ಕಲಬುರಗಿ: ಪ್ರಧಾನಿ ಮೋದಿ ಅವರೂ ಕರಿಮಣಿ ಮಾಲೀಕ (Karimani Malika) ಆಗಿದ್ದರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.
ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ (BJP) ನಿರೀಕ್ಷೆಗೆ ತಕ್ಕಷ್ಟು ಮತಗಳು ಬಂದಿಲ್ಲ. ಹಾಗಾಗಿ ವಿಶ್ವಗುರು ಅಂತ ಕರೆಸಿಕೊಳ್ಳುವ ಮೋದಿ ಹತಾಶರಾಗಿದ್ದಾರೆ. ಮೊದಲ ಹಂತದ ಮತದಾನದ ವೇಳೆ ಅಲ್ಪಸಂಖ್ಯಾತರ ಪರವಾಗಿದ್ದರು, ಮುಸ್ಲಿಮರ (Muslims) ಏಳಿಗೆ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ನಾಗಪುರ ಆರ್‌ಎಸ್‌ಎಸ್ ಕಚೇರಿಗೆ ಮೋದಿ ಹೋಗಿ ಬಂದ ಮೇಲೆ ಏನಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟಿದ್ದು ಭಾರತದಲ್ಲಿ, ಬೆಳೆದಿದ್ದು ಪಾಕಿಸ್ತಾನ – ಪಾಕ್ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ!
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಿಂದೂ ಮಹಿಳೆಯ ಮಂಗಳಸೂತ್ರ ಸಹ ಉಳಿಯೋದಿಲ್ಲ ಅಂತಾ ಮೋದಿ ಹೇಳಿದ್ದಾರೆ. ಸೋನಿಯಾ ಗಾಂಧಿ ದೇಶಕ್ಕಾಗಿ ತಮ್ಮ ತಮ್ಮ ಮಂಗಳ ಸೂತ್ರ ಬಲಿಕೊಟ್ಟರು. ಎಲ್‌ಟಿಟಿಯವರು ರಾಜೀವ್‌ಗಾಂಧಿ ಅವರನ್ನ ಹತ್ಯೆಮಾಡಿದರು. ಮೋದಿ ಅವರೂ ಕರಿಮಣಿ ಮಾಲೀಕ ಆಗಿದ್ರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಜನ ಚಿನ್ನ ಆಸ್ತಿ-ಪಾಸ್ತಿ ಮಾರಾಟ ಮಾಡಿದ್ದು ಮೋದಿಯ ಮಾಸ್ಟರ್ ಸ್ಟ್ರೋಕ್‌ಗಳಿಂದ, ಬೆಲೆ ಏರಿಕೆ, ಕೊರೊನಾ ವೇಳೆ ಚಿಕಿತ್ಸೆಗೋಸ್ಕರ ಜನ ತಮ್ಮ ಆಸ್ತಿ ಮಾರಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ
ಮೋದಿಯವರ ಭಾಷಣಕ್ಕೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ? ಅವರ ಭಾಷಣದಲ್ಲಿ ಬರೀ ರಾಮಮಂದಿರ, ಹನುಮಾನ್ ಚಾಲಿಸಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇವುಗಳ ಹೆಸರು ಬಿಟ್ಟರೆ ಬೇರೆನೂ ಬರುತ್ತಿಲ್ಲ. ಚುನಾವಣಾ ಆಯೋಗ ಸತ್ತು ಹೋಗಿದೆಯಾ? ಮೋದಿ ಅವರ ದ್ವೇಷದ ಭಾಷಣಗಳಿಗೆ ಚುನಾವಣಾ ಆಯೋಗದಿಂದ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ. ಸಾಕಷ್ಟು ದೂರುಗಳನ್ನ ಕೊಟ್ಟರೂ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ರೆ ನಮಗೆ ಮಾತ್ರ ತಕ್ಷಣವೇ ನೋಟೀಸ್ ಜಾರಿ ಮಾಡ್ತಾರೆ. ಎಲೆಕ್ಷನ್ ಕಮಿಷನ್‌ನನ್ನ ಕಿತ್ತು ಬಿಸಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 93.5% ಮಾರ್ಕ್ಸ್ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು
ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಜನರು ಮತ್ತು ಹೇಳಿಕೆಗಳು ಟ್ರೋಲ್‍ಗೊಳಗಾಗುತ್ತವೆ. ಇತ್ತೀಚೆಗೆ ಸಾಂಸರಿಕ ಜೀವನಕ್ಕೆ ಕಾಲಿರಿಸಿದ ನಟಿ ಸೋನಮ್ ಕಪೂರ್ ಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು. ಈಗ ಸೋನಮ್ ಕೈಗೆ ಕಟ್ಟಿಕೊಂಡಿರುವ ತಾಳಿಯ (ಮಂಗಳ ಸೂತ್ರ) ಫೋಟೋಗಳು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿವೆ.
