Tag: ಮಂಚನಬಲೆ

  • ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ

    ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ

    ಚಿಕ್ಕಬಳ್ಳಾಪುರ: ಮದುವೆಗೆ ನಿರಾಕರಿಸಿದ ಹಿನ್ನೆಲೆ ಯುವತಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಎರಚಿ (Acid Attack) ಸೋದರ ಮಾವ ತಾನೂ ಬೆಂಕಿ ಹಚ್ಚಿಕೊಂಡ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚನಬಲೆ (Manchanabale) ಗ್ರಾಮದಲ್ಲಿ ನಡೆದಿದೆ.

    ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಸೋದರ ಮಾವ ಆನಂದ್ ಕುಮಾರ್ ಈ ಕೃತ್ಯವೆಸಗಿದ್ದಾನೆ. ಅದೃಷ್ಟವಶಾತ್ ಅನಾಹುತದಿಂದ ಯುವತಿ ಪಾರಾಗಿದ್ದಾಳೆ. ಯುವತಿಗೆ ಆ್ಯಸಿಡ್ ಎರಚಿದ ಬಳಿಕ ಆನಂದ್ ಆಕೆಯ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಮಾವ ಆನಂದ್ ಕುಮಾರ್‌ಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಹರಿಯಾಣದ ರೈಲಿನಲ್ಲಿ ಗ್ಯಾಂಗ್‌ ರೇಪ್ -‌ ಅತ್ಯಾಚಾರ ಬಳಿಕ ರೈಲ್ವೆ ಹಳಿಗಳ ಮೇಲೆ ಮಹಿಳೆ ಎಸೆದ ಪಾಪಿಗಳು

    ಗಾಯಾಳು ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗಾಯಾಳು ಆನಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಒಡವೆ ಮಾಡಿಕೊಡೋದಾಗಿ ಹೇಳಿ 8 ಕೆಜಿ ಗಟ್ಟಿ ಚಿನ್ನ ಕದ್ದ ಅಕ್ಕಸಾಲಿಗ ಅರೆಸ್ಟ್

  • ಗ್ರಾಮದಲ್ಲಿ ಕೊರೊನಾ ಸ್ಫೋಟ- ಗ್ರಾಮಸ್ಥರಿಗೆ ಧೈರ್ಯ ತುಂಬಿದ ಡಿಸಿ ಆರ್.ಲತಾ

    ಗ್ರಾಮದಲ್ಲಿ ಕೊರೊನಾ ಸ್ಫೋಟ- ಗ್ರಾಮಸ್ಥರಿಗೆ ಧೈರ್ಯ ತುಂಬಿದ ಡಿಸಿ ಆರ್.ಲತಾ

    – ಮಂಚನಬಲೆ ಗ್ರಾಮದಲ್ಲಿ ಕೊರೊನಾ ಸ್ಫೋಟ

    ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಕೊರೊನಾ ಸ್ಫೋಟವಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಆರ್ ಲತಾ ಭೇಟಿ ಮಾಡಿ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

    ಮಂಚನಬಲೆ ಗ್ರಾಮ ಪಂಚಾಯತಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ 28 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 14 ಮಂದಿ ಮಂಚನಬಲೆ ಗ್ರಾಮದವರಾಗಿದ್ದಾರೆ. ಈ ಕೊರೊನಾದಿಂದ 3 ಮಂದಿ ಸಹ ಮೃತಪಟ್ಟಿದ್ದಾರೆ. ಆದರೆ ಜನ ಹೇಳುವ ಪ್ರಕಾರ ಕಳೆದ 10 ದಿನಗಳಲ್ಲಿ 10 ಮಂದಿ ಕೋರೋನಾ ಸೇರಿ ವಿವಿಧ ಶ್ವಾಸಕೋಶದ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಇದರಿಂದ ಗ್ರಾಮದ ಜನ ಸಾಕಷ್ಟು ಆತಂಕಗೊಂಡಿದ್ದರು.

    ಈ ಮಧ್ಯೆ ಹೋಂ ಐಸೋಲೇಷನ್ ನಲ್ಲಿದ್ದ ಕೊರೊನಾ ಸೋಂಕಿತನೊರ್ವ ಮನೆಯಲ್ಲಿರದೆ ಒಡಾಡುತ್ತಿದ್ದನು. ಮತ್ತೊಂದೆಡೆ ವ್ಯಾಕ್ಸಿನೇಷನ್ ಪಡೆಯಲು ಗ್ರಾಮದ ಕೆಲ ಜನ ಹಿಂಜರಿತಿದ್ರು. ಈ ಎಲ್ಲಾ ಸಮಸ್ಯೆಗಳನ್ನ ತಿಳಿದ ನಿಮ್ಮ ಪಬ್ಲಿಕ್ ಟಿವಿ ವರದಿ ಸಹ ಬಿತ್ತರ ಮಾಡಿತ್ತು. ಇದಾದ ಬೆನ್ನಲ್ಲೇ ಡಿಸಿ ಆರ್.ಲತಾ ಹಾಗೂ ಡಿಎಚ್‍ಓ ಇಂದಿರಾ ಕಬಾಡೆ, ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಟಾಸ್ಕ್ ಪೋರ್ಸ್ ಸಭೆ ನಡೆಸಿದರು.

    ಕೋವಿಡ್ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಬಳಿ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರಿಗೆ ಅಭಯ ತುಂಬಿದ ಡಿ ಸಿ ಆರ್ ಲತಾ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಂಡು ಕೊರೊನಾ ಕಡಿವಾಣಕ್ಕೆ ಜನ ಸಹಕಾರ ನೀಡುವಂತೆ ತಿಳಿಸಿದರು.