Tag: ಭ್ರೂಣ

  • ಭ್ರೂಣ ಹತ್ಯೆಯಿಂದ 5 ಕೋಟಿ ಹಣ ಸಂಪಾದನೆ- ಆಲೆಮನೆಯಲ್ಲಿ ನಡೀತಿತ್ತು ಅಬಾರ್ಷನ್!

    ಭ್ರೂಣ ಹತ್ಯೆಯಿಂದ 5 ಕೋಟಿ ಹಣ ಸಂಪಾದನೆ- ಆಲೆಮನೆಯಲ್ಲಿ ನಡೀತಿತ್ತು ಅಬಾರ್ಷನ್!

    ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಪೊಲೀಸರ ತನಿಖೆಯಲ್ಲಿ ಬಗೆದಷ್ಟು ಬಯಲಾಗುತ್ತಿದೆ.

    ಕಳೆದ ಎರಡು ವರ್ಷದಲ್ಲಿ ಆರೋಪಿಗಳು ಭ್ರೂಣ ಹತ್ಯೆ (Abortion) ನಡೆಸಿ 5 ಕೋಟಿ ಹಣ ಸಂಪಾದನೆ ಮಾಡಿದ್ದಾರಂತೆ. ಭ್ರೂಣ ಯಾವುದು ಅಂತಾ ಪತ್ತೆ ಮಾಡೋಕೆ 20 ರಿಂದ 25 ಸಾವಿರ ಚಾರ್ಜ್ ಮಾಡುತ್ತಿದ್ದರು. ಭ್ರೂಣ ಹೊರ ತೆಗೆಯೋಕೆ 20 ರಿಂದ 25 ಸಾವಿರ ಚಾರ್ಜ್ ಮಾಡುತ್ತಿದ್ದರು. 100% ನಿಖರ ರಿಸಲ್ಟ್ ಕೊಡ್ತಾರೆ ಅಂತಾ ಇವರಿಗೆ ಕಸ್ಟಮರ್ಸ್ ಕೂಡ ಹೆಚ್ಚಾಗುತ್ತಿದ್ದರಂತೆ.

    ಕಳೆದ ಎರಡು ವರ್ಷಗಳಲ್ಲಿ 5 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಾರಂತೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು, ನಾನಾ ಸರ್ಕಸ್ ಮಾಡಿ ಹಂತಕರನ್ನು ಬಂಧಿಸಿದ್ದಾರೆ. ಗರ್ಭಿಣಿಯ ಜೊತೆ ಹೋಗಿ ಸ್ಟಿಂಗ್ ಆಪರೇಷನ್ (Sting Operation) ಮಾಡಿದ್ದ ಪೊಲೀಸರು, ಭ್ರೂಣ ಪತ್ತೆ ಮಾಡುತ್ತಿದ್ದ ಜಾಗ ಪತ್ತೆ ಮಾಡಲು ಜಿಪಿಎಸ್ ಸಹ ಬಳಸಿದ್ರು. ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ಎಕ್ಸ್ಯಾಕ್ಟ್ ಲೊಕೇಶನ್ ಪತ್ತೆ ಮಾಡಿದರು. ಇದನ್ನೂ ಓದಿ: ನಿರಂತರ ಭ್ರೂಣ ಹತ್ಯೆ – ಐವರು ವೈದ್ಯರು ಸೇರಿ 9 ಮಂದಿ ಅರೆಸ್ಟ್

    ಆರೋಪಿ ನವೀನ್ ಪ್ರತೀ ಬಾರಿ ಆಲೆ ಮನೆಗಳು, ತೋಟದ ಮನೆಗಳ ಲೊಕೇಶನ್ ಚೇಂಜ್ ಮಾಡುತ್ತಿದ್ದ. ಹೀಗಾಗಿ ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಮಗು ಯಾವುದು ಅಂತಾ ಪತ್ತೆ ಮಾಡಿ ಮೈಸೂರಿನ ಮಾತಾ ಆಸ್ಪತ್ರೆಗೆ ಈ ಗ್ಯಾಂಗ್ ಕಳುಹಿಸುತ್ತಿತ್ತು. ಶಿವನಂಜೇಗೌಡ, ವೀರೇಶ್, ನವೀನ್, ನಯನ್ ಬಂಧನದ ಬಳಿಕ ಮೈಸೂರು ಆಸ್ಪತ್ರೆ ವಿಚಾರ ಬಯಲಿಗೆ ಬಂದಿದೆ. ಸದ್ಯ ಪ್ರಕರಣದ ತನಿಖೆಯನ್ನ ಮೆಡಿಕಲ್ ವಿಭಾಗಕ್ಕೆ ವರ್ಗಾವಣೆ ಮಾಡೋ ಸಾಧ್ಯತೆಯಿದೆ.

  • ಸರ್ಕಾರಿ ಆಸ್ಪತ್ರೆ ಬಳಿ ಸತ್ತ ಭ್ರೂಣ ಕಚ್ಚಿಕೊಂಡು ತಿರುಗಾಡಿದ ನಾಯಿ – ತೀವ್ರ ತನಿಖೆ

    ಸರ್ಕಾರಿ ಆಸ್ಪತ್ರೆ ಬಳಿ ಸತ್ತ ಭ್ರೂಣ ಕಚ್ಚಿಕೊಂಡು ತಿರುಗಾಡಿದ ನಾಯಿ – ತೀವ್ರ ತನಿಖೆ

    ಜೈಪುರ: ರಾಜಸ್ಥಾನದ (Rajasthan) ರಾಜಧಾನಿ ಜೈಪುರದ (Jaipur) ಸರ್ಕಾರಿ ಆಸ್ಪತ್ರೆಯಲ್ಲಿ (Hospital) ತೀವ್ರ ನಿರ್ಲಕ್ಷ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಯಿಯೊಂದು (Dog) ಸತ್ತ ಭ್ರೂಣವನ್ನು (Fetus) ಕಚ್ಚಿಕೊಂಡು ತಿರುಗಾಡುತ್ತಿದ್ದುದು ಕಂಡುಬಂದಿದ್ದು, ಘಟನೆಯ ಬಗ್ಗೆ ತೀವ್ರವಾಗಿ ತನಿಖೆ ನಡೆಯುತ್ತಿದೆ.

    ಭಾನುವಾರ ಸಂಜೆ ಜೈಪುರ ಜಿಲ್ಲೆಯ ಸಂಗನೇರಿ ಗೇಟ್‌ನಲ್ಲಿರುವ ಮಹಿಳಾ ಆಸ್ಪತ್ರೆಯ ಗೇಟ್ ನಂ.1 ರ ಹೊರಗೆ ಬಾಯಲ್ಲಿ ಭ್ರೂಣವನ್ನು ಕಚ್ಚಿಕೊಂಡು ತಿರುಗಾಡುತ್ತಿದ್ದ ನಾಯಿಯನ್ನು ಸ್ಥಳೀಯರು ಗಮನಿಸಿದ್ದಾರೆ. ಜನರು ನಾಯಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ಭ್ರೂಣವನ್ನು ಆಮ್ಲಜನಕ ಘಟಕದ ಬಳಿ ಬಿಟ್ಟು, ಆಸ್ಪತ್ರೆಯ ಗೋಡೆಯ ಮೇಲೆ ಹೋಗಿ ಕುಳಿತಿದೆ.

    ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಲಾಲ್ ಕೋಠಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸೋಮವಾರ ಭ್ರೂಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭ್ರೂಣ 8 ತಿಂಗಳದ್ದಾಗಿದ್ದು, ಗಂಡು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ- 15ರ ಬಾಲಕಿ ಸಾವು

    ಮೃತ ಭ್ರೂಣದ ಕುಟುಂಬದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಭ್ರೂಣ ಆಸ್ಪತ್ರೆಯಲ್ಲಿ ಸತ್ತಿದ್ದು, ಅದನ್ನು ಕೊಂಡೊಯ್ಯಲು ಹಿಂಜರಿದ ಕುಟುಂಬದವರು ರಸ್ತೆಯಲ್ಲಿ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    dog

    ಘಟನಾ ಸ್ಥಳದ ಸುತ್ತಮುತ್ತ ಯಾವುದೇ ಸಿಸಿಟಿವಿ ಅಳವಡಿಸಲಾಗಿಲ್ಲ. ಅಧಿಕಾರಿಗಳು ನವೆಂಬರ್ 15ರಿಂದ ಆಸ್ಪತ್ರೆಯಲ್ಲಿ ಜನಿಸಿರುವ ಮಕ್ಕಳ ಮಾಹಿತಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನು ಹತ್ಯೆಗೈದು ಮೃತದೇಹದ ಜೊತೆ ಠಾಣೆಗೆ ಆಗಮಿಸಿದ ಭೂಪ

    Live Tv
    [brid partner=56869869 player=32851 video=960834 autoplay=true]

  • 4 ತಿಂಗಳ ಭ್ರೂಣ ಶಿಶು ಚರಂಡಿಯಲ್ಲಿ ಪತ್ತೆ

    4 ತಿಂಗಳ ಭ್ರೂಣ ಶಿಶು ಚರಂಡಿಯಲ್ಲಿ ಪತ್ತೆ

    ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ 4 ತಿಂಗಳಿನ ಭ್ರೂಣ ಶಿಶುವೊಂದು ಚರಂಡಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

    ಭ್ರೂಣ ಶಿಶುವನ್ನು ಎಸೆದಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತರು, ಮಕ್ಕಳ ಸಹಾಯವಾಣಿ ಸಿಬ್ಬಂದಿಯವರೊಂದಿಗೆ ತಾವರಗೇರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    POLICE JEEP

    ಭ್ರೂಣವನ್ನು ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ತಾವರಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಲಾಗಿದೆ. ಇದು 4 ರಿಂದ 5 ತಿಂಗಳಿನ ಭ್ರೂಣವಾಗಿದ್ದು, ಭ್ರೂಣವು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಈ ಕೃತ್ಯವನ್ನು ಎಸಗಿದವರನ್ನು ಪತ್ತೆ ಮಾಡಿ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರಿಂದ ಪ್ರವೀಣ್ ಕುಟುಂಬಕ್ಕೆ ಸಹಾಯ: ತೇಜಸ್ವಿ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ಅವಿವಾಹಿತ ಯುವತಿಗೆ ದೆಹಲಿ ಹೈಕೋರ್ಟ್ ಸಲಹೆ

    ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ಅವಿವಾಹಿತ ಯುವತಿಗೆ ದೆಹಲಿ ಹೈಕೋರ್ಟ್ ಸಲಹೆ

    ನವದೆಹಲಿ: 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಗರ್ಭಪಾತ ಮಾಡಿಸದಂತೆ ಸೂಚಿಸಿದ್ದು, ಮಗುವಿಗೆ ಜನ್ಮ ನೀಡಿ, ದತ್ತು ನೀಡುವಂತೆ ಸಲಹೆ ನೀಡಿದೆ.

    ಅರ್ಜಿ ವಿಚಾರಣೆ ನಡೆದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ಗರ್ಭಪಾತಕ್ಕೆ ನಿರಾಕರಿಸಿದರು. ಈ ಹಂತದಲ್ಲಿ ಗರ್ಭಪಾತ ಮಾಡುವುದು ಮಗುವನ್ನು ಹತ್ಯೆ ಮಾಡಿದಂತೆ. ಮಕ್ಕಳನ್ನು ದತ್ತು ಪಡೆಯಲು ದೊಡ್ಡ ಸರದಿಯೇ ಇದ್ದು, ಮಗುವಿಗೆ ಜನ್ಮ ನೀಡಿ ದತ್ತು ನೀಡಬಹುದಲ್ಲವೇ ಎಂದು ಕೋರ್ಟ್ ಅರ್ಜಿದಾರರಿಗೆ ಕೇಳಿದರು‌. ಇದನ್ನೂ ಓದಿ: ಅಂದು ಕಣ್ಸನ್ನೆ, ಇಂದು ಮಾದಕ ಫೋಟೋ ಹರಿಬಿಟ್ಟು ವೈರಲ್ ಆದ ಪ್ರಿಯಾ ವಾರಿಯರ್

    court order law

    ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಪರ ವಕೀಲರು, ವೈದ್ಯಕೀಯ ನಿಯಮಗಳ ಪ್ರಕಾರ 24 ವಾರಗಳು ಮೀರದ ಭ್ರೂಣದ ಗರ್ಭಪಾತ ಮಾಡಬಹುದು. ಯುವತಿಗೆ 23 ವಾರ 4 ದಿನಗಳು ತುಂಬಿದೆ. ಹೀಗಾಗಿ ಗರ್ಭಪಾತಕ್ಕೆ ಅವಕಾಶಗಳಿದೆ. ಯುವತಿ ಗರ್ಭಿಣಿಯಾಗಿ ಮುಂದುವರಿಯುವುದು ಅವಳ ಜೀವಕ್ಕೆ ಅಪಾಯ ತಂದೊಡ್ಡಬಹುದು ಅಥಾವ ದೈಹಿಕವಾಗಿ, ಮಾನಸಿಕವಾಗಿ ಗಾಯಗೊಳಿಸಬಹುದು ಎಂದರು.

    ಇದೇ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಮುಖ್ಯ ನ್ಯಾಯಮೂರ್ತಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಹಂತದಲ್ಲಿ ಮಗುವಿಗೆ ಗರ್ಭಪಾತ ಮಾಡಬಾರದು ಹೇಳಿದರು.

    ಬಳಿಕ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನಾವು ಮಗುವನ್ನು ಬೆಳೆಸುವಂತೆ ಒತ್ತಾಯಿಸುತ್ತಿಲ್ಲ. ಎಲ್ಲವನ್ನೂ ಸರ್ಕಾರ ಅಥವಾ ಆಸ್ಪತ್ರೆ ನೋಡಿಕೊಳ್ಳುತ್ತದೆ. ಮಹಿಳೆಯ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ ಹೀಗಾಗಿ ಯೋಚಿಸಿ ಪ್ರತಿಕ್ರಿಯಿಸುವಂತೆ ಯುವತಿ ಪರ ವಕೀಲರಗೆ ಕೋರ್ಟ್ ಸೂಚನೆ ನೀಡಿದ್ದು ಭೋಜನ ವಿರಾಮದ ಬಳಿಕ ವಿಚಾರಣೆ ಪುನಾರಂಭಗೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್‍ಒ ಮಹೇಶ್ ಕೋಣಿ, ಮೂಡಲಗಿ  ಪೊಲೀಸರ ನೇತೃತ್ವದಲ್ಲಿ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.

    belgavi

    ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್‍ಒ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಡಿಎಚ್‍ಒ ಮಹೇಶ್ ಕೋಣಿ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಶುಕ್ರವಾರ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಏಳು ಭ್ರೂಣಗಳು ತಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ರಕ್ಷಣೆ ಮಾಡಿ ಬಾಟಲ್‍ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ಸಿಬ್ಬಂದಿ ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ. ವೆಂಕಟೇಶ ಆಸ್ಪತ್ರೆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂ.23ರಂದು ಹಳ್ಳದಲ್ಲಿ ಎಸೆದಿರುವುದಾಗಿ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಪ್ಪು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದ್ದು, ಶುಕ್ರವಾರ ಸಿಕ್ಕಿರುವ ಏಳು ಭ್ರೂಣ ಮೃತದೇಹಗಳು ಮೂರು ವರ್ಷಗಳ ಹಿಂದೆ ಗರ್ಭಪಾತ ಮಾಡಿದ್ದವು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಜೂನ್.23ರಂದು ರಾತ್ರೋರಾತ್ರಿ ಏಳು ಭ್ರೂಣಗಳನ್ನು ಐದು ಬಾಟಲಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದರು. ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಬಯಲಾಗಿದ್ದು ಈಗಾಗಲೇ ಆಸ್ಪತ್ರೆ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ರಾ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ರೂ ಸುಮ್ಮನೆ ಕುಳಿತಿದ್ದಾರಾ ಎಂಬ ಆರೋಪ ಕೇಳಿಬಂದಿದೆ.

    Live Tv

  • ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಬೆಳಗಾವಿಯಲ್ಲಿ ಭ್ರೂಣಪತ್ತೆ ಪ್ರಕರಣ – ನಮ್ಮ ಆಸ್ಪತ್ರೆಯದ್ದು ಎಂದ ವೈದ್ಯೆ

    ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದ ಸೇತುವೆ ಬಳಿಯ ಹಳ್ಳದಲ್ಲಿ ಶುಕ್ರವಾರ ದೊರೆತ 7 ಭ್ರೂಣಗಳ ಹಿಂದಿನ ಸತ್ಯವನ್ನು ಪಬ್ಲಿಕ್ ಟಿವಿ ಭೇದಿಸಿದೆ.

    ಈ ಭ್ರೂಣಗಳು ನಮ್ಮ ಆಸ್ಪತ್ರೆಗೆ ಸೇರಿದ್ದು ಅಂತ “ವೆಂಕಟೇಶ ಮೆಟರ್ನಿಟಿ ಮತ್ತು ಸ್ಕ್ಯಾನಿಂಗ್ ಸೆಂಟರ್” ಆಸ್ಪತ್ರೆ ನಡೆಸುತ್ತಿರುವ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಕಣಕರೆಡ್ಡಿ ಹೇಳಿದ್ದಾರೆ. ಈ ಹಿಂದೆ ನಾವು ಬಾಡಿಗೆ ಬಿಲ್ಡಿಂಗ್‍ನಲ್ಲಿ ಆಸ್ಪತ್ರೆ ನಡೆಸುತ್ತಿದ್ದಾಗ ಡೆಮೋನ್‍ಸ್ಟ್ರೇಷನ್‍ಗಾಗಿ ಬಾಟಲಿಯಲ್ಲಿ ಹಾಕಿ ಇಟ್ಟಿದ್ದೇವು. ಒಂದಕ್ಕೆ ತಲೆಯಿಲ್ಲ, ಇನ್ನೊಂದಕ್ಕೆ ಹೊಟ್ಟೆಯ ಕರಳು ಹೊರಗೆ ಬಂದಿದೆ. ಇನ್ನೆರಡು ಮಕ್ಕಳ ಎದೆ ಅಂಟಿಕೊಂಡಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಬಾಡಿಗೆ ಕಟ್ಟಡ ಬಿಟ್ಟು ನಾವು ಈ ಬಿಲ್ಡಿಂಗ್‍ಗೆ ಬಂದಾಗ ಅವು ಏನಾದವು ಅಂತ ಗೊತ್ತಿಲ್ಲ ಅಂದಿದ್ದಾರೆ. ಆದರೆ, ಮೂಡಲಗಿ ಬಸ್ ನಿಲ್ದಾಣದ ಅನತಿ ದೂರದಲ್ಲೇ ಆಸ್ಪತ್ರೆಯಿದ್ದು, ಸ್ಕ್ಯಾನಿಂಗ್ ಮಷಿನ್‍ಗೆ ಕೆಪಿಎಂಎ ರಿಜಿಸ್ಟ್ರೇಷನ್ ಇಲ್ಲ. ಜೊತೆಗೆ ಈ ಸ್ಕ್ಯಾನಿಂಗ್ ಸೆಂಟರ್ ನಡೆಸಲು ಅನುಮತಿ ಪಡೆದಿಲ್ಲ ಎನ್ನುವುದು ಚರ್ಚೆ ಆಗುತ್ತಿದೆ.  ಇದನ್ನೂ ಓದಿ: ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    Live Tv

  • ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಹಳ್ಳದಲ್ಲಿ ತೇಲಿ ಬಂದ ಏಳು ಭ್ರೂಣಗಳ ಮೃತದೇಹ

    ಬೆಳಗಾವಿ: ಹಳ್ಳದಲ್ಲಿ ಏಳು ಭ್ರೂಣಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಹೊರವಲಯದಲ್ಲಿರುವ ಹಳ್ಳಕ್ಕೆ ಕಿರಾತಕರು ಏಳು ಭ್ರೂಣಗಳ ಮೃತದೇಹವನ್ನು ಎಸೆದಿದ್ದಾರೆ. ಐದು ಡಬ್ಬದಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆದಿರುವುದು ಪತ್ತೆಯಾಗಿದ್ದು, ಇದನ್ನು ಯಾರು ಎಸೆದರು? ಏಕೆ ಎಸೆದರು? ಎನ್ನುವುದು ನಿಗೂಢವಾಗಿದೆ. ಇದನ್ನೂ ಓದಿ: ಪೋಸ್ಟರ್ ಹರಿದಿದ್ದಕ್ಕೆ DYFI ಕಾರ್ಯಕರ್ತನ ಮೇಲೆ ಹಲ್ಲೆ – 25 ಮಂದಿ ವಿರುದ್ಧ ಕೇಸ್, ಐವರು ವಶಕ್ಕೆ

    ಇತ್ತ ಭ್ರೂಣಗಳನ್ನು ಕಂಡು ಮೂಡಲಗಿ ಜನರು ಹೌಹಾರಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ 7 ನವಜಾತ ಶಿಶುಗಳು, ಎರಡು ಗರ್ಭಕೋಶಗಳು ಪತ್ತೆಯಾಗಿದೆ.

    Live Tv

  • ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆ

    ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆ

    ಚಿಕ್ಕಬಳ್ಳಾಪುರ: ಖಾಸಗಿ ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಮಾನಸ ಖಾಸಗಿ ಆಸ್ಪತ್ರೆಯ ಚರಂಡಿಯಲ್ಲಿ ಭ್ರೂಣ ಶಿಶು ಪತ್ತೆಯಾಗಿದ್ದು, ಇದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿಯೇ ಅಬಾರ್ಷನ್ ಮಾಡಿ ಶಿಶುವನ್ನ ಚರಂಡಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಚರಂಡಿಯಲ್ಲಿ ಪತ್ತೆಯಾದ ಭ್ರೂಣ ಶಿಶುವನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

  • 20 ದಿನದ ಗಂಡುಮಗುವಿನ ಹೊಟ್ಟೆಯಿಂದ ಭ್ರೂಣ ಹೊರತೆಗೆದ ವೈದ್ಯರು!

    20 ದಿನದ ಗಂಡುಮಗುವಿನ ಹೊಟ್ಟೆಯಿಂದ ಭ್ರೂಣ ಹೊರತೆಗೆದ ವೈದ್ಯರು!

    ಅಹಮದಾಬಾದ್: ಅಪರೂಪದಲ್ಲಿ ಅಪರೂಪವೆಂಬಂತೆ 20 ದಿನಗಳ ಪುಟ್ಟ ಗಂಡುಮಗುವಿನ ಹೊಟ್ಟೆಯಿಂದ ಭ್ರೂಣ ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಅಹಮದಾಬಾದ್ ನ ಸನಂದ ಪಟ್ಟಣದಲ್ಲಿ ನಡೆದಿದೆ.

