Tag: ಭೋವಿ ಸಮಾಜ

  • ಭೋವಿ ನಿಗಮದಲ್ಲಿ 60% ಕಮಿಷನ್‌, ಅಧ್ಯಕ್ಷರಿಂದಲೇ ಬೇಡಿಕೆ – ವಿಡಿಯೋ ರಿಲೀಸ್‌

    ಭೋವಿ ನಿಗಮದಲ್ಲಿ 60% ಕಮಿಷನ್‌, ಅಧ್ಯಕ್ಷರಿಂದಲೇ ಬೇಡಿಕೆ – ವಿಡಿಯೋ ರಿಲೀಸ್‌

    – ಭೋವಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಗಂಭೀರ ಆರೋಪ
    – ರವಿಕುಮಾರ್‌ ವಜಾಗೊಳಿಸಿ, ಬಂಧಿಸುವಂತೆ ಆಗ್ರಹ

    ಬೆಂಗಳೂರು: ಸರ್ಕಾರದ ಕಚೇರಿಯಲ್ಲಿಯೇ ಡೀಲ್‌ ನಡೆಯುತ್ತಿದ್ದು, ಈ ಕಾಂಗ್ರೆಸ್‌ ಸರ್ಕಾರದಲ್ಲಿ 60% ಕಮಿಷನ್‌ ಕೇಳಲಾಗುತ್ತಿದೆ ಎಂದು ಭೋವಿ ಸಮಾಜದ (Bhovi Community) ರಾಷ್ಟ್ರೀಯ ಅಧ್ಯಕ್ಷ ವೆಂಕಟೇಶ್ ಸ್ಫೋಟಕ ಆರೋಪ ಮಾಡಿದ್ದಾರೆ.

    ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ 40% ಕಮಿಷನ್ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಆದರೆ ಇವರ ಅವಧಿಯಲ್ಲಿ 60% ಕಮಿಷನ್‌ ಕೇಳಲಾಗುತ್ತಿದೆ. ಭೋವಿ ಸಮಾಜದಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಿದೆ ಎಂದು ದೂರಿದರು.

    ಸಿದ್ದರಾಮಯ್ಯ (Siddaramaiah) 65 ಕೋಟಿ ರೂ.ಗಳನ್ನು ಭೋವಿ ಸಮಾಜಕ್ಕೆ ಘೋಷಣೆ ಮಾಡಿದ್ದಾರೆ. ಆದರೆ ಬಿಡುಗಡೆಯಾಗಿದ್ದು ಕೇವಲ 13 ಕೋಟಿ ರೂ. ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್‌ (Ravikumar) ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇವರು ಭೋವಿ ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಬೇಕಾಗಿತ್ತು. ಆದರೆ ನಿಗಮದ ಅಧ್ಯಕ್ಷರೇ ಬ್ರೋಕರ್ ಜೊತೆಗೆ 60% ಕಮಿಷನ್‌ಗೆ ಬೇಡಿಕೆ ಇಟ್ಟಿರುವ ವಿಡಿಯೋ ಸಿಕ್ಕಿದೆ ಎಂದರು.

    ಸಚಿವ ರಾಜಣ್ಣನ ಮಾದರಿಯಲ್ಲಿಯೇ ಈ ಅಧ್ಯಕ್ಷನನ್ನು ವಜಾ ಮಾಡಿ ಬಂಧಿಸಬೇಕು. ರವಿಕುಮಾರ್ ಅವಧಿಯಲ್ಲಿನ ಹಗರಣದ ತನಿಖೆ ನಡೆಯಬೇಕು. ಆತನ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಮನೆಗಳ್ಳತನ ಬೆಂಗಳೂರಿನ ಮಹಿಳೆ ಸೇರಿ ಇಬ್ಬರು ಅರೆಸ್ಟ್

     

    ಫಲಾನುಭವಿಗಳಿಗೆ ನಿಗಮದಲ್ಲಿ 10 ಲಕ್ಷ ರೂ. ಸಾಲ ಸಿಗುತ್ತದೆ. ಆದರೆ ಇದರಲ್ಲಿ ಅಧಿಕಾರಿಗಳು ಕಮೀಷನ್ ತಿಂದು ಫಲಾನುಭವಿಗಳಿಗೆ ಕೊಡೋದು ಕೇವಲ 25 ಸಾವಿರ ರೂ. ಅಷ್ಟೇ. ಈ ವಿಡಿಯೋದಲ್ಲಿ ರವಿಕುಮಾರ್ ಬಂಜಾರದಲ್ಲಿ ಕೋಟಿ ಕೋಟಿ ಡೀಲ್ ನಡೆಯುತ್ತಿದೆ ಎನ್ನುತ್ತಿದ್ದಾರೆ. ಬಿಹಾರ ಚುನಾವಣೆ ಕಲೆಕ್ಷನ್‌ಗ ಈ ಡೀಲ್‌ ನಡೆಯುತ್ತಿದ್ಯಾ? ನಾನು ಅಹಿಂದ ನಾಯಕ ಎಂದು ಸಿಎಂ ಹೇಳುತ್ತಿದ್ದಾರೆ. ಹಾಗಿದ್ದಾರೆ ಇಂದೇ ರವವಿಕುಮಾರ್‌ ರಾಜೀನಾಮೆ ಪಡೆಯಲಿ ಎಂದು ಹೇಳಿದರು.

    ಭೋವಿ ನಿಗಮದಲ್ಲಿ ನೇರ ಸಾಲ ಸೌಲಭ್ಯ ಯೋಜನೆ ಇದ್ದು ಭೂಮಿ ಖರೀದಿಗೆ ಫಲಾನುಭವಿಗಳಿಗೆ 20 ಲಕ್ಷ ರೂ. ನೀಡಲಾಗುತ್ತದೆ. ಯೋಜನೆಯಲ್ಲಿ ಬ್ರೋಕರ್ ಜೊತೆ ಹತ್ತು ಲಕ್ಷ ರೂ. ದುಡ್ಡು ತೆಗೆದುಕೊಂಡು ಮತ್ತೆ ಹತ್ತು ಲಕ್ಷ ರೂ. ಕೊಡುತ್ತೇವೆ ಎಂದು ಹೇಳುತ್ತಾರೆ. ಚುನಾವಣೆ ಹತ್ತಿರ ಬಂದಾಗ ಈ ನಿಗಮಗಳನ್ನು ಮುಂದಿಟ್ಟು 60% ಕಮೀಷನ್ ಸರ್ಕಾರ ತೆಗೆದುಕೊಳ್ಳುತ್ತಿದೆ ಅಂತಾ ಅನಿಸುತ್ತದೆ ಎಂದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ ಪೆಟ್ರೋಲ್ ಸುರಿದು 26ರ ಲಿವ್ ಇನ್ ಗೆಳತಿಯ ಹತ್ಯೆಗೈದ 52ರ ವ್ಯಕ್ತಿ

    ರವಿಕುಮಾರ್‌ ಸಮಾಜ ಕಲ್ಯಾಣ ಇಲಾಖೆ ನೇರ ಸಂಬಂಧವಿದೆ. ವಿಡಿಯೋದಲ್ಲಿ ಮೇಲೆನೂ ಹಂಚಬೇಕು ಅಂದಿದ್ದಾರೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಉತ್ತರ ಕೊಡಬೇಕು. ಮಂತ್ರಿಗಳಿಗೆ ಕೊಡಬೇಕು ಅಂತಾ ವಿಡಿಯೋದಲ್ಲಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಭೇಟಿ ಮಾಡಿ ದೂರು ನೀಡುತ್ತೇವೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೇವೆ. ಒಂದು ವೇಳೆ ರವಿಕುಮಾರ್‌ ವಜಾಗೊಳಿಸದೇ ಇದ್ದರೆ ಸಿಎಂ , ಮಹದೇವಪ್ಪ, ಎಲ್ಲೇ ಹೋದರೂ ನಾವು ಘೇರಾವು ಹಾಕುತ್ತೇವೆ ಎಂದು ತಿಳಿಸಿದರು.

    ಬಿಜೆಪಿ ಅವಧಿಯಲ್ಲಿಯೂ ಅಕ್ರಮ ನಡೆದಿತ್ತು. ಬೊಮ್ಮಾಯಿ ಅವಧಿಯಲ್ಲಿ ಲೋಕಾಯುಕ್ತ ಎಸಿಬಿಯಲ್ಲಿಯೂ ಅಧಿಕಾರಿಗಳು ಸಿಕ್ಕಿಹಾಕಿಕೊಂಡಿದ್ದರು. ಆದರೆ 85 ಕೋಟಿ ಹಗರಣದ ವಿಚಾರಣೆ ಇನ್ನೂ ಮುಗಿದಿಲ್ಲ.  ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತನಿಖೆ ನಡೆಯುತ್ತಿದ್ದರೂ ಭಯವಿಲ್ಲದೇ ಈ ಡೀಲ್ ನಡೆಯುತ್ತಿದೆ ಅಂದರೆ ನಿಜಕ್ಕೂ ಶಾಕ್ ಆಗುತ್ತಿದೆ. ತೆಲಂಗಾಣದ ಚುನಾವಣಾ ಅವಧಿಯಲ್ಲಿ ವಾಲ್ಮೀಖಿ ಹಗರಣ ಆಯ್ತು. ಭೋವಿ ನಿಗಮದ ತನಿಖೆ ಯಾಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನಿಸಿದರು.

  • ಬಸವರಾಜ ಬೊಮ್ಮಾಯಿ ನಡೆದಾಡುವ ರಾಜದೇವರು: ಸಿದ್ದರಾಮೇಶ್ವರ ಸ್ವಾಮೀಜಿ

    ಬಸವರಾಜ ಬೊಮ್ಮಾಯಿ ನಡೆದಾಡುವ ರಾಜದೇವರು: ಸಿದ್ದರಾಮೇಶ್ವರ ಸ್ವಾಮೀಜಿ

    ತುಮಕೂರು: ಪಟ್ಟಣದ ಗಾಜಿನ ಮನೆಯಲ್ಲಿಂದು ನಡೆಯುತ್ತಿರುವ ಭೋವಿ ಸಮಾಜದ ಜಾಗೃತಿ ಸಮಾವೇಶದಲ್ಲಿ ಚಿತ್ರದುರ್ಗ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ `ನಡೆದಾಡುವ ರಾಜದೇವರು’ ಎಂಬ ಬಿರುದನ್ನು ಪ್ರದಾನ ಮಾಡಿದ್ದಾರೆ.

    ಸಮಾವೇಶದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಬಸವರಾಜ ಬೊಮ್ಮಾಯಿ ಅವರನ್ನ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ- ಸಂತ್ರಸ್ತೆಯರ ಹೇಳಿಕೆ ಪಡೆದ ತನಿಖಾ ತಂಡ

    ಮಂಜುನಾಥ್ ಪ್ರಸಾದ್ ಅವರನ್ನು ತಮ್ಮ ಪ್ರದಾನ ಕಾರ್ಯದರ್ಶಿ ಆಗಿ ಮಾಡಿದ್ದು, ಸಮಾಜಕ್ಕೆ ದೊಡ್ಡ ಗೌರವ. ಸಿಎಂಗೆ ಬೇರೆ-ಬೇರೆ ಅಧಿಕಾರಿಗಳನ್ನ ನೇಮಿಸಿಕೊಳ್ಳುವಂತೆ ಒತ್ತಡವಿತ್ತು. ಆದರೆ ಅವರು ಭೋವಿ ಜನಾಂಗಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ಬೊಮ್ಮಾಯಿ ಅವರ ಮಾತು ಕೃತಿ ನಡೆ, ಕೋಪ ತಂದೆಯದ್ದು, ಅಷ್ಟೇ ಅಲ್ಲ ತಾಯಿ ಹೃದಯ, ವಾತ್ಸಲ್ಯ, ಮಿಡಿತ ಎಲ್ಲವೂ ಅವರಲ್ಲಿದೆ. ತಾಯಿ ತನ್ನ ಮಗುವನ್ನು ನೋಡಿಕೊಂಡಂತೆ ನಮ್ಮ ರಾಜ್ಯಕ್ಕೆ ಇಂತಹ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಇಂಥವರು ಸಿಕ್ಕಿರುವುದು ನಮ್ಮ ಹೆಮ್ಮೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ‘ಕೈ’ ನಾಯಕರು ಪಕ್ಷ ಬಿಟ್ಟು ಹೋಗಲು ನಾಯತ್ವದಲ್ಲಿರುವ ದುರಂಹಕಾರ ಕಾರಣ: ಪ್ರಹ್ಲಾದ್ ಜೋಶಿ

