Tag: ಮಂಗಳೂರು ಬ್ಲಾಸ್ಟ್‌

  • ಮಂಗಳೂರು ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಲಿಂಕ್ ಕಾಣ್ತಿದೆ: ಡಿಕೆಶಿ

    ಮಂಗಳೂರು ಬ್ಲಾಸ್ಟ್‌ಗೂ ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಲಿಂಕ್ ಕಾಣ್ತಿದೆ: ಡಿಕೆಶಿ

    ಬೆಂಗಳೂರು: ಮಂಗಳೂರು ಬಾಂಬ್ ಬ್ಲಾಸ್ಟ್ ಗೂ (Mangaluru Bomb Blast) ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಲಿಂಕ್ ಕಾಣುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಬ್ಲಾಸ್ಟ್ ಗೂ ಇದಕ್ಕೂ ಲಿಂಕ್ ಕಾಣುತ್ತಿದೆ. ಟೈಮರ್ ಎಲ್ಲಾ ಲಿಂಕ್ ಕಾಣ್ತಿದೆ. 8-10 ಅಡಿಯಲ್ಲಿ ಎಫೆಕ್ಟ್ ಆಗಿದೆ. ಸೌಂಡ್ ಜೋರಾಗಿ ಬಂದಿದೆ. ಬಸ್ಸಲ್ಲಿ ಬಂದಿದ್ದಾರೆ ಎಲ್ಲಾ ಗೊತ್ತಾಗಿದೆ ಎಂದರು.

    ನಾನು ಹೋಮ್ ಮಿನಿಸ್ಟರ್, ಸಿಎಂ ಎಲ್ಲರೂ ಸೀರಿಯಸ್ ಆಗಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. 8 ಟೀಂ ಮಾಡಿದ್ದೀವಿ ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ. ಬಿಜೆಪಿಯವರು (BJP) ರಾಜಕಾರಣ ಮಾಡೋದಾದರೆ ಮಾಡಲಿ. ಅವರು ಬೆಂಗಳೂರು ಇಮೇಜ್ ಹಾಳು ಮಾಡೋಕೆ ಪ್ರಯತ್ನಿಸುತ್ತಿದ್ದಾರೆ. ಅವರು ರಾಜಕೀಯ ಮಾಡೋದು ಬೇಡ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ

    ನಡೆದಿದ್ದೇನು..?: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶುಕ್ರವಾರ ಮಧ್ಯಾಹ್ನ 1 ಗಂಟೆ 05 ನಿಮಿಷ ಸುಮಾರಿಗೆ ನಡೆದ ಘಟನೆಯಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರೀ ಸ್ಫೋಟದ ಪರಿಣಾಮ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಘಟನೆ ನಡೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸಿಲಿಂಡರ್ ಸ್ಫೋಟದಿಂದ ಘಟನೆ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ಬಾಂಬ್ ಬ್ಲಾಸ್ಟ್ ಆಗಿರುವುದು ಬಯಲಾಗಿದೆ.

    ಆರೋಪಿ ಚಹರೆ ಪತ್ತೆ: ಬ್ಲಾಸ್ಟ್ ಮಾಡಿದ ಆರೋಪಿಯ ಎಕ್ಸ್ ಕ್ಲೂಸೀವ್ ವೀಡಿಯೋ ಹಾಗೂ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ತನ್ನ ಚಹರೆ ಎಲ್ಲೂ ಬೀಳದಿರಲಿ ಅಂತಾ ಶಂಕಿತ ಉಗ್ರ ಮುಖಕ್ಕೆ ಮಾಸ್ಕ್ ಕಣ್ಣಿಗೆ ಕೂಲಿಂಗ್ ಗ್ಲಾಸ್, ತಲೆ ಮೇಲೆ ವೈಟ್ ಹ್ಯಾಟ್ ಹಾಕಿಕೊಳ್ಳುವ ಮೂಲಕ ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡು ಕೆಫೆಗೆ ಎಂಟ್ರಿ ಕೊಟ್ಟಿದ್ದಾನೆ. ಜೊತೆಗೆ ಬಲಭುಜದ ಹಿಂಬದಿಗೆ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಹೋಟೆಲ್ ಗೆ ಬಂದಿರುವ ಆರೋಪಿ ಹೋಟೆಲ್ ನಲ್ಲಿ ತಿಂಡಿ ತಿಂದು ಸಾಗುವ ದೃಶ್ಯಗಳು ಸಿಕ್ಕಿವೆ.

    ಟೋಕನ್ ತೆಗೆದುಕೊಂಡ ಶಂಕಿತ ರವೆ ಇಡ್ಲಿ ತಿಂದು ಹ್ಯಾಡ್ ವಾಶಿಂಗ್‍ಗೆ ಹೋಗಿದ್ದಾನೆ. ಹ್ಯಾಂಡ್ ವಾಶ್ ಮಾಡಿ ಬ್ಯಾಗ್ ಅಲ್ಲೇ ಇಟ್ಟು ಬೈಕ್‍ನಲ್ಲಿ ತೆರಳಿದ್ದಾನೆ. ಆತ ಹೋದ ಸುಮಾರು ಒಂದು ಗಂಟೆಯ ಬಳಿಕ ಈ ಬ್ಯಾಗ್ ಬ್ಲಾಸ್ಟ್ ಆಗಿದೆ. ಸದ್ಯ ಬೈಕ್ ಮಾಲೀಕ ಯಾರು..? ಬೈಕ್ ಎಲ್ಲಿನದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್‌ – ಮೊಬೈಲ್‌ನಲ್ಲಿ 6 ಜಾಗ ಸರ್ಚ್‌ ಮಾಡಿದ್ದ ಬಾಂಬರ್‌

    ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್‌ – ಮೊಬೈಲ್‌ನಲ್ಲಿ 6 ಜಾಗ ಸರ್ಚ್‌ ಮಾಡಿದ್ದ ಬಾಂಬರ್‌

    ಮಂಗಳೂರು: ಕುಕ್ಕರ್‌ ಬಾಂಬರ್‌ ಶಾರೀಕ್‌ನ(Shariq) ಗುರಿ ಕದ್ರಿ ದೇವಸ್ಥಾನ(Kadri Temple) ಆಗಿತ್ತು ಎಂದು ಉಗ್ರ ಸಂಘಟನೆ ಹೇಳಿದ್ದರೂ ಆತ ಮೊಬೈಲ್‌ನಲ್ಲಿ ಮಂಗಳೂರಿನ(Mangaluru) ಹಲವು ಪ್ರದೇಶಗಳನ್ನು ಸರ್ಚ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಶಾರೀಕ್‌ ಮೊಬೈಲ್‌ನಲ್ಲಿ ಯಾವ ಸ್ಥಳಗಳನ್ನು ಸರ್ಚ್‌ ಮಾಡಿದ್ದ ಎನ್ನುವುದು ಗೊತ್ತಾಗಿದೆ. ಸರ್ಕಾರಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲಿ ತನಿಖಾ ತಂಡ ಮೂರು ದೇವಸ್ಥಾನ ಮತ್ತು ಎರಡು ಸಾರ್ವಜನಿಕ ಸ್ಥಳದಲ್ಲಿ ಬಾಂಬ್ ಇಡಲು ಪ್ಲಾನ್‌ ಮಾಡಿದ್ದ ಎಂಬುದನ್ನು ಉಲ್ಲೇಖಿಸಿದೆ.

    ಎರಡು ಶಿವ ದೇವಸ್ಥಾನ, ಒಂದು ದೇವಿ ದೇವಸ್ಥಾನ, ಎರಡು ಸಾರ್ವಜನಿಕ ಸ್ಥಳ, ಒಂದು ಕಾರ್ಯಕ್ರಮ ಆತನ ಟಾರ್ಗೆಟ್‌ ಆಗಿತ್ತು ಎಂದು ಪೊಲೀಸ್ ಉನ್ನತ ಮೂಲಗಳು ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿವೆ.