ಮದುವೆ ಬಳಿಕ ಸೋನಮ್ ‘ವೀರೆ ದಿ ವೆಡ್ಡಿಂಗ್’ ಚಿತ್ರದ ಪ್ರಮೋಶನ್ ದಲ್ಲಿ ಬ್ಯೂಸಿಯಾಗಿದ್ದಾರೆ. ಭಾರತೀಯ ಮಹಿಳೆಯರು ಮಾಂಗಲ್ಯವನ್ನು ಕೊರಳಿಗೆ ಧರಿಸುವುದು ನಮ್ಮ ಸಂಸ್ಕೃತಿ. ಆದ್ರೆ ಸಿನಿಮಾ ಪ್ರಮೋಶನ್ ನಲ್ಲಿ ಕಾಣಿಸಿಕೊಂಡಿದ್ದ ಸೋನಮ್ ತಮ್ಮ ಮಾಂಗಲ್ಯವನ್ನು ಬ್ರೆಸಲೇಟ್ ರೀತಿಯಲ್ಲಿ ಕೈಗೆ ಕೊಟ್ಟಿಕೊಂಡಿದ್ರು. ಸದ್ಯ ಈ ಫೋಟೋಗಳು ವೈರಲ್ ಆಗಿದ್ದು ಸೋನಮ್ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಗೆ ಕಡ್ಡಾಯವಾಗಿ ಮಾಂಗಲ್ಯ ಧರಿಸಬೇಕೆಂಬ ನಿಯಮಗಳಿಲ್ಲ. ಆದ್ರೆ ದೇಶದಲ್ಲಿ ಪತಿ-ಪತ್ನಿಯ ನಡುವಿನ ಪ್ರೀತಿಯ ಸಂಕೇತವಾಗಿ ಮಾಂಗಲ್ಯ ಧರಿಸುವುದು ಸಂಪ್ರದಾಯ. ಮಹಿಳೆಯ ಎದೆಯ ನೇರ ಭಾಗಕ್ಕೆ ಮಾಂಗಲ್ಯ ಧರಿಸಿದ್ರೆ ಪತಿ ತನ್ನ ಹೃದಯದ ಹತ್ತಿರದಲ್ಲಿಯೇ ಇದ್ದಾನೆ ಎಂದರ್ಥ. ಆದ್ರೆ ಬಾಲಿವುಡ್ ಸ್ಟಾರ್ ಗಳು ಫ್ಯಾಶನ್ ಹೆಸರಲ್ಲಿ ಭಾರತೀಯ ಸಂಸ್ಕೃತಿಯನ್ನು ಪಾಶ್ಚತ್ಯಾರ ಶೈಲಿಯೊಂದಿಗೆ ಕಲಬೆರಕೆ ಮಾಡ್ತಿದ್ದಾರೆ ಎಂದು ಟ್ವಿಟ್ಟರ್‍ನಲ್ಲಿ ಹಲವರು ಟೀಕಿಸಿದ್ದಾರೆ.
ಅನಿಲ್ ಕಪೂರ್ ಮುದ್ದಿನ ಪುತ್ರಿ ಸೋನಮ್ ತಮ್ಮ ಬಹುದಿನಗಳ ಗೆಳೆಯ ಉದ್ಯಮಿಯೊಂದಿಗೆ ಆನಂದ್ ಅಹುಜಾ ಜೊತೆ ಮೇ 8ರಂದು ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು.