Tag: ಮಂಗ

  • ಆಂಬುಲೆನ್ಸ್ ಸಿಗದೆ ತಾಯಿಯನ್ನ ಮಗ ಹೊತ್ತೊಯ್ದ ಪ್ರಕರಣ: ತೀವ್ರ ಗಾಯಗೊಂಡಿದ್ದ ಅಜ್ಜಿ ಸಾವು

    ಆಂಬುಲೆನ್ಸ್ ಸಿಗದೆ ತಾಯಿಯನ್ನ ಮಗ ಹೊತ್ತೊಯ್ದ ಪ್ರಕರಣ: ತೀವ್ರ ಗಾಯಗೊಂಡಿದ್ದ ಅಜ್ಜಿ ಸಾವು

    ಕಲಬುರಗಿ: ಆಂಬುಲೆನ್ಸ್ ಸಿಗದೇ ತಾಯಿಯನ್ನು ಮಗ ಹೊತ್ತೊಯ್ದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಗಾಯಗೊಂಡಿದ್ದ ಅಜ್ಜಿ ಮೃತಪಟ್ಟಿದ್ದಾರೆ.

    ಕಲಬುರಗಿಯ ಉದನೂರ ಕ್ರಾಸ್ ಬಳಿ ಸಿದ್ದಮ್ಮ ಎಂಬ ಅಜ್ಜಿಗೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯ ನಂತರ ಆಕೆಯ ಮಗ ಮಹಾಂತೇಷ 108 ಆಂಬುಲೆನ್ಸ್ ಗೆ ಕರೆ ಮಾಡಿದ್ರು ಸಕಾಲಕ್ಕೆ ಬರಲಿಲ್ಲ.

    ನಂತರ ಸ್ಥಳೀಯರ ಬಳಿ ನೆರವು ಕೇಳಿದ್ರು ಮಾನವಿಯತೆ ಮರೆತ ಜನ ಯಾರು ಸಹಾಯ ಮಾಡಿರಲಿಲ್ಲ. ಕೊನೆಗೆ ಮಗ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ತಾಯಿಯನ್ನು ಹೊತ್ತು 45 ನಿಮಿಷಗಳ ಕಾಲ ಹೊತ್ತು ಸಾಗಿದ್ದರು. ನಂತರ ಇದನ್ನು ಗಮನಿಸಿದ ಪೊಲೀಸರು ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.

    ಮೃತ ಸಿದ್ದಮ್ಮಳ ಕಡು ಬಡವರಾಗಿದ್ದು, ಈ ಕುರಿತು ಸುದ್ದಿ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ನಂತರ ಯುನೈಟೆಡ್ ಆಸ್ಪತ್ರೆಯವರು ಉಚಿತ ಚಿಕಿತ್ಸೆ ಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಆದ್ರೆ ಘಟನೆ ನಂತರ ಅಜ್ಜಿಗೆ ತೀವ್ರ ರಕ್ತ ಆದ ಕಾರಣ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

    https://www.youtube.com/watch?v=_FXNSRP_ceg

  • ಮಗನ ಮುಂದೆಯೇ ಪತ್ನಿಯನ್ನ 25 ಬಾರಿ ಇರಿದು ಕೊಂದ

    ಮಗನ ಮುಂದೆಯೇ ಪತ್ನಿಯನ್ನ 25 ಬಾರಿ ಇರಿದು ಕೊಂದ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಮಗನ ಮುಂದೆಯೇ ಪತ್ನಿಯನ್ನ ಸುಮಾರು 25 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    36 ವರ್ಷದ ರೇಖಾ ಪತಿಯಿಂದಲೇ ಕೊಲೆಯಾದ ಮಹಿಳೆ. ಇಲ್ಲಿನ ದಿಲ್ಶಂದ್ ಗಾರ್ಡನ್‍ನಲ್ಲಿ ಬುಧವಾರದಂದು ಈ ಘಟನೆ ನಡೆದಿದ್ದು, ಕೊಲೆ ಮಾಡಿದ ನಂತರ ಪರಾರಿಯಾಗಿದ್ದ 43 ವರ್ಷದ ಆರೋಪಿ ವಿನೋದ್(ಬಿನೋದ್ ಬಿಶ್ತ್)ನನ್ನು ಪೊಲೀಸರು ಬಂಧಿಸಿದ್ದಾರೆ.

    ರೇಖಾ ಅನೈತಿಕ ಸಂಬಂಧ ಹೊಂದಿದ್ದಾರೆಂದು ಪತಿ ವಿನೋದ್ ಅನುಮಾನಿಸಿದ್ದ. ಇದೇ ವಿಚಾರಕ್ಕೆ ಬುಧವಾರದಂದು ರೇಖಾ ಹಾಗೂ ವಿನೋದ್ ನಡುವೆ ಜಗಳವಾಗಿತ್ತು. ನಂತರ ಜಗಳ ತಾರಕಕ್ಕೇರಿದ್ದು, ವಿನೋದ್ ಸೀದಾ ಅಡುಗೆಮನೆಗೆ ಹೋಗಿ ಚಾಕು ತಂದು 25 ಬಾರಿ ರೇಖಾಗೆ ಇರಿದಿದ್ದಾನೆ. ಈ ವೇಳೆ ಅಮ್ಮನನ್ನು ರಕ್ಷಿಸಲು ಬಂದ 15 ವರ್ಷದ ಮಗ ವಿನೀತ್‍ನನ್ನು ವಿನೋದ್ ತಳ್ಳಿದ್ದಾನೆ. ಮತ್ತೆ ವಿನೀತ್ ಎದ್ದು ಬಂದು ಅಪ್ಪನಿಂದ ಚಾಕು ಕಸಿದುಕೊಳ್ಳಲು ಯತ್ನಿಸಿದಾಗ ವಿನೋದ್ ಮಗನಿಗೂ ಇರಿದಿದ್ದಾನೆ. ಈ ವೇಳೆ ವಿನೀತ್‍ಗೆ ಗಂಭೀರವಾದ ಗಾಯವಾಗಿದೆ. ನಂತರ ವಿನೀತ್ ಅದೇ ಕಾಲೋನಿಯಲ್ಲಿ ವಾಸವಿದ್ದ ರೇಖಾ ಅವರ ಸಹೋದರನಿಗೆ ವಿಷಯ ತಿಳಿಸಿದ್ದಾನೆ. ರೇಖಾ ಸಹೋದರ ಪಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

    ರೇಖಾ ಅವರ ಸಹೋದರ ಹಾಗೂ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ವಿನೋದ್ ಅಲ್ಲಿಂದ ಪರಾರಿಯಾಗಿದ್ದ. ರೇಖಾ ಹಾಗೂ ವಿನೀತ್‍ನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದ್ರೆ ರೇಖಾ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದು, ವಿನೀತ್‍ಗೆ ಚಿಕಿತ್ಸೆ ನೀಡಿದ್ದಾರೆ.

    ರೇಖಾ ಅವರಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಕಳೆದ ಒಂದೂವರೆ ತಿಂಗಳಿನಿಂದ ವಿನೋದ್ ಹೆಂಡತಿ ಜೊತೆ ಜಗಳವಾಡ್ತಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ. ಟೆಂಟ್ ಹೌಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ವಿನೋದ್ ಪ್ರತಿದಿನ ತನ್ನ ಹೆಂಡತಿಯ ಮೊಬೈಲ್ ಚೆಕ್ ಮಾಡ್ತಿದ್ದ ಹಾಗೂ ಮನೆಯಿಂದ ಹೊರಗೆ ಹೋಗದಂತೆ ಹೆಂಡತಿಗೆ ತಾಕೀತು ಮಾಡಿದ್ದ ಎಂದು ವರದಿಯಾಗಿದೆ.

    ರೇಖಾ ಹಾಗೂ ವಿನೋದ್ ಮದುವೆಯಾಗಿ 16 ವರ್ಷಗಳಾಗಿದ್ದು ಇಬ್ಬರು ಮಕ್ಕಳಿದ್ದಾರೆ. ವಿನೀತ್ ಈ ಘಟನೆಯನ್ನು ಕಣ್ಣಾರೆ ನೋಡಿ ಸದ್ಯ ಶಾಕ್‍ನಲ್ಲಿದ್ದಾನೆ. ಮತ್ತೊಬ್ಬ ಮಗ ಅಜ್ಜಿಯ ಮನೆಯಲ್ಲಿದ್ದಾನೆ.

    ಆರೋಪಿ ವಿನೋದ್ ಬುಧವಾರದಂದು ಮನೆಗೆ ಹಿಂದಿರುಗಿದಾಗ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ನೂಪುರ್ ಪ್ರಸಾದ್ ತಿಳಿಸಿದ್ದಾರೆ. ಮಗ ವಿನೀತ್ ತನ್ನ ತಂದೆಯೇ ತಾಯಿಯನ್ನು ಕೊಂದ ಬಗ್ಗೆ ಹೇಳಿಕೆ ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 7 ವರ್ಷದ ಮಗನನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ತಾಯಿ

    7 ವರ್ಷದ ಮಗನನ್ನ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ತಾಯಿ

    ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಗ ಅಡಚಣೆಯಾಗ್ತಾನೆಂದು ತಾಯಿಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿರುವ ಅಮಾನವೀಯ ಘಟನೆ ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಪ್ರಮೋದ ಕೊಲೆಯಾದ ಬಾಲಕ. ಪ್ರಮೋದನ ತಾಯಿ ರೇಖಾ ಅಲಿಯಾಸ್ ಬೇಬಿ ತನ್ನ ಪ್ರಿಯಕರ ತಿಮ್ಮನಗೌಡ ಎಂಬಾತನಿಂದ ಮಗನ ಕೊಲೆ ಮಾಡಿಸಿದ್ದಾಳೆ. ಪ್ರಮೋದ ಚೋರಡಿಯ ರಾಮಕೃಷ್ಣ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ. ಇದೇ ತಿಂಗಳು ಜೂನ್ 2ರಂದು ಪ್ರಮೋದನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಚೋರಡಿಯ ಕುಮದ್ವತಿ ನದಿ ಬಳಿ ಪ್ರಮೋದನ ಮೃತದೇಹವನ್ನು ಎಸೆಯಲಾಗಿತ್ತು.

    ರೇಖಾ ಪತಿ

    ರೇಖಾ ಹತ್ತು ವರ್ಷಗಳ ಹಿಂದೆ ಹಿರೇಕೆರೂರು ತಾಲೂಕಿನ ಹಳಿಯಾಳ ಗ್ರಾಮದ ವೀರಭದ್ರ ಎಂಬವರೊಂದಿಗೆ ಮದುವೆಯಾಗಿದ್ದಳು. ಮದುವೆಯ ಆರು ತಿಂಗಳ ನಂತರ ರೇಖಾ ಪತಿಯಿಂದ ದೂರವಾಗಿದ್ದಳು. ರೇಖಾ ಮತ್ತು ತಿಮ್ಮನಗೌಡನ ನಡುವೆ ಅನೈತಿಕ ಸಂಬಂಧವಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತಿಮ್ಮನಗೌಡನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

    ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ರೇಖಾ ಮತ್ತು ತಿಮ್ಮನಗೌಡ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು! 

     

  • ಮಗನ ಬೊಲೆರೊ ವಾಹನ ಡಿಕ್ಕಿಯಾಗಿ ತಂದೆ ಸಾವು

    ಮಗನ ಬೊಲೆರೊ ವಾಹನ ಡಿಕ್ಕಿಯಾಗಿ ತಂದೆ ಸಾವು

    ಚಿಕ್ಕಬಳ್ಳಾಪುರ: ಮಗನ ಬುಲೆರೊ ವಾಹನಕ್ಕೆ ಸಿಲುಕಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ನಡೆದಿದೆ.

    52 ವರ್ಷದ ಮೌಲಾ ಮೃತಪಟ್ಟ ದುರ್ದೈವಿ ತಂದೆ. ವಾಹನ ರಿವರ್ಸ್ ತೆಗೆದುಕೊಳ್ಳುವಾಗ ಮಗ ನಾಸಿರ್(22) ಹಿಂದಿನಿಂದ ತಂದೆಗೆ ಡಿಕ್ಕಿ ಹೊಡೆದಿದ್ದಾನೆ. ಇದಕ್ಕೂ ಮೊದಲು ನಾಸಿರ್ ತಂದೆಯ ಜೊತೆ ಜಗಳವಾಡಿದ್ದ. ಘಟನೆ ನಂತರ ವಾಹನ ಸಮೇತ ಮಗ ಪರಾರಿಯಾಗಿದ್ದಾನೆ.

    ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮದುವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆ ಶರಣಾದ ನವದಂಪತಿ

    ಮದುವೆಯಾದ ಮೂರೇ ದಿನಕ್ಕೆ ಆತ್ಮಹತ್ಯೆ ಶರಣಾದ ನವದಂಪತಿ

    ದಾವಣಗೆರೆ: ಮೂರು ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಗುಡಾಳು ಗ್ರಾಮದಲ್ಲಿ ನಡೆದಿದೆ.

    ನಟರಾಜ್(40) ಮತ್ತು ಪಲ್ಲವಿ (24) ಆತ್ನಹತ್ಯೆಗೆ ಶರಣಾದ ದಂಪತಿ. ಈ ಇಬ್ಬರೂ ಮೂರು ದಿನಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ನಟರಾಜ್‍ಗೆ ಮೊದಲ ಪತ್ನಿ ತೀರಿ ಹೋಗಿದ್ದು 15 ವರ್ಷದ ಮಗ ಕೂಡ ಇದ್ದನು. ಹೀಗಾಗಿ ಪಲ್ಲವಿ ಪೋಷಕರು ಎರಡನೇ ಮದುವೆಯಾಗಿದ್ದಕ್ಕೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

    ಯುವತಿಯ ಪೋಷಕರ ಕಿರುಕುಳಕ್ಕೆ ಬೇಸತ್ತು ನವದಂಪತಿ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ತಂದೆ ನಟರಾಜ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ನೋಡಿ ಮನನೊಂದ ಮಗ ಪ್ರದೀಪ್ ಕೂಡ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

    ಈ ಸಂಬಂಧ ದಾವಣಗೆರೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರವಾಸಿಗರಿಂದ ನೀರಿನ ಬಾಟಲ್ ಕಸಿದು ದಾಹ ತೀರಿಸಿಕೊಳ್ಳೋಕೆ ಪರದಾಡೋ ಕೋತಿಗಳು- ಮನಕಲಕುವ ವಿಡಿಯೋ ನೋಡಿ

    ಪ್ರವಾಸಿಗರಿಂದ ನೀರಿನ ಬಾಟಲ್ ಕಸಿದು ದಾಹ ತೀರಿಸಿಕೊಳ್ಳೋಕೆ ಪರದಾಡೋ ಕೋತಿಗಳು- ಮನಕಲಕುವ ವಿಡಿಯೋ ನೋಡಿ

    ಬಳ್ಳಾರಿ: ಮಂಗಗಳು ಅಂದ್ರೆ ಬರೀ ಕಪಿಚೇಷ್ಟೆ ಮಾಡ್ತವೆ, ಕೈಯಲ್ಲಿನ ವಸ್ತುಗಳನ್ನು ಕಸಿದುಕೊಂಡು ಕಪಿಗಳು ಕಾಟ ಕೊಡ್ತವೆ ಎಂದು ಎಲ್ಲರೂ ಹೇಳ್ತಾರೆ. ದೇವಸ್ಥಾನಕ್ಕೆ ಬರೋ ಭಕ್ತರು, ಪ್ರವಾಸಿಗರ ಕೈಯಲ್ಲಿನ ಹಣ್ಣು ಕಾಯಿಗಳನ್ನು ಕಸಿದುಕೊಳ್ಳೋದನ್ನು ನೀವೂ ನೋಡಿರಬಹುದು. ಆದ್ರೆ ಹಂಪಿಗೆ ಬರುವ ಪ್ರವಾಸಿಗರ ಕೈಯಲ್ಲಿನ ನೀರಿನ ಬಾಟಲಿಗಳನ್ನು ಮಂಗಗಳು ಕಸಿದುಕೊಂಡು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿವೆ.

    ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷ ದೇವರ ಸನ್ನಿಧಾನದಲ್ಲಿ ಮಂಗಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ದೃಶ್ಯ ಕಾಣಸಿಗುತ್ತದೆ. ವಿರೂಪಾಕ್ಷೇಶ್ವರ ದೇವಾಲಯದ ಸಮೀಪ ಇರೋ ನೂರಾರು ಮಂಗಗಳು ನಿತ್ಯ ಪ್ರವಾಸಿಗರು ಕೈಯ್ಯಲ್ಲಿ ಹಿಡಿದು ಬರೋ ಬಾಟಲ್ ನೀರಿಗಾಗಿ ಕಾದು ಕುಳಿತಿರುತ್ತವೆ. ಬಾಟಲಿ ಕಂಡ ಕೂಡಲೇ ಕಸಿದುಕೊಂಡು ಬಾಯಾರಿಕೆ ತೀರಿಸಿಕೊಳ್ಳುತ್ತವೆ.

