Tag: ಮಂಗಳೂರು ಗಲಭೆ

  • ಮಂಗಳೂರು ಗಲಭೆ- 22 ಆರೋಪಿಗಳಿಗೆ ಜಾಮೀನು

    ಮಂಗಳೂರು ಗಲಭೆ- 22 ಆರೋಪಿಗಳಿಗೆ ಜಾಮೀನು

    -ಪೊಲೀಸರ ಮೇಲೆ ಎಫ್‍ಐಆರ್ ದಾಖಲಿಗೆ ಸೂಚನೆ

    ಬೆಂಗಳೂರು: ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದ ಎನ್ನಲಾದ 22 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರ ಕ್ರಮ ಸರಿಯಲ್ಲ ಅಂತ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರೋದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲದೆ ಇರೋ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲಾ 22 ಆರೋಪಿಗಳಿಗೆ ಜಾಮೀನನ್ನು ಮಂಜೂರು ಮಾಡಿದೆ..

    ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಜಾಮೀನನ್ನು ಮಂಜೂರು ಮಾಡಿದೆ.

    ಪೊಲೀಸರ ವಿರುದ್ಧ ಎಫ್‍ಐಆರ್: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿದೆ. ಮಂಗಳೂರು ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಎಫ್‍ಐಆರ್ ದಾಖಲು ಮಾಡಲು ಆದೇಶಿಸಿದೆ.

    ನೊಂದವರು ಪೊಲೀಸರ ವಿರುದ್ಧ ದೂರನ್ನು ನೀಡಿದ್ದಾರೆ. 10 ದೂರುಗಳನ್ನು ನೀಡಿ ಪದೇ ಪದೇ ಆ ದೂರಿನ ಬಗ್ಗೆ ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಮತ್ತು ಮಂಗಳೂರು ಆಯುಕ್ತರ ಭೇಟಿಗೆ ತೆರಳಿದಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತಾ ಇಲ್ಲ. ಈ ದೂರಿಗೆ ಕ್ರಮವನ್ನು ಪೊಲೀಸರು ಜರಗಿಸುತ್ತಿಲ್ಲ ಅಂತ ವಾದ ಮಾಡಿದ್ದರು. ಇದನ್ನ ಪರಿಶೀಲಿಸಿದ ನ್ಯಾಯಾಲಯ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಗೆ ಸೂಚಿಸಿದೆ.

  • ಕುಮಾರಸ್ವಾಮಿ ರಾಜಕೀಯ ಮೆಟ್ಟಿಲು ಕುಸಿಯುತ್ತಿದೆ – ಸದಾನಂದ ಗೌಡ

    ಕುಮಾರಸ್ವಾಮಿ ರಾಜಕೀಯ ಮೆಟ್ಟಿಲು ಕುಸಿಯುತ್ತಿದೆ – ಸದಾನಂದ ಗೌಡ

    ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಮೆಟ್ಟಿಲು ಸದ್ಯದ ಸಂದರ್ಭದಲ್ಲಿ ಕುಸಿಯುತ್ತಿದೆ. ಹೀಗಾಗಿ ಅವರು ಸಿಡಿಗಳನ್ನು ಹಿಡಿದುಕೊಂಡು ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಟಾಂಗ್ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರು ಗಲಭೆ ವಿಚಾರದ ಕುರಿತು ಸಿಡಿ ಬಿಡುಗಡೆ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಂಗಳೂರು ಗಲಭೆ ನಡೆದು ಇಷ್ಟು ದಿನಗಳು ಕಳೆದಿವೆ, ಗಲಭೆಯಾದಗ ಕುಮಾರಸ್ವಾಮಿ ಅವರು ಯಾಕೆ ಸಿಡಿ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.

    ಕುಮಾರಸ್ವಾಮಿ ಅವರು ಅವರದ್ದೆ ಜನರನ್ನು ಕಳುಹಿಸಿ ಪೊಲೀಸ್ ಡ್ರೆಸ್ ಹಾಕಿಸಿ ಎಲ್ಲಾ ರೀತಿಯ ವಿಡಿಯೋ ಮಾಡಿ ಈಗ ಸಿಡಿ ಬಿಡುಗಡೆ ಮಾಡಿರಬೇಕು. ಈ ಸಿಡಿ ಬಿಡುಗಡೆಯ ಹಿಂದೆ ದೊಡ್ಡ ಹುನ್ನಾರವಿದೆ. ಸಿಡಿಗಳು ಹಲವಾರು ಜನರಿಗೆ ತಮ್ಮ ರಾಜಕೀಯ ಅಸ್ತಿತ್ವದ ಸ್ವತ್ತಾಗಿ ಪರಿವರ್ತನೆಯಾಗಿವೆ. ಹೀಗಾಗಿ ಕುಮಾರಸ್ವಾಮಿ ಅವರು ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ : ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಕರ್ನಾಟಕದಲ್ಲಿ ಇದುವರೆಗೆ ಸಾಕಷ್ಟು ಸಿಡಿಗಳು ಬಿಡುಗಡೆಯಾಗಿವೆ. ಅವುಗಳಲ್ಲಾ ಸತ್ಯ ಆಗಿದ್ದರೆ ಹಲವರು ಜೈಲಿಗೆ ಹೋಗಬೇಕಿತ್ತು. ಇದು ಕೇವಲ ತಮ್ಮ ತಾತ್ಕಾಲಿಕ ಬೆಳೆ ಬೇಯಿಸಿಕೊಳ್ಳಲು ಜನರನ್ನು ಬೇರೆ ದಾರಿಗೆ ಎಳೆಯಲು ಕುಮಾರಸ್ವಾಮಿ ಅವರು ಹೀಗೆ ಮಾಡುತ್ತಿದ್ದಾರೆ ಎಂದು ಸದಾನಂದಗೌಡ ಅವರು ವಾಗ್ದಾಳಿ ನಡೆಸಿದರು.

  • ಮಂಗಳೂರು ಶಾಂತವಾಗಿದೆ, ಗಲಭೆ ಎಬ್ಬಿಸಬೇಡಿ – ಎಚ್‍ಡಿಕೆಗೆ ಶೋಭಾ ತಿರುಗೇಟು

    ಮಂಗಳೂರು ಶಾಂತವಾಗಿದೆ, ಗಲಭೆ ಎಬ್ಬಿಸಬೇಡಿ – ಎಚ್‍ಡಿಕೆಗೆ ಶೋಭಾ ತಿರುಗೇಟು

    ಚಿಕ್ಕಬಳ್ಳಾಪುರ: ನಮ್ಮ ಮಂಗಳೂರು ಶಾಂತವಾಗಿದೆ ಚೆನ್ನಾಗಿದೆ. ರಾಜ್ಯದಲ್ಲಿ ಗಲಭೆ ಎಬ್ಬಿಸುವ ಕೆಲಸ ಮಾಡಬೇಡಿ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ದಯಮಾಡಿ ಮಾಜಿ ಸಿಎಂ ಎಚ್‍ಡಿಕೆ ಸಿಡಿ ಬಿಡುಗಡೆ ಮಾಡಲಿ. ಆದರೆ ಸಿಡಿ ಅದ್ಯಾವ ಕಾರ್ಯಕರ್ತರು ಯಾವ ಪೊಲೀಸರು ಕೊಟ್ಟರು ಎಂಬುದು ಪತ್ತೆ ಆಗಬೇಕು. ಈಗಾಗಲೇ ಯಾರು ಕಲ್ಲು ತಂದ್ದರು ಯಾವ ಟೆಂಪೋ ಲಾರಿಯಲ್ಲಿ ತಂದರು. ಪೆಟ್ರೋಲ್ ಯಾರು ತಂದ್ದರು ಗೊತ್ತಾಗಿದೆ. ಈ ಸತ್ಯಾಂಶವನ್ನು ಹೇಳುವಂತಹ ಸಿಡಿಯನ್ನು ಎಚ್‍ಡಿಕೆ ಬಿಡುಗಡೆ ಮಾಡಲಿ ಎಂದರು. ಇದನ್ನು ಓದಿ: ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ

    ಎಚ್‍ಡಿಕೆ ಮತ್ತು ಜೆಡಿಎಸ್‍ನವರ ಅಸ್ತಿತ್ವ ಮಂಗಳೂರಲ್ಲಿ ಏನೂ ಇಲ್ಲ. ಮಂಗಳೂರಿನಲ್ಲಿ ಅಸ್ತಿತ್ವ ಪಡೆಯೋಕೆ ಆಗೋದು ಇಲ್ಲ. ಹೀಗಾಗಿ ರಾಜ್ಯದಲ್ಲಿ ಗಲಭೆ ಎಬ್ಬಿಸುವ ಪ್ರಯತ್ನ ಮಾಡಬೇಡಿ. ನಮ್ಮ ಮಂಗಳೂರು ಶಾಂತವಾಗಿದೆ ಚೆನ್ನಾಗಿದೆ. ಕೇರಳದಿಂದ ಬಂದು ಕಲ್ಲೆಸೆದು ಉದ್ದೇಶಪೂರ್ವಕವಾಗಿ ಗಲಭೆ ಮಾಡಿದವರ ಪತ್ತೆ ಮಾಡಲು ಎಚ್‍ಡಿಕೆ ಸಹಕಾರ ಕೊಡಲಿ ಎಂದು ಹೇಳಿದರು.

  • ಗೋಲಿಬಾರ್‌ಗೆ ಬಲಿಯಾದವರಿಗೆ ಘೋಷಿಸಿದ ಪರಿಹಾರ ವಾಪಸ್

    ಗೋಲಿಬಾರ್‌ಗೆ ಬಲಿಯಾದವರಿಗೆ ಘೋಷಿಸಿದ ಪರಿಹಾರ ವಾಪಸ್

    – ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ
    – ಆರೋಪಿಗಳ ಪತ್ತೆ 8 ತಂಡ ರಚನೆ

    ಮಂಗಳೂರು: ಪೌರತ್ವ ಕಾಯಿದೆ ಮತ್ತು ಎನ್‍ಆರ್‍ಸಿ ವಿರೋಧಿಸಿ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೊಲೀಸ್ ಗೋಲಿಬಾರ್‌ಗೆ  ಬಲಿಯಾದ ಜಲೀಲ್, ನೌಶೀನ್‍ಗೆ ಘೋಷಿಸಿದ್ದ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಿಂಪಡೆದಿದ್ದಾರೆ.

    ಮಂಗಳೂರಲ್ಲಿ ಮಾತನಾಡಿ, ಮೃತಪಟ್ಟವರು ಕೃತ್ಯದಲ್ಲಿ ಭಾಗಿಯಾದವರೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಪರಾಧಿಗಳಿಗೆ ಪರಿಹಾರ ಕೊಟ್ಟ ನಿದರ್ಶನ ದೇಶದಲ್ಲಿ ಇಲ್ಲ ಎಂದಿದ್ದಾರೆ. ಉಡುಪಿಯಲ್ಲಿ ಮಾತನಾಡಿ, ತನಿಖೆ ಮೊದಲು ಪರಿಹಾರ ಕೊಟ್ಟರೆ ಅಪರಾಧ ಆಗುತ್ತದೆ. ನಮಗೆ ಮನವರಿಕೆ ಆಗಿದೆ. ಬೇರೆಯವರೆಲ್ಲ ಕೊಟ್ಟಿದ್ದಾರೆ ನಮ್ಮ ಅಭ್ಯಂತರ ಇಲ್ಲ. ತನಿಖೆಯಾದ ಮೇಲೆ ಪರಿಹಾರದ ಬಗ್ಗೆ ಘೊಷಣೆ ಮಾಡುತ್ತೇವೆ ಎಂದು ಪುನಾರುಚ್ಚರಿಸಿದ್ದಾರೆ.

    ಪರಿಹಾರ ವಾಪಸ್ ಪಡೆದ ಬಿಎಸ್‍ವೈ ನಡೆಗೆ ಬಿಜೆಪಿಯಲ್ಲೇ ಪರ ವಿರೋಧ ಎದ್ದಿದೆ. ಸಚಿವರಾದ ಈಶ್ವರಪ್ಪ, ಕೊಲೆಗಡುಕರಿಗೆ ಪರಿಹಾರ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಅವರು ಅಪರಾಧಿಗಳಿಗೆ ಪರಿಹಾರ ನೀಡಿದ ಉದಾಹರಣೆ ದೇಶದಲ್ಲಿ ಇಲ್ಲ ಅಂದಿದ್ದಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಮಾತ್ರ ಗೋಲಿಬಾರ್‍ನಲ್ಲಿ ಸತ್ತವರಿಗೆ ಪರಿಹಾರ ಕೊಡ್ಬೇಕು. ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದಿದ್ದಾರೆ.

    ಕಾಂಗ್ರೆಸ್ ವಿರೋಧ: ಪರಿಹಾರ ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸಿಗರು ಖಂಡಾತುಂಡವಾಗಿ ಖಂಡಿಸಿದ್ದಾರೆ. ಯುಟಿ ಖಾದರ್ ಅವರಂತೂ, ಮುಖ್ಯಮಂತ್ರಿಯವರೇ ಮೃತರ ಕುಟುಂಬಸ್ಥರನ್ನು ಕರೆದು ಸಾಂತ್ವನ ಹೇಳಿದ್ದರು. 10 ಲಕ್ಷ ಪರಿಹಾರವನ್ನೂ ಘೋಷಿಸಿದ್ರು. ಆದ್ರೀಗ, ಕಾರ್ಯಕರ್ತರ ಮಾತು ಕೇಳಿ ಪರಿಹಾರ ಹಿಂಪಡೆಯುತ್ತಿದ್ದಾರೆ. ಇವರು ರಾಜ್ಯಕ್ಕೆ ಮುಖ್ಯಮಂತ್ರಿಯೋ, ಬಿಜೆಪಿ ಕಾರ್ಯಕರ್ತರಿಗೋ ಎಂದು ಪ್ರಶ್ನಿಸಿದ್ದಾರೆ.

    ಮಾಜಿ ಸಂಸದ ವೀರಪ್ಪ ಮೊಯ್ಲಿ, ಸತ್ತ ಮೇಲೆ ಆಪಾದಿತನಾಗುವುದು ಹೇಗಾಗುತ್ತದೆ? ಒಮ್ಮೆ ಪರಿಹಾರ ಘೋಷಣೆ ಮಾಡಿ, ಹಿಂಪಡೀತಾರೆ ಅಂದ್ರೇನು ಅಂತ ಪ್ರಶ್ನಿಸಿದ್ದಾರೆ. ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲರು, ಗೋಲಿಬಾರಿನಲ್ಲಿ ಸತ್ತವರ ಜೀವ ವಾಪಸ್ ಕೊಡಲಿ. ಸತ್ತವರಲ್ಲಿ ಒಬ್ಬ ಪಿಎಚ್‍ಡಿ ಪೇಪರ್ ತರಲು ಹೋಗಿದ್ದ ವಿದ್ಯಾರ್ಥಿ. ಒಬ್ಬರು ಪೊಲೀಸ್‍ಗಷ್ಟೇ ಗಾಯವಾಗಿದೆ. ಪೊಲೀಸರು ವೀಡಿಯೋ ರಿಲೀಸ್ ಮಾಡಿ ಸತ್ಯ ಮುಚ್ಚಿಹಾಕುವ ಯತ್ನ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.

    8 ತಂಡ ರಚನೆ: ಮಂಗಳೂರು ಹಿಂಸಾಚಾರದ ದುಷ್ಕರ್ಮಿಗಳ ಪತ್ತೆಗೆ 8 ತಂಡಗಳನ್ನು ಮಂಗಳೂರು ಕಮಿಷನರ್ ಪಿ.ಎಸ್ ಹರ್ಷ ರಚಿಸಿದ್ದಾರೆ. ಡಿಸಿಪಿ ಮತ್ತು ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 150 ಪೊಲೀಸರು ಈ ತಂಡದಲ್ಲಿದ್ದಾರೆ. ಈಗಾಗಲೇ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

    ಸಿಸಿಟಿವಿ ಫೂಟೇಜ್ ಆಧರಿಸಿ 100ಕ್ಕೂ ಹೆಚ್ಚು ಮಂದಿಯ ಚಹರೆ ಗುರುತು ಹಚ್ಚಲಾಗಿದೆ. ಸೈಬರ್ ಅಪರಾಧ ಪತ್ತೆಗೆ ಇಬ್ಬರು ಇನ್ಸ್ ಪೆಕ್ಟರ್ ನೇತೃತ್ವದ 2 ತಂಡವನ್ನೂ ರಚಿಸಲಾಗಿದೆ. ಪ್ರಚೋದನಕಾರಿ ಸಂದೇಶ, ಹಿಂಸೆಗೆ ಪ್ರೇರಣೆ ವಿಚಾರದಲ್ಲಿ 60 ಕೇಸು ದಾಖಲಾಗಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 24 ತಂಡಗಳು ಕಾರ್ಯಾಚರಣೆಗೆ ಇಳಿದಿವೆ.

