Tag: ಮಂಗಳಮುಖಿಯರು

  • 2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

    2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

    ಬೆಂಗಳೂರು: ಬಟ್ಟೆ ಅಂಗಡಿಯ ಉದ್ಘಾಟನಾ ಕಾರ್ಯಕ್ರಮದ ಸಮಯದಲ್ಲಿ ಮಂಗಳಮುಖಿಯರು (Transgenders) ಬಂದು ಗಲಾಟೆ ಮಾಡಿದ ಘಟನೆ ವಿಜಯನಗರ ಹಂಪಿನಗರದಲ್ಲಿ (Hampinagar) ನಡೆದಿದೆ.

    ಬಟ್ಟೆ ಅಂಗಡಿ ಉದ್ಘಾಟನೆ ಮುನ್ನ ಹೋಮ ಹವನ ಆಯೋಜನೆಗೊಂಡಿತ್ತು. ಸರಿಯಾಗಿ ಪೂಜೆ ಸಮಯಕ್ಕೆ ನಾಲ್ವರ ಮಂಗಳಮುಖಿರ ಗುಂಪು ಆಗಮಿಸಿದೆ.

     

    ಮಂಗಳಮುಖಿಯರಿಗೆ ಮಾಲೀಕ 2 ಸಾವಿರ ರೂ. ನೀಡಿದ್ದಾರೆ. ಆದರೆ 2 ಸಾವಿರ ರೂ.ಗೆ ಒಪ್ಪದ ಇವರು 10 ಸಾವಿರ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. 10 ಸಾವಿರ ರೂ. ಕೊಡದೇ ಇದ್ದದ್ದಕ್ಕೆ  ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಬಟ್ಟೆ ಅಂಗಡಿ ಮಾಲೀಕ ರಾಘವೇಂದ್ರ ಅವರ ಕುಟುಂಬ ಸದಸ್ಯರಿಗೆ ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಅನ್ಯಮತೀಯ ಯುವಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ – ಸಹಾಯಕ್ಕೆ ಬಂದು ಪ್ರಜ್ಞೆ ತಪ್ಪಿಸಿ ಕೃತ್ಯ

    ಈ ಸಂಬಂಧ ವಿಡಿಯೋ ಮಾಡಿ ನೋವು ತೋಡಿಕೊಂಡ ರಾಘವೇಂದ್ರ ಅವರು, ಶುಭ ಕಾರ್ಯ ಬಂದ್ರೆ ಸಾಕು ಮಂಗಳಮುಖಿಯರು ಬರುತ್ತಾರೆ. ಅವರು ಬಂದರು ಅಂತ ನಮಗೆ ತಿಳಿದಷ್ಟು ಹಣ ನೀಡಿದರೆ ಒಪ್ಪುವುದಿಲ್ಲ. ಇಷ್ಟೇ ಕೊಡಿ ಎಂದು ದಬ್ಬಾಳಿಕೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಹಲ್ಲೆಗೆ ಯತ್ನಿಸಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ಕಿರಿಕ್ – ಕೇಳಿದಷ್ಟು ಹಣ ನೀಡದ್ದಕ್ಕೆ ದಾಂಧಲೆ

    ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ಕಿರಿಕ್ – ಕೇಳಿದಷ್ಟು ಹಣ ನೀಡದ್ದಕ್ಕೆ ದಾಂಧಲೆ

    ಬೆಂಗಳೂರು: ಗೃಹ ಪ್ರವೇಶದ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರ ಗುಂಪೊಂದು ಕೇಳಿದಷ್ಟು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬೆಂಗಳೂರಿನ ರಾಮಮೂರ್ತಿನಗರ ಸಮೀಪದ ಕಲ್ಕೆರೆ ಚನ್ನಸಂದ್ರದ ಪೂಜಾ ಗಾರ್ಡನ್ 2ನೇ ಹಂತದಲ್ಲಿ ಲೋಕೇಶ್ ಅವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 7:30ಕ್ಕೆ ಗೃಹಪ್ರವೇಶದ ಪೂಜೆ ನಡೆಯುತ್ತಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿದ ಮಂಗಳಮುಖಿಯರು 10 ರೂ. ನೋಟಿನಲ್ಲಿ ದೃಷ್ಟಿ ತೆಗೆದು 25 ಸಾವಿರ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಓದಿ: 5 ಸ್ಟಾರ್‌ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್‌ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?‌

    ಈ ವೇಳೆ ಮೊದಲು 1 ಸಾವಿರ ರೂಪಾಯಿಯನ್ನು ಲೋಕೇಶ್ ನೀಡಿದ್ದಾರೆ. ಆದರೆ ನಮಗೆ 25 ಸಾವಿರ ರೂ. ನೀಡಲೇಬೇಕೆಂದು ಮಂಗಳಮುಖಿಯರು ಹಠಹಿಡಿದಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದ ಹಣ ನೀಡಲು ನಿರಾಕರಿಸಿದ್ದಕ್ಕೆ ಮನೆಯವರಿಗೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನೂ ಓದಿ:  ಬಿಜೆಪಿ ಇಡಿ ಅಸ್ತ್ರಕ್ಕೆ ಕಾಂಗ್ರೆಸ್ `ಅಗ್ನಿಪಥ್’ ಬ್ರಹ್ಮಾಸ್ತ್ರ – ಜೂನ್ 27ಕ್ಕೆ ಶಾಂತಿಯುತ ಸತ್ಯಾಗ್ರಹ

    transgender

    ಮುಂಗಳಮುಖಿಯರು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಸಹಿಸಲಾಗದೇ ಲೋಕೇಶ್ ಅವರ ಪತ್ನಿ ಆಶಾ ಎಲ್ಲರನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಂಗಳಮುಖಿಯರು ಲೋಕೇಶ್ ಪತ್ನಿ ಆಶಾ ಅವರ ಕೆನ್ನೆಗೆ ಹೊಡೆದಿದ್ದಾರೆ. ನಂತರ ಗಲಾಟೆ ಮಾಡದಂತೆ ಬುದ್ಧಿ ಹೇಳಲು ಬಂದ ಸಂಬಂಧಿ ಮಹೇಂದ್ರ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಲೋಕೇಶ್ ಅವರ ಮಾವ ಸೊನ್ನೆಗೌಡರನ್ನು ತಳ್ಳಾಡಿ ರಂಪಾಟ ಮಾಡಿದ್ದಾರೆ. ಗೃಹ ಪ್ರವೇಶದ ದಿನವೇ ಮನೆಯವರಿಗೆ ಹಿಡಿಶಾಪ ಹಾಕಿದ್ದಾರೆ.

    ಅಷ್ಟರಲ್ಲಿ ಲೋಕೇಶ್ ಸಂಬಂಧಿಯೊಬ್ಬರು ಹೊಯ್ಸಳ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಮನೆಯಿಂದ ಹೊರಬಂದು ಹೊರಗಿದ್ದ ಕುರ್ಚಿ ಒಡೆದು ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ. ಪೊಲೀಸರಿಗೆ ದೂರು ಕೊಡುತ್ತೇವೆ ಎಂದಿದ್ದಕ್ಕೆ ನಿಮ್ಮನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇದೀಗ ಈ ಬಗ್ಗೆ ಇದೀಗ ಲೋಕೇಶ್ ಅವರು ದೂರು ದಾಖಲಿಸಿದ್ದು, ಆರೋಪಿಗಳಿಗಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    Live Tv

  • ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆಗೆ ಯತ್ನ

    ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆಗೆ ಯತ್ನ

    ಮಂಗಳೂರು: ಮಂಗಳಮುಖಿಯರಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಹೊರವಲಯದ ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ಗೇಟ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

    ಟೋಲ್ ಗೇಟ್ ತೆರವಿಗೆ ಪ್ರತಿಭಟಿಸುತ್ತಿರುವ ಆಸಿಫ್ ಎಂಬವರ ಮೇಲೆ ಹಲ್ಲೆಗೆ ಯತ್ನ. ವ್ಯಕ್ತಿಗೆ ಮಂಗಳಮುಖಿಯರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ದೂರು ದಾಖಲಿಸಿಕೊಂಡ ಪೊಲೀಸರು ವಾಸವಿ ಗೌಡ, ಲಿಪಿಕಾ, ಹಿಮಾ, ಆದ್ಯ, ಮಾಯಾ, ಮೈತ್ರಿ ಎಂಬ 6 ಮಂದಿ ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504(ಬೆದರಿಕೆ), 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಆಸಿಫ್ ಅಕ್ರಮವಾಗಿ ಟೋಲ್ ನಡೆಸುತ್ತಿರುವುದಾಗಿ ಆರೋಪಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.

  • ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ಬಳ್ಳಾರಿ: ಮಾಜಿ ಶಾಸಕ ಸೂರ್ಯ ನಾರಾಯಣ ಅವರ ಮಗ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಿನ್ನೆಲೆಯಲ್ಲಿ ಮಂಗಳಮುಖಿಯರ ಮೊರೆ ಹೋಗಿದ್ದಾರೆ.

    ನಾರಾ ಭರತ್ ರೆಡ್ಡಿ ಮಂಗಳಮುಖಿಯರಿಗೆ ಉಡಿತುಂಬುವ ಮೂಲಕ ವಿಶೇಷ ಪೂಜೆ ಪುರಸ್ಕಾರ ಮಾಡಿದ್ದಾರೆ. ಭರತ್ ರೆಡ್ಡಿಯವರು ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡಬೇಕೆಂದು ಯೋಜನೆ ನಡೆಸಿದ್ದಾರೆ. 101 ಮಂಗಳಮುಖಿಯರಿಗೆ ಸೀರೆ, ಬೆಳ್ಳಿ ದೀಪ, ಅರಿಶಿನ ಕುಂಕುಮ ಬಟ್ಟಲು ಸೇರಿದಂತೆ ಇತ್ಯಾದಿ ವಸ್ತುಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

    ಕೇರಳ ಮೂಲದ ಜ್ಯೋತಿಷಿಗಳ ಸಲಹೆ ಮೇರೆಗೆ ಮಂಗಳ ಮುಖಿಯರಿಗೆ ಪೂಜೆ ಸಲ್ಲಿಸಿದ್ದಾರೆ. ಮಂಗಳ ಮುಖಿಯರಿಗೆ ಪೂಜೆ ಮಾಡಿದರೇ ಟಿಕೆಟ್ ಸಿಗುತ್ತದೆ ಹಾಗೂ ನೀವು ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ನಂಬಿಕೆಯಿದೆ ಎಂದು ಸಲಹೆ ನೀಡಿದ್ದರು. ಇನ್ನೂ ಚುನಾವಣೆಗೆ ಒಂದುವರೆ ವರ್ಷ ಇರುವಾಗಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದಾರೆ.

  • ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

    ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

    ಬೆಂಗಳೂರು: ಹಾಸ್ಯ ನಟ ದಿ.ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರು ದಾಳಿ ನಡೆಸಿದ ಪ್ರಕರಣ ನಗರದ ಹೆಬ್ಬಾಳ ಫ್ಲೈಓವರ್ ಬಳಿ ನಡೆದಿದೆ.

    ರಾತ್ರಿ 9 ಗಂಟೆ ವೇಳೆ ಜಿಮ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ಹೆಬ್ಬಾಳ ಫ್ಲೈ ಓವರ್ ಬಳಿ ದಿ.ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮೇಲೆ ಮಂಗಳಮುಖಿಯರು ದಾಳಿ ಮಾಡಿದ್ದಾರೆ. ಮಂಗಳಮುಖಿಯರು ಬ್ಯಾಗ್ ಇಡಿದು ಎಳೆದ ಕಾರಣ ರಕ್ಷಕ್ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ಘಟನೆಯಿಂದ ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ದ್ವಿಚಕ್ರ ವಾಹನ ಸಹ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಮಂಗಳಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ರಕ್ಷಕ್ ದ್ವಿಚಕ್ರ ವಾಹನವನ್ನು ಫ್ಲೈಓವರ್ ಮೇಲೆ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು. ಬಳಿಕ ಹೆಬ್ಬಾಳ ಪೊಲೀಸರ ನೆರವಿನಿಂದ ಗಾಡಿಯನ್ನು ತೆಗೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಂಗಳಮುಖಿಯರ ವಿಶಿಷ್ಟ ಸ್ವಾತಂತ್ರ್ಯ ದಿನಾಚರಣೆ

    ಮಂಗಳಮುಖಿಯರ ವಿಶಿಷ್ಟ ಸ್ವಾತಂತ್ರ್ಯ ದಿನಾಚರಣೆ

    ಬೆಂಗಳೂರು: ಇಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಬೆಂಗಳೂರಿನ ಎಲ್.ಆರ್ ಬಂಡೆ ಸರ್ಕಲ್ ನಲ್ಲಿ ಮಂಗಳಮುಖಿಯರು ಧ್ವಜಾರೋಹಣ ಮಾಡಿ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.

