Tag: ಮಂಜುನಾಥ್ ಪ್ರಸಾದ್

  • ಅನಗತ್ಯ ಆತಂಕ ಹುಟ್ಟಿಸಬೇಡಿ- ಬಿಬಿಎಂಪಿ ಆಯುಕ್ತರಿಗೆ ಸಿಎಂ ತರಾಟೆ

    ಅನಗತ್ಯ ಆತಂಕ ಹುಟ್ಟಿಸಬೇಡಿ- ಬಿಬಿಎಂಪಿ ಆಯುಕ್ತರಿಗೆ ಸಿಎಂ ತರಾಟೆ

    ಬೆಂಗಳೂರು: ಕೊರೊನಾ ವಿಚಾರದಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಹುಟ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊರೊನಾ ಬಿಗಿ ನಿಯಮಗಳ ಜಾರಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾರ್ಕ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡುವುದು, ಥೀಯೇಟರ್ ಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದು. ವಿವಾಹ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ವಹಿಸುವ ಅಗತ್ಯವಿದೆ ಎಂದು ಮಂಜುನಾಥ್ ಪ್ರಸಾದ್ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಥೀಯೇಟರ್‌ಗಳ ಸಾಮರ್ಥ್ಯ ಶೇ.50ಕ್ಕೆ ಇಳಿಸಿ- ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ

    ಇದಕ್ಕೆ ಸಿಎಂ ಕೆಂಡಾಮಂಡಲವಾಗಿದ್ದು, ಅನಗತ್ಯ ಆತಂಕ ಹುಟ್ಟಿಸೋದು ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ನಿಯಮಗಳ ಜಾರಿ ಬಗ್ಗೆ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಸಭೆ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಕೊರೊನಾ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಖುದ್ದು ಪ್ರಧಾನಿಯವರೇ ಜನರಲ್ಲಿ ಆತಂಕ ಹುಟ್ಟಿಸೋದು ಬೇಡ ಎಂದಿದ್ದಾರೆ. ಈ ಮಧ್ಯೆ ಅನಗತ್ಯ ಹೇಳಿಕೆ ಯಾಕೆ ಕೊಡಬೇಕಿತ್ತು ಎಂದು ಆಯುಕ್ತರಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನೊಂದು ವಾರ ಪರಿಸ್ಥಿತಿ ಅವಲೋಕನ ಮಾಡುವುದಾಗಿ ನಿರ್ಧರಿಸಲಾಗಿದೆ. ಪ್ರಸ್ತಾವನೆ ಕೊಟ್ಟ ಮೇಲೆ ತಜ್ಞರು ಪರಿಸ್ಥಿತಿ ಅವಲೋಕಿಸಿ ವರದಿ ನೀಡುತ್ತಾರೆ. ಅದಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ಬೇಡ. ಏನೇ ಇದ್ದರೂ ತಜ್ಞರ ಜೊತೆ ಚರ್ಚಿಸಿ, ತೀರ್ಮಾನಿಸಲಾಗುತ್ತದೆ. ಅನಗತ್ಯ ಆತಂಕ ಹುಟ್ಟಿಸಿ ಜನರನ್ನು ಭೀತಿಗೆ ತಳ್ಳುವುದು ಬೇಡ ಎಂದು ಸಿಎಂ ತಾಕೀತು ಮಾಡಿದ್ದಾರೆ.

  • ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    – ಕೇಂದ್ರ ಸರ್ಕಾರದಿಂದ ಘೋಷಣೆ

    ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಫಾರ್ಮಾಮೆನ್ಸ್ ಇಂಡಿಸಿಸ್ ಕಾರ್ಯಕ್ರಮದಡಿ, ಗುಣಮಟ್ಟದ ಜೀವನ ನಡೆಸಲು (ಈಸ್ ಆಫ್ ಲಿವಿಂಗ್) ಸೂಕ್ತ ನಗರಗಳ ಪೈಕಿ ಬೆಂಗಳೂರಿಗೆ ನಂಬರ್ ವನ್ ಸ್ಥಾನ ಎಂದು ಘೋಷಿಸಿದೆ.

    ದೇಶದ ಟಾಪ್ 51 ನಗರಗಳ ಪೈಕಿ, ರಾಜ್ಯದ ಜಿಲ್ಲೆಗಳಾದ ಹುಬ್ಬಳ್ಳಿ- ಧಾರವಾಡ 37ನೇ ಸ್ಥಾನದಲ್ಲಿದೆ. ಪ್ರತೀ ವರ್ಷ ಕೇಂದ್ರ ಸರ್ಕಾರ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಈಸ್ ಆಫ್ ಲಿವಿಂಗ್ ಪ್ರಕಾರ, ನಗರದಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ, ಗುಣಮಟ್ಟದಲ್ಲಿ ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳ ಬಗ್ಗೆ ಹಾಗೂ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ, ಜೊತೆಗೆ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಎಂಬ ಮೂರು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ಜನರ ಸಮೀಕ್ಷೆ ನಡೆಸಿದೆ. ಒಟ್ಟು 100 ಅಂಕಗಳಿದ್ದು, 30 ಅಂಕಗಳು ಜನರ ಅಭಿಪ್ರಾಯಕ್ಕೆ ಬಿಟ್ಟಿತ್ತು. ಈ ಸರ್ವೇಯನ್ನು ಈಗಾಗಲೇ ಕೇಂದ್ರ ಸರ್ಕಾರ ಮಾಡಿದ್ದು, ಇಂದು ಫಲಿತಾಂಶ ಘೋಷಣೆ ಮಾಡಿದೆ.

    ಇಡೀ ದೇಶದಲ್ಲಿ ನಗರಗಳನ್ನು ಎರಡು ವಿಭಾಗ ಮಾಡಿ, ಹತ್ತು ಲಕ್ಷ ಜನಸಂಖ್ಯೆಯ ನಗರ ಹಾಗೂ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರವಾಗಿ ವಿಭಾಗಿಸಲಾಗಿದೆ. ಇಡೀ ದೇಶದಲ್ಲಿ ಗುಣಮಟ್ಟದ ಜೀವನ ನಡೆಸಲು ಉತ್ತಮ ನಗರ ಎಂದು ಬೆಂಗಳೂರಿಗೆ ಮೊದಲ ರ್ಯಾಂಕಿಂಗ್ ನೀಡಿದೆ. ಈ ಹಿಂದೆ, ಕಡಿಮೆ ರ್ಯಾಂಕ್ ಪಡೆಯುತ್ತಿದ್ದ ಬೆಂಗಳೂರು ಈ ಬಾರಿ ನಂಬರ್ ವನ್ ಬಂದಿದ್ದು, ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಂಮಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದೆ, ಇಲ್ಲಿನ ಸಂಘಸಂಸ್ಥೆಗಳು- ಜನರಿಗೂ ಈ ಶ್ರೇಯಸ್ಸು ಸೇರಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.


    ಇದೇ ರ್ಯಾಂಕಿಂಗ್ ಮುಂದೆಯೂ ಉಳಿಸಿಕೊಂಡು ಹೋಗಲು, ಬೆಂಗಳೂರನ್ನು ಸುಂದರವಾಗಿ ಮಾಡಲು ಸಿಎಂ ಕೂಡಾ ಹಲವಾರು ಯೋಜನೆ ಕೈಗೊಂಡಿದ್ದಾರೆ, ಮುನ್ಸಿಪಲ್ ಪರ್ಫಾಮೆನ್ಸ್ ಇಂಡೆಕ್ಸ್ ನ ಐದು ವಿಭಾಗಗಳಲ್ಲಿ ಬಿಬಿಎಂಪಿಗೆ ಉತ್ತಮ ಅಂಕಗಳು ಬಂದಿಲ್ಲ. ಎಲ್ಲೆಲ್ಲಿ ಎಡವಿದ್ದೇವೆ, ಎಂದು ನೋಡಬೇಕಿದೆ. ಹಾಗೆ ಹಣಕಾಸು, ತಂತ್ರಜ್ಞಾನ, ಪಾಲಿಸಿ, ಆಡಳಿತ ವಿಭಾಗಗಳಲ್ಲಿ ಕೆಲವೆಡೆ ಕಡಿಮೆ ಅಂಕಗಳು ಬಂದಿವೆ. ಇದನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

    ಇನ್ನು ಸಂಸದರಾದ ಪಿ.ಸಿ ಮೋಹನ್ ಮಾತನಾಡಿ, ಈಸ್ ಆಫ್ ಲಿವಿಂಗ್ ಸರ್ವೇಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ ಬಂದಿರುವುದಕ್ಕೆ ಅಭಿನಂದನೆಗಳು. ಒಂದುಕಾಲು ಕೋಟಿ ಜನಸಂಖ್ಯೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ, ಪಾರ್ಕ್-ಕೆರೆಗಳ ಅಭಿವೃದ್ಧಿಯಿಂದ ಈ ಸರ್ವೇಯಲ್ಲಿ ಪ್ರಥಮ ಸ್ಥಾನ ಬಂದಿದೆ. ಕೇಂದ್ರಸರ್ಕಾರದ ಎಲ್ಲಾ ಸಹಕಾರವೂ ಬೆಂಗಳೂರು ನಗರದೊಂದಿಗೆ ಇದೆ ಎಂದರು.

  • ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್‌ ಧರಿಸಬೇಕಿಲ್ಲ

    ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್‌ ಧರಿಸಬೇಕಿಲ್ಲ

    ಬೆಂಗಳೂರು: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕು ಎಂಬ ಆದೇಶವನ್ನು ಬಿಬಿಎಂಪಿ ವಾಪಸ್‌ ಪಡೆದಿದೆ.

    ಈ ಹಿಂದೆ ಕಿಟಿಕಿ ಮುಚ್ಚಿದ ಕಾರಿನಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸಬೇಕು ಎಂದು ಬಿಬಿಎಂಪಿ ಆದೇಶ ಪ್ರಕಟಿಸಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

    ಸಾರ್ವಜನಿಕರ ಆಕ್ರೋಶದ ನಂತರ ತಜ್ಞರ ಸಲಹೆ ಕೋರಿ ಆರೋಗ್ಯ ಇಲಾಖೆಗೆ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದರು. ತಜ್ಞರ ಸಲಹೆಯಂತೆ ಕಾರಿನಲ್ಲಿ ಮುಚ್ಚಲ್ಪಟ್ಟ ಕಿಟಕಿಯೊಂದಿಗೆ ಪ್ರಯಾಣ ನಡೆಸುವವರು ಇನ್ನು ಮುಂದೆ ಮಾಸ್ಕ್ ಧರಿಸಬೇಕಿಲ್ಲ. ಆದರೆ ಆದರೆ ದ್ವಿಚಕ್ರ ವಾಹನ ಸವಾರರು ಒಬ್ಬರೆ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ.

     

  • ಮಳೆ ಹಾನಿ ಪ್ರದೇಶಗಳಿಗೆ ಅಶೋಕ್ ಭೇಟಿ- ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ

    ಮಳೆ ಹಾನಿ ಪ್ರದೇಶಗಳಿಗೆ ಅಶೋಕ್ ಭೇಟಿ- ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ

    – ಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ

    ಬೆಂಗಳೂರು: ನಿನ್ನೆ ಒಂದೇ ದಿನ ಮಳೆಗೆ ಬೆಂಗಳೂರು ಮುಳುಗಿದೆ. ಮಳೆಯಿಂದ ಹಾನಿಗೊಳಗಾದ ಹೊಸಕೆರೆ ಹಳ್ಳಿ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳು ಸಚಿವರಿಂದ ದೂರ ಉಳಿದು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ.

    ಸಚಿವರ ಭೇಟಿ ವೇಳೆ ಸ್ಥಳಕ್ಕೆ ಆಗಮಿಸಿದ್ದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಬೇಜಾವಾಬ್ದಾರಿ ವರ್ತನೆ ತೋರಿದ ಅಧಿಕಾರಿಗಳಾಗಿದ್ದು, ದೂರದಲ್ಲಿ ನಿಂತ ಇಬ್ಬರೂ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಮೊಬೈಲ್‍ನಲ್ಲಿ ಬ್ಯುಸಿಯಾಗಿದ್ದರು. ಆ ಮೂಲಕ ಮಳೆ ಹಾನಿ ವೀಕ್ಷಣೆಯಿಂದ ದೂರವೇ ಉಳಿದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಧಿಕಾರಿಗಳು, ಬೆಳಗ್ಗೆಯಿಂದಲೂ ನಾವು ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ.

    ಇತ್ತ ಇದೇ ಸಂದರ್ಭದಲ್ಲಿ ಮಳೆಯಿಂದ ಸಮಸ್ಯೆ ಎದುರಿಸಿದ್ದ ಸಾರ್ವಜನಿಕರು ಆರ್.ಅಶೋಕ್ ಅವರನ್ನ ತರಾಟೆ ತೆಗೆದುಕೊಂಡರು. ಸ್ಥಳೀಯರ ವಿರೋಧ ಹೆಚ್ಚಾದ ಹಿನ್ನೆಲೆ ಸಚಿವರು ಬೇರೆ ಸ್ಥಳದ ಕಡೆ ಮುಖ ಮಾಡಿದರು.

    ಮಳೆ ಹಾನಿಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಚಿವ ಅಶೋಕ್ ಅವರು, ಮುಂದಿನ ಮೂರು ದಿನಗಳಲ್ಲಿ ಮಳೆ ಹಾನಿ ಪ್ರದೇಶದಲ್ಲಿ ಆಗಿರುವ ಒತ್ತುವರಿ ತೆರವು ಕೆಲಸ ಶುರುವಾಗುತ್ತೆ. ಉತ್ತರಹಳ್ಳಿಯಲ್ಲಿ ಇಂದಿನಿಂದ ತೆರವು ಕೆಲಸ ಶುರು ಮಾಡಲು ಹೇಳಿದ್ದೇನೆ. ಒತ್ತವರಿದಾರರು ಎಷ್ಟೇ ಪ್ರಭಾವಿಗಳಾದರೂ ಬಿಡಲ್ಲ. ಅಲ್ಲದೇ ಹಾನಿಯಾದ ಮನೆಗಳಿಗೆ 25 ಸಾವಿರ ರೂ. ಪರಿಹಾರ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

    ಸಚಿವರ ಭೇಟಿಗೂ ಮುನ್ನ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ಮಳೆ ಹಾನಿಯಾಗಿದ್ದ ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರಕ್ಕೆ ಭೇಟಿ ನೀಡಿ ಪ್ರತಿಯೊಂದು ಮನೆಗೂ ತೆರಳಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಮಳೆಯಿಂದ ನಷ್ಟ ಎದುರಿಸಿದ ಕುಟುಂಬಗಳಿಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದರು. ಇಂದು ಸಂಜೆಯೇ ಹಾನಿಗೊಳಗಾಗಿರುವ 700 ಕುಟುಂಬಗಳಿಗೆ ಚೆಕ್ ಮೂಲಕ ವಿತರಣೆ ಆಗಲಿದೆ ಎಂದು ಸಿಎಂ ಬಿಎಸ್‍ವೈ ಘೋಷಿಸಿದ್ದಾರೆ.

    ನಿನ್ನೆ ಒಂದು ದಿನ ಸುರಿದ ಮಳೆಗೆ ಹೊಸಕೆರೆಹಳ್ಳಿ, ದತ್ತಾತ್ರೇಯ ನಗರದಲ್ಲಿ ಮನೆಗಳು ಮುಳುಗಿದ್ದವು. ದಸರಾ ಹಬ್ಬದ ಖುಷಿಯಲ್ಲಿದ್ದ ಮನೆಗಳಲ್ಲಿ ಈಗ ಮಂದಿ ಹಠಾತ್ ಪರಿಣಾಮದಿಂದ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿದ್ದ ದವಸಧಾನ್ಯ, ಬಟ್ಟೆಬರೆ ಎಲ್ಲವೂ ಮಳೆ ನೀರಿನಿಂದ ಹಾಳಾಗಿವೆ. ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಳಾಗಿವೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ಎಲ್ಲವೂ ನೀರು ಪಾಲಾಗಿದ್ದು, ಮತ್ತೆ ಸಂಪಾದಿಸೋದು ಹೇಗೆ ಎಂದು ಕೆಲ ಸ್ಥಳೀಯರು ಆಕ್ರೋಶ ಹೊರಹಾಕಿದರು. ಕೆಲ ಪ್ರದೇಶದ ಪ್ರಿಟಿಂಗ್‍ಪ್ರೆಸ್, ಗಿರಣಿಗಳಿಗೆ ನೀರು ನುಗ್ಗಿದ್ದು, ಸಂಗ್ರಹಿಸಿಟ್ಟಿದ್ದ ಮೂಟೆಗಟ್ಟಲೇ ಧಾನ್ಯಗಳು, ಹಿಟ್ಟು ಹಾಳಾಗಿದೆ.

  • ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

    ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

    – ಕೊರೊನಾ ನಿಯಂತ್ರಿಸಲು ದಂಡವೇ ಕೊನೆಯ ಅಸ್ತ್ರ

    ಬೆಂಗಳೂರು: ಮಾಸ್ಕ್ ಧರಿಸಿಲ್ಲ ಅಂದರೆ ದುಬಾರಿ ದಂಡ ಹಾಕುತ್ತಿರುವುದಕ್ಕೆ ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಂಜುನಾಥ್ ಪ್ರಸಾದ್, ಯಾವುದೇ ಕಾರಣಕ್ಕೂ ದಂಡದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಸ್ತಾಪನೂ ಇಲ್ಲ. ಕಡಿಮೆ ಮಾಡುವುದಿಲ್ಲ. ಕೊರೊನಾ ನಿಯಂತ್ರಿಸಲು ದಂಡ ಅನ್ನೋದು ಕೊನೆಯ ಅಸ್ತ್ರ. ಹೀಗಾಗಿ ಜನರೇ ಪಾಲನೆ ಮಾಡಬೇಕಾಗುತ್ತದೆ. ಮನೆಯಲ್ಲೇ ತಯಾರಿಸಿಕೊಂಡು ಮಾಸ್ಕ್ ಧರಿಸಬಹುದು. ಆದರೂ ಮಾಸ್ಕ್ ಧರಿಸದೇ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಾರೆ. ಅಂತಹವರು ದಂಡ ಕಟ್ಟಲಿ ಎಂದರು.

    ಕೊರೊನಾ ವ್ಯಕ್ತಿಯನ್ನ ಹಿಂಸಿಸುತ್ತದೆ. ಅಲ್ಲದೇ ಇದು ಜನರ ಸುತ್ತಮುತ್ತಲಿನವರಿಗೂ ಹರಡುತ್ತದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಅಡಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ದಂಡ ಇಳಿಸಲು ಸಾಧ್ಯವಾಗಲ್ಲ. 200 ರೂಪಾಯಿ ಇದ್ದಾಗ ಸಾಕಷ್ಟು ಜನ ನಿಯಮ ಉಲ್ಲಂಘಿಸುತ್ತಿದ್ದರು. ಇಂತಹ ಕೊರೊನಾ ಕಾಲದಲ್ಲಿ ಜನರು ಕೂಡ ಸಹಕಾರ ನೀಡಲೇಬೇಕು ಎಂದು ಬಿಬಿಎಂಪಿ ಕಮಿಷನರ್ ಹೇಳಿದರು.

    ಕೊರೊನಾ ಟೆಸ್ಟ್‌ಗೆ ಸ್ಯಾಂಪಲ್ ಕೊಡುತ್ತಾರೆ, ನಂತರ ಅವರೇ ನಾಪತ್ತೆಯಾಗುತ್ತಾರೆ. ಪೂರ್ವ ವಲಯದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಬರೋಬ್ಬರಿ 874 ಜನರು ನಾಪತ್ತೆಯಾಗಿದ್ದಾರೆ. ಇವರಿಂದಲೇ ಕೊರೊನಾ ಚೈನ್ ಲಿಂಕ್ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ತಪ್ಪು ವಿಳಾಸ ಕೊಟ್ಟು ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿಕೊಳ್ಳುತ್ತಾರೆ. ಈ ಕೇಸ್‍ಗಳ ಮಾಹಿತಿ ಈಗ ಪೊಲೀಸ್ ಇಲಾಖೆಗೆ ಹೋಗಲಿದೆ. ಪೊಲೀಸ್ ಇಲಾಖೆ ವತಿಯಿಂದ ಪಾಸಿಟಿವ್ ಕೇಸ್ ಜಾಲ ಪತ್ತೆ ಮಾಡಲಾಗುತ್ತದೆ ಎಂದರು.

    ಕೊರೊನಾ ಟೆಸ್ಟ್ ನಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕಾಗಿಲ್ಲ. ಬೀದಿ ಬೀದಿಗೆ ಟೆಸ್ಟ್ ಮಾಡಿಸಲಾಗುತ್ತದೆ. ಪ್ರತಿದಿನ ಕೇಸ್‍ಗಳ ಸಂಖ್ಯೆ ಹೆಚ್ಚಾದರೂ ಕೊರೊನಾ ಟೆಸ್ಟ್ ಮಾತ್ರ ಕಡಿಮೆ ಮಾಡಲ್ಲ. ನಮ್ಮ ಟೆಸ್ಟ್ ನಿತ್ಯ ಏರಿಕೆಯಾಗುತ್ತಲೇ ಇದೆ. ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ 40 ಸಾವಿರಕ್ಕೆ ಕೋವಿಡ್ ಸೋಂಕು ಪರೀಕ್ಷೆ ಹೆಚ್ಚಳ ಮಾಡಲಾಗುತ್ತಿದೆ.

    ರಾಟ್ ಕಿಟ್, ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‍ಗಳಿಗೆ ಕೊರತೆ ಇಲ್ಲ. ರಾಜ್ಯ ಸರ್ಕಾರವೂ ಕೊಡುತ್ತಿದೆ, ಬಿಬಿಎಂಪಿಯೂ ಟೆಂಡರ್ ಕರೆದಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿನ್ನೂ ನೇಮಕ ಮಾಡಲು ಅವಕಾಶ ಇದೆ. ಯಾರ‍್ಯಾರಿಗೆ ಟೆಸ್ಟ್ ಮಾಡಬೇಕು ಎಂಬ ಟಾರ್ಗೆಟ್ ಇದೆ. ಬೇರೆ ಬೇರೆ ಖಾಯಿಲೆ ಇರುವವರು, ಉಸಿರಾಟದ ಸಮಸ್ಯೆ, ಕಂಟೈನ್‍ಮೆಂಟ್ ಪ್ರದೇಶದ ಜನ, ವಯಸ್ಸಾದವರನ್ನು ಟೆಸ್ಟ್ ಮಾಡಿದರೆ ದಿನಕ್ಕೆ 40 ಸಾವಿರ ಆಗಲಿದೆ. ಪೂರ್ವ ವಲಯದಲ್ಲಿ ಶೇ.13.11 ಪಾಸಿಟಿವ್ ರೇಟ್ ಇದೆ. ಶೇ.13.11 ನಿಂದ ಶೇ.5ಕ್ಕೆ ಇಳಿಸಬೇಕಿದೆ. ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

  • ಕೊರೊನಾ ವಾರಿಯರ್ಸ್, ಗುಣಮುಖರು ಸ್ವಾತಂತ್ರ್ಯೋತ್ಸವದಲ್ಲಿ ಭಾಗಿ: ಬಿಬಿಎಂಪಿ ಆಯುಕ್ತ

    ಕೊರೊನಾ ವಾರಿಯರ್ಸ್, ಗುಣಮುಖರು ಸ್ವಾತಂತ್ರ್ಯೋತ್ಸವದಲ್ಲಿ ಭಾಗಿ: ಬಿಬಿಎಂಪಿ ಆಯುಕ್ತ

    ಬೆಂಗಳೂರು: ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ 25 ಮಂದಿ ಕೊರೊನಾ ವಾರಿಯರ್ಸ್ ಹಾಗೂ 25 ಮಂದಿ ಕೋವಿಡ್ 19 ನಿಂದ ಗುಣಮುಖರಾದವರು ಭಾಗಿಯಾಗಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ತಿಳಿಸಿದ್ದಾರೆ.

    ನಗರದ ಮಾಣಿಕ್ ಷಾ ಮೈದಾನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಅಲ್ಲದೆ ಸಾರ್ಜನಿಕರಿಗೆ ಪ್ರವೇಶ ಕೂಡ ಇರಲ್ಲ. 25 ಜನ ಕೋವಿಡ್ ವಾರಿಯರ್ಸ್ ಹಾಗೂ ಕೋವಿಡ್ ನಿಂದ ಗುಣಮುಖರಾದ 25 ಮಂದಿ ಭಾಗಿ ಮಾತ್ರ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

    ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಧ್ವಜಾರೋಹಣ ಮಾಡಲಿದ್ದಾರೆ. ಪ್ರತಿ ವರ್ಷದಂತೆ ಪೆರೇಡ್ ವೀಕ್ಷಣೆಗೆ ಹೋಗೋದಿಲ್ಲ. ಧ್ವಜಾರೋಹಣದ ನಂತರ ಸಿಎಂ ರಾಜ್ಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

    ಸುದ್ದಿಗೋಷ್ಟಿ ಯಲ್ಲಿ ಪೊಲೀಸ್ ಆಯುಕ್ತ ಕಮಲ್ ಪಂಥ್, ಡಿಸಿ ಶಿವಮೂರ್ತಿ ಸೇರಿದಂತೆ ಹಿರಿಯ  ಅಧಿಕಾರಿಗಳು ಭಾಗಿಯಾಗಿದ್ದರು.

  • ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ

    ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ

    ಬೆಂಗಳೂರು: ಈ ವರ್ಷ ಬೆಂಗಳೂರಿನ ರಸ್ತೆಯಲ್ಲಿ ಗಣಪತಿ ಕೂರಿಸುವಂತಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಕೊರೊನಾನಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗಣೇಶ ಹಬ್ಬ ಮನೆಯಲ್ಲೇ ಮಾಡಿ. ಕೊರೊನಾ ವಿರುದ್ಧ ಹೋರಾಟ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಗಣಪತಿ ಕೂರಿಸಲು ಅವಕಾಶವೇ ಇಲ್ಲ. ಈ ಮೂಲಕ ಹಬ್ಬಗಳನ್ನ ಮನೆಯಲ್ಲಿ ಮಾಡಬೇಕು ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಹಬ್ಬದ ಶಾಪಿಂಗ್ ನೆಪದಲ್ಲಿ ನಿಯಮಗಳನ್ನು ಮೀರಿದರೆ ದಂಡ ವಿಧಿಸಲಾಗುತ್ತಿದೆ. ಎಲ್ಲ ವಿಚಾರಕ್ಕೂ ಮಾರ್ಗಸೂಚಿ ಮಾಡಲು ಆಗಲ್ಲ. ಆದರೆ ಕೊರೊನಾ ವಿಚಾರವಾಗಿ ನಿಯಮ ಮೀರಿದರೆ ದಂಡ ಪಕ್ಕಾ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತರೆ ಜೇಬಿಗೆ ಕತ್ತರಿ ಬೀಳುತ್ತದೆ. ಹಬ್ಬದ ಹಿಂದಿನ ದಿನ ಪೊಲೀಸ್ ಹಾಗೂ ಬಿಬಿಎಂಪಿ ದಂಡ ಹಾಕಲಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.

    ಮಹಾಮಾರಿ ಕೊರೊನಾ ವೈರಸ್‍ನಿಂದ ಈ ವರ್ಷ ರಸ್ತೆಯಲ್ಲಿ ಗಣೇಶ ಕೂರಿಸಿ ಅದ್ಧೂರಿಯಾಗಿ ಹಬ್ಬ ಮಾಡಲು ಅವಕಾಶ ಇಲ್ಲದಂತಾಗಿದೆ. ಈ ಮೂಲಕ ಬೆಂಗಳೂರಿನ ರೋಡ್, ರೋಡಿನಲ್ಲಿ ಗಣೇಶ್ ಕೂರಿಸುತ್ತಿದ್ದವರಿಗೆ ಬೇಸರವಾಗಿದೆ. ಆದರೆ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಬಿಬಿಎಂಪಿ ಮುಂಜಾಗ್ರತೆಯಾಗಿ ಈ ಕ್ರಮವನ್ನು ಕೈಗೊಂಡಿದೆ.

    https://twitter.com/BBMPCOMM/status/1288012896060887041

  • ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ಮನೆಯಲ್ಲೇ ಐಸೋಲೇಷನ್ ಮಾಡ್ಕೊಳ್ಳಿ- ಬಿಬಿಎಂಪಿ ಆಯುಕ್ತ ಮನವಿ

    ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ಮನೆಯಲ್ಲೇ ಐಸೋಲೇಷನ್ ಮಾಡ್ಕೊಳ್ಳಿ- ಬಿಬಿಎಂಪಿ ಆಯುಕ್ತ ಮನವಿ

