Tag: ಮಂಗಳುರು

  • ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಮೈಸೂರು: ನಗರದಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ಮನೆ, ರೂಂ ಗಳನ್ನು ಬಾಡಿಗೆ (House For Rent) ನೀಡುವಂತಿಲ್ಲ. ರೂಂ, ಮನೆ ಬಾಡಿಗೆ ಕೊಡುವ ಮುನ್ನಾ ಸ್ಥಳೀಯ ಪೊಲೀಸರಿಂದ ಕ್ಲಿಯರೆನ್ಸ್ (Police Clearance) ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ.

    ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ (Mangaluru Bomb Blast) ಮಾಡಿದ ಶಾರೀಕ್ (Shariq) ಮೈಸೂರಿನಲ್ಲಿ (Mysuru) ಮನೆ ಬಾಡಿಗೆ ಪಡೆದು ವಾಸವಿದ್ದ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು ಮನೆ ಬಾಡಿಗೆ ಪಡೆಯಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಮನೆ ಮಾಲೀಕರಿಗೂ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    ಶಾರೀಕ್ ಆರೋಗ್ಯದಲ್ಲಿ ಚೇತರಿಕೆ:
    ಶಂಕಿತ ಉಗ್ರ ಶಾರೀಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ನಡುವೆ ಉಗ್ರನ ಲಿಂಕ್ ರಹಸ್ಯ ಮತ್ತಷ್ಟು ಭೇದಿಸಿರುವ ಪೊಲೀಸರಿಗೆ ಆತಂಕಕಾರಿ ಮಾಹಿತಿಗಳು ಲಭ್ಯವಾಗಿವೆ. 26/11 ಮುಂಬೈನ ದಾಳಿಯಂತೆಯೇ ಅದೇ ದಿನವಾದ ಇಂದು ಕೂಡಾ ಮಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – ನಾಲ್ವರು ಮಾವೋವಾದಿಗಳ ಹತ್ಯೆ

    ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ:
    ವೆಂಟಿಲೇಟರ್‌ನಲ್ಲಿದ್ದ ಶಾರೀಕ್ ಇಂದು ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದ್ದಾನೆ. ಈ ನಡುವೆ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ಆತ ಇರುವ 5ನೇ ಮಹಡಿ ಹಾಗೂ ಐಸಿಯುನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಮೂರು ಪಾಳಿಯಲ್ಲಿ ಪೊಲೀಸರು ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಸ್ಫೋಟಕ ಹ್ಯಾಂಡ್ಲರ್‌ಗಳು, ಸ್ಲೀಪರ್ ಸೆಲ್‌ಗಳನ್ನು ಆಕ್ವೀವ್ ಮಾಡಿ ಆತನನ್ನು ಮುಗಿಸುವ ಯತ್ನ ನಡೆಸಿರುವ ಶಂಕೆ ಇದ್ದು ಈ ಹಿನ್ನಲೆಯಲ್ಲೂ ಪೊಲೀಸರು ಆಕ್ಟೀವ್ ಆಗಿದ್ದಾರೆ. ಸ್ವತಃ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಿದ್ದು, ಹಿರಿಯ ಅಧಿಕಾರಿಗಳು ಆಸ್ಪತ್ತೆಯಲ್ಲೇ ಬೀಡು ಬಿಟ್ಟಿದ್ದಾರೆ.

    ಮುಂಬೈ ಸ್ಫೋಟದಂತೆ ಪ್ಲ್ಯಾನ್‌
    ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದ್ದು, ಉಗ್ರ ಶಾರೀಕ್ ತನಿಖಾಧಿಕಾರಿಗಳ ಜೊತೆ ಮಾತನಾಡದೇ ಇದ್ರೂ ಸಾಕಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ. ಶಾರೀಕ್ 26/11ರ ಮುಂಬೈ ಸ್ಫೋಟದಂತೆಯೇ (Mumbai BombBlast) ಮಂಗಳೂರಿನಲ್ಲೂ ಅದೇ ದಿನ ಅಂದರೆ ಇಂದು ನವೆಂಬರ್ 26 ಆಗಿರೋದ್ರಿಂದ ಇಂದೇ ಮತ್ತೊಮ್ಮೆ ಸರಣಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದನಂತೆ. ಮುಂಬೈ ಸ್ಫೋಟದ ಉಗ್ರ ಕಸಬ್‌ನಂತೆಯೇ ಹಿಂದೂ ಸೋಗಿನಲ್ಲೇ ಮಂಗಳೂರಿಗೆ ಬಂದಿದ್ದ ಶಾರೀಕ್ ಕಳೆದ ನ.19ರ ಶನಿವಾರ ಕುಕ್ಕರ್ ಬಾಂಬ್ ಸ್ಫೋಟ ಮಾಡಲು ಬಂದು ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತನ ಪ್ಲ್ಯಾನ್‌ ನಂತೆಯೇ ಸ್ಫೋಟಗೊಂಡಿದ್ದರೆ ಮತ್ತೆ ಮೈಸೂರಿಗೆ ತೆರಳಿ ಬಾಂಬ್ ತಯಾರಿಸಿ ಶನಿವಾರ (ನವೆಂಬರ್ 26) ಮಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.

    ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮಾತನಾಡಿ, ಉಗ್ರ ಶಾರೀಕ್‌ಗೆ ಐಸಿಸ್ ಸೇರಿ ಹಲವು ಉಗ್ರರ ಸಂಪರ್ಕವಿತ್ತು ಅನ್ನೋದು ಬೆಳಕಿಗೆ ಬಂದಿದೆ. ಈತ ಮುಸ್ಲಿಂ ಭಾಷಣಕಾರ ಝಾಕೀರ್ ನಾಯ್ಕ್ನಿಂದ ಪ್ರೇರೇಪಿತನಾಗಿದ್ದ ಅನ್ನೋದು ಮತ್ತೆ ಸಾಬೀತಾಗಿದೆ. ಸ್ಫೋಟಗೊಂಡ ಒಂದೂವರೆ ಗಂಟೆಯಲ್ಲೇ ಮಲೇಶಿಯಾದಲ್ಲಿರೋ ಝಾಕೀರ್ ನಾಯ್ಕ್ ಆತನ ಟ್ವೀಟರ್‌ನಲ್ಲಿ ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದ್ಯಾ ಎಂದು ಟ್ವೀಟ್ ಮಾಡಿದ್ದ. ಆತ್ಮಾಹುತಿ ಬಾಂಬ್‌ನ ಬಗೆಗಿನ ತನ್ನ ವಿಡಿಯೋವನ್ನೂ ಪೋಸ್ಟ್ ಮಾಡಿದ್ದ. ಇದೆಲ್ಲವನ್ನೂ ನೋಡುವಾಗ ಉಗ್ರ ಶಾರೀಕ್‌ನ ಲಿಂಕ್ ದೊಡ್ಡ ಮಟ್ಟದಲ್ಲೇ ಇತ್ತು ಅನ್ನೋದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುತ್ತೂರಿನ ಬಾಲಕನ ಆವಿಷ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ

    ಪುತ್ತೂರಿನ ಬಾಲಕನ ಆವಿಷ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ

    – ಮೋದಿ ಜೊತೆ ವೀಡಿಯೋ ಸಂವಾದ
    – ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದ ಬಾಲಕ

    ಮಂಗಳೂರು: ದಕ್ಷಿಣ ಕನ್ನಡದ ರಾಕೇಶ್‍ಕೃಷ್ಣ ಕೆ. ಮತ್ತು ಬೆಂಗಳೂರಿನ ವೀರ್ ಕಶ್ಯಪ್ ಸೇರಿದಂತೆ ದೇಶದ ಒಟ್ಟು 32 ಮಕ್ಕಳಿಗೆ ಈ ಬಾರಿಯ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಲಭಿಸಿದೆ.

    ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಅವರ ಸೀಡೋಗ್ರಾಫರ್ ಅನ್ನೋ ಬೀಜ ಬಿತ್ತನೆಯ ಕೃಷಿ ಯಂತ್ರ ಸಂಶೋಧನೆಗೆ ಈ ಪ್ರಶಸ್ತಿ ಸಂದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಂಗಳೂರಿನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವ ಅವಕಾಶವೂ ರಾಕೇಶ್ ಕೃಷ್ಣಗೆ ಲಭಿಸಿದೆ. ಇನ್ನಷ್ಟು ಸಾಧನೆಗೈಯಲು ಪ್ರಧಾನಿ ಮೋದಿಯವರ ಮಾತುಗಳು ಪ್ರೇರಣೆ ನೀಡಿದೆ ಎಂದು ರಾಕೇಶ್ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾನೆ.

