Tag: ಮಂಜುನಾಥ್ ಗೌಡ

  • ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    – ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ

    ಕೋಲಾರ: ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ (Manjunath Gowda) ಗೆದ್ದರೆ ರಾಜಕೀಯ ಬಿಡುತ್ತೇನೆ ಎಂದು ಮಾಲೂರು ಶಾಸಕ ಕೆವೈ ನಂಜೇಗೌಡ (KY Nanjegowda) ಸವಾಲು ಹಾಕಿದ್ದಾರೆ.

    2023ರ ಮಾಲೂರು (Malur) ಕ್ಷೇತ್ರದ ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ (High Court) ತೀರ್ಪು ನೀಡಿರುವ ಕುರಿತು ಕೋಲಾರದಲ್ಲಿ (Kolar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಬಂದಿದೆ. ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ರೀ ಕೌಂಟಿಂಗ್ ಕೊಟ್ರೆ ನಾನು ಬದ್ಧ ಎಂದು ಹಲವು ಬಾರಿ ಹೇಳಿದ್ದೆ. ಶಾಸಕ ಸ್ಥಾನವನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ನಾನು ಅಪೀಲು ಹಾಕಿದ್ದೇನೆ ಎಂದರು. ಇದನ್ನೂ ಓದಿ: Malur Election | ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಗೆದ್ದವರಿಗೆ ಸೇರಿಸಿದ್ದಾರೆ: ಕೆ.ಎಸ್‌ ಮಂಜುನಾಥ್‌ ಗೌಡ

    ಚುನಾವಣೆ ಪ್ರಕ್ರಿಯೆ ವಜಾ ಮಾಡಿದ ಮೇಲೆ ಚುನಾವಣೆ ಘೋಷಣೆ ಮಾಡಬೇಕಿತ್ತು. ರೀ ಕೌಂಟಿಂಗ್ ಮಾಡಿದ್ದರೆ ನಾನು ತಯಾರಿದ್ದೆ. ನಿಮ್ಮದೇ ಸರ್ಕಾರ, ನಿಮ್ಮದೇ ಮಂತ್ರಿ, ಅಧಿಕಾರಿಗಳು, ನೀವೆ ಕಾವಲಿದ್ದು ಮತ ಎಣಿಕೆ ಮಾಡಿದ್ದು. ವಿವಿ ಪ್ಯಾಟ್ ಕೌಂಟಿಂಗ್ ಮಾಡಿಸಿದ್ರು, ಅವರ ಪ್ರೊಸಿಜರ್ ಪ್ರಕಾರ ಮಾಡಿದ್ರು. ಇವರಿಗೆ ಹುಚ್ವು ಹಿಡಿದಿದೆ, ಜೀವಮಾನದಲ್ಲಿ ಅವರು ಹೊಸಕೋಟೆಯಲ್ಲಿ ಶಾಸಕರಾಗಲು ಸಾಧ್ಯವಿಲ್ಲ. ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

    ಮಾಲೂರು ತಾಲೂಕು ತಬ್ಬಲಿಯಾಗಿಲ್ಲ, ಮೂವತ್ತು ದಿನ ಸಮಯಾವಕಾಶ ಕೊಟ್ಟಿದ್ದಾರೆ. ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ಬಿಡುವೆ. ಮರು ಎಣಿಕೆ ಆಗಲಿ, ಅಸಿಂಧು ವಿರುದ್ಧ ಸುಪ್ರೀಂ ಮೊರೆ ಹೋಗುವೆ. ಅವರ ಪರವಾಗಿ ಕೆಲ ಹುಚ್ಚರಿದ್ದಾರೆ, ಅವರು ಪಟಾಕಿ ಹೊಡೆದು ಸಿಹಿ ಹಂಚಿದ್ದಾರೆ. ಅವರೇನು ಶಾಸಕರಾಗಿದ್ದಾರಾ? ಇಲ್ಲವಲ್ಲಾ, ಯಾರೋ ಕೆಲವರು ಸಂಭ್ರಮ ಮಾಡಿದ್ದಾರೆ. ಮಂಜುನಾಥ್ ಗೌಡ ಹಗಲು ಕನಸು ಕಾಣುತ್ತಿದ್ದಾರೆ, ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಚಿತ್ರ ಪ್ರದರ್ಶನ, ರಕ್ತದಾನ ಶಿಬಿರ – ಸಮಾಜಸೇವಾ ಕಾರ್ಯಗಳೊಂದಿಗೆ ಮೋದಿ ಜನ್ಮದಿನಾಚರಣೆ

  • ಡಿಕೆಶಿ ಎಚ್ಚರಿಕೆಗೆ ಕ್ಯಾರೇ ಅನ್ನದ ಯುವ ಕಾರ್ಯಕರ್ತರು – ಈಗಲೂ ರಾರಾಜಿಸುತ್ತಿವೆ ಬ್ಯಾನರ್‌ಗಳು

    ಡಿಕೆಶಿ ಎಚ್ಚರಿಕೆಗೆ ಕ್ಯಾರೇ ಅನ್ನದ ಯುವ ಕಾರ್ಯಕರ್ತರು – ಈಗಲೂ ರಾರಾಜಿಸುತ್ತಿವೆ ಬ್ಯಾನರ್‌ಗಳು

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಎಚ್ಚರಿಕೆ ನೀಡಿದರೂ ಯುವ ಕಾಂಗ್ರೆಸ್‌ (Youth Congress) ನಾಯಕರ ಬ್ಯಾನರ್‌ಗಳು (Congress Banner) ಸಿಲಿಕಾನ್‌ ಸಿಟಿಯಲ್ಲಿ ರಾರಾಜಿಸುತ್ತಿವೆ.

    ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಗೌಡ (Manjunath Gowda) ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಅರಮನೆ ಮೈದಾನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಯುವ ಸಂಕಲ್ಪ ಕಾರ್ಯಕ್ರಮ ಸಂಬಂಧ ನಗರದ ಹಲವೆಡೆ ಬ್ಯಾನರ್‌ ಹಾಕಲಾಗಿದೆ.

    ಕಾರ್ಯಕ್ರಮಕ್ಕಾಗಿ ಅರಮನೆ ಮೈದಾನ ಸುತ್ತಮುತ್ತ ಅನಧಿಕೃತವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಕಟ್ಟಿದ್ದಾರೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಡಿಸಿಎಂ ಆಕ್ರೋಶ ಹೊರ ಹಾಕಿದ್ದರು. ಅಷ್ಟೇ ಅಲ್ಲದೇ ಇಂದು ಬೆಳಗ್ಗೆ ಒಳಗೆ ಬ್ಯಾನರ್ ತೆರವು ಮಾಡುವಂತೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಆಟವಾಡಲು ಕೆರೆಗೆ ಇಳಿದು ಉಸಿರು ಚೆಲ್ಲಿದ ಬಾಲಕಿ

    ಎಚ್ಚರಿಕೆ ಬೆನ್ನಲ್ಲೇ ಕೆಲವು ಕಡೆ ಮಾತ್ರ ಯುವ ಕಾರ್ಯಕರ್ತರು ಬ್ಯಾನರ್ ತೆರವು ಮಾಡಿದ್ದಾರೆ. ಆದರೆ ಮೇಖ್ರಿ ಸರ್ಕಲ್, ಅರಮನೆ ಮೈದಾನ ರಸ್ತೆಯಲ್ಲಿ ಬ್ಯಾನರ್ ಗಳು ಈಗಲೂ ರಾರಾಜಿಸುತ್ತಿದೆ. ಡಿಸಿಎಂ ವಾರ್ನಿಂಗ್ ಬಳಿಕವು ರಾತ್ರಿ ಅನೇಕ ಕಡೆ ಯುವ ಕಾರ್ಯಕರ್ತರು ಬ್ಯಾನರ್ ಕಟ್ಟುತ್ತಿರುವುದು ಪಬ್ಲಿಕ್‌ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಡಿಕೆಶಿ ಹೇಳಿದ್ದೇನು?
    ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಕಮಿಷನರ್ ಅವರಿಗೆ ಸೂಚನೆ ನೀಡಿದ್ದೇನೆ. ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್ ಹಾಕಿರುವವರು ತಾವಾಗಿಯೇ ತೆಗೆಯಬೇಕು, ಒಂದೊಮ್ಮೆ ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಆದೇಶಿಸಿದ್ದೇನೆ. ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬಲವನ್ನು ಬೂತ್‌ಗಳಲ್ಲಿ ಪ್ರದರ್ಶಿಸಬೇಕೇ ಹೊರತು, ಈ ರೀತಿ ಬ್ಯಾನರ್, ಫ್ಲೆಕ್ಸ್ ಹಾಕಿಸಿ ಅಲ್ಲ ಎಂದು ಹೇಳಿದ್ದರು.

  • ಮಾಜಿ ಶಾಸಕ ಮಂಜುನಾಥ್ ಗೌಡ ರೌಡಿಸಂ – ವೀಡಿಯೋ ವೈರಲ್

    ಮಾಜಿ ಶಾಸಕ ಮಂಜುನಾಥ್ ಗೌಡ ರೌಡಿಸಂ – ವೀಡಿಯೋ ವೈರಲ್

    ಕೋಲಾರ: ಮಾಲೂರು ಮಾಜಿ ಶಾಸಕ ಮಂಜುನಾಥಗೌಡ (Manjunath Gowda) ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಅತಿರೇಕದಿಂದ ವರ್ತಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಶುಕ್ರವಾರ ಸಂಜೆ ಬಂಗಾರಪೇಟೆಯಿಂದ (Bangarapete) ಮಾಲೂರು ತಾಲೂಕಿನ ಟೇಕಲ್ ಬಳಿಗೆ ಕೆಂಪೇಗೌಡ ರಥ ಬಂದ ವೇಳೆ ಪೊಲೀಸರನ್ನು ತಳ್ಳಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಹಾಗೂ ಹೊಸಕೋಟೆ ರೌಡಿಯಿಸಂ ಎಂದು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ

    ಕೆಂಪೇಗೌಡ ರಥ ಚಲಾಯಿಸುತ್ತಿದ್ದ ಚಾಲಕನ ಮೇಲೂ ಹಲ್ಲೆ ಮಾಡಿ ಕೆಳಗಿಳಿಸಿ ತಾನೇ ರಥದ ವಾಹನ ಚಲಾವಣೆ ಮಾಡಿದ್ದು ಬಿಜೆಪಿ (BJP) ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷ ಎಂದರೆ ಇಷ್ಟೆಲ್ಲಾ ಸಂಸದ ಮುನಿಸ್ವಾಮಿ ಎದುರೇ ನಡೆದಿದ್ದು, ಮುನಿಸ್ವಾಮಿ ಮಾತಿಗೂ ಕೇರ್ ಮಾಡದೇ ನುಗ್ಗುವ ಮಾಜಿ ಶಾಸಕನ ದೌರ್ಜನ್ಯದ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದು ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿ ಬಿಡಲಾಗಿದೆ. ಇದನ್ನೂ ಓದಿ: ಬಾಡಿಗೆ ತಾಯ್ತನ ಮೂಲಕ ಮಗ-ಸೊಸೆಯ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

    ಕೆಂಪೇಗೌಡ ರಥಯಾತ್ರೆಗೆ ಸ್ವಾಗತಿಸುವ ವೇಳೆಯಲ್ಲಿ ಬಿಜೆಪಿ ಎರಡು ಗುಂಪುಗಳ ನಡುವೆ ನಿನ್ನೆ ಸಂಜೆ ಮಾರಾಮಾರಿ ನಡೆದಿತ್ತು. ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ಬಣಗಳ ನಡುವೆ ಮಾರಾಮಾರಿ ತಳ್ಳಾಟ ನೂಕಾಟ ನಡೆದು ದೊಡ್ಡ ಹೈಡ್ರಾಮಾವೇ ನಡೆದಿತ್ತು. ರಥಯಾತ್ರೆಗೆ ಕಳಶಗಳೊಂದಿಗೆ ಸ್ವಾಗತಕ್ಕೆ ಮಾಡಲಾಗಿದ್ದ ಸಿದ್ಧತೆಯನ್ನು ಲೆಕ್ಕಿಸದೇ ರಥದ ವಾಹನ ಹತ್ತಿದ ಮಾಜಿ ಶಾಸಕ ಜನರತ್ತ ನುಗ್ಗಿಸುವ ವೀಡಿಯೋ ಇದಾಗಿದೆ. ಮಂಜುನಾಥಗೌಡ ರಥಯಾತ್ರೆ ಬರುವ ಮುನ್ನವೇ ಕಳಶಗಳನ್ನು ವೇದಿಕೆ ಬಳಿ ಕೆರದೊಯ್ದ ಹಿನ್ನೆಲೆ, ಹೂಡಿ ವಿಜಯ್ ಕುಮಾರ್ ಮತ್ತು ಬೆಂಬಲಿಗರು ಕಳಶಗಳನ್ನು ರಥಯಾತ್ರೆ ಜೊತೆಗೆ ಕೆರತರಲು ಒತ್ತಾಯಿಸಿ ರಥಯಾತ್ರೆ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ.

    ಈ ವೇಳೆ ನುಗ್ಗಿ ಬರುವ ಮಂಜುನಾಥಗೌಡ ಪೊಲೀಸರನ್ನು ತಳ್ಳಿ, ಬಿಜಿಪಿ ಮುಖಂಡ ಗೋಪಾಲಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮಂಜುನಾಥ್ ಗೌಡರ ಈ ದೌರ್ಜನ್ಯ ಸರಿಯಲ್ಲ ತಾಲೂಕಿನ ಹೊರಗಿನವರು ಇಲ್ಲಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಕೆಶಿ ಮನೆ ಅಂಗಳದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಪೊಲಿಟಿಕಲ್ ಫೈಟ್

    ಡಿಕೆಶಿ ಮನೆ ಅಂಗಳದಲ್ಲಿ ತೀರ್ಥಹಳ್ಳಿ ಕಾಂಗ್ರೆಸ್ ಪೊಲಿಟಿಕಲ್ ಫೈಟ್

    ಬೆಂಗಳೂರು: ತೀರ್ಥಹಳ್ಳಿ ಕಾಂಗ್ರೆಸ್‍ನ ಎರಡೆರಡು ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ ರನ್ನು ಸದಾಶಿವನಗರ ನಿವಾಸದಲ್ಲಿ ಇಂದು ಭೇಟಿ ಮಾಡಿ ರಾಜಕೀಯ ಮೇಲಾಟಕ್ಕೆ ವೇದಿಕೆಯನ್ನಾಗಿಸಿಕೊಂಡಿದ್ದಾರೆ.

    ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಸದಸ್ಯರನ್ನು ಡಿಕೆಶಿ ನಿವಾಸಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕರೆ ತಂದಿದ್ದರು. ಕಿಮ್ಮೆನೆ, ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೆ ಡಿಕೆಶಿ ನಿವಾಸಕ್ಕೆ ಮಂಜುನಾಥ ಗೌಡ ಸಹಾ ಬಂದಿದ್ದಾರೆ. ಮಂಜುನಾಥ ಗೌಡ ಡಿಕೆಶಿ ಆಪ್ತ. ಕಿಮ್ನೆನೆ ವಿರೋಧದ ನಡುವೆ ಮಂಜುನಾಥ ಗೌಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದ ಡಿ.ಕೆ.ಶಿವಕುಮಾರ್, ಈಗ ಪಟ್ಟಣ ಪಂಚಾಯತ್ ಸದಸ್ಯರನ್ನು ಡಿಕೆಶಿ ನಿವಾಸಕ್ಕೆ ಕರೆತರುವಲ್ಲು ಇಬ್ಬರ ನಡುವೆ ಪೈಪೋಟಿ ಉಂಟಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ಗೃಹಸಚಿವರೇ ಧಮ್ ಇದ್ದರೆ ಅರೆಸ್ಟ್ ಮಾಡಿ: ಡಿಕೆಶಿ

    ತೀರ್ಥಹಳ್ಳಿಯಲ್ಲಿ ಕಿಮ್ಮನೆ, ಮಂಜುನಾಥ್ ಗೌಡ ಫೈಟ್
    ಡಿ.ಕೆ.ಶಿವಕುಮಾರ್ ಮನೆ ಅಂಹಳದಲ್ಲಿ ಟಾಕ್ ಫೈಟ್ ಆಗಿ ಪರಿವರ್ತನೆ ಆಯ್ತು. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಕ್ಷೇತ್ರದಲ್ಲಿ ಏನೇ ಗೊಂದಲ ಇದ್ರು ಪಕ್ಷದ ವೇದಿಕೆಯಲ್ಲಿ ಚರ್ಚೆಮಾಡುತ್ತೇವೆ. ಆದರೆ ತೀರ್ಥಹಳ್ಳಿಯಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಏನೇ ಇದ್ದರು ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಗಳ ಮದ್ಯೆ ಪ್ರಸ್ತಾಪ ಮಾಡುತ್ತೇನೆ. ಭಿನ್ನಾಭಿಪ್ರಾಯ ಇರಬೇಕು ಅದು ಆಂತರಿಕ ಪ್ರಜಾಪ್ರಭುತ್ವಕ್ಕೆ ಸಾಕ್ಷಿ ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಅಲ್ಲಿ ಮೋದಿ ಜೊತೆ ಪಕ್ಷದ ಮುಖಂಡರು ಮಾತನಾಡಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್‍ನಲ್ಲಿ ಆಂತರಿಕ ಚರ್ಚೆ ಮಾಡಲು ಸಾಧ್ಯವಿದೆ ಏನೇ ಭಿನ್ನಾಭಿಪ್ರಾಯ ಇದ್ದರು ಪಕ್ಷದ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ನಾನು ಪತ್ರ ಬರೆದಿದ್ದು ಪಕ್ಷದ ವೇದಿಕೆಯಲ್ಲಿ ಬರೆದಿದ್ದು ಅದನ್ನು ಮಾಧ್ಯಮ ಮುಂದೆ ಹೇಳುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಅಂತ ನಾಯಕರು ತೀರ್ಮಾನ ಮಾಡ್ತಾರೆ. ಮತದಾರರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!

    ಮಂಜುನಾಥ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಆಕಾಂಕ್ಷಿಗಳು ಎಲ್ಲಾ ಅಭ್ಯರ್ಥಿ ಆಗಲು ಸಾಧ್ಯವಿಲ್ಲ. ನಾನು ಕೂಡ ಟಿಕೆಟ್ ಪ್ರಬಲ ಆಕಾಂಕ್ಷಿ. ಟಿಕೆಟ್ ಯಾರಿಗೆ ಕೊಡಬೇಕು ಎಂದು ತೀರ್ಥಹಳ್ಳಿಯಲ್ಲಿ ತೀರ್ಮಾನ ಆಗಲ್ಲ. ಕೆಪಿಸಿಸಿ ಮಟ್ಟದಲ್ಲಿ ತೀರ್ಮಾನ ಆಗುತ್ತದೆ. ಇಲ್ಲದಿದ್ದರೇ ಎಐಸಿಸಿ ಮಟ್ಟದಲ್ಲಿ ತೀರ್ಮಾನ ಆಗುತ್ತದೆ. ನನ್ನ ನಾಯಕರು ಡಿ.ಕೆ ಶಿವಕುಮಾರ್ ಅವರು ಹೇಳಿದಂತೆ ನಾನು ಕೇಳುತ್ತೇನೆ. ಕೆಲವರು ಪತ್ರವನ್ನು ಪ್ರೀತಿಯಿಂದ ಬರೆದಿರಬಹುದು. ಕಠೋರ ಶಬ್ದ ಬಳಸಿರಬಹುದು, ಪ್ರೀತಿ ಮಾಡುವ ವಯಸ್ಸು ಇದಲ್ಲ ಎಂದು ಕಿಮ್ಮನೆ ರತ್ನಾಕರ್‍ ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ಬಿಜೆಪಿ, ಕಾಂಗ್ರೆಸ್ ಯತ್ನ: ಎಚ್‍ಡಿಕೆ