    20 ದಿನದ ಗಂಡು ಶಿಶುವಿನ ಹೊಟ್ಟೆಯಿಂದ 750 ಗ್ರಾಂ ತೂಕದ ಬೆಳವಣಿಗೆಯಾಗದ ಭ್ರೂಣವನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದು, ಈಗ ಮಗು ಡಿಸ್ಚಾರ್ಜ್ ಆಗಿದೆ. ಮಗು ಬೇಗ ಚೇತರಿಸಿಕೊಳ್ಳುವುದಾಗಿ ವೈದ್ಯರು ತಿಳಿಸಿದ್ದಾರೆ.

    10 ದಿನಗಳ ಹಿಂದೆ ಈ ಮಗುವನ್ನು ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಬಂದಿದ್ದರು. ವೈದ್ಯರು ಮಗುವನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ರೆಟ್ರೋಪೆರಿಟೋನಿಯಲ್ ಮೆಚ್ಯೂರ್ ಟೆರಾಟೋಮಾ ಅಥವಾ ಭ್ರೂಣದೊಳಗೆ ಭ್ರೂಣ ಇರುವುದು ಬೆಳಕಿಗೆ ಬಂದಿತ್ತು. ಇದೊಂದು ಅಪರೂಪದ ಪ್ರಕರಣವಾಗಿದ್ದು ಐದು ಲಕ್ಷದಲ್ಲಿ ಒಂದು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಬದುಕುವುದು ತೀರಾ ವಿರಳವೆಂದು ಪೋಷಕರಿಗೆ ತಿಳಿಸಿ ನಂತರ ಮಗುವಿಗೆ ಚಿಕಿತ್ಸೆ ಮಾಡಲು ನಿರ್ಧರಿಸಿದೆವು ಎಂದು ಡಾ.ಭಾವಿನ್ ವಾಸಾವಡಾ ಅವರು ಹೇಳಿದ್ದಾರೆ.

    ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣವನ್ನು ತೆಗೆದುಹಾಕಲಾಗಿದ್ದು, ಬೆಳವಣಿಯಾಗದ ಕೈ ಮತ್ತು ಬೆನ್ನುಮೂಳೆಯ ಕೆಲವು ಭಾಗಗಳನ್ನು ಹೊಂದಿತ್ತು ಎಂದು ವಸಾವಡಾ ಹೇಳಿದರು.

    ಒಂದು ವಾರದ ಚಿಕಿತ್ಸೆಯ ಬಳಿಕ ಮಾರ್ಚ್ 4 ರಂದು ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ವರದಿಯಾಗಿದೆ.

  • ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

    ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

    ಧಾರವಾಡ: ಸುಮಾರು 5 ತಿಂಗಳ ಭ್ರೂಣವೊಂದು ಧಾರವಾಡದ ಜಿಮ್‍ವೊಂದರ ಆವರಣದಲ್ಲಿ ಪತ್ತೆಯಾಗಿದೆ.

    ಇಲ್ಲಿನ ಜಯನಗರದ ಶಿವಕಮಲ ಫೀಟ್‍ನೆಸ್ ಸೆಂಟರಿನ ಆವರಣದಲ್ಲಿ ಈ ಭ್ರೂಣ ಪತ್ತೆಯಾಗಿದ್ದು, ನೋಡಿದ ಜನರ ಮನಕಲುಕುವಂತೆ ಮಾಡಿದೆ. ಬೆಳಗ್ಗೆ ಜಿಮ್‍ಗೆ ಬಂದಿದ್ದ ಮಹಿಳೆಯರು ಹಾಗೂ ಯುವತಿಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಭ್ರೂಣವನ್ನ ಪರಿಶೀಲನೆ ಮಾಡಿದ್ದಾರೆ. ಶವ ಪರೀಕ್ಷೆ ಮಾಡಿದ ಮೇಲೆ ಇದರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಹೆಣ್ಣು ಭ್ರೂಣ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಅವರು, ಯಾರೋ ಇದನ್ನ ಇಲ್ಲಿ ಇಟ್ಟು ಹೋಗಿರಬಹುದು ಎಂದು ಹೇಳಿದರು.