    ಮಂಗಗಳು ಕುಡಿಯುವ ನೀರಿಗೆ ಪರದಾಡೋದನ್ನು ನೋಡೋ ಪ್ರವಾಸಿಗರು ಸಹ ತಾವು ಕುಡಿಯಲು ತಂದ ನೀರನ್ನು ಮಂಗಗಳಿಗೆ ಕುಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

    https://youtu.be/Vfx7lMJP7jA

     

  • ನೀರು ಅರಸಿ ಟ್ಯಾಂಕ್‍ಗೆ ಇಳಿದ 14 ಮಂಗಗಳು ಸಾವು: ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ

    ನೀರು ಅರಸಿ ಟ್ಯಾಂಕ್‍ಗೆ ಇಳಿದ 14 ಮಂಗಗಳು ಸಾವು: ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ

    ರಾಯಚೂರು: ಬರಗಾಲದ ಬೇಸಿಗೆ ಹಿನ್ನೆಲೆ ನೀರು ಅರಿಸಿ ಗ್ರಾಮಕ್ಕೆ ಬಂದ ವಾನರ ಸೈನ್ಯ ನೀರು ಇಲ್ಲದೆ, ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಪ್ರಾಣವನ್ನೇ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಗಧಾರ್ ಗ್ರಾಮದಲ್ಲಿ ನಡೆದಿದೆ.

    ಮಂಗನಿಂದ ಮಾನವ ಅಂತಾರೆ, ಮಂಗಗಳನ್ನ ದೇವರಿಗೂ ಹೋಲಿಸ್ತಾರೆ ಆದ್ರೆ, ಮಾನವನ ಯಡವಟ್ಟಿನಿಂದ ಮಂಗಗಳ ಮಾರಣಹೋಮವೇ ನಡೆದಂತಾಗಿದೆ. ಒಂದಲ್ಲ ಎರಡಲ್ಲಾ 14 ಮಂಗಗಳು ಜಿಲ್ಲಾ ಪಂಚಾಯ್ತಿ ಯಡವಟ್ಟಿನಿಂದ ಚಿತ್ರಹಿಂಸೆ ಅನುಭವಿಸಿ ಸಾವನ್ನಪ್ಪಿವೆ.

    ಆಹಾರವಿಲ್ಲದೇ ಮೃತಪಟ್ಟ ವಾನರ ಸೈನ್ಯ: ಸುಮಾರು 15 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಮಂಗಗಳು ನೀರನ್ನ ಹರಿಸಿ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ನೀರಿನ ಟ್ಯಾಂಕ್ ಹತ್ತಿವೆ. ಟ್ಯಾಂಕ್ ನಿರ್ಮಾಣಗೊಂಡು ವರ್ಷವಾದ್ರೂ ಸಾರ್ವಜನಿಕರಿಗೆ ನೀರು ಹರಿಸದೆ ಜಿಲ್ಲಾಪಂಚಾಯ್ತಿ ಕನಿಷ್ಠ ಟ್ಯಾಂಕ್‍ನ ಮ್ಯಾನ್ ಹೋಲ್‍ನ್ನೂ ಮುಚ್ಚಿರಲಿಲ್ಲ. ಹೀಗಾಗಿ ಅಲ್ಪಸ್ವಲ್ಪ ನಿಂತಿದ್ದ ನೀರನ್ನ ಕುಡಿಯಲು ಮಂಗಗಳು ಒಂದಾದ ಮೇಲೊಂದರಂತೆ ಟ್ಯಾಂಕಿನೊಳಗೆ ಜಿಗಿದಿವೆ. ಆದ್ರೆ ಮೇಲೆರಲು ಏಣಿ ಸೇರಿದಂತೆ ಯಾವುದೇ ವ್ಯವಸ್ಥೆಯಿಲ್ಲದ ಹಿನ್ನೆಲೆ ನೀರು, ಆಹಾರವಿಲ್ಲದೆ ಮಂಗಗಳು ಟ್ಯಾಂಕ್‍ನಲ್ಲೇ ಸಾವನ್ನಪ್ಪಿವೆ.