    ಬಳಿಕ ಭರವಸೆ ಟ್ರಸ್ಟ್ ಸಹಯೋಗದೊಂದಿಗೆ, ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಮಂಗಳಮುಖಿಯರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸದಂತೆ, ಅವರ ಬಗ್ಗೆ ಇರುವ ಮನೋಭಾವ ಬದಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ನಗರದ ನಾನಾ ಭಾಗದಲ್ಲಿ ನಮ್ಮ ಬದುಕನ್ನು ಮುಕ್ತವಾಗಿ ಬದುಕುವ ಅವಕಾಶವನ್ನು ಸಮಾಜ ನೀಡಲಿ ಎಂದು ಬಿತ್ತಿ ಪತ್ರ ಪ್ರದರ್ಶಿಸಿದರು. ಇದನ್ನೂ ಓದಿ: ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೋ ಮಾತೆ ಎಂಟ್ರಿ

  • ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ

    ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ

    ಧಾರವಾಡ: ಸ್ಯಾಂಡಲ್‍ವುಡ್ ನಟ ಸಂಚಾರಿ ವಿಜಯ್ ನಿಧನ ಹಿನ್ನೆಲೆಯಲ್ಲಿ, ವಿಜಯ್ ನೆನಪಿಗೋಸ್ಕರ ಯುವಕ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚುವ ಮೂಲಕವಾಗಿ ಧಾರವಾಡದಲ್ಲಿ ವಿಶೇಷ ನಮನ ಸಲ್ಲಿಸಲಾಗಿದೆ.

    ನಗರದ ತೇಜಸ್ವಿನಗರದ ಸಾಹಿಲ್ ಢಾಂಗೆ ಎಂಬ ಯುವಕ, ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿ ವಿಜಯ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾನೆ. ಯುವಕನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಂಗಳಮುಖಿಯರಿಗಾಗಿಯೇ ಒಂದು ಚಲನಚಿತ್ರ ಮಾಡಿದ್ದ ಸಂಚಾರಿ ವಿಜಯ್ ನೆನಪಿಗೋಸ್ಕರ ಈ ದಿನಸಿ ಕಿಟ್ ಹಂಚಿಕೆ ಮಾಡುತ್ತಿದ್ದೇನೆ. ನಾನು ಅವನಲ್ಲ ಅವಳು ಚಿತ್ರದಿಂದ ಮಂಗಳಮುಖಿಯರ ಮೇಲೆ ಗೌರವ ಬಂತು ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ: ವಿನೋದ್ ರಾಜ್ ಸಂತಾಪ

    ಮಂಗಳಮುಖಿಯರೂ ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರ ನಟನೆಯಿಂದ ನಮಗೆ ಗೌರವ ಸಿಗಲು ಶುರುವಾಯಿತ್ತು. ಸಿನಿಮಾ ಕಥೆ ಮಾಡಬೇಕಾದ್ರೆ ನಮ್ಮ ಜೀವನ ಶೈಲಿ ಹೇಗಿರುತ್ತದೆ ಎಂದು ಹೇಳಿದ್ದೇವು. ಅದಾದ ಬಳಿಕ ಅವರು ಮತ್ತು ನಮ್ಮ ಮಧ್ಯೆ ಒಳ್ಳೆ ಒಡನಾಟ ಇತ್ತು, ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರೋದು ದುಃಖದ ಸಂಗತಿಯಾಗಿದೆ. ನಮ್ಮ ಜೀವನ ಜಗತ್ತಿಗೆ ತೋರಿಸಿಕೊಟ್ಟವರು ಸಂಚಾರಿ ವಿಜಯ್ ಆಗಿದ್ದರು. ನಮ್ಮ ಹತ್ತಿರ ಪ್ರಾಕ್ಟಿಕಲ್ ಆಗಿ ಕೇಳಿ ಸಿನಿಮಾದಲ್ಲಿ ಆ ಪಾತ್ರ ನಿರ್ವಹಿಸಿದ್ದರು. ಆ ಬಳಿಕ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದಾಗ ನಮಗೆಲ್ಲ ಖುಷಿಯಾಗಿತ್ತು. ನಮ್ಮ ಬಗ್ಗೆ ಜನರಿಗೆ ತಿಳಿಸಲು ತುಂಬಾ ವೇಳೆ ಬೇಕಿತ್ತು, ಆದರೆ ಅವರು ಸಿನಿಮಾ ಮೂಲಕ ಜನರಿಗೆ ತಿಳಿಸಿಕೊಟ್ಟರು. ಅದರಿಂದಲೇ ಜನಸಾಮಾನ್ಯರಲ್ಲಿ ನಮ್ಮ ಮೇಲೆ ಗೌರವ ಹೆಚ್ಚಾಗಿದೆ. ಆದರೆ ಈಗ ಅವರೇ ಇಲ್ಲ ಅನ್ನೋದು ನಮಗೆಲ್ಲ ನೋವಿನ ವಿಚಾರ ಎಂದು ಮಂಗಳಮುಖಿ ವೈಶಾಲಿ ನೋವು ತೊಡಿಕೊಂಡರು.

  • ಮಂಗಳೂರಿನ ಮಂಗಳಮುಖಿಯರಿಗೆ ಸೇವಾಂಜಲಿ-ಆಶ್ರಯ ಹಸ್ತ ಕಿಟ್

    ಮಂಗಳೂರಿನ ಮಂಗಳಮುಖಿಯರಿಗೆ ಸೇವಾಂಜಲಿ-ಆಶ್ರಯ ಹಸ್ತ ಕಿಟ್

    ಮಂಗಳೂರು: ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 115 ಮಂಗಳಮುಖಿಯರಿಗೆ ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೇವಾಂಜಲಿ-ಆಶ್ರಯಹಸ್ತ ಕಿಟ್ ವಿತರಿಸಲಾಯಿತು.

    ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಮತ್ತು ದಿನಬಳಕೆಯ ವಸ್ತುಗಳನ್ನು ಒಳಗೊಂಡ ಕಿಟ್ ಗಳನ್ನು ನೀಡಲಾಯಿತು. ಈ ಕುರಿತು ಮಂಗಳಮುಖಿಯರ ಪರವಾಗಿ ಮಾತನಾಡಿದ ಬಾಲಕೃಷ್ಣ, ಟ್ರಸ್ಟಿನ ಕೊಡುಗೆಗೆ ಕೃತಜ್ಞತೆ ಅರ್ಪಿಸಿದರು. ಲಾಕ್‍ಡೌನ್ ಅವಧಿಯಲ್ಲಿ ಬದುಕು ಸಾಗಿಸುವುದೇ ಸವಾಲಾಗಿತ್ತು. ಆದಾಯ ಇಲ್ಲದೆ ದಿನ ದೂಡುವುದು ಕಷ್ಟಮಯವಾಗಿತ್ತು. ಇಂತಹ ಸಮಯದಲ್ಲಿ ಮಾನವೀಯ ಹೃದಯವುಳ್ಳ ದಾನಿಗಳ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು.

    ಬೆಂಗಳೂರಿನ ಆಶ್ರಯಹಸ್ತ ಚಾರಿಟೇಬಲ್ ಟ್ರಸ್ಟ್ ಹಾಗೂ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನವರು ಗೌರವಪೂರ್ಣವಾಗಿ ಆಹ್ವಾನಿಸಿ ಸಹಾಯಹಸ್ತ ಚಾಚಿದ್ದಾರೆ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಹನುಮಂತ ಕಾಮತ್, ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಟ್ರಸ್ಟಿನ ಪದಾಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

  • ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ

    ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ

    ಬೆಂಗಳೂರು: ಮಂಗಳಮುಖಿಯರಿಗೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ನೇತೃತ್ವದಲ್ಲಿ ಉಚಿತ ದಿನಸಿ ಕಿಟ್ ವಿತರಣೆ ಮಾಡಲಾಯ್ತು. ಇದೇ ವೇಳೆ ಹಲವು ಮಂಗಳಮುಖಿಯರಿಗೆ ಕೋವಿಡ್-19 ಲಸಿಕೆ ಸಹ ಹಾಕಿಸಲಾಯಿತು.


