Tag: ಮಂಕಾಳ ವೈದ್ಯ

  • ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟಿಲ್ಲ – 8.17 ಲಕ್ಷ ಬಿಲ್ ಬಾಕಿ ಉಳಿಸಿಕೊಂಡ ಮಂಕಾಳ ವೈದ್ಯ

    ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟಿಲ್ಲ – 8.17 ಲಕ್ಷ ಬಿಲ್ ಬಾಕಿ ಉಳಿಸಿಕೊಂಡ ಮಂಕಾಳ ವೈದ್ಯ

    ಕಾರವಾರ: ರಾಜ್ಯ ಸರ್ಕಾರದ ಸಚಿವರೇ ಒಂದು ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಘಟನೆ ಕಾರವಾರದಲ್ಲಿ (Karwar) ನಡೆದಿದೆ.

    ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು (Mankal Vaidya) ಹೆಸ್ಕಾಂಗೆಗೆ ಒಂದು ವರ್ಷದಿಂದ ವಿದ್ಯುತ್ ಬಿಲ್ ತುಂಬದೇ ಬಾಕಿದಾರರ ಪಟ್ಟಿ ಸೇರಿದ್ದಾರೆ. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಸಚಿವರು ಭಟ್ಕಳದ ತಮ್ಮ ಸ್ವಾಮ್ಯದ ಮನೆ, ಶಾಲೆ ಕಟ್ಟಡಗಳು, ಮಗಳ ಹೆಸರಿನಲ್ಲಿ ಇರುವ ಕಟ್ಟಡಗಳು ಸೇರಿದಂತೆ ಬರೋಬ್ಬರಿ 8,17,415 ರೂ.ಗಳಷ್ಟು ವಿದ್ಯುತ್ ಬಿಲ್ ಭರಣ ಮಾಡುವುದನ್ನು ಬಾಕಿ ಇರಿಸಿಕೊಂಡಿದ್ದಾರೆ.

    ಭಟ್ಕಳದ ನಾಗೇಶ್ ನಾಯ್ಕ ಎಂಬವರು ಈ ಕುರಿತು ಮಾಹಿತಿ ಹಕ್ಕಿನಲ್ಲಿ ಹೆಸ್ಕಾಂ ನಿಂದ ಮಾಹಿತಿ ಪಡೆದಿದ್ದು, ಕಳೆದ ನವಂಬರ್‌ನಿಂದ ಒಂದು ವರ್ಷದ ಮಾಹಿತಿ ಕೇಳಿದ್ದರು. ಭಟ್ಕಳದ ಹೆಸ್ಕಾಂ ಇಲಾಖೆ ಈ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿದಾರರಿಗೆ ಮಾಹಿತಿ ನೀಡಿದ್ದು, ಇದರಲ್ಲಿ ಒಂದು ವರ್ಷದಲ್ಲಿ 8,17,415 ರೂ.ಗಳಷ್ಟು ಹೆಸ್ಕಾಂಗೆ ವಿದ್ಯುತ್ ಬಿಲ್ ಬಾಕಿ ಇದೆ. ಅದರಲ್ಲಿ ಸಚಿವ ಮಂಕಾಳು ವೈದ್ಯ ಹಾಗೂ ಅವರ ಪುತ್ರಿ ಬೀನಾ ಮಂಕಾಳು ವೈದ್ಯರ ಸ್ವಾಮ್ಯದ ಕಟ್ಟಡ, ಕಚೇರಿ, ಮನೆಗಳು ಸೇರಿವೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪುಸ್ತಕ ಮೇಳ, ಸಾಹಿತ್ಯ ಹಬ್ಬ – ಸಾರ್ವಜನಿಕರಿಗೆ ಎಂಟ್ರಿ: ಯು‌.ಟಿ ಖಾದರ್

  • ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ: ಸಚಿವ ಮಂಕಾಳ ವೈದ್ಯ

    ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ: ಸಚಿವ ಮಂಕಾಳ ವೈದ್ಯ

    ಕಾರವಾರ: ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ನಾವು ಗೆಲ್ತೀವಿ ಎಂದು ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದರು.