    ಪ್ರಸ್ತುತ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ರಾಕೇಶ್ ಕೃಷ್ಣ ಅವರು ಪುತ್ತೂರಿನ ಬನ್ನೂರಿನ ಕೃಷಿಕ ರವಿಶಂಕರ್ ಹಾಗೂ ಡಾ.ದುರ್ಗಾರತ್ನ ಅವರ ಪುತ್ರನಾಗಿದ್ದಾನೆ. ರಾಕೇಶ್ ಕೃಷ್ಣ ತನ್ನ ಸಾಧನೆಗೆ ತನ್ನ ಅಕ್ಕ ರಶ್ಮಿ ಮಾರ್ಗದರ್ಶನವೇ ಸ್ಪೂರ್ತಿ ಎಂದಿದ್ದಾನೆ. ಏಳನೇ ತರಗತಿಯಿಂದ ಆವಿಷ್ಕಾರ ಆರಂಭಿಸಿದ ರಾಕೇಶ್ ಕೃಷ್ಣ ಕೃಷಿ ಬಿತ್ತನಾ ಯಂತ್ರದಲ್ಲಿ ಮಲ್ಟಿಪಲ್ ಆಪರೇಟಿಂಗ್ ಸಿಸ್ಟಮ್ ಆವಿಷ್ಕಾರ ಮಾಡಿದ್ದಾನೆ. ಇಂದು ಪ್ರಧಾನಿ ಜೊತೆಗೆ ಸಂವಾದ ನಡೆಸಿದ ಈ ದಿನ ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದು ರಾಕೇಶ್ ಕೃಷ್ಣ ಪ್ರತಿಕ್ರಿಯಿಸಿದ್ದಾನೆ.

    ದ.ಕ.ಜಿಲ್ಲಾಡಳಿತ ವತಿಯಿಂದ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಿ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಉಪಸ್ಥಿತರಿದ್ದು ಪ್ರಶಸ್ತಿ ಪಡೆದ ರಾಕೇಶ್ ಕೃಷ್ಣ ಅವರನ್ನ ಅಭಿನಂದಿಸಿದರು. ಪ್ರಶಸ್ತಿಗೆ ಆಯ್ಕೆಯಾದ ದೇಶದ ಒಟ್ಟು 32 ಮಕ್ಕಳಲ್ಲಿ ನಾವೀನ್ಯತೆ ವಿಭಾಗದಲ್ಲಿ 9, ಕಲೆ ಮತ್ತು ಸಂಸ್ಕøತಿಯಲ್ಲಿ 7, ಶೈಕ್ಷಣಿಕ ಸಾಧನೆ ಮತ್ತು ಕ್ರೀಡಾ ವಿಭಾಗಗಳಲ್ಲಿ ತಲಾ 5, ಶೌರ್ಯ ವಿಭಾಗದಲ್ಲಿ 3 ಮತ್ತು ಸಾಮಾಜಿಕ ಸೇವೆ ವಿಭಾಗದಲ್ಲಿ ಒಬ್ಬರಿಗೆ ಪ್ರಶಸ್ತಿ ಲಭಿಸಿದೆ. ಒಟ್ಟಿನಲ್ಲಿ ಮೂವತ್ತೆರಡು ಮಕ್ಕಳಲ್ಲಿ ಕರ್ನಾಟಕದ ಇಬ್ಬರು ಆಯ್ಕೆಯಾಗಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

  • #BurningKarnataka ಟ್ವಿಟ್ಟರ್‍ನಲ್ಲಿ ಟ್ರೆಂಡಿಗ್ ಆಗುತ್ತಿದೆ ಕರಾವಳಿಯ ಕೋಮುಗಲಾಟೆ

    #BurningKarnataka ಟ್ವಿಟ್ಟರ್‍ನಲ್ಲಿ ಟ್ರೆಂಡಿಗ್ ಆಗುತ್ತಿದೆ ಕರಾವಳಿಯ ಕೋಮುಗಲಾಟೆ

    ಬೆಂಗಳೂರು: ಕರ್ನಾಟಕದ ಕರಾವಳಿಯ ಕೋಮುಗಲಾಟೆ ಈಗ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

    ಕರ್ನಾಟಕದಲ್ಲಿ ನಡೆಯುತ್ತಿರುವ ಗಲಭೆ ಹಾಗೂ ಅನ್ಯಾಯಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಹಾಗೂ ರಾಷ್ಟ್ರಪತಿಗಳ ಗಮನಕ್ಕೆ ತರಲು ಟ್ವಿಟ್ಟರ್ ನಲ್ಲಿ ಈ ಅಭಿಯಾನ ಆರಂಭವಾಗಿದೆ.

    #BurningKarnataka (ಬರ್ನಿಂಗ್ ಕರ್ನಾಟಕ) ಅನ್ನೋ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಟಾಪಿಕ್ ಆಗಿದೆ. ಗಲಭೆ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದು, ಆ ಬಳಿಕ ದಕ್ಷಣ ಕನ್ನಡದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು.