Tag: ಮಂಗಳೂರು ವಿಶ್ವವಿದ್ಯಾಲಯ

  • ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಶಂಕೆ – ಇಡಿ ವಿಚಾರಣೆ

    ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಶಂಕೆ – ಇಡಿ ವಿಚಾರಣೆ

    – ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವದಲ್ಲೇ ಪ್ರಶ್ನೆಪತ್ರಿಕೆ ಮಾರಾಟವಾಗಿರುವ ಅನುಮಾನ
    – ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ವಿಚಾರಣೆ

    ಮಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಮಂಗಳೂರು ವಿವಿ (Mangaluru University) ನೇರವಾಗಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಪರೀಕ್ಷಾ ಪೂರ್ವದಲ್ಲೇ ಕೋಚಿಮುಲ್ (Kochimul) ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ ಅನ್ನೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ (ಜ.20) ಮಂಗಳೂರು ವಿವಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡ ಭೇಟಿ ನೀಡಿ ತೀವ್ರ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲೂಕಿನ ಕೊಣಾಜೆಯಲ್ಲಿರುವ ಮಂಗಳೂರು ವಿವಿಗೆ ಇ.ಡಿ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಅವರನ್ನ ವಿಚಾರಣೆ ನಡೆಸಿದೆ. ಇದನ್ನೂ ಓದಿ: ರಾಮಮಂದಿರದ ಮಂಡಲೋತ್ಸವ ಪೂಜೆಗೆ ರಾಯಚೂರಿನ ವೈದಿಕರಿಬ್ಬರು ಆಯ್ಕೆ

    ಕೋಚಿಮುಲ್ ನೇಮಕಾತಿ ಹಗರಣ ಸಂಬಂಧ ಈ ಹಿಂದೆಯೇ ವಿವಿ ಪರೀಕ್ಷಾಂಗ ಕುಲಸಚಿವರಿಗೆ ನೋಟಿಸ್ ನೀಡಲಾಗಿತ್ತು. ಶನಿವಾರ ವಿವಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ವಿವಿ ಅಧಿಕಾರಿಗಳೇ ಅಭ್ಯರ್ಥಿಗಳಿಗೆ ಲಕ್ಷಾಂತರ ರೂ.ಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ವಿವಿ ಅಧಿಕಾರಿಗಳ ಇ-ಮೇಲ್, ದೂರವಾಣಿ ಕರೆಗಳ ವಿವರ ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ತೀವ್ರ ತಪಾಸಣೆ ನಡೆಸಿದೆ. ಇದನ್ನೂ ಓದಿ: ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

  • ಮಂಗಳೂರು ವಿವಿಯಲ್ಲಿ ರಾಜ್ಯಪಾಲರಿಂದ ಅಂಬೇಡ್ಕರ್ ಪ್ರತಿಮೆ ಅನಾವರಣ

    ಮಂಗಳೂರು ವಿವಿಯಲ್ಲಿ ರಾಜ್ಯಪಾಲರಿಂದ ಅಂಬೇಡ್ಕರ್ ಪ್ರತಿಮೆ ಅನಾವರಣ

    ಮಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawarchand Gehlot ) ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ(Mangalore University) ಆವರಣದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್(B R Ambedkar) ಅವರ 9 ಅಡಿ ಉದ್ದದ ಪ್ರತಿಮೆಯನ್ನು ಅನಾವರಣಗೊಳಿಸಿದರು.

    ನಂತರ ಮಾತನಾಡಿದ ಅವರು, ಭಾರತ ರತ್ನ, ಸಂವಿಧಾನ ತಯಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ನ್ಯಾಯಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕ ಡಾ. ಬಿ.ಆರ್. ಆರ್. ಇಂದು ಅಂಬೇಡ್ಕರ್ ಅವರ ಪುಣ್ಯತಿಥಿ ದಿನದಂದು ಅವರಿಗೆ ನಮನ ಸಲ್ಲಿಸುತ್ತೇನೆ. ನಮ್ಮ ದೇಶಕ್ಕಾಗಿ ಅವರ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವಿದು. ನಮ್ಮ ಇತಿಹಾಸ ಪುರುಷ, ದೇಶಪ್ರೇಮಿ, ದೇಶದ ಹೆಮ್ಮೆಯ ಬಾಬಾ ಸಾಹೇಬರ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ಸಿಕ್ಕಿರುವುದಕ್ಕೆ ಇಂದು ನನಗೆ ಹೆಮ್ಮೆಯಾಗುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಮಹಾಪರಿನಿರ್ವಾಣ ದಿವಸ್’ ಈ ಸಂದರ್ಭದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಈ ಯೋಜನೆಯನ್ನು ನಾನು ಪ್ರಶಂಸಿಸುತ್ತೇನೆ ಮತ್ತು ವಿಶ್ವವಿದ್ಯಾನಿಲಯ ಆಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದ ತಾಳ್ಮೆ ಪರೀಕ್ಷಿಸಬೇಡಿ – ಕರ್ನಾಟಕಕ್ಕೆ ಪವಾರ್‌ ಎಚ್ಚರಿಕೆ