    ಸಿಎಂ ಅತೀ ಸಣ್ಣ ಮಡಿವಾಳ ಸಮುದಾಯದವರನ್ನೂ ಗುರುತಿಸಿ ಸಹಾಯ ಮಾಡಿದ್ದಾರೆ. ಅಂಬೇಡ್ಕರರ ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಲಿಂಗಾಯತ ಸಮುದಾಯದ ಅಧಿಕಾರಕ್ಕೆ ಬಂದರೆ ಬೇರೆ ಸಮುದಾದ ಜನ ಮಾತನಾಡಿಸೋದು ಕಷ್ಟ ಎಂದು ಹೇಳುತ್ತಾರೆ. ಆದರೆ ಬೊಮ್ಮಾಯಿ ಅವರಿಂದ ತಮ್ಮ ಸಮುದಾಯಕ್ಕಿಂತ ಬೇರೆ ಸಮುದಾಯದ ಜನರೇ ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಕ್ಕೆ ಆಗ್ರಹ

    ರಾಜ್ಯ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಕ್ಕೆ ಆಗ್ರಹ

    ನವದೆಹಲಿ: ರಾಜ್ಯ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ನೀಡಿದೆ. ಅಖಿಲ ಭಾರತೀಯ ಭೋವಿ ಸಮಾಜ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ ನೇತೃತ್ವದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಮನವಿ ಪತ್ರ ನೀಡಲಾಯಿತು.

    ಮುಖ್ಯಮಂತ್ರಿ ಬಸವರಾಜ ಪರವಾಗಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮನವಿ ಸ್ವೀಕರಿಸಿದರು. ಕೂಡಲೇ ಈ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ಅಧ್ಯಕ್ಷರ ನೇಮಕ ಮಾಡುವ ಭರವಸೆ ನೀಡಿದ್ದಾರೆ. ಮನವಿ ನೀಡಿದ ಬಳಿಕ ಮಾತನಾಡಿದ ಭಾರತೀಯ ಭೋವಿ ಸಮಾಜ ಅಧ್ಯಕ್ಷ ಡಾ. ವೆಂಕಟೇಶ್ ಮೌರ್ಯ, ಕಳೆದ ನಾಲ್ಕು ವರ್ಷಗಳಿಂದ ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ ಆಗಿಲ್ಲ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಡೆಯದಾಗಿ ಸೀತರಾಮ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಗಳು ಬಿಜೆಪಿ ಸರ್ಕಾರದ ಸೆಟ್ಲ್ಮೇಂಟ್ ಕೇಂದ್ರಗಳಾಗಿವೆ: ಈಶ್ವರ್ ಖಂಡ್ರೆ

    ಬಳಿಕ ಕಾಂಗ್ರೆಸ್ ಜೆಡಿ ಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ಅಧ್ಯಕ್ಷರ ನೇಮಕವಾಗಿಲ್ಲ ಇದರಿಂದಾಗಿ ನಿಗಮದಲ್ಲಿ ಅಧಿಕಾರಿಗಳೇ ಸುಪ್ರೀಂ ಆಗಿದ್ದು ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ. ಈ ಸಂಬಂಧ ಹಿಂದೆ ತನಿಖೆ ನಡೆಸಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಇದನ್ನೂ ಓದಿ:  ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್

    ಈಗ ಅಮಾನತು ಆದೇಶಕ್ಕೆ ಕೋರ್ಟ್ ಆದೇಶಕ್ಕೆ ತಡೆ ತಂದಿರುವ ಅಧಿಕಾರಿಗಳು ಮತ್ತದೇ ಸ್ಥಾನದಲ್ಲಿ ಮುಂದುವರಿದ್ದು ಮತ್ತಷ್ಟು ಅಕ್ರಮಕ್ಕೆ ಎಡೆಮಾಡಿಕೊಟ್ಟಾಗಿದೆ ಎಂದು ಆರೋಪಿಸಿದರು. ಈ ಹಿನ್ನಲೆ ನಿಯಮಕ್ಕೆ ಅಧ್ಯಕ್ಷರ ನೇಮಕ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸೂಕ್ತ ಫಲಾನುಭವಿಗಳಿಗೆ ತಲುಪಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.