    ಕಾರವಾರದಲ್ಲಿ (Karwar) ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ ಮಾಡ್ತೀವಿ. ಪಕ್ಷದ ಆದೇಶದ ಪ್ರಕಾರ ಹೇಳಿದ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡ್ತೀನಿ. ಇದುವರೆಗೂ ಎಲ್ಲಿಗೆ ಯಾರು ಹೋಗಬೇಕು ಅಂತಾ ಹೇಳಿಲ್ಲ. ಅಭ್ಯರ್ಥಿಗಳ ಆಯ್ಕೆ ಬಳಿಕ ಪ್ರಚಾರದ ಬಗ್ಗೆ ಹೇಳ್ತಾರೆ ಎಂದು ತಿಳಿಸಿದರು.‌

    ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿ ವಿಚಾರವಾಗಿ ಮಾತನಾಡಿ, ಅಧಿಕಾರಿಗಳು ವರ್ಗಾವಣೆ ಆದ ಬಳಿಕ ಬರೋದು ಹೋಗುವುದು ಸಾಮಾನ್ಯ. ಈ ಹಿಂದೆ ಎಷ್ಟೋ ತಿಂಗಳುಗಳ ಕಾಲ ಕುರ್ಚಿ ಖಾಲಿ ಇತ್ತು. ಆರ್ಡರ್ ಆಗಿ 20 ದಿನ ಆದ್ರೂ ಬರದೆ ಇರೋದು ದೊಡ್ಡ ವಿಷಯ ಅಲ್ಲ. ಈ ಹಿಂದೆ ತಿಂಗಳುಗಟ್ಟಲೇ ಕುರ್ಚಿ ಖಾಲಿ ಇತ್ತು ಎಂದರು.

    ಅವರು ಅಧಿಕಾರ ಸ್ವೀಕರಿಸಿಲ್ಲ ಅಂತಾ ಯಾರಿಗಾದ್ರೂ ಸಮಸ್ಯೆ ಆಗಿದೆಯಾ? ಜಿಲ್ಲಾಡಳಿತದ ಕೆಲಸಗಳು ಎಲ್ಲವೂ ಎಂದಿನಂತೆ ನಡೆಯುತ್ತಿವೆ. ವರ್ಗಾವಣೆ ಆದವರು ಆದಷ್ಟು ಬೇಗ ಹಾಜರಾಗಬಹುದು ಎಂದು ಹೇಳಿದರು.

  • ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    – ನಾನೂ ಶ್ರೀರಾಮನ ಭಕ್ತ ಎಂದ ಮಂಕಾಳ ವೈದ್ಯ
    – ಶ್ರೀರಾಮ ಮಂದಿರ ಕಟ್ಟಿದೋರು ನಾವು
    – ಆಮಂತ್ರಣ ನೀಡದಿದ್ರೆ ಶ್ರೀರಾಮ ನೋಡಿಕೊಳ್ತಾನೆ ಎಂದ ಸಚಿವ

    ಕಾರವಾರ: ಅಯೋಧ್ಯೆಯ ಶ್ರೀರಾಮ ಮಂದಿರ (Ram Mandir) ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಬಿಜೆಪಿಯವರಿಗೆ ನಿಜವಾದ ರಾಮಭಕ್ತಿಯಿದ್ದರೆ ಪಕ್ಷಾತೀತವಾಗಿ ಆಹ್ವಾನ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ (Mankala Vaidya) ಒತ್ತಾಯಿಸಿದ್ದಾರೆ.

    ಕಾರವಾರದಲ್ಲಿ (Karwar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಶ್ರೀರಾಮನ ಭಕ್ತ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ಆಹ್ವಾನ ಬಂದರೂ ಬಾರದಿದ್ದರೂ ಅಯೋಧ್ಯೆಗೆ (Ayodhya) ತೆರಳುತ್ತೇನೆ. ಜ.22ಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಆಗ ಆಗದಿದ್ದರೆ ನಂತರವಾದರೂ ತೆರಳಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಅಕ್ಕಿ, ತರಕಾರಿ, ಸಾಂಬಾರ್ ಪದಾರ್ಥಗಳ ಅರ್ಪಣೆ – ಪ್ರಾಣಪ್ರತಿಷ್ಠೆಗೆ ಶ್ರೀರಾಮ ಭಕ್ತರ ಕಾಣಿಕೆ

    ರಾಮನ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ರಾಮನೇ ನೋಡಿಕೊಳ್ಳುತ್ತಾನೆ. ನಮಗೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಸಂಸ್ಕೃತಿ. ದುಡ್ಡು ನಮ್ಮದು ರಾಮಮಂದಿರ ಕಟ್ಟಿದೋರು ನಾವು, ಸರ್ಕಾರದ ದುಡ್ಡು, ಜನರ ದುಡ್ಡು ಇದು. ಆಮಂತ್ರಣ ಪತ್ರ ನೀಡದಿದ್ರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ನಡೆಸ್ತಿದ್ದಾರೆ ಎಂದರ್ಥ, ರಾಮ ನೋಡಿಕೊಳ್ತಾನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಹೋಗಲು ಹಿಂದೇಟು ಹಾಕ್ತಿದ್ದವರು ಈಗ ಆಹ್ವಾನ ಬಯಸ್ತಿದ್ದಾರೆ: ಯೋಗಿ ಆದಿತ್ಯನಾಥ್‌