    ಬೆಳಗ್ಗೆ 9ಗಂಟೆಗೆ ನಗರದ ಟೌನ್ ಹಾಲ್ ಮುಂದೆ ಸುಮಾರು 1 ಸಾವಿರ ಮಂಗಳಮುಖಿಯರಿಗೆ ರೇಷನ್ ಕಿಟ್ ವಿತರಿಸುದರೊಂದಿಗೆ, ಕೆಲವರಿಗೆ ಕೋವಿಡ್ ಲಸಿಕೆಯನ್ನು ಪೊಲೀಸ್ ಸಿಬ್ಬಂದಿ ವರ್ಗದವರಿಂದ ಉಚಿತವಾಗಿ ಹಾಕಿಸಲಾಯಿತು. ಇದನ್ನೂ ಓದಿ: ಮಂಗಳಮುಖಿಯರಿಗೆ ಕಿಚ್ಚನ ನೆರವು

    ಶಾಸಕ ಉದಯ್ ಗರುಡಾಚಾರ್, ಐಪಿಎಸ್, ಟ್ರಾಫಿಕ್ ಜಾಯಿಂಟ್ ಕಮಿಷನರ್ ಡಾ. ರವಿಕಾಂತೆಗೌಡ, ಎಸಿಪಿಗಳಾದ ನಜ್ಮಾ ಫಾರೂಕಿ, ರಮೇಶಬಾಬು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಂಗಳಮುಖಿಯರಿಗೆ ಪಡಿತರ, ಮೆಡಿಕಲ್ ಕಿಟ್ ವಿತರಣೆ

    ಮಂಗಳಮುಖಿಯರಿಗೆ ಪಡಿತರ, ಮೆಡಿಕಲ್ ಕಿಟ್ ವಿತರಣೆ

    ಬೆಂಗಳೂರು: ಕೋವಿಡ್-19 ಸಂಕಷ್ಟದಲ್ಲಿರುವ 150ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಸಾಮಾಗ್ರಿಗಳ ಪಡಿತರ ಕಿಟ್ ಹಾಗೂ ಮೆಡಿಕಲ್ ಕಿಟ್‍ಗಳನ್ನು ಅಗರವಾಲ್ ಸಮಾಜ (ಕರ್ನಾಟಕ)ದ ಅಧ್ಯಕ್ಷ ಸಂಜಯ್ ಗರ್ಗ್ ವಿತರಿಸಿದರು.

    ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿಂದು ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಮತ್ತು ಅಗರವಾಲ್ ಸಮಾಜ (ಕರ್ನಾಟಕ) ಜಂಟಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಫುಡ್ ಕಿಟ್ ವಿತರಿಸಲಾಯಿತು.

    ಈ ವೇಳೆ ಮಾತನಾಡಿದ ಸಂಜಯ್ ಗರ್ಗ್ ಅವರು, ಮಂಗಳಮುಖಿಯರಿಗೆ ಪಡಿತರ ಕಿಟ್ ನೀಡುತ್ತಿರುವುದು ಸಂತಸ ಉಂಟುಮಾಡಿದೆ. ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗದ ಈ ವರ್ಗದವರ ಬಗ್ಗೆ ಕಾಳಜಿ ಹೊಂದಿರುವ ಬೆಂಗಳೂರು ಛಾಯಾಚಿತ್ರ ಸಂಸ್ಥೆ ಅವರ ಮುಂದಾಳತ್ವ ಪ್ರಶಂಸನೀಯ. ಕೊರೊನಾ ವಾರಿಯರ್ಸ್ ಆಗಿ, ಕೊರೊನಾ ಜಾಗೃತಿ ಮೂಡಿಸುವಲ್ಲಿ ಇವರ ಕಾರ್ಯ ಶ್ಲಾಘನೀಯ. ಇವರ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವಂತೆ ಮನವಿ ಮಾಡಿಕೊಂಡರು.

    ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಅಧ್ಯಕ್ಷ ಬಿ.ಎನ್.ಮೋಹನ್ ಕುಮಾರ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅಗರವಾಲ್ ಸಮಾಜ ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಸಂಘದ ಜೊತೆ ಕೈ ಜೋಡಿಸಿ ಪಡಿತರ ಕಿಟ್ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

    ಅಗರವಾಲ್ ಸಮಾಜ (ಕರ್ನಾಟಕ)ದ ಕಾರ್ಯದರ್ಶಿ ವಿಜಯ್ ಸರಫ್, ಜಂಟಿ ಕಾರ್ಯದರ್ಶಿ ಸಂಜಯ್ ಮೊಹತ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಅಧ್ಯಕ್ಷ ಬಿ.ಎನ್.ಮೋಹನ್ ಕುಮಾರ್, ಉಪಾಧ್ಯಕ್ಷ ಶೈಲೆಂದ್ರ ಭೋಜಕ್, ಕಾರ್ಯದರ್ಶಿ ಕೆ.ಎಸ್.ಗಣೇಶ್ ಉಪಸ್ಥಿತಿರಿದ್ದರು.