Tag: ಮಂಗಳೂರು ಕುಕ್ಕರ್ ಬ್ಲಾಸ್ಟ್

  • ನನಗೆ ಯಾರ ಸಪೋರ್ಟ್ ಬೇಕಿಲ್ಲ – ನನ್ನ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ: ಡಿಕೆಶಿ

    ನನಗೆ ಯಾರ ಸಪೋರ್ಟ್ ಬೇಕಿಲ್ಲ – ನನ್ನ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ: ಡಿಕೆಶಿ

    ಕೊಪ್ಪಳ: ಈಗಲೂ ಮಂಗಳೂರು ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಪ್ರಕರಣದ (Mangaluru Cooker Blast) ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ನನಗೆ ಯಾರ ಸಪೋರ್ಟ್ ಬೇಕಿಲ್ಲ ಎಂದು ಉಗ್ರ ಶಾರೀಕ್ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ನಿನ್ನೆ ನೀಡಿದ ಹೇಳಿಕೆಯನ್ನು ಇಂದು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

    ಕೊಪ್ಪಳದಲ್ಲಿ (Koppala) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಕಮಿಷನರ್ ತನಿಖೆ ಮಾಡದೆ ಆರೋಪಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆ ಬ್ಲಾಸ್ಟ್ ಪ್ರಕರಣ ನಡೆದಿದೆ. ವಿಷಯ ಡೈವರ್ಟ್ ಮಾಡಲು ಬಿಜೆಪಿ ಆಡಿದ ಕೆಲಸ ಅದು. ಈಗಲೂ ದಕ್ಷಿಣ ಕನ್ನಡ, ಶಿವಮೊಗ್ಗ ಘಟನೆಗಳಿಂದ ಭ್ರಷ್ಟಾಚಾರ ಡೈವರ್ಟ್ ಮಾಡಲು ಹೊರಟಿದೆ. ನನಗೆ ಯಾರ ಸಪೋರ್ಟ್ ಬೇಕಿಲ್ಲ. ನಾನು ನನ್ನ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ. ಬಿಜೆಪಿಗೆ ಯಾವಾಗಲು ಡಿಕೆಶಿನೆ ಟಾರ್ಗೆಟ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀವು ಸರ್ವನಾಶ ಆಗಿ ಹೋಗ್ತೀರಾ – ಡಿಕೆಶಿ ವಿರುದ್ಧ ಮುತಾಲಿಕ್ ಕಿಡಿ

    ನಿನ್ನೆ ಡಿಕೆಶಿ ಹೇಳಿದ್ದೇನು?
    ನಿನ್ನೆ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ (Cooker Bomb Blast) ಪ್ರಕರಣದ ಆರೋಪಿ ಶಾರೀಕ್‌ನನ್ನು ಟೆರರಿಸ್ಟ್ ಎಂದು ಯಾವ ತನಿಖೆಯನ್ನೂ ನಡೆಸದೇ ಹೇಗೆ ಘೋಷಣೆ ಮಾಡಿದ್ದೀರಿ? ಮಂಗಳೂರಿನಲ್ಲಿ ನಡೆದ ಸ್ಫೋಟ ಮುಂಬೈ ಆಟ್ಯಾಕ್ (Mumbai Attack) ಅಥವಾ ಪುಲ್ವಾಮಾ (Polwama), ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಅದೇನೋ ಕುಕ್ಕರ್ ಟೆರರಿಸ್ಟ್ ಅಂದುಕೊಂಡು ವೋಟರ್ ಐಡಿ ಹಗರಣವನ್ನು (Voter Id Scam) ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು (ADGP) ಅಷ್ಟು ಸ್ಪೀಡ್ ಆಗಿ ಹೇಗೆ ಹೇಳಿದರು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದು ಮಹಾಸಾಧನೆ ಅಂದ್ರು ಕಾಂಗ್ರೆಸ್ ನಾಯಕರು

    ಬೆಂಗಳೂರಿನ ವೋಟರ್ ಐಡಿ ಹಗರಣ (Voter ID Scam) ವಿಷಯವನ್ನು ಬಿಜೆಪಿ ಡೈವರ್ಟ್ ಮಾಡಿದೆ. ಶಿವಮೊಗ್ಗಕ್ಕೆ, ಮಂಗಳೂರು, ಮಲೆನಾಡು ಭಾಗಕ್ಕೆ ಯಾಕೆ ತನಿಖೆ ಹೋಗಲ್ಲ. ಎಲ್ಲಾ ಬೆಂಗಳೂರಿನಲ್ಲೇ ತನಿಖೆ ಆಗುತ್ತಿದೆ. ಜನರು ದಡ್ಡರಾ? ಜನರ ಭಾವನೆಗಳ ಮೇಲೆ ಆಟ ಆಡುತ್ತಿದೆ. ಬಿಜೆಪಿ ಸರ್ಕಾರದ ಕೊನೆ ದಿನಗಳು ಬಂದಿದೆ ಇನ್ನೇನು 100 ದಿನ ಇದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಮಾಡುತ್ತೀರಿ. ಶಿವಮೊಗ್ಗ, ಮಂಗಳೂರು, ಉಡುಪಿ ಕಡೆ ಯಾಕೆ ಯಾರೂ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಕಮಲದ ರೂಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಯಾಕೆ ಆ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಯಾರು ಎಲ್ಲಿ ಹೂಡಿಕೆ ಮಾಡಿದ್ದಾರೆ? ಪಟ್ಟಿಯನ್ನು ಬಿಡುಗಡೆ ಮಾಡಲಿ ಎಂದು ಡಿಕೆಶಿ ಸರ್ಕಾರಕ್ಕೆ ಸವಾಲು ಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]