    ಮಂಗಗಳ ಸಾವಿನ ಪಶ್ಚಾತಾಪಕ್ಕೆ ಗ್ರಾಮದ ಜನ ಮೃತ ಮಂಗಗಳಿಗೆ ಮಾನವರಂತೆ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಮಂಗಳು ಸಾವನ್ನಪ್ಪುವುದು ಗ್ರಾಮಕ್ಕೆ ಕೆಡುಕನ್ನ ತರುತ್ತದೆ ಅಂತ ಇದೀಗ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

    ಇದನ್ನೂ ಓದಿ: ಅಪಘಾತದಲ್ಲಿ ಸಾವಿಗೀಡಾದ ಕೋತಿಗೆ 11 ದಿನದ ಬಳಿಕ ತಿಥಿ!

    ಏಪ್ರಿಲ್ 29 ರಂದು ಬಸವ ಜಯಂತಿಯ ದಿನ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುತ್ತಿತ್ತು, ಆಗ ಶಬ್ದಕ್ಕೆ ಹೆದರಿ ಟ್ಯಾಂಕನೊಳಗೆ ಮಂಗಗಳು ಜಿಗಿದಿರಬಹುದು ಅಂತಲೂ ಗ್ರಾಮಸ್ಥರು ಹೇಳುತ್ತಿದ್ದಾರೆ. ಆದ್ರೆ ದಿನದಿಂದ ದಿನಕ್ಕೆ ಕೊಳೆತ ಕೆಟ್ಟ ವಾಸನೆ ಗ್ರಾಮದಲ್ಲಿ ಹರಡುತ್ತಿದ್ದಂತೆ ವಾಸನೆಯ ಮೂಲ ಹುಡುಕಿದಾಗ ಮಂಗಗಳು ಸಾವನ್ನಪ್ಪಿರುವುದು ಬಯಲಾಗಿದೆ. ಮಂಗಗಳು ಕಾಣೆಯಾಗಿದ್ದರಿಂದ ಕಾಟ ತಪ್ಪಿತು ಅಂದುಕೊಂಡಿದ್ದ ಗ್ರಾಮಸ್ಥರಿಗೆ ಮಂಗಗಳ ಸಾವು ನಿಜಕ್ಕೂ ಶಾಕ್ ನೀಡಿದೆ. ಮಂಗಗಳ ಅಂತ್ಯ ಸಂಸ್ಕಾರ ವೇಳೆ ಬದುಕುಳಿದ ವಾನರಗಳು ಇಣುಕುತ್ತಿದ್ದದ್ದು ಎಂತವರಿಗೂ ಮನಕಲುಕುವಂತಿತ್ತು.

    ಒಟ್ನಲ್ಲಿ, ಟ್ಯಾಂಕ್ ನಿರ್ಮಿಸಿದ ಗುತ್ತಿಗೆದಾರ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಕ ಪ್ರಾಣಿಗಳು ಬಲಿಯಾಗಿವೆ. ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದರು ಸರಿಯಾಗಿ ನೀರು ಸರಬರಾಜು ಮಾಡಲಾಗದ ಜಿಲ್ಲಾಪಂಚಾಯ್ತಿ ಈಗ ಮಂಗಗಳ ಮಾರಣಹೋಮಕ್ಕೂ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

     

  • ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

    ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ

    ಬೆಳಗಾವಿ: ಜಿಲ್ಲೆಯ ಅರಸಗಿ ಗ್ರಾಮದಲ್ಲಿ ಮಂಗವೊಂದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಸಾಕು ಪ್ರತ್ಯಕ್ಷವಾಗುವ ಮಂಗ ಕಳೆದ 6 ತಿಂಗಳಿಂದ ಸುಮಾರು 80ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.

    ಇತ್ತೀಚಿಗಷ್ಟೆ ಟ್ರ್ಯಾಕ್ಟರ್‍ನಲ್ಲಿ ಸುರಕ್ಷತೆಗಾಗಿ ಕಟ್ಟಿಗೆ ತೆಗೆದುಕೊಂಡು ಹೋಗ್ತಿದ್ದ ರೈತನ ಮೇಲೂ ಮಂಗ ಮಾರಣಾಂತಿಕ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನು ಕೆಲಸಕ್ಕಾಗಿ ಹೊರಬರಲೇಬೇಕಾದ ಜನರು ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುವಂತಾಗಿದೆ.

    ಮಂಗನ ಕೀಟಲೆಯಿಂದ ತತ್ತರಿಸಿ ಹೋಗಿರುವ ಗ್ರಾಮಸ್ಥರು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಮಂಗನ ಸೆರೆಗೆ ಎಷ್ಟೇ ಪ್ರಯತ್ನಿಸಿದ್ರೂ ಮಂಗ ಮಾತ್ರ ಕೈಗೆ ಸಿಕ್ಕಿಲ್ಲ. ಮಂಗನ ಹಾವಳಿಯಿಂದ ಅಗಸಗಿ ಗ್ರಾಮದ ಜನರು ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ.

     

  • ನೀರು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿತು ಕೋತಿ!

    ನೀರು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿತು ಕೋತಿ!

    ಧಾರವಾಡ: ಜಿಲ್ಲೆಯಲ್ಲಿ ಈ ಬಾರಿ ಎಲ್ಲಿ ನೋಡಿದ್ರೂ ಬಿರುಕು ಬಿಟ್ಟ ಭೂಮಿ, ನೆತ್ತಿಯ ಮೇಲೆ ಮೈಸುಡುವ ಬಿಸಿಲು, ಎಲ್ಲಿ ನೋಡಿದ್ರು ಬತ್ತಿ ಹೋದ ಕೆರೆ ಕಟ್ಟೆಗಳು. ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ. ಈ ನಡುವೆ ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಕೋತಿಯೊಂದು ನೀರು ಕುಡಿಯುತ್ತಿದ್ದ ವೇಳೆ ನಾಯಿ ಕಚ್ಚಿ ಆಸ್ಪತ್ರೆ ಸೇರಿದೆ.

    ಕಳೆದ 5 ದಿನಗಳ ಹಿಂದೆ ಕೋತಿ ಬಾಲಕ್ಕೆ ಹಾಗೂ ಮೈಗೆ ನಾಯಿ ಕಚ್ಚಿದ್ದರ ಪರಿಣಾಮ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿರೋದನ್ನು ಕಂಡು ಧಾರವಾಡ ಲಕ್ಷ್ಮಿನಗರ ನಿವಾಸಿಯೊಬ್ಬರು ಸ್ನೇಕ್ ಎಲ್ಲಪ್ಪನವರಿಗೆ ಈ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಎಲ್ಲಪ್ಪ, ಕೋತಿಯನ್ನು ಕೃಷಿ ವಿವಿಯ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಈ ಕೋತಿಗೆ ಆಸ್ಪತ್ರೆ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ. ಕೋತಿಯ ಬಾಲದ ಗಾಯ ಹೆಚ್ಚಾಗಿದ್ದರಿಂದ ಬಾಲವನ್ನ ಕಡಿದು ಹಾಕಲಾಗಿದೆ. ಇನ್ನುಳಿದಂತೆ ಮೈಮೇಲೆ ಇದ್ದ ಗಾಯಗಳಿಗೆ ಕೂಡಾ ಔಷಧ ಹಚ್ಚಿದ ವೈದ್ಯರು, ಕೃಷಿ ವಿವಿಯ ಪಶು ಆಸ್ಪತ್ರೆಯಲ್ಲಿ ಕೋತಿಯನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. 4 ದಿನಗಳ ಕಾಲ ಇಲ್ಲೇ ಔಷಧೋಪಚಾರ ಪಡೆಯಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಕೋತಿಯನ್ನು ಮತ್ತೇ ಕಾಡಿನಲ್ಲಿ ಬಿಡುವುದಾಗಿ ಕೃಷಿ ವಿವಿ ಪಶು ಚಿಕಿತ್ಸೆಯ ವೈದ್ಯರಾದ ಎಎಸ್ ಪಾಟೀಲ್ ತಿಳಿಸಿದ್ದಾರೆ.

    ಇಂತಹ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಕೂಡಾ ನೀರಿನ ದಾಹ ತಿರಿಸಿಕೊಳ್ಳಲು ಬಂದು ಇಕ್ಕಟ್ಟಿಗೆ ಸಿಲುಕುತ್ತಿವೆ. ಸದ್ಯ ಪ್ರಾಣಿ ಪ್ರಿಯರೊಬ್ಬರು ಈ ಕೋತಿಗೆ ಪ್ರಾಣ ಉಳಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ.