ಎಸಿಬಿ ಅಧಿಕಾರಿಗಳು ಮಂಜುನಾಥ್‍ರನ್ನು ಇಂದು ವಿಚಾರಣೆಗೆ ಕರೆದು ಸಾಕ್ಷ್ಯಾಧಾರ ಪಕ್ಕಾ ಆದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಮೂಲತಃ ರಾಜ್ಯ ಲೆಕ್ಕ ಪತ್ರ ಇಲಾಖೆ ಹಿರಿಯ ಅಧಿಕಾರಿಯಾಗಿದ್ದ ಮಂಜುನಾಥ್ ಅವರು ನಾನ್ ಕೆಎಎಸ್ ವಿಭಾಗದಲ್ಲಿ ಐಎಎಸ್ ಪದೋನ್ನತಿ ಪಡೆದವರಾಗಿದ್ದಾರೆ. ಚಿಕ್ಕಬಳ್ಳಾಪುರ ಸಿಇಒ ಆಗಿದ್ದರು ನಂತರ ಕೋಲಾರ ಡಿಸಿ ಆಗಿದ್ದರು. ಬಳಿಕ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದರು. ಕಳೆದ 1 ವರ್ಷದಿಂದ ಬೆಂಗಳೂರು ಡಿಸಿಯಾಗಿದ್ದರು.

    ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಡಿಸಿಯಿಂದ ಕಳೆದ ವಾರವಷ್ಟೇ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್ ಎಂಡಿಯಾಗಿ ಮಂಜುನಾಥ್‍ನನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದೀಗ ವಿಚಾರಣೆಗೆ ಕರೆದು ಮಂಜುನಾಥ್ ರನ್ನ ಕರೆದು ಎಸಿಬಿ ಅರೆಸ್ಟ್ ಮಾಡಿದೆ. ಇದನ್ನೂ ಓದಿ: ಮುಂಚೆನೇ ಹೇಳಿದ್ದೆ, ಯಾರು ಎಷ್ಟೇ ದೊಡ್ಡವರಿದ್ರೂ ಕ್ರಮ ತಗೋತೀವಿ ಅಂತ: ಸಿಎಂ

    ಏನಿದು ಪ್ರಕರಣ..?: ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆ ನಡೆದಿತ್ತು. ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದ ಕೇಸ್ ಡಿಸಿ ಕೋರ್ಟಿಗೆ ಬಂದಿತ್ತು. ದೂರುದಾರದ ಪರವಾಗಿ ಆದೇಶ ನೀಡಲು ಬೇಡಿಕೆ ವ್ಯಕ್ತವಾಗಿತ್ತು. ಬೇಗೂರು ನಿವಾಸಿ ಅಜಂ ಪಾಷಾ ಎಂಬವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ 5 ಲಕ್ಷ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ತನ್ನ ಅಧೀನ ಕೆಲಸಗಾರನ ಮೂಲಕ ಡಿಸಿ ಹಣ ಪಡೆದಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೆ ಹಣದ ಸಮೇತ ಡಿಸಿ ಅಧೀನ ಕೆಲಸಗಾರನ ಬಂಧಿಸಲಾಗಿತ್ತು.

    ಆತ ಡಿಸಿ ಹೇಳಿದ್ದಕ್ಕೆ ಹಣ ಪಡೆದಿದ್ದಾಗಿ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾನೆ. ಅನಂತರ ಡಿಸಿ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ. ತನ್ನ ವಿರುದ್ಧದ ಎಫ್‍ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್‌ ಪೌಲ್ ಅರೆಸ್ಟ್‌

    ಮಂಜುನಾಥ್‌ ಸಸ್ಪೆಂಡ್:‌ ಬಂಧಿತ ಐಎಎಸ್ ಅಧಿಕಾರಿ  ಮಂಜುನಾಥ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಆಲ್ ಇಂಡಿಯ ಸರ್ವಿಸ್ ರೂಲ್ಸ್ ಅಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]