Tag: ಮಂಗಳ ಗ್ರಹ

  • ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

    ರಾಹುಲ್ ಮಂಗಳ ಗ್ರಹದಿಂದ ಬಂದಿದ್ದಾರೆ: ಕಂಗನಾ ಹೇಳಿಕೆಗೆ ‘ಕೈ’ ಕಾರ್ಯಕರ್ತರು ತಿರುಗೇಟು

    ಕಾಂಗ್ರೆಸ್ ಪಕ್ಷದ ಯುವ ನಾಯಕ, ಸಂಸದ ರಾಹುಲ್ ಗಾಂಧಿ ಅವರನ್ನು ಮಂಗಳ ಗ್ರಹದಿಂದ (Mars) ಬಂದಿರುವ ವ್ಯಕ್ತಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಟೀಕಿಸಿದ್ದರು. ಕಂಗನಾ ಮಾತಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಕಂಗನಾ ಅವರ ಅನೇಕ ಮಾತುಗಳನ್ನು ಟ್ರೋಲ್ ಮಾಡಿ, ನೀವು ಯಾವ ಗ್ರಹದಿಂದ ಬಂದಿದ್ದೀರಿ ಉತ್ತರಿಸಿ ಎಂದು ಕೇಳುತ್ತಿದ್ದಾರೆ.

    ಪದೇ ಪದೇ ರಾಹುಲ್ ಅವರನ್ನು ಕಂಗನಾ ಟಾರ್ಗೆಟ್ ಮಾಡುತ್ತಿದ್ದಾರೆ. ಈವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ (Nepotism) ಬಗ್ಗೆ ಮಾತನಾಡುತ್ತಿದ್ದ ಕಂಗನಾ ರಣಾವತ್, ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿರುವುದರಿಂದ, ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ. ಅದು ಕೇವಲ ಕಾಂಗ್ರೆಸ್ ಪಕ್ಷದೊಳಗಿನ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.

    ಮೊದಲಿನಿಂದಲೂ ನಾನು ಕಾಂಗ್ರೆಸ್ ಅನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕೆ ಕಾರಣ ಕುಟುಂಬ ರಾಜಕಾರಣ. ರಾಹುಲ್ ಗಾಂಧಿ (Rahul Gandhi) ಹೆಸರನ್ನು ನೇರವಾಗಿಯೇ ತಗೆದುಕೊಳ್ಳುತ್ತೇನೆ. ಈ ನೆಪೋಟಿಸಂ ಅಂತ್ಯವಾಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಕಂಗನಾ ರಣಾವತ್ ಕಟು ನುಡಿಯಲ್ಲೇ ಟೀಕೆ ಮಾಡಿದ್ದಾರೆ.

     

    ಸದ್ಯ ಲೋಕಸಭಾ ಅಖಾಡದಲ್ಲಿ ಕಸರತ್ತು ಮಾಡುತ್ತಿದ್ದಾರೆ ನಟಿ ಕಂಗನಾ ರಣಾವತ್. ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ (Shahrukh Khan) ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.

  • ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ವಾಷಿಂಗ್ಟನ್: ಸ್ಪೇಸ್‍ಎಕ್ಸ್ ಕಂಪನಿಯ ಸಿಇಒ ಎಲೋನ್ ಮಸ್ಕ್ ಒಂದು ಹೊಸ ಹೇಳಿಕೆಯನ್ನು ನೀಡುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಮುಂದೆ ನಡೆಯಬಹುದಾದ ಭವಿಷ್ಯದ ಸುಳಿವು ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಮಾನವನೂ ಮಂಗಳ ಗ್ರಹಕ್ಕೆ ಪ್ರಯಾಣ ಬೆಳೆಸಬಹುದು ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ.

    ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬೇಕೆಂಬ ಕನಸು ಹಲವು ವಿಜ್ಞಾನಿಗಳದ್ದು. ಈ ವಿಚಾರ ಹೊಸದೇನಲ್ಲ. ಕಳೆದ 2 ದಶಕಗಳಿಂದಲೂ ಇದರ ಬಗ್ಗೆ ಹಲವು ಅನ್ವೆಷಣೆಗಳೂ, ತಂತ್ರಜ್ಞಾನದ ಪರೀಕ್ಷೆಗಳೂ ನಡೆದಿವೆ. ಇದೀಗ ವಿಶ್ವದ ಅತ್ಯಂತ ಶ್ರೀಮಂತನ ಹೇಳಿಕೆಯಿಂದಾಗಿ ವಿಶ್ವವ್ಯಾಪಿ ಜನರು ಮುಂದೆ ನಡೆಯಬಹುದಾದ ಭವಿಷ್ಯವನ್ನು ನೋಡಲು ಕಾತುರರಾಗಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಸ್ಪೇಸ್‍ಎಕ್ಸ್‍ನ ಸ್ಟಾರ್‍ಶಿಪ್ ರಾಕೆಟ್‍ಗಳಲ್ಲಿನ ಬೆಳವಣಿಗೆಯ ಆಧಾರಗಳ ಮೇಲೆ ಎಲೋನ್ ಮಸ್ಕ್ ಈ ಸುಳಿವನ್ನು ನೀಡಿದ್ದು, ಕಂಪನಿಯ ಪ್ರಯತ್ನ ಎಷ್ಟೊಂದು ಗಂಭೀರವಾದುದು ಎಂಬುದನ್ನು ತಿಳಿಸುತ್ತದೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಸ್ಕ್‍ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಸ್ಪೇಸ್‍ಎಕ್ಸ್ ಮಂಗಳ ಗ್ರಹದ ಮೇಲೆ ಮಾನವನನ್ನು ಯಾವಾಗ ಹೊತ್ತೊಯ್ಯಬಹುದು ಎಂಬ ಪ್ರಶ್ನೆಗೆ ಮಸ್ಕ್ ಒಳ್ಳೆಯ ಸನ್ನಿವೇಶವಿದ್ದರೆ ಮುಂದಿನ 5 ವರ್ಷಗಳೊಳಗೆ ಮಾನವ ಮಂಗಳ ಗ್ರಹದೆಡೆ ಪ್ರಯಾಣಿಸಬಹುದು. ಅದೇ ಸನ್ನಿವೆಶ ಚೆನ್ನಾಗಿಲ್ಲವೆಂದಾದಲ್ಲಿ ಈ ಸಮಯಾವಕಾಶ 10 ವರ್ಷಗಳ ವರೆಗೆ ವಿಸ್ತರಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ಮಂಗಳ ಗ್ರಹದ ಮೇಲೆ ಮನುಷ್ಯರು ಇಳಿಯುವ ಬಗ್ಗೆ ಎಲೋನ್ ಮಸ್ಕ್ ಹೇಳಿಕೆ ನೀಡಿರುವುದು ಇದು ಮೊದಲೇನಲ್ಲ. ಈ ತಿಂಗಳಿನ ಪ್ರಾರಂಭದಲ್ಲಿಯೂ ಸಂದರ್ಶನವೊಂದರಲ್ಲಿ ನಾವು 5 ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಇಳಿಯದಿದ್ದರೆ ನನಗೇ ಆಶ್ಚರ್ಯವಾಗುತ್ತದೆ ಎಂದು ಮಸ್ಕ್ ಹೇಳಿಕೆ ನೀಡಿದ್ದರು.

  • ಮಂಗಳ ಗ್ರಹದಲ್ಲಿ ಮೂರು ಮನೆ ನಿರ್ಮಾಣದ ನಕ್ಷೆ ಅಂತಿಮ

    ಮಂಗಳ ಗ್ರಹದಲ್ಲಿ ಮೂರು ಮನೆ ನಿರ್ಮಾಣದ ನಕ್ಷೆ ಅಂತಿಮ

    ವಾಷಿಂಗ್ಟನ್: ಮಂಗಳ ಗ್ರಹದಲ್ಲಿಯ ಜೀವ ಸಂಕುಲದ ಕುರಿತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (National Aeronautics and Space Administration) ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಬಂದಿದೆ. ಇದೀಗ ನಾಸಾ ಮಂಗಳ ಗ್ರಹದ ಮೇಲೆ ನಿರ್ಮಿಸಲು ನಿರ್ಧರಿಸಿರುವ ಮೂರು ಮನೆಗಳ ತ್ರೀಡಿ ನೀಲ ನಕ್ಷೆಯನ್ನು ಅಂತಿಮಗೊಳಿಸಿದೆ.