    ಬಾಬಾಸಾಹೇಬ್ ಅಂಬೇಡ್ಕರ್ ಒಬ್ಬ ವ್ಯಕ್ತಿಯಾಗಿ, ನಿರ್ಣಯಕ್ಕೆ ಮತ್ತೊಂದು ಹೆಸರಾಗಿದ್ದರು. ತಮ್ಮ ಜೀವನವನ್ನು ಹೋರಾಟದಲ್ಲಿ ಕಳೆಯುತ್ತಿದ್ದರು. ಬಾಬಾ ಸಾಹೇಬರು ಹೇಳುತ್ತಿದ್ದರು – ವಿದ್ಯಾವಂತರಾಗಿ, ಸಂಘಟಿತರಾಗಿ, ಹೋರಾಟ ಮಾಡಿ. ಅವರು ಸಾಮಾಜಿಕ ಸಮಾನತೆ, ಸಾಮಾಜಿಕ ನ್ಯಾಯದ ಪರವಾಗಿದ್ದರು, ಅವರು ಆರ್ಥಿಕ ಸಮೃದ್ಧಿಯ ಪರವಾಗಿದ್ದರು, ಅವರು ಆಧುನಿಕ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ಪರವಾಗಿದ್ದರು. ಗೌರವಾನ್ವಿತ ಬಾಬಾ ಸಾಹೇಬರ ಜೀವನವು ತ್ಯಾಗ, ಕಠಿಣ ಪರಿಶ್ರಮ ಮತ್ತು ತಪಸ್ಸಿನಿಂದ ತುಂಬಿದೆ. ಅವರ ಮಾತು, ನಡವಳಿಕೆ, ನಾಯಕತ್ವ ಶಕ್ತಿ, ಸಂಘಟನೆ-ಕೌಶಲ್ಯ, ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಪ್ರವೃತ್ತಿ ಮತ್ತು ಅವರ ಅಪ್ರತಿಮ ಪಾಂಡಿತ್ಯ ಎಲ್ಲರಿಗೂ ಚಿರಪರಿಚಿತ ಎಂದು ಹೇಳಿದರು.

    ಅಂಬೇಡ್ಕರ್‌ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸರ್ವಧರ್ಮ ಸಮಾನತೆಯ ಆಧಾರದ ಮೇಲೆ ರಾಜ್ಯ ವ್ಯವಸ್ಥೆಯ ಅಡಿಪಾಯವನ್ನು ಹಾಕಿ, ದೇಶದಲ್ಲಿ ಸಾಮಾಜಿಕ ಸಾಮರಸ್ಯವನ್ನು ತರಲು, ಆರ್ಥಿಕ ಅಸಮಾನತೆಗಳನ್ನು ತೊಡೆದುಹಾಕಲು ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಕೆಲಸ ಮಾಡಿದರು ಎಂದರು.

    ಅಂಬೇಡ್ಕರ್ ಅವರು ಭಾರತದ ಪ್ರಗತಿಗೆ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಸಂವಿಧಾನ ರಚನೆಕಾರರಾಗಿ ಅವರ ಕೊಡುಗೆಗೆ ಈ ದೇಶ ಸದಾ ಋಣಿಯಾಗಿರುತ್ತದೆ. ಆಧುನಿಕ ಭಾರತದ ಅಡಿಪಾಯವನ್ನು ಸಿದ್ಧಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಬಾಬಾಸಾಹೇಬರ ಪ್ರೇರಣೆಯಿಂದ ಅದೇ ತಳಹದಿಯ ಮೇಲೆ ನವ ಭಾರತವನ್ನು ಕಟ್ಟುತ್ತಿದ್ದೇವೆ. ಇಂದಿನ ಯುವ ಶಕ್ತಿ ಬಾಬಾಸಾಹೇಬರ ಕನಸುಗಳನ್ನು ನನಸು ಮಾಡುವ ಶಕ್ತಿ ಹೊಂದಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಛತ್ತೀಸ್‌ಗಢದ ತೋಟಗಾರಿಕೆ, ಅರಣ್ಯ ಹಾಗೂ ದುಗ್೯ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಮಾಜ ವಿಜ್ಞಾನ ಹಾಗೂ ಮಾಹೋ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಫ್ರೊ ಆರ್.ಎಸ್. ಕುರೀಲ್, ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೋ. ಪಿ. ಸುಬ್ರಮಣ್ಯ ಯಡಪಡಿತ್ತಾಯ, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಜೈಲಿನಲ್ಲಿದ್ದ ಪ್ರೇಮಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಸಿಕ್ಕಿ ಬಿದ್ದ ಮಂಗ್ಳೂರು ಎಂಸಿಜೆ ವಿದ್ಯಾರ್ಥಿನಿ!

    ಜೈಲಿನಲ್ಲಿದ್ದ ಪ್ರೇಮಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಸಿಕ್ಕಿ ಬಿದ್ದ ಮಂಗ್ಳೂರು ಎಂಸಿಜೆ ವಿದ್ಯಾರ್ಥಿನಿ!

    ಮಂಗಳೂರು: ಕೊಲೆ, ಕೊಲೆಯತ್ನ ಗಂಭೀರ ಪ್ರಕರಣದಡಿ ಜೈಲು ಸೇರಿರುವ ಕೈದಿಯೊಬ್ಬನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾಗ ಎಂಸಿಜೆ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವತಿ. ಪ್ರಿಯಕರನ್ನು ನೋಡಲು ಬಂದಿದ್ದ ಯುವತಿ 20 ಗ್ರಾಂ ಗಾಂಜಾ ಮತ್ತು ಮೊಬೈಲ್ ನೀಡುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿ ಆದ ಕಾರಣ ಪೋಷಕರಿಗೆ ಮಾಹಿತಿ ನೀಡಿ ಬಿಡುಗಡೆಗೊಳಿಸಿದ್ದಾರೆ.

    ವಾಮಂಜೂರಿನಲ್ಲಿ 2015ರಂದು ಚರಣ್ ಕೊಲೆ ಮತ್ತು ಹಫ್ತಾಕ್ಕಾಗಿ ಖಾಲಿದ್ ಎಂಬಾತನ ಕೊಲೆಯತ್ನ ಪ್ರಕರಣದ ಆರೋಪಿ ಮುಸ್ತಫ್ ಜೈಲು ಸೇರಿದ್ದ. ಮುಸ್ತಾಫ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ವಿಭಾಗದ (ಸುಳ್ಯ ಮೂಲದ) ಹುಡುಗಿಯನ್ನು ಪ್ರೀತಿಸುತ್ತಿದ್ದ.

    ಪ್ರಿಯಕರ ಮುಸ್ತಫ್ ಬಂಧನಕ್ಕೊಳಗಾಗಿ, ಮಂಗಳೂರಿನ ಜೈಲಿಗೆ ಹೋದ ಬಳಿಕವೂ ವಿದ್ಯಾರ್ಥಿನಿಗೆ ಅಲ್ಲಿಗೆ ಹೋಗಿ ಆಗಾಗ ಭೇಟಿ ಮಾಡುತ್ತಿದ್ದಳು. ಇದೇ ವೇಳೆ ಆಕೆ ಮುಸ್ತಫ್‍ಗೆ ಗಾಂಜಾ ಪ್ಯಾಕೆಟ್ ಪೂರೈಕೆ ಮಾಡುತ್ತಿದ್ದಾಳೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

    ಖಚಿತ ಮಾಹಿತಿ ಪಡೆದು ಪೊಲೀಸರು ಆಕೆಯ ಬಂಧನಕ್ಕೆ ಪ್ಲಾನ್ ರೂಪಿಸಿದ್ದರು. ಆಕೆ ಭೇಟಿಗೆ ಬರುತ್ತಿದ್ದಂತೆ ತಡೆದ ಪೊಲೀಸರು ಆಕೆಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಪ್ಯಾಕೆಟ್ ಸಿಕ್ಕಿದೆ. ಈಕೆಗೆ ಗಾಂಜಾ ಪ್ಯಾಕೆಟ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

    ಪರಿಚಯವಾಗಿದ್ದು ಹೇಗೆ?
    ಯುವತಿಗೆ ವಾಮಂಜೂರಿನಲ್ಲಿ ಸಂಬಂಧಿಕರ ಮನೆಯಿದ್ದು, ಅಲ್ಲಿಂದ ನಗರದ ಮಾಧ್ಯಮ ಸಂಸ್ಥೆಯೊಂದಕ್ಕೆ ಇಂಟರ್ನ್‍ಶಿಪ್‍ಗೆ ಹೋಗುತ್ತಿದ್ದಳು. ಈ ಸಮಯದಲ್ಲಿ ನೆರೆಮನೆಯ ಮುಸ್ತಾಫ್ ಎಂಬಾತನ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಮುಸ್ತಾಫ ಜೈಲು ಸೇರಿದ್ದರೂ ಮೊಬೈಲ್ ಸಂಪರ್ಕ ಮಾತ್ರ ಇವರ ನಡುವೆ ಮುಂದುವರಿದಿತ್ತು ಎಂದು ತಿಳಿದು ಬಂದಿದೆ.

    ಲವ್ ಜಿಹಾದ್?
    ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಇಂಗಿತವನ್ನೂ ಕಳೆದ ಕೆಲ ದಿನಗಳಿಂದ ಈ ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಎಂಸಿಜೆ ವಿದ್ಯಾರ್ಥಿನಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಳೇ ಎನ್ನುವ ಸಂಶಯ ವ್ಯಕ್ತವಾಗಿದ್ದು ಕರಾವಳಿಯಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರು ವಿವಿ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲ ಕಥೆ!

    ಮಂಗ್ಳೂರು ವಿವಿ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲ ಕಥೆ!

    ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಮತ್ತೊಂದು ಎಡವಟ್ಟು ಕಂಡುಬಂದಿದೆ. ದ್ವಿತೀಯ ಬಿಕಾಂ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲತೆಯನ್ನು ಬಿಂಬಿಸುವ ಕಥೆಯೊಂದನ್ನು ಪಠ್ಯವಾಗಿ ನೀಡಿದ್ದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.

    ನುಡಿ ನೂಪುರ ಎಂಬ ಪುಸ್ತಕದಲ್ಲಿ ಮಗುವಿನ ತಂದೆ ಹೆಸರಿನ ಪಠ್ಯ ಅಳವಡಿಸಲಾಗಿದೆ. ಇದರಲ್ಲಿ ಗಂಡ ಹೆಂಡತಿಯ ಸಂಬಂಧವನ್ನು ಹೊರತುಪಡಿಸಿ ಅಕ್ರಮ ಸಂಬಂಧ ಸರಿ ಅನ್ನುವಂತೆ ಬಿಂಬಿಸುವ ಕಥೆಯನ್ನು ಪಠ್ಯವಾಗಿ ಸೇರಿಸಲಾಗಿದೆ. ಅಲ್ಲದೆ, ವಿವಾಹೇತರ ಸಂಬಂಧವನ್ನು ಲಘು ಭಾಷೆಯಲ್ಲಿ ವಿವರಿಸಲಾಗಿದ್ದು, ಸ್ವತಃ ಇದನ್ನು ಬೋಧನೆ ಮಾಡುವ ಶಿಕ್ಷಕ ವೃಂದಕ್ಕೆ ಮುಜುಗರ ಸೃಷ್ಟಿಸುವಂತಿದೆ.

    ಮಟ್ಟಾರು ವಿಠಲ ಹೆಗ್ಡೆ ಎಂಬ ಕಥೆಗಾರ 1939ರಲ್ಲಿ ಬರೆದ ಈ ಕಥೆಯನ್ನು ಈಗ ಪಠ್ಯವಾಗಿ ಸೇರಿಸಿಕೊಂಡಿದ್ದರ ಉದ್ದೇಶವೇನು ಅನ್ನೋ ಪ್ರಶ್ನೆಯನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿವಾಹೇತರ ಸಂಬಂಧದ ಚಿತ್ರಣ ತಿಳಿಸಿ, ಯಾವ ರೀತಿಯ ವಿಕೃತಿಯನ್ನು ಹೇರುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ವಿವಿಯ ಪಠ್ಯ ಈಗಷ್ಟೆ ಮುದ್ರಣ ಆಗಿ ವಿದ್ಯಾರ್ಥಿಗಳ ಕೈಸೇರಿದ್ದು ಕೂಡಲೇ ಅದನ್ನು ಹಿಂಪಡೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಮೂಲಕ ಪಠ್ಯ ಪುಸ್ತಕ ರಚನಾ ಸಮಿತಿ ಯಾವ ರೀತಿಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದೆ ಎಂಬ ಪ್ರಶ್ನೆಯೂ ಕೇಳಿಬಂದಿದೆ.