    ಈ ಮಧ್ಯೆ, ಸಚಿವ ಸಿಟಿ ರವಿ ಅವರು, ಗಲಭೆಯಲ್ಲಿ ಮೃತಪಟ್ಟವರು ಅಮಾಯಕರಲ್ಲ. ಪೊಲೀಸರು ನಿಯಂತ್ರಿಸದೇ ಇದ್ದಿದ್ರೆ ದೊಡ್ಡ ಅನಾಹುತ ನಡೆಯುತ್ತಿತ್ತು ಎಂದರೆ ಸಂಸದೆ ಶೋಭಾ ಕರಂದ್ಲಾಜೆ ಅವರು, ಹಿಂಸಾಚಾರದಲ್ಲಿ ನಾರ್ಮಲ್ ಮುಸಲ್ಮಾನರಿಲ್ಲ. ಕೇರಳದಿಂದ ಬಂದ ಜನ ಕೃತ್ಯ ಮಾಡಿದ್ದಾರೆ. ಕೆಎಫ್‍ಡಿ, ಪಿಎಫ್‍ಐ ಸಂಘಟನೆಗಳ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಆರೋಪಿಸಿದ್ದಾರೆ.

  • ತನಿಖೆ ದಾರಿ ತಪ್ಪಿಸಲು ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ: ಸಿದ್ದು

    ತನಿಖೆ ದಾರಿ ತಪ್ಪಿಸಲು ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ: ಸಿದ್ದು

    ಬೆಂಗಳೂರು: ಮಂಗಳೂರು ಪೊಲೀಸರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19ರಂದು ನಡೆದ ಪ್ರತಿಭಟನೆಯ ಫೋಟೋ ಮತ್ತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ವಿಡಿಯೋ, ಫೋಟೋಗಳ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ.

    ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ, ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ ಎಂದು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

    ಈ ವಿಚಾರವಾಗಿ ಎರಡು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಂಗಳೂರು ಗಲಭೆಯ ಆಯ್ದ ವಿಡಿಯೋಗಳನ್ನು ಪೊಲೀಸರು ಸೋರಿಕೆ ಮಾಡಿ, ತನಿಖೆಯ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮಲ್ಲಿರುವ ಸಾಕ್ಷ್ಯಗಳನ್ನು ಮೊದಲು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಈ ಕಾರಣಕ್ಕಾಗಿಯೇ ಸಿಐಡಿ ತನಿಖೆ ಒಂದು ನಾಟಕ, ಅದರ ಬದಲಿಗೆ  ನ್ಯಾಯಾಂಗ ತನಿಖೆ ಮಾಡಿ ಎಂದು ನಾನು ಒತ್ತಾಯಿಸಿದ್ದು ಎಂದು ಟ್ವೀಟ್ ಮಾಡಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಂಗಳೂರು ಗಲಭೆಯ ತಪ್ಪಿತಸ್ಥರು ಯಾರೇ ಇರಲಿ, ತನಿಖೆ ನಡೆಸಿ ಅವರನ್ನು ಶಿಕ್ಷೆಗೊಳಪಡಿಸಬೇಕು. ಆದರೆ ಆಯ್ದ ವಿಡಿಯೋಗಳನ್ನು ಲೀಕ್ ಮಾಡಿ ಅದರ ಮೂಲಕ ಒಂದು ಧರ್ಮದ ಜನರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಸಲ್ಲದು. ಶಾಂತಿ-ಸೌಹಾರ್ದತೆ ಕಾಪಾಡಬೇಕಾಗಿರುವ ಪೊಲೀಸರೇ ಸೌಹಾರ್ದ ಕೆಡಿಸುವ ಕೆಲಸ ಮಾಡುತ್ತಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

    ಈಗಾಗಲೇ ಎನ್.ಆರ್.ಸಿ ಹಾಗೂ ಸಿಎಎ ಜಾರಿಯಿಂದ ಮಂಗಳೂರಿನಲ್ಲಿ ಆಗಿರುವ ಪ್ರತಿಭಟನೆ ಮತ್ತು ಗೋಲಿಬಾರ್ ಪ್ರಕರಣವನ್ನು ಮುಖ್ಯಮಂತ್ರಿಗಳು ಸಿಐಡಿ ತನಿಖೆಗೆ ಆದೇಶಿದ್ದಾರೆ. ಆದರೆ ಸಿದ್ದರಾಮಯ್ಯನವರು ಸಿಐಡಿ ತನಿಖೆಯನ್ನು ವಿರೋಧಿಸಿದ್ದು, ಸಿಐಡಿ ತನಿಖೆ ಎನ್ನುವುದು ನಾಟಕ ಅದರ ಬದಲು ನ್ಯಾಯಾಂಗ ತನಿಖೆ ಮಾಡಿ ಎಂದು ಅವರು ಒತ್ತಾಯಿಸಿದ್ದರು.

    ಈಗಾಗಲೇ ಪೋಲಿಸರು ವಿಡಿಯೋ ಬಿಡುಗಡೆ ಮಾಡಿರುವುದರ ಬಗ್ಗೆ ಪ್ರತಿಪಕ್ಷದ ನಾಯಕರು, ಶಾಸಕರು ಹೇಳಿಕೆ ನೀಡುತ್ತಿದ್ದು, ಈ ಕುರಿತು ಪ್ರಶ್ನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ಈ ವಿಡಿಯೋಗಳು ಮಂಗಳೂರು ಗಲಭೆಯೋ ಅಥವಾ ಯಾವ ಗಲಭೆ ವಿಡಿಯೋನೋ ಗೊತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದ್ದಾರೆ.

  • ಸಿದ್ದರಾಮಯ್ಯ ಸೃಷ್ಟಿ ಮಾಡಿರೋ ಮರಿ ಟಿಪ್ಪುಗಳಿಂದ ಮಂಗ್ಳೂರಲ್ಲಿ ಕೃತ್ಯ: ಪ್ರತಾಪ್ ಸಿಂಹ

    ಸಿದ್ದರಾಮಯ್ಯ ಸೃಷ್ಟಿ ಮಾಡಿರೋ ಮರಿ ಟಿಪ್ಪುಗಳಿಂದ ಮಂಗ್ಳೂರಲ್ಲಿ ಕೃತ್ಯ: ಪ್ರತಾಪ್ ಸಿಂಹ

    ಮೈಸೂರು: ಮಂಗಳೂರಿನಲ್ಲಿ ಸಿದ್ದರಾಮಯ್ಯ ಸೃಷ್ಟಿ ಮಾಡಿರುವ ಮರಿ ಟಿಪ್ಪುಗಳ ಹೇಯಾ ಕೃತ್ಯ ಇದು ಎಂದು ಗಲಭೆ ವಿಡಿಯೋ ಕುರಿತು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಹೇಳಿಕೆ ನೀಡಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, ಕಲ್ಲುಗಳನ್ನು ತಂದು ಎಸೆದಿದ್ದಾರೆ. ಐಸಿಯೂ ಒಳಗೆ ಹೋಗಿ ಗಲಾಟೆ ಮಾಡಿದ್ದಾರೆ. ಇಂತದ್ದನ್ನೆಲ್ಲ ಟಿಪ್ಪು ವಂಶಸ್ಥರು ಮಾತ್ರ ಮಾಡುವುದಕ್ಕೆ ಸಾಧ್ಯ ಎಂದು ವಾಗ್ದಾಳಿ ನಡೆಸಿದರು. ಕಲ್ಲು ತೂರಿದವರನ್ನು ಸಿದ್ದರಾಮಯ್ಯ ಅಮಾಯಕರು ಎಂದು ಹೇಳುತ್ತಾರೆ. ಸಿಸಿಟಿವಿ ದೃಶ್ಯ ನೋಡಿ ಈಗ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಮಾತನಾಡಲಿ ಎಂದು ಆಗ್ರಹಿಸಿದರು.

    ಕಲ್ಲಿನಿಂದ ಹೊಡೆದರೆ ಜನ ಬದುಕುತ್ತಾರಾ. ತಮ್ಮ ಪ್ರಾಣ ಹೋಗುತ್ತಿದ್ರು ಪೊಲೀಸರು ಜನರ ರಕ್ಷಣೆಗೆ ನಿಂತಿದ್ದಾರೆ. ಅವರ ಕರ್ತವ್ಯದ ಬಗ್ಗೆ ಮಾತನಾಡುವವರು ಆತ್ಮಸಾಕ್ಷಿ ಕೇಳಿಕೊಳ್ಳಲಿ ಎಂದ ಅವರು, ಸಿದ್ದರಾಮಯ್ಯ, ರಮೇಶ್ ಕುಮಾರ್ ಮಂಗಳೂರಿಗೆ ಗನಂಧಾರಿ ಕೆಲಸ ಮಾಡಲು ಹೋಗಿರಲಿಲ್ಲ. ತಮ್ಮ ಮರಿಟಿಪ್ಪುಗಳು ಮಾಡಿರುವ ತಪ್ಪು ಮುಚ್ಚಲು ಹೋಗುತ್ತಿದ್ದರು ಎನ್ನುವುದು ಇದರಲ್ಲಿ ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.

    ಸುರೇಶ್ ಅಂಗಡಿ ಹೇಳಿರುವ ಮಾತಿಗೆ ನಾನು ಬದ್ದ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.