    ‘3 ಡಿ ಪ್ರಿಂಟೆಂಡ್ ಹೆಬಿಟೆಟ್ ಚಾಲೆಂಜ್’ ಎಂಬ ಸ್ಪರ್ಧೆಯನ್ನು ನಾಸಾ 2015ರಿಂದ ಆರಂಭಿಸಿತ್ತು. ಈ ಸ್ಪರ್ಧೆಯಲ್ಲಿ ಮೂರು ಅಂತಿಮ ಸ್ಪರ್ಧಿಗಳ ಹೆಸರನ್ನು ಅಂತಿಮ ಮಾಡಲಾಗಿದೆ. ಈ ಸ್ಪರ್ಧೆಯ ಸ್ಪರ್ಧಿಗಳು ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ವಾಸಿಸಲು ಯೋಗ್ಯ ಮನೆಗಳ ನಿರ್ಮಿಸಲು ತಂತ್ರಜ್ಞಾನವನ್ನು ಸಿದ್ಧಪಡಿಸಬೇಕಿತ್ತು.

    ಮಾಡಲಿಂಗ್ ಸಾಫ್ಟವೇರ್ ತಂತ್ರಜ್ಞಾನ: ಸ್ಪರ್ಧೆಯ ಮೂರನೇ ಹಂತಕ್ಕೆ ಆಯ್ಕೆಯ ಮೊದಲು ಅಂದರೇ ನಾಲ್ಕನೇ ಹಂತದಲ್ಲಿ 11 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ತಂಡಗಳು ಕಿರು ವಿಡಿಯೋಗಳ ಮೂಲಕ ತಮ್ಮ ತಂತ್ರಜ್ಞಾನವನ್ನು ಪರಿಚಯಿಸಬೇಕಿತ್ತು. ಮನೆ ನಿರ್ಮಾಣದ ನೀಲ ನಕ್ಷೆ, ಲೇಔಟ್, ಒಳಗಡೆಯ ತಂತ್ರಜ್ಞಾನವನ್ನು ವೀಕ್ಷಕರಿಗೆ (ತೀರ್ಪುಗಾರರು) ತಿಳಿಸಬೇಕಿತ್ತು. ಇಲ್ಲಿಯ ತೀರ್ಪುಗಾರರು ಎಲ್ಲ ತಂಡಗಳಿಗೆ ತಂತ್ರಜ್ಞಾನ, ವಿನ್ಯಾಸ, ಪ್ರಾಯೋಗಿಕವಾಗಿ ಎಷ್ಟು ಸರಿ, ಉಪಯುಕ್ತತೆ ಎಂಬಿತ್ಯಾದಿ ಅಂಶಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಿದೆ.

    ಟಾಪ್ ಮೂವರಿಗೆ ಬಹುಮಾನ:
    ನ್ಯೂಯಾರ್ಕ್ ಮೂಲದ ‘ಸರ್ಚ್ ಪ್ಲಸ್/ಎಪಿಸ್ ಕಾರ್’ ತಮ್ಮ ವಿಭಿನ್ನ ತಂತ್ರಜ್ಞಾನವನ್ನು ಪ್ರಸ್ತುತ ಪಡಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. ಮಾಡ್ಯೂಲರ್ ವಿಜ್ಞಾನದ ತಂತ್ರಜ್ಞಾನ ಪಸ್ತುತಪಡಿಸಿದ್ದ ‘ಜಾಪರಹಾಂಸ್’ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಬಹುಮಾನದ ಮೊತ್ತ 1 ಲಕ್ಷ ಡಾಲರ್ (69.35 ಲಕ್ಷ ರೂ) ಹಣವನ್ನು ಸಮಾನವಾಗಿ ಹಂಚಲಾಗಿದೆ.

    ಮತ್ತೊಂದು ಸುತ್ತು ಮೇ ತಿಂಗಳಲ್ಲಿ ಆರಂಭವಾಗಲಿದೆ. ವಿಜೇತ ತಂಡಗಳು ಈ ಹಂತದಲ್ಲಿ 3ಡಿ ಪ್ರಿಂಟ್ ಸ್ಕೇಲ್ ಮಾಡೆಲ್ ತಯಾರಿಸಲಿವೆ. ಈ ಸುತ್ತಿನಲ್ಲಿರುವ ತಂಡಗಳಿಗೆ 8 ಲಕ್ಷ ಡಾಲರ್ (5.55 ಕೋಟಿ ರೂ.) ಪ್ರೋತ್ಸಾಹ ಧನ ಸಿಗಲಿದೆ. ಈ ಸಂಶೋಧನೆ ಸಹಾಯದಿಂದ ಚಂದ್ರ ಮತ್ತು ಮಂಗಳ ಗ್ರಹ ಪ್ರವಾಸಕ್ಕೆ ಜನರನ್ನು ಕಳುಹಿಸಲು ಸಹಾಯಕಾರಿಯಾಗಲಿದೆ.

  • ಮಂಗಳನ ಅಂಗಳದಲ್ಲಿ ಹಾರಲಿದೆ ಹೆಲಿಕಾಪ್ಟರ್!

    ಮಂಗಳನ ಅಂಗಳದಲ್ಲಿ ಹಾರಲಿದೆ ಹೆಲಿಕಾಪ್ಟರ್!

    ವಾಷಿಂಗ್ಟನ್:2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ರೋವರ್ ಗಗನನೌಕೆಯ ಜೊತೆಗೆ ಹೆಲಿಕಾಪ್ಟರ್ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ.

    ತನ್ನ ಮುಂದಿನ ಮಾರ್ಸ್ 2020 ರೋವರ್ ಮಿಷನ್ ಯೋಜನೆಯ ಭಾಗವಾಗಿ ಸಣ್ಣ ಸ್ವತಂತ್ರವಾದ ಹೆಲಿಕಾಪ್ಟರ್ ಅನ್ನು ಮಂಗಳ ಗ್ರಹದಲ್ಲಿ ಇಳಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಮಂಗಳ ಗ್ರಹಕ್ಕೆ ತಲುಪಿದ ನಂತರ ಮೊದಲ 30 ದಿನ ಗ್ರಹದ ಮೆಲ್ಮೈ ಮೇಲೆ ಸುಗಮ ಹಾರಾಟಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅನ್ಯ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸುವ ಯೋಜನೆ ಕುತೂಹಲವನ್ನು ಸೃಷ್ಟಿ ಮಾಡಿದೆ. ಭವಿಷ್ಯದ ವಿಜ್ಞಾನಕ್ಕೆ ಹಾಗೂ ಮಂಗಳ ಗ್ರಹದ ಕುರಿತಾದ ಅನ್ವೇಷಣೆಗೆ ಈ ಯೋಜನೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

    ಮಂಗಳ ಗ್ರಹಕ್ಕೆ ಕಳುಹಿಸುವ ಹೆಲಿಕಾಪ್ಟರ್ ನ ತಯಾರಿ 2013 ರಲ್ಲಿ ಕ್ಯಾಲಿಫೋರ್ನಿಯದ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್)ಯಲ್ಲಿ ಶುರುವಾಗಿದೆ. 4 ಎಲ್‍ಬಿ ಎಸ್ (1.8 ಕೆಜಿ) ತೂಕವಿದ್ದು, ಇದರ ಮುಖ್ಯಭಾಗ ಚೆಂಡಿನ ಆಕಾರದಲ್ಲಿ ಇರಲಿದೆ. ಸೋಲಾರ್ ಸೆಲ್ ಗಳ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು ತಣ್ಣಗಿನ ರಾತ್ರಿಯ ಸಂದರ್ಭಕ್ಕೆ ಯಾಂತ್ರಿಕ ತಾಪಮಾನ ವ್ಯವಸ್ಥೆಯನ್ನು ಮಾಡಲಾಗಿದೆ.

    ಮಂಗಳ ಗ್ರಹದ ತೆಳುವಾದ ವಾತಾವರಣದಲ್ಲಿ ಹಾರಲು ಹೆಲಿಕಾಪ್ಟರ್ ನ ಬ್ಲೇಡ್ ಗಳು ಭೂಮಿಯ ಮೇಲೆ ತಿರುಗುವ 10 ಪಟ್ಟು ವೇಗವಾಗಿ ತಿರುಗಲಿವೆ. ಭೂಮಿಯ ಮೇಲೆ ಗರಿಷ್ಠ 40 ಸಾವಿರ (12 ಸಾವಿರ ಮೀ) ಅಡಿಗಳ ಮೇಲೆ ಹಾರಾಟ ಮಾಡಬಲ್ಲದಾಗಿದೆ. ಭೂಮಿಯ ವಾತಾವರಣದ 1% ರಷ್ಟು ವಾತಾವರಣ ಮಂಗಳನ ಮೇಲಿದೆ ಎಂದು ತಿಳಿಸಿದರು.

    ತೆಳುವಾದ ವಾತಾವರಣದಲ್ಲಿ ಹಾರಾಡುವ ಹೆಲಿಕಾಪ್ಟರ್ ಶಕ್ತಿಶಾಲಿಯಾಗಿ, ಬಲಶಾಲಿಯಾಗಿ ಇರಬೇಕಾಗಿದ್ದು ತೂಕ ಕಡಿಮೆ ಇರಬೇಕಾಗುತ್ತದೆ ಹಾಗಾಗಿ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ನಾಸಾ ಅಧಿಕಾರಿ ಮಿಮಿ ಅಂಗ್ ಹೇಳಿದ್ದಾರೆ.

    ರೋವರ್ ಗೆ ಅಂಟಿಕೊಂಡು ಹೆಲಿಕಾಪ್ಟರ್ ಹಾರಲಿದೆ. ಮಂಗಳ ಗ್ರಹಕ್ಕೆ ತಲುಪಿದ ನಂತರ ಹೆಲಿಕಾಪ್ಟರ್ ಅನ್ನು ಒಂದು ಜಾಗದಲ್ಲಿ ಇರಿಸಿ ಅಲ್ಲಿಂದ ಸ್ವಲ್ಪ ದೂರದಲ್ಲಿ ರೋವರ್ ನಿಲ್ಲಲಿದೆ. ವಿಜ್ಞಾನಿಗಳು ಇಲ್ಲಿಂದ ರೋವರ್ ಅನ್ನು ನಿರ್ದೇಶಿಸುವ ಮೂಲಕ ಹೆಲಿಕಾಪ್ಟರ್ ಅನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

    ಹೆಲಿಕಾಪ್ಟರ್ ಯೋಜನೆ ಸಾಹಸದ ಕೆಲಸ ಆದರೆ ಅದರಿಂದ ಅಷ್ಟೇ ಸಹಾಯವಾಗಲಿದೆ. ಒಂದು ವೇಳೆ ಹೆಲಿಕಾಪ್ಟರ್ ಕಾರ್ಯ ನಿರ್ವಹಿಸದಿದ್ದರೂ 2020 ರೋವರ್ ಮಿಷನ್ ಗೆ ಅಡ್ಡಿಯಿಲ್ಲ ಎಂದು ಧೃಡಪಡಿಸಿದ್ದಾರೆ. ಹೆಲಿಕಾಪ್ಟರ್ ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಗ್ರಹದ ಎಲ್ಲಾ ಭಾಗಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.