    ಟಾರ್ಗೆಟ್‌ ಆಗಿದ್ದ ಸ್ಥಳಗಳು ಯಾವುದು?
    ಕದ್ರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ(Kudroli Gokarnanatheshwara Temple) ಲಕ್ಷದೀಪೋತ್ಸವ ನಡೆಯಿತ್ತಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭದಲ್ಲೇ ಸ್ಪೋಟ ಮಾಡುವ ಬಗ್ಗೆ ಸಂಚು ರೂಪಿಸಿದ್ದನೇ ಎಂಬ ಪ್ರಶ್ನೆ ಎದ್ದಿದೆ.

    ತನ್ನ ವಾಟ್ಸಪ್‌ ಡಿಪಿಯಲ್ಲಿ ಕೊಯಮತ್ತೂರಿನ ಆದಿಯೋಗಿ ಶಿವನ ಪ್ರತಿಮೆಯ(Adiyogi Shiva Statue) ಫೋಟೋವನ್ನು ಹಾಕಿದ್ದ. ಶಿವನ ಡಿಪಿಯ ಅಸಲಿಯತ್ತನ್ನು ಡೀಕೋಡ್ ಮಾಡುವಾಗಿ ಪೊಲೀಸರಿಗೆ ಅನುಮಾನ  ಬಂದಿದ್ದು ಶಿವ ದೇವಾಲಯಲ್ಲಿ ಕೃತ್ಯ ನಡೆಸಲು ಪ್ಲಾನ್‌ ಮಾಡಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.

    ಮಂಗಳದೇವಿ ದೇವಸ್ಥಾನಕ್ಕೂ(Mangaladevi Temple) ಸ್ಕೆಚ್ ಹಾಕಿರೋ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಮಂಗಳೂರಿನ ಪಡೀಲು ಬಳಿ ಇರುವ ರೈಲ್ವೇ ನಿಲ್ದಾಣ(Railway Station) ಮತ್ತು ಬಿಜೈನಲ್ಲಿರುವ ಕೆಎಸ್‌ಆರ್‌ಟಿಸಿ(KSRTC) ಬಸ್‌ ನಿಲ್ದಾಣವನ್ನು ಆತ ಸರ್ಚ್‌ ಮಾಡಿದ್ದಾನೆ. ಸಾಕಷ್ಟು ಜನರು ಇಲ್ಲಿದ ಪ್ರಯಾಣ ನಡೆಸುವ ಹಿನ್ನೆಲೆಯಲ್ಲಿ ಇಲ್ಲೂ ಕೃತ್ಯ ನಡೆಸಲು ಪ್ರಯತ್ನಿಸಿದ್ದನೇ ಎಂಬ ಅನುಮಾನ ಎದ್ದಿದೆ.

    ಆರ್‌ಎಸ್ಎಸ್(RSS) ಪ್ರಮುಖ ಕಚೇರಿ ʼಸಂಘನಿಕೇತನʼ ಇರುವ ಮಣ್ಣಗುಡ್ಡವನ್ನು ಶಾರೀಕ್‌ ಸರ್ಚ್‌ ಮಾಡಿದ್ದಾನೆ. ಸ್ಫೋಟಗೊಂಡ ದಿನವಾದ ನ.19 ರಂದು ಸಂಘನಿಕೇತನದಲ್ಲಿ(Sanghaniketan) ಬೃಹತ್ ವಿದ್ಯಾರ್ಥಿ ಸಮಾವೇಶ ನಡೆಯುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

     

    ಕೇಶವ ಸ್ಮೃತಿ ಸಂವರ್ಧನ ಸಮಿತಿಯು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ನ.19 ಮತ್ತು 20ರಂದು ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ ಆಯೋಜಿಸಿತ್ತು. ಶಾರೀಕ್‌ ಮೊಬೈಲ್‌ನಲ್ಲಿ ಮಣ್ಣಗುಡ್ಡವನ್ನು ಸರ್ಚ್‌ ಮಾಡಿದ ಹಿನ್ನೆಲೆಯಲ್ಲಿ ಇಲ್ಲೂ ಕೃತ್ಯ ನಡೆಸಲು ಮುಂದಾಗಿದ್ನಾ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಶಿವ ದೇವಸ್ಥಾನದಲ್ಲಿ ದೀಪೋತ್ಸವ:
    ಹಿಂದೂ ಪಂಚಾಂಗದಲ್ಲಿ ಚಳಿಗಾಲದಲ್ಲಿ ಆರಂಭವಾಗುವ ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಕಾರ್ತಿಕ ನಕ್ಷತ್ರ ನವೆಂಬರ್‌/ಡಿಸೆಂಬರ್‌ ತಿಂಗಳಿನಲ್ಲಿ ಚಂದ್ರನಿಗೆ ಅತ್ಯಂತ ಹತ್ತಿರದಲ್ಲಿ ಇರುತ್ತದೆ. ಈ ಕಾರಣಕ್ಕೆ ಹಿಂದೂ ಪಂಚಾಂಗದ ಎಂಟನೇ ತಿಂಗಳಿಗೆ ಕಾರ್ತಿಕ ಮಾಸ ಎಂದು ಕರೆಯಲಾಗುತ್ತದೆ. ಪ್ರತಿ ಮಾಸಕ್ಕೆ ಒಬೊಬ್ಬ ದೇವರು ಇರುವಂತೆ ಕಾರ್ತಿಕ ಮಾಸದ ಅಧಿಪತಿ ಶಿವ. ಪರಿಣಾಮವಾಗಿ ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಾನೆ. ಈ ಕಾರಣಕ್ಕೆ ಶಿವ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ಬೆಂಗಳೂರು:  ಮಂಗಳೂರು ಬಾಂಬ್‌ ಸ್ಫೋಟ(Mangaluru Blast Case) ಉಗ್ರ ಕೃತ್ಯ ಎಂದು ದೃಢಪಟ್ಟರೂ ಶಾರೀಕ್‌(Shariq) ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದು ಬಂದಿರಲಿಲ್ಲ. ಆದರೆ ಈಗ ʼಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ʼ ಹೆಸರಿನ ಸಂಘಟನೆಯೊಂದು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ.

    ಸಾಮಾಜಿಕ ಜಾಲತಾಣದಲ್ಲಿ Islamic Resistance Council ಸಂಘಟನೆ ಅರೆಬಿಕ್‌ ಭಾಷೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ(Kadri Temple) ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್‌ ಸ್ಫೋಟಗೊಂಡಿದೆ ಸಂಘಟನೆ ಹೇಳಿಕೊಂಡಿದೆ.

    ಶಾರೀಕ್‌ ಪಂಪ್‌ವೆಲ್‌ ಬಳಿ ಬಾಂಬ್‌ ಸ್ಫೋಟ ನಡೆಸಲು ಪ್ಲ್ಯಾನ್‌ ನಡೆಸಿದ್ದ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು. ಆದರೆ ಈಗ ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್‌ ಆಗಿದ್ದರಿಂದ ಈ ಪ್ರಕರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ

    ನ.23ರಂದು ಪ್ರಕಟಿಸಲಾದ ಅರೆಬಿಕ್‌ ಭಾಷೆಯಲ್ಲಿರುವ “Majlis Almuqawamat Al’islamia” ಪೋಸ್ಟ್‌ ಜೊತೆ ಬಾಂಬ್‌ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಎರಡು ಹಳೆಯ ಫೋಟೋಗಳನ್ನು ಅಪ್ಲೋಡ್‌ ಮಾಡಲಾಗಿದೆ.

    ಅಷ್ಟೇ ಅಲ್ಲದೇ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಬೆದರಿಕೆ ಹಾಕಲಾಗಿದೆ. ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದೆ.

    ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪದ ನಡೆಯುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಸಂಘಟನೆ ಹೇಳಿದೆ.

