Tag: ಭ್ರಷ್ಟಚಾರ

  • ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಶೌಚಾಲಯ

    ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಶೌಚಾಲಯ

    ರಷ್ಯಾ: ಟ್ರಾಫಿಕ್ ಪೊಲೀಸ್‍ ಭವ್ಯವಾದ ಬಂಗಲೆ, ಮನೆಯಲ್ಲಿ ಚಿನ್ನದ ಶೌಚಾಲಯವನ್ನು ಕಂಡು ತನಿಖಾ ಅಧಿಕಾರಿಗಳು ಶಾಕ್ ಆಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ರಷ್ಯಾದ ಸಂಚಾರ ಪೊಲೀಸ್ ಮುಖ್ಯಸ್ಥ ಕರ್ನಲ್ ಅಲೆಕ್ಸಿ ಸಪೊನೊವ್ ವಿರುದ್ಧ ಭ್ರಷ್ಟಚಾರದ ಆರೋಪ ಕೇಳಿ ಬಂದಿತ್ತು. ಕೂಡಲೇ ಪೊಲೀಸ್ ತನಿಖಾ ತಂಡವೊಂದು ಇವರ ಮನೆ ಮೇಲೆ ದಾಳಿ ನಡೆಸಿದೆ. ಈ ವೇಳೆ ಭವ್ಯ ಬಂಗಲೆ, ಬಂಗಾರದ ಶೌಚಾಲಯ ಇರುವುದು ತಿಳಿದು ಬಂದಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕಾಗಿ ಬಿಎಸ್‍ವೈ ನಿವಾಸದಲ್ಲಿ ಶಾಸಕರ ಲಾಬಿ

    ಈ ಐಷಾರಾಮಿ ಬಂಗಲೆಯಲ್ಲಿ ಕೋಟ್ಯಂತರ ರೂಪಯಿ ಮೌಲ್ಯದ ಚಿನ್ನದ ಶೌಚಾಲಯ, ದುಬಾರಿ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಮನೆಯ ನೆಲಹಾಸನ್ನು ಅಮೃತಶಿಲೆಗಳಿಂದ ವಿನ್ಯಾಸಮಾಡಲಾಗಿದೆ. ತನಿಖಾ ಅಧಿಕಾರಿಗಳು ಮನೆಯಲ್ಲಿರುವ ಕೆಲವು ಬೆಲೆ ಬಾಳುವ ವಸ್ತು, ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖಾ ತಂಡ, ಪ್ರಕರಣ ಸಂಬಂಧ ಕರ್ನಲ್ ಅಲೆಕ್ಸಿ ಸಪೊನೊವ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

  • ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ -ಬಲೆಗೆ ಬಿದ್ದವರೆಲ್ಲ ಕೋಟಿ ಕೋಟಿ ಕುಳಗಳು

    ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ -ಬಲೆಗೆ ಬಿದ್ದವರೆಲ್ಲ ಕೋಟಿ ಕೋಟಿ ಕುಳಗಳು

    ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ 9 ಸರ್ಕಾರಿ ನೌಕರರಿಗೆ ಸೇರಿದ 43 ಸ್ಥಳಗಳಲ್ಲಿ ಒಟ್ಟು 310 ಎಸಿಬಿ ಅಧಿಕಾರಿಗಳಿಂದ 43 ತಂಡಗಳಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭ್ರಷ್ಟ ಅಧಿಕಾರಿಗಳ ಕೋಟಿ ಕೋಟಿ ಆಸ್ತಿಯನ್ನು ಎಸಿಬಿ ತಂಡ ಪತ್ತೆ ಹಚ್ಚಿದೆ.

    ದಾಳಿ ವೇಳೆ ಒಬ್ಬರಿಗಿಂತ ಒಬ್ಬರ ಆಸ್ತಿ ಕಮ್ಮಿಯೇನೂ ಇಲ್ಲ. ಎಲ್ಲರೂ ಕೂಡ ಕೋಟಿ, ಕೋಟಿ ಆಸ್ತಿ ಮಾಡಿರೋರೆ. ಯಾರ್ಯಾರ ಮನೆ ಮೇಲೆ ದಾಳಿ ನಡೆಸಿತ್ತು, ಸಿಕ್ಕ ಆಸ್ತಿಪಾಸ್ತಿ ಎಷ್ಟು ಅಂತಾ ನೋಡೋದಾದ್ರೆ.

    1. ಜಿ ಶ್ರೀಧರ್- ಕಾರ್ಯ ಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು.
    ಮೈಸೂರಿನಲ್ಲಿ ಒಂದು ಮನೆ, ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಒಂದು ಮನೆ, ವಿವಿಧ ನಗರಗಳಲ್ಲಿ ನಾಲ್ಕು ಸೈಟ್ ಗಳು, ಬ್ಯಾಂಕ್ ಉಳಿತಾಯ ಖಾತೆ ಡೆಪಾಸಿಟ್ ಇನ್ಶೂರೆನ್ಸ್, ಡೆಪಾಸಿಟ್ ಬಾಂಡ್ ಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನ, ಚಿನ್ನ, ಬೆಳ್ಳಿ ಆಭರಣಗಳು ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ.

    2.ಸುರೇಶ್- ಎಇ ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ಉಪ ವಿಭಾಗ ಬಸವ ಕಲ್ಯಾಣ ಬೀದರ್ ಜಿಲ್ಲೆ
    ಬಸವ ಕಲ್ಯಾಣದಲ್ಲಿ ಒಂದು ಮನೆ, ಬೀದರ್ ಜಿಲ್ಲೆ ಬಾಲ್ಕಿಯಲ್ಲಿ ಒಂದು ಪೆಟ್ರೋಲ್ ಬಂಕ್, ನಾಲ್ಕು ನಿವೇಶನ, ವಿವಿಧ ಬ್ಯಾಂಕ್ ಗಳಲ್ಲಿ ಎಫ್ಡಿ ಡೆಪಾಸಿಟ್, ಬೆಲೆ ಬಾಳುವ ಚಿನ್ನಾ ಭರಣಗಳು, ಒಂದು ದ್ವಿಚಕ್ರ ವಾಹನ ಪತ್ತೆಯಾಗಿದೆ. ನಿವಾಸದಲ್ಲಿ 15 ಲಕ್ಷ ನಗದು, 750 ಗ್ರಾಂ ಚಿನ್ನ, 3 ನಿವೇಶನಗಳ ಆಸ್ತಿ ಪತ್ರ ಪತ್ತೆಯಾಗಿದೆ. ಜೊತೆಗೆ 10 ಲಕ್ಷ ಎಫ್‍ಡಿ ಹಾಗೂ 20 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರೋದು ದಾಳಿಯಲ್ಲಿ ಬೆಳಕಿಗೆ ಬಂದಿದೆ

    3.ಆರ್.ಪಿ ಕುಲಕರ್ಣಿ ಪ್ರಧಾನ ಇಂಜಿನಿಯರ್ ಮುಖ್ಯ ಯೋಜನಾಧಿಕಾರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು
    ಬೆಂಗಳೂರಲ್ಲಿ ಒಂದು ಮನೆ, ನಾಲ್ಕು ಫ್ಲ್ಯಾಟ್, ವಿವಿಧ ಕಡೆ ಮೂರು ನಿವೇಶನ, ಎರಡು ಕಾರು, ಒಂದು ದ್ವಿಚಕ್ರ ವಾಹನ, ಚಿನ್ನ, ಬೆಳ್ಳಿ ಆಭರಣಗಳು. ಬ್ಯಾಂಕ್‍ ಖಾತೆಗಳಲ್ಲಿ ಠೇವಣಿಗಳು, ಬೆಲೆ ಬಾಳುಗ ಗೃಹಪಯೋಗಿ ವಸ್ತುಗಳು ಪತ್ತೆಯಾಗಿದೆ.

    4.ಎ. ಕೃಷ್ಣಮೂರ್ತಿ ಹಿರಿಯ ಮೋಟಾರು ವಾಹನ ನಿರೀಕ್ಷಕರು ಕೋರಮಂಗಲ ಆರ್‍ ಟಿಓ ಕಚೇರಿ ಬೆಂಗಳೂರು
    ಬೆಂಗಳೂರಿನ ಹಂಪಿ ನಗರದಲ್ಲಿ ಒಂದು ಮನೆ, ದೊಮ್ಮಲೂರಲ್ಲಿ ಒಂದುಮನೆ, ಬೆಂಗಳೂರಲ್ಲಿ ಒಂದು ಶಾಲಾ ಕಟ್ಟಡ, ತುಮಕೂರು ಕೊರಟಗೆರೆಯಲ್ಲಿ ಫಾರ್ಮ್ ಹೌಸ್ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 30 ಸೈಟ್ ಗಳಿವೆ. ಚಿನ್ನ, ಬೆಳ್ಳಿ ಆಭರಣಗಳು, ವಿವಿಧ ಕಡೆಗಳಲ್ಲಿ 82 ಎಕರೆ ಕೃಷಿ ಜಮೀನು, ನಾಲ್ಕು ದ್ವಿಚಕ್ರ ವಾಹನ, ಮೂರು ಕಾರುಗಳು, ಒಂದು ಟೆಂಪೋ ಮ್ಯಾಕ್ಸ್ ಕ್ಯಾಬ್, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು.

    5.ಕೃಷ್ಟ ಎಸ್ ಹೆಬ್ಬೂರು- ಕಾರ್ಯ ನಿರ್ವಾಹಕ ಅಭಿಯಂತರ ಕೆಆರ್.ಐಡಿ.ಎಲ್ ಉಡುಪಿ ಜಿಲ್ಲೆ
    ಉಡುಪಿಯಲ್ಲಿ ಒಂದು ಮನೆ, ಬೆಂಗಳೂರು ನಗರ ಜಿಗಣಿಯಲ್ಲಿ ಒಂದು ಮನೆ, ಹುಬ್ಬಳ್ಳಿಯಲ್ಲಿ ಒಂದು ಮನೆ, ಉಡುಪಿ ಜಿಲ್ಲೆ ಶಿವಳ್ಳಿ ಗ್ರಾಮದಲ್ಲಿ 15.66 ಸೆಂಟ್ಸ್ ನಿವೇಶನ ಎರಡು ದ್ವಿಚಕ್ರ ವಾಹನ, ಒಂದು ಕಾರು, ಚಿನ್ನ, ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು,

    ಇದನ್ನೂ ಓದಿ: ಮಂಗಳೂರಿನಲ್ಲಿ ಯೂನಿಸೆಕ್ಸ್ ಸೆಲೂನ್‍ಗೆ ನುಗ್ಗಿ ಮಹಿಳೆಗೆ ಕಿರುಕುಳ

    6.ಟಿ. ವೆಂಕಟೇಶ್- ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ, ಮಂಡ್ಯ ಜಿಲ್ಲೆ
    ಮೈಸೂರು ನಗರದಲ್ಲಿ ಎರಡು ಮನೆ, ವಿವಿಧ ನಗರಗಳಲ್ಲಿ 9 ನಿವೇಶನ, 12 ಎಕರೆ ಕೃಷಿ ಜಮೀನು, ಒಂದು ಕಾರು, ಮೂರು ದ್ವಿಚಕ್ರ ವಾಹನ, ಚಿನ್ನ, ಬೆಳ್ಳಿ ಆಭರಣಗಳು, ನಗದು ಹಣ, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು.

    7.ಹೆಚ್.ಆರ್ ಕೃಷ್ಣಮೂರ್ತಿ- ಸಹಾಯಕ ನಿರ್ದೇಶಕರು ಮಾಲೂರು ಟೌನ್ ಪ್ಲ್ಯಾನಿಂಗ್ ಅಥಾರಿಟಿ ಮಾಲೂರು ಕೋಲಾರಜಿಲ್ಲೆ
    ಬೆಂಗಳೂರು ಶಿವಮೊಗ್ಗ, ದಾವಣಗೆರೆಯಲ್ಲಿ ತಲಾ ಒಂದೊಂದು ಮನೆ, ವಿವಿಧ ಪ್ರಮುಖ ನಗರಗಳಲ್ಲಿ ನಾಲ್ಕು ನಿವೇಶನ, ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು, ಎರಡು ದ್ವಿಚಕ್ರ ವಾಹನ, ಒಂದು ಕಾರು, ಚಿನ್ನ, ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು

    ಇದನ್ನೂ ಓದಿ: ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ, ಕೋಮಾದಲ್ಲಿಯೂ ಇಲ್ಲ: ಗೋಪಾಲ್ ರಾಜ್

    8.ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಎಇಇ ಒನ್ 10 ಕೆವಿ ನೋಡೆಲ್ ಅಧಿಕಾರಿ ಕೆಪಿಟಿಸಿಎಲ್, ಪ್ರಭಾರಿ ಇಇ- ವಿಜಯಪುರ
    ವಿಜಯಪುರದಲ್ಲಿ ಮೂರು ವಾಸದ ಮನೆ, ವಿವಿಧ ಕಡೆಗಳಲ್ಲಿ ನಾಲ್ಕು ನಿವೇಶನ, 35 ಎಕರೆ ಕೃಷಿ ಜಮೀನು, ಒಂದು ಕಾರು ಎರಡು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು.

    9.ಎ.ಎನ್ ವಿಜಯ್ ಕುಮಾರ್- ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್, ಜೆಸ್ಕಾಂ ಬಳ್ಳಾರಿ
    ಬೆಂಗಳೂರು, ಬಳ್ಳಾರಿಯಲ್ಲಿ ತಲಾ ಒಂದರಂತೆ ಒಂದೊಂದು ಮನೆ, ವಿವಿಧ ನಗರಗಳಲ್ಲಿ ಒಟ್ಟು ಎಂಟು ನಿವೇಶನ, ಎರಡು ಕಾರು, ಒಂದು ದ್ವಿಚಕ್ರ ವಾಹನ, ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ವಸ್ತುಗಳು ಪತ್ತೆಯಾಗಿವೆ.

  • ಸರ್ಕಾರದ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ

    ಸರ್ಕಾರದ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ

    – ಗ್ರಾಮೀಣ ಭಾಗಕ್ಕೆ ಯೋಜನೆ ತಲುಪಿಸುವಲ್ಲಿ, ಸರ್ಕಾರ ವಿಫಲ
    – 2019ರ ಮಾರ್ಚ್‍ಗೆ ಮುಗಿಯಬೇಕಿದ್ದ ಯೋಜನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

    ಶಿವಮೊಗ್ಗ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದೆ.

    ಗ್ರಾಮೀಣ ಭಾಗಕ್ಕೆ ಕಡಿಮೆ ಯೂನಿಟ್ ದರದಲ್ಲಿ ನಿರಂತರ ವಿದ್ಯುತ್ ನೀಡುವ ಸಲುವಾಗಿ ಸರ್ಕಾರ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಜಾರಿಗೊಳಿಸಿತ್ತು. ಆದರೆ ಅಧಿಕಾರಿಗಳ ಅಸಡ್ಡೆ ಮತ್ತು ಭ್ರಷ್ಟಾಚಾರದಿಂದಾಗಿ ನೆನೆಗುದಿಗೆ ಬಿದ್ದಂತಾಗಿದೆ. ಸರಿ ಸುಮಾರು 2019 ಮಾರ್ಚ್‍ಗೆ ಮುಗಿಯಬೇಕಿದ್ದ ಈ ಯೋಜನೆ ಇನ್ನೂ ಕೂಡ ಪೂರ್ಣಗೊಳ್ಳದೇ ಕೆಲವು ಕಡೆ ಇನ್ನೂ ಆರಂಭವಾಗದೇ ವಿಫಲವಾಗಿದೆ.

    ನಿರಂತರ ಜ್ಯೋತಿ ವಿದ್ಯುತ್ ಯೋಜನೆಯ ಭ್ರಷ್ಟಾಚಾರದ ಆರೋಪದಲ್ಲಿ ಮೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಶಾಮೀಲಾಗಿ ಈ ಯೋಜನೆ ಫಲ ಪ್ರದವಾಗಿಸಲು ಬಿಡದೇ, ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ನೀಡದೇ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿಯುವಂತೆ ಮಾಡಲಾಗಿದೆ.

    ಈ ಸಂಬಂಧ ಮೆಸ್ಕಾಂ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಯೋಜನೆ ವಿಳಂಬ ಮತ್ತು ಕಳಪೆ ವಸ್ತುಗಳ ಬಳಕೆ ಮಾಡಲಾಗಿದೆ ಎಂದು ನೇರವಾಗಿ ಆರೋಪ ಮಾಡಿದ್ದರು. ಜೊತೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಆವೇಶ, ಕೇವಲ ಸಭೆಗೆ ಮಾತ್ರ ಸೀಮಿತವಾಯ್ತಾ ಎಂಬ ಅನುಮಾನ ಇದೀಗ ಮೂಡತೊಡಗಿದೆ.

    ಟೆಂಡರ್ ನಲ್ಲಿ ಉಲ್ಲೇಖಿಸಿರುವ ಸಾಮಾಗ್ರಿಗಳನ್ನು ಏಕೆ ಬಳಸಿಲ್ಲ. ಕಂಟ್ರಾಕ್ಟರ್ ಗೆ ಯಾರು ಕೇಳಬೇಕು. ಅದರಲ್ಲೂ ಸಾಮಾಗ್ರಿಗಳನ್ನು ಹಾಕದೇ, ಬಿಲ್ ಕೂಡ ಮಾಡಿಸಿಕೊಂಡಿದ್ದು, ನಿರಂತರ ಜ್ಯೋತಿ ಯೋಜನೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ವರದಿಯನ್ನು ನಿಮ್ಮ ಹಸ್ತಾಕ್ಷರ ಸಹಿತವಾಗಿ ನೀಡಿ ಎಂದು ಸೂಚನೆ ನೀಡಿದ್ದರು. ಆದರೆ ಸಭೆ ಕಳೆದು ಸುಮಾರು ಐದು ತಿಂಗಳು ಕಳೆಯುತ್ತಾ ಬಂದಿದಿದ್ದರೂ ಕೂಡ ಇದುವರೆಗೂ ಈ ಯೋಜನೆ ಫಲಪ್ರದವಾಗಿಲ್ಲ. ಇದನ್ನು ಸ್ವತಃ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ಒಪ್ಪಿಕೊಳ್ಳುತ್ತಾರೆ.

    ಒಟ್ಟಿನಲ್ಲಿ ನಿರಂತರ ಜ್ಯೋತಿ ಯೋಜನೆಯ ಫೀಡರ್ ಖರೀದಿಯಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಸರ್ಕಾರ ಅದರಲ್ಲೂ ಸಿ.ಎಂ. ತವರು ಜಿಲ್ಲೆಯಲ್ಲಿಯೇ ಯೋಜನೆಯೊಂದು ಹಳ್ಳ ಹಿಡಿದಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದ್ದು, ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ. ಏನೇ ಆಗಲಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ತಮ್ಮ ಕ್ಷೇತ್ರದಲ್ಲಿಯೇ ಈ ರೀತಿಯ ಗಂಭೀರವಾದ ಆರೋಪ ಕೇಳಿ ಬಂದಿರುವುದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಇದನ್ನೂ ಓದಿ :ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

  • ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ವಿಧಾನಸೌಧದ ಬಳಿ ಹಣ ಸಿಕ್ಕಿದ್ದು ಭ್ರಷ್ಟರ ಧೈರ್ಯಕ್ಕೆ ಸಾಕ್ಷಿ: ಸಂತೋಷ್ ಹೆಗ್ಡೆ

    ಧಾರವಾಡ: ವಿಧಾನ ಸೌಧದ ವೆಸ್ಟ್ ಗೇಟ್ ಬಳಿಯ ರಕ್ಷಣಾ ಸಿಬ್ಬಂದಿಗೆ ತಪಾಸಣೆ ವೇಳೆ ಭಾರೀ ಮೊತ್ತದ ಹಣ ಸಿಕ್ಕಿರುವುದು ಭ್ರಷ್ಟಾಚಾರಿಗೆ ಎಷ್ಟು ಧೈರ್ಯವಿದೆ ಎನ್ನುವುದನ್ನು ತೋರಿಸುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸೌಧದ ಬಳಿ ಹಣ ಸಿಕ್ಕಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. ಆದರೆ ಇದು ಭ್ರಷ್ಟಾಚಾರದ ವಿಚಾರವಲ್ಲ. ಭ್ರಷ್ಟಾಚಾರಿಗಳಿಗೆ ಎಷ್ಟು ಧೈರ್ಯವಿದೆ ಎನ್ನುವುದು ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಂತ್ರಿಗಳ ಆಪ್ತ ಸಹಾಯಕರೇ ಘಟನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು. ಇದರಲ್ಲಿ ಮಂತ್ರಿಗಳದ್ದು ಎಷ್ಟಿದೆ ಎಂಬುವುದು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಮಂತ್ರಿಗಳ ಪಿಎ ಗಳಿಗೆ ಅಷ್ಟು ಹಣ ಯಾರು ಕೊಡೋದಿಲ್ಲ. ಇದರಲ್ಲಿ ದೊಡ್ಡವರ ಕೈವಾಡವಿದೆ ಎಂದು ಅನ್ನಿಸುತ್ತದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಯಾರ ಕೈವಾಡವಿದೆ ಎನ್ನುವುದು ತಿಳಿಯಬೇಕಿದೆ ಆಗ್ರಹಿಸಿದರು. ಇದನ್ನು ಓದಿ: ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಈ ಘಟನೆಯ ಮೂಲಕ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಎಂಬುವುದು ತಿಳಿಯುತ್ತದೆ. ವಿಚಾರಣೆ ಮಾಡದೇ ಇದ್ದರೆ, ಅದು ಬೇರೆ ಆರ್ಥ ಪಡೆದುಕೊಳ್ಳುತ್ತೆ ಎಂದರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಕಿಕ್‍ಬ್ಯಾಕ್, ಎಂ.ಬಿ ಪಾಟೀಲರನ್ನ ನೇಣು ಹಾಕಿ: ಬಿಎಸ್‍ವೈ ಆಕ್ರೋಶ

    ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಕಿಕ್‍ಬ್ಯಾಕ್, ಎಂ.ಬಿ ಪಾಟೀಲರನ್ನ ನೇಣು ಹಾಕಿ: ಬಿಎಸ್‍ವೈ ಆಕ್ರೋಶ

    ಬೆಂಗಳೂರು: ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಲಂಚ ಪಡೆದಿದ್ದಾರೆಂದು ಬಿಎಸ್ ಯಡಿಯೂರಪ್ಪ ಆರೋಪ ಮಾಡಿದ್ದಾರೆ.

    ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ಎಂ.ಬಿ.ಪಾಟೀಲ್ ಮಣಿಸಲು ಬಿಜೆಪಿ ರಣತಂತ್ರ ಹೂಡಿದ್ದು, ಎಂ.ಬಿ ಪಾಟೀಲ್ ವಿರುದ್ಧ ದಾಖಲೆ ಸಮೇತ ಬಿಎಸ್‍ವೈ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಎಂ.ಬಿ.ಪಾಟೀಲ್ ವಿರುದ್ಧ ಗಂಭೀರ ಆರೋಪದ ದಾಖಲೆಯನ್ನ ಹುಡುಕಲು ಎನ್.ಆರ್.ರಮೇಶ್ ರನ್ನು ಬಿಟ್ಟಿದ್ದ ಬಿಎಸ್‍ವೈ, ಐದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕೊನೆ ಕ್ಷಣದಲ್ಲಿ ಖಚಿತ ದಾಖಲೆ ಹಿಡಿದು ಬಾಂಬ್ ಹಾಕಿದ್ದಾರೆ.

    ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‍ವೈ, ದೇಶದಲ್ಲೇ ಅತ್ಯಂತ ಭ್ರಷ್ಟಾಚಾರಿ ಸರ್ಕಾರ ಎಂದೇ ಕುಖ್ಯಾತಿಯನ್ನ ಗಳಿಸಿರುವ ಸಿದ್ದರಾಮಯ್ಯ ಅವರ ಕಮಿಷನ್ ಸರ್ಕಾರಕ್ಕೆ ಕೊನೆ ಇಲ್ಲದಂತಾಗಿದೆ. ಸಿದ್ದರಾಮಯ್ಯನವರು ಯಾವಾಗಲು ತನಗೆಷ್ಟು ಪಾಲು ಕಮಿಷನ್ ಬರುತ್ತೆ ಅಂತಾ ಯೋಚನೆ ಮಾಡ್ತಿರುತ್ತಾರೆ. 2016 ರಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಸ್ಥಾಪನೆಯಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆಯ ಹೆಸರಿನಲ್ಲಿ ಸಾವಿರಾರು ಕೋಟಿ ಕಾಮಗಾರಿಗಳನ್ನ ಟೆಂಡರ್ ಕರೆಯದೇ ಭ್ರಷ್ಟಾಚಾರ ನಡೆದಿದೆ. ಈ ಅಕ್ರಮಕ್ಕೆ ಎಂ.ಬಿ.ಪಾಟೀಲ್ ಅವರೇ ಹೊಣೆಗಾರರು, ಅವರ ಆದೇಶ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡಲ್ಲ ಎಂದು ಕಿಡಿಕಾರಿದರು.

    ಇದಲ್ಲದೇ ಚಿತ್ರದುರ್ಗ ಜಿಲ್ಲೆಯ ನಾಲಾ ಕಾಮಗಾರಿಗೆ 157 ಕೋಟಿ ವರ್ಕ್ ಆರ್ಡರ್ ನೀಡಿದ್ದಾರೆ. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ ಎರಡು ಕಂಪನಿಗಳು ಮಾತ್ರ ಭಾಗವಹಿಸಿದ್ದು, ಎಂ.ಬಿ.ಪಾಟೀಲ್ ಮತ್ತವರ ಆಪ್ತರು 27 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರೇ ನಿಮ್ಮ ಕಮಿಷನ್ ಎಷ್ಟು? ಎಂದು ಬಿಎಸ್‍ವೈ ಪ್ರಶ್ನಿಸಿದರು.

    ರಸ್ತೆ ವಿಸ್ತೀರ್ಣದ ಹೆಸರಲ್ಲಿ ದಿನಾಂಕ 1-1-18 ರಂದು 157 ಕೋಟಿ 96 ಲಕ್ಷ ರೂ. ಅಕ್ರಮ ನಡೆದಿದೆ. ಎಸ್.ಎಸ್.ನ್ಯಾಷನಲ್ ಕನ್‍ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಟೆಂಡರ್ ನಲ್ಲಿ ಎರಡು ಕಂಪೆನಿ ಮಾತ್ರ ಭಾಗಿಯಾಗಿದೆ. ನಿಯಮದ ಪ್ರಕಾರದಲ್ಲಿ ಆಯಾ ಸಂಸ್ಥೆಗಳ ಕಾಮಗಾರಿಗೆ ದೃಢೀಕರಣದ ಪತ್ರವನ್ನ ಸಲ್ಲಿಸಿರಬೇಕು ಮತ್ತು 50 ಲಕ್ಷ ರೂ. ಕಾಮಗಾರಿ ಮಾಡಿರಬೇಕು. ಆದರೆ ಈ ಕಂಪೆನಿ ಸುಳ್ಳು ಪ್ರಮಾಣ ಪತ್ರ ನೀಡಿದೆ. ಇದರ ಜೊತೆಗೆ ಅಮ್ಮಾ ಕನ್‍ಸ್ಟ್ರಕ್ಷನ್ ಕಂಪೆನಿ ಕೂಡ ನಕಲಿ ಪ್ರಮಾಣ ಪತ್ರ ನೀಡಿದೆ ಎಂದು ಬಿಎಸ್‍ವೈ ಗಂಭೀರ ಆರೋಪ ಮಾಡಿದರು.

    ಈ ವರ್ಕ್ ಡನ್ ಸರ್ಟಿಫಿಕೇಟ್ ಸುಳ್ಳು. ಈ ಕಂಪನಿಗಳು 626ಕಿ.ಮೀ. ವಿಸ್ತೀರ್ಣದ ರಸ್ತೆ ಕಾಮಗಾರಿಯನ್ನ ಮಾಡಿರೋದಾಗಿ ನಕಲಿ ಸರ್ಟಿಫಿಕೇಟ್ ನೀಡಿವೆ. ಮಣಿಪುರ, ತ್ರಿಪುರ ಎರಡರಲ್ಲೂ ನೀಡಿದ ಸರ್ಟಿಫಿಕೇಟ್‍ನಲ್ಲಿ ಒಬ್ಬರೇ ಎಂಜಿನಿಯರ್ ಸಹಿ ಇದೆ. ಇದರಿಂದ ಇದು ನಕಲಿ ಎಂಬುದು ಸ್ಪಷ್ಟ ಆಗಿದೆ. ಈ ಅಕ್ರಮದಲ್ಲಿ ಎಂ.ಬಿ ಪಾಟೀಲ್ ಮತ್ತು ಅವರ ಆಪ್ತರು 25 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ. ಈ ಎರಡು ಕಂಪನಿಗಳು ತಮಿಳುನಾಡಿಗೆ ಸೇರಿದ್ದು, ವರ್ಕ್ ಡನ್ ಸರ್ಟಿಫಿಕೇಟನ್ನು ಮಣಿಪುರ, ತ್ರಿಪುರದಿಂದ ತಂದಿದ್ದಾರೆ ಎಂದು ಆರೋಪಿಸಿದರು.

    ಸಿಎಂ ಸಿದ್ದರಾಮಯ್ಯ ಸರ್ಕಾರ ಜನರ ದುಡ್ಡು ಹೀಗೆ ಲೂಟಿ ಹೊಡೆದು ಭ್ರಷ್ಟ ಸರ್ಕಾರ ಎಂದು ಸಾಬೀತುಪಡಿಸಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರ ಎಷ್ಟು? ನೀವು ಎಷ್ಟು ಕಮಿಷನ್ ಪಡೆದಿದ್ದೀರಿ ಎಂದು ಪ್ರಶ್ನಿಸಿ, ದಾಖಲೆಗಳನ್ನ ರಿಲೀಸ್ ಮಾಡಿದ ಬಿಎಸ್‍ವೈ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

    ಜಲಸಂಪನ್ಮೂಲ ಇಲಾಖೆಯಲ್ಲಿ ಇದೇ ರೀತಿ ಹತ್ತಾರು ಪ್ರಕರಣಗಳು ನಡೆದಿವೆ. ಈ ಜಲಸಂಪನ್ಮೂಲ ಸಚಿವ ಇದಾನಲ್ಲ ಕಳೆದ 6 ತಿಂಗಳಿನಿಂದ ನನ್ನ ಮೇಲೆ ಐಟಿ ದಾಳಿ ಆಗುತ್ತೆ ಅಂತಾ ಹೇಳ್ತಿದ್ದ. ಈ ದೊಡ್ಡ ಮನುಷ್ಯನ ಮೇಲೆ ಇಲ್ಲಿಯವರೆಗೂ ಐಟಿ ದಾಳಿ ನಡೆದಿಲ್ಲ, ಅವನನ್ನ ಹ್ಯಾಂಗ್ ಮಾಡಬೇಕು ಎಂದು ಎಂ.ಬಿ ಪಾಟೀಲ್ ವಿರುದ್ಧ ಬಿಎಸ್‍ವೈ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ರು.

    ಸಿದ್ದರಾಮಯ್ಯ ಹಗರಣ ಬಗ್ಗೆ ದಾಖಲೆ ಕೇಳಿದ್ರು, ಇವಾಗ ನಾವು ಬಿಡುಗಡೆ ಮಾಡಿರುವ ದಾಖಲೆ ನೋಡಿ ಹೇಳಲಿ. 24 ಗಂಟೆಯಲ್ಲಿ ನಮ್ಮ ಆರೋಪಕ್ಕೆ ಸರ್ಕಾರ ಉತ್ತರ ನೀಡಬೇಕು. ನಾಳೆ ಅಥವಾ ನಾಡಿದ್ದು ಇದಕ್ಕಿಂತ ದೊಡ್ಡ ಹಗರಣ ಬಯಲು ಮಾಡುತ್ತೇವೆ ಎಂದು ಬಿಎಸ್‍ವೈ ಸರ್ಕಾರಕ್ಕೆ ಸವಾಲು ಹಾಕಿದ್ರು.