    ಬೆಂಗಳೂರು: ಕೊರೊನಾ ವೈರಸ್‍ನ ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ದಯವಿಟ್ಟು ಮನೆಯಲ್ಲೇ ಐಸೋಲೇಷನ್ ಮಡಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅಯುಕ್ತರು, ಸಿಲಿಕಾನ್ ಸಿಟಿಯಲ್ಲಿ ಕೋವಿಡ್ -19 ನಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದು, ಸಂಕಷ್ಟ ತಪ್ಪಿಸಲು ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ತೀರಾ ಸಮಸ್ಯೆ ಇರುವವರಿಗೆ ಮಾತ್ರ ಬೆಡ್ ಸಿಗುತ್ತದೆ. ರೋಗ ಲಕ್ಷಗಳು, ಮೈಲ್ಡ್ ಸಿಂಪ್ಟಮ್ಸ್ ಇರುವವರು ಮನೆಯಲ್ಲೆ ಐಸೋಲೇಷನ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಬಿಬಿಎಂಪಿ ಕೊರೊನಾ ಜಾಗೃತಿ ಅಭಿಯಾನದ ರಾಯಭಾರಿ ನಟ ರಮೇಶ್ ಅರವಿಂದ್ ಈ ಸಂಬಂಧ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಸಣ್ಣ, ಜ್ವರ, ಕಫ ಇರುವವರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಬೆಡ್ ನಲ್ಲಿ ಮಲಕ್ಕೊಂಡು ಬಿಡುತ್ತೀರಾ. ಇದು ಅಗತ್ಯವಿಲ್ಲ. ಯಾಕಂದ್ರೆ ಆ ಬೆಡ್‍ಗೆ ತುಂಬಾ ಜನ ಕಾಯುತ್ತಿದ್ದಾರೆ. ಬಹಳ ಅಗತ್ಯವಾಗಿ ಆ ಬೆಡ್ ಬೇಕೆ ಬೇಕು ಅನ್ನೋ ರೋಗಿಗಳು ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಅಲ್ಪ ಪ್ರಮಾದ ಲಕ್ಷಣ ಇರುವವರು ಆಸ್ಪತ್ರೆಗಳಿಗೆ ಬಂದು ಇಕ್ಕಟ್ಟಿಗೆ ಸಿಲುಕಿಸಬೇಡಿ. ಯಾರಿಗೆ ಅಗತ್ಯವಿದೆಯೋ ಅವರಿಗೆ ಆ ಬೆಡ್ ಸಲ್ಲಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಹೋಂ ಐಸೋಲೇಷನ್:
    * ಹೊಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯೋರಿಗೆ ಶುಗರ್, ಬಿಪಿ, ಹೃದಯ, ಕಿಡ್ನಿ ಸಮಸ್ಯೆ ಇರಬಾರದು.
    * 50ವರ್ಷದೊಳಗಿನ ವಯಸ್ಸಿನವರು ಮಾತ್ರ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯಬಹುದು.
    * ಸೋಂಕಿತ ವ್ಯಕ್ತಿಗೆ ಮನೆಯಲ್ಲಿ ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಬೇಕು.
    * ಸೋಂಕಿತ ವ್ಯಕ್ತಿ ಬಳಸುವ ಶೌಚಾಲಯವನ್ನ ಇತರೆ ಕುಟುಂಬಸ್ಥರು ಬಳಸಬಾರದು.
    * ಸೋಕಿಂತ ವ್ಯಕ್ತಿಯ ಕೊಠಡಿಗೆ ಭೇಟಿ ಕೊಡುವವರಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ.
    * ಸೋಂಕಿತ ವ್ಯಕ್ತಿಯ ಕೊಠಡಿಯಲ್ಲಿ ಕೇರ್ ಟೇಕರ್ ಹೆಚ್ಚು ಸಮಯ ಇರುವಂತಿಲ್ಲ.
    * ಕೊರೋನಾ ಪಾಸಿಟಿವ್ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆ?ಯಪ್ ಬಳಸಬೇಕು..
    * ಸೋಕಿಂತನ ದೇಹದ ಉಷ್ಣತೆ ಮತ್ತು ಉಸಿರಾಟ ಬಗ್ಗೆ ಮಾನಿಟರ್ ಮಾಡಿ ದಾಖಲಿಸಬೇಕು.
    * ಉಸಿರಾಟದ ಸಮಸ್ಯೆ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಕೂಡಲೇ ಡಾಕ್ಟರ್ ಸಲಹೆ ಪಡೆಯಬೇಕು.

  • ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಎತ್ತಂಗಡಿ

    ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಎತ್ತಂಗಡಿ

    ಬೆಂಗಳೂರು: ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕಗೊಂಡಿದ್ದಾರೆ.

    ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ನಿನ್ನೆಯಷ್ಟೇ ಹೈ ಕೋರ್ಟ್ ಕೂಡ ಕೋವಿಡ್ ನಿರ್ವಹಣೆ ಕುರಿತು ಚಾಟಿ ಬೀಸಿತ್ತು.

    ನಿನ್ನೆಯಷ್ಟೇ ಬೆಂಗಳೂರು ಲಾಕ್‍ಡೌನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅನಿಲ್ ಕುಮಾರ್ ಅವರು, ನಗರದಲ್ಲಿ ಕೋವಿಡ್ ಸೋಂಕಿನ ಸರಪಳಿಯ ಲಿಂಕ್ ತಪ್ಪಿಸಲು ಕನಿಷ್ಠ 15 ದಿನಗಳ ಲಾಕ್‍ಡೌನ್ ಅಗತ್ಯವಿದೆ. ಇದು ನನ್ನ ವೈಯಕಿಕ್ತ ಅಭಿಪ್ರಾಯ ಮಾತ್ರ. ಯಾವುದೇ ಚೈನ್ ಬ್ರೇಕ್ ಆಗಲು 15 ದಿನಗಳ ಸೈಕಲ್ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕನಿಷ್ಠ 15 ದಿನ ಲಾಕ್‍ಡೌನ್ ಅಗತ್ಯವಿದೆ ಎಂದು ಸಿಎಂ ಸಭೆಗೂ ಮುನ್ನ ಹೇಳಿದ್ದರು. ಆದರೆ ನಿನ್ನೆ ಸಿಎಂ ಬಿಎಸ್‍ವೈ ನಡೆಸಿದ ಅಷ್ಟದಿಕ್ಪಾಲಕರ ಸಭೆಯಿಂದ ಅನಿಲ್ ಕುಮಾರ್ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದರು. ಸಿಎಂ ಅವರ ಈ ನಡೆ ಅನುಮಾನಕ್ಕೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.