    ಈ ಸಂಘಟನೆ ಇದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ. ಕರ್ನಾಟಕ ಪೊಲೀಸ್‌ ಈ ಸಂಘಟನೆ ಅಸ್ತಿತ್ವದಲ್ಲಿದೆಯೇ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಕೇಂದ್ರ ಗೃಹ ಇಲಾಖೆಯ ಸಹಾಯವನ್ನು ಕೇಳಿದೆ.

    ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ 10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ. ಮಂಗಳೂರು ಪಂಪ್‌ವೆಲ್‌ನಿಂದ 5 ಕಿ.ಮೀ ದೂರದಲ್ಲಿದ್ದರೆ ಸ್ಫೋಟ ನಡೆದ ಸ್ಥಳದಿಂದ 4.5 ಕಿ.ಮೀ ದೂರದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಮಂಗಳೂರು: ಶಾರೀಕ್‌(Shariq) ಬಳಿ ಇದ್ದಿದ್ದು ಅಂತಿಂಥ ಕುಕ್ಕರ್‌ ಬಾಂಬ್‌(Cooker Bomb) ಅಲ್ಲ. ಆ ಕುಕ್ಕರ್ ಬಾಂಬ್‌ಗೆ  ಇಡೀ ಬಸ್ಸನ್ನೇ(Bus) ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಈಗ ಲಭ್ಯವಾಗಿದೆ.

    ಹೌದು. ರಿಕ್ಷಾದಲ್ಲಿ ಸ್ಫೋಟ(Mangaluru Cooker Bomb Blast Case) ನಡೆದ ಬಳಿಕ ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ(FSL) ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ ತಂಡ ಈ ಬಾಂಬ್‌ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಇದನ್ನೂ ಓದಿ: ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

    ಎಫ್‌ಎಸ್‌ಎಲ್‌ ತಂಡ ನೀಡಿದ ವರದಿಯಲ್ಲಿರುವ ಅಂಶಗಳ ಬಗ್ಗೆ ಪೊಲೀಸ್‌ ಮೂಲಗಳು ಪಬ್ಲಿಕ್‌ ಟಿವಿ ಮಾಹಿತಿ ನೀಡಿವೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್‌ ಇತ್ತು. ಇದರ ಜೊತೆ ಒಂದು ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. ಡಿಟೋನೇಟರ್‌ಗೆ ಪವರ್ ಹೋಗದೇ ಕೇವಲ ಜೆಲ್‌ಗೆ ಮಾತ್ರ ಬೆಂಕಿ ತಗುಲಿದೆ. ಜೆಲ್‌ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ. ಇದನ್ನೂ ಓದಿ: ವಾಟ್ಸಪ್‌ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ ಉಗ್ರ ಶಾರೀಕ್‌

    ಡಿಟೋನೇಟರ್ ಮತ್ತು ಜೆಲ್ ಎರಡಕ್ಕೇ ಏಕಕಾಲದಲ್ಲಿ ಬೆಂಕಿ ತಗುಲಿದ್ದರೆ ಊಹಿಸಲಾಗದ ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಒಂದು ವೇಳೆ ಸರಿಯಾಗಿ ಸ್ಫೋಟವಾಗಿದ್ದರೆ ರಿಕ್ಷಾ ರಿಕ್ಷಾವಾಗಿ ಇರುತ್ತಿರಲಿಲ್ಲ. ಸುತ್ತಮುತ್ತಲಿನ ವಾಹನಗಳು ಜಖಂ ಆಗಿ ಬಹಳ ಸಾವು ನೋವು ಸಂಭವಿಸುತ್ತಿತ್ತು. ಒಂದು ಬಸ್‌ ಅನ್ನೇ ಸ್ಫೋಟಿಸುವ ಸಾಮರ್ಥ್ಯ ಆ ಕುಕ್ಕರ್‌ ಬಾಂಬ್‌ಗೆ ಇತ್ತು ಎಂಬ ವಿಚಾರವನ್ನು ಎಫ್‌ಎಸ್‌